Goldlovers Archives - Good News 24x7 https://www.goodnews24x7.com/tag/goldlovers/ Kannada Thu, 19 Jun 2025 11:46:50 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Goldlovers Archives - Good News 24x7 https://www.goodnews24x7.com/tag/goldlovers/ 32 32 ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! https://www.goodnews24x7.com/gold-price-drops-slightly-good-news-for-jewelry-lovers/ Thu, 19 Jun 2025 11:46:41 +0000 https://www.goodnews24x7.com/?p=4498 ಬೆಂಗಳೂರು: ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 1,01,510 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,140 ರೂ. ಇಳಿಕೆಯೊಂದಿಗೆ 1,00,370 ರೂ.ಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ…

The post ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! appeared first on Good News 24x7.

]]>

ಬೆಂಗಳೂರು: ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಸೋಮವಾರ 1,01,510 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,140 ರೂ. ಇಳಿಕೆಯೊಂದಿಗೆ 1,00,370 ರೂ.ಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ 1,09,165 ರೂ. ಇದ್ದ ಒಂದು ಕೆಜಿ ಬೆಳ್ಳಿಯ ಬೆಲೆ ಇಂದು 1,10,000 ರೂ.ಗೆ ತಲುಪಿದೆ.

 

 

 

 

 

 

ಇಂದಿನ ಚಿನ್ನದ ದರ: ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 10,037 ರೂ. ಇದೆ ಉಳಿದಂತೆ 22 ಕ್ಯಾರೆಟ್ ಚಿನ್ನದ ದರ 9,200 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 7,528 ರೂ. ಇದೆ.
ಹೈದರಾಬಾದ್ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 1,00,370 ರೂ. ಹಾಗೂ ಒಂದು ಕೆಜಿ ಬೆಳ್ಳಿಯ ಬೆಲೆ 1,20,000 ರೂ. ಇದೆ. ನಿನ್ನೆಯಿಂದ ಇಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 1140 ರೂ. ಇಳಿಕೆಯಾಗಿದೆ. ಉಳಿದಂತೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1050ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 860 ರೂ. ಇಳಿಕೆ ಕಂಡಿದೆ.
ಸ್ಪಾಟ್ ಚಿನ್ನದ ಬೆಲೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ $3331 ರಷ್ಟಿತ್ತು. ಆದರೆ ಭಾನುವಾರ $54 ರಷ್ಟು ಹೆಚ್ಚಾಗಿ $3385 ಕ್ಕೆ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 36.23 ಡಾಲರ್.
(ಮುನ್ಸೂಚನೆ :-ಮೇಲಿನ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಇದ್ದ ದರವಾಗಿದೆ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಯಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ದಯವಿಟ್ಟು ಗಮನಿಸಿ.)

The post ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ : ಆಭರಣಪ್ರಿಯರಿಗೆ ಗುಡ್ ನ್ಯೂಸ್! appeared first on Good News 24x7.

]]>