#GeologyDepartment Archives - Good News 24x7 https://www.goodnews24x7.com/tag/geologydepartment/ Kannada Sat, 02 Aug 2025 07:38:40 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #GeologyDepartment Archives - Good News 24x7 https://www.goodnews24x7.com/tag/geologydepartment/ 32 32 ಮಡಿಕೇರಿ ವಿರಾಜಪೇಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ! https://www.goodnews24x7.com/landslide-in-forest-area-near-virajpet-madikeri/ Sat, 02 Aug 2025 07:38:32 +0000 https://www.goodnews24x7.com/?p=5251 ಮಡಿಕೇರಿ : ವಿರಾಜ ಪೇಟೆ ತಾಲೂಕು ಮಾಕುಟ್ಟ ಅರಣ್ಯವಲ ಯಕ್ಕೆ ಸೇರಿದ ಮಾಂಟ್ರಿಬೀಟ್ನ ಪಾಲಂ ಗಾಲ ಮಲೆತಿರಿಕೆ ಈಶ್ವರ ದೇವಸ್ಥಾನ ದಿಂದ ಸುಮಾರು 5ಕಿ.ಮೀ. ಅಂತರದ ಆರಣ್ಯ ಪ್ರದೇಶದಲ್ಲಿ ಭೂ ಕುಸಿತ ಸಂಭವಿ ಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ದಿನದ…

The post ಮಡಿಕೇರಿ ವಿರಾಜಪೇಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ! appeared first on Good News 24x7.

]]>

ಮಡಿಕೇರಿ : ವಿರಾಜ ಪೇಟೆ ತಾಲೂಕು ಮಾಕುಟ್ಟ ಅರಣ್ಯವಲ ಯಕ್ಕೆ ಸೇರಿದ ಮಾಂಟ್ರಿಬೀಟ್ನ ಪಾಲಂ ಗಾಲ ಮಲೆತಿರಿಕೆ ಈಶ್ವರ ದೇವಸ್ಥಾನ ದಿಂದ ಸುಮಾರು 5ಕಿ.ಮೀ. ಅಂತರದ ಆರಣ್ಯ ಪ್ರದೇಶದಲ್ಲಿ ಭೂ ಕುಸಿತ ಸಂಭವಿ ಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಾಲ್ಕು ದಿನದ ಹಿಂದೆ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಆ ಸಂದರ್ಭದಲ್ಲಿ ಭೂ ಕುಸಿತವಾಗಿರುವ ಸಾಧ್ಯತೆ ಇದ್ದು, ಶುಕ್ರವಾರ ಬೆಳಗ್ಗೆ ಈ ಭೂ ಕುಸಿತ ಅರಣ್ಯ ಸಿಬ್ಬಂದಿಯ ಗಮನಕ್ಕೆ ಬಂದಿದೆ.

ಅರಣ್ಯದ ಮಧ್ಯ ಭಾಗದಲ್ಲಿ ಭೂ ಕುಸಿತ ವಾಗಿದ್ದು, ಸುಮಾರು 15 ಕಿ.ಮೀ. ವ್ಯಾಪ್ತಿ ಯಲ್ಲಿ ಜನ ವಸತಿ ಪ್ರದೇಶ ಇಲ್ಲದ ಕಾರಣ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಆದರೆ ಈ ಅರಣ್ಯಕ್ಕೆ ಕೆಳ ಭಾಗದಲ್ಲಿ ಕೊಳಕೇರಿ ಗ್ರಾಮದ ಕನ್ನಂಬೀರ ಪವನ್ ಪೂವಯ್ಯ ಎಂಬವರ ಕಾಫಿ ತೋಟ ದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಜ್ವಲ್ ಕುಮಾರ್ ಹಿಡಿದು ರಕ್ಷಿಸಿದರು.

ಕಂದಾಯ ಇಲಾಖೆಗೆ ಸೇರಿದ ಸುಮಾರು 300 ಎಕರೆಯಷ್ಟು ಪೈಸಾರಿ ಭೂಮಿ ಇದ್ದು, ಭೂ ಕುಸಿತ ಹಾಗೂ ಭಾರೀ ಪ್ರಮಾಣದ ನೀರು ಬೆಟ್ಟದಿಂದ ಹರಿದು ಬಂದ ಪರಿಣಾಮ ಪೈಸಾರಿ ಭೂಮಿಯಲ್ಲಿ ಭಾರೀ ಪ್ರಮಾಣದ ಮಣ್ಣು, ಮರಗಳು ಹಾಗೂ ಕಲ್ಲು-ಬಂಡೆಗಳು ಬಿದ್ದಿವೆ.

ಭೂ ಕುಸಿತ ಉಂಟಾದ ಜಾಗದಲ್ಲಿ ನೀರು ಉಕ್ಕಿ ಹರಿಯುತ್ತಿದೆ ಬೆಳಗ್ಗೆ ಮಾಹಿತಿ ತಿಳಿದೊಡನೆ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ವಿರಾಜಪೇಟೆ ಕಂದಾಯ ಇಲಾಖಾಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶಕ್ಕೆ ರಸ್ತೆ ಮಾರ್ಗ ವಿಲ್ಲದ ಕಾರಣ ಪಾಲಂಗಾಲ ಗ್ರಾಮದಿಂದ ಸುಮಾರು 8 ಕಿ.ಮೀ.ನಷ್ಟು ಬೆಟ್ಟ ಹತ್ತಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಬೆಟ್ಟದ ತುದಿಯವರೆಗೂ ನಾವು ಹೋಗಲು ಸಾಧ್ಯವಾಗಿಲ್ಲ. ನಾಳೆ ಮಾಕುಟ್ಟಿ ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡ ಮತ್ತೆ ಆ ಪ್ರದೇ ಶಕ್ಕೆ ತೆರಳಲಿದೆ. ಭಾರೀ ಮಳೆಯಿಂದಾಗಿ ಬೆಟ್ಟದ ಕಲ್ಲು-ಬಂಡೆಗಳ ಮೇಲಿರುವ ಮಣ್ಣು ಕುಸಿದಿದೆಯೇ ಹೊರತು, ಇದನ್ನು ಭೂ ಕುಸಿತ ಎಂದು ಪರಿಗಣಿಸಲು ಸಾಧ್ಯವಿಲ್ಲ. – ಜಗನ್ನಾಥ್ ಜಗನ್ನಾಥ್, ಡಿಎಫ್ಓ ತಿಳಿಸಿದ್ದಾರೆ.

2019ರ ಆಗಸ್ಟ್ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ವೇಳೆ ಕೆದಮಳ್ಳೂರು ತೋರಾ ಗ್ರಾಮದ ಬಳಿ ಭೂ ಕುಸಿತದಿಂದ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಸ್ಥಳದಿಂದ ಸುಮಾರು 20 ಕಿಮೀ ಅಂತರದ ಅರಣ್ಯದ ಮಧ್ಯ ಭಾಗದಲ್ಲಿ ಈ ಭೂ ಕುಸಿತ ಸಂಭವಿಸಿದೆ.

The post ಮಡಿಕೇರಿ ವಿರಾಜಪೇಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ! appeared first on Good News 24x7.

]]>