HighGrounds Archives - Good News 24x7 https://www.goodnews24x7.com/tag/highgrounds/ Kannada Sun, 22 Jun 2025 11:23:55 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg HighGrounds Archives - Good News 24x7 https://www.goodnews24x7.com/tag/highgrounds/ 32 32 ಸುಗಮ ಸಂಚಾರಕ್ಕೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲ ಬದಲಾವಣೆ. https://www.goodnews24x7.com/some-changes-in-the-central-part-of-bengaluru-for-smooth-traffic/ Sun, 22 Jun 2025 11:23:55 +0000 https://www.goodnews24x7.com/?p=4607 ಬೆಂಗಳೂರು : ನಗರದ ಕೇಂದ್ರ ಭಾಗದಲ್ಲಿ ವಾಹನಗಳ ದಟ್ಟಣೆ ತಗ್ಗಿಸುವ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಹೈಗ್ರೌಂಡ್ಸ್, ಶೇಷಾದ್ರಿಪುರಂ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ಪಾರ್ಕಿಂಗ್, ಏಕಮುಖ ಸಂಚಾರ ಸೇರಿದಂತೆ ಕೆಲ ಮಾರ್ಪಾಡುಗಳನ್ನು ಮಾಡಿ ನಗರ ಪೊಲೀಸ್ ಆಯುಕ್ತ ಸೀಮಂತ್…

The post ಸುಗಮ ಸಂಚಾರಕ್ಕೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲ ಬದಲಾವಣೆ. appeared first on Good News 24x7.

]]>

ಬೆಂಗಳೂರು : ನಗರದ ಕೇಂದ್ರ ಭಾಗದಲ್ಲಿ ವಾಹನಗಳ ದಟ್ಟಣೆ ತಗ್ಗಿಸುವ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಹೈಗ್ರೌಂಡ್ಸ್, ಶೇಷಾದ್ರಿಪುರಂ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ಪಾರ್ಕಿಂಗ್, ಏಕಮುಖ ಸಂಚಾರ ಸೇರಿದಂತೆ ಕೆಲ ಮಾರ್ಪಾಡುಗಳನ್ನು ಮಾಡಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಶೇಷಾದ್ರಿಪುರಂ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿದ್ದುದರಿಂದ ಅಧ್ಯಯನ ನಡೆಸಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಆಯುಕ್ತರು ತಿಳಿಸಿದ್ದಾರೆ.

ಏಕಮುಖ ಸಂಚಾರ : ಶೇಷಾದ್ರಿಪುರಂ ವ್ಯಾಪ್ತಿಯ ನೆಹರು ಸರ್ಕಲ್ನಿಂದ ಎನ್. ಎಸ್. ಅಯ್ಯಂಗಾರ್ ಸ್ಟ್ರೀಟ್ (ದಕ್ಷಿಣದಿಂದ ಉತ್ತರ ಮಾರ್ಗ) ಹಾಗೂ ಎನ್. ಎಸ್ ಅಯ್ಯಂಗಾರ್ ಸ್ಟ್ರೀಟ್ನಿಂದ ನಾಗಪ್ಪ ಸ್ಟ್ರೀಟ್ ಹಾಗೂ 3ನೇ ಕ್ರಾಸ್ವರೆಗೆ (ಉತ್ತರದಿಂದ ದಕ್ಷಿಣ ಮಾರ್ಗ), ಸಂಪಿಗೆ ರಸ್ತೆಯಿಂದ ಶಿರೂರು ಪಾರ್ಕ್ ರಸ್ತೆಯ ಪಶ್ಚಿಮದಿಂದ ಪೂರ್ವ ವಿಭಾಗದ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.

ವಾಹನ ನಿಲುಗಡೆಗೆ ನಿರ್ಬಂಧವಿರುವ ರಸ್ತೆಗಳು : ಆರ್.ಪಿ. ರಸ್ತೆ ಮತ್ತು ಹರೇಕೃಷ್ಣ ರಸ್ತೆ, ರೈಲ್ವೆ ಕೆಳಸೇತುವೆಯಿಂದ ಆರ್. ಪಿ. ರಸ್ತೆ ಮತ್ತು ಬಿಡಿಎ ಕಚೇರಿವರೆಗಿನ ಪಶ್ಚಿಮ ದಿಕ್ಕಿನ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಗೆ ನಿರ್ಬಂಧಿಸಲಾಗಿದೆ.

ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ನಿಲುಗಡೆ : ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿನ ರೈಲ್ವೆ ಪ್ಯಾರಲಲ್ ರಸ್ತೆ (ಆರ್.ಪಿ ರಸ್ತೆ) ಮತ್ತು ಹರೇಕೃಷ್ಣ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆಯಿಂದ ಕುಮಾರಪಾರ್ಕ್ ವೆಸ್ಟ್ 6ನೇ ಕ್ರಾಸ್ನ ಪೂರ್ವ ದಿಕ್ಕಿನವರೆಗೆ ದ್ವಿಚಕ್ರ ವಾಹನ ನಿಲುಗಡೆಗೆ ಅನುಮತಿ ನೀಡಲಾಗಿದೆ. ಕಾರು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಆರ್.ಪಿ. ರಸ್ತೆ ಮತ್ತು ಕೆ. ಪಿ ವೆಸ್ಟ್ 6ನೇ ಕ್ರಾಸ್ ರಸ್ತೆಯಿಂದ ಆರ್. ಪಿ. ರಸ್ತೆ ಮತ್ತು ಬಿಡಿಎ ಕಚೇರಿವರೆಗೆ ಅವಕಾಶ ಕಲ್ಪಿಸಲಾಗಿದೆ.

ಶಿರೂರು ಪಾರ್ಕ್ ರಸ್ತೆ ಹಾಗೂ ಸೌತ್ ಎಂಡ್ ರಸ್ತೆ ಜಂಕ್ಷನ್ನಿಂದ ಎಸ್. ಪಿ. ರಸ್ತೆಯ ನಟರಾಜ ಚಿತ್ರಮಂದಿರವರೆಗಿನ ಪಶ್ಚಿಮ ದಿಕ್ಕಿನ ರಸ್ತೆ, ಸಂಪಿಗೆ ರಸ್ತೆಯ ಬಿಬಿಎಂಪಿ ಕಚೇರಿಯಿಂದ ಶಿರೂರು ಪಾರ್ಕ್ ರಸ್ತೆಯ ಉತ್ತರ ದಿಕ್ಕಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ್ತು ಶಿರೂರು ಪಾರ್ಕ್ ರಸ್ತೆ ಮತ್ತು ಸೌತ್ ಎಂಡ್ ರಸ್ತೆ ಜಂಕ್ಷನ್ನಿಂದ ಎಸ್. ಸಿ. ರಸ್ತೆ, ಸಂಪಿಗೆ ರಸ್ತೆವರೆಗೆ ಪೂರ್ವ ಹಾಗೂ ದಕ್ಷಿಣ ದಿಕ್ಕಿನ ಕಡೆಗಿನ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿ ಆದೇಶಿಸಲಾಗಿದೆ.

The post ಸುಗಮ ಸಂಚಾರಕ್ಕೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲ ಬದಲಾವಣೆ. appeared first on Good News 24x7.

]]>