god Archives - Good News 24x7 https://www.goodnews24x7.com/tag/god/ Kannada Wed, 20 Aug 2025 11:49:11 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg god Archives - Good News 24x7 https://www.goodnews24x7.com/tag/god/ 32 32 ಆಂಧ್ರದ ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆ.ಜಿ. ಚಿನ್ನವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ https://www.goodnews24x7.com/%e0%b2%86%e0%b2%82%e0%b2%a7%e0%b3%8d%e0%b2%b0%e0%b2%a6-%e0%b2%a4%e0%b2%bf%e0%b2%b0%e0%b3%81%e0%b2%aa%e0%b2%a4%e0%b2%bf-%e0%b2%a4%e0%b2%bf%e0%b2%ae%e0%b3%8d%e0%b2%ae%e0%b2%aa%e0%b3%8d%e0%b2%aa%e0%b2%a8/ Wed, 20 Aug 2025 11:49:11 +0000 https://www.goodnews24x7.com/?p=6411 121 ಕೆಜಿ ಚಿನ್ನದ ಬೆಲೆ 140 ಕೋಟಿ ರೂಪಾಯಿ ಉದ್ಯಮ ಸ್ಥಾಪಿಸಿ ಯಶಸ್ವಿಯಾದ ಉದ್ಯಮಿ! ಹೆಸರು ಹೇಳಲು ಬಯಸದ ತಿರುಪತಿ ವೆಂಕಟೇಶ್ವರನ ಭಕ್ತರೊಬ್ಬರು ಉದ್ಯಮವೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಆ ಕಂಪನಿಯಲ್ಲಿನ ಶೇ.60ರಷ್ಟು ಷೇರು ಮಾರಾಟ ಮಾಡಿದ ಪರಿಣಾಮ ಅವರಿಗೆ 6000-7000…

The post ಆಂಧ್ರದ ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆ.ಜಿ. ಚಿನ್ನವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ appeared first on Good News 24x7.

]]>

121 ಕೆಜಿ ಚಿನ್ನದ ಬೆಲೆ 140 ಕೋಟಿ ರೂಪಾಯಿ
ಉದ್ಯಮ ಸ್ಥಾಪಿಸಿ ಯಶಸ್ವಿಯಾದ ಉದ್ಯಮಿ!
ಹೆಸರು ಹೇಳಲು ಬಯಸದ ತಿರುಪತಿ ವೆಂಕಟೇಶ್ವರನ ಭಕ್ತರೊಬ್ಬರು ಉದ್ಯಮವೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಆ ಕಂಪನಿಯಲ್ಲಿನ ಶೇ.60ರಷ್ಟು ಷೇರು ಮಾರಾಟ ಮಾಡಿದ ಪರಿಣಾಮ ಅವರಿಗೆ 6000-7000 ಕೋಟಿ ರು. ಹಣ ಸಿಕ್ಕಿತ್ತು. ತಮಗೆ ಈ ಸಂಪತ್ತು ಸಿಗಲು ಕಾರಣನಾದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ತಿರುಪತಿ ತಿಮ್ಮಪ್ಪನಿಗೆ ಚಿನ್ನವನ್ನು ಕಾಣಿಕೆಯಾಗಿ ನೀಡಲು ಆ ಉದ್ಯಮಿ ನಿರ್ಧರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ತಮ್ಮ ಉದ್ಯಮ ಯಶಸ್ಸು ಕಂಡ ಹಿನ್ನೆಲೆಯಲ್ಲಿ 140 ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನು ಕಾಣಿಕೆಯಾಗಿ ನೀಡಿದ್ದಾರೆ. ಓರ್ವ ಅನಾಮಧೇಯ ಭಕ್ತರೊಬ್ಬರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಗೆ 121 ಕೆಜಿ ಬಂಗಾರವನ್ನು ಕಾಣಿಕೆಯಾಗಿ ನೀಡುವುದಾಗಿ ಹರಕೆ ಹೊತ್ತಿದ್ದಾರೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಪ್ರಕಟಿಸಿದ್ದಾರೆ. ಈ ಚಿನ್ನದ ಮೌಲ್ಯ ಬರೋಬ್ಬರಿ 140 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಾಹಿತಿ ನೀಡಿದ ಸಿಎಂ ಚಂದ್ರಬಾಬು ನಾಯ್ಡು
ಮಂಗಳಗಿರಿಯಲ್ಲಿ ನಡೆದ ‘ಬಡತನ ನಿರ್ಮೂಲನೆ’ (ಪಿ4) ಕಾರ್ಯಕ್ರಮದಲ್ಲಿ ಮಾತನಾಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, “ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಕಂಪನಿಯೊಂದನ್ನು ಸ್ಥಾಪಿಸುವ ಸಂಕಲ್ಪ ಮಾಡಿದ್ದರು. ಇದೀಗ ಅವರು ಅದರಲ್ಲಿ ಪೂರ್ಣ ಯಶಸ್ಸನ್ನು ಕಂಡಿದ್ದಾರೆ. ದೈವಾನುಗ್ರಹದಿಂದ ದೊರೆತ ಈ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಲು ಅವರು ಮುಂದಾಗಿದ್ದಾರೆ. ಅದಕ್ಕಾಗಿ ಇದೀಗ 121 ಕೆಜಿ ಬಂಗಾರವನ್ನು ಸ್ವಾಮಿಗೆ ಅರ್ಪಿಸುತ್ತಿದ್ದಾರೆ,” ಎಂದು ತಿಳಿಸಿದರು.
ಪ್ರತಿನಿತ್ಯ ತಿಮ್ಮಪ್ಪನಿಗೆ 120 ಕೆಜಿ ಆಭರಣ!
ಪ್ರತಿದಿನ ತಿರುಪತಿಯಲ್ಲಿ ಇರುವ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಸುಮಾರು 120 ಕೆಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಈ ವಿಷಯವನ್ನು ತಿಳಿದುಕೊಂಡ ಆ ಅನಾಮಧೇಯ ಭಕ್ತರು, ಅದಕ್ಕಿಂತ ಒಂದು ಕೆಜಿ ಹೆಚ್ಚಿಗೆ, ಅಂದರೆ 121 ಕೆಜಿ ಚಿನ್ನವನ್ನು ದಾನ ಮಾಡಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ವಿವರಿಸಿದರು.

 

The post ಆಂಧ್ರದ ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆ.ಜಿ. ಚಿನ್ನವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ appeared first on Good News 24x7.

]]>
ಶ್ರೀ ಕ್ಷೇತ್ರ ಚಿಕ್ಕಲ್ಲೂರು ಜಾತ್ರಾವೈಭವ https://www.goodnews24x7.com/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%9a%e0%b2%bf%e0%b2%95%e0%b3%8d%e0%b2%95%e0%b2%b2%e0%b3%8d%e0%b2%b2%e0%b3%82%e0%b2%b0%e0%b3%81/ Mon, 13 Jan 2025 10:45:26 +0000 https://www.goodnews24x7.com/?p=1766 ಚಾಮರಾಜನಗರ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯ 4ನೇ ದಿನವಾದ ಭಾನುವಾರ ಪಂಕ್ತಿಸೇವೆ ನಿರ್ವಿಘ್ನದಿಂದ ನಡೆಯಿತು. ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದ ಭಕ್ತರು, ಮಾಂಸದ ಅಡುಗೆ ಮಾಡಿ ಪಂಕ್ತಿಸೇವೆ ನಡೆಸಿದರು. ಚಿಕ್ಕಲ್ಲೂರು ಕ್ಷೇತ್ರದಲ್ಲಿ…

The post ಶ್ರೀ ಕ್ಷೇತ್ರ ಚಿಕ್ಕಲ್ಲೂರು ಜಾತ್ರಾವೈಭವ appeared first on Good News 24x7.

]]>

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯ 4ನೇ ದಿನವಾದ ಭಾನುವಾರ ಪಂಕ್ತಿಸೇವೆ ನಿರ್ವಿಘ್ನದಿಂದ ನಡೆಯಿತು. ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದ ಭಕ್ತರು, ಮಾಂಸದ ಅಡುಗೆ ಮಾಡಿ ಪಂಕ್ತಿಸೇವೆ ನಡೆಸಿದರು.
ಚಿಕ್ಕಲ್ಲೂರು ಕ್ಷೇತ್ರದಲ್ಲಿ 5 ಹಗಲು, 5 ರಾತ್ರಿ ಜಾತ್ರೆ ನಡೆಯಲಿದ್ದು, 4ನೇ ದಿನದಂದು ಪಂಕ್ತಿಸೇವೆ ನಡೆಸಲಾಗುತ್ತದೆ. ಅದರಂತೆ, ಲಕ್ಷಾಂತರ ಮಂದಿ ಭಕ್ತರು ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ಸವಿದಿದ್ದಾರೆ. ಐತಿಹಾಸಿಕ, ಭಕ್ತಿ ಪರಾಕಾಷ್ಠೆಯ ಜಾತ್ರೆ ಎಂದೇ ಜನಜನಿತವಾಗಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಂಕ್ತಿಸೇವೆ ಸಲ್ಲಿಸಿ ತಮ್ಮ ನಂಬಿಕೆ, ಭಕ್ತಿ ಅಚಲ ಎಂದು ಸಾರಿದರು.

ಮಾಂಸದ ಭಕ್ಷ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಬಳಿಕ ಸಹಪಂಕ್ತಿ ಭೋಜನ ಮಾಡುವ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿ ಹದ್ದಿನ ಕಣ್ಣಿಟ್ಟಿತ್ತು. ಆಚರಣೆಯನ್ನು ಬಿಡಲೊಪ್ಪದ ಜನರು ದೇವಾಲಯ ಆವರಣದಿಂದ ದೂರದ ಪ್ರದೇಶದಲ್ಲಿ ಮಾಂಸದ ಅಡುಗೆ ತಯಾರಿಸಿ ಶ್ರದ್ಧೆ-ಭಕ್ತಿಯಿಂದ ಎಡೆ ಅರ್ಪಿಸಿದ್ದಾರೆ. ಜಿಲ್ಲೆ ಹೊರ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ಮಾಂಸದೂಟ ತಯಾರಿಸಿ ನೀಲಗಾರರ ಸಂಪ್ರದಾಯಕ್ಕೆ ಅನುಗುಣವಾಗಿ ಎಡೆ ಅರ್ಪಿಸಿ ರಾಚಪ್ಪಾಜಿ, ಸಿದ್ದಾಪ್ಪಾಜಿ ದೇವರಿಗೆ ಮದ್ಯ- ಮಾಂಸ ಅರ್ಪಿಸಿ ಭಕ್ತಿ ಮೆರೆದರು.
ಜಾತ್ರೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಪ್ರಯಾಣ ಹಿನ್ನೆಲೆ ಜಾತ್ರೆಗೆ ಮಹಿಳಾ ಸಾಗರವೇ ಹರಿದುಬಂದಿತ್ತು. ಬಸ್ ಗಳಿಗೆ ಹತ್ತಲು ಮಹಿಳೆಯರು ನಾ ಮುಂದೆ- ತಾ ಮುಂದೆ ಎಂದು ಕಿಟಕಿ, ಚಾಲಕರ ಡೋರ್ ಗಳಲ್ಲಿ ಹತ್ತಿದರು. ಕಿಟಕಿಗಳಿಗೆ ಮಕ್ಕಳನ್ನು ತೂರಿಸಿ ಆಸನ ಹಿಡಿಯುವ ಸಾಹಸ ಮಾಡಿದರು.

The post ಶ್ರೀ ಕ್ಷೇತ್ರ ಚಿಕ್ಕಲ್ಲೂರು ಜಾತ್ರಾವೈಭವ appeared first on Good News 24x7.

]]>