Goodnews Archives - Good News 24x7 https://www.goodnews24x7.com/tag/goodnews/ Kannada Sat, 11 Apr 2026 08:33:04 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Goodnews Archives - Good News 24x7 https://www.goodnews24x7.com/tag/goodnews/ 32 32 ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! https://www.goodnews24x7.com/good-news-for-bengaluru-mumbai-passengers-vande-bharat-sleeper-train-to-run-on-tracks-soon/ Sat, 11 Apr 2026 08:33:04 +0000 https://www.goodnews24x7.com/?p=9183 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು,…

The post ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! appeared first on Good News 24x7.

]]>

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು, ಇನ್ನು ಮುಂದೆ ಕೇವಲ ಹಗಲು ಮಾತ್ರವಲ್ಲದೆ ರಾತ್ರಿ ಪ್ರಯಾಣವೂ ಅತ್ಯಂತ ವೇಗವಾಗಿ ಮತ್ತು ಆರಾಮದಾಯಕವಾಗಿರಲಿದೆ. ಈ ಹೊಸ ರೈಲು ಕೆಎಸ್ಆರ್ ಬೆಂಗಳೂರು (KSR Bengaluru) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಪರ್ಕ ಕಲ್ಪಿಸಲಿದೆ.

ಸಂಸದ ಪಿಸಿ ಮೋಹನ್ ಪ್ರಯತ್ನಕ್ಕೆ ಫಲ:
ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರು ಈ ಮಾರ್ಗದಲ್ಲಿ ಸ್ಲೀಪರ್ ರೈಲು ಆರಂಭಿಸುವಂತೆ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಈಗ ದೊಡ್ಡ ಯಶಸ್ಸು ಸಿಕ್ಕಿದೆ. ಕಳೆದ ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ಸ್ಥಾಯಿ ಸಮಿತಿಯ ಭೇಟಿಯ ವೇಳೆ ಅವರು ಈ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಿದ್ದರು. ಅಲ್ಲದೆ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಅನ್ನು ರೈಲಿನ ಆರಂಭಿಕ ಅಥವಾ ಅಂತ್ಯದ ನಿಲ್ದಾಣವನ್ನಾಗಿ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ಪ್ರಯಾಣದ ಸಮಯ ಗಣನೀಯ ಇಳಿಕೆ:
ಪ್ರಸ್ತುತ ಬೆಂಗಳೂರಿನಿಂದ ಮುಂಬೈಗೆ ಸುಮಾರು 1,136 ಕಿಲೋಮೀಟರ್ ದೂರವಿದ್ದು, ಉದ್ಯಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಈ ದೂರವನ್ನು ಕ್ರಮಿಸಲು ಸುಮಾರು 23 ರಿಂದ 24 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ವಂದೇ ಭಾರತ್ ಸ್ಲೀಪರ್ ರೈಲು ಚಾಲನೆಗೆ ಬಂದರೆ ಈ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಭಾರಿ ಕಡಿತವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳು, ಹೆಚ್ಚಿನ ವೇಗ ಮತ್ತು ವಿಶ್ವದರ್ಜೆಯ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿರುವ ಈ ರೈಲು, ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಆಯ್ಕೆಯಾಗಲಿದೆ.

The post ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! appeared first on Good News 24x7.

]]>
ಬಂಗಾಳದ ಮತಬೇಟೆ: ಮಹಿಳೆಯರು ಮತ್ತು ಯುವಕರಿಗೆ ಮಾಸಿಕ ₹3,000 ಘೋಷಿಸಿದ ಬಿಜೆಪಿ! https://www.goodnews24x7.com/bengal-vote-campaign-bjp-announces-monthly-%e2%82%b93000-for-women-and-youth/ Fri, 10 Apr 2026 11:16:57 +0000 https://www.goodnews24x7.com/?p=9174 ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣಕ್ಕೆ ಬಿಜೆಪಿ ತನ್ನ ‘ಸಂಕಲ್ಪ ಪತ್ರ’ದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದೆ. ಕೋಲ್ಕತ್ತಾದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರ್ಕಾರವನ್ನು ಕಿತ್ತೊಗೆಯಲು 15…

The post ಬಂಗಾಳದ ಮತಬೇಟೆ: ಮಹಿಳೆಯರು ಮತ್ತು ಯುವಕರಿಗೆ ಮಾಸಿಕ ₹3,000 ಘೋಷಿಸಿದ ಬಿಜೆಪಿ! appeared first on Good News 24x7.

]]>

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಕಣಕ್ಕೆ ಬಿಜೆಪಿ ತನ್ನ ‘ಸಂಕಲ್ಪ ಪತ್ರ’ದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದೆ. ಕೋಲ್ಕತ್ತಾದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸರ್ಕಾರವನ್ನು ಕಿತ್ತೊಗೆಯಲು 15 ಪ್ರಮುಖ ಭರವಸೆಗಳ ಮಾಸ್ಟರ್ ಪ್ಲಾನ್ ಮುಂದಿಟ್ಟಿದ್ದಾರೆ. ಈ ಪ್ರಣಾಳಿಕೆಯಲ್ಲಿ ಆರ್ಥಿಕ ಸಬಲೀಕರಣ, ಉದ್ಯೋಗ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮತದಾರರನ್ನು ಸೆಳೆಯಲು ಬಿಜೆಪಿ ಭರಪೂರ ಕೊಡುಗೆಗಳನ್ನು ಘೋಷಿಸಿದೆ.

ಮಹಿಳಾ ಮತ್ತು ಯುವ ಸಮುದಾಯಕ್ಕೆ ಬಂಪರ್ ಆಫರ್
ಬಿಜೆಪಿಯ ಈ ಬಾರಿಯ ಪ್ರಣಾಳಿಕೆಯ ಹೈಲೈಟ್ ಎಂದರೆ ಮಹಿಳೆಯರು ಮತ್ತು ಯುವಕರಿಗೆ ನೀಡಲಾಗಿರುವ ಆರ್ಥಿಕ ನೆರವು. ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 3,000 ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಲಾಗಿದೆ. ಅದೇ ರೀತಿ, ನಿರುದ್ಯೋಗಿ ಯುವಕರಿಗೆ ಆಸರೆಯಾಗಲು ತಿಂಗಳಿಗೆ 3,000 ರೂಪಾಯಿ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಲಾಗಿದೆ. ಇದರೊಂದಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವ ಮೂಲಕ ಮಹಿಳಾ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿದೆ. ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ವಿಸ್ತರಣೆ ಹಾಗೂ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು HPV ಲಸಿಕೆ ನೀಡುವುದಾಗಿ ಬಿಜೆಪಿ ಹೇಳಿದೆ.

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಮತ್ತು ಉದ್ಯೋಗದ ವಾಗ್ದಾನ
ರಾಜ್ಯ ಸರ್ಕಾರಿ ನೌಕರರ ದಶಕಗಳ ಬೇಡಿಕೆಯಾದ 7ನೇ ವೇತನ ಆಯೋಗವನ್ನು ಬಿಜೆಪಿ ಸರ್ಕಾರ ಬಂದ 45 ದಿನಗಳೊಳಗೆ ಜಾರಿಗೊಳಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ 1 ಕೋಟಿ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲು ಉತ್ತರ ಬಂಗಾಳದಲ್ಲಿ ಹೊಸದಾಗಿ AIIMS, IIT ಮತ್ತು IIM ಸಂಸ್ಥೆಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಿಜೆಪಿ ಪ್ರಕಟಿಸಿದೆ.

ಆಡಳಿತ ಸುಧಾರಣೆ ಮತ್ತು ಹಿಂದುತ್ವದ ಅಜೆಂಡಾ
ಕಾನೂನು ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯದಲ್ಲೂ ಬಿಜೆಪಿ ಕಠಿಣ ನಿಲುವು ತಳೆದಿದೆ. ಅಧಿಕಾರಕ್ಕೆ ಬಂದ ಕೇವಲ 6 ತಿಂಗಳೊಳಗೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸುವುದಾಗಿ ಘೋಷಿಸಿದೆ. ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಿ, ನುಸುಳುಕೋರರನ್ನು ಗಡಿಪಾರು ಮಾಡುವ ಭರವಸೆ ನೀಡಲಾಗಿದೆ. ಜೊತೆಗೆ, ಟಿಎಂಸಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ‘ಕಟ್ ಮನಿ’ ಸಂಸ್ಕೃತಿಯ ವಿರುದ್ಧ ಸಮರ ಸಾರಿರುವ ಬಿಜೆಪಿ, ಕಳೆದ 15 ವರ್ಷಗಳ ಹಗರಣಗಳ ಮರುತನಿಖೆ ಮಾಡುವುದಾಗಿ ಎಚ್ಚರಿಸಿದೆ.

ಒಟ್ಟಾರೆಯಾಗಿ, ಸಾಂಸ್ಕೃತಿಕ ಪುನರುತ್ಥಾನ, ಸಿಂಗೂರಿನಲ್ಲಿ ಕೈಗಾರಿಕಾ ಪಾರ್ಕ್ ಮತ್ತು ಕೃಷಿ ರಫ್ತು ಹಬ್ ಮಾಡುವ ಮೂಲಕ ಬಂಗಾಳದ ಚಿತ್ರಣವನ್ನೇ ಬದಲಿಸುವುದಾಗಿ ಬಿಜೆಪಿ ಮತದಾರರಿಗೆ ವಾಗ್ದಾನ ಮಾಡಿದೆ.

The post ಬಂಗಾಳದ ಮತಬೇಟೆ: ಮಹಿಳೆಯರು ಮತ್ತು ಯುವಕರಿಗೆ ಮಾಸಿಕ ₹3,000 ಘೋಷಿಸಿದ ಬಿಜೆಪಿ! appeared first on Good News 24x7.

]]>
ಬಾಡಿಗೆದಾರರಿಗೆ ಗುಡ್‌ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಬಾಡಿಗೆದಾರರಿಂದ ವಿಪರೀತವಾಗಿ ಹಣ ತೆಗೆದುಕೊಳ್ಳುವುದಕ್ಕೆ ಬ್ರೇಕ್. https://www.goodnews24x7.com/good-news-for-tenants-trouble-for-landlords-a-break-from-charging-excessive-money-from-tenants/ Tue, 10 Mar 2026 11:15:37 +0000 https://www.goodnews24x7.com/?p=8839 ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿದಾರರು ಬಾಡಿಗೆ ಮನೆಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಳ ಮಾಡುತ್ತಿದ್ದಾರೆ. ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಹೊಸ ಬಾಡಿಗೆ ನಿಯಮಗಳು 2026ರ ವಿಷಯವು ಭಾರೀ ಚರ್ಚೆ ಆಗುತ್ತಿದೆ. ಈ ನಿಯಮವು ಜಾರಿಯಾದರೆ ಬೆಂಗಳೂರು…

The post ಬಾಡಿಗೆದಾರರಿಗೆ ಗುಡ್‌ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಬಾಡಿಗೆದಾರರಿಂದ ವಿಪರೀತವಾಗಿ ಹಣ ತೆಗೆದುಕೊಳ್ಳುವುದಕ್ಕೆ ಬ್ರೇಕ್. appeared first on Good News 24x7.

]]>

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿದಾರರು ಬಾಡಿಗೆ ಮನೆಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಳ ಮಾಡುತ್ತಿದ್ದಾರೆ. ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಹೊಸ ಬಾಡಿಗೆ ನಿಯಮಗಳು 2026ರ ವಿಷಯವು ಭಾರೀ ಚರ್ಚೆ ಆಗುತ್ತಿದೆ. ಈ ನಿಯಮವು ಜಾರಿಯಾದರೆ ಬೆಂಗಳೂರು ಸೇರಿದಂತೆ ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಕೆಲವು ಆಸ್ತಿದಾರರ ಹಣದ ವ್ಯಾಮೋಹಕ್ಕೆ ತಡೆ ಬೀಳಲಿದೆ. ಅಲ್ಲದೆ ಬಾಡಿಗೆದಾರರಿಂದ ವಿಪರೀತವಾಗಿ ಹಣ ತೆಗೆದುಕೊಳ್ಳುವುದಕ್ಕೂ ಬ್ರೇಕ್ ಬೀಳಿದೆ. ಹೊಸ ಬಾಡಿಗೆ ನಿಯಮಗಳು 2026 ಎಂದರೆ ಏನು, ಮನೆ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ.

ಹೊಸ ಬಾಡಿಗೆ ನಿಯಮಗಳು 2026ರ 5 ಪ್ರಮುಖ ಪಾಯಿಂಟ್ಸ್‌ ಇಲ್ಲಿದೆ.

ಹೊಸ ಬಾಡಿಗೆ ನಿಯಮಗಳು 2026 ಮುಖ್ಯವಾಗಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ನಡೆಯುವ ಬಾಡಿಗೆ ವ್ಯವಹಾರವನ್ನು ಹೆಚ್ಚು ಪಾರದರ್ಶಕ ಹಾಗೂ ಕಾನೂನುಬದ್ಧ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ನಿಯಮವಾಗಿದೆ.
ಈ ನಿಯಮಗಳ ಮೂಲಕ ಮಾತಿನ ಮೂಲಕವಷ್ಟೇ ನಡೆಯುವ ಬಾಡಿಗೆ ಒಪ್ಪಂದಗಳು, ಅತಿಯಾದ ಬಾಡಿಗೆ ಹಣ ಹೂಡಿಕೆ, ದಿಢೀರ್ ಬಾಡಿಗೆ ಹೆಚ್ಚಳ ಮತ್ತು ದೀರ್ಘಕಾಲದ ಕಾನೂನು ವಿವಾದಗಳಂತಹ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿ ಮಾಡಲಾಗಿದೆ.

1. ಡಿಜಿಟಲ್ ಬಾಡಿಗೆ ಒಪ್ಪಂದ ಕಡ್ಡಾಯ ಇನ್ನು ಹೊಸ ಬಾಡಿಗೆ ನಿಯಮಗಳು 2026ರ ಪ್ರಕಾರ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ಬಾಡಿಗೆ ನೀಡುವಾಗ / ಪಡೆದುಕೊಳ್ಳುವಾಗ ಡಿಜಿಟಲ್ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಈ ಒಪ್ಪಂದವನ್ನು 60 ದಿನಗಳೊಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯ ಮಾಡಲಾಗಿದೆ. ಡಿಜಿಟಲ್ ಸ್ಟ್ಯಾಂಪ್ ಮಾಡಿ ಸರ್ಕಾರದ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಇದರಿಂದ ನಕಲಿ ಒಪ್ಪಂದಗಳು ಮತ್ತು ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಕಡಿಮೆ. ಒಪ್ಪಂದವನ್ನು ನೋಂದಣಿ ಮಾಡದಿದ್ದರೆ 5,000 ರೂ ಅಥವಾ ಅದಕ್ಕಿಂತ ಹೆಚ್ಚು ದಂಡ ವಿಧಿಸುವ ಸಾಧ್ಯತೆ ಇದೆ. 2. ಸೆಕ್ಯೂರಿಟಿ ಡಿಪಾಸಿಟ್‌ಗೆ ಮಿತಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆಗಳಿಗೆ ಮುಂಗಡ ಹಣವನ್ನು ವಿಪರೀತವಾಗಿ ಪಡೆದುಕೊಳ್ಳಲಾಗುತ್ತದೆ. ಬಾಡಿಗೆದಾರರಿಗೆ ಆರ್ಥಿಕ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಡಿಪಾಸಿಟ್‌ಗೆ ಮಿತಿ ನಿಗದಿ ಮಾಡಲಾಗಿದೆ. ಬಾಡಿಗೆ ಮನೆಯವರಿಂದ ವರ್ಷಗಳ ಬಾಡಿಗೆ ಹಣವನ್ನು ಮುಂಗಡ ಪಡೆದುಕೊಳ್ಳುವುದಕ್ಕೆ ಬ್ರೇಕ್ ಹಾಕಲಾಗಿದೆ. ಹೊಸ ನಿಯಮದ ಪ್ರಕಾರ ಮನೆಗಳನ್ನು ಬಾಡಿಗೆ ನೀಡುವ ಸಂದರ್ಭದಲ್ಲಿ ಕೇವಲ 2 ತಿಂಗಳ ಬಾಡಿಗೆ ಮಾತ್ರ ಡಿಪಾಸಿಟ್ ಪಡೆದುಕೊಳ್ಳಬಹುದಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಗರಿಷ್ಠ 6 ತಿಂಗಳ ಬಾಡಿಗೆ ಮಾತ್ರ ಪಡೆಯಲು ಅವಕಾಶ ಇರಲಿದೆ.

3. ಬಾಡಿಗೆ ಹೆಚ್ಚಳಕ್ಕೆ ಹೊಸ ನಿಯಮಗಳು ಮನೆ ಮಾಲೀಕರು 12 ತಿಂಗಳಿಗಿಂತ ಮುಂಚೆ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಹೆಚ್ಚಳ ಮಾಡಲು ಕನಿಷ್ಠ 90 ದಿನಗಳ ಮುಂಚಿತವಾಗಿ ಲಿಖಿತ ಸೂಚನೆ ನೀಡಬೇಕು. ಬಾಡಿಗೆ ಹೆಚ್ಚಳದ ವಿವರಗಳು ಒಪ್ಪಂದದಲ್ಲೇ ಸ್ಪಷ್ಟವಾಗಿ ಉಲ್ಲೇಖ ಮಾಡಿರಬೇಕಾಗುತ್ತದೆ. ಈ ನಿಯಮ ಪಾಲಿಸದಿದ್ರೆ ಬಾಡಿಗೆ ಮನೆ ಮಾಲೀಕರ ಮೇಲೆ ಕೇಸ್‌: ಬೆಂಗಳೂರು ಪೊಲೀಸರಿಂದ ಎಚ್ಚರಿಕೆ

4. ಬಾಡಿಗೆದಾರರ ಹಕ್ಕುಗಳ ರಕ್ಷಣೆ ಈ ಹೊಸ ಕಾನೂನು ಮುಖ್ಯವಾಗಿ ಬಾಡಿಗೆದಾರರು ಹಾಗೂ ಆಸ್ತಿದಾರರ ರಕ್ಷಣೆ ಮಾಡುತ್ತದೆ. ಮನೆ ಮಾಲೀಕರು ಬಾಡಿಗೆದಾರರಿಗೆ ಬೆದರಿಕೆ ಹಾಕುವುದು, ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಸೇರಿದಂತೆ ಯಾವ ಸಮಸ್ಯೆಯನ್ನೂ ಸೃಷ್ಟಿ ಮಾಡುವಂತಿಲ್ಲ. ಈ ರೀತಿ ಮಾಡಿ ಬಾಡಿಗೆದಾರರ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ. ಮನೆ ಖಾಲಿ ಮಾಡಿಸುವುದು ಆದೇಶದ ಮೂಲಕ ಮಾತ್ರ ಅವಕಾಶ ಇರಲಿದೆ. ಆಸ್ತಿದಾರರು ಮನೆ ಪರಿಶೀಲನೆಗೆ / ಅಥವಾ ಬಾಡಿಗೆ ಮನೆಯ ಒಳಗೆ ಬರಬೇಕಾದರೆ 24 ಗಂಟೆಗಳ ಮುಂಚಿತವಾಗಿ ಬಾಡಿಗೆದಾರರಿಗೆ ಮಾಹಿತಿ ನೀಡಬೇಕು.

5. ವಿವಾದ ಶೀಘ್ರ ಪರಿಹಾರ ಮಾಡಿಕೊಳ್ಳಬಹುದು ಇನ್ನು ಹೊಸ ನಿಯಮದಿಂದಾಗಿ ಬಾಡಿಗೆ ಸಂಬಂಧಿತ ವಿವಾದಗಳನ್ನು Rent Authority, Rent Court ಅಥವಾ Rent Tribunal ಮೂಲಕ ಪರಿಹರಿಸಿಕೊಳ್ಳುವುದಕ್ಕೆ ಅವಕಾಶ ಇರಲಿದೆ. ಹೆಚ್ಚಿನ ಪ್ರಕರಣಗಳನ್ನು 60 ದಿನಗಳೊಳಗೆ ಪರಿಹರಿಸುವ ಉದ್ದೇಶ ಇದೆ. ಮನೆ ದುರಸ್ತಿ ಸಮಸ್ಯೆ ಇದ್ದರೆ ಮನೆ ಮಾಲೀಕರು 30 ದಿನಗಳಲ್ಲಿ ದುರಸ್ತಿ ಮಾಡಬೇಕು; ಇಲ್ಲದಿದ್ದರೆ ಬಾಡಿಗೆದಾರರು ದುರಸ್ತಿ ಮಾಡಿ ವೆಚ್ಚವನ್ನು ಬಾಡಿಗೆಯಿಂದ ಕಡಿತ ಮಾಡಿಕೊಳ್ಳಬಹುದು. ಬಾಡಿಗೆ ಮನೆಯಲ್ಲಿ ಎದುರಾಗುವ ದುರಸ್ತಿ ಕೆಲಸಗಳನ್ನು ಬಾಡಿಗೆದಾರರೇ ಮಾಡಿಕೊಳ್ಳಿ ಎಂದು ಹೇಳುವುದಕ್ಕೆ ಬರಲ್ಲ.

 

The post ಬಾಡಿಗೆದಾರರಿಗೆ ಗುಡ್‌ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಬಾಡಿಗೆದಾರರಿಂದ ವಿಪರೀತವಾಗಿ ಹಣ ತೆಗೆದುಕೊಳ್ಳುವುದಕ್ಕೆ ಬ್ರೇಕ್. appeared first on Good News 24x7.

]]>
ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಸಿದ್ದು ಸಂಪುಟ ಕಸರತ್ತು ! ನವೆಂಬ‌ರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ? https://www.goodnews24x7.com/congress-government-2-5-years-cabinet-reshuffle-major-cabinet-surgery-by-the-end-of-november/ Sat, 11 Oct 2025 13:16:39 +0000 https://www.goodnews24x7.com/?p=7692 ಬೆಂಗಳೂರು :- ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ನಿಚ್ಚಳವಾಗತೊಡಗಿದ್ದು, ನವೆಂಬರ್ ಮಾಸಾಂತ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಮಂದಿ ಹಾಲಿ ಸಚಿವರು ಮಾಜಿಗಳಾಗ ಲಿದ್ದಾರೆ. ಇದೇ ವೇಳೆ ಹೊಸ ಮುಖಗಳ ಪಡೆ ಸಿದ್ದರಾಮಯ್ಯ ಅವರ…

The post ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಸಿದ್ದು ಸಂಪುಟ ಕಸರತ್ತು ! ನವೆಂಬ‌ರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ? appeared first on Good News 24x7.

]]>

ಬೆಂಗಳೂರು :- ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ನಿಚ್ಚಳವಾಗತೊಡಗಿದ್ದು, ನವೆಂಬರ್ ಮಾಸಾಂತ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಮಂದಿ ಹಾಲಿ ಸಚಿವರು ಮಾಜಿಗಳಾಗ ಲಿದ್ದಾರೆ. ಇದೇ ವೇಳೆ ಹೊಸ ಮುಖಗಳ ಪಡೆ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲ ನೀಡುತ್ತಿರುವ ಮಾಹಿತಿ ನಂಬುವುದಾದರೆ ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆಯೇ ಅಂದರೆ ನವೆಂಬರ್ ಎರಡನೇ ವಾರದಲ್ಲಿ ರಾಜ್ಯ ನಾಯಕತ್ವ ಹೈಕಮಾಂಡ್‌ನೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ಮಾತುಕತೆ ನಡೆಸಲಿದ್ದು, ಸಂಪುಟ ವಿಸ್ತರಣೆ ಕಸರತ್ತು ಆರಂಭಿಸಲಿದ್ದು, ಮಾಸಾಂ ತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿ ಸಲಿದ್ದಾರೆ. ತನ್ಮೂಲಕ ಚಳಿಗಾಲದ ಅಧಿವೇಶ ನದಲ್ಲಿ ಹೊಸ ಮುಖಗಳು ಸದನದಲ್ಲಿ ಹುಟ್ಟಿಕೊಳ್ಳಲಿವೆ.

ಈಗ ಬದಲಾವಣೆ ಯಾಕಾಗಿ?

ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಂದಲೇ ತೀವ್ರ ಆಕ್ಷೇಪ, ಅಸಮಾಧಾನವಿದೆ. ಕೆಲ ಸಚಿವರ ವಿರುದ್ಧ ಆರೋಪಗಳು ಕೇಳಿಬಂದಿವೆ.

ಕೆಲ ಸಚಿವರ ಬಗ್ಗೆ ಹೈಕಮಾಂಡ್ ಮಟ್ಟಕ್ಕೂ ದೂರುಗಳು ಹೋಗಿದ್ದವೇಳೆ ಕೆಲ ಬದಲಾವಣೆ ಮಾಡುವಂತೆ ರಾಜ್ಯ ನಾಯಕತ್ವಕ್ಕೂ ಸೂಚನೆ ನೀಡಿತ್ತು. ಆದರೆ ದೂರು, ಅಸಮಾಧಾನ ವಿಷಯ ಮುಂದಿಟ್ಟುಕೊಂಡೇ ಸಂಪುಟದ ಸಚಿವರಿಗೆ ಕೊಕ್ ನೀಡುವ ಮನಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲ

ಹೀಗಾಗಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನೆಪ, ಹೊಸಬರಿಗೆ ಅವಕಾಶದ ಕಾರಣ ನೀಡಿ ಹಲವರಿಗೆ ಸಂಪುಟದಿಂದ ಕೊಕ್ ಸಂಭವ

13ಕ್ಕೆ ಸಿಎಂ ಡಿನ್ನರ್ ಮೀಟಿಂಗ್! ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ನಡೆ

ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಆ .13 ರ ರಾತ್ರಿ ಕೂಟ ಏರ್ಪಡಿಸ್ಸಿದ್ದುಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಔತಣ ಕೂಟ ಆಯೋಜಿಸಿದ್ದು, ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

The post ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಸಿದ್ದು ಸಂಪುಟ ಕಸರತ್ತು ! ನವೆಂಬ‌ರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ? appeared first on Good News 24x7.

]]>
ಪ್ರೆಸ್ ಮೀಟ್ ಮಾಡಲು ಬಂದ ಮಹಿಳೆಯನ್ನು ಪೋಲಿಸ್ ಠಾಣೆಗೆ ಕಳುಹಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ. https://www.goodnews24x7.com/mysore-district-journalists-association-sent-a-woman-who-came-to-a-press-meet-to-the-police-station/ Tue, 16 Sep 2025 14:25:00 +0000 https://www.goodnews24x7.com/?p=7562 ಮೈಸೂರು : ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ರಿಂದ ದೌರ್ಜನ್ಯ ಆರೋಪ ಸ್ವತಃ ಕೆ.ದೀಪಕ್ ಮೊದಲ ಪತ್ನಿಯಿಂದ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರು ಪತ್ರಕರ್ತರ ಸಂಘದ ಕೆ.ದೀಪಕ್ ಅವರ ಮೊದಲ ಪತ್ನಿ ಪೂರ್ಣಿಮಾ. ಬೆಳಗ್ಗೆ 11 ಗಂಟೆ ಸಮಯಕ್ಕೆ ಪ್ರೆಸ್…

The post ಪ್ರೆಸ್ ಮೀಟ್ ಮಾಡಲು ಬಂದ ಮಹಿಳೆಯನ್ನು ಪೋಲಿಸ್ ಠಾಣೆಗೆ ಕಳುಹಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ. appeared first on Good News 24x7.

]]>

ಮೈಸೂರು : ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ರಿಂದ ದೌರ್ಜನ್ಯ ಆರೋಪ ಸ್ವತಃ ಕೆ.ದೀಪಕ್ ಮೊದಲ ಪತ್ನಿಯಿಂದ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು ಪತ್ರಕರ್ತರ ಸಂಘದ ಕೆ.ದೀಪಕ್ ಅವರ ಮೊದಲ ಪತ್ನಿ ಪೂರ್ಣಿಮಾ. ಬೆಳಗ್ಗೆ 11 ಗಂಟೆ ಸಮಯಕ್ಕೆ ಪ್ರೆಸ್ ಕ್ಲಬ್ ಬಳಿ ಬಂದ ಕಾದು ನಿಂತಿದ್ದಾರೆ. ಪ್ರೆಸ್ ಮೀಟ್ ಮಾಡಲು ಬಂದ ಕೆ.ದೀಪಕ್ ಮೊದಲ ಪತ್ನಿಯನ್ನ ಪೋಲಿಸ್ ಠಾಣೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಕಳುಹಿಸಿದ ಆರೋಪ ಕೇಳಿ ಬಂದಿದೆ.

ಕೆ.ದೀಪಕ್ ಮೊದಲ ಪತ್ನಿಗೆ ಕಾನೂನಾತ್ಮಕ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದೇನೆ ಎಂದು ಇತ್ತೀಚಿಗೆ ಹೇಳಿಕೆ ಕೊಟ್ಟಿದ್ದ , ವಿಚ್ಛೇದನ ಆಗಿಲ್ಲ ಈಗಲೂ ದೀಪಕ್ ನನ್ನ ಗಂಡನೇ ಎಂದು ಕಾನೂನು ಸಮರಕ್ಕೆ ಮೊದಲ ಪತ್ನಿ ಪೂರ್ಣಿಮಾ ಮುಂದಾಗಿದ್ದಾರೆ.

ತನ್ನ ಗಂಡ ತನಗೆ ಮಾಡಿರುವ ಅನ್ಯಾಯದ ಬಗ್ಗೆ ಸುದ್ದಿ ಗೋಷ್ಠಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 3 ಗಂಟೆವರೆಗೂ ಪಟ್ಟು ಹಿಡಿದು ಕೂತ ಪೂರ್ಣಿಮಾ ಅವರಿಗೆ ಪ್ರಕರಣ ಕೋರ್ಟಿನಲ್ಲಿರುವುದರಿಂದ ಪ್ರೆಸ್ ಮೀಟ್ ಗೆ ಅವಕಾಶ ಕೊಡಲಾಗುವುದಿಲ್ಲ ಎಂಬ ಕಾರಣವೊಡ್ಡಿ ಪ್ರೆಸ್ ಕ್ಲಬ್ ಸಿಬ್ಬಂದಿ. ಸುದ್ದಿ ಗೋಷ್ಠಿಗೆ ಅವಕಾಶ ನೀಡದೇ ಪೋಲಿಸ್ ಠಾಣೆಗೆ ಕಳುಹಿಸಿದ್ದಾರೆ.

ಪಟ್ಟು ಹಿಡಿದು ಅಲ್ಲೇ ಕೂತ ಪೂರ್ಣಿಮಾ ವಿರುದ್ಧ ಪ್ರೆಸ್ ಕ್ಲಬ್ ನ ಸಿಬ್ಬಂದಿಯಿಂದ ಕೆ.ಆರ್ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಕೆ.ಆರ್ ಪೋಲಿಸ್ ಠಾಣೆಗೆ ಆಗಮಿಸಿದ ಪೂರ್ಣಿಮಾ ದೀಪಕ್ ನಾನು ಪ್ರೆಸ್ ಕ್ಲಬ್ ನಲ್ಲೇ ಸುದ್ದಿ ಗೋಷ್ಠಿ ಮಾಡುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದು ಪೋಲಿಸರ ಜೊತೆ ಮಾತುಕತೆ ನಡೆಸಿ ಹೋಗಿದ್ದಾರೆ. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ಅವಕಾಶ ಕೊಡುವುದಿಲ್ಲ ಅಂದರೆ ಹೇಗೆ.? ವಾಕ್ ಸ್ವಾತಂತ್ರ್ಯ ಇಲ್ಲವ.? ಎಂದು ದೀಪಕ್ ವಿರುದ್ಧ ಮೊದಲ ಪತ್ನಿ ಪೂರ್ಣಿಮಾ ದೀಪಕ್ ಹರಿಹಾಯ್ದ ನಡೆದ್ದಿದ್ದರೆ.

The post ಪ್ರೆಸ್ ಮೀಟ್ ಮಾಡಲು ಬಂದ ಮಹಿಳೆಯನ್ನು ಪೋಲಿಸ್ ಠಾಣೆಗೆ ಕಳುಹಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ. appeared first on Good News 24x7.

]]>
ದಸರಾ, ದೀಪಾವಳಿಗೆ ಗಿಫ್ಟ್ ಕೊಟ್ಟ ಮೋದಿ ! ಮಧ್ಯಮ ವರ್ಗಕ್ಕೆ ಇಳಿಯಿತು GST ಭಾರ . https://www.goodnews24x7.com/modi-gave-a-gift-for-dussehra-diwali-gst-burden-reduced-for-the-middle-class/ Thu, 04 Sep 2025 04:44:15 +0000 https://www.goodnews24x7.com/?p=7314 ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯ ನೋವನ್ನ ಕೊಂಚ ಕಡಿಮೆ ಮಾಡಿದೆ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದೆ. ಗ್ರಾಹಕರ ತಲೆ ಮೇಲಿದ್ದ ಜಿಎಸ್‌ಟಿ…

The post ದಸರಾ, ದೀಪಾವಳಿಗೆ ಗಿಫ್ಟ್ ಕೊಟ್ಟ ಮೋದಿ ! ಮಧ್ಯಮ ವರ್ಗಕ್ಕೆ ಇಳಿಯಿತು GST ಭಾರ . appeared first on Good News 24x7.

]]>

ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯ ನೋವನ್ನ ಕೊಂಚ ಕಡಿಮೆ ಮಾಡಿದೆ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದೆ.

ಗ್ರಾಹಕರ ತಲೆ ಮೇಲಿದ್ದ ಜಿಎಸ್‌ಟಿ ತೆರಿಗೆ ಬರೆಯನ್ನ ಕೇಂದ್ರ ಸರ್ಕಾರ ಇಳಿಸಿದೆ. ಕೆಂಪುಕೋಟೆ ಮೇಲೆ ಮೋದಿ ಮಾಡಿದ್ದ ಘೋಷಣೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ದೇಶದಲ್ಲಿ ಎಲ್ಲ ಫುಡ್, ಟೆಕ್ಸ್ ಟೈಲ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಿದೆ. ದಸರಾ, ದೀಪಾವಳಿಗೆ ಮೋದಿ ಸರ್ಕಾರ ದೇಶದ ಜನರಿಗೆ ಸಿಹಿಸುದ್ದಿಯನ್ನ ನೀಡಿದೆ.

ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯ ನೋವನ್ನ ಕೊಂಚ ಕಡಿಮೆ ಮಾಡಿದೆ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದೆ. ಭಾರತದ ಬಡ-ಮಧ್ಯಮ ವರ್ಗದ ಬದುಕು ಬಂಗಾರವಾಗುವ ದಿನ ಹತ್ತಿರವಾಗಿದೆ.

ಬಡ-ಮಧ್ಯಮ ವರ್ಗಕ್ಕೆ ದಸರಾಗೂ ಮೊದಲೇ ದೀಪಾವಳಿ ಸಂಭ್ರಮಿಸುವ ಸಮಯ ಬಂದಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಟ್ಯಾಕ್ಸ್​​ ಕ್ರಾಂತಿ ಮೊಳಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 4 ಸ್ಲ್ಯಾಬ್​ಗಳ ಬದಲು 2 ಸ್ಲ್ಯಾಬ್​​​ಗಳಲ್ಲಿ ಜಿಎಸ್​ಟಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಶೇ.5 ಮತ್ತು ಶೇ. 18ರ ಸ್ಲ್ಯಾಬ್‌ಗಳನ್ನ ಮಾತ್ರ ಉಳಿಸಿಕೊಳ್ಳಲು ‌ಒಪ್ಪಿಗೆ ನೀಡಿದೆ. ಇದ್ರಿಂದ ದೇಶದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ.

ಚಾಕೋಲೆಟ್​, ಕಾಫಿ, ಇನ್​ಸ್ಟಾಂಟ್​​ ನೂಡಲ್ಸ್, ಪಾಸ್ತಾ
ಬೆಣ್ಣೆ, ತುಪ್ಪ, ಸಾಸ್​, ನಮ್ಕೀನ್​, ಸಂರಕ್ಷಿತ ಮಾಂಸ
ಟೂತ್​ಬ್ರೆಷ್​, ಸೈಕಲ್, ಪಾದರಕ್ಷೆ, ಬಟ್ಟೆಗಳು
ಹೇರ್​ ಆಯಿಲ್, ಟಾಯ್ಲೆಟ್​ ಸೋಪ್, ಸೋಪುಗಳು
ಅಡುಗೆ ಸಾಮಗ್ರಿ, ಬೆಡ್​ ಶೀಟ್​, ಟೂತ್​ಪೇಸ್ಟ್​, ಮಾರ್ಬಲ್​
ಕರಕುಶಲ ವಸ್ತುಗಳು, ಚರ್ಮದ ಉತ್ಪನ್ನಗಳು, ಶಾಂಪೂ
ಕಾರ್ನ್ ಫ್ಲೇಕ್ಸ್, ಉಪ್ಪು, ಟೇಬಲ್, ಕುರ್ಚಿಗಳು
ನವೀಕರಿಸಬಹುದಾದ ಇಂಧನ, ರಸಗೊಬ್ಬರಗಳು
GST (2)

ಇದಷ್ಟೇ ಅಲ್ಲ, ಆಟೋಮೊಬೈಲ್ ಕ್ಷೇತ್ರಕ್ಕೂ ಜಿಎಸ್‌ಟಿ ಗುಡ್‌ನ್ಯೂಸ್‌ ಸಿಕ್ಕಿದೆ. ಕಾರು, ಬೈಕ್‌, ಆಟೋಗಳ ಮೇಲಿನ ಜಿಎಸ್‌ಟಿಯೂ ಇಳಿಕೆಯಾಗಿದೆ.

ಯಾವುದು ಶೇ. 28ರಿಂದ 18ಕ್ಕೆ ಇಳಿಕೆ

ಸಿಮೆಂಟ್​, ಎಲ್ಲ ಮಾದರಿಯ ಟಿವಿ, ಎಸಿ, ಪ್ರಿಡ್ಜ್
350 ಸಿಸಿ ಒಳಗಿನ ಮೋಟಾರ್​ ಸೈಕಲ್, ಸಣ್ಣ ಕಾರುಗಳು
ಟ್ರ್ಯಾಕ್ಟರ್​, ಬಸ್​, ಟ್ರಕ್, ತ್ರಿಚಕ್ರವಾಹನ, ಆಟೋ ಬಿಡಿ ಭಾಗ
ಇನ್ನು ಕೆಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅವುಗಳು ಎಂದರೆ.. ಪಾನ್​ ಮಸಾಲ, ಸಿಗರೇಟ್​, ತಂಬಾಕು ಪದಾರ್ಥಗಳ ಮೇಲಿನ ಜಿಎಸ್‌ಟಿಯನ್ನ ಕೇಂದ್ರ ಸರ್ಕಾರ ಶೇಕಡ 40ಕ್ಕೆ ಏರಿಕೆ ಮಾಡಿದೆ. ತಂಪು ಪಾನೀಯಗಳು, ವೈಯಕ್ತಿಕ ಬಳಕೆಯ ವಿಮಾನ, ನಾನ್ ಆಲ್ಕೋಹಾಲ್ ಪಾನೀಯಗಳ ಮೇಲಿನ ಜಿಎಸ್‌ಟಿ ಏರಿಕೆಯಾಗಿದೆ.)

ಇನ್ನೂ ಆರೋಗ್ಯ ವಲಯ ಮತ್ತು ಶೈಕ್ಷಣಿಕ ವಲಯಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. ಝೀರೋ ಜಿಎಸ್‌ಟಿ ಘೋಷಣೆ ಮಾಡಿ ಗುಡ್‌ನ್ಯೂಸ್‌ ಕೊಟ್ಟಿದೆ.

ಯಾವುದಕ್ಕೆಲ್ಲಾ GST ವಿನಾಯಿತಿ?

33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು
ಅಪರೂಪದ ಕಾಯಿಲೆಗಳ ಔಷಧಗಳು
ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
ಮ್ಯಾಪ್‌, ಚಾರ್ಟ್‌, ಗ್ಲೋಬ್‌ಗಳು, ಪೆನ್ಸಿಲ್‌ಗಳು
ಶಾರ್ಪನರ್‌, ಕ್ರಯೋನ್‌, ನೋಟ್‌ಬುಕ್‌ಗಳು
ಪ್ಯಾಸ್ಟೆಲ್‌ಗಳು, ಎರೇಸರ್‌ಗೆ ಜಿಎಸ್‌ಟಿ ಇಲ್ಲ
ಹಾಲು, ಪನೀರ್, ಪಿಜ್ಜಾ, ಬ್ರೆಡ್, ಚಪಾತಿ, ರೋಟಿ
GST (3)

ದೇಶದ ಜನರಿಗೆ ದೀಪಾವಳಿ ಗಿಫ್ಟ್ ಎಂದ ಮೋದಿ

ಜಿಎಸ್‌ಟಿ ಸ್ಲ್ಲ್ಯಾಬ್‌ಗಳಲ್ಲಿ ಭಾರೀ ಬದಲಾವಣೆ ಮಾಡಿದ ಬಳಿಕ ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದ ಸಂದರ್ಭದಲ್ಲಿ ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗಾಗಿ ಕೆಲವೊಂದು ಮಹತ್ವದ ಸುಧಾರಣೆಗಳನ್ನು ತರುವ ಉದ್ದೇಶದ ಬಗ್ಗೆ ಮಾತನಾಡಿದ್ದೆ. ಅದರಂತೆ ಸಾಮಾನ್ಯ ಜನರ ಜೀವನ ಸುಗಮಗೊಳಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯಿಂದ ದೀಪಾಳಿಗೆ ಗಿಫ್ಟ್ ನೀಡಲಾಗಿದೆ ಅಂತ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಈ ಜಿಎಸ್‌ಟಿ ಸ್ಲ್ಯಾಬ್ ನವರಾತ್ರಿ ಮೊದಲ ದಿನವಾದ ಸೆಪ್ಟೆಂಬರ್ 22 ರಂದು ಜಾರಿಯಾಗಲಿದೆ. ಈ ಮೂಲಕ ದೇಶವಾಸಿಗಳಿಗೆ ದಸರಾ, ದೀಪಾವಳಿ ಹಬ್ಬಕ್ಕೆ ನರೇಂದ್ರ ಮೋದಿ ಸರ್ಕಾರ ಶುಭ ಸುದ್ದಿ ನೀಡಿದೆ.

The post ದಸರಾ, ದೀಪಾವಳಿಗೆ ಗಿಫ್ಟ್ ಕೊಟ್ಟ ಮೋದಿ ! ಮಧ್ಯಮ ವರ್ಗಕ್ಕೆ ಇಳಿಯಿತು GST ಭಾರ . appeared first on Good News 24x7.

]]>
ರಾಯರ ಭಕ್ತರಿಗೆ ಶುಭ ಸುದ್ದಿ.. ಶೀಘ್ರದಲ್ಲೇ ಬರಲಿದೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ! https://www.goodnews24x7.com/good-news-for-raya-devotees-sri-raghavendra-mahatme-serial-coming-soon/ Thu, 28 Aug 2025 05:02:16 +0000 https://www.goodnews24x7.com/?p=6850 ಜೀ ಕನ್ನಡ ವಾಹಿನಿಯ ಬಹು ನಿರೀಕ್ಷಿತ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ. ರಾಯರ ಪವಾಡಗಳನ್ನ ಸಾರುವ ಭಕ್ತಿ ಪ್ರಧಾನ ಧಾರಾವಾಹಿ. ರಾಯರ ಆರಾಧಕರಿಗೆ ವಿಭಿನ್ನ ದೃಶ್ಯ ವೈಭವವನ್ನ ಕಟ್ಟಿಕೊಡಲು ಸಜ್ಜಾಗಿದೆ ಜೀ ವಾಹಿನಿ. ಕಥೆ, ನಿರ್ಮಾಣದ ಜವಾಬ್ದಾರಿಯನ್ನ ವಾಹಿನಿಯೇ ಹೊತ್ತಿದ್ದು, ಭೂಮಿಗೆ…

The post ರಾಯರ ಭಕ್ತರಿಗೆ ಶುಭ ಸುದ್ದಿ.. ಶೀಘ್ರದಲ್ಲೇ ಬರಲಿದೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ! appeared first on Good News 24x7.

]]>

ಜೀ ಕನ್ನಡ ವಾಹಿನಿಯ ಬಹು ನಿರೀಕ್ಷಿತ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ. ರಾಯರ ಪವಾಡಗಳನ್ನ ಸಾರುವ ಭಕ್ತಿ ಪ್ರಧಾನ ಧಾರಾವಾಹಿ. ರಾಯರ ಆರಾಧಕರಿಗೆ ವಿಭಿನ್ನ ದೃಶ್ಯ ವೈಭವವನ್ನ ಕಟ್ಟಿಕೊಡಲು ಸಜ್ಜಾಗಿದೆ ಜೀ ವಾಹಿನಿ. ಕಥೆ, ನಿರ್ಮಾಣದ ಜವಾಬ್ದಾರಿಯನ್ನ ವಾಹಿನಿಯೇ ಹೊತ್ತಿದ್ದು, ಭೂಮಿಗೆ ಬಂದ ಭಗವಂತ ಖ್ಯಾತಿಯ ನಟ ನವೀನ್​ ಕೃಷ್ಣ ನಿರ್ದೇಶನ ಮಾಡ್ತಿದ್ದಾರೆ.

 

ಮಹಾತ್ಮರ ಕಥೆ ನೋಡೋದಕ್ಕೆ ವೀಕ್ಷಕರು ಕಾಯ್ತಿದ್ದಾರೆ. ಈ ಹಿಂದೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಮೂಡಿಬಂದಿದ್ದ ಶ್ರೀ ಗುರು ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ನಟ ಪರೀಕ್ಷಿತ್ ಅದ್ಭುತವಾಗಿ ಅಭಿನಯಿಸಿದ್ರು. ಹಲವು ವರ್ಷಗಳ ನಂತರ​ ಮತ್ತೆ ರಾಯರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದ್ರೆ, ರಾಯರ ಪಾತ್ರದಲ್ಲಿ ಅಲ್ಲ. ಅವರ ಗುರುಗಳಾದ ವ್ಯಾಸರಾಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇನ್ನೂ, ರಾಯರ ಪಾತ್ರದ ಬ್ಗಗೆ ಸಹಜವಾಗಿಯೇ ಕುತೂಹಲ ಇದೆ. ಯಾರು ಈ ಪಾತ್ರ ಮಾಡ್ತಾರೆ ಅನ್ನೋದೇ ಸದ್ಯದ ಪ್ರಶ್ನೆ. ಸದ್ಯ ರಾಯರ ಶಿಶು ಅವತಾರದ ಪ್ರೋಮೋ ರಿಲೀಸ್​ ಮಾಡಿದೆ ತಂಡ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಮೇ ತಿಂಗಳಿನಲ್ಲಿ ತೆರೆಗೆ ಬರಬೇಕಿತ್ತು.

ಆದ್ರೆ, ಕಾರಣಾಂತರಗಳಿಂದ ರಾಯರು ಬರೋದಕ್ಕೆ ತಡವಾಯ್ತು. ಸದ್ಯ ಹೊಸ ಪ್ರೋಮೋದಲ್ಲಿ ಸೆಪ್ಟಂಬರ್​ 1ರಿಂದ ರಾಯರ ಆಗಮನವಾಗಲಿದೆ ಎಂದು ವಾಹಿನಿ ಅನೌನ್ಸ್​ ಮಾಡಿದೆ. ಇದೇ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಸದ್ಯ ಭಕ್ತರಂತೂ ರಾಯರ ಕಥೆ ನೋಡೋಲು ಕಾತರದಿಂದ ಕಾಯುತ್ತಿದ್ದಾರೆ.

The post ರಾಯರ ಭಕ್ತರಿಗೆ ಶುಭ ಸುದ್ದಿ.. ಶೀಘ್ರದಲ್ಲೇ ಬರಲಿದೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ! appeared first on Good News 24x7.

]]>
ಜಾತಿನಿಂದನೆ ಪ್ರಕರಣ – ಕೆಪಿಸಿಸಿ ವಕ್ತಾರರಾಗಿದ್ದ ಜಿ.ವಿ. ಸೀತಾರಾಮು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ! https://www.goodnews24x7.com/caste-abuse-case-kpcc-spokesperson-g-v-seetharam-expelled-from-party-for-six-years/ Sun, 10 Aug 2025 05:52:21 +0000 https://www.goodnews24x7.com/?p=5678 ಮೈಸೂರು : ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೆಪಿಸಿಸಿ ವಕ್ತಾರರಾಗಿದ್ದ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.           ಜಿ.ವಿ.…

The post ಜಾತಿನಿಂದನೆ ಪ್ರಕರಣ – ಕೆಪಿಸಿಸಿ ವಕ್ತಾರರಾಗಿದ್ದ ಜಿ.ವಿ. ಸೀತಾರಾಮು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ! appeared first on Good News 24x7.

]]>

ಮೈಸೂರು : ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೆಪಿಸಿಸಿ ವಕ್ತಾರರಾಗಿದ್ದ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

 

 

 

 

 

ಜಿ.ವಿ. ಸೀತಾರಾಮು ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದನ್ನು ಖಂಡಿಸಿ ಸಮಾಜದವರು ಎಚ್.ಡಿ. ಕೋಟೆಯಲ್ಲಿ ಪ್ರತಿಭಟಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಪೊಲೀಸ್ ಠಾಣೆಯಲ್ಲಿ FIR ಕೂಡ ದಾಖಲಾಗಿದೆ. ಹೀಗಾಗಿ, ಶಿಸ್ತುಕ್ರಮ ಜರುಗಿಸುವಂತೆ ಅಲ್ಲಿನ ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಶಾಸಕ ಅನಿಲ್ ಚಿಕ್ಕಮಾದು ಕೋರಿದ್ದರು. ಅದನ್ನು ಆಧರಿಸಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ ಕುಮಾ‌ರ್ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

 

 

 

 

 

ಸೀತಾರಾಮ್ ಅವರ ಮಾತು ಒಕ್ಕಲಿಗ ಸಮುದಾಯಕ್ಕೆ ನೋವುಂಟು ಮಾಡಿರುವುದು ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿಗೆ ಶಿಫಾರಸು ಮಾಡಿತ್ತು. ಈ ವಿಚಾರವನ್ನು ಪರಿಶೀಲಿಸಿದ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಸೀತಾರಾಮ್ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

The post ಜಾತಿನಿಂದನೆ ಪ್ರಕರಣ – ಕೆಪಿಸಿಸಿ ವಕ್ತಾರರಾಗಿದ್ದ ಜಿ.ವಿ. ಸೀತಾರಾಮು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ! appeared first on Good News 24x7.

]]>
10 ಕೋಟಿ ಆಸ್ತಿ ಕಬಳಿಸಲು ಸ್ಕೆಚ್ ಹಾಕಿದ್ರಾ! MLC ಮಂಜೇಗೌಡ? https://www.goodnews24x7.com/did-you-sketch-to-grab-10-crore-property-mlc-manjegowda/ Sat, 09 Aug 2025 10:02:10 +0000 https://www.goodnews24x7.com/?p=5634 ಮೈಸೂರು : ಭೂಮಿಯನ್ನು ಕಬಳಿಸುವುದರಲ್ಲಿ ಕುಟುಂಬದ ಜಮೀನು ವಾದದಲ್ಲಿ ಗಂಭೀರ ಘಟನೆ ಒಂದು ನಡೆದಿದೆ. ಮೈಸೂರು ತಾಲೂಕು ಮಂಡಕಹಳ್ಳಿ ಗ್ರಾಮದ ಪತ್ರಪ್ಪ ಎಂಬ ವ್ಯಕ್ತಿಯ 4 ಎಕರೆ 19 ಗುಂಟೆಗಳ ಭೂಮಿಯನ್ನು ಕಬಳಿಸಲು ಸತ್ತು ಹೋದ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ…

The post 10 ಕೋಟಿ ಆಸ್ತಿ ಕಬಳಿಸಲು ಸ್ಕೆಚ್ ಹಾಕಿದ್ರಾ! MLC ಮಂಜೇಗೌಡ? appeared first on Good News 24x7.

]]>

ಮೈಸೂರು : ಭೂಮಿಯನ್ನು ಕಬಳಿಸುವುದರಲ್ಲಿ ಕುಟುಂಬದ ಜಮೀನು ವಾದದಲ್ಲಿ ಗಂಭೀರ ಘಟನೆ ಒಂದು ನಡೆದಿದೆ. ಮೈಸೂರು ತಾಲೂಕು ಮಂಡಕಹಳ್ಳಿ ಗ್ರಾಮದ ಪತ್ರಪ್ಪ ಎಂಬ ವ್ಯಕ್ತಿಯ 4 ಎಕರೆ 19 ಗುಂಟೆಗಳ ಭೂಮಿಯನ್ನು ಕಬಳಿಸಲು ಸತ್ತು ಹೋದ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಘಟನೆ ನಡೆದಿದೆ.

ನೀಲಕಂಠ ನರಸಿಂಹ ಶರ್ಮ ಎಂಬವರು 2018ರಲ್ಲಿ ಮೃತಪಟ್ಟಿದ್ದು, ಅವರ ಮರಣ ಪ್ರಮಾಣಪತ್ರವು ಕೂಡ ಪ್ರಾಯೋಗಿಕ ದಾಖಲೆಯಾಗಿದೆ. ಆದರೆ, ಅವರ ಸಾವಿನ ಆರು ವರ್ಷಗಳ ನಂತರ, 2024 ರಲ್ಲಿ ಅವರ ಹೆಸರಿನಲ್ಲಿ ಜಿಪಿಎ ಮಾಡಲಾಗಿದೆ. ಅವರೇ ಬಂದು ಜಿಪಿಎ ಮಾಡಿಕೊಟ್ಟ ಬಗ್ಗೆ ದಾಖಲೆ ಸೃಷ್ಟಿ ಮಾಡಲಾಗಿದೆ. ಈ ಜಿಪಿಎ ಕುರಿತು ನಕಲಿ ದಾಖಲೆ ಸೃಷ್ಟಿಸಿದ್ದು, ಈ ಮೂಲಕ ಭೂಮಿಯನ್ನು ಕಬಳಿಸುವ ಪ್ರಯತ್ನ ನಡೆದಿದೆ.

https://www.instagram.com/reel/DNIGddOxEMs/?utm_source=ig_web_button_share_sheet10 ನಕಲಿ ದಾಖಲೆ ಸೃಷ್ಟಿಸಿ 7 ವರ್ಷಗಳ ನಂತರ ಜಿಪಿಎ, ಆಸ್ತಿ ಕಬಳಿಸಿ ಎಂ ಎಲ್ ಸಿ ಮಂಜೇಗೌಡಗೆ ಮಾರಾಟ!

ಈ ಕುರಿತು ಅನುಮಾನ ಬಂದ ಪತ್ರಪ್ಪ ಮುದ್ದಿನ ಮೊಮ್ಮಗ ಕಿಶೋರ್ ಅವರು ದಕ್ಷಿಣ ಪೊಲೀಸ್ ಠಾಣೆಗೆ ಭೂಕಬಳಿಕೆ ದೂರು ನೀಡಿದ್ದು, ನಮ್ಮ ತಾತನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ನಮ್ಮ ದೊಡ್ಡಪ್ಪ ಅಂದರೆ ಪತ್ರಪ್ಪ ಮತ್ತೊಬ್ಬ ಮಗ ಪ್ರಭುದೇವ ಅವರಿಂದ ನೀಲಕಂಠ ನರಸಿಂಹ ಶರ್ಮಾ ಅವರ ಆಸ್ತಿ ಮಾರಾಟ ಮಾಡಲಾಗಿದೆ. ಕಿಶೋರ್ ಅಪ್ರಪ್ತಾರಾಗಿರುವಾಗ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆಂದು ಈ‌ ಬಗ್ಗೆ ಹೈಕೋರ್ಟ್‌ನಲ್ಲಿ ಕಿಶೋರ್ ಪರ ತೀರ್ಪು ಬಂದಿದೆ.

ಈ ಸಂಬಂಧ ವಿವೇಕ್ ಕೆ. ಹಟ್ಟಿ, ಸುಮಾ ಜಿ, ಅನಿತಾ ಶೆಟ್ಟಿ, ಪುಷ್ಪಾ ಡಿ ಮತ್ತು ನೀಲಕಂಠ ನರಸಿಂಹ ಶರ್ಮಾ. ಇವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇವರಿಂದ ಭೂಮಿ ಇವರಿಂದ ಎಂ ಎಲ್ ಸಿ ಸಿ.ಎನ್.ಮಂಜೇಗೌಡ, ಶಂಕರ್ ರಾವ್, ಎಸ್ ಸತೀಶ್ ಹಂಚಲ್ಕರ್ ಅವರಿಗೆ ಮಾರಾಟಗೊಂಡಿದೆ ಎನ್ನಲಾಗಿದೆ. ಆದರೆ ತಹಶೀಲ್ದಾರ್ ಖಾತೆ ಮಾಡಿಕೊಟ್ಟಿರುವುದಿಲ್ಲ ಎನ್ನಲಾಗಿದೆ.

ಹೈಕೋರ್ಟ್ ನಲ್ಲಿ ಸಹ ಈ ಪ್ರಕರಣ ಸಂಬಂಧವಾಗಿ ಕಿಶೋರ್ ಪರ ತೀರ್ಪು ಬಂತು. ಸತ್ತುಹೋದ ನೀಲಕಂಠ ನರಸಿಂಹ ಶರ್ಮ ಅವರಿಂದ ಜಿಪಿಎ ಮಾಡಿಸಿಕೊಂಡು ಕಬಳಿಕೆಗೆ ಮುಂದಾದ ಆರೋಪ ವಿವಾದದಲ್ಲಿದೆ. ಈ ಪ್ರಕರಣವು ಸೂಕ್ಷ್ಮ ತನಿಖೆಗೆ ಒಳಪಡುವಂತಾಗಿದೆ ಮತ್ತು ಸಂಬಂಧಿತರ ಹಿರಿಯ ನ್ಯಾಯಾಂಗ ಕ್ರಮಗಳು ಹೆಚ್ಚುವರಿ ಸ್ಪಷ್ಟತೆ ಒದಗಿಸುವಲ್ಲಿ ನಿರೀಕ್ಷಿಸಲಾಗಿದೆ.

ಆಸ್ತಿ ಜಿಪಿಎ ಎಂದರೇನು?
ಆಸ್ತಿಯಲ್ಲಿನ ಜಿಪಿಎ ಎಂದರೆ ಜನರಲ್ ಪವರ್ ಆಫ್ ಅಟಾರ್ನಿ, ಆಸ್ತಿ ವ್ಯವಹಾರಗಳಲ್ಲಿ ಕ್ರಮಗಳನ್ನು ಅಧಿಕೃತಗೊಳಿಸಲು ಅವಕಾಶ. ವ್ಯಕ್ತಿ ಜೀವಂತ ಇರಬೇಕು.

The post 10 ಕೋಟಿ ಆಸ್ತಿ ಕಬಳಿಸಲು ಸ್ಕೆಚ್ ಹಾಕಿದ್ರಾ! MLC ಮಂಜೇಗೌಡ? appeared first on Good News 24x7.

]]>
ರೈತರಿಗೆ ಗುಡ್ನ್ಯೂಸ್, KRS ಡ್ಯಾಂ ಭರ್ತಿಗೆ ಅಡಿ ನೀರು..! https://www.goodnews24x7.com/good-news-for-farmers-krs-dam-filled-with-feet-of-water/ Sun, 22 Jun 2025 10:57:04 +0000 https://www.goodnews24x7.com/?p=4595 ಮಂಡ್ಯ: ಮೊನ್ನೆಯಷ್ಟೇ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂನ ಒಳಹರಿವು ಹೆಚ್ಚಾಗಿತ್ತು. ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಲ್ಲಿ ಆಗ ದಿಢೀರನೇ 16 ಸಾವಿರ ಕ್ಯೂಸೆಕ್ಗೆ ಒಳಹರಿವು ಏರಿಕೆಯಾಗಿತ್ತು. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ…

The post ರೈತರಿಗೆ ಗುಡ್ನ್ಯೂಸ್, KRS ಡ್ಯಾಂ ಭರ್ತಿಗೆ ಅಡಿ ನೀರು..! appeared first on Good News 24x7.

]]>

ಮಂಡ್ಯ: ಮೊನ್ನೆಯಷ್ಟೇ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂನ ಒಳಹರಿವು ಹೆಚ್ಚಾಗಿತ್ತು. ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಲ್ಲಿ ಆಗ ದಿಢೀರನೇ 16 ಸಾವಿರ ಕ್ಯೂಸೆಕ್ಗೆ ಒಳಹರಿವು ಏರಿಕೆಯಾಗಿತ್ತು.


ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದೆ. ಹೀಗಾಗಿ ಕೆಆರ್ಎಸ್ ಡ್ಯಾಂನ ಒಳಹರಿವು ಕುಗ್ಗಿದೆ. ಇನ್ನೂ ಈ ನಡುವೆ 13,359 ಕ್ಯೂಸೆಕ್ಗೆ ಡ್ಯಾಂ ಒಳಹರಿವು ಇಳಿದಿದೆ. ಸದ್ಯ ಕೆಆರ್ಎಸ್ ಡ್ಯಾಂ ಭರ್ತಿಗೆ ಕೇವಲ 5 ಅಡಿ ಮಾತ್ರ ಬೇಕಿದೆ. ಹೀಗಾಗಿ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಜೂನ್ ತಿಂಗಳಿನಲ್ಲಿಯೇ ಭರ್ತಿಯಾದ್ರೆ ಹೊಸ ದಾಖಲೆ ನಿರ್ಮಾಣವಾಗುತ್ತದೆ.

ಆದ್ರೆ ಈ ಹೊತ್ತಿನಲ್ಲಿ ಒಳಹರಿವು ಕಡಿಮೆಯಾಗಿದೆ. 124.80 ಅಡಿಯ ಕೆಆರ್ಎಸ್ ಡ್ಯಾಂ 119.40 ಅಡಿಯಷ್ಟು ಭರ್ತಿಯಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 42.291 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂನಿಂದ 1,664 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.

The post ರೈತರಿಗೆ ಗುಡ್ನ್ಯೂಸ್, KRS ಡ್ಯಾಂ ಭರ್ತಿಗೆ ಅಡಿ ನೀರು..! appeared first on Good News 24x7.

]]>