Hanuman Archives - Good News 24x7 https://www.goodnews24x7.com/tag/hanuman/ Kannada Sun, 29 Mar 2026 06:49:37 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Hanuman Archives - Good News 24x7 https://www.goodnews24x7.com/tag/hanuman/ 32 32 ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್ https://www.goodnews24x7.com/%e0%b2%b9%e0%b3%82%e0%b2%95%e0%b3%8b%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%a1%e0%b2%bf-%e0%b2%ac%e0%b2%82%e0%b2%a6-%e0%b2%b0%e0%b2%be%e0%b2%ae/ Sun, 29 Mar 2026 06:49:37 +0000 https://www.goodnews24x7.com/?p=9041 ಯುಗಾದಿ ನಂತರ ಬರುವ ಹಬ್ಬವೇ ರಾಮನವಮಿ. ಹಿಂದೂಗಳ ಪ್ರಮುಖ ಹಬ್ಬವಾದ ರಾಮನವಮಿಯನ್ನು ದೇಶದಾದ್ಯಂತ ಅದ್ದೂರಿಯಿಂದ ಆಚರಿಸಲಾಗಿದೆ. ಈ ಆದರೆ ಇಲ್ಲೊಬ್ಬ ಯುವ ರೈತ ವಿಭಿನ್ನವಾಗಿ ರಾಮನವಮಿ ಆಚರಿಸಿದ್ದಾನೆ. ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹಾಗೂ ಹನುಮಂತ ಚಿತ್ರ ಬಿಡಿಸಿ ಹಬ್ಬವನ್ನು…

The post ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್ appeared first on Good News 24x7.

]]>

ಯುಗಾದಿ ನಂತರ ಬರುವ ಹಬ್ಬವೇ ರಾಮನವಮಿ. ಹಿಂದೂಗಳ ಪ್ರಮುಖ ಹಬ್ಬವಾದ ರಾಮನವಮಿಯನ್ನು ದೇಶದಾದ್ಯಂತ ಅದ್ದೂರಿಯಿಂದ ಆಚರಿಸಲಾಗಿದೆ. ಈ ಆದರೆ ಇಲ್ಲೊಬ್ಬ ಯುವ ರೈತ ವಿಭಿನ್ನವಾಗಿ ರಾಮನವಮಿ ಆಚರಿಸಿದ್ದಾನೆ. ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹಾಗೂ ಹನುಮಂತ ಚಿತ್ರ ಬಿಡಿಸಿ ಹಬ್ಬವನ್ನು ಸಂಭ್ರಮಿಸಿದ್ದಾನೆ, ಈ ಕುರಿತಾದ ಸ್ಟೋರಿ ಇಲ್ಲಿದೆ. ಮರ್ಯಾದಾ ಪುರುಷ, ಪುರುಷೋತ್ತಮ ಭಗವಾನ್ ಶ್ರೀ ರಾಮನ ಜನ್ಮದಿನವನ್ನು ದೇಶದೆಲ್ಲೆಡೆ ಶ್ರದ್ಧಾಭಕ್ರಿಯಿಂದ ಆಚರಿಸಲಾಗಿದೆ. ಹಿಂದೂಗಳಿಗೆ ಯುಗಾದಿ ವರುಷದ ಮೊದಲ ಹಬ್ಬವಾದರೆ, ತದನಂತರ ಬರುವುದೇ ಈ ರಾಮನವಮಿ. ಈ ಹಬ್ಬದಂದು ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬ ರೈತನು ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ಸಂಭ್ರಮಿಸಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ನಂದಿನಿ ವೆಂಕಟಾದ್ರಿ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವ ರೈತನೊಬ್ಬ ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ವಿಭಿನ್ನವಾಗಿ ಆಚರಿಸುವುದನ್ನು ಕಾಣಬಹುದು. ಹೊಲದಲ್ಲಿ ಹೂಕೋಸಿನ ರಾಶಿಯನ್ನು ಕಾಣಬಹುದು. ಮೂವರು ಮಹಿಳೆಯರು ಕೆಲಸದಲ್ಲಿ ತೊಡಗಿಕೊಂಡಿದ್ದು, ಯುವ ರೈತನೊಬ್ಬ ಹೂಕೋಸನ್ನು ಜೋಡಿಸಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿ ಅದರ ಪಕ್ಕ ಕುಳಿತಿರುವುದನ್ನು ನೀವು ನೋಡಬಹುದು.

ಮಾರ್ಚ್ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಮ್ಮ ಭಕ್ತಿಯ ಭಾವನೆಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ, ಆದ್ದರಿಂದ, ಇದು ನೈಸರ್ಗಿಕ ಹೂವಿನ ಗೌರವವಾದ ಹೂಕೋಸು ಮೂಲಕ ಭಕ್ತಿಯನ್ನು ವ್ಯಕ್ತಪಡಿಸುವ ಅತ್ಯಂತ ವಿಶಿಷ್ಟ ಮಾರ್ಗವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ತುಂಬಾ ಸುಂದರ ಹಾಗೂ ಹೃದಯ ಸ್ಪರ್ಶಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಜೈ ಶ್ರೀರಾಮ್ ಎಂದು ಹೇಳಿದ್ದಾರೆ.

The post ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್ appeared first on Good News 24x7.

]]>
ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು https://www.goodnews24x7.com/bigg-boss-guests-say-ghilli-doesnt-have-10-percent-of-hanumans-game/ Wed, 26 Nov 2025 06:36:44 +0000 https://www.goodnews24x7.com/?p=8265 ಬಿಗ್ ಬಾಸ್ ಮನೆಗೆ ಆಗಮಿಸಿದ ಅತಿಥಿಗಳು ಗಿಲ್ಲಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮಂತನ ಶಾಂತ ಸ್ವಭಾವಕ್ಕೆ ಗಿಲ್ಲಿಯನ್ನು ಹೋಲಿಸಿದ ಅತಿಥಿಗಳು, ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಕೂಡ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಗಿಲ್ಲಿ ಅತಿಥಿಗಳೊಂದಿಗೆ ಹಾಸ್ಯ ಮಾಡಿದರು,…

The post ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು appeared first on Good News 24x7.

]]>

ಬಿಗ್ ಬಾಸ್ ಮನೆಗೆ ಆಗಮಿಸಿದ ಅತಿಥಿಗಳು ಗಿಲ್ಲಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮಂತನ ಶಾಂತ ಸ್ವಭಾವಕ್ಕೆ ಗಿಲ್ಲಿಯನ್ನು ಹೋಲಿಸಿದ ಅತಿಥಿಗಳು, ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಕೂಡ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಗಿಲ್ಲಿ ಅತಿಥಿಗಳೊಂದಿಗೆ ಹಾಸ್ಯ ಮಾಡಿದರು, ಆದರೆ ಅತಿಥಿಗಳು ಅದನ್ನು ಗಂಭೀರವಾಗಿ ತೆಗೆದುಕೊಂಡರು.

 

ಕಳೆದ ಸೀಸನ್​ನಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಡೀ ಶೋ ದಿಕ್ಕನ್ನು ಬದಲಿಸಿದ್ದರು. ಹಲವು ತಿಂಗಳ ಕಾಲ ಅವರು ಭರ್ಜರಿ ಮನರಂಜನೆ ನೀಡಿದ್ದರು. ಯಾರೇ ನಾಮಿನೇಷನ್ ಮಾಡಿದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಬಳಿಕ ಕೋಟಿ ಮತಗಳ ಅಂತರದಲ್ಲಿ ಅವರು ಗೆಲುವು ಕಂಡರು. ಈ ಸೀಸನ್​ ಅಲ್ಲಿ ಗಿಲ್ಲಿ ಕೂಡ ರೇಸ್​ನಲ್ಲಿ ಮುಂದಿದ್ದಾರೆ. ಆದರೆ, ಹನುಮಂತನ 10 ಪರ್ಸೆಂಟ್ ಕೂಡ ಗಿಲ್ಲಿ ಇಲ್ಲ ಎಂದು ಬಿಗ್ ಬಾಸ್ (Bigg Boss)​ ಮನೆಗೆ ಬಂದ ಅತಿಥಿಗಳು ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್​ ಈಗ ಬಿಬಿ ಪ್ಯಾಲೇಸ್ ಆಗಿ ಬದಲಾಗಿದೆ. ಉಗ್ರಂ ಮಂಜು ಅವರು ಬ್ಯಾಚುಲರ್ ಪಾರ್ಟಿ ಮಾಡೋದಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಕೂಡ ಜೊತೆಗಿದ್ದಾರೆ. ಅವರು ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ವೇಳೆ ಗಿಲ್ಲಿಯನ್ನು ಅವರು ಹನುಮಂತನ ಜೊತೆ ಹೋಲಿಕೆ ಮಾಡಿ ನೋಡಿದ್ದಾರೆ.

ಅತಿಥಿಗಳ ಆತಿಥ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಇದನ್ನು ಗಿಲ್ಲಿ ಅವರು ಗಂಭೀರವಾಗಿ ಸ್ವೀಕರಿಸಿಲ್ಲ. ಅತಿಥಿಗಳ ಕಾಲೆಳೆಯುವ ಪ್ರಯತ್ನವನ್ನು ಗಿಲ್ಲಿ ಮಾಡಿದ್ದಾರೆ. ಇದು ಅತಿಥಿಗಳ ಕೋಪಕ್ಕೆ ಕಾರಣ ಆಗಿದೆ. ರಜತ್ ಹಾಗೂ ಮಂಜು ಕರೆದು ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಈ ವಾರ್ನಿಂಗ್​​ಗೆ ಎಲ್ಲ ಗಿಲ್ಲಿ ಜಗ್ಗುವವರೇ ಅಲ್ಲ. ಅವರು ತಮ್ಮ ಕೀಟಲೆ ಮುಂದುವರಿಸಿದ್ದಾರೆ. ಎಲ್ಲ ಸಂದರ್ಭದಲ್ಲೂ ಹಾಸ್ಯ ಮನಸ್ಥಿತಿಯಲ್ಲೇ ನಡೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ರಜತ್, ತ್ರಿವಿಕ್ರಂ ಮಂಜು ಮೊದಲಾದವರು ಚರ್ಚೆ ಮಾಡಿದ್ದಾರೆ. ‘ಇವನು ನಮ್ಮವನ (ಹನುಮಂತ) ರೀತಿಯೇ. ನಮ್ಮವನು ಶಾಂತವಾಗಿ ಇರ್ತಿದ್ದ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತ್ರ ಮಾತನಾಡುತ್ತಿದ್ದ. ಇವನು ಬಾಯಿಗೆ ಬಂದಂತೆಲ್ಲ ಮಾತನಾಡುತ್ತಿದ್ದಾನೆ’ ಎಂದು ರಜತ್ ಹೇಳಿದರು. ‘ಅವನ 10 ಪರ್ಸೆಂಟ್ ಕೂಡ ಇವನಿಲ್ಲ ಬಿಡಿ’ ಎಂದು ತ್ರಿವಿಕ್ರಂ ಅವರು ಹೇಳಿದರು.

The post ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು appeared first on Good News 24x7.

]]>
ಮಹಿಳೆಯರು ಹನುಮಂತನ ಪಾದ ಮುಟ್ಟಿದರೆ ಏನಾಗುತ್ತೆ ? https://www.goodnews24x7.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%b0%e0%b3%81-%e0%b2%b9%e0%b2%a8%e0%b3%81%e0%b2%ae%e0%b2%82%e0%b2%a4%e0%b2%a8-%e0%b2%aa%e0%b2%be%e0%b2%a6-%e0%b2%ae%e0%b3%81%e0%b2%9f/ Thu, 17 Jul 2025 10:02:50 +0000 https://www.goodnews24x7.com/?p=5150 ಮಂಗಳವಾರ ಹನುಮಂತನ ಪೂಜೆಗೆ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಆದರೆ ಆಂಜನೇಯನನ್ನು ಪೂಜಿಸುವಾಗ ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸಬೇಕು. ಪಾದ ಸ್ಪರ್ಶ ಮಾಡದಿರುವುದು, ಸಿಂಧೂರ ಅರ್ಪಿಸದಿರುವುದು ಮತ್ತು ತಲೆಬಾಗದಿರುವುದು ಮುಖ್ಯ. ಹನುಮಂತ ಮಹಿಳೆಯರನ್ನು ತಾಯಿಯಂತೆ ಪರಿಗಣಿಸುವುದರಿಂದ ಪಾದ ಮುಟ್ಟದೇ ಭಕ್ತಿಯಿಂದ ಕೈಮುಗಿದು ನಮಸ್ಕರಿಸುವುದು…

The post ಮಹಿಳೆಯರು ಹನುಮಂತನ ಪಾದ ಮುಟ್ಟಿದರೆ ಏನಾಗುತ್ತೆ ? appeared first on Good News 24x7.

]]>

ಮಂಗಳವಾರ ಹನುಮಂತನ ಪೂಜೆಗೆ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಆದರೆ ಆಂಜನೇಯನನ್ನು ಪೂಜಿಸುವಾಗ ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸಬೇಕು. ಪಾದ ಸ್ಪರ್ಶ ಮಾಡದಿರುವುದು, ಸಿಂಧೂರ ಅರ್ಪಿಸದಿರುವುದು ಮತ್ತು ತಲೆಬಾಗದಿರುವುದು ಮುಖ್ಯ. ಹನುಮಂತ ಮಹಿಳೆಯರನ್ನು ತಾಯಿಯಂತೆ ಪರಿಗಣಿಸುವುದರಿಂದ ಪಾದ ಮುಟ್ಟದೇ ಭಕ್ತಿಯಿಂದ ಕೈಮುಗಿದು ನಮಸ್ಕರಿಸುವುದು ಸೂಕ್ತ.

ಹಿಂದೂ ಧರ್ಮದಲ್ಲಿ ಪ್ರತಿನಿತ್ಯವೂ ಒಂದೊಂದು ದೇವರ ಆರಾಧನೆಯ ಪರಿಪಾಠವಿದೆ. ಮಂಗಳವಾರವನ್ನು ಹನುಮಂತನನ್ನು ಪೂಜಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಆದರೆ ಇದರ ಜೊತೆಗೆ, ಹನುಮಂತನನ್ನು ಪೂಜಿಸಲು ಹಲವು ನಿಯಮಗಳಿವೆ, ಅದನ್ನು ಪಾಲಿಸುವುದು ಕೂಡ ಅವಶ್ಯಕ.

ಹನುಮಂತನನ್ನು ಪೂಜಿಸುವಾಗ ಮಹಿಳೆಯರು ಕೆಲವು ನಿಯಮಗಳಿಗೆ ವಿಶೇಷ ಗಮನ ನೀಡಬೇಕು. ಅವುಗಳಲ್ಲಿ ಒಂದು ಪೂಜೆಯ ಸಮಯದಲ್ಲಿ ಭಗವಂತನ ಪಾದಗಳನ್ನು ಮುಟ್ಟಬಾರದು. ಮಹಿಳೆಯರು ಹನುಮಂತನ ಪಾದಗಳನ್ನು ಮುಟ್ಟಿ ಏಕೆ ಆಶೀರ್ವಾದ ಪಡೆಯಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹನುಮಂತನ ಪಾದ ಮುಟ್ಟಲು ಪುರುಷರು ಮಾತ್ರ ಸಾಧ್ಯ. ಇದಕ್ಕೆ ಕಾರಣವೇನೆಂದರೆ, ಹನುಮಂತನು ಬಾಲ್ಯದಿಂದಲೂ ಬ್ರಹ್ಮಚಾರಿ. ಬ್ರಹ್ಮಚಾರಿ ಎಂದರೆ ಲೌಕಿಕ ಆಸೆಗಳಿಂದ ದೂರವಿರುವವನು. ಇದಲ್ಲದೆ, ಹನುಮಂತನು ಪ್ರತಿಯೊಬ್ಬ ಮಹಿಳೆಯನ್ನು ತನ್ನ ತಾಯಿಯೆಂದು ಪರಿಗಣಿಸುತ್ತಾನೆ ಮತ್ತು ಯಾವುದೇ ತಾಯಿ ತನ್ನ ಮಗನ ಪಾದಗಳನ್ನು ಮುಟ್ಟುವುದಿಲ್ಲ. ಇದೇ ಕಾರಣಕ್ಕಾಗಿ ಮಹಿಳೆಯರು ಹನುಮಂತನ ಪಾದಗಳನ್ನು ಮುಟ್ಟುವ ಬದಲು ಕೈಗಳನ್ನು ಜೋಡಿಸಿ ನಮಸ್ಕರಿಸಬೇಕು ಎಂದು ಹೇಳಲಾಗುತ್ತದೆ.

The post ಮಹಿಳೆಯರು ಹನುಮಂತನ ಪಾದ ಮುಟ್ಟಿದರೆ ಏನಾಗುತ್ತೆ ? appeared first on Good News 24x7.

]]>