GTDeveGowda Archives - Good News 24x7 https://www.goodnews24x7.com/tag/gtdevegowda/ Kannada Sat, 13 Sep 2025 11:51:33 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg GTDeveGowda Archives - Good News 24x7 https://www.goodnews24x7.com/tag/gtdevegowda/ 32 32 ದೇಶದ ಭವಿಷ್ಯ ನಿರೂಪಿಸುವ ಹೊಣೆ ಶಿಕ್ಷಕರದ್ದು: ಶಾಸಕ ಜಿಟಿಡ https://www.goodnews24x7.com/teachers-are-responsible-for-shaping-the-future-of-the-country-mla-gtd/ Sat, 13 Sep 2025 11:51:33 +0000 https://www.goodnews24x7.com/?p=7509 ಮೈಸೂರು: ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಸಂಸ್ಕೃತಿಯನ್ನು ದೂರ ಮಾಡಿಸುವ ಜತೆಗೆ,ದೇಶದ ಭವಿಷ್ಯವನ್ನು ನಿರ್ಮಿಸುವ ಮಕ್ಕಳನ್ನುತಯಾರು ಮಾಡುವ ಹೊಣೆ ಶಿಕ್ಷಕರದ್ದಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ಅವರ ಜನ್ಮ ದಿನಚರಣೆ ಅಂಗವಾಗಿ…

The post ದೇಶದ ಭವಿಷ್ಯ ನಿರೂಪಿಸುವ ಹೊಣೆ ಶಿಕ್ಷಕರದ್ದು: ಶಾಸಕ ಜಿಟಿಡ appeared first on Good News 24x7.

]]>

ಮೈಸೂರು: ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಸಂಸ್ಕೃತಿಯನ್ನು ದೂರ ಮಾಡಿಸುವ ಜತೆಗೆ,ದೇಶದ ಭವಿಷ್ಯವನ್ನು ನಿರ್ಮಿಸುವ ಮಕ್ಕಳನ್ನುತಯಾರು ಮಾಡುವ ಹೊಣೆ ಶಿಕ್ಷಕರದ್ದಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ಅವರ ಜನ್ಮ ದಿನಚರಣೆ ಅಂಗವಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬರುತ್ತಿದೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ.ಅಂತಹವರನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು.

ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳ ಸೌಲಭ್ಯ ಒದಗಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗಿದೆ. ಓದುವ ಮಕ್ಕಳಲ್ಲಿ ಮೊಬೈಲ್ ಬಳಸದಂತೆಹಾಗೂ ಮೊಬೈಲ್ ಸಂಸ್ಕೃತಿಯನ್ನು ದೂರವಿರಿಸಿ ಶಿಕ್ಷಣದ ಕಡೆಗೆ ಗಮನಹರಿಸುವಂತೆ ಮಾಡಬೇಕು. ಪ್ರತಿಭಾವಂತ ಮಕ್ಕಳನ್ನು ತಯಾರು ಮಾಡುವ ಜವಾಬ್ದಾರಿ ಅರಿತು ಕೆಲಸಮಾಡಬೇಕು ಎಂದರು. ಬಡವರ ಮಕ್ಕಳು ಮೆರಿಟ್‌ನಲ್ಲಿ ತೇರ್ಗಡೆ ಹೊಂದುವಂತೆ ಮಾಡಬೇಕು. ಬಡವರ ಮಕ್ಕಳಿಗೆ ಶಿಕ್ಷಣಕೊಡಿಸುವ ಅವಕಾಶವನ್ನು ದೇವರು ಕಲ್ಪಿಸಿದ್ದಾನೆ. ಸಂಬಳಕ್ಕಾಗಿ ಕೆಲಸ ಮಾಡದೆ ನಿಸ್ವಾರ್ಥ ಸೇವೆಯನ್ನು ಇಟ್ಟುಕೊಂಡುಕೆಲಸಮಾಡಬೇಕಿದೆ.ನಮ್ಮ ತಂದೆ ಬಡವರು. ಹಸು ಸಾಕಲು ಊರಿನ ಹೊರಗೆ ಹುಲ್ಲು ತರುತ್ತಿದ್ದೆ. ಕುಟುಂಬದ ಹೊಣೆ ಹೊತ್ತು ಹಗಲುರಾತ್ರಿ ಕೆಲಸ ಮಾಡಿದ್ದೇನೆ. ಸೊಸೈಟಿಯಲ್ಲಿ ಅಕ್ಕಿ ಅಳೆಯುತ್ತಿದ್ದೆ. ಅಲ್ಲಿಯೇ ಮಲಗಿ ಜನರ ಸಂಪಾದನೆ ಮಾಡಿದೆ. ನಂತರ,ಸಹಕಾರ ಕ್ಷೇತ್ರದಿಂದ ಮೇಲಕ್ಕೆ ಬಂದಿದ್ದೇನೆ ಎಂದರು. ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ತಮ್ಮ ಶಾಲೆಯನ್ನು ಹದ್ದುಬಸ್ತಿನಲ್ಲಿಡಬೇಕು. ಶೌಚಾಲಯ,ಕುಡಿಯುವ ನೀರಿನ ಗಮನಹರಿಸಬೇಕು.ಕೆಲವು ಗ್ರಾಮಗಳ ಶಾಲೆಗಳಲ್ಲಿ ಕಸ ಕ್ಲೀನ್ ಮಾಡದೆ ಕೆಲವು ಕಡೆ ಹಾಗೆಯೇ ಬಿದ್ದಿರುತ್ತದೆ. ಬರೀ ಪಾಠ ಮಾಡುವುದಕ್ಕೆ ಮಾತ್ರಮುಖ್ಯ ಶಿಕ್ಷಕರ ಕೆಲಸವಲ್ಲ. ಶಾಲೆಯನ್ನು ತಮ್ಮ ಮನೆಯಂತೆ ಜವಾಬ್ದಾರಿಯಿಂದ ಗಮನಿಸಬೇಕು. ಶಾಲೆಗಳ ಸರ್ವೆ ಮಾಡಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಭ್ರಷ್ಟಾಚಾರರಹಿತ ಕ್ಷೇತ್ರ: ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಭ್ರಷ್ಟಾಚಾರ ಇಲ್ಲದೆ ನಡೆಯುತ್ತಿರುವ ಕ್ಷೇತ್ರ ಇದ್ದರೆ ಅದು ಶಿಕ್ಷಕರ ಕ್ಷೇತ್ರವಾಗಿದೆ. ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದಾದರೇ ಅದು ಶಿಕ್ಷಕರು ಮಾತ್ರ ಎಂದು ಬಣ್ಣಿಸಿದರು. ಡಾ.ರಾಧಾಕೃಷ್ಣನ್ ಅವರ ಬಗ್ಗೆ ಹೇಳಬೇಕಿಲ್ಲ. ದೇಶದಲ್ಲೇ ತತ್ವಜ್ಞಾನಿ,ದೊಡ್ಡ ಮೇಧಾವಿಯಾಗಿದ್ದರು. ಒಬ್ಬ ಶಿಕ್ಷಕರೊಬ್ಬರು ಏನೆಲ್ಲಾ ಪದವಿಗಳನ್ನು ಪಡೆಯಬಹುದು ಎಂಬುದಕ್ಕೆ ಅವರೇ ಉದಾಹರಣೆಯಾಗಿದ್ದಾರೆ. ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುವ ಹೊಣೆ ಹೊಂದಿದ್ದಾರೆ. ಶಿಕ್ಷಕರ ದಿನಾಚರಣೆತ ದಿನದಂದು ಪ್ರಧಾನಮಂತ್ರಿಗಳು,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಶಿಕ್ಷಕರನ್ನುನೆನಪಿಸಿಕೊಂಡರು. ನಡಿಗೆ ಮೂಲಕ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಿ ಬರುತ್ತಿದ್ದರು. ಈಗ ರಸ್ತೆ,ಬಸ್ ವ್ಯವಸ್ಥೆ ಮಾಡಿಕೊಡಲಾಗಿದೆ. ಶಿಕ್ಷಣ,ಕಲೆ,ಸಾಹಿತ್ಯ,ಸಂಗೀತ,ಯೋಗ,ಧ್ಯಾನ ಕಲಿಸಬೇಕು ಎಂದರು. ದಲಿತ ಮಹಿಳೆ ಸಾವಿತ್ರಿಬಾಪುಲೆ ಅವರು ಶಾಲೆಯನ್ನು ತೆರೆದು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದರು. ಮೊದಲ ಶಿಕ್ಷಕಿಯಾಗಿ ಕೆಲಸ ಮಾಡಿದ ಸಾವಿತ್ರಿಬಾಪುಲೆ ಅವರ ತತ್ವ,ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಾಗಬೇಕು. ಕಲಿಸು ಫೌಂಡೇಷನ್‌ನಿಂದ ೨೦ ಲಕ್ಷ, ಕೆನರಾ ಬ್ಯಾಂಕ್‌ನಿಂದ ೧ ಕೋಟಿ, ಟಿವಿಎಸ್,ಐಟಿಸಿ ಕಂಪೆನಿ,ಸಾಯಿ ಗಾರ್ಮೆಂಟ್ಸ್, ಜೆ.ಕೆ.ಟೈರ್ಸ್‌ ಸೇರಿದಂತೆ ಅನೇಕ ಕಂಪನಿಗಳು,ಕಾರ್ಖಾನೆಯವರು ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಮಾರ್ಟ್‌ಕ್ಲಾಸ್ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಶಿಕ್ಷಕರು ತುಂಬಾ ಸಂತೋಷದಿಂದ ಬಂದಿದ್ದಾರೆ. ಗುರುಗಳ ಸ್ಥಾನದಲ್ಲಿ ಇರುವ ಶಿಕ್ಷಕರು ಉತ್ತಮ ಪ್ರಜೆಗಳನ್ನರೂಪಿಸಬೇಕು. ಶಿಸ್ತನ್ನುಕಾಪಾಡಿಕೊಳ್ಳಬೇಕು. ಶಾಲೆಗಳಿಗೆ ಬೇಕಾದ ಕೊಠಡಿಗಳು,ಕುಡಿಯುವ ನೀರು,ಶೌಚಾಲಯ ಇಲ್ಲವೆಂದರೆ ಕಟ್ಟಿಸಿಕೊಡುವ ಶ್ರೀಮಂತರು ಇಲ್ಲೇ ಕುಳಿತಿದ್ದಾರೆ.ಆದರೆ,ಶಿಕ್ಷಕರು ಪದೇ ಪದೇ ಎದ್ದು ಹೋಗಿ ಮಾಡುವುದು ಸರಿಯಲ್ಲ. ಶಿಕ್ಷಕರೇ ಶಿಸ್ತು ಕಲಿಯದಿದ್ದರೆ ಬೇರೆಯವರಿಗೆ ಹೇಗೆ ಕಲಿಸಲು ಸಾಧ್ಯವಿದೆ ಎಂದು ಬೇಸರಿಸಿದರು. ಇಂದು ಇರುವ ಜಮೀನುಗಳನ್ನುಮಾರಾಟ ಮಾಡಿ ಮದುವೆ ಮಾಡುವುದು ಹೆಚ್ಚಾಗುತ್ತಿದೆ.

ಶಿಕ್ಷಕರು ಸರಳ ವಿವಾಹದ ಬಗ್ಗೆ ಅರಿವು ಮೂಡಿಸಬೇಕು. ಸಮಾಜವನ್ನು ಬದಲಿಸುವ ಕೆಲಸ ಮಾಡಬೇಕು. ನಾನೇನನ್ನ ಮಗ,ಇಬ್ಬರು ಹೆಣ್ಣು ಮಕ್ಕಳಿಗೆ ತಿರುಪತಿಯಲ್ಲಿ, ತಮ್ಮನ ಮಗನ ಮದುವೆಯನ್ನು ಧರ್ಮಸ್ಥಳದಲ್ಲಿ ಮದುವೆ ಮಾಡಿದ್ದೇನೆ. ಹಾಗಾಗಿ, ಹೆಣ್ಣು ಮಕ್ಕಳಿಗೆ ಸರಳ ವಿವಾಹ ಮಾಡಿ ಅವರ ಹೆಸರಿನಲ್ಲಿ ಜಮೀನು ಬರೆದುಕೊಡಬೇಕು ಎಂದು ನುಡಿದರು.ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಮತ್ತಿತರರು ಹಾಜರಿದ್ದರು. ಮೈಸೂರಿನ ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ಅವರ ಜನ್ಮ ದಿನಚರಣೆ ಅಂಗವಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು..ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾ

The post ದೇಶದ ಭವಿಷ್ಯ ನಿರೂಪಿಸುವ ಹೊಣೆ ಶಿಕ್ಷಕರದ್ದು: ಶಾಸಕ ಜಿಟಿಡ appeared first on Good News 24x7.

]]>
ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ದೂರ; ಮೌನ ಮುರಿದ ಜಿಟಿಡಿ ಪುತ್ರ… https://www.goodnews24x7.com/dissatisfied-with-jds-away-from-party-gtd-son-breaks-silence/ Mon, 07 Jul 2025 08:53:31 +0000 https://www.goodnews24x7.com/?p=4944 ಮೈಸೂರು : ಶಾಸಕ ಜಿಟಿ ದೇವೇಗೌಡ ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಜಿ.ಡಿ ಹರೀಶ್ ಗೌಡ, ನಮ್ಮ…

The post ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ದೂರ; ಮೌನ ಮುರಿದ ಜಿಟಿಡಿ ಪುತ್ರ… appeared first on Good News 24x7.

]]>

ಮೈಸೂರು : ಶಾಸಕ ಜಿಟಿ ದೇವೇಗೌಡ ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜಿ.ಡಿ ಹರೀಶ್ ಗೌಡ, ನಮ್ಮ ತಂದೆಗೆ ಪಕ್ಷದ ವಿಚಾರದಲ್ಲಿ ಬೇಸರ ಇರುವುದು ಸತ್ಯ. ಅವರು ಅಸಮಾಧಾನದಿಂದಲೇ ಜೆಡಿಎಸ್ ನಿಂದ ದೂರ ಉಳಿದಿದ್ದಾರೆ. ಜಿಟಿ ದೇವೇಗೌಡರನ್ನ ಮನವೊಲಿಸುವ ಪ್ರಯತ್ನ ಪಕ್ಷದ ವರಿಷ್ಠರು ಮಾಡುತ್ತಾರೆ ಇದು ನನ್ನ ಮನೆಯ ವೈಯಕ್ತಿಕ ವಿಚಾರ ಅಲ್ಲ. ಹೀಗಾಗಿ ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಆಗಲ್ಲ. ನಾನು ಜೆಡಿಎಸ್ ನಲ್ಲಿ ಇದ್ದೇನೆ ಜೆಡಿಎಸ್ ನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಹುಣಸೂರು ಕ್ಷೇತ್ರದ ಜನರು ನನ್ನನ್ನ ಜೆಡಿಎಸ್ ನಿಂದ ಗೆಲ್ಲಿಸಿದ್ದಾರೆ. ಜನರ ನಮ್ಮನ್ನ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ನನ್ನ ಕ್ಷೇತ್ರದ ಜನರ ನಂಬಿಕೆಗೆ ನಾನು ದ್ರೋಹ ಮಾಡಲ್ಲ ಕುಮಾರಸ್ವಾಮಿ ಅವರನ್ನ ಮತ್ತೊಮ್ಮೆ ಸಿಎಂ ಮಾಡುವುದು ನಮ್ಮ ಉದ್ದೇಶ ಎಂದರು.

The post ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ದೂರ; ಮೌನ ಮುರಿದ ಜಿಟಿಡಿ ಪುತ್ರ… appeared first on Good News 24x7.

]]>
ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ಮನೆ, ಬೋರೆ ಆನಂದೂರಿನಲ್ಲಿ ನಡೆದ ಘಟನೆ ; ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ https://www.goodnews24x7.com/house-burnt-down-due-to-lightning-strike-in-bore-anandur-mla-g-t-deve-gowda-visits-the-spot/ Sun, 18 May 2025 10:23:36 +0000 https://www.goodnews24x7.com/?p=3981 ಮೈಸೂರು : ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ತಾಲೂಕಿನ ಬೋರೆ ಆನಂದೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ,ಮನೆಯಲ್ಲಿ ಯಾರು ಇಲ್ಲದಿದ್ದ ರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಬೋರೆ ಆನಂದೂರು…

The post ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ಮನೆ, ಬೋರೆ ಆನಂದೂರಿನಲ್ಲಿ ನಡೆದ ಘಟನೆ ; ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ appeared first on Good News 24x7.

]]>

ಮೈಸೂರು : ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ತಾಲೂಕಿನ ಬೋರೆ ಆನಂದೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ,ಮನೆಯಲ್ಲಿ ಯಾರು ಇಲ್ಲದಿದ್ದ ರಿಂದ ಭಾರಿ ಅನಾಹುತ ಒಂದು ತಪ್ಪಿದೆ.


ಬೋರೆ ಆನಂದೂರು ಗ್ರಾಮದ ಶನಿವಾರೆಗೌಡ, ವೆಂಕಟೇಶ್ ಗೌಡ ಹಾಗು ಶ್ರೀನಿವಾಸಗೌಡ ಎಂಬುವವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಮನೆಗಳಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳದ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಚಾಮುಂಡೇಶ್ವರಿ ಕ್ಷೇತ್ರದ ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದಲ್ಲಿ ಬೆಂಕಿ ಅನಾಹುತ 3 ಮನೆಗಳು ಬೆಂಕಿಗೆ ಆಹುತಿ ಬೆಂಕಿಯ ನಾಲಿಗೆಗೆ ಮನೆಯಲ್ಲಿರುವ ದವಸ ಧಾನ್ಯ, ಬಟ್ಟೆ, ಪಾತ್ರೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.  ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿದ್ದಾರೆ

ಅಷ್ಟೇ ಅಲ್ಲದೆ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ ಒಂದೊಂದು ಲಕ್ಷ ಪರಿಹಾರ ನೀಡಿದ ಶಾಸಕ ಜಿಟಿಡಿ ಘೋಷಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸೆಸ್ಕಾಂ ಎಂ.ಡಿ. ಮುನಿಗೋಪಾಲ್ ರಾಜ್, ಎಸ್.ಸಿ.ಸುನೀಲ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಗಳೊಡನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

The post ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ಮನೆ, ಬೋರೆ ಆನಂದೂರಿನಲ್ಲಿ ನಡೆದ ಘಟನೆ ; ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ appeared first on Good News 24x7.

]]>