history Archives - Good News 24x7 https://www.goodnews24x7.com/tag/history/ Kannada Thu, 28 Aug 2025 06:59:37 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg history Archives - Good News 24x7 https://www.goodnews24x7.com/tag/history/ 32 32 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2025: ಭಾರತದ ತಂಡದ ನಾಯಕನಾಗಿ ನೀರಜ್ ಚೋಪ್ರಾ. https://www.goodnews24x7.com/world-athletics-championships-2025-neeraj-chopra-to-lead-indias-team/ Thu, 28 Aug 2025 06:59:37 +0000 https://www.goodnews24x7.com/?p=6886 ಬೆಂಗಳೂರು: ಸೆಪ್ಟೆಂಬರ್ 13ರಿಂದ 21ರವರೆಗೆ ಟೋಕಿಯೋದಲ್ಲಿ ನಡೆಯಲಿರುವ 2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ 19 ಸದಸ್ಯರ ಭಾರತೀಯ ತಂಡವನ್ನು Athletics Federation of India (AFI) ಪ್ರಕಟಿಸಿದೆ. ಹಾಲಿ ಜಾವೆಲಿನ್ ಚಾಂಪಿಯನ್ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ…

The post ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2025: ಭಾರತದ ತಂಡದ ನಾಯಕನಾಗಿ ನೀರಜ್ ಚೋಪ್ರಾ. appeared first on Good News 24x7.

]]>

ಬೆಂಗಳೂರು: ಸೆಪ್ಟೆಂಬರ್ 13ರಿಂದ 21ರವರೆಗೆ ಟೋಕಿಯೋದಲ್ಲಿ ನಡೆಯಲಿರುವ 2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ 19 ಸದಸ್ಯರ ಭಾರತೀಯ ತಂಡವನ್ನು Athletics Federation of India (AFI) ಪ್ರಕಟಿಸಿದೆ. ಹಾಲಿ ಜಾವೆಲಿನ್ ಚಾಂಪಿಯನ್ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಂಡವನ್ನು ಮುನ್ನಡೆಸಲಿದ್ದಾರೆ.

ಈ ತಂಡದಲ್ಲಿ 13 ಪುರುಷರು ಮತ್ತು 6 ಮಹಿಳೆಯರು ಸೇರಿದ್ದಾರೆ. ಜಗತ್ತಿನ ಅಗ್ರ ಶ್ರೇಣಿಯ ಅಥ್ಲೆಟ್ಸ್‌ಗಳು ಪಾಲ್ಗೊಳ್ಳುವ ಈ ಪ್ರತಿಷ್ಟಿತ ಕೂಟವನ್ನು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸುತ್ತಿದೆ.

ಚೋಪ್ರಾದಿಂದ ಮತ್ತೊಂದು ಚಿನ್ನದ ನಿರೀಕ್ಷೆ

2023ರಲ್ಲಿ ಬುಡಾಪೆಸ್ಟ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದ್ದ ಚೋಪ್ರಾ, ಪುರುಷರ ಜಾವೆಲಿನ್ ಥ್ರೋನಲ್ಲಿ ಭಾರತದ ಭರವಸೆಯ ತಾರೆ. ಈ ಬಾರಿ ಅವರು ವೈಲ್ಡ್ ಕಾರ್ಡ್ ಮುಖಾಂತರ ಅರ್ಹತೆ ಪಡೆದಿದ್ದಾರೆ. ಅವರ ಜೊತೆಗೆ ಸಚಿನ್ ಯಾದವ್ ಮತ್ತು ಯಶ್ವೀರ್ ಸಿಂಗ್ ಕೂಡ ಶ್ರೇಯಾಂಕದ ಆಧಾರದ ಮೇಲೆ ಸ್ಪರ್ಧೆಗಿಳಿಯಲಿದ್ದಾರೆ.

ಇತಿಹಾಸ ನಿರ್ಮಿಸಲು ಅನಿಮೇಶ್ ಕುಜುರ್ ಸಜ್ಜು

ಒಡಿಶಾದ ಅನಿಮೇಶ್ ಕುಜುರ್ — ಪುರುಷರ 200 ಮೀಟರ್ ಓಟಕ್ಕೆ ಅರ್ಹತೆ ಪಡೆದು — ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಪುರುಷ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಮುಖ ಹೆಸರುಗಳು ಹಾಗೂ ಗಾಯಗಳ ಸಮಸ್ಯೆ

ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಶ್ರೇಯಾಂಕದ ಮೂಲಕ ಅರ್ಹತೆ ಪಡೆದಿದ್ದು, ಅವರಲ್ಲಿ ಮುರಳಿ ಶ್ರೀಶಂಕರ್ (ಲಾಂಗ್ ಜಂಪ್), ಅಬ್ದುಲ್ಲಾ ಅಬೂಬಕರ್, ಪ್ರವೀಣ್ ಚಿತ್ರಾವೆಲ್ (ಟ್ರಿಪಲ್ ಜಂಪ್) ಮುಂತಾದವರು ಇದ್ದಾರೆ.

ಅವಿನಾಶ್ ಸಬ್ಲೆ (3000 ಮೀ. ಸ್ಟೀಪಲ್‌ಚೇಸ್) ಪ್ರವೇಶ ಮಾನದಂಡಗಳ ಆಧಾರದ ಮೇಲೆ ಅರ್ಹತೆ ಪಡೆದರೂ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇದೇ ರೀತಿ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಅರ್ಹತೆ ಪಡೆದ ನಂದಿನಿ ಅಗಸರ ಕೂಡ ಗಾಯದ ಸಮಸ್ಯೆಯಿಂದ ಭಾಗವಹಿಸಲಾರೆ ಎನ್ನಲಾಗಿದೆ.

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ಭಾರತದಿಂದ ಆಯ್ಕೆಯಾದ ಆಟಗಾರರ ಪಟ್ಟಿ

ಪುರುಷರು

ನೀರಜ್ ಚೋಪ್ರಾ – ಜಾವೆಲಿನ್ ಥ್ರೋ (ವೈಲ್ಡ್ ಕಾರ್ಡ್)

ಸಚಿನ್ ಯಾದವ್ – ಜಾವೆಲಿನ್ ಥ್ರೋ (ಶ್ರೇಯಾಂಕ)

ಯಶ್ವೀರ್ ಸಿಂಗ್ – ಜಾವೆಲಿನ್ ಥ್ರೋ (ಶ್ರೇಯಾಂಕ)

ಪ್ರವೀಣ್ ಚಿತ್ರಾವೆಲ್ – ಟ್ರಿಪಲ್ ಜಂಪ್ (ಶ್ರೇಯಾಂಕ)

ಅಬ್ದುಲ್ಲಾ ಅಬೂಬಕರ್ – ಟ್ರಿಪಲ್ ಜಂಪ್ (ಶ್ರೇಯಾಂಕ)

ಮುರಳಿ ಶ್ರೀಶಂಕರ್ – ಲಾಂಗ್ ಜಂಪ್ (ಶ್ರೇಯಾಂಕ)

ಸರ್ವೇಶ್ ಕುಶಾರೆ – ಹೈ ಜಂಪ್ (ಶ್ರೇಯಾಂಕ)

ಅನಿಮೇಶ್ ಕುಜೂರ್ – 200 ಮೀ. ಓಟ (ಶ್ರೇಯಾಂಕ)

ಗುಲ್ವೀರ್ ಸಿಂಗ್ – 5000 ಮೀ. ಓಟ (ಪ್ರವೇಶ ಮಾನದಂಡ)

ಸರ್ವಿನ್ ಸೆಬಾಸ್ಟಿಯನ್ – 20 ಕಿ.ಮೀ. ಓಟದ ನಡಿಗೆ (ಶ್ರೇಯಾಂಕ)

ಆಕಾಶದೀಪ್ ಸಿಂಗ್ – 20 ಕಿ.ಮೀ. ಓಟದ ನಡಿಗೆ (ಶ್ರೇಯಾಂಕ)

ರಾಮ್ ಬಾಬೂ – 35 ಕಿ.ಮೀ. ಓಟದ ನಡಿಗೆ (ಶ್ರೇಯಾಂಕ)

ಅವಿನಾಶ್ ಸೇಬಲ್* – 3000 ಮೀ. ಸ್ಟೀಪಲ್‌ಚೇಸ್ (ಪ್ರವೇಶ ಮಾನದಂಡ; ಗಾಯಾಳು)

ಮಹಿಳೆಯರು

ಪರುಲ್ ಚೌಧರಿ – 3000 ಮೀ. ಸ್ಟೀಪಲ್‌ಚೇಸ್ (ಪ್ರವೇಶ ಮಾನದಂಡ)

ಅಂಕಿತ ಧ್ಯಾನಿ – 3000 ಮೀ. ಸ್ಟೀಪಲ್‌ಚೇಸ್ (ಶ್ರೇಯಾಂಕ)

ಪೂಜಾ – 1500 ಮೀ. ಓಟ (ಶ್ರೇಯಾಂಕ)

ಅನ್ನು ರಾಣಿ – ಜಾವೆಲಿನ್ ಥ್ರೋ (ಶ್ರೇಯಾಂಕ)

ಪ್ರಿಯಾಂಕಾ ಗೋಸ್ವಾಮಿ – 35 ಕಿ.ಮೀ. ಓಟದ ನಡಿಗೆ (ಶ್ರೇಯಾಂಕ)

ನಂದಿನಿ ಅಗಸರ* – ಹೆಪ್ಟಾಥ್ಲಾನ್ (ಏರಿಯಾ ಚಾಂಪಿಯನ್; ಗಾಯಾಳು)

The post ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2025: ಭಾರತದ ತಂಡದ ನಾಯಕನಾಗಿ ನೀರಜ್ ಚೋಪ್ರಾ. appeared first on Good News 24x7.

]]>
ಪ್ರೀ ಬುಕ್ಕಿಂಗ್​ ನಲ್ಲಿ ದಾಖಲೆ ಮಾಡಿದ ರಜನಿ​ಯ ”ಕೂಲಿ” ! ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. https://www.goodnews24x7.com/rajinikanths-coolie-sets-a-record-in-pre-booking-tomorrow-is-a-festive-celebration-for-thalaiva-fans/ Wed, 13 Aug 2025 10:04:58 +0000 https://www.goodnews24x7.com/?p=6030 ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳು ಎಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆದ್ರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಆಗುತ್ತೆ. ಅಷ್ಟರ ಮಟ್ಟಿಗೆ ಥಿಯೇಟರ್​ಗಳಲ್ಲಿ ಅವರ ಅಭಿಮಾನಿಗಳಂತೂ…

The post ಪ್ರೀ ಬುಕ್ಕಿಂಗ್​ ನಲ್ಲಿ ದಾಖಲೆ ಮಾಡಿದ ರಜನಿ​ಯ ”ಕೂಲಿ” ! ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. appeared first on Good News 24x7.

]]>

ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳು ಎಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆದ್ರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಆಗುತ್ತೆ. ಅಷ್ಟರ ಮಟ್ಟಿಗೆ ಥಿಯೇಟರ್​ಗಳಲ್ಲಿ ಅವರ ಅಭಿಮಾನಿಗಳಂತೂ ರಜನಿಯವರ ಸ್ಟೈಲ್, ಡೈಲಾಗ್​ಗೆ ಕುಣಿದು ಕುಪ್ಪಳಿಸುತ್ತಿರುತ್ತಾರೆ.

ಇದಕ್ಕೆ ಸಾಕ್ಷಿ ಎಂಬಂತೆ ನಾಳೆ ರಜನಿಕಾಂತ್ ನಟನೆಯಲ್ಲಿ ಬಹುನಿರೀಕ್ಷಿತ ಕೂಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಸ್ಟಾರ್​ ಹೀರೋನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ. ಹೌದು, ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಆಗಸ್ಟ್​ 14ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ.

ರಜನಿಕಾಂತ್​ ನಾಯಕನಾಗಿ ದಕ್ಷಿಣ ಹಾಗೂ ಉತ್ತರ ಭಾರತದ ಕಲಾವಿದರು ಅಭಿನಯಿಸಿರೋ ಕೂಲಿ ಸಿನಿಮಾ ತೆರೆಗೆ ಅಪ್ಪಳಿಸೋದಕ್ಕೆ ಸಜ್ಜಾಗಿದೆ. ಸದ್ಯ ಎಲ್ಲೆಡೆ ಕೂಲಿ ಮೇನಿಯಾ ಕಂಡು ಬಂದಿದೆ. ವಿಶೇಷ ಏನೆಂದರೆ ಕೂಲಿ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ನಟ ಉಪೇಂದ್ರ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಟಿಸಿದ್ದಾರೆ.

ಈಗಾಗಲೇ ಚೆನ್ನೈನಲ್ಲಿ ಫಸ್ಟ್​ ಡೇ ಫಸ್ಟ್​ ಶೋಗಳು ಕಂಪ್ಲೀಟ್ ಸೋಲ್ಡ್​ ಔಟ್​ ಆಗಿವೆ. ಮಲ್ಟಿಪ್ಲೆಕ್ಸ್​​ವೊಂದರಲ್ಲೇ ಮೊದಲ ದಿನ ಒಟ್ಟು 56 ಶೋಗಳನ್ನು ಇಡಲಾಗಿದ್ದು, ಅಂದರೆ ಅಷ್ಟು ಶೋಗಳ ಟಿಕೆಟ್​ ಮಾರಾಟವಾಗಿದೆ. ಇನ್ನೂ, ತಮಿಳುನಾಡು ಸರ್ಕಾರ ಥೇಟರ್​ಗಳಲ್ಲಿ ಗರಿಷ್ಠ 150ರೂ, ಮಲ್ಟಿಪ್ಲೆಕ್ಸ್​ಗಳಲ್ಲಿ 160ರೂ ಹಾಗೂ ಐಮ್ಯಾಕ್ಸ್​ಗಳಲ್ಲಿ 480 ರೂ ಟಿಕೆಟ್​​ ದರವನ್ನು ನಿಗದಿ ಪಡಿಸಲಾಗಿದೆ.

ಅಮೆರಿಕಾದಲ್ಲಿ ಕೂಲಿ ಪ್ರೀ ಬುಕ್ಕಿಂಗ್​ ದಾಖಲೆ
ತಮಿಳು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಕೂಲಿ ಸಿನಿಮಾ ಪ್ರಿ ಬುಕ್ಕಿಂಗ್​ನಿಂದಲೇ 2 ಮಿಲಿಯನ್​ ಡಾಲರ್​ ಅಂದರೆ 17.55 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದನ್ನೂ ನಿರ್ಮಾಣ ಸಂಸ್ಥೆ ಸನ್​ ಪಿಕ್ಚರ್ಸ್​ ಅಧಿಕೃತವಾಗಿ ಘೋಷಣೆ ಮಾಡಿದೆ.

 

The post ಪ್ರೀ ಬುಕ್ಕಿಂಗ್​ ನಲ್ಲಿ ದಾಖಲೆ ಮಾಡಿದ ರಜನಿ​ಯ ”ಕೂಲಿ” ! ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. appeared first on Good News 24x7.

]]>
4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ KRSಗೆ ಬಾಗಿನ ಸಮರ್ಪಣೆ.. https://www.goodnews24x7.com/cm-siddaramaiah-dedicates-a-plot-to-krs-for-the-4th-time/ Mon, 30 Jun 2025 09:48:30 +0000 https://www.goodnews24x7.com/?p=4855 ಮಂಡ್ಯ: 93 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್ಎಸ್ (ಕೃಷ್ಣರಾಜಸಾಗರ) ಡ್ಯಾಂ ಸಂಪೂರ್ಣ ಭರ್ತಿ ಆಗಿದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಾಗಿನ ಸಮರ್ಪಣೆ ಮಾಡಿದರು. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚೆಲುವರಾಯಸ್ವಾಮಿ…

The post 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ KRSಗೆ ಬಾಗಿನ ಸಮರ್ಪಣೆ.. appeared first on Good News 24x7.

]]>

ಮಂಡ್ಯ: 93 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್ಎಸ್ (ಕೃಷ್ಣರಾಜಸಾಗರ) ಡ್ಯಾಂ ಸಂಪೂರ್ಣ ಭರ್ತಿ ಆಗಿದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಾಗಿನ ಸಮರ್ಪಣೆ ಮಾಡಿದರು. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚೆಲುವರಾಯಸ್ವಾಮಿ ಹಾಗೂ ಹೆಚ್.ಸಿ ಮಹದೇವಪ್ಪ ಸೇರಿ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಸಿಎಂ ಸಿದ್ದರಾಮಯ್ಯ ಅವರು ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದರು. ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯಗಳು ನೆರವೇರಿದವು. ಕೆಆರ್ಎಸ್ ಜಲಾಶಯಕ್ಕೆ 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿ ಖುಷಿ ಪಟ್ಟರು. ನಂತರ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಇದೇ ವೇಳೆ ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ತಾಯಿ ಕಾವೇರಿ ಬಳಿ ಪ್ರಾರ್ಥನೆ ಮಾಡಿದರು.

ದಾಖಲೆ ಬರೆದ ಸಿಎಂ
ಕೆಆರ್ಎಸ್ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾದರೂ ಈ ಹಿಂದಿನ ಯಾವ ಮುಖ್ಯಮಂತ್ರಿ ಕೂಡ ಜೂನ್ನಲ್ಲಿ ಬಾಗಿನ ಅರ್ಪಿಸಿರಲಿಲ್ಲ. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ಜೂನ್ನಲ್ಲೇ ಕೆಆರ್ಎಸ್ಗೆ ಬಾಗಿನ ಸಮರ್ಪಣೆ ಮಾಡಿ ನೂತನ ದಾಖಲೆ ಬರೆದಿದ್ದಾರೆ.

ಕೆಆರ್ಎಸ್ ಬಾಗಿನ ಸಮರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯವನ್ನು ಬಣ್ಣ ಬಣ್ಣದ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಅಣೆಕಟ್ಟೆ ಗೋಡೆಗೆ ಸುಣ್ಣ, ಬಣ್ಣ ಬಳೆದಿದ್ದು ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚಲುವರಾಯಸ್ವಾಮಿ, ಹೆಚ್. ಸಿ ಮಹದೇವಪ್ಪ, ಕೆ ವೆಂಕಟೇಶ್, ಎನ್.ಎಸ್ ಬೋಸರಾಜು ಹಾಗೂ ಸ್ಥಳೀಯ ಶಾಸಕರು ಇದ್ದರು.

The post 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ KRSಗೆ ಬಾಗಿನ ಸಮರ್ಪಣೆ.. appeared first on Good News 24x7.

]]>
ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ! https://www.goodnews24x7.com/cm-siddaramaiah-to-set-new-record-by-offering-water-to-krs-reservoir/ Mon, 30 Jun 2025 05:09:26 +0000 https://www.goodnews24x7.com/?p=4824 ಮಂಡ್ಯ: ಇಂದು ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯ ಶೃಂಗಾರಗೊಂಡಿದೆ. ಕನ್ನಂಬಾಡಿ ಕಟ್ಟೆ ಹಸಿರು ತಳಿರು-ತೋರಣ ಹೂಗಳಿಂದ ಹಾಗೂ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಸೆಳೆಯುವಂತ್ತಿದೆ. ಕೆಆರ್ಎಸ್ ಜಲಾಶಯ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ…

The post ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ! appeared first on Good News 24x7.

]]>

ಮಂಡ್ಯ: ಇಂದು ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯ ಶೃಂಗಾರಗೊಂಡಿದೆ. ಕನ್ನಂಬಾಡಿ ಕಟ್ಟೆ ಹಸಿರು ತಳಿರು-ತೋರಣ ಹೂಗಳಿಂದ ಹಾಗೂ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಸೆಳೆಯುವಂತ್ತಿದೆ.


ಕೆಆರ್ಎಸ್ ಜಲಾಶಯ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿ ಆಗುವ ಮೂಲಕ 93 ವರ್ಷಗಳ ಇತಿಹಾಸದಲ್ಲಿ ಐತಿಹಾಸಕ ದಾಖಲೆ ಬರೆದಿದೆ. ಡ್ಯಾಂ ನಿರ್ಮಾಣ ಆದಾಗಿನಿಂದ ಜೂನ್ ತಿಂಗಳಲ್ಲಿ ಇದುವರೆಗೂ ತುಂಬಿರಲಿಲ್ಲ. ಆದರೆ 93 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಈಗ ಕೆಆರ್ಎಸ್ ಭರ್ತಿಯಾಗಿದೆ. 124.80 ಅಡಿಗಳ ಗರಿಷ್ಠ ಮಟ್ಟ ಸಂಪೂರ್ಣ ಭರ್ತಿ ಆಗಿದ್ದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.

ಈ ಹಿನ್ನೆಲೆಯಲ್ಲಿ ಇಂದು 11.30ಕ್ಕೆ ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಣೆ ಮಾಡಲಿದ್ದಾರೆ. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯ ನಡೆಯಲಿದೆ. ಸಿದ್ದರಾಮಯ್ಯಗೆ ನಾಲ್ಕನೇ ಬಾರಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ದೊರಕಿದೆ. ಇದಾದ ಬಳಿಕ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ.

ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ

ಸಾಂದರ್ಭಿಕ ಚಿತ್ರ
ಕೆಆರ್ಎಸ್ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ ಬಾಗಿನ ಅರ್ಪಿಸುತ್ತಿರುವ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಆಗಲಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಜೂನ್ನಲ್ಲಿ ಯಾರು ಬಾಗಿನ ಸಲ್ಲಿಸಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನೂತನ ದಾಖಲೆ ಬರೆಯಲಿದ್ದಾರೆ.

The post ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ! appeared first on Good News 24x7.

]]>