Hindu Archives - Good News 24x7 https://www.goodnews24x7.com/tag/hindu/ Kannada Wed, 10 Sep 2025 07:18:26 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Hindu Archives - Good News 24x7 https://www.goodnews24x7.com/tag/hindu/ 32 32 ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ; ಗದಗದಲ್ಲಿ ಕೋಮು ಸೌಹಾರ್ದತೆ ಸಂದೇಶ https://www.goodnews24x7.com/hindu-and-muslim-mass-marriages-held-together-a-message-of-communal-harmony-in-gadag/ Wed, 10 Sep 2025 07:18:26 +0000 https://www.goodnews24x7.com/?p=7453 ಗದಗದಲ್ಲಿ ನಡೆದ ಅಪರೂಪದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸದಲ್ಲಿ ಒಟ್ಟು 36 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ. ಬೆಟಗೇರಿ ಅಂಜುಮನ್ ಕಮಿಟಿಯಿಂದ ಆಯೋಜಿಸಲ್ಪಟ್ಟ ಈ ವಿಶೇಷ ಕಾರ್ಯಕ್ರಮ ರಾಜ್ಯಾದ್ಯಂತ ಕೋಮು ಸೌಹಾರ್ದತೆಯ ಸಂದೇಶ ಸಾರಿದೆ. ಪುಟ್ಟರಾಜ್ ಗವಾಯಿಗಳ ಅನುಗ್ರಹದಲ್ಲಿ ನಡೆದ ಈ…

The post ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ; ಗದಗದಲ್ಲಿ ಕೋಮು ಸೌಹಾರ್ದತೆ ಸಂದೇಶ appeared first on Good News 24x7.

]]>

ಗದಗದಲ್ಲಿ ನಡೆದ ಅಪರೂಪದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸದಲ್ಲಿ ಒಟ್ಟು 36 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ. ಬೆಟಗೇರಿ ಅಂಜುಮನ್ ಕಮಿಟಿಯಿಂದ ಆಯೋಜಿಸಲ್ಪಟ್ಟ ಈ ವಿಶೇಷ ಕಾರ್ಯಕ್ರಮ ರಾಜ್ಯಾದ್ಯಂತ ಕೋಮು ಸೌಹಾರ್ದತೆಯ ಸಂದೇಶ ಸಾರಿದೆ. ಪುಟ್ಟರಾಜ್ ಗವಾಯಿಗಳ ಅನುಗ್ರಹದಲ್ಲಿ ನಡೆದ ಈ ಮದುವೆಯು ಬಡವರಿಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶ ಹೊಂದಿತ್ತು.
ನಾಡಿನೆಲ್ಲೆಡೆ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ಜಾತಿ ಜಾತಿಗಳ ಕಲಹ ಶುರುವಾಗಿದೆ. ಆದರೆ ಇತ್ತ ನಡೆದಾಡುವ ದೇವರ ನಾಡಿನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಬದುಕು ಸಾಗಿಸುತ್ತಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳ ನಡೆದಾಡಿದ ನೆಲದಲ್ಲಿ ಹಿಂದೂ-ಮುಸ್ಲಿಂ ಬಾಂಧವರ ಸಾಮೂಹಿಕ ವಿವಾವ ಮಹೋತ್ಸವ ಅದ್ಧೂರಿಯಾಗಿ ನಡೆದದ್ದು, 36 ನವದಂಪತಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ, ಸಂಗೀತ ಬೀಡು ಗದಗ ನಗರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಂಜುಮನ್ ಶಾಲೆ‌ ಆವರಣದಲ್ಲಿ ಹಿಂದೂ, ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ. ಬೆಟಗೇರಿ‌ ಅಂಜುಮನ್ ಕಮಿಟಿ ವತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ ಮಾಡಲಾಗಿತ್ತು. ಈ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ 36 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. 26 ಹಿಂದೂ‌ ಜೋಡಿಗಳು, 10 ಮುಸ್ಲಿಂ ಜೋಡಿಗಳು ಹಸೆಮಣೆ ಏರಿದ್ದಾರೆ. ಆ ಮೂಲಕ ನಾಡಿಗೆ ಕೋಮು ಸೌಹಾರ್ದತೆ ಸಂದೇಶ ಸಾರಿದ್ದಾರೆ.

ಈ ವೇಳೆ ಮಾತನಾಡಿದ ಪುಟ್ಟರಾಜ್ ಗವಾಯಿಗಳ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಇಂದಿನ ದುಬಾರಿ ಜಗತ್ತಿನಲ್ಲಿ ಮದುವೆಗೆ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿದೆ. ಬಡವರಿಗೆ ಮದುವೆ ಮಾಡುವುದಂದರೆ ಕಷ್ಟದ ಕೆಲಸ. ಆದರೆ ಬೆಟಗೇರಿ ಅಂಜುಮನ್ ಕಮಿಟಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದು ಖುಷಿಯ ವಿಚಾರ ಎಂದಿದ್ದಾರೆ.
ಬೆಟಗೇರಿ ಅಂಜುಮನ್ ಕಮಿಟಿಯಿಂದ ನವ ಜೋಡಿಗಳಿಗೆ ತಾಳಿ, ಕಾಲುಂಗರ, ಬಟ್ಟೆಗಳು ವಿತರಣೆ ಮಾಡಲಾಗಿದೆ. ಕಮಿಟಿ ಅಧ್ಯಕ್ಷ ಪೀರಸಾಬ್ ಕೌತಾಳ ದಂಪತಿ ನವಜೋಡಿಗಳಿಗೆ ತಾಳಿ, ಕಾಲುಂಗರ ನೀಡಿದರು. ಮದುವೆಗೆ ಅಗಮಿಸಿದ 6-7 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 10 ಮುಸ್ಲಿಂ ಜೋಡಿಗಳಿಗೆ ಅವರ ಸಂಪ್ರದಾಯದಂತೆ ಮತ್ತು 26 ಹಿಂದೂ ಜೋಡಿಗಳಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಲಾಗಿದೆ. ಪುಟ್ಟರಾಜ್ ಗವಾಯಿಗಳ‌ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹಾಗೂ ಮುಸ್ಲಿಂ ಧರ್ಮಗುರುಗಳ ಸಾನಿಧ್ಯದಲ್ಲಿ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.
ಧರ್ಮಗಳ ಮಧ್ಯೆ ನಡೆಯುವ ಗಲಾಟೆ, ಗದ್ದಲಗಳ ಮಧ್ಯೆ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ ಗದಗ ನಗರದಲ್ಲಿ ನಡೆದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸವ ದೇಶದಲ್ಲೆಡೆ ಕೋಮು ಸೌಹಾರ್ದತೆ ಸಂದೇಶ ಸಾರಿದೆ.

The post ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ; ಗದಗದಲ್ಲಿ ಕೋಮು ಸೌಹಾರ್ದತೆ ಸಂದೇಶ appeared first on Good News 24x7.

]]>
‘ದಸರಾ ಉದ್ಘಾಟನೆಗೆ ಕುಂಕುಮ ಇಟ್ಟುಕೊಂಡು ಬರಲಿ’.. ಪ್ರತಾಪ್​​​​​ ಸಿಂಹ ಹೇಳಿಕೆ …..! https://www.goodnews24x7.com/let-her-come-to-the-inauguration-of-dussehra-with-saffron-pratap-simhas-statement/ Sat, 30 Aug 2025 05:00:04 +0000 https://www.goodnews24x7.com/?p=6993 ಈ ಬಾರಿಯ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬಾನು ಮುಫ್ತಾಕ್​ ಅವರಿಗೆ ಆಹ್ವಾನ ನೀಡಿರುವ ವಿಚಾರವಾಗಿ ಚರ್ಚೆಗಳು ನಿಲ್ಲುತ್ತಿಲ್ಲ. ಈ ಕುರಿತು ಹೋರಾಟ ಮಾಡುವುದಾಗಿ ಬಿಜೆಪಿ ಘೋಷಿಸಿದೆ. ಈ ಬಾರಿಯ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬಾನು ಮುಫ್ತಾಕ್​ ಅವರಿಗೆ ಆಹ್ವಾನ…

The post ‘ದಸರಾ ಉದ್ಘಾಟನೆಗೆ ಕುಂಕುಮ ಇಟ್ಟುಕೊಂಡು ಬರಲಿ’.. ಪ್ರತಾಪ್​​​​​ ಸಿಂಹ ಹೇಳಿಕೆ …..! appeared first on Good News 24x7.

]]>

ಈ ಬಾರಿಯ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬಾನು ಮುಫ್ತಾಕ್​ ಅವರಿಗೆ ಆಹ್ವಾನ ನೀಡಿರುವ ವಿಚಾರವಾಗಿ ಚರ್ಚೆಗಳು ನಿಲ್ಲುತ್ತಿಲ್ಲ. ಈ ಕುರಿತು ಹೋರಾಟ ಮಾಡುವುದಾಗಿ ಬಿಜೆಪಿ ಘೋಷಿಸಿದೆ.

ಈ ಬಾರಿಯ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬಾನು ಮುಫ್ತಾಕ್​ ಅವರಿಗೆ ಆಹ್ವಾನ ನೀಡಿರುವ ವಿಚಾರವಾಗಿ ಚರ್ಚೆಗಳು ನಿಲ್ಲುತ್ತಿಲ್ಲ. ಈ ಕುರಿತು ಹೋರಾಟ ಮಾಡುವುದಾಗಿ ಬಿಜೆಪಿ ಘೋಷಿಸಿದೆ.

 

ಮತ್ತೊಂದು ಕಡೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಬರೋದಾದ್ರೆ ಹಿಂದೂ ವಿಧಿ ವಿಧಾನದ ಪ್ರಕಾರ ಬನ್ನಿ ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಆಹ್ವಾನಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್​​ ನಡುವೆ ಹೊಂದಾಣಿಕೆ ರಾಜಕೀಯ ಎಂದ ಪ್ರತಾಪ್​ ಸಿಂಹ.. ಹಿರಿಯ ರಾಜಕಾರಣಿಗಳು ಕೆಂಡಾಮಂಡಲ

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕನ್ನಡವನ್ನ ಭುವನೇಶ್ವರಿಯಾಗಿ ನೋಡೋದಕ್ಕೆ ಮುಸಲ್ಮಾನರಿಗೆ ಕಷ್ಟ ಆಗುತ್ತೆ. ಕನ್ನಡವನ್ನ ಭುವನೇಶ್ವರಿಯಾಗಿ ಮಾಡೋ ಮೂಲಕ ದೂರ ಇಟ್ಟಿದ್ದೀರಾ ಅಂತೀರಲ್ಲ ಬಾನು ಮುಸ್ತಾಕ್ ಅವರೇ. ಕಾವೇರಿ ಕೂಡ ದೈವಿ ಸ್ವರೂಪ, ಈ ನೀರಿಂದಾನು ನಿಮ್ಮನ್ನ ಹೊರಗಡೆ ಇಟ್ಟಿದ್ದೇವಾ? ಕಾವೇರಿ ನೀರು ಕುಡಿಯುವಾಗ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ? ಇಫ್ತಿಯಾರ್ ಕೂಟಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೋಗಲಿ ಅವರಿಗೆ ಬಿರಿಯಾನಿ ಹಾಕುವ ಮೊದಲು ತಲೆಗೆ ಟೋಪಿ ಹಾಕಿತ್ತೀರಾ. ಮಂಡಿ ಊರಿಸಿ, ಬೊಗಸೆ ಇಟ್ಟು ಪ್ರಾರ್ಥನೆ ಮಾಡಿಸ್ತೀರಿ. ಮುಸ್ತಾಕ್ ಅವರೇ ದಸರಾ ಉದ್ಘಾಟನೆ ಬರೋದಾದ್ರೆ ಹಿಂದೂ ವಿಧಿ ವಿಧಾನದ ಪ್ರಕಾರ ಬನ್ನ. ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಮಲ್ಲಿಗೆ ಮುಡಿದು ಬಂದು ಉದ್ಘಾಟನೆ ಮಾಡಿ ನಮಗೆ ಏನು ತೊಂದರೆ ಇಲ್ಲಾ ಎಂದಿದ್ದಾರೆ.

The post ‘ದಸರಾ ಉದ್ಘಾಟನೆಗೆ ಕುಂಕುಮ ಇಟ್ಟುಕೊಂಡು ಬರಲಿ’.. ಪ್ರತಾಪ್​​​​​ ಸಿಂಹ ಹೇಳಿಕೆ …..! appeared first on Good News 24x7.

]]>
2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..! https://www.goodnews24x7.com/2025%e0%b2%a8%e0%b3%87-%e0%b2%87%e0%b2%b8%e0%b2%b5%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%a6%e0%b3%81%e0%b2%b5%e0%b3%86%e0%b2%97%e0%b3%86-%e0%b2%af%e0%b2%be%e0%b2%b5/ Wed, 08 Jan 2025 09:14:04 +0000 https://www.goodnews24x7.com/?p=1641 ಹಿಂದೂ ಪಂಚಾಂಗದ ಪ್ರಕಾರ 2025ನೇ ಇಸವಿಯಲ್ಲಿ ಮದುವೆಗೆ ಒಟ್ಟು 76 ಶುಭ ಮುಹೂರ್ತಗಳಿವೆ. ಜನವರಿ 14 ರಂದು ಸೂರ್ಯ ಮಕರ ಸಂಕ್ರಾಂತಿಯ ನಂತರ ಶುಭ ಕಾರ್ಯಗಳು ಆರಂಭವಾಗುತ್ತವೆ. ಹಿಂದೂ ಧರ್ಮದಲ್ಲಿ ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಿಂದೂ…

The post 2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..! appeared first on Good News 24x7.

]]>

ಹಿಂದೂ ಪಂಚಾಂಗದ ಪ್ರಕಾರ 2025ನೇ ಇಸವಿಯಲ್ಲಿ ಮದುವೆಗೆ ಒಟ್ಟು 76 ಶುಭ ಮುಹೂರ್ತಗಳಿವೆ. ಜನವರಿ 14 ರಂದು ಸೂರ್ಯ ಮಕರ ಸಂಕ್ರಾಂತಿಯ ನಂತರ ಶುಭ ಕಾರ್ಯಗಳು ಆರಂಭವಾಗುತ್ತವೆ.
ಹಿಂದೂ ಧರ್ಮದಲ್ಲಿ ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮಂಗಳಕರ ಸಮಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಪರಿಗಣಿಸಲಾಗಿದೆ. ಈ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ತಕ್ಷಣ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಈ ವರ್ಷ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
2025 ರಲ್ಲಿ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ಬಳಿಕ ಮತ್ತೆ ಮದುವೆ ಸೇರಿದಂತೆ ಎಲ್ಲ ಶುಭ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. 2025 ರಲ್ಲಿ ಮದುವೆಗೆ 76 ಮಂಗಳಕರ ಸಮಯಗಳಿವೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

• ಜನವರಿ 2025 ರಲ್ಲಿ ಮದುವೆಗೆ ಶುಭ ಸಮಯಗಳು 16, 17, 18, 19, 20, 21, 23, 24, 26 ಮತ್ತು 27.
• ಫೆಬ್ರವರಿ ತಿಂಗಳಲ್ಲಿ ಮದುವೆಗೆ ಶುಭ ಸಮಯಗಳು 2, 3, 6, 7, 12, 13, 14, 15, 16, 18, 19, 21, 23 ಮತ್ತು 25.
• ಮಾರ್ಚ್ ತಿಂಗಳಲ್ಲಿ ಮದುವೆಗೆ ಮಂಗಳಕರ ಸಮಯಗಳು 1 ನೇ, 2 ನೇ, 5 ನೇ, 6 ನೇ, 7 ನೇ ಮತ್ತು 12.
• ಏಪ್ರಿಲ್ ತಿಂಗಳಲ್ಲಿ ಮದುವೆಗೆ ಶುಭ ಸಮಯಗಳು 14, 16, 18, 19, 20, 21, 29 ಮತ್ತು 30.
• ಮೇ ತಿಂಗಳಲ್ಲಿ ಮದುವೆಗೆ ಮಂಗಳಕರ ಸಮಯಗಳು 5, 6, 8, 9, 14, 16, 17, 18, 22, 23, 27 ಮತ್ತು 28.
• ಜೂನ್ ತಿಂಗಳಲ್ಲಿ ಮದುವೆಗೆ ಮಂಗಳಕರ ಸಮಯಗಳು 2 ನೇ, 3 ನೇ ಮತ್ತು 4 ನೇ ದಿನಗಳಾಗಿವೆ.
• ನವೆಂಬರ್ ತಿಂಗಳಿನಲ್ಲಿ ಮದುವೆಗೆ ಶುಭ ಸಮಯಗಳು 2, 3, 8, 12, 15, 16, 22, 23 ಮತ್ತು 25
• ಡಿಸೆಂಬರ್ ತಿಂಗಳ ಮದುವೆಗೆ ಶುಭ ಸಮಯಗಳು 4, 5 ಮತ್ತು 6 ನೇ ದಿನಗಳಾಗಿವೆ.
2025 ರಲ್ಲಿ ಈ ತಿಂಗಳಲ್ಲಿ ಮದುವೆಗೆ ಶುಭ ಮುಹೂರ್ತವಿಲ್ಲ
2025 ರಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯಾವುದೇ ಶುಭ ಮಹೂರ್ತವಿಲ್ಲ. ಆದ್ದರಿಂದ ಈ ನಾಲ್ಕು ತಿಂಗಳಲ್ಲಿ ಮದುವೆಯ ಸಂಭ್ರಮ ಇರುವುದಿಲ್ಲ. ಏಕೆಂದರೆ ಜುಲೈ 6 ರಂದು ಶ್ರೀ ಹರಿವಿಷ್ಣು ಯೋಗ ನಿದ್ರಿಸಲಿದ್ದಾನೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಚಾತುರ್ಮಾಸದಲ್ಲಿ ಭಗವಾನ್ ಶಿವನ ಕುಟುಂಬವನ್ನು ಹೊರತುಪಡಿಸಿ, ವಿಷ್ಣು ಸೇರಿದಂತೆ ಎಲ್ಲ ದೇವರುಗಳು ಮತ್ತು ದೇವತೆಗಳು ಯೋಗ-ನಿದ್ರೆಗೆ ಹೋಗುತ್ತಾರೆ. ಶ್ರೀ ವಿಷ್ಣುವು ಅಕ್ಟೋಬರ್ 31 ರವರೆಗೆ ಯೋಗ ನಿದ್ರೆ ಇರುತ್ತಾನೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳಿಗೆ ನಿಷೇಧವಿರುತ್ತದೆ.

The post 2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..! appeared first on Good News 24x7.

]]>