HMT watch Archives - Good News 24x7 https://www.goodnews24x7.com/tag/hmt-watch/ Kannada Thu, 26 Jun 2025 11:27:56 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg HMT watch Archives - Good News 24x7 https://www.goodnews24x7.com/tag/hmt-watch/ 32 32 HMT ವಾಚ್‌ನಲ್ಲಿ ಕನ್ನಡದ ಕಲರವ ,ಈ ವಾಚ್ ನಲ್ಲಿದೆ ಸ್ಪೆಷಲ್ ಲೋಗೋ…. https://www.goodnews24x7.com/hmt-%e0%b2%b5%e0%b2%be%e0%b2%9a%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6-%e0%b2%95%e0%b2%b2%e0%b2%b0%e0%b2%b5-%e0%b2%88/ Thu, 26 Jun 2025 11:27:56 +0000 https://www.goodnews24x7.com/?p=4669 ಸಾಮಾನ್ಯವಾಗಿ ಕೈಗಡಿಯಾರ ಖರೀದಿಸುವಾಗ ಯಾವ ಕಂಪೆನಿಯದ್ದು, ಇದರ ಎಷ್ಟು ಬೆಲೆ ಎಂದು ನೋಡುತ್ತೀರಿ. ಆದರೆ ಈ ರೀತಿಯ ಆಕರ್ಷಕ ವಾಚ್ ನೀವು ನೋಡಿರಲು ಸಾಧ್ಯವೇ ಇಲ್ಲ. ವಿಭಿನ್ನ ಹಾಗೂ ಆಕರ್ಷಕವಾದ ಕೈಗಡಿಯಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವಾಚ್…

The post HMT ವಾಚ್‌ನಲ್ಲಿ ಕನ್ನಡದ ಕಲರವ ,ಈ ವಾಚ್ ನಲ್ಲಿದೆ ಸ್ಪೆಷಲ್ ಲೋಗೋ…. appeared first on Good News 24x7.

]]>

ಸಾಮಾನ್ಯವಾಗಿ ಕೈಗಡಿಯಾರ ಖರೀದಿಸುವಾಗ ಯಾವ ಕಂಪೆನಿಯದ್ದು, ಇದರ ಎಷ್ಟು ಬೆಲೆ ಎಂದು ನೋಡುತ್ತೀರಿ. ಆದರೆ ಈ ರೀತಿಯ ಆಕರ್ಷಕ ವಾಚ್ ನೀವು ನೋಡಿರಲು ಸಾಧ್ಯವೇ ಇಲ್ಲ. ವಿಭಿನ್ನ ಹಾಗೂ ಆಕರ್ಷಕವಾದ ಕೈಗಡಿಯಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವಾಚ್ ಕನ್ನಡಿಗರನ್ನು ಆಕರ್ಷಿಸಲು ಮುಖ್ಯ ಕಾರಣವೇ ಕನ್ನಡ ಅಂಕಿಗಳು ಹಾಗೂ ಕರ್ನಾಟಕದ ಲಾಂಛನ ಗಂಡಭೇರುಂಡ . ಹೌದು, ಕನ್ನಡಿಗರೊಬ್ಬರು ಕೈಗಡಿಯಾರದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೆಲವರಿಗೆ ವಾಚ್ ಖರೀದಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ದುಬಾರಿ ಬೆಲೆಯ ಹಾಗೂ ಯಾರ ಬಳಿಯೂ ಇರದ ವಾಚ್ ಕಲೆಕ್ಷನ್ ಇಟ್ಟುಕೊಂಡಿರುತ್ತಾರೆ. ಯಾವುದೇ ಕೈಗಡಿಯಾರವಿರಲಿ, ಅದರಲ್ಲಿ ಕಂಪೆನಿಯ ಹೆಸರು ಹಾಗೂ 1,2, 3 ಹೀಗೆ ಹನ್ನೆರಡರವರೆಗೂ ಸಂಖ್ಯೆಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಹೆಚ್‌ಎಂಟಿ ಕಂಪೆನಿಯ ಈ ವಾಚ್ ಮಾತ್ರ ವಿಭಿನ್ನತೆಯಿಂದಲೇ ಕನ್ನಡಿಗರ ಗಮನ ಸೆಳೆದಿದೆ. ಹೌದು ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವಾಗಿರುವ ಗಂಡಭೇರುಂಡ ಹಾಗೂ ಕನ್ನಡ ಅಂಕಿಗಳಿರುವುದೇ ಈ ಕೈಗಡಿಯಾರದ ವಿಶೇಷತೆಯಾಗಿದ್ದು, ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕೈಗಡಿಯಾರದ ಪೋಟೋ ಕಂಡ ನೆಟ್ಟಿಗರು ಇದು ನಮ್ಮ ಕನ್ನಡದ ಗುರುತಿನ ಪ್ರತೀಕ ಎಂದು ಕಾಮೆಂಟ್ ಮಾಡಿದ್ದಾರೆ.

The post HMT ವಾಚ್‌ನಲ್ಲಿ ಕನ್ನಡದ ಕಲರವ ,ಈ ವಾಚ್ ನಲ್ಲಿದೆ ಸ್ಪೆಷಲ್ ಲೋಗೋ…. appeared first on Good News 24x7.

]]>