health Archives - Good News 24x7 https://www.goodnews24x7.com/tag/health/ Kannada Wed, 29 Apr 2026 08:42:21 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg health Archives - Good News 24x7 https://www.goodnews24x7.com/tag/health/ 32 32 ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ https://www.goodnews24x7.com/heatwave-on-the-coast-health-department-on-high-alert9482-2/ Wed, 29 Apr 2026 08:42:21 +0000 https://www.goodnews24x7.com/?p=9482 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.…

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಚಿಕಿತ್ಸಾ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.

ಆಸ್ಪತ್ರೆಗಳಲ್ಲಿ ವಿಶೇಷ ಸಿದ್ಧತೆ
ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ:

ತಾಲೂಕು ಆಸ್ಪತ್ರೆಗಳು: ತಲಾ 5 ವಿಶೇಷ ಬೆಡ್‌ಗಳು.

ಸಮುದಾಯ ಆರೋಗ್ಯ ಕೇಂದ್ರಗಳು: ತಲಾ 2 ವಿಶೇಷ ಬೆಡ್‌ಗಳು.

ಚರ್ಮದ ಕಾಯಿಲೆಗಳ ಹೆಚ್ಚಳ
ಬಿಸಿಲಿನ ತೀವ್ರತೆಯಿಂದಾಗಿ ಜಿಲ್ಲೆಯಲ್ಲಿ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಶೇಷವಾಗಿ ಬೆವರು ಸಾಲೆ, ಚರ್ಮದ ತುರಿಕೆ ಮತ್ತು ಕಜ್ಜಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದಿನವೊಂದಕ್ಕೆ ಸರಾಸರಿ 3 ರಿಂದ 5 ರೋಗಿಗಳು ಇಂತಹ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
ಹೀಟ್ ಸ್ಟ್ರೋಕ್ ಸೇರಿದಂತೆ ಬಿಸಿಲಿನಿಂದ ಉಂಟಾಗುವ ಯಾವುದೇ ಪ್ರಕರಣಗಳು ದಾಖಲಾದಲ್ಲಿ, ತಕ್ಷಣವೇ ಮಾಹಿತಿಯನ್ನು ಆರೋಗ್ಯ ಇಲಾಖೆಯ ವೆಬ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಓಆರ್‌ಎಸ್ (ORS) ಕಾರ್ನರ್ ಸೌಲಭ್ಯ
ನಿರ್ಜಲೀಕರಣ ತಡೆಗಟ್ಟಲು ಜಿಲ್ಲಾಸ್ಪತ್ರೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ‘ಓಆರ್‌ಎಸ್ ಕಾರ್ನರ್’ಗಳನ್ನು ಸ್ಥಾಪಿಸಲಾಗಿದೆ. ಔಷಧಗಳ ಕೊರತೆಯಾಗದಂತೆ ಸ್ಥಳೀಯವಾಗಿಯೇ ಖರೀದಿಸಲು ಅವಕಾಶ ನೀಡಲಾಗಿದ್ದು, ಕಳೆದ ಒಂದು ವಾರದಿಂದ ಓಆರ್‌ಎಸ್ ಪ್ಯಾಕೆಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಗಮನಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಬಿಸಿಲಿನಿಂದ ಗಂಭೀರ ಸಮಸ್ಯೆ ಎದುರಾದ ರೋಗಿಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಲು ಸೂಚಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಅಧಿಕೃತ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ.

The post ಕರಾವಳಿಯಲ್ಲಿ ಬಿಸಿಲಿನ ಅಬ್ಬರ: ಆರೋಗ್ಯ ಇಲಾಖೆ ಕಟ್ಟೆಚ್ಚರ appeared first on Good News 24x7.

]]>
ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! https://www.goodnews24x7.com/the-reason-why-young-people-are-dying-is-not-the-covid-vaccine-at-all-doctor-reveals-the-real-truththe-reason-why-young-people-are-dying-is-not-the-covid-vaccine-at-all-doctor-reveals-the-real-truth/ Fri, 06 Mar 2026 11:35:34 +0000 https://www.goodnews24x7.com/?p=8713 ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಮರಣಗಳಿಗೆ ಕೋವಿಡ್-19 ಲಸಿಕೆ ಕಾರಣವಾಗಿರಬಹುದೇ? ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ…

The post ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! appeared first on Good News 24x7.

]]>

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಮರಣಗಳಿಗೆ ಕೋವಿಡ್-19 ಲಸಿಕೆ ಕಾರಣವಾಗಿರಬಹುದೇ? ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ. ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ? ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು? ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿಗೆ ಭಾರತದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಮರಣಗಳಿಗೆ ಕೋವಿಡ್- 19 ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಏನೂ ಅರಿಯದ ಜನ ಇದನ್ನು ಸತ್ಯ ಎಂದು ನಂಬಿದ್ದಾರೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಂಯುಕ್ತವಾಗಿ ನಡೆಸಿದ ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಇದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.

ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ?
ಡಾ. ನರೇಂದ್ರ ಕೆ ಶೆಟ್ಟಿ ಹೇಳುವ ಪ್ರಕಾರ, ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಕೋವಿಡ್- 19 ಲಸಿಕೆ ಮತ್ತು ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಮರಣಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ವಿಶ್ಲೇಷಿಸಿದೆ. ಬದಲಾಗಿ, ಯುವಜನರಲ್ಲಿ ಕಾಣಿಸಿಕೊಳ್ಳುವ ಆಕಸ್ಮಿಕ ಹೃದಯಾಘಾತ ಮತ್ತು ಹಠಾತ್ ಆಗಿ ಸಂಭವಿಸುವ ಸಾವು (Sudden Cardiac Death – SCD) ಅನೇಕ ಕಾರಣಗಳಿಂದ ಉಂಟಾಗುತ್ತಿರಬಹುದು ಎಂದು ವಿವರಿಸಿದೆ. ಪಾಶ್ಚಾತ್ಯ ದೇಶಗಳಲ್ಲಿ ನಡೆದ ಹಲವು ಅಧ್ಯಯನಗಳು ಹೃದಯ ಸ್ನಾಯುಕೋಶದ ರೋಗಗಳು (ಕಾರ್ಡಿಯೊಮಯೋಪಥಿಗಳು) ಮತ್ತು ಹೃದಯದ ವಿದ್ಯುದ್ವಿಚಲನ ವ್ಯತ್ಯಯಗಳು (ಅರಿದಮಿಯಾಸ್) ಯುವಜನತೆಯಲ್ಲಿ ಹೆಚ್ಚುತ್ತಿರುವ ಪ್ರಮುಖ ಕಾರಣಗಳೆಂದು ಗುರುತಿಸಿವೆ. ಆದರೆ ಭಾರತೀಯ ಪರಿಸ್ಥಿತಿಯಲ್ಲಿ ಇಂತಹ ಸಮಗ್ರ ಅಧ್ಯಯನಗಳ ಕೊರತೆ ಇತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ AIIMS– ICMR ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಅಧ್ಯಯನದಲ್ಲಿ ಪ್ರಾಥಮಿಕವಾಗಿ ಕಂಡುಬಂದ ಮಾಹಿತಿಗಳು, ಬದಲಾಯಿಸಲಾಗದ ಕಾರಣಗಳ ಜೊತೆಗೆ ಬದಲಾಯಿಸಬಹುದಾದ ಜೀವನಶೈಲಿ ಅಂಶಗಳು ಯುವಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು?
ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಅಸಮರ್ಪಕ ನಿದ್ರೆ ಮತ್ತು ನಿರಂತರ ಮಾನಸಿಕ ಒತ್ತಡವು ಯುವಜನರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಮದ್ಯಪಾನ ಮತ್ತು ಧೂಮಪಾನವು ಕೊರೊನರಿ ಆರ್ಟರಿ ರೋಗ, ಹೃದಯಾಘಾತ (ಮೈಕಾರ್ಡಿಯಲ್ ಇನ್ಫಾರ್ಕ್ಷನ್) ಮತ್ತು ಹೃದಯ ಬಡಿತದ ಅಸಮತೋಲನಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದೀರ್ಘಕಾಲದ ಕೆಲಸ, ನಿರ್ದಿಷ್ಟ ಸಮಯವನ್ನು ಕೆಲಸಕ್ಕೆ ಇಡದಿರುವುದು ಮತ್ತು ಕೆಲಸದ ಒತ್ತಡವು ಹೃದಯ ರಕ್ತನಾಳ ಸಂಬಂಧಿತ ಸಂಕೀರ್ಣತೆಗಳನ್ನು ಉಂಟುಮಾಡುತ್ತವೆ. ಮಧ್ಯವಯಸ್ಕರಿಗೆ ಹೋಲಿಸಿದರೆ, ಹೃದಯಾಘಾತಕ್ಕೆ ಒಳಗಾಗುವ ಯುವ ವಯಸ್ಕರು ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸಿರುವುದು ವರದಿಯಲ್ಲಿ ಬಹಿರಂಗವಾಗಿದ್ದು, ಒತ್ತಡ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ದಾರಿ ಮಾಡಿಕೊಡುವ ಪ್ರಮುಖ ಕಾರಣ ಎಂಬುದು ತಿಳಿದು ಬಂದಿದೆ.

ಲಸಿಕೆಗಳ ಕುರಿತು ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಮಾತ್ರವಲ್ಲದೆ, ತಡೆಗಟ್ಟಬಹುದಾದ ಅಪಾಯಕಾರಕ ಅಂಶಗಳತ್ತ ಗಮನ ಹರಿಸಬೇಕಾಗಿದೆ. ಅದಕ್ಕಾಗಿಯೇ ಯುವಜನರಲ್ಲಿ ಮುಂಚಿತ ತಪಾಸಣೆ, ಆರೋಗ್ಯಕರ ಜೀವನಶೈಲಿಯ ಅಳವಡಿಕೆ, ಸಕಾರಾತ್ಮಕ ಕೆಲಸದ ವಾತಾವರಣ ನಿರ್ಮಾಣ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಅಕಾಲಿಕ ಮರಣಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಭಾರತದಲ್ಲಿ ಯುವ ವಯಸ್ಕರ ಆಕಸ್ಮಿಕ ಮರಣಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಇಂತಹ ಅಧ್ಯಯನಗಳ ಆಧಾರದ ಮೇಲೆ ರೂಪುಗೊಳ್ಳುವ ಸ್ಪಷ್ಟ ಉತ್ತರ ಯುವಜನರ ಅಮೂಲ್ಯ ಜೀವಗಳನ್ನು ರಕ್ಷಿಸಲು ಸಹಾಯಕವಾಗಬಹುದು.

 

The post ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್! appeared first on Good News 24x7.

]]>
ನೆನೆಸಿಟ್ಟ ಅಂಜೂರದ ಉಪಯೋಗ ಏನು ಗೊತ್ತ ? https://www.goodnews24x7.com/do-you-know-what-are-the-benefits-of-soaked-figs/ Tue, 02 Sep 2025 05:31:44 +0000 https://www.goodnews24x7.com/?p=7247 ಅಂಜೂರದ ಬಗ್ಗೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಇದು ನಮ್ಮ ದೇಹಕ್ಕೆ ಅಗತ್ಯವಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ವಾಲ್ನಟ್ ಗಳಂತೆ ಇದರಲ್ಲಿಯೂ ಪ್ರಯೋಜನಕಾರಿ ಗುಣಗಳಿವೆ. ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ,…

The post ನೆನೆಸಿಟ್ಟ ಅಂಜೂರದ ಉಪಯೋಗ ಏನು ಗೊತ್ತ ? appeared first on Good News 24x7.

]]>

ಅಂಜೂರದ ಬಗ್ಗೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಇದು ನಮ್ಮ ದೇಹಕ್ಕೆ ಅಗತ್ಯವಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ವಾಲ್ನಟ್ ಗಳಂತೆ ಇದರಲ್ಲಿಯೂ ಪ್ರಯೋಜನಕಾರಿ ಗುಣಗಳಿವೆ. ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ, ಇವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿರ್ದಿಷ್ಟ ಪ್ರಯೋಜನಗಳು ಸಿಗುತ್ತದೆ. ಹಾಗಾದರೆ ಇದರಿಂದ ನಮ್ಮ ಆರೋಗ್ಯಕ್ಕಿರುವ ಪ್ರಯೋಜನಗಳೇನು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಬಾದಾಮಿ ಮತ್ತು ವಾಲ್ನಟ್ ನಂತಹ ಒಣ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಆರೋಗ್ಯಕರ ಒಣ ಹಣ್ಣುಗಳ ಪಟ್ಟಿಯಲ್ಲಿ ಅಂಜೂರವನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ. ಆದರೆ ಈ ಅಂಜೂರ (figs) ನಮ್ಮ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಮಾತ್ರವಲ್ಲ ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇವುಗಳಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಅಂಜೂರವನ್ನು ನೀವು ಯಾವುದೇ ರೀತಿಯಲ್ಲಿಯೂ ಸೇವನೆ ಮಾಡಬಹುದು. ಆದರೆ ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ, ಇವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿರ್ದಿಷ್ಟ ಪ್ರಯೋಜನಗಳು ಸಿಗುತ್ತದೆ. ಒಣದ್ರಾಕ್ಷಿಯಂತೆಯೇ, ಇದರ ಸೇವನೆ ಕೂಡ, ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಗಮನಿಸುವಂತೆ ಮಾಡುತ್ತದೆ. ಹಾಗಾದರೆ ಇದರಿಂದ ನಮ್ಮ ಆರೋಗ್ಯಕ್ಕಿರುವ ಪ್ರಯೋಜನಗಳೇನು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಅಂಜೂರವು ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿದ್ದು ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂಜೂರದ ಹಣ್ಣು ಕ್ಲೋರೊಜೆನಿಕ್ ಆಮ್ಲವನ್ನು ಸಹ ಹೊಂದಿರುತ್ತದೆ, ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಹೆಚ್ಚುವರಿಯಾಗಿ, ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಟೈಪ್ -2 ಮಧುಮೇಹ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ.

ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿ
ಅಂಜೂರವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಾತ್ರವಲ್ಲ ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಅಂಜೂರ ಸೇವನೆ ಮಾಡುವುದಕ್ಕೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಗಳು ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.

ತೂಕವನ್ನು ಕಡಿಮೆ ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ, ಅನೇಕರು ತೂಕ ಹೆಚ್ಚಾಗುವುದರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ಅವರ ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುವುದರಿಂದ ಹಿಡಿದು ಆಹಾರ ಕ್ರಮವನ್ನು ಅನುಸರಿಸುವ ವರೆಗೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಇವುಗಳ ಬದಲು ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು.

ಮೂಳೆಗಳನ್ನು ಬಲಪಡಿಸುತ್ತದೆ
ಅಂಜೂರವು ಕ್ಯಾಲ್ಸಿಯಂ ಅಂಶಗಳಿಂದ ಸಮೃದ್ಧವಾಗಿದ್ದು, ಅಂಜೂರದ ಹಣ್ಣುಗಳ ಸೇವನೆಯು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಹಾಲು ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಂಜೂರವು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಅಂಜೂರ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ.

The post ನೆನೆಸಿಟ್ಟ ಅಂಜೂರದ ಉಪಯೋಗ ಏನು ಗೊತ್ತ ? appeared first on Good News 24x7.

]]>
ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? https://www.goodnews24x7.com/crores-of-crores-of-losses-after-virats-retirement/ Fri, 29 Aug 2025 10:57:53 +0000 https://www.goodnews24x7.com/?p=6968 ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..? ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ…

The post ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? appeared first on Good News 24x7.

]]>

ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?
ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ ಬಾಸ್​​ಗಳು, ಕೆಲ ಬಿಗ್ಗೆಸ್ಟ್​​ ಬ್ರ್ಯಾಂಡ್​​ಗಳು ಇದೀಗ ಯುವರಾಜನ ಹಿಂದೆ ಬಿದ್ದಿದೆ. ಕಿಂಗ್​ ಕೊಹ್ಲಿ ಪಟ್ಟ ತ್ಯಜಿಸೋಕೆ ಕೌಂಟ್​​ಡೌನ್​ ಶುರುವಾಗಿರೋ ಸಮಯದಲ್ಲಿ ಪ್ರಿನ್ಸ್​​ ಶುಭ್​ಮನ್​ಗೆ ಪಟ್ಟಾಭಿಷೇಕ ನಡೀತಿದೆ.

ಕ್ರಿಕೆಟ್​​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ ನಿಧಾನವಾಗಿ ಕ್ರಿಕೆಟ್​ನಿಂದ ದೂರಾಗ್ತಿದ್ದಾರೆ. ಟೆಸ್ಟ್​​, ಟಿ20ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಇದೀಗ ಒನ್​ ಡೇ ಫಾರ್ಮೆಟ್​ಗೂ ನಿವೃತ್ತಿ ಘೋಷಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಕೊಹ್ಲಿಯ ವಿದಾಯದ ಸುದ್ದಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ ತರಿಸಿದೆ. ನೆಚ್ಚಿನ ಸೂಪರ್​​ ಸ್ಟಾರ್​​ ಇನ್ಮೇಲೆ ಐಪಿಎಲ್​ಗೆ ಮಾತ್ರ ಸೀಮಿತವಾಗಿ ಬಿಡುತ್ತಾ? ಮುಂದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಆಡಲ್ವಾ? ಎಂಬ ಬೇಸರದ ಪ್ರಶ್ನೆಗಳು ಫ್ಯಾನ್ಸ್​ ಮನದಲ್ಲಿವೆ.

ಬಿಸಿಸಿಐಗೆ ಕೊಹ್ಲಿ ನಿವೃತ್ತಿಯದ್ದೇ ದೊಡ್ಡ ಟೆನ್ಶನ್​
ಒಂದೆಡೆ ಬಿಸಿಸಿಐ ಬಾಸ್​ಗಳು ವಿರಾಟ್​ ಕೊಹ್ಲಿಯನ್ನ ಸೈಡ್​​ಲೈನ್​ ಮಾಡೋ ಸಿದ್ಧತೆ ಮಾಡ್ತಿದ್ದಾರೆ. ಇನ್ನೊಂದೆಡೆ ಇದೇ ಬಿಸಿಸಿಐ ಬಾಸ್​​ಗಳಿಗೆ ಕೊಹ್ಲಿ ಹೋದ್ರೆ ಮುಂದೆ ಏನಪ್ಪಾ​ ಗತಿ ಎಂಬ ಚಿಂತೆಯೂ ಕಾಡ್ತಿದೆ. ಬಿಸಿಸಿಐ ವಲಯದಲ್ಲಿ ಮಾತ್ರವಲ್ಲ. ಜಾಹೀರಾತು ಲೋಕಕ್ಕೂ ಕ್ರಿಕೆಟ್​ನಿಂದ ಕಿಂಗ್​ ದೂರ ಸರೀತಾರೆ ಎಂಬ ಸುದ್ದಿಯನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕಿಂಗ್​ ಕೊಹ್ಲಿ ಕ್ರಿಕೆಟ್​ ಲೋಕವನ್ನ ಮಾತ್ರ ಆಡಿರಲಿಲ್ಲ. ಜಾಹೀರಾತು ಲೋಕಕ್ಕೂ ವಿರಾಟ್​ ಸುಲ್ತಾನನಾಗಿದ್ರು.

ಪ್ರಿನ್ಸ್​​ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್​​
ವಿರಾಟ್​​ ಕೊಹ್ಲಿ ದೂರ ಸರೀತಿದಾರೆ ಎಂದ ಬೆನ್ನಲ್ಲೇ ಜಾಹೀರಾತು ಲೋಕ ಹಾಗೂ ಬಿಸಿಸಿಐ ನೆಕ್ಸ್ಟ್​ ಸೂಪರ್​ ಸ್ಟಾರ್​​ನ ಹುಟ್ಟುಹಾಕೋ ಪ್ರಯತ್ನ ಆರಂಭಿಸಿದೆ. ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ಗೆ ಪಟ್ಟಾಭಿಷೇಕ ಮಾಡೋ ಯತ್ನಗಳು ನಡೀತಿವೆ. ಟೆಸ್ಟ್​ ನಾಯಕತ್ವ ನೀಡಿರೋ ಬಿಸಿಸಿಐ ಬಾಸ್​ಗಳು, ಏಕದಿನ, ಟಿ20ಯ ಕ್ಯಾಪ್ಟನ್ಸಿಯನ್ನೂ ನೀಡಿ ಗಿಲ್​ನ ಪವರ್​ಫುಲ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಅತ್ತ ಜಾಹೀರಾತು ಲೋಕ ಕೂಡ ಅಷ್ಟೇ ಗಿಲ್​ ಹಿಂದೆ ಬಿದ್ದಿದೆ.

ಬೆಂಝ್​​​ ಶೂಟ್​ನಲ್ಲಿ ಮಿರಮಿರ ಮಿಂಚಿದ ಗಿಲ್​
ಇಂಗ್ಲೆಂಡ್​ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ಸಾಗಿರೋ ಗಿಲ್, 2 ದಿನದ ಹಿಂದೆ ದೆಹಲಿಯಲ್ಲಿ ಮರ್ಸಿಡೀಸ್​​ ಬೆಂಝ್​​​​ನ ಇವೆಂಟ್​ನಲ್ಲಿ ಭಾಗಿಯಾಗಿದ್ರು. ಬೆಂಝ್​​​ ಪ್ರಮೋಶನ್ ಇವೆಂಟ್​​ನಲ್ಲಿ​ ಅಕ್ಷರಶಃ ಮಿರಮಿರ ಮಿಂಚಿದ್ರು.

ಮೊನ್ನೆಯ ಇವೆಂಟ್​ ನೋಡಿದವರಿಗೆಲ್ಲಾ ನೆನಪಾಗಿದ್ದು ಕೊಹ್ಲಿ. ಈ ಹಿಂದೆ ವಿರಾಟ್​ ಕೊಹ್ಲಿ ಬೆಂಜ್​​ನ ಅಂಬಾಸಿಡರ್ ಆಗಿದ್ರು. ಕೊಹ್ಲಿ ಕ್ರಿಕೆಟ್​​ನಿಂದ ದೂರಾಗ್ತಿದ್ದಾರೆ ಎಂದ ಬೆನ್ನಲ್ಲೇ ಬೆಂಜ್​ ಗಿಲ್​ ಹಿಂದೆ ಬಿದ್ದಿದೆ.

ಕೊಹ್ಲಿ ಬಳಿಕ ಗಿಲ್​ಗೆ ಗಾಳ ಹಾಕಿದ MRF
MRF ಸ್ಟಿಕರ್​ ಅಂಟಿಸಿದ ಬ್ಯಾಟ್​ ಹಿಡಿದವರೆಲ್ಲಾ ಕ್ರಿಕೆಟ್​ ಲೋಕವನ್ನ ಆಳಿದವರೆ ಸಚಿನ್​ ತೆಂಡುಲ್ಕರ್​, ಎಬಿ ಡಿವಿಲಿಯರ್ಸ್​​, ಬ್ರಯನ್​ ಲಾರಾ, ಸ್ಟೀವ್​ ವಾ. ಈಗ ವಿರಾಟ್​ ಕೊಹ್ಲಿ ಎಲ್ರೂ ದಿಗ್ಗಜರೇ. ಇದೀಗ ಕೊಹ್ಲಿ ಬಳಿಕ ಶುಭ್​ಮನ್​ ಗಿಲ್​ಗೆ ಎಮ್​ಆರ್​​ಎಫ್​ ಗಾಳ ಹಾಕಿದೆ.

ಒಂದರ್ಥದಲ್ಲಿ ಕೊಹ್ಲಿ ಬಳಿಕ ಗಿಲ್​ನ ನೆಕ್ಸ್ಟ್​ ಸೂಪರ್​ ಸ್ಟಾರ್​ ಮಾಡೋ ಯತ್ನಕ್ಕೆ ಮೊದಲು ಕೈ ಹಾಕಿದ್ದೇ MRF. ಆಗಿನ್ನೂ ಬಿಸಿಸಿಐ ವಲಯದಲ್ಲಿ ಗಿಲ್​​ಗೆ ಟೆಸ್ಟ್​ ನಾಯಕತ್ವ ಕಟ್ಟೋ ಚರ್ಚೆ ನಡೀತಿತ್ತು. ಆಗಲೇ ಗಿಲ್​ಗೆ ಗಾಳ ಹಾಕಿ ಎಮ್​​ಆರ್​ಎಫ್​ ಅಗ್ರಿಮೆಂಟ್​ ಮಾಡಿಕೊಳ್ತು. ಅದೇನು ಅದೃಷ್ಟವೋ ಏನೋ ಗೊತ್ತಿಲ್ಲ. MRF ಬ್ಯಾಟ್​​ ಕೈ ಬಂದ ಮೊದಲ ಸರಣಿಯಲ್ಲಿ ಗಿಲ್​ ಮೋಡಿ ಮಾಡಿದ್ರು.

ಆನ್​​ ಫೀಲ್ಡ್​ನಲ್ಲಿ ಕೊಹ್ಲಿ ಅಬ್ಬರಿಸ್ತಿದ್ದ ಕೊಹ್ಲಿ ಫ್ಯಾನ್ಸ್​ಗೆ ಜಬರ್ದಸ್ತ್​​​ ಎಂಟರ್​​ಟೈನ್​ಮೆಂಟ್​ ನೀಡುತ್ತಿದ್ದರು. ತಮ್ಮ ಅಮೋಘ ಆಟದಿಂದ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನಿಸಿದ್ರು. ಬಿಸಿಸಿಐ ಪಾಲಿಗೆ ಅಷ್ಟೇ ಆದಾಯದ ಮೂಲವಾಗಿದ್ರು. ಜಾಹೀರಾತುದಾರರಿಗಂತೂ ನೆಚ್ಚಿನ ಡಾರ್ಲಿಂಗ್​ ಆಗಿದ್ರು. ಇದೀಗ ಕೊಹ್ಲಿ ಕ್ರಿಕೆಟ್​ನಿಂದ ದೂರಾಗ್ತಿರೋದು ಬಿಸಿಸಿಐ ಗಳಿಕೆಗೆ, ಕೆಲ ಬ್ರ್ಯಾಂಡ್​​ಗಳ ಆದಾಯಕ್ಕೆ ಹೊಡೆತ ಕೊಟ್ಟಿದೆ. ಹೀಗಾಗಿ ಇವರೆಲ್ಲರ ಕಣ್ಣು ಗಿಲ್​ ಮೇಲೆ ಬಿದ್ದಿದೆ. ಈ ಹಿಂದೆ ಸಚಿನ್​ ಸ್ಥಾನವನ್ನ ಕೊಹ್ಲಿ ತುಂಬಿದಂತೆ, ಕೊಹ್ಲಿ ಸ್ಥಾನವನ್ನ ಗಿಲ್​ ತುಂಬ್ತಾರಾ? ಕಾದು ನೋಡೋಣ.

The post ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? appeared first on Good News 24x7.

]]>
ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…! https://www.goodnews24x7.com/bbmp-threatens-silicon-city-residents/ Fri, 29 Aug 2025 09:44:15 +0000 https://www.goodnews24x7.com/?p=6962   ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ. ಜನಪರ ಅಂತ ಬಿಬಿಎಂಪಿ…

The post ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…! appeared first on Good News 24x7.

]]>

 

ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ.

ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ:ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್

ಬಿಬಿಎಂಪಿ ಸ್ಟಾರ್ಮ್ ವಾಟರ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಯಡವಟ್ಟಿಗೆ ಶಿವಾಜಿನಗರದ ಭಾರತಿ ನಗರ ವಾರ್ಡ್​ನ ಆರ್ಮ್ ಸ್ಟ್ರಾಂಗ್ ರಸ್ತೆ ಜನ ನರಕಯಾತನೆ ಅನುಭವಿಸ್ತಿದ್ದಾರೆ. ಮೋರಿ ನೀರು ಸರಾಗವಾಗಿ ಹರಿದು ಹೋಗಬೇಕು ಅಂತ ಬಿಬಿಎಂಪಿ ಮೋರಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುದಾಗಿತ್ತು. ಆದ್ರೆ, 1 ತಿಂಗಳ ಹಿಂದೆ ಆರಂಭವಾಗಿರುವ ಕಾಮಗಾರಿಯಲ್ಲಿ, ಈವರೆಗೂ ಮೋರಿ ಸ್ಲ್ಯಾಬ್ ತೆಗೆದಿದೆಯಾದ್ರೂ ಅದನ್ನು ಮತ್ತೆ ಮುಚ್ಚುವ ಕೆಲಸ ಮಾತ್ರ ಮಾಡಿಲ್ಲ. ಸುಮಾರು 100 ಮನೆ ಹಾಗೂ ಆಸ್ಪತ್ರೆಯ ಮುಂಭಾಗ ಮೋರಿಯ ಸ್ಲ್ಯಾಬ್ ಓಪನ್ ಆಗಿದ್ದು, ನಿವಾಸಿಗಳಲ್ಲಿ ಡೆಂಘೀ ಭೀತಿ ಎದುರಾಗಿದೆ. ಈಗಾಗಲೇ 10 ಪ್ರಕರಣಗಳು ದಾಖಲಾಗಿವೆ.

 

ಭಾರತಿ ನಗರ ವಾರ್ಡ್​ ನಿವಾಸಿಗಳ ಈ ಆರೋಪಕ್ಕೆ ಹಾರಿಕೆಯ ಉತ್ತರ ಕೊಟ್ಟ ಬಿಬಿಎಂಪಿ, ಸ್ಲ್ಯಾಬ್ ಮುಚ್ಚುತ್ತೇವೆ ಎಂದಿದೆ. ಒಟ್ನಲ್ಲಿ, ನಿನ್ನೆಯಷ್ಟೇ ನಿಮ್ಮ ಗುಂಡಿಗೆ ನೀವೇ ಜವಾಬ್ದಾರರು ಎಂದಿದ್ದ ಬಿಬಿಎಂಪಿ, ಈಗ ಮೋರಿಯ ಸ್ಲ್ಯಾಬ್ ಮುಚ್ಚದೆ ತಾನು ಮಾಡಿದ ಯಡವಟ್ಟಿಗೆ ಸಮರ್ಥನೆ ಕೊಡೋ ಪ್ರಯತ್ನ ಮಾಡ್ತಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು ಆದಷ್ಟು ಬೇಗ ತೆರೆದ ಸ್ಲ್ಯಾಬ್ ಮುಚ್ಚಿ ಜನರ ಆರೋಗ್ಯ ಕಾಪಾಡಬೇಕಿದೆ

The post ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…! appeared first on Good News 24x7.

]]>
ನಮ್ಮ ದೇಹಕ್ಕೆ ಬ್ಲಾಕ್ ಟೀ ಎಷ್ಟರಮಟ್ಟಿಗೆ ಒಳ್ಳೇದು….? https://www.goodnews24x7.com/how-good-is-black-tea-for-our-body/ Thu, 28 Aug 2025 06:14:51 +0000 https://www.goodnews24x7.com/?p=6880 ಬ್ಲ್ಯಾಕ್​ ಟೀ ಹಲವಾರು ಆರೋಗ್ಯ ಪ್ರಯೋಜನಾಗಳನ್ನು ಹೊಂದಿದೆ. ಇದು ಸಮೃದ್ಧ ಉತ್ಕರ್ಷಣ ನಿರೋಧಕ (Rich Antioxidant) ಅಂಶ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಿಂದ ಕೂಡಿದೆ. ಬ್ಲ್ಯಾಕ್​ ಟೀ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ…

The post ನಮ್ಮ ದೇಹಕ್ಕೆ ಬ್ಲಾಕ್ ಟೀ ಎಷ್ಟರಮಟ್ಟಿಗೆ ಒಳ್ಳೇದು….? appeared first on Good News 24x7.

]]>

ಬ್ಲ್ಯಾಕ್​ ಟೀ ಹಲವಾರು ಆರೋಗ್ಯ ಪ್ರಯೋಜನಾಗಳನ್ನು ಹೊಂದಿದೆ. ಇದು ಸಮೃದ್ಧ ಉತ್ಕರ್ಷಣ ನಿರೋಧಕ (Rich Antioxidant) ಅಂಶ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಿಂದ ಕೂಡಿದೆ. ಬ್ಲ್ಯಾಕ್​ ಟೀ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

 

ಹೃದಯದ ಆರೋಗ್ಯ: ಬ್ಲ್ಯಾಕ್ ಟೀ ಕುಡಿಯುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇದು ಹೃದಯ ರೋಗಗಳ ಅಪಾಯವನ್ನು ಶೇ.50 ರಷ್ಟು ಕಡಿಮೆ ಮಾಡುತ್ತದೆ.

ಮಧುಮೇಹ ನಿಯಂತ್ರಣ: ಇನ್ಸುಲಿನ್ ಸಂವೇದನಾಶೀಲತೆಯನ್ನು ಈ ಬ್ಲ್ಯಾಕ್ ಟೀ ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿನ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಬ್ಯಾಲೆನ್ಸ್ ಮಾಡುತ್ತದೆ.

ಮೆದುಳಿನ ಕಾರ್ಯಕ್ಕೆ ಒಳ್ಳೆಯದು: ಕೆಫಿನ್ ಮತ್ತು ಎಲ್​-ಥೈನಿನ್ (L-theanine) ಈ ಎರಡು ನಮ್ಮಲ್ಲಿನ ಅರಿವು ಹಾಗೂ ಜಾಗರೂಕತೆಯನ್ನು ಹೆಚ್ಚು ಮಾಡುತ್ತವೆ. ​

ಜೀರ್ಣಕ್ರಿಯೆಗೆ ಉತ್ತಮ: ಬ್ಲ್ಯಾಕ್ ಟೀ ಅಲ್ಲಿ ಟ್ಯಾನಿನ್ಸ್ (Tannins) ಎಂಬ ರಾಸಾಯನಿಕವಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ: ಬ್ಲ್ಯಾಕ್ ಚಹಾದಲ್ಲಿನ ಉತ್ಕರ್ಷಣ ನಿರೋಧಕಗಳು  ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ದೇಹವನ್ನು ಇತರೆ ಸೋಂಕುಗಳಿಂದ ಕಾಪಾಡುತ್ತವೆ.

 

 

The post ನಮ್ಮ ದೇಹಕ್ಕೆ ಬ್ಲಾಕ್ ಟೀ ಎಷ್ಟರಮಟ್ಟಿಗೆ ಒಳ್ಳೇದು….? appeared first on Good News 24x7.

]]>
ಆಹಾರ ಪ್ಯಾಕೆಟ್ ಗಳ ಮೇಲೆ ಇರುವ ಬಣ್ಣದ ಚುಕ್ಕೆಗಳ ಹಿಂದಿನ ರಹಸ್ಯ ಏನು ಗೊತ್ತಾ.! https://www.goodnews24x7.com/do-you-know-the-secret-behind-the-colored-dots-on-food-packets/ Wed, 06 Aug 2025 11:53:47 +0000 https://www.goodnews24x7.com/?p=5472 ಚಿಪ್ಸ್, ಕುರುಕರೇ, ಬನ್ ಹೀಗೆ ಅಂಗಡಿಯಿಂದ ಯಾವುದಾದರೂ ತಿನಿಸನ್ನು ನಾವು ಖರೀದಿ ಮಾಡಿದಾಗ ಅವುಗಳ ಮೇಲೆ ಕಾಮಾನ್ ಆಗಿ ಕೆಂಪು ಹಾಗೂ ಹಸಿರು ಬಣ್ಣದ ಡಾಟ್ ಅಥವಾ ಚಿಹ್ನೆಗಳು ಇದ್ದೇ ಇರುತ್ತವೆ. ಇದರ ಬಗ್ಗೆ ಹಲವು ಜನರಿಗೆ ತಿಳಿದಿರಬಹುದು. ಈ ಎರಡು…

The post ಆಹಾರ ಪ್ಯಾಕೆಟ್ ಗಳ ಮೇಲೆ ಇರುವ ಬಣ್ಣದ ಚುಕ್ಕೆಗಳ ಹಿಂದಿನ ರಹಸ್ಯ ಏನು ಗೊತ್ತಾ.! appeared first on Good News 24x7.

]]>

ಚಿಪ್ಸ್, ಕುರುಕರೇ, ಬನ್ ಹೀಗೆ ಅಂಗಡಿಯಿಂದ ಯಾವುದಾದರೂ ತಿನಿಸನ್ನು ನಾವು ಖರೀದಿ ಮಾಡಿದಾಗ ಅವುಗಳ ಮೇಲೆ ಕಾಮಾನ್ ಆಗಿ ಕೆಂಪು ಹಾಗೂ ಹಸಿರು ಬಣ್ಣದ ಡಾಟ್ ಅಥವಾ ಚಿಹ್ನೆಗಳು ಇದ್ದೇ ಇರುತ್ತವೆ. ಇದರ ಬಗ್ಗೆ ಹಲವು ಜನರಿಗೆ ತಿಳಿದಿರಬಹುದು. ಈ ಎರಡು ಬಣ್ಣ ಅಲ್ಲದೇ ಇನ್ನು ಕೆಲವು ತಿನಿಸುಗಳ ಪ್ಯಾಕೆಟ್ ಮೇಲೆ ನೀಲಿ, ಹಳದಿ, ಕಪ್ಪು ಡಾಟ್ಗಳು ಇರುತ್ತವೆ ಇವುಗಳ ಅರ್ಥ ಏನು?.

ಆರೋಗ್ಯ ಹಾಗೂ ಆಹಾರ ಪದ್ಧತಿಗೆ ಅನುಗುಣವಾಗಿ ಈ ಬಣ್ಣದ ಚಿಹ್ನೆಗಳು ಸಲಹೆ, ಸೂಚನೆಗಳನ್ನು ನೀಡುತ್ತವೆ. ಅಂದರೆ ಆರೋಗ್ಯದ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ಎಂದು. ಇದರಿಂದ ನೀವು ಸರಿಯಾದ ಆಹಾರ ತಿನಿಸನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ ಸಸ್ಯಾಹಾರಿ ಹಾಗೂ ಮಾಂಸಹಾರಿ ಸೇವಿಸುವವರು ಇದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಂಪು, ಹಸಿರು ಡಾಟ್ಸ್ ಸೂಚಿಸುತ್ತವೆ. ಉಳಿದ ಡಾಟ್ಸ್ ಅಥವಾ ಚಿಹ್ನೆಗಳು ಏನೇನು ಸೂಚಿಸುತ್ತವೆ?.

ಕೆಂಪು ಡಾಟ್: ತಿನಿಸಿನ ಪ್ಯಾಕೆಟ್ ಮೇಲೆ ಕೆಂಪು ಬಣ್ಣದ ವೃತ್ತಾಕಾರದ ಚಿಹ್ನೆ ಇದ್ದರೆ ಅದು ಮಾಂಸಾಹಾರಿ ಎಂದು ಅರ್ಥ. ಇದರಲ್ಲಿ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸಹಾರಿ ವಸ್ತುವನ್ನು ಉಪಯೋಗ ಮಾಡಿರುತ್ತಾರೆ.

ಹಸಿರು ಚಿಹ್ನೆ:ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚಿಹ್ನೆ ಇದ್ದರೇ ಅದು ಸಂಪೂರ್ಣವಾಗಿ ಸಸ್ಯಾಹಾರಿ ಎಂದರ್ಥ. ಇದರಲ್ಲಿ ಯಾವುದೇ ಮಾಂಸ ಅಥವಾ ಮೊಟ್ಟೆಗಳನ್ನು ಬಳಕೆ ಮಾಡಿರಲ್ಲ.

ನೀಲಿ ಚಿಹ್ನೆ: ಪಾಕೆಟ್ ಮೇಲೆ ನೀಲಿ ಬಣ್ಣದ ಚಿಹ್ನೆ ಕಂಡುಬಂದರೆ ಅದನ್ನು ನಾವು ವೈದ್ಯಕೀಯ ಪ್ರಾಡಕ್ಟ್ ಎಂದು ತಿಳಿದುಕೊಳ್ಳಬೇಕು. ಇಂಥವುಗಳನ್ನು ಯಾರಾದರೂ ತೆಗೆದುಕೊಳ್ಳಬೇಕು ಎಂದರೆ ಮೊದಲು ವೈದ್ಯರಿಂದ ಸಲಹೆ, ಸೂಚನೆ ತೆಗೆದುಕೊಂಡಿರಬೇಕು.

https://www.goodnews24x7.com/dharmasthala-burude-mystery-will-6-locals-come-forward-on-behalf-of-the-witness/ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?

ಹಳದಿ ಡಾಟ್: ಈ ಆಹಾರದಲ್ಲಿ ಮೊಟ್ಟೆ ಉಪಯೋಗ ಮಾಡಲಾಗಿದೆ ಎಂದು ತಿಳಿಸುತ್ತದೆ. ಕೆಲವು ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಅಂಥವರು ಪಾಕೆಟ್ ಮೇಲೆ ಹಳದಿ ಬಣ್ಣದ ಚಿಹ್ನೆ ಇದ್ದರೇ ಅದನ್ನು ಖರೀದಿ ಮಾಡದೇ ಇರಬಹುದು. ಏಕೆಂದರೆ ಮೊಟ್ಟೆ ಬಳಸಿ ತಿನಿಸು ಮಾಡಲಾಗಿದೆ ಎಂದುಬು ಇದು ಹೇಳುತ್ತದೆ.

ಕಪ್ಪು ಚಿಹ್ನೆ: ಈ ಪ್ಯಾಕೆಟ್ನಲ್ಲಿ ಕೆಮಿಕಲ್ಸ್ (Chemicals) ಬಳಕೆ ಮಾಡಲಾಗಿದೆ ಎಂದು ಹೇಳುತ್ತದೆ. ಪ್ರಾಡಕ್ಟ್ನಲ್ಲಿ ರಾಸಾಯನಿಕ ಪ್ರಮಾಣವನ್ನು ಅಧಿಕವಾಗಿ ಬಳಕೆ ಮಾಡಲಾಗಿರುತ್ತದೆ. ಏಕೆಂದರೆ ದೀರ್ಘಕಾಲ ಉಳಿಯುವಿಕೆಗಾಗಿ ಆಹಾರವನ್ನ ಸಂಸ್ಕರಣೆ ಮಾಡಲಾಗಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲಿನ ಈ ಬಣ್ಣದ ಚಿಹ್ನೆಗಳು ನಾವು ಏನು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುತ್ತವೆ. ಮುಂದಿನ ಬಾರಿ ನೀವು ಯಾವುದೇ ಪ್ಯಾಕೆಟ್ ಆಹಾರವನ್ನು ಖರೀದಿಸುವಾಗ, ಈ ಚಿಹ್ನೆಗಳನ್ನು ಗಮನಿಸುವುದನ್ನು ಮರೆಯದಿರಿ.

The post ಆಹಾರ ಪ್ಯಾಕೆಟ್ ಗಳ ಮೇಲೆ ಇರುವ ಬಣ್ಣದ ಚುಕ್ಕೆಗಳ ಹಿಂದಿನ ರಹಸ್ಯ ಏನು ಗೊತ್ತಾ.! appeared first on Good News 24x7.

]]>
ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! https://www.goodnews24x7.com/child-marriage-has-become-a-problem-now-the-health-and-family-development-department-has-another-problem-pregnant-children/ Sun, 15 Jun 2025 10:34:24 +0000 https://www.goodnews24x7.com/?p=4434 ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ. ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ…

The post ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! appeared first on Good News 24x7.

]]>

ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ.

ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ ತಡೆ ಬಗ್ಗೆ ಸತತವಾಗಿ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಆದರೂ ಬಾಲ್ಯವಿವಾಹಗಳ ಸಂಖ್ಯೆಯಂತೂ ಕಡಿ ‘ ಗರ್ಭಿಣಿ’ ಪ್ರಕರಣಗಳೇ ಸಾಕ್ಷಿ.
ಮೈಸೂರು ಜಿಲ್ಲೆಯಲ್ಲಿ 1603 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

 

 

 

 

 

 

 

 

 

ಮೈಸೂರು ಜಿಲ್ಲೆಯಲ್ಲಿ 14ರಿಂದ 15 ವರ್ಷಕ್ಕೊಳಪಟ್ಟ ಐವರು. 15ರಿಂದ 16 ವರ್ಷಕ್ಕೊಳಪಟ್ಟ 15, 16ರಿಂದ 17 ವರ್ಷಕ್ಕೊಳಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 124 ಮತ್ತು 18 ರಿಂದ 19 ವರ್ಷಕ್ಕೊಳಪಟ್ಟ 1436 ಸೇರಿ ದಂತೆ ಒಟ್ಟು 1603 ಬಾಲಗರ್ಭಿಣಿ ಯರು ಇರುವುದು ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಂಕಿ-ಅಂಶ ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ 14ರಿಂದ 15, ವರ್ಷಕ್ಕೊಳಪಟ್ಟ ಇಬ್ಬರು, 15ರಿಂದ 16 ವರ್ಷಕ್ಕೊಳಪಟ್ಟ 7, 16ರಿಂದ 17 ವರ್ಷ ಕ್ಕೊಳಪಟ್ಟ 18, 17ರಿಂದ 18 ವರ್ಷಕ್ಕೊಳ ಪಟ್ಟ 136, 18ರಿಂದ 19 ವರ್ಷಕ್ಕೊಳಪಟ್ಟ 924 ಸೇರಿದಂತೆ 1087 ಬಾಲಗರ್ಭಿಣಿ ಯರಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 15ರಿಂದ 16 ವರ್ಷಕ್ಕೊಳಪಟ್ಟ ನಾಲ್ವರು, 16ರಿಂದ 17 ವರ್ಷಕ್ಕೊಳ ಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 107, 18ರಿಂದ 19 ವರ್ಷಕ್ಕೊಳಪಟ್ಟ 814 ಸೇರಿದಂತೆ 948 ಬಾಲಗರ್ಭಿಣಿಯರಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 14ರಿಂದ 15 ವರ್ಷ ಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷ ಕ್ಕೊಳಪಟ್ಟ 11, 16ರಿಂದ 17 ವರ್ಷಕ್ಕೊಳ ಪಟ್ಟ 10, 17ರಿಂದ 18 ವರ್ಷಕ್ಕೊಳಪಟ್ಟ 79, 18ರಿಂದ 19 ವರ್ಷಕ್ಕೊಳಪಟ್ಟ 318 ಸೇರಿದಂತೆ 424 ಬಾಲಗರ್ಭಿಣಿಯರಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 14 ರಿಂದ 15 ವರ್ಷಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷಕ್ಕೊಳಪಟ್ಟ ಓರ್ವ, 16ರಿಂದ 17 ವರ್ಷಕ್ಕೊಳ ಪಟ್ಟ 9, 17ರಿಂದ 18 ವರ್ಷಕ್ಕೊಳಪಟ್ಟ 25, 18ರಿಂದ 19 ವರ್ಷಕ್ಕೊಳಪಟ್ಟ 380 ಸೇರಿದಂತೆ 416 ಬಾಲ ಗರ್ಭಿಣಿಯರಿದ್ದಾರೆ.

 

 

 

 

 

 

 

 

ಬಾಲಕಿಯರು ಗರ್ಭಿಣಿಯಾದಾಗ ಅನ್ಯಮಾರ್ಗವಿಲ್ಲದೆ ಆಸ್ಪತ್ರೆಗಳಿಗೆ ಬರುವು ದರಿಂದ ಆರೋಗ್ಯ ಇಲಾಖೆ ಗಮನಕ್ಕೆ ಈ ಪ್ರಕರಣಗಳು ಸಹಜವಾಗಿ ಬರುತ್ತಿವೆ. ಸದರಿ ಇಲಾಖೆಯು ಬಾಲಗರ್ಭಿಣಿ ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಮಾಹಿತಿಯನ್ನಷ್ಟೇ ಪೊಲೀಸ್ ಇಲಾಖೆಗೆ ರವಾನಿಸುತ್ತದೆ. ಆದರೆ ಅಪ್ರಾಪ್ತ ವಯಸ್ಸಿ ನಲ್ಲಿ ಗರ್ಭ ಧರಿಸುವ ಬಾಲಕಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಯು ಬಾಲಗರ್ಭಿಣಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರಿಗೆ ಹೆರಿಗೆಯಾಗುವವರೆಗೂ ಅಗತ್ಯವಿರುವ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಬಾಲಗರ್ಭಿಣಿಯರು ಬಂದರೆ, ಅವರನ್ನು ಮಕ್ಕಳ ಆಸ್ಪತ್ರೆಯಾದ ಚೆಲುವಾಂಬ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಜೊತೆಗೆ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಲಾಗುತ್ತದೆ.

 

 

 

 

 

 

 

 

 

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಬಾಲ ಗರ್ಭಿಣಿಯರಿಂದ ಮಾಹಿತಿ ಪಡೆಯುವು ದಲ್ಲದೇ ಮುಂದಿನ ಕ್ರಮ ವಹಿಸುತ್ತಾರೆ. ಹೆಚ್.ಡಿ.ಕೋಟೆ, ಹುಣಸೂರು ಮುಂತಾದ ತಾಲೂಕುಗಳಲ್ಲಿರುವ ಹಾಡಿಗಳಲ್ಲಿ ಹೆಚ್ಚಿನ ಬಾಲ್ಯವಿವಾಹಗಳು ನಡೆಯುತ್ತವೆ. ಅವರ ಸಂಪ್ರದಾಯದಂತೆ ಚಿಕ್ಕ ವಯಸ್ಸಿನಲ್ಲೇ ರಕ್ತ ಸಂಬಂಧದಲ್ಲೇ ಮದುವೆ ಮಾಡು ವುದು ವಾಡಿಕೆಯಾಗಿ ಬಂದಿದೆ. ಬಾಲ್ಯ ವಿವಾಹ ನಡೆಯುವುದು ಮುಂಚಿತವಾಗಿ ಗೊತ್ತಾದರೆ ಸಂಬಂಧಪಟ್ಟ ಇಲಾಖೆ ಅದನ್ನು ತಡೆಯುತ್ತದೆ. ಆದರೆ ಬಹುತೇಕ ಪ್ರಕರಣಗಳು ಗೊತ್ತಾಗುವುದೇ ಇಲ್ಲ. ಬಾಲಕಿಯರು ಗರ್ಭಿಣಿಯರಾಗಿ ಆಸ್ಪತ್ರೆಗೆ ಬಂದಾಗಲಷ್ಟೇ ಗೊತ್ತಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

 

 

 

 

 

 

 

 

ಆರೋಗ್ಯ ಇಲಾಖೆಯು ಬಾಲ ಗರ್ಭಿಣಿಯರಿಗೆ ಅತ್ಯಾವಶ್ಯಕ ಆರೋಗ್ಯ ಸೇವೆ ನೀಡುವುದರತ್ತ ವಿಶೇಷ ಗಮನ ಹರಿಸುತ್ತದೆ. ಕೆಲವು ಹಳ್ಳಿಗಳಲ್ಲಿ ಬಾಲ್ಯ ವಿವಾಹ ನಡೆಯುವುದು ಗೊತ್ತಾದರೂ ಯಾರೂ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದಿಲ್ಲ. ಬಾಲಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ಆರೋಗ್ಯ ಇಲಾಖೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸು ವುದೇ ಪ್ರಥಮ ಮಾಹಿತಿಯಾಗಿರುತ್ತದೆ ಎಂದು ತಿಳಿಸಿದ ಈ ಅಧಿಕಾರಿಯು, ಬಾಲ್ಯ ವಿವಾಹವಾಗಿ ಬಾಲಕಿ 20 ವರ್ಷ ಆಗು ವವರೆಗೂ ಗರ್ಭಿಣಿಯಾಗದಿದ್ದರೆ ಆರೋಗ್ಯ ಇಲಾಖೆ ಗಮನಕ್ಕೂ ಕೂಡ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಕೆಲವು ವಿದ್ಯಾವಂತ ಹಾಗೂ ಶ್ರೀಮಂತ ಮನೆತನ ಗಳಲ್ಲೇ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಯುವ ಸಲುವಾಗಿ ಆರೋಗ್ಯ ಇಲಾಖೆ ಮಾತ್ರವಲ್ಲದೇ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯೂ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸು ತ್ತಿದ್ದರೂ ಬಾಲ್ಯ ವಿವಾಹ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

The post ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! appeared first on Good News 24x7.

]]>
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಪರಿಸರ ಮತ್ತು ಆರೋಗ್ಯ’ ತತ್ವದಡಿ ಪರಿಸರ ದಿನ ಆಚರಣೆ. https://www.goodnews24x7.com/environment-day-celebrated-at-kuvempu-kannada-studies-institute-under-the-theme-of-environment-and-health/ Thu, 05 Jun 2025 12:01:17 +0000 https://www.goodnews24x7.com/?p=4236 ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು, ಮಾಲಿನ್ಯದ ವಿರುದ್ಧ ಹೋರಾಡುವುದು, ಭವಿಷ್ಯದ ಹಸಿರ ಪ್ರಕೃತಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ…

The post ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಪರಿಸರ ಮತ್ತು ಆರೋಗ್ಯ’ ತತ್ವದಡಿ ಪರಿಸರ ದಿನ ಆಚರಣೆ. appeared first on Good News 24x7.

]]>

ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು, ಮಾಲಿನ್ಯದ ವಿರುದ್ಧ ಹೋರಾಡುವುದು, ಭವಿಷ್ಯದ ಹಸಿರ ಪ್ರಕೃತಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ “ಪರಿಸರ ಮತ್ತು ಆರೋಗ್ಯ” ಎಂಬ ತತ್ವದಡಿಯಲ್ಲಿ ಪರಿಸರ ದಿನಾವನ್ನ ಆಚರಣೆ ಮಾಡಲಾಯಿತು.

 

 

 

 

 

 

 

 

ಇದೇ ಸಂದರ್ಭದಲ್ಲಿ ನಾಗದಾಳಿ, ಅಲೋವೆರಾ, ದೊಡ್ಡಪತ್ರೆ, ಒಂದೆಲಗ, ನಿಂಬೆ, ಶ್ರೀತುಳಸಿ, ಕೃಷ್ಣ ತುಳಸಿ, ಹಲಸು ಬಿಳಿದಾಸವಾಳ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು.

 

 

 

 

 

 

 

 

 

 

 

ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಉಳಿಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನವನ್ನು ನಮ್ಮ ಅಧ್ಯಯನ ಸಂಸ್ಥೆಯಲ್ಲಿ ಆಚರಿಸಲಾಗ್ತದೆ ಎಂದು ನಿರ್ದೇಶಕರಾದ ಡಾಕ್ಟರ್ ಎನ್ ಕೆ ಲೋಲಾಕ್ಷಿ ತಿಳಿಸಿದರು.ಈ ವೇಳೆ ಕಾಲೇಜಿನ ಅಧ್ಯಾಪಕ ವರ್ಗ, ಅಧ್ಯಾಪಕೇತರ ವರ್ಗ, ಕಚೇರಿ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.

The post ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಪರಿಸರ ಮತ್ತು ಆರೋಗ್ಯ’ ತತ್ವದಡಿ ಪರಿಸರ ದಿನ ಆಚರಣೆ. appeared first on Good News 24x7.

]]>
40 ಜನರಿಗೆ ರಾಜ್ಯದಲ್ಲಿ ಕೊರೊನಾ ಸೋಂಕು ದೃಢ. https://www.goodnews24x7.com/40-people-have-tested-positive-for-corona-in-the-state/ Thu, 29 May 2025 11:36:54 +0000 https://www.goodnews24x7.com/?p=4119 ಬೆಂಗಳೂರು : – ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದ್ದು, ಕಳೆದ 24 ಗಂಟೆಯಲ್ಲಿ 40 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ.…

The post 40 ಜನರಿಗೆ ರಾಜ್ಯದಲ್ಲಿ ಕೊರೊನಾ ಸೋಂಕು ದೃಢ. appeared first on Good News 24x7.

]]>

ಬೆಂಗಳೂರು : – ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದ್ದು, ಕಳೆದ 24 ಗಂಟೆಯಲ್ಲಿ 40 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 126 ಆಗಿದ್ದು, 14 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 

 

 

 

 

 

 

ಒಟ್ಟು ಪ್ರಕರಣಗಳ ಸಂಖ್ಯೆ 211ಕ್ಕೆ ಏರಿಕೆ ಜನವರಿ 1ರಿಂದ ಇಲ್ಲಿವರೆಗೂ ಒಟ್ಟಾರೇ 84 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 395 ಪರೀಕ್ಷೆ ಮಾಡಲಾಗಿದೆ. ಈ ಪೈಕಿ 344 RTPCR ಹಾಗೂ 51 RAT ಪರೀಕ್ಷೆ ಆಗಿದ್ದು, ಪಾಸಿಟಿವಿಟಿ ದರ ಶೇ. 10. 12 ರಷ್ಟಿದ್ದು, ಸಾವಿನ ದರ ಶೂನ್ಯವಾಗಿದೆ.

 

#Bengaluru #Corona #Covid19 #people #number #Department #Health #hospital #positive

The post 40 ಜನರಿಗೆ ರಾಜ್ಯದಲ್ಲಿ ಕೊರೊನಾ ಸೋಂಕು ದೃಢ. appeared first on Good News 24x7.

]]>