High Court Archives - Good News 24x7 https://www.goodnews24x7.com/tag/high-court/ Kannada Tue, 17 Mar 2026 12:41:04 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg High Court Archives - Good News 24x7 https://www.goodnews24x7.com/tag/high-court/ 32 32 ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್! https://www.goodnews24x7.com/bangalore-hotel-association-moves-high-court-for-gas-cylindersbangalore-hotel-association-moves-high-court-for-gas-cylinders/ Tue, 17 Mar 2026 12:41:04 +0000 https://www.goodnews24x7.com/?p=8922   ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಬೆಂಗಳೂರು ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದೆ. ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಕೆಲವು ಮೆನು ಕಡಿತಗೊಳಿಸಿವೆ. ಈ ಬಿಕ್ಕಟ್ಟಿಗೆ ಪರಿಹಾರ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ.…

The post ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್! appeared first on Good News 24x7.

]]>

 

ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಬೆಂಗಳೂರು ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದೆ. ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಕೆಲವು ಮೆನು ಕಡಿತಗೊಳಿಸಿವೆ. ಈ ಬಿಕ್ಕಟ್ಟಿಗೆ ಪರಿಹಾರ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ. 40 ಸಾವಿರ ಹೋಟೆಲ್‌ಗಳು ಮತ್ತು 6 ಲಕ್ಷ ಕಾರ್ಮಿಕರ ಭವಿಷ್ಯ ಅತಂತ್ರವಾಗಿದ್ದು, ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.
ರಾಜ್ಯದಲ್ಲಿ ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರೋದು ಹೋಟೆಲ್​​ ಉದ್ಯಮವನ್ನು ನಷ್ಟದ ಕೂಪಕ್ಕೆ ತಳ್ಳುತ್ತಿದೆ. ಈಗಾಗಲೇ ಹಲವು ಹೋಟೆಲ್​​ಗಳು ಬಂದ್​​ ಆಗಿದ್ದರೆ, ಇನ್ನೊಂದಿಷ್ಟು ಮೆನುವಿನಲ್ಲಿ ಭಾರೀ ಕಡಿತದ ಜೊತೆ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಅವುಗಳೂ ಕ್ಲೋಸ್​​ ಆಗುವ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ವಾಣಿಜ್ಯ ಬಳಕೆಯ ಸಿಲಿಂಡರ್​​ಗಳಿಗಾಗಿ ಹೈಕೋರ್ಟ್​​ ಕದ ತಟ್ಟಿದೆ.

ಹೈಕೋರ್ಟ್​ಗೆ ರಿಟ್ ಅರ್ಜಿ,ಹೋಟೆಲ್​ಗಳಿಗೆ ಗ್ಯಾಸ್ ಸಿಲಿಂಡರ್ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಲಾಗಿದ್ದು, ಹೋಟೆಲ್ ಮುಚ್ಚಿರುವುದರಿಂದ ಹಾಲು ಮತ್ತು ತರಕಾರಿ ಮಾರಾಟಗಾರರಿಗೂ ತೊಂದರೆ ಆಗಿದೆ. 40 ಸಾವಿರ ಹೋಟೆಲ್, 6 ಲಕ್ಷ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಅಸೋಸಿಯೇಷನ್ ಪರ ವಕೀಲ ಕೆ.ಸತೀಶ್ ಭಟ್ ಅರ್ಜಿ ಸಲ್ಲಿಸಿದ್ದಾರೆ.

ಹೋಟೆಲ್ ಉದ್ಯಮಕ್ಕೆ 1 ಸಾವಿರ ಸಿಲಿಂಡರ್​ಗಳನ್ನು ಪೂರೈಸುವುದಾಗಿ ಸಚಿವ ಮುನಿಯಪ್ಪ ಹೇಳಿದ್ದರೂ, ಸಚಿವರ ಭರವಸೆ ಬಗ್ಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. 40 ಸಾವಿರ ಹೋಟೆಲ್​​ಗಳಿಗೆ ಒಂದು ಸಾವಿರ ಸಿಲಿಂಡರ್ ಕೊಡುವ ಬದಲು, ಕೊಡದೆ ಇರುವುದೇ ಒಳ್ಳೆಯದು. ಹೋಟೆಲ್​​ಗಳ ಮಾಲಕರು ಮಾತ್ರವಲ್ಲದೆ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬದ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್​ಗಳಿದ್ದು, ಈ ಪೈಕಿ 4,500 ಹೋಟೆಲ್​​ಗಳು ರಿಜಿಸ್ಟರ್​​ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹಲವೆಡೆ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ನಷ್ಟದಲ್ಲಿಯೇ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ನೂರಾರು ಕೋಟಿ ರೂಪಾಯಿ ಹೋಟೆಲ್​​ ಉದ್ಯಮಕ್ಕೆ ನಷ್ಟ ಉಂಟಾಗಿದೆ ಎನ್ನಲಾಗಿದೆ.

 

The post ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್! appeared first on Good News 24x7.

]]>
ಆರ್‌ಸಿಬಿ, ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ !!..ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್…. https://www.goodnews24x7.com/%e0%b2%86%e0%b2%b0%e0%b3%8d%e0%b2%b8%e0%b2%bf%e0%b2%ac%e0%b2%bf-%e0%b2%95%e0%b3%86%e0%b2%8e%e0%b2%b8%e0%b3%8d%e0%b2%b8%e0%b2%bf%e0%b2%8e%e0%b2%97%e0%b3%86-%e0%b2%ae%e0%b2%a4/ Mon, 11 Aug 2025 09:43:33 +0000 https://www.goodnews24x7.com/?p=5811 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವಿಧಾನಸೌಧದ ಗ್ರಾಂಡ್ ಸ್ಪೆಪ್ಸ್ ಮೇಲೆ ನೆರವೇರಿತ್ತು. ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್‌ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ…

The post ಆರ್‌ಸಿಬಿ, ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ !!..ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್…. appeared first on Good News 24x7.

]]>

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವಿಧಾನಸೌಧದ ಗ್ರಾಂಡ್ ಸ್ಪೆಪ್ಸ್ ಮೇಲೆ ನೆರವೇರಿತ್ತು. ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್‌ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ ಪಕ್ಕದಲ್ಲಿ ಇದ್ದ ಕಬ್ಬನ್‌ ಪಾರ್ಕ್‌ನಲ್ಲಿನ ಮರಗಳ ಮೇಲೆ ಹತ್ತಿ ಆಟ ಗಾರರನ್ನು ನೋಡಲು ಮುಂದಾದರು. ಈ ವೇಳೆ ಅಭಿಮಾನಿಗಳ ಕಾಲ್ತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ.ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಕೋರ್ಟ್ ಮೆಟ್ಟಿಲು ಏರಿದೆ.

ಕಬ್ಬನ್‌ ಪಾರ್ಕ್‌ಲ್ಲಿದ್ದ ಸಸಿಗಳು, ಮರಗಳಿಗೆ ಮತ್ತು ಉದ್ಯಾನವನಕ್ಕೆ ಹಾನಿಯಾಗಿದೆ. ಹಾಗೇ ವಿಧಾನಸೌಧದ ಮುಂಭಾಗದ ಗಾರ್ಡನ್‌ನಲ್ಲೂ ಹಾನಿಯಾಗಿದೆ. ತೋಟ ಗಾರಿಕೆ ಇಲಾಖೆ ಕಬ್ಬನ್‌ ಪಾರ್ಕ್‌ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಲಾನ್ ಅಳವಡಿಸಿತ್ತು. ಈ ಲಾನ್‌ಗು ಕೂಡ ಕಾಲ್ತುಳಿತದಲ್ಲಿ ಹಾನಿಯಾಗಿದೆ. ಕಬ್ಬನ್ ಪಾರ್ಕ್‌ಗೆ ಹಾನಿಯಾದರೆ ನೀವೇ ಹೊಣೆಗಾರರು ಅಂತ ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ಮೊದಲೇ ಷರತ್ತು ಹಾಕಲಾಗಿತ್ತು.

ಇದೀಗ ಕಾಲ್ತುಳಿತದಲ್ಲಿ ಪಾರ್ಕ್‌ಗೆ ಹಾನಿಯಾಗಿದ್ದು, ಈ ನಷ್ಟವನ್ನು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಭರಿಸಿಕೊಡ ಬೇಕು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್‌ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದೆ.

 

The post ಆರ್‌ಸಿಬಿ, ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ !!..ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್…. appeared first on Good News 24x7.

]]>
ಬೆಳಗಾವಿಯ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ: ಆದೇಶ ಎತ್ತಿಹಿಡಿದ ಹೈಕೋರ್ಟ್. https://www.goodnews24x7.com/lathi-charge-case-on-panchamasali-activists-in-belgaum-high-court-upholds-order/ Fri, 11 Jul 2025 09:45:08 +0000 https://www.goodnews24x7.com/?p=5024 ಬೆಂಗಳೂರು: ಬೆಳಗಾವಿಯ ಸುವರ್ಣಸೌಧದ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಪೊಲೀಸರು…

The post ಬೆಳಗಾವಿಯ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ: ಆದೇಶ ಎತ್ತಿಹಿಡಿದ ಹೈಕೋರ್ಟ್. appeared first on Good News 24x7.

]]>

ಬೆಂಗಳೂರು: ಬೆಳಗಾವಿಯ ಸುವರ್ಣಸೌಧದ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.

ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಲು ತಿಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಮತ್ತು ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಏಕಸದಸ್ಯ ಪೀಠ ನೀಡಿರುವ ಆದೇಶವನ್ನು ಎತ್ತಿ ಹಿಡಿದು, ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಹೈಕೋರ್ಟ್ನ ಈ ಆದೇಶದಿಂದಾಗಿ ಲಾಠಿ ಚಾರ್ಜ್ ನಡೆಸಲು ಪೊಲೀಸರಿಗೆ ಸೂಚನೆ ನೀಡಿದ್ದು ಯಾರು?, ಅದರ ಹಿಂದಿರುವವರು ಯಾರು? ಎಂಬುದರ ಸಂಬಂಧ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕಾಗಿದೆ.  ಪ್ರಕರಣದ ಹಿನ್ನೆಲೆ: 2024ರ ಡಿಸೆಂಬರ್ 10ರಂದು ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮತ್ತು ಲಿಂಗಾಯತ ಉಪ ಪಂಗಡಗಳಿಗೆ ಒಬಿಸಿ ಮೀಸಲಾತಿ ಕೋರಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸ್ ಲಾಠಿ ಚಾರ್ಜ್ ನಡೆದಿದ್ದು, ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೋರಿ ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಈ ಹಿಂದೆ ಏಕಸದಸ್ಯ ಪೀಠದ ನಡೆದ ವಿಚಾರಣೆ ವೇಳೆ ಸ್ವಾಮೀಜಿ ಪರ ವಕೀಲರು, ”ನಿಷೇಧಾಜ್ಞೆ ವಿಧಿಸಿರುವಾಗಲೇ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಸಿಕ್ಕಿತ್ತು. ಸಚಿವರು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಾಕಾರರು ಹೊರಟಿದ್ದರು.

ಆ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಧಾರ್ಮಿಕ ಮುಖಂಡರು, ಶಾಸಕರು ಮತ್ತು ಮಾಜಿ ಶಾಸಕರು ಭಾಗವಹಿಸಿದ್ದರು. ಹೀಗಿರುವಾಗ ಅಲ್ಲಿ ಮದ್ಯ ಸೇವಿಸುತ್ತಿದ್ದರು, ಕಲ್ಲು ಎಸೆದಿದ್ದಾರೆ ಎಂದು ಸರ್ಕಾರ ಹೇಳಬಾರದು. ನಾವು ಎಲ್ಲಾ ವಿಡಿಯೋಗಳನ್ನು ಪರಿಶೀಲಿಸಿದ್ದು, ಎಲ್ಲವೂ ಲಾಠಿ ಚಾರ್ಜ್ ಆದ ಬಳಿಕದ ವಿಡಿಯೋಗಳಾಗಿವೆ” ಎಂದು ವಾದಿಸಿದ್ದರು.


”ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯ ಬಗ್ಗೆ ಸರ್ಕಾರದ ಆಕ್ಷೇಪಣೆಯಲ್ಲಿ ವಿವರಿಸಲಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದರಿಂದ ನಿಷ್ಪಕ್ಷಪಾತವಾದ ತನಿಖೆ ಅಗತ್ಯವಾಗಿದೆ. ಪ್ರತಿಭಟನೆ ಮೂಲಭೂತ ಹಕ್ಕಾಗಿದ್ದು, ಲಾಠಿ ಚಾರ್ಜ್ ಮೂಲಕ ಅದನ್ನು ಹತ್ತಿಕ್ಕಬಾರದಿತ್ತು” ಎಂದು ಪೀಠಕ್ಕೆ ವಿವರಿಸಿದ್ದರು.

ಸರ್ಕಾರ ಪರ ವಕೀಲರು, ”ಸುವರ್ಣ ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ನಿಗದಿತ ಸ್ಥಳ ತೊರೆಯದಂತೆ ಪ್ರತಿಭಟನಾಕಾರರಿಗೆ ಎಡಿಜಿಪಿ ಸೂಚಿಸುತ್ತಿರುವ ವಿಡಿಯೋ ಮತ್ತು ಚಿತ್ರಗಳಿವೆ. ಪ್ರತಿಭಟನಾಕಾರರು ಕಲ್ಲು ಮತ್ತು ಚಪ್ಪಲಿಗಳನ್ನು ಪೊಲೀಸರತ್ತ ಎಸೆದಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋಗಳಿವೆ. ಪ್ರತಿಭಟನೆಗೆ ನಿಗದಿಯಾಗಿದ್ದ ಸ್ಥಳಕ್ಕೆ ಮರಳುವಂತೆ ಪೊಲೀಸರು ಮನವಿ ಮಾಡಿದ್ದಾರೆ” ಎಂದು ತಿಳಿಸಿದ್ದರು.
”ಪೊಲೀಸರಿಂದ ಲಾಠಿ ಕಸಿದುಕೊಂಡು ಅದರಿಂದ ಪೊಲೀಸರಿಗೆ ಹಲ್ಲೆ ಮಾಡುವ ದೃಶ್ಯಗಳಿವೆ. ರಾಷ್ಟ್ರೀಯ ಹೆದ್ದಾರಿ ತಡೆದು, ಫೆನ್ಸ್ ದಾಟುತ್ತಿರುವ ವಿಡಿಯೋಗಳಿವೆ.


ಅಲ್ಲದೆ, ನ್ಯಾಯಾಲಯದ ಆದೇಶದ ಪ್ರಕಾರ ಶಾಂತಿಯುತವಾಗಿ ಪ್ರತಿಭಟಿಸಲು ಪ್ರತಿಭಟನಾಕಾರರಿಗೆ ಅನುಮತಿಸಲಾಗಿತ್ತು. ಇದನ್ನು ಮೀರಿ ಪ್ರತಿಭಟನೆಯಲ್ಲಿ ಕೆಲವು ಗಲಭೆಕೋರರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಇದರಿಂದ 23 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಜಖಂಗೊಂಡಿವೆ” ಎಂದು ವಾದ ಮಂಡಿಸಿದ್ದರು.  ವಾದ, ಪ್ರತಿವಾದ ಆಲಿಸಿದ್ದ ನ್ಯಾಯಪೀಠ, ರಾಜ್ಯ ಸರ್ಕಾರವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು. ಆಯೋಗವು ಕಾಲ ಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು

The post ಬೆಳಗಾವಿಯ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ: ಆದೇಶ ಎತ್ತಿಹಿಡಿದ ಹೈಕೋರ್ಟ್. appeared first on Good News 24x7.

]]>
ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗುವಂತಿಲ್ಲ….!!!! https://www.goodnews24x7.com/%e0%b2%aa%e0%b3%8d%e0%b2%b0%e0%b2%9c%e0%b3%8d%e0%b2%b5%e0%b2%b2%e0%b3%8d-%e0%b2%b0%e0%b3%87%e0%b2%b5%e0%b2%a3%e0%b3%8d%e0%b2%a3-%e0%b2%9c%e0%b2%be%e0%b2%ae%e0%b3%80%e0%b2%a8%e0%b3%81-%e0%b2%95/ Sat, 28 Jun 2025 12:09:29 +0000 https://www.goodnews24x7.com/?p=4766 ಮನೆಗೆಲಸದಾಕೆ ಮೇಲಿನ ಅ*ಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದೆ ನೇರವಾಗಿ ಹೈಕೋರ್ಟ್ ಮೊರೆ ಹೋಗುವಂತಿಲ್ಲ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿದೆ. ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ…

The post ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗುವಂತಿಲ್ಲ….!!!! appeared first on Good News 24x7.

]]>

ಮನೆಗೆಲಸದಾಕೆ ಮೇಲಿನ ಅ*ಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದೆ ನೇರವಾಗಿ ಹೈಕೋರ್ಟ್ ಮೊರೆ ಹೋಗುವಂತಿಲ್ಲ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿದೆ. ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ವಿಚಾರಣೆ ಯನ್ನು ಜು.2ಕ್ಕೆ ಮುಂದೂಡಿತು. ಪ್ರಾಸಿಕ್ಯೂಷನ್ ಪರ ವಾದಿಸಿದ ಎಸ್ಪಿಪಿ ರವಿವರ್ಮ ಕುಮಾರ್, “ಅರ್ಜಿದಾರರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ವಜಾಗೊಳಿಸಿತ್ತು.

ಸುಪ್ರೀಂಕೋರ್ಟ್ ಕೂಡ ಅವರ ಅರ್ಜಿ ವಜಾಗೊಳಿಸಿದೆ. ಈಗ ಬದಲಾದ ಪರಿಸ್ಥಿತಿಯಲ್ಲಿ ಅರ್ಜಿ ಸಲ್ಲಿಸುವುದಾದರೆ ಮೊದಲು ಅವರು ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ನಂತರವಷ್ಟೇ ಹೈಕೋರ್ಟ್ ಮೊರೆ ಹೋಗಬಹುದೇ ಹೊರತು ಪ್ರಕ್ರಿಯೆ ಉಲ್ಲಂಘಿಸಿ ನೇರವಾಗಿ ಹೈಕೋರ್ಟ್ನ ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ,” ಎಂದರು. ಅರ್ಜಿದಾರರ ಪರ ವಕೀಲರು “ಹೊಳೆನರಸೀಪುರ ಪ್ರಕರಣದಲ್ಲಿ ಸಾಕ್ಷ್ಯ ವಿಚಾರಣೆಯೇ ಆರಂಭವಾಗಿಲ್ಲ. ವಿಚಾರಣೆಯೇ ಆರಂಭವಾಗದೆ ಜೈಲಿನಲ್ಲಿ ಕಳೆಯುವಂತಾಗಿದೆ. ಈ ಪ್ರಕರಣದಲ್ಲಿ 150 ಸಾಕ್ಷಿಗಳ ವಿಚಾರಣೆಯಾಗಬೇಕಿದೆ. ಸದ್ಯಕ್ಕೆ ವಿಚಾರಣೆ ಮುಗಿಯುವ ಸಾಧ್ಯತೆ ಇಲ್ಲದಿರುವುದರಿಂದ ಜಾಮೀನು ನೀಡಬೇಕು. ಈ ಪ್ರಕರಣದಲ್ಲಿ ಪ್ರಜ್ವಲ್ ಅವರನ್ನು ಪೊಲೀಸ್ ವಶಕ್ಕೂ ತೆಗೆದುಕೊಂಡಿಲ್ಲ. ಹಾಗಾಗಿ, ಷರತ್ತು ವಿಧಿಸಿ ಜಾಮೀನು ನೀಡಬೇಕು,” ಎಂದು ಮನವಿ ಮಾಡಿದರು.

The post ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗುವಂತಿಲ್ಲ….!!!! appeared first on Good News 24x7.

]]>
ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಟಾಯ್ಲೆಟ್ನಲ್ಲಿ ಕುಳಿತು ಹಾಜರಾದ ಆರೋಪಿ; https://www.goodnews24x7.com/%e0%b2%b9%e0%b3%88%e0%b2%95%e0%b3%8b%e0%b2%b0%e0%b3%8d%e0%b2%9f%e0%b3%8d-%e0%b2%b5%e0%b2%b0%e0%b3%8d%e0%b2%9a%e0%b3%81%e0%b2%b5%e0%b2%b2%e0%b3%8d-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3/ Fri, 27 Jun 2025 12:03:15 +0000 https://www.goodnews24x7.com/?p=4728 ಕೊವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವರ್ಚುವಲ್ ಮೀಟಿಂಗ್ ದೈನಂದಿನ ಜೀವನದ ಭಾಗವಾಗಿದ್ದು, ವೈಯಕ್ತಿಕ ಮತ್ತು ವೃತ್ತಿಪರ ಸ್ಥಳಗಳ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತಿವೆ. ಆನ್ಲೈನ್ ಮೀಟಿಂಗ್ ಸಮಯದಲ್ಲಿ ಬೆಡ್ರೂಂನಿಂದ ವಿಡಿಯೊ ಕರೆಗಳಿಗೆ ಹಾಜರಾಗುವುದು, ಮೀಟಿಂಗ್ ವೇಳೆಯೂ ಬೇರೆ ಕೆಲಸ ಮಾಡುವುದು ಅಸಾಮಾನ್ಯವೇನಲ್ಲ.…

The post ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಟಾಯ್ಲೆಟ್ನಲ್ಲಿ ಕುಳಿತು ಹಾಜರಾದ ಆರೋಪಿ; appeared first on Good News 24x7.

]]>

ಕೊವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ವರ್ಚುವಲ್ ಮೀಟಿಂಗ್ ದೈನಂದಿನ ಜೀವನದ ಭಾಗವಾಗಿದ್ದು, ವೈಯಕ್ತಿಕ ಮತ್ತು ವೃತ್ತಿಪರ ಸ್ಥಳಗಳ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತಿವೆ. ಆನ್ಲೈನ್ ಮೀಟಿಂಗ್ ಸಮಯದಲ್ಲಿ ಬೆಡ್ರೂಂನಿಂದ ವಿಡಿಯೊ ಕರೆಗಳಿಗೆ ಹಾಜರಾಗುವುದು, ಮೀಟಿಂಗ್ ವೇಳೆಯೂ ಬೇರೆ ಕೆಲಸ ಮಾಡುವುದು ಅಸಾಮಾನ್ಯವೇನಲ್ಲ. ಆದರೆ, ಗುಜರಾತ್ ಹೈಕೋರ್ಟ್ ವಿಚಾರಣೆಗೆ ಶೌಚಾಲಯದಿಂದಲೇ ವ್ಯಕ್ತಿಯೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಇಂತಹ ಘಟನೆಗಳು ಕಾನೂನಿಗೆ ಮಾಡುವ ಅವಮಾನ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಗುಜರಾತ್ ಹೈಕೋರ್ಟ್ನ ವರ್ಚುವಲ್ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬರು ಟಾಯ್ಲೆಟ್ ಸೀಟಿನ ಮೇಲೆ ಕುಳಿತು ವಿಚಾರಣೆಯಲ್ಲಿ ಭಾಗಿಯಾದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೂನ್ 20ರಂದು ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠದ ಮುಂದೆ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ “ಸಮದ್ ಬ್ಯಾಟರಿ” ಎಂಬ ಹೆಸರಿನಲ್ಲಿ ವರ್ಚುವಲ್ ಕೋರ್ಟ್ ವಿಚಾರಣೆಗೆ ಲಾಗಿನ್ ಆಗಿದ್ದಾನೆ. ಆತ ಕುತ್ತಿಗೆಗೆ ಬ್ಲೂಟೂತ್ ಇಯರ್ಫೋನ್ ಧರಿಸಿರುವುದು ಕಂಡುಬಂದಿದೆ. ಕೋರ್ಟ್ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಅವನು ಆರಂಭದಲ್ಲಿ ತನ್ನ ಫೋನ್ ಅನ್ನು ದೂರದಲ್ಲಿ ಇರಿಸಿದನು. ಆಗ ಆತ ಟಾಯ್ಲೆಟ್ನಲ್ಲಿ ಕುಳಿತಿರುವುದು ಕಂಡಿತು. ಹಾಗೇ, ಬಾತ್ರೂಂನಿಂದ ಹೊರಬರುವ ಮೊದಲು ಅವನು ತನ್ನನ್ನು ತಾನು ಒರೆಸಿಕೊಳ್ಳುವುದನ್ನು ದೃಶ್ಯಗಳು ತೋರಿಸುತ್ತವೆ. ಅವನು ಮತ್ತೊಂದು ರೂಂನಲ್ಲಿ ಕುಳಿತು ವಿಚಾರಣೆಗೆ ಹಾಜರಾಗುವ ಮೊದಲು ಸ್ವಲ್ಪ ಹೊತ್ತು ಮೊಬೈಲನ್ನು ಮೇಜಿನ ಮೇಲಿಟ್ಟು ಕಣ್ಮರೆಯಾಗುತ್ತಾನೆ.

The post ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಟಾಯ್ಲೆಟ್ನಲ್ಲಿ ಕುಳಿತು ಹಾಜರಾದ ಆರೋಪಿ; appeared first on Good News 24x7.

]]>
ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. https://www.goodnews24x7.com/central-government-orders-pakistani-nationals-to-return-home-mysore-based-womans-petition-dismissed-in-high-court/ Sat, 10 May 2025 09:35:37 +0000 https://www.goodnews24x7.com/?p=3797 ಮೈಸೂರು : ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿರುವ ಮೈಸೂರು ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗಲು ಬಲವಂತದ ಕ್ರಮ ಕೈಗೊಳ್ಳದೆ, ಭಾರತದಲ್ಲೇ ವಾಸ್ತವ್ವ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.…

The post ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. appeared first on Good News 24x7.

]]>

ಮೈಸೂರು : ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿರುವ ಮೈಸೂರು ಮೂಲದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗಲು ಬಲವಂತದ ಕ್ರಮ ಕೈಗೊಳ್ಳದೆ, ಭಾರತದಲ್ಲೇ ವಾಸ್ತವ್ವ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ನೇತೃತ್ವದ ರಜಾ ಕಾಲದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಕಾರಣವನ್ನು ಸ್ಪಷ್ಟಪಡಿಸಿದೆ ಮೈಸೂರಿನ ರಾಜೀವ್ ನಗರದ ರಂಷಾ ಜಹಾನ್, ಪಾಕಿಸ್ತಾನದ ಬಲೂಚಿಸ್ತಾನ ಮೂಲದ ಮೊಹ ಮೃದ್ ಫಾರೂಕ್ ಎಂಬಾತ ನನ್ನು ಕಳೆದ 10 ವರ್ಷದ ಹಿಂದೆ ಮದುವೆಯಾಗಿದ್ದರು. ರಂಷಾ ದಂಪತಿಗೆ ಕುಮಾರಿ ಬಿಬಿ ಯಾಮಿನಾ (8), ರಂಷಾ ಮೊಹಮ್ಮದ್ ಮುದಾಸೀರ್ (4) ಹಾಗೂ ಮೊಹಮ್ಮದ್ ಯೂಸುಫ್ (3) ಮಕ್ಕಳಿದ್ದಾರೆ. ಮೂವರು ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ನೀಡಿದ್ದ ಅಲ್ಲಿನ ಸರ್ಕಾರ ರಂಷಾ ಜಹಾನ್ಗೆ ಪೌರತ್ವ ನೀಡಲು ನಿರಾಕರಿಸಿತ್ತು.

ಆದರೆ, ಪತಿ ಜೊತೆಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಂಷಾ ಮೂಮು ಮಕ್ಕಳೊಂದಿಗೆ ಜನಮ 24, 2025 ರಂದು ಭಾರತಕ್ಕೆ ಹಿಂತಿರುಗಿ ತವರು ಮನೆ ಸೇರಿದ್ದರು.
ಆದರೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋ ಜಹಾನ್ ತ್ಪಾದಕರು 26 ಪ್ರವಾಸಿಗರ ಮಾರಣ ಹೋಮ ನಡೆಸಿದ ನಂತರ ಭಾರತ ದಲ್ಲಿರುವ ಎಲ್ಲಾ ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶಕ್ಕೆ ವಾಪಾಸಾಗಬೇಕೆಂದು ಕೇಂದ್ರ ಸರ್ಕಾರ ಕಟ್ಟಾಜ್ಞೆ ವಿಧಿಸಿತ್ತು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹೋಗದಂತೆ ತಮ್ಮ ವಿರುದ್ಧ ಬಲ ವಂತದ ಕ್ರಮ ಕೈಗೊಳ್ಳದೆ ಭಾರತದಲ್ಲೇ ವಾಸ್ತವ್ಯ ಮುಂದುವರೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಂಷಾ ಜಹಾನ್ ಮತ್ತು ಮಕ್ಕಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಕೇಂದ್ರ ಸರ್ಕಾರದ ಪರ ವಕೀಲ ಡಿಎಸ್ ಜಿ ಶಾಂತಿ ಭೂಷಣ್, ರಂಷಾ ಅವರ ಅರ್ಜಿಗೆ ಮಾನ್ಯತೆ ನೀಡದಂತೆ ಮತ್ತು ಕೇಂದ್ರ ಸರ್ಕಾರದ ತೀರ್ಮಾನದ ಮಹತ್ವವನ್ನು ವಿವರಿಸಿದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಂ.ಜಿ.ಉಮಾ, ರಂಷಾ ಮತ್ತು ಮೂವರು ಮಕ್ಕಳ ಅರ್ಜಿಯನ್ನು ವಜಾ ಗೊಳಿಸಿದರು. ಪಾಕಿಸ್ತಾನದ ಪ್ರಜೆಗಳ ವೀಸಾ ರದ್ದತಿ ಮಾಡಿ ಅವರ ದೇಶಕ್ಕೆ ಹೋಗುವಂತೆ ಏಪ್ರಿಲ್ 25 ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಭಾರತ ಒಕ್ಕೂಟವು ಭದ್ರತೆಯ ಕುರಿತಾದ ಸಂಪುಟ ಸಮಿತಿಯ ಮೂಲಕ ಭಾರತದ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಪ್ರಜ್ಞಾಪೂರ್ವಕ ವಾದ ದಿಟ್ಟ ಕ್ರಮ ಕೈಗೊಂಡಿದೆ. ಈ ವಿಚಾರ ದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಪಾಕಿಸ್ತಾನಕ್ಕೆ ಹೋಗದೆ ಭಾರತ ದಲ್ಲೇ ಇರಲು ನಿಮ್ಮ ಪರವಾಗಿ ಅನುಕೂಲ ಕರವಾದ ಆದೇಶ ನೀಡಲು ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿ, ರಂಷಾ ಮತ್ತು ಮಕ್ಕಳ ಅರ್ಜಿಯನ್ನು ನ್ಯಾಯ ಮೂರ್ತಿ ಉಮಾ ವಜಾ ಮಾಡಿದ್ದಾರೆ.

The post ಮೈಸೂರು ಮೂಲದ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾ. appeared first on Good News 24x7.

]]>
ಮೈಸೂರಿನ ಕ್ಯಾತಮಾರನಹಳ್ಳಿ ಮಸೀದಿ ವಿವಾದ: DC ಆದೇಶಕ್ಕೆ ಹೈಕೋರ್ಟ್ ತಡೆ. https://www.goodnews24x7.com/mysores-kyathamaranahalli-mosque-dispute-high-court-stays-dc-ordermysores-kyathamaranahalli-mosque-dispute-high-court-stays-dc-ordermysores-kyathamaranahalli-mosque-dispute-high-court-stays-d/ Thu, 08 May 2025 09:43:52 +0000 https://www.goodnews24x7.com/?p=3715 ಮೈಸೂರು: ಮೈಸೂರಿನ ಕ್ಯಾತಮಾರನಹಳ್ಳಿ ವಿವಾದಿತ ಜಾಗದಲ್ಲಿ ಮದರಸಾ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಕ್ಯಾತಮಾರನಹಳ್ಳಿ ವಿವಾದಿತ ಜಾಗದಲ್ಲಿ ಮದರಸಾ ಮಾಡಲು ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈ ಕೋರ್ಟ್ ತಡೆ ನೀಡಿದ್ದು…

The post ಮೈಸೂರಿನ ಕ್ಯಾತಮಾರನಹಳ್ಳಿ ಮಸೀದಿ ವಿವಾದ: DC ಆದೇಶಕ್ಕೆ ಹೈಕೋರ್ಟ್ ತಡೆ. appeared first on Good News 24x7.

]]>

ಮೈಸೂರು: ಮೈಸೂರಿನ ಕ್ಯಾತಮಾರನಹಳ್ಳಿ ವಿವಾದಿತ ಜಾಗದಲ್ಲಿ ಮದರಸಾ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಕ್ಯಾತಮಾರನಹಳ್ಳಿ ವಿವಾದಿತ ಜಾಗದಲ್ಲಿ ಮದರಸಾ ಮಾಡಲು ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ಹೈ ಕೋರ್ಟ್ ತಡೆ ನೀಡಿದ್ದು ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.


ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಕೀಲ ಅ.ಮ ಭಾಸ್ಕರ್ , ಈಗಾಗಲೇ ವಿವಾದಿತ ಜಾಗದ ವಿಚಾರಕ್ಕೆ ಕೊಲೆ ಆಗಿದೆ. ಅಲ್ಲದೆ ಮದರಸಾ ಮಾಡಲು ಸ್ಥಳೀಯರ ವಿರೋಧವಿದೆ. ವಿವಾದಿತ ಜಾಗ ರೇಸಿಡೆನ್ಸಿಯಲ್ ಆಗಿದ್ದು, ಅಲ್ಲಿ ನರ್ಸರಿ ಅರೇಬಿಕ್ ಶಾಲೆ ತೆರೆಯಲು ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ಅನುಮತಿ ನೀಡಿದ್ದರು. ಸದ್ಯ ಹೈಕೋರ್ಟ್ ಡಿಸಿ ಅವರ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ ಎಂದು ತಿಳಿಸಿದರು.

ಕ್ಯಾತಮಾರ‌ನಹಳ್ಳಿ ಗ್ರಾಮಸ್ಥರಲ್ಲಿ ಸಂತಸ
ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೆ ಸಂತಸ ಹಂಚಿಕೊಂಡ ಕ್ಯಾತಮಾರ‌ನಹಳ್ಳಿ ಗ್ರಾಮಸ್ಥರು, ವಿವಾದಿತ ಸ್ಥಳದಲ್ಲಿ ಮದರಸ ನಡೆಸದಂತೆ ಹೈಕೋರ್ಟ್ ತಡೆ ನೀಡಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಸೂಚನೆ ನೀಡಿದೆ. ಇದು ನಮಗೆ ಮೊದಲ ಹಂತದ ಜಯ. ಯಾವುದೇ ಕಾರಣಕ್ಕೂ ಅಲ್ಲಿ ಮದರಸ ತೆರೆಯಬಾರದು. ಈಗಾಗಲೇ ಅದು ಸೂಕ್ಷ್ಮ ಪ್ರದೇಶವಾಗಿದೆ. ಕೋರ್ಟ್ ಆದೇಶವನ್ನ ನಾವು ಗೌರವಿಸುತ್ತೇವೆ ಮತ್ತು ಪಾಲಿಸುತ್ತೇವೆ. ಮುಂದೆ ಏನಾಗುತ್ತದೋ ಅದಕ್ಕೆ ನಮ್ಮ ವಕೀಲರಿದ್ದಾರೆ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.

The post ಮೈಸೂರಿನ ಕ್ಯಾತಮಾರನಹಳ್ಳಿ ಮಸೀದಿ ವಿವಾದ: DC ಆದೇಶಕ್ಕೆ ಹೈಕೋರ್ಟ್ ತಡೆ. appeared first on Good News 24x7.

]]>
10 ತಿಂಗಳ ಬಳಿಕ ಹಾಸನಕ್ಕೆ ಬಂದ ಭವಾನಿ ರೇವಣ್ಣಗೆ ಹೂವಿನ ಸುರಿಮಳೆ…… https://www.goodnews24x7.com/10-%e0%b2%a4%e0%b2%bf%e0%b2%82%e0%b2%97%e0%b2%b3-%e0%b2%ac%e0%b2%b3%e0%b2%bf%e0%b2%95-%e0%b2%b9%e0%b2%be%e0%b2%b8%e0%b2%a8%e0%b2%95%e0%b3%8d%e0%b2%95%e0%b3%86-%e0%b2%ac%e0%b2%82%e0%b2%a6-%e0%b2%ad/ Mon, 07 Apr 2025 12:32:27 +0000 https://www.goodnews24x7.com/?p=3083 ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಹೈಕೋರ್ಟ್ನಿಂದ ರಿಲೀಫ್ ಸಿಕ್ಕ ಬೆನ್ನಲ್ಲೇ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ 10 ತಿಂಗಳ ಬಳಿಕ ಹಾಸನ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ಹಾಸನ ಜನತೆ ಅವರನ್ನ ಹೂವಿನ ಸುರಿಮಳೆಯಿಂದ ಹಾಗೂ ಆರತಿ…

The post 10 ತಿಂಗಳ ಬಳಿಕ ಹಾಸನಕ್ಕೆ ಬಂದ ಭವಾನಿ ರೇವಣ್ಣಗೆ ಹೂವಿನ ಸುರಿಮಳೆ…… appeared first on Good News 24x7.

]]>

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಹೈಕೋರ್ಟ್ನಿಂದ ರಿಲೀಫ್ ಸಿಕ್ಕ ಬೆನ್ನಲ್ಲೇ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ 10 ತಿಂಗಳ ಬಳಿಕ ಹಾಸನ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ಹಾಸನ ಜನತೆ ಅವರನ್ನ ಹೂವಿನ ಸುರಿಮಳೆಯಿಂದ ಹಾಗೂ ಆರತಿ ಎತ್ತುವ ಮುಖಾಂತರ ಬರ ಮಾಡಿಕೊಂಡಿದ್ದಾರೆ.

ಹಾಸನಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಗಡಿಭಾಗ ಹಿರಿಸಾವೆ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರದಲ್ಲಿ ಜೆಡಿಎಸ್ ಕಾರ್ಯಕರ್ತರು ಭವಾನಿ ರೇವಣ್ಣ ಅವರನ್ನು ಸ್ವಾಗತಿಸಿದ್ದಾರೆ. ಹೂಮಳೆ ಸುರಿಸಿ, ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಸಿಸಲು ಭವಾನಿ ರೇವಣ್ಣಗೆ ಹೈಕೋರ್ಟ್ ರಿಲೀಫ್ ನೀಡಿತ್ತು.

ಈ ಹಿಂದೆ ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಷರತ್ತನ್ನು ಸಡಿಲಿಸಿದ್ದು, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀ. ಸುತ್ತಳತೆಯಲ್ಲಿ ಪ್ರವೇಶಿಸುವಂತಿಲ್ಲ ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಹೊಸ ಷರತ್ತು ವಿಧಿಸಿದೆ.

ತನ್ನ ತಾಯಿ ಕಣ್ಮರೆಯಾಗಿದ್ದಾರೆಂದು ಸಂತ್ರಸ್ತೆ ಪುತ್ರ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ನಡೆಸಿದ್ದ ಪೊಲೀಸರು, ಹೆಚ್.ಡಿ. ಅವರಿಗೆ ಸಂಬಂಧಿಸಿದ್ದೆಂದು ಹೇಳಲಾದ ತೋಟದ ಮನೆಯೊಂದರಿಂದ ಆಕೆಯನ್ನು ರಕ್ಷಿಸಿದ್ದರು. ಅಪಹರಣಕ್ಕೆ ಭವಾನಿ ರೇವಣ್ಣ ಅವರ ಕಾರು ಬಳಕೆಯಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಭವಾನಿ ರೇವಣ್ಣ ಹಾಗೂ ಅವರ ಕಾರು ಚಾಲಕ ಅಜಿತ್ ವಿರುದ್ಧವೂ ದೂರು ದಾಖಲಾಗಿತ್ತು.

ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಆದ್ರೆ ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು. ಇದೀಗ ಅದೆಲ್ಲದಕ್ಕೂ ತೆರೆ ಎಳೆಯುವಂತೆ ಭವಾನಿ ರೇವಣ್ಣ ಕೋರ್ಟಿನ ಆದೇಶದ ಮೇರೆಗೆ ಮತ್ತೆ ಹಾಸನಕ್ಕೆ ಹಿಂದಿರುಗಿದ್ದಾರೆ. ಅಲ್ಲದೆ ಮೈಸೂರಿಗೂ ತೆರಳಬಹುದು ಎಂಬ ಆದೇಶವನ್ನು ತಮ್ಮೊಟ್ಟಿಗೆ ತಂದಿದ್ದಾರೆ.

The post 10 ತಿಂಗಳ ಬಳಿಕ ಹಾಸನಕ್ಕೆ ಬಂದ ಭವಾನಿ ರೇವಣ್ಣಗೆ ಹೂವಿನ ಸುರಿಮಳೆ…… appeared first on Good News 24x7.

]]>
ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧದ ಭೂ ಒತ್ತುವರಿ ಆರೋಪ ; ತೆರೆವು ಕಾರ್ಯಾಚರಣೆ. https://www.goodnews24x7.com/%e0%b2%b9%e0%b3%86%e0%b2%9a%e0%b3%8d%e0%b2%a1%e0%b2%bf-%e0%b2%95%e0%b3%81%e0%b2%ae%e0%b2%be%e0%b2%b0%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf-%e0%b2%95%e0%b3%81%e0%b2%9f%e0%b3%81%e0%b2%82/ Tue, 18 Mar 2025 06:58:17 +0000 https://www.goodnews24x7.com/?p=2797 ರಾಮನಗರ :- ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂಒತ್ತುವರಿ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಇದೀಗ ಕಂದಾಯ ಇಲಾಖೆ ಒತ್ತುವರಿ ತೆರೆವು ಕಾರ್ಯಾಚರಣೆಗೆ ಮುಂದಾಗಿದೆ.…

The post ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧದ ಭೂ ಒತ್ತುವರಿ ಆರೋಪ ; ತೆರೆವು ಕಾರ್ಯಾಚರಣೆ. appeared first on Good News 24x7.

]]>

ರಾಮನಗರ :- ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂಒತ್ತುವರಿ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಇದೀಗ ಕಂದಾಯ ಇಲಾಖೆ ಒತ್ತುವರಿ ತೆರೆವು ಕಾರ್ಯಾಚರಣೆಗೆ ಮುಂದಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ, ಅದರಲ್ಲೂ ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕೆಲವು ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಅಪರೂಪದ ಪ್ರಕರಣ ಇದಾಗಿದೆ. ಹೆಚ್ಡಿಕೆ ಕುಟುಂಬದ ವಿರುದ್ಧ ಕೇಳಿಬಂದಿರುವ ಭೂಒತ್ತುವರಿ ಆರೋಪ ಸಂಬಂಧ ತನಿಖೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ಐಟಿ ರಚನೆ ಮಾಡಿದ್ದರು. ಕೇತಗಾನಹಳ್ಳಿಯ ಸರ್ವೆ ನಂ.7, 8, 9, 10, 16, 17, 79 ರಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಂದಾಯ ಇಲಾಖೆ, ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ನಡೆದಿದೆ. ಇದೀಗ ಸರ್ಕಾರಕ್ಕೆ ಸರ್ವೆ ವರದಿ ಸಲ್ಲಿಸಿ ಒತ್ತುವರಿ ತೆರವು ಮಾಡಲು ಇಲಾಖೆ ಮುಂದಾಗಿದೆ. ಇಂದು ಕಂದಾಯ ಇಲಾಖೆ ಅಧಿಕಾರಿಗಳಿಂದ ಒತ್ತುವರಿ ತೆರವು ಸಾಧ್ಯತೆ ಇದೆ. ಒತ್ತುವರಿ ತೆರವಿಗೆ ಕುಮಾರಸ್ವಾಮಿ ತೋಟದ ಮನೆಯ ಮುಂದೆ ಎರಡು ಜೆಸಿಬಿಗಳು ಸಿದ್ಧವಾಗಿವೆ.

 

 

 

 

ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್
ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಕುಟುಂಬದವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ವಿಚಾರವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿತ್ತು. ಇದಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣ ಸಂಬಂಧ ಹೈಕೋರ್ಟಿನಲ್ಲಿ ಸೋಮವಾರ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಕೆ ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎಸ್ಐಟಿ ರಚನೆ ಮಾಡಿದ್ದಾರೆ. ಹಾಗಾದರೆ ಕಂದಾಯ ಇಲಾಖೆ ಅಷ್ಟೊಂದು ಶಕ್ತಿಶಾಲಿಯಾಗಿದೆಯೇ? ರಾಜ್ಯ ಸರ್ಕಾರವು ಸಂವಿಧಾನಕ್ಕಿಂತ ಮಿಗಿಲಾಗಿದೆಯೇ? 14 ಎಕರೆ ಭೂ ಒತ್ತುವರಿ ತೆರವು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹಾಗಾದರೆ ಉಳಿದ 71 ಎಕರೆ ಭೂಮಿ ಒತ್ತುವರಿಯನ್ನು ತೆರವು ಮಾಡಬೇಕಾಗಿದೆ ಅಲ್ಲವೇ ಎಂದು ವಿಭಾಗಿಯ ಪೀಠ ಸರ್ಕಾರವನ್ನು ಪ್ರಶ್ನಿಸಿತು.
ಇಷ್ಟೇ ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬ್ರೈನ್ ಮ್ಯಾಪಿಂಗ್ಗೆ ಒಳಪಡಿಸಲು ಆದೇಶಿಸಿದರೆ ಸತ್ಯ ಹೊರಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆ ಭೂ ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾಗಿದೆ.

 

The post ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧದ ಭೂ ಒತ್ತುವರಿ ಆರೋಪ ; ತೆರೆವು ಕಾರ್ಯಾಚರಣೆ. appeared first on Good News 24x7.

]]>
ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್​ ಒಪ್ಪಿಗೆ, ಕಾರಣವೇನು? https://www.goodnews24x7.com/%e0%b2%97%e0%b2%b0%e0%b3%8d%e0%b2%ad%e0%b2%aa%e0%b2%be%e0%b2%a4%e0%b2%95%e0%b3%8d%e0%b2%95%e0%b3%86-%e0%b2%ac%e0%b2%be%e0%b2%82%e0%b2%ac%e0%b3%86-%e0%b2%b9%e0%b3%88%e0%b2%95%e0%b3%8b%e0%b2%b0%e0%b3%8d/ Sun, 16 Mar 2025 07:54:48 +0000 https://www.goodnews24x7.com/?p=2784 ಮಹಿಳೆ ತಾನು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮಗುವನ್ನು ಬರಮಾಡಿಕೊಳ್ಳಲು ಒಂದೊಂದೇ ತಯಾರಿಯನ್ನು ಆರಂಭಿಸುತ್ತಾಳೆ. ನೂರಾರು ಕನಸುಗಳನ್ನು ಕಾಣುತ್ತಾಳೆ. ಒಂದೊಮ್ಮೆ ಇನ್ನೇನು ಕೆಲವೇ ದಿನಗಳಲ್ಲಿ ಹೆರಿಗೆಯಾಗುತ್ತದೆ ಎನ್ನುವ ಖುಷಿಯಲ್ಲಿದ್ದಾಗ ಮಗುವಿಗೆ ಕಾಯಿಲೆ ಎಂದು ಗೊತ್ತಾದರೆ ಆಕೆಯ ಮನಸ್ಸು ಘಾಸಿಗೊಳ್ಳುತ್ತದೆ. ಅಂಥದ್ದೇ ಘಟನೆ ಮುಂಬೈನಲ್ಲಿ…

The post ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್​ ಒಪ್ಪಿಗೆ, ಕಾರಣವೇನು? appeared first on Good News 24x7.

]]>

ಮಹಿಳೆ ತಾನು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮಗುವನ್ನು ಬರಮಾಡಿಕೊಳ್ಳಲು ಒಂದೊಂದೇ ತಯಾರಿಯನ್ನು ಆರಂಭಿಸುತ್ತಾಳೆ. ನೂರಾರು ಕನಸುಗಳನ್ನು ಕಾಣುತ್ತಾಳೆ. ಒಂದೊಮ್ಮೆ ಇನ್ನೇನು ಕೆಲವೇ ದಿನಗಳಲ್ಲಿ ಹೆರಿಗೆಯಾಗುತ್ತದೆ ಎನ್ನುವ ಖುಷಿಯಲ್ಲಿದ್ದಾಗ ಮಗುವಿಗೆ ಕಾಯಿಲೆ ಎಂದು ಗೊತ್ತಾದರೆ ಆಕೆಯ ಮನಸ್ಸು ಘಾಸಿಗೊಳ್ಳುತ್ತದೆ. ಅಂಥದ್ದೇ ಘಟನೆ ಮುಂಬೈನಲ್ಲಿ ನಡೆದಿದೆ.
26 ವರ್ಷದ ಮಹಿಳೆ 8 ತಿಂಗಳ ಗರ್ಭಿಣಿ, 20 ವಾರಗಳು ಕಳೆದ ಬಳಿಕ ಹೊಟ್ಟೆಯಲ್ಲಿರುವ ಮಗುವಿಗೆ ಮ್ಯಾಕ್ರೋಸೆಫಾಲಿ(ಅಸಹಜ ದೊಡ್ಡ ತಲೆ) ಮತ್ತು ಮೆದುಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿವೆ ಎಂಬುದು ತಿಳಿದುಬಂದಿದೆ. ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ಗರ್ಭಪಾತವನ್ನು ಸರ್ವಾನುಮತದಿಂದ ಶಿಫಾರಸು ಮಾಡಿತ್ತು. ಮಗುವಿಗೆ ಅಪಸ್ಮಾರ, ಮಾನಸಿಕ ದೌರ್ಬಲ್ಯ, ನಡೆಯಲು ತೊಂದರೆ ಮತ್ತು ದೃಷ್ಟಿ ದುರ್ಬಲತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿವೆ ಎಂದು ಮಂಡಳಿ ತಿಳಿಸಿದೆ.
ಕೇಂದ್ರ ಸರ್ಕಾರದ ಆಗಸ್ಟ್ 2018 ರ ಮಾರ್ಗಸೂಚಿಯನ್ನು ಉಲ್ಲೇಖಿಸಿ, ಮಹಿಳೆ 20 ವಾರಗಳ ನಂತರ ಗರ್ಭಪಾತಕ್ಕೆ ಅನುಮತಿ ಕೋರಿದ್ದರು. ಮಹಿಳೆಯ ಸಂತಾನೋತ್ಪತ್ತಿ ಹಕ್ಕುಗಳು, ಆಕೆಯ ದೈಹಿಕ ಸ್ವಾಯತ್ತತೆ ಮತ್ತು ಆಯ್ಕೆ ಮಾಡುವ ಹಕ್ಕನ್ನು ಗಣನೆಗೆ ತೆಗೆದುಕೊಂಡು ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ನ್ಯಾಯಾಲಯವು ಒಪ್ಪಿಕೊಂಡಿತು ಮತ್ತು ಗರ್ಭಪಾತಕ್ಕೆ ಅನುಮತಿ ನೀಡಿತು.

 

 

 

ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಮತ್ತು ಮಹಾರಾಷ್ಟ್ರ ಸರ್ಕಾರ ಅಳವಡಿಸಿಕೊಂಡ ನೀತಿಯ ಪ್ರಕಾರ, ವೈದ್ಯಕೀಯ ತಜ್ಞರು ಅಗತ್ಯವೆಂದು ಭಾವಿಸಿದರೆ ವೈದ್ಯರು MTP ಕಾರ್ಯವಿಧಾನವನ್ನು ನಿರ್ವಹಿಸಲು ನಾವು ಅವಕಾಶ ನೀಡುತ್ತೇವೆ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಕಲೆ ಅವರ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಗರ್ಭಾವಸ್ಥೆಯು 24 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ಭ್ರೂಣವು ಜೀವಂತವಾಗಿ ಜನಿಸದಂತೆ, ಅಲ್ಟ್ರಾಸೌಂಡ್-ಮಾರ್ಗದರ್ಶಿತ ಕಾರ್ಯವಿಧಾನದ ಮೂಲಕ ಭ್ರೂಣದ ಹೃದಯ ಬಡಿತವನ್ನು ನಿಲ್ಲಿಸಲು ಮಾರ್ಗಸೂಚಿಗಳು ಅವಕಾಶ ನೀಡುತ್ತವೆ ಎಂದು ಮಹಿಳೆಯ ವಕೀಲರಾದ ಮೀನಾಜ್ ಕಾಕ್ಲ್ಯಾ ನ್ಯಾಯಾಲಯದಲ್ಲಿ ವಾದಿಸಿದರು. ಕೇಂದ್ರದ ಈ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರವೂ ಅಳವಡಿಸಿಕೊಂಡಿದ್ದು, ಇದರ ಅಡಿಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ..ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನು ಏನು ಹೇಳುತ್ತದೆ? 20 ವಾರಗಳವರೆಗೆ ಯಾವುದೇ ವಿಶೇಷ ಅನುಮತಿಯಿಲ್ಲದೆ ಗರ್ಭಪಾತವನ್ನು ಮಾಡಬಹುದು. ಆದಾಗ್ಯೂ, 20 ರಿಂದ 24 ವಾರಗಳ ನಡುವೆ, ವೈದ್ಯರ ಸಮಿತಿಯ ಅನುಮೋದನೆಯ ನಂತರ ಕೆಲವು ಸಂದರ್ಭಗಳಲ್ಲಿ ಮಾತ್ರ ಇದನ್ನು ಮಾಡಬಹುದು. 24 ವಾರಗಳಿಗಿಂತ ಹೆಚ್ಚಿನ ಅವಧಿಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ನ್ಯಾಯಾಲಯದ ಅನುಮತಿ ಅಗತ್ಯವಿದೆ.

The post ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್​ ಒಪ್ಪಿಗೆ, ಕಾರಣವೇನು? appeared first on Good News 24x7.

]]>