Google Pay Archives - Good News 24x7 https://www.goodnews24x7.com/tag/google-pay/ Kannada Sat, 12 Apr 2025 11:10:03 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Google Pay Archives - Good News 24x7 https://www.goodnews24x7.com/tag/google-pay/ 32 32 ಆನ್ ಲೈನ್ ಪೇಮೆಂಟ್ ಮಾಡುವ UPI ಸರ್ವೀಸ್ನಲ್ಲಿ ಅಡಚಣೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಗ್ರಾಹಕರಿಗೆ ಪರದಾಟ. https://www.goodnews24x7.com/%e0%b2%86%e0%b2%a8%e0%b3%8d-%e0%b2%b2%e0%b3%88%e0%b2%a8%e0%b3%8d-%e0%b2%aa%e0%b3%87%e0%b2%ae%e0%b3%86%e0%b2%82%e0%b2%9f%e0%b3%8d-%e0%b2%ae%e0%b2%be%e0%b2%a1%e0%b3%81%e0%b2%b5-upi-%e0%b2%b8%e0%b2%b0/ Sat, 12 Apr 2025 11:10:03 +0000 https://www.goodnews24x7.com/?p=3171 ದೇಶಾದ್ಯಂತ ಇಂದು UPI, ಪೇಟಿಎಂ, ಫೋನ್ಪೇ, ಗೂಗಲ್ ಪೇ ಸೇವೆಯಲ್ಲಿ ತೊಂದರೆಯಾಗಿದೆ. ಆನ್ಲೈನ್ ಪೇಮೆಂಟ್ ನಂಬಿಕೊಂಡಿದ್ದವರು ಪರದಾಟ ನಡೆಸುವಂತಾಗಿದ್ದು, ಜೇಬಲ್ಲಿ ಹಣ ಇಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಂದು ಬೆಳಗ್ಗೆಯಿಂದಲೇ ಆನ್‌ಲೈನ್ ಪೇಮೆಂಟ್ ಮಾಡುವ UPI ಸರ್ವೀಸ್ನಲ್ಲಿ ಅಡಚಣೆ ಆಗಿದೆ. ಸುಮಾರು…

The post ಆನ್ ಲೈನ್ ಪೇಮೆಂಟ್ ಮಾಡುವ UPI ಸರ್ವೀಸ್ನಲ್ಲಿ ಅಡಚಣೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಗ್ರಾಹಕರಿಗೆ ಪರದಾಟ. appeared first on Good News 24x7.

]]>

ದೇಶಾದ್ಯಂತ ಇಂದು UPI, ಪೇಟಿಎಂ, ಫೋನ್ಪೇ, ಗೂಗಲ್ ಪೇ ಸೇವೆಯಲ್ಲಿ ತೊಂದರೆಯಾಗಿದೆ. ಆನ್ಲೈನ್ ಪೇಮೆಂಟ್ ನಂಬಿಕೊಂಡಿದ್ದವರು ಪರದಾಟ ನಡೆಸುವಂತಾಗಿದ್ದು, ಜೇಬಲ್ಲಿ ಹಣ ಇಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಇಂದು ಬೆಳಗ್ಗೆಯಿಂದಲೇ ಆನ್‌ಲೈನ್ ಪೇಮೆಂಟ್ ಮಾಡುವ UPI ಸರ್ವೀಸ್ನಲ್ಲಿ ಅಡಚಣೆ ಆಗಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಈ ತೊಂದರೆ ಕಾಣಿಸಿಕೊಂಡಿದ್ದು, ಜೇಬಲ್ಲಿ ದುಡ್ಡಿಲ್ಲದ ಗ್ರಾಹಕರು ಹಣಕ್ಕಾಗಿ ಪರದಾಡುವಂತಾಗಿದೆ. ದೇಶಾದ್ಯಂತ ಆರ್ಥಿಕ ವ್ಯವಹಾರದ ಮೇಲೆ ಇದು ಪರಿಣಾಮ ಬೀರಿದೆ.


ಸಕಾಲಕ್ಕೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಕೆಲಸ ಮಾಡದ ಹಿನ್ನೆಲೆಯಲ್ಲಿ ಹಲವಾರು ಜನ ತಮಗಾದ ತೊಂದರೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. X ನಲ್ಲಿ UPI ಸರ್ವರ್ ಡೌನ್ ಅನ್ನೋ ಟ್ಯಾಗ್‌ನಲ್ಲಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.
UPI ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಬಗ್ಗೆ ಸ್ಪಷ್ಟನೆ ನೀಡಿದೆ. UPI ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗಶಃ UPI ವಹಿವಾಟು ಕುಸಿತವಾಗಿದೆ. ನಾವು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಅಡಚಣೆಗಾಗಿ ಗ್ರಾಹಕರಲ್ಲಿ ವಿಷಾಧಿಸುತ್ತೇವೆ ಎಂದು NPCI ತಿಳಿಸಿದೆ.


ಈಗಂತೂ ಪ್ರತಿಯೊಬ್ಬರು UPI ಮೂಲಕ ಹಣ ಪಾವತಿ ಮಾಡುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಇದಕ್ಕಾಗಿ ಆನ್‌ಲೈನ್ ಪೇಮಂಟ್ ವೇದಿಕೆಗಳಾದ ಪೇಟಿಎಂ, ಫೋನ್ಪೇ, ಗೂಗಲ್ ಪೇಯನ್ನ ಬಳಸಲಾಗುತ್ತಿದೆ. ಇವುಗಳ ಅವಲಂಬಿತರಾಗಿರುವುದರಿಂದ ಸಾಕಷ್ಟು ಮಂದಿ ತಮ್ಮ ಜೇಬಿನಲ್ಲಿ ಹಣ ಇಟ್ಟುಕೊಳ್ಳುವುದನ್ನೇ ಬಿಟ್ಟಿದ್ದಾರೆ. ಇದೀಗ ದಿಢೀರ್ ಸಮಸ್ಯೆ ಎದುರಾಗಿರುವುದರಿಂದ ಜೇಬಲ್ಲಿ ದುಡ್ಡು ಇಲ್ಲದೇ ಪರದಾಡುವಂತಾಗಿದೆ.

The post ಆನ್ ಲೈನ್ ಪೇಮೆಂಟ್ ಮಾಡುವ UPI ಸರ್ವೀಸ್ನಲ್ಲಿ ಅಡಚಣೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಗ್ರಾಹಕರಿಗೆ ಪರದಾಟ. appeared first on Good News 24x7.

]]>
ಇಂಟರ್ನೆಟ್ ಇಲ್ಲದೇ ಹಣ ಪಾವತಿಸುವುದು ಹೇಗೆ? ಇಲ್ಲಿದೆ ವಿವರ! https://www.goodnews24x7.com/%e0%b2%87%e0%b2%82%e0%b2%9f%e0%b2%b0%e0%b3%8d%e0%b2%a8%e0%b3%86%e0%b2%9f%e0%b3%8d-%e0%b2%87%e0%b2%b2%e0%b3%8d%e0%b2%b2%e0%b2%a6%e0%b3%87-%e0%b2%b9%e0%b2%a3-%e0%b2%aa%e0%b2%be%e0%b2%b5%e0%b2%a4/ Sat, 11 Jan 2025 10:57:15 +0000 https://www.goodnews24x7.com/?p=1689 ಯುಪಿಐ ಮೂಲಕ ಹಣ ಪಾವತಿಸಲು ಮೊಬೈಲ್ನಲ್ಲಿ ಇಂಟರ್ನೆಟ್ ಅಗತ್ಯ. ಆದರೆ, ಯುಎಸ್ಎಸ್ಡಿ ಕೋಡ್ ಮುಖಾಂತರ ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸಾಧ್ಯ. ನೊಂದಾಯಿತ ನಂಬರ್ನಿಂದ ಯುಎಸ್ಎಸ್ಡಿ ಕೋಡ್ ಅನ್ನು ಡಯಲ್ ಮಾಡಿ ಈ ಸೌಲಭ್ಯ ಬಳಸಬಹುದು. ಇವತ್ತು ಪೇಟಿಎಂ, ಫೋನ್ಪೇ, ಗೂಗಲ್…

The post ಇಂಟರ್ನೆಟ್ ಇಲ್ಲದೇ ಹಣ ಪಾವತಿಸುವುದು ಹೇಗೆ? ಇಲ್ಲಿದೆ ವಿವರ! appeared first on Good News 24x7.

]]>

ಯುಪಿಐ ಮೂಲಕ ಹಣ ಪಾವತಿಸಲು ಮೊಬೈಲ್ನಲ್ಲಿ ಇಂಟರ್ನೆಟ್ ಅಗತ್ಯ. ಆದರೆ, ಯುಎಸ್ಎಸ್ಡಿ ಕೋಡ್ ಮುಖಾಂತರ ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸಾಧ್ಯ. ನೊಂದಾಯಿತ ನಂಬರ್ನಿಂದ ಯುಎಸ್ಎಸ್ಡಿ ಕೋಡ್ ಅನ್ನು ಡಯಲ್ ಮಾಡಿ ಈ ಸೌಲಭ್ಯ ಬಳಸಬಹುದು.
ಇವತ್ತು ಪೇಟಿಎಂ, ಫೋನ್ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್ಫಾರ್ಮ್ಗಳು ಜನರ ದೈನಂದಿನ ಹಣಕಾಸು ವಹಿವಾಟುಗಳಿಗೆ ಅತ್ಯಗತ್ಯ ಸಾಧನಗಳಾಗಿವೆ. ಅಂಗಡಿ ಮುಂಗಟ್ಟುಗಳಲ್ಲಿ ದಿನಸಿ ವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಪೇಮೆಂಟ್ವರೆಗೆ ಪ್ರತಿಯೊಂದಕ್ಕೂ ಯುಪಿಐ ಬಳಕೆ ಹೆಚ್ಚಾಗಿದೆ. ಈ ಯುಪಿಐ ಬಳಸಬೇಕೆಂದರೆ ಮೊಬೈಲ್ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇರಬೇಕು. ಬೇರೆ ಬೇರೆ ಕಾರಣಗಳಿಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಾಗದೇ ಹೋಗಬಹುದು ಅಥವಾ ಕೈಕೊಡಬಹುದು. ಅಂತಹ ಸಂದರ್ಭದಲ್ಲಿ ಆನ್ಲೈನ್ನಲ್ಲಿ ಹಣ ಪಾವತಿ ಹೇಗೆ?
ಎನ್ಪಿಸಿಐ ಈ ಸಮಸ್ಯೆಗೆ ಪರಿಹಾರ ಹುಡುಕಿದೆ. ಇಂಟರ್ನೆಟ್ ಅಗತ್ಯ ಇಲ್ಲದೇ ಯುಪಿಐ ಪಾವತಿ ಸಾಧ್ಯವಾಗುವಂತಹ ಹೊಸ ಫೀಚರ್ ಅನ್ನು ರೂಪಿಸಿದೆ. ಅದು ಯುಎಸ್ಎಸ್ಡಿ ಮುಖಾಂತರ ಹಣ ಪಾವತಿಸುವ ಹೊಸ ಕ್ರಮ.
ಯುಪಿಐ ಬಳಕೆದಾರರು ತಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ ಅಧಿಕೃತ ಯುಎಸ್ಎಸ್ಡಿ ಕೋಡ್ ಆದ *99# ಅನ್ನು ಡಯಲ್ ಮಾಡಿದಾಗ ವಿವಿಧ ಬ್ಯಾಂಕಿಂಗ್ ಸೇವೆಗಳಿಗೆ ಅವಕಾಶ ಸಿಗುತ್ತದೆ. ಹಣ ರವಾನಿಸುವುದು, ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಯುಪಿಐ ಪಿನ್ ಬದಲಿಸುವುದು ಇತ್ಯಾದಿ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಪಡೆಯಬಹುದು.
ಯುಎಸ್ಎಸ್ಡಿ ಕೋಡ್ ಮೂಲಕ ಹಣ ಪಾವತಿಸುವ ಕ್ರಮ ಹೇಗೆ?
• ಬ್ಯಾಂಕ್ನೊಂದಿಗೆ ನೊಂದಾಯಿತವಾಗಿರುವ ಮೊಬೈಲ್ ನಂಬರ್ನಿಂದ *99# ಅನ್ನು ಡಯಲ್ ಮಾಡಿ.
• ಇದು ಐವಿ ಕಾಲ್ ಆಗಿದ್ದು, ನಿಮಗೆ ಬೇಕಾದ ಭಾಷೆ ಆಯ್ಕೆ ಮಾಡಿಕೊಳ್ಳಿ.
• ಹಣ ರವಾನೆ, ಬಾಕಿ ಹಣ ಪರಿಶೀಲನೆ, ವಹಿವಾಟು ವಿವರ ವೀಕ್ಷಣೆ ಇತ್ಯಾದಿ ಸೌಲಭ್ಯಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳಬಹುದು.
• ಹಣ ಕಳುಹಿಸಬೇಕೆಂದಿದ್ದರೆ ‘1’ ಅನ್ನು ಟೈಪ್ ಮಾಡಬಹುದು. ಬಳಿಕ ಸೆಂಡ್ ಅನ್ನು ಒತ್ತಿರಿ.
• ಆಗ ಮೊಬೈಲ್ ನಂಬರ್, ಯುಪಿಐ ಐಡಿ, ಮೊಬೈಲ್ನಲ್ಲಿ ಸೇವ್ ಆಗಿರುವ ಕಾಂಟ್ಯಾಕ್ಟ್ ಇತ್ಯಾದಿ ಹಣ ಕಳುಹಿಸುವ ವಿಧಾನಗಳ ಆಯ್ಕೆ ಇರುತ್ತದೆ.
ಯಾವುದಾದರೊಂದನ್ನು ಆಯ್ದುಕೊಂಡು, ಸೆಂಡ್ ಒತ್ತಿರಿ.
• ಮೊಬೈಲ್ ನಂಬರ್ ಅನ್ನು ನೀವು ಆಯ್ದುಕೊಂಡರೆ ಆಗ ನೀವು ಹಣ ಕಳುಹಿಸಬೇಕಾದ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ, ಸೆಂಡ್ ಒತ್ತಿರಿ.
• ಯುಪಿಐ ಐಡಿ ಆಯ್ಕೆ ಮಾಡಿಕೊಂಡಿದ್ದರೆ ಆಗ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಬೇಕಾಗುತ್ತದೆ.
• ಈಗ ಎಷ್ಟು ಹಣ ಪಾವತಿಸಬೇಕು, ಆ ಮೊತ್ತವನ್ನು ನಮೂದಿಸಿ, ಸೆಂಡ್ ಒತ್ತಿರಿ.
• ಆ ಹಣ ಪಾವತಿ ಯಾಕೆಂದು ನೀವು ವಿವರ ಬರೆಯುವ ಅವಕಾಶ ಇರುತ್ತದೆ. ಇದು ಅನಗತ್ಯ ಎನಿಸಿದರೆ ನಿರ್ಲಕ್ಷಿಸಬಹುದು.
• ಈಗ ಕೊನೆಯ ಕ್ರಮವಾಗಿ ನೀವು ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಎಂಟ್ರ ಮಾಡಬೇಕು. ಆಗ ಹಣ ರವಾನೆ ಕಾರ್ಯ ಪೂರ್ಣಗೊಳ್ಳುವುದು.

The post ಇಂಟರ್ನೆಟ್ ಇಲ್ಲದೇ ಹಣ ಪಾವತಿಸುವುದು ಹೇಗೆ? ಇಲ್ಲಿದೆ ವಿವರ! appeared first on Good News 24x7.

]]>