HARASSMENT Archives - Good News 24x7 https://www.goodnews24x7.com/tag/harassment/ Kannada Mon, 30 Jun 2025 08:11:36 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg HARASSMENT Archives - Good News 24x7 https://www.goodnews24x7.com/tag/harassment/ 32 32 ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. https://www.goodnews24x7.com/even-crores-of-rupees-were-not-enough-newlywed-woman-dies-after-consuming-pesticide-due-to-dowry-harassment/ Mon, 30 Jun 2025 08:11:36 +0000 https://www.goodnews24x7.com/?p=4845 ತಮಿಳುನಾಡು : ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಜೀವಕಳೆದುಕೊಂಡಿದ್ದಾಳೆ. ರಿಧಾನ್ಯಾ ಎಂಬ 27 ವರ್ಷದ ನವವಿವಾಹಿತೆ ಕಾರ್ ನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್ನಲ್ಲಿ ಹೊರಟ ರಿಧಾನ್ಯಾ ಕಾರ್ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.…

The post ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. appeared first on Good News 24x7.

]]>

ತಮಿಳುನಾಡು : ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಜೀವಕಳೆದುಕೊಂಡಿದ್ದಾಳೆ. ರಿಧಾನ್ಯಾ ಎಂಬ 27 ವರ್ಷದ ನವವಿವಾಹಿತೆ ಕಾರ್ ನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್ನಲ್ಲಿ ಹೊರಟ ರಿಧಾನ್ಯಾ ಕಾರ್ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.

ಈ ವರ್ಷದ ಏಪ್ರಿಲ್ನಲ್ಲಿ ಕವಿನ್ ಕುಮಾರ್ ಜೊತೆಗೆ ರಿಧಾನ್ಯಾ ವಿವಾಹ ನಡೆದಿತ್ತು. ಮದುವೆ ವೇಳೆ 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಕಾರು, 800 ಗ್ರಾಂ ಚಿನ್ನವನ್ನು ವರದಕ್ಷಿಣೆ ಆಗಿ ರಿಧಾನ್ಯಾ ತಂದೆ ಅಣ್ಣಾದೊರೈ ಗಂಡನ ಮನೆಯವರಿಗೆ ನೀಡಿದ್ದರು. ಆದರೂ ಗಂಡನ ಮನೆಯಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಮಾನಸಿಕ ಕಿರುಕುಳ ತಾಳಲಾಗದೇ ನವವಿವಾಹಿತೆ ಜೀವ ಕಳೆದುಕೊಂಡಿದ್ದಾರೆ.

ಜೀವ ತೆಗೆದುಕೊಳ್ಳುವುದಕ್ಕೂ ಮೊದಲು ರಿಧಾನ್ಯ ತನ್ನ ತಂದೆ ಅಣ್ಣಾದೊರೈಗೆ 8 ವಾಯ್ಸ್ ಮೆಸೇಜ್ ಕಳಿಸಿದ್ದರು. ಈ ವಾಯ್ಸ್ ಮೇಸೇಜ್ನಲ್ಲಿ ಗಂಡ ಹಾಗೂ ಅತ್ತೆ, ಮಾವ ಕೊಡುತ್ತಿದ್ದ ಕಿರುಕುಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಜೀವ ಬಿಡುತ್ತಿರುವುದಕ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ಇದರ ಬಗ್ಗೆ ಯಾರಿಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಮಾತು ಕೇಳಿದವರು, ಜೀವನ ಇದೇ ರೀತಿ ಇರುತ್ತೆ, ಜೀವನದಲ್ಲಿ ಇವುಗಳ ಬಗ್ಗೆ ರಾಜೀ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ಅವರಿಗೆ ನನ್ನ ನೋವು ಅರ್ಥವಾಗಲ್ಲ. ನೀವು ನನ್ನ ಬಗ್ಗೆ ಅನುಮಾನ ಪಡಬಹುದು. ಆದರೇ, ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಸುತ್ತ ಇರುವವರು ನಟಿಸುತ್ತಿದ್ದಾರೆ. ನಾನೇಕೆ ಮೌನವಾಗಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ ಅಥವಾ ನಾನೇಕೆ ಈ ರೀತಿ ಇದ್ದೇನೆ. ನನ್ನ ಜೀವನ ಪೂರ್ತಿ ನಾನು ನಿಮಗೆ ಹೊರೆಯಾಗಲ್ಲ. ನಾನು ಈ ಭಾರಿ ಯಾವುದೇ ತಪ್ಪು ಮಾಡಲ್ಲ. ಈ ಜೀವನವನ್ನು ನಾನು ಇಷ್ಟಪಡಲ್ಲ. ಗಂಡ ಕವಿನ್ ಕುಮಾರ್ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ತಂದೆ ಅಣ್ಣಾದೊರೆೈಗೆ ಕಳಿಸಿದ ವಾಯ್ಸ್ ಮೇಸೇಜ್ಗಳಲ್ಲಿ ಇದೆ ಎಂದು ಹೇಳಲಾಗಿದೆ.

ಮಂಡಿಪಾಳ್ಯ ಬಳಿಯ ದೇವಸ್ಥಾನಕ್ಕೆ ಹೋಗುತ್ತೇನೆಂದು ಕಾರ್ನಲ್ಲಿ ರಿಧಾನ್ಯಾ ಹೊರಟಿದ್ದರು. ಬಳಿಕ ರಸ್ತೆ ಪಕ್ಕದಲ್ಲೇ ಕಾರ್ ನಿಲ್ಲಿಸಿ, ಕಾರ್ನಲ್ಲಿ ಕ್ರಿಮಿನಾಶಕ ಸೇವಿಸಿ ಜೀವ ಬಿಟ್ಟಿದ್ದಾರೆ. ಸ್ಥಳೀಯರು ರಸ್ತೆ ಪಕ್ಕ ಕಾರ್ ಬಹಳ ಹೊತ್ತು ನಿಂತಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಬಂದು ಕಾರ್ ಅನ್ನು ಪರಿಶೀಲಿಸಿದಾಗ, ರಿಧಾನ್ಯಾ ಕ್ರಿಮಿನಾಶಕ ಸೇವಿಸಿರುವುದು ಬೆಳಕಿಗೆ ಬಂದಿದೆ.

ರಿಧಾನ್ಯಾ ಬಾಯಿಯಿಂದ ನೊರೆ ಬಂದಿದೆ. ಪೊಲೀಸರು ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಪತಿ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಬಿಎನ್ಎಸ್ ಕಾಯಿದೆಯ ಸೆಕ್ಷನ್ 85ರಡಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಪತಿ ಕವಿನ್ ಕುಮಾರ್, ಮಾವ ಈಶ್ವರ ಮೂರ್ತಿ, ಅತ್ತೆ ಚಿತ್ರಾದೇವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಧಾನ್ಯಾ ತಂದೆ ಅಣ್ಣಾದೊರೈ ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕರು ಆಗಿದ್ದಾರೆ.

The post ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. appeared first on Good News 24x7.

]]>
ಗಂಡನ ಕಿರುಕುಳ ತಾಳಲಾರದೆ ನೇ*ಗೆ ಶರಣಾದ ವಿವಾಹಿತೆ.! https://www.goodnews24x7.com/%e0%b2%97%e0%b2%82%e0%b2%a1%e0%b2%a8-%e0%b2%95%e0%b2%bf%e0%b2%b0%e0%b3%81%e0%b2%95%e0%b3%81%e0%b2%b3-%e0%b2%a4%e0%b2%be%e0%b2%b3%e0%b2%b2%e0%b2%be%e0%b2%b0%e0%b2%a6%e0%b3%86-%e0%b2%a8%e0%b3%87/ Tue, 04 Feb 2025 11:10:43 +0000 https://www.goodnews24x7.com/?p=2243 ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ಮಹಿಳೆಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಗಂಡ ಪ್ರಭಿನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಜೇರಿ ಪೊಲೀಸರು, ಮಹಿಳೆಯ ಗಂಡ ಪ್ರಭಿನ್‌ನನ್ನು ಬಂಧಿಸಿದ್ದಾರೆ. ಗುರುವಾರ ಪೂಕ್ಕೋಟ್ಟುಂಪಾಡಂ ಮೂಲದ…

The post ಗಂಡನ ಕಿರುಕುಳ ತಾಳಲಾರದೆ ನೇ*ಗೆ ಶರಣಾದ ವಿವಾಹಿತೆ.! appeared first on Good News 24x7.

]]>

ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ಮಹಿಳೆಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಗಂಡ ಪ್ರಭಿನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಜೇರಿ ಪೊಲೀಸರು, ಮಹಿಳೆಯ ಗಂಡ ಪ್ರಭಿನ್‌ನನ್ನು ಬಂಧಿಸಿದ್ದಾರೆ. ಗುರುವಾರ ಪೂಕ್ಕೋಟ್ಟುಂಪಾಡಂ ಮೂಲದ ವಿಷ್ಣುಜಾ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2023ರ ಮೇ ತಿಂಗಳಲ್ಲಿ ವಿಷ್ಣುಜಾ ಮತ್ತು ಎಳಂಕೂರು ಮೂಲದ ಪ್ರಭಿನ್‌ರ ವಿವಾಹ ನೆರವೇರಿತ್ತು. ಗಂಡನ ಕಿರುಕುಳದಿಂದಲೇ ಮಗಳ ಸಾವು ಆಗಿದೆ ಎಂದು ವಿಷ್ಣುಜಾ ಕುಟುಂಬ ಗಂಭೀರ ಆರೋಪವನ್ನು ಮಾಡಿದೆ. ಆದರೆ ಈ ಆರೋಪವನ್ನು ಪ್ರಭಿನ್ ಕುಟುಂಬ ನಿರಾಕರಿಸಿದೆ. ಪ್ರಭಿನ್ ಮತ್ತು ವಿಷ್ಣುಜಾ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಇದಕ್ಕೆ ಕಾರಣ ತಿಳಿದಿಲ್ಲ ಎಂದು ಪ್ರಭಿನ್ ಕುಟುಂಬ ಹೇಳಿದೆ. ವರದಕ್ಷಿಣೆ ಕೇಳಿಲ್ಲ ಅಥವಾ ಪಡೆದಿಲ್ಲ ಎಂದು ಪ್ರಭಿನ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಗಂಡನ ಮನೆಯಲ್ಲಿ ಮಗಳಿಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಮದುವೆಯಾದ ಕೆಲವು ವಾರಗಳಲ್ಲೇ ಪ್ರಭಿನ್ ಕಿರುಕುಳ ನೀಡಲು ಪ್ರಾರಂಭಿಸಿದ. ಕೆಲಸವಿಲ್ಲದ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು. ತಂದೆ-ತಾಯಿಗೆ ತೊಂದರೆ ಕೊಡಬಾರದು ಎಂದು ಮಗಳು ಎಲ್ಲವನ್ನೂ ಮುಚ್ಚಿಟ್ಟಳು. ಮಗಳನ್ನು ಬೈಯ್ಯುವ ವಾಯ್ಸ್ ನೋಟ್‌ಗಳು ನನ್ನ ಬಳಿ ಇವೆ. ದೈಹಿಕವಾಗಿಯೂ ಮಗಳಿಗೆ ಕಿರುಕುಳ ನೀಡಲಾಗುತ್ತಿತ್ತು, ಮಗಳ ದೇಹದ ಮೇಲಿನ ಗಾಯಗಳ ಬಗ್ಗೆ ಆಕೆಯ ಗೆಳತಿ ಹೇಳಿದ್ದಳು ಎಂದು ವಿಷ್ಣುಜಾಳ ತಂದೆ ತಿಳಿಸಿದ್ದಾರೆ.
ಅನ್ನಭಾಗ್ಯ ಅಕ್ಕಿಯಲ್ಲಿ ದೊಡ್ಡ ಸ್ಕ್ಯಾಮ್ ಇದೆ MLA, ಸಚಿವರ ಪಟಾಲಂ ಈ ದಂಧೆಯಲ್ಲಿ ತೊಡಗಿದೆ.!
ಸೌಂದರ್ಯ ಕಡಿಮೆ, ಕೆಲಸವಿಲ್ಲ, ವರದಕ್ಷಿಣೆ ಕಡಿಮೆ ಎಂದು ಹೇಳಿ ವಿಷ್ಣುಜಾಳಿಗೆ ಗಂಡ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬ ಆರೋಪಿಸಿದೆ. ಇದಕ್ಕೆಲ್ಲ ಗಂಡನ ಸಂಬಂಧಿಕರು ಸಹಕರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ಕುಟುಂಬ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಮಂಜೇರಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

The post ಗಂಡನ ಕಿರುಕುಳ ತಾಳಲಾರದೆ ನೇ*ಗೆ ಶರಣಾದ ವಿವಾಹಿತೆ.! appeared first on Good News 24x7.

]]>
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬ. https://www.goodnews24x7.com/%e0%b2%ae%e0%b3%88%e0%b2%95%e0%b3%8d%e0%b2%b0%e0%b3%8b-%e0%b2%ab%e0%b3%88%e0%b2%a8%e0%b2%be%e0%b2%a8%e0%b3%8d%e0%b2%b8%e0%b3%8d-%e0%b2%95%e0%b2%bf%e0%b2%b0%e0%b3%81%e0%b2%95%e0%b3%81%e0%b2%b3%e0%b2%a6/ Tue, 28 Jan 2025 08:03:54 +0000 https://www.goodnews24x7.com/?p=1960 ಚಾಮರಾಜನಗರ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು ಸರ್ಕಾರ ಎಚ್ಚರಿಕೆಗೂ ಜಗ್ಗುತ್ತಿಲ್ಲ. ಈ ಮಧ್ಯೆ ಸಾಲ ಮರುಪಾವತಿ ಮಾಡದ ಮನೆಯನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸೀಜ್ ಮಾಡಿದ ಹಿನ್ನೆಲೆ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ…

The post ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬ. appeared first on Good News 24x7.

]]>

ಚಾಮರಾಜನಗರ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು ಸರ್ಕಾರ ಎಚ್ಚರಿಕೆಗೂ ಜಗ್ಗುತ್ತಿಲ್ಲ. ಈ ಮಧ್ಯೆ ಸಾಲ ಮರುಪಾವತಿ ಮಾಡದ ಮನೆಯನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸೀಜ್ ಮಾಡಿದ ಹಿನ್ನೆಲೆ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂತೇಮರಹಳ್ಳಿ ಗ್ರಾಮದ ರಾಜೇಶ್ ಮತ್ತು ಶ್ವೇತ ದಂಪತಿಗಳ ಮನೆಯನ್ನ ಸೀಜ್ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ದಂಪತಿ ಚಾಮರಾಜನಗರದ ಮೈಕ್ರೋ ಫೈನಾನ್ಸ್ ಒಂದರಲ್ಲಿ ಮನೆ ಮೇಲೆ 15 ಲಕ್ಷ ಸಾಲ ಮಾಡಿದ್ದರು. ಆದರೆ ಸಕಾಲದಲ್ಲಿ ಸಾಲ ಮರು ಪಾವತಿ ಮಾಡದ ಕಾರಣ ವಾರದ ಹಿಂದೆಯೇ ಫೈನಾನ್ಸ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಮನೆ ಇಲ್ಲದೆ ಕುಟುಂಬ ಬೀದಿಗೆ ಬಿದ್ದಿದೆ.
ದಂಪತಿ ಸ್ವಲ್ಪ ಪ್ರಮಾಣದ ಹಣ ಕಟ್ಟಿಕೊಡುತ್ತೇವೆ ಎಂದರೂ ಕೇಳದ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಮನೆ ಜಗುಲಿಯಲ್ಲಿ ವಾಸ ಮಾಡುತ್ತಿದ್ದಾರೆ. ಮಕ್ಕಳ ಶಾಲೆಗೆ ಕಳುಹಿಸಲೂ ಆಗದೆ ಕುಟುಂಬ ಪರದಾಟ ನಡೆಸುತ್ತಿದ್ದು ನ್ಯಾಯಕ್ಕಾಗಿ ಸಂತ್ರಸ್ತರು ಆಗ್ರಹಿಸಿದ್ದಾರೆ.

The post ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬ. appeared first on Good News 24x7.

]]>