GrihaLakshmi Archives - Good News 24x7 https://www.goodnews24x7.com/tag/grihalakshmi/ Kannada Fri, 12 Dec 2025 12:26:14 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg GrihaLakshmi Archives - Good News 24x7 https://www.goodnews24x7.com/tag/grihalakshmi/ 32 32 ಗೃಹ ಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ‌ ಹಣ ಎಲ್ಲಿ ಹೋಯ್ತು! ತಪ್ಪು ಲೆಕ್ಕ ಕೊಟ್ರಾ ಲಕ್ಷ್ಮೀ ಹೆಬ್ಬಾಳ್ಕರ್? https://www.goodnews24x7.com/where-did-the-5-thousand-crores-of-the-griha-lakshmi-scheme-go-did-lakshmi-hebbalkar-make-a-mistake-in-the-calculation/ Fri, 12 Dec 2025 12:25:11 +0000 https://www.goodnews24x7.com/?p=8280 ಬೆಳಗಾವಿ : ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ ಒಂದಾಗಿದೆ. ಆದ್ರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ…

The post ಗೃಹ ಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ‌ ಹಣ ಎಲ್ಲಿ ಹೋಯ್ತು! ತಪ್ಪು ಲೆಕ್ಕ ಕೊಟ್ರಾ ಲಕ್ಷ್ಮೀ ಹೆಬ್ಬಾಳ್ಕರ್? appeared first on Good News 24x7.

]]>

ಬೆಳಗಾವಿ : ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ ಒಂದಾಗಿದೆ. ಆದ್ರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಗಮನಸೆಳೆದಿದ್ದಾರೆ. ಆದ್ರೆ, ಈ ಬಗ್ಗೆ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಪ್ಪು ಲೆಕ್ಕಾ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಗೃಹ ಲಕ್ಷ್ಮೀ ಹಣವನ್ನು ಆಗಸ್ಟ್​ ತಿಂಗಳವರೆಗೂ ನೀಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಆದ್ರೆ, ಆಗಸ್ಟ್​ ವರೆಗೂ ಹಣ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಮಹೇಶ್ ಟೆಂಗಿನಕಾಯಿ ಅವರು ಸದನದಲ್ಲಿಂದು ಸರ್ಕಾರದ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡಿಲ್ಲದಿರುವುದು ದಾಖಲೆ ಮೂಲಕ ಬಹಿರಂಗವಾಗಿದೆ. ಹಾಗಾದ್ರೆ, ಐದು ಸಾವಿರ ಕೋಟಿ ರೂಪಾಯಿ ಎಲ್ಲೋಯ್ತು ಎಂದು ವಿಪಕ್ಷ ಪ್ರಶ್ನಿಸಿದೆ.

ಈ ಬಗ್ಗೆ ಸ್ಲೀಕರ್​​​​ಗೆ ಪತ್ರ
ಈ ಸಂಬಂಧ ಮಹೇಶ್ ಟೆಂಗಿನಕಾಯಿ ಅವರು ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿದ್ದು, ಆಗಸ್ಟ್ 2025ರ ವರೆಗೆ ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ. ಆದರೆ ಬಿಡುಗಡೆ ಮಾಡಿಲ್ಲ ಎಂಬುದಕ್ಕೆ ನನ್ನ ಸರ್ಕಾರಿ ದಾಖಲೆ ಇದೆ. ಸದನಕ್ಕೆ ಸಚಿವರು ತಪ್ಪು ಮಾಹಿತಿ ನೀಡುತ್ತಿದ್ದಾರೆ . ಸದನದ ಹಕ್ಕು ಮತ್ತು ಗೌರವ ತೋರಿದ ಅಗೌರವ. ಈ ವಿಚಾರವಾಗಿ ತುರ್ತಾಗಿ ಸದನದಲ್ಲಿ ಮಾತನಾಡಲು ಅವಕಾಶ ಕೋಡಿ ಎಂದು ಪತ್ರ ಬರೆದಿದ್ದಾರೆ.

5 ಸಾವಿರ ಕೋಟಿ‌ ಹಣ ಎಲ್ಲಿ ಹೋಯ್ತು?
ದಾಖಲೆ ಬಿಡುಗಡೆ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ಮಹೇಶ್ ಟೆಂಗಿನಕಾಯಿ, ಡಿಸೆಂಬರ್ 9ರಂದು ಸದನದದಲ್ಲಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪ್ರಶ್ನೆ ಮಾಡಿದ್ದೆ. 2025ರ ಫೆಬ್ರವರಿ, ಮಾರ್ಚ್ ತಿಂಗಳ ಹಣ ಕೊಟ್ಟಿಲ್ಲ ಅಂತಾ ಕೇಳಿದ್ದೆ. ಇದಕ್ಕೆ ಸಚಿವರು ಆಗಸ್ಟ್​ ತಿಂಗಳವರೆಗೂ ಕೊಟ್ಟಿದ್ದೇವೆ ಎಂದು ಹೇಳಿದ್ರು. ಮತ್ತೆ ಪರಿಶೀಲಿಸುವಂತೆ ಕೇಳಿದ್ದೆವು, ಆದ್ರೂ ಕೊಟ್ಟಿರೋದಾಗಿ ಹೇಳಿದ್ರು. ಆದ್ರೆ, ಫೆಬ್ರವರಿ, ಮಾರ್ಚ್ ತಿಂಗಳ ‘ಗೃಹಲಕ್ಷ್ಮೀ’ ಹಣ ಬಿಡುಗಡೆ ಮಾಡಿಲ್ಲ. ಗದಗ, ಹಾವೇರಿ ಸೇರಿ ಮೂರು ಜಿಲ್ಲೆಗಳ ಬಗ್ಗೆ ದಾಖಲೆ ನೀಡಿದ್ದೇವೆ. ಫೆಬ್ರವರಿ, ಮಾರ್ಚ್ ತಿಂಗಳ ‘ಗೃಹಲಕ್ಷ್ಮೀ’ ಹಣ ಬಿಡುಗಡೆ ಮಾಡಿಲ್ಲ. ಬಿಡುಗಡೆ ಮಾಡಿದ್ರೆ 5 ಸಾವಿರ ಕೋಟಿ‌ ಹಣ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು. ಈ ವಿಚಾರವನ್ನು ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್ ಧ್ವನಿ ಎತ್ತಿದ್ದು, ಇದಕ್ಕೆ ಸಿಎಂ ಪ್ರತಿಕ್ರಿಯಿಸಿ, ಬಾಕಿ‌ ಇದ್ರೆ ಹಾಕುವುದಾಗಿ ಹೇಳಿದರು. ಅಲ್ಲದೇ ಸೋಮವಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಮಜಾಯಿಷಿ ನೀಡಿದರು.

The post ಗೃಹ ಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ‌ ಹಣ ಎಲ್ಲಿ ಹೋಯ್ತು! ತಪ್ಪು ಲೆಕ್ಕ ಕೊಟ್ರಾ ಲಕ್ಷ್ಮೀ ಹೆಬ್ಬಾಳ್ಕರ್? appeared first on Good News 24x7.

]]>