Hubli Archives - Good News 24x7 https://www.goodnews24x7.com/tag/hubli/ Kannada Tue, 19 Aug 2025 06:07:02 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Hubli Archives - Good News 24x7 https://www.goodnews24x7.com/tag/hubli/ 32 32 ವಿಶ್ವ ದಾಖಲೆಯಾದ ‘ಶಕ್ತಿ’! https://www.goodnews24x7.com/world-record-shakti/ Tue, 19 Aug 2025 06:07:02 +0000 https://www.goodnews24x7.com/?p=6388 ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಒಂದಾದ ಶಕ್ತಿ ಯೋಜನೆ ‘ಗೋಲ್ಡನ್ ಬುಕ್…

The post ವಿಶ್ವ ದಾಖಲೆಯಾದ ‘ಶಕ್ತಿ’! appeared first on Good News 24x7.

]]>

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಒಂದಾದ ಶಕ್ತಿ ಯೋಜನೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ. 2023ರ ಜೂನ್ 11 ರಿಂದ 2025 ಜುಲೈ 25ರ ಅವಧಿಯಲ್ಲಿ ನಾಲ್ಕೂ ನಿಗಮದ ಸಾರಿಗೆ ಬಸ್‌ಗಳಲ್ಲಿ

ಮಹಿಳೆಯರು (500 ಕೋಟಿ) ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. ಈ ಕಾರಣ ದಿಂದ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಶಕ್ತಿ ಯೋಜನೆ ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರು ವುದು ಅತೀವ ಸಂತಸ ಮತ್ತು ಹೆಮ್ಮೆಯ ಕ್ಷಣ ವಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು Golden Book of World Record ನಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ. Beyond Free Rides ಎಂಬ ಹೆಸರಿನಲ್ಲಿ Sustainable Mobility Network ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ಅಧ್ಯಯನ ನಡೆಸಿತು. ಬೆಂಗಳೂರಿನಲ್ಲಿ ಶೇ.23 ರಷ್ಟು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21 ರಷ್ಟು ಹೆಚ್ಚು ಮಹಿಳಾ ಉದ್ಯೋಗಿಗಳು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

The post ವಿಶ್ವ ದಾಖಲೆಯಾದ ‘ಶಕ್ತಿ’! appeared first on Good News 24x7.

]]>
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ. https://www.goodnews24x7.com/%e0%b2%b0%e0%b2%be%e0%b2%9c%e0%b3%80%e0%b2%a8%e0%b2%be%e0%b2%ae%e0%b3%86-%e0%b2%a8%e0%b2%bf%e0%b2%b0%e0%b3%8d%e0%b2%a7%e0%b2%be%e0%b2%b0%e0%b2%a6%e0%b2%bf%e0%b2%82%e0%b2%a6-%e0%b2%b9%e0%b2%bf%e0%b2%82/ Tue, 25 Mar 2025 11:04:52 +0000 https://www.goodnews24x7.com/?p=2881 ಹುಬ್ಬಳ್ಳಿ :- ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಅವರು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ…

The post ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ. appeared first on Good News 24x7.

]]>

ಹುಬ್ಬಳ್ಳಿ :- ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಅವರು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಹೊರಟ್ಟಿ, ರಾಜೀನಾಮೆ ಸುದ್ದಿ ಹರಿದಾಡಿದ ಬಳಿಕ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ. 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ(ರಾಜೀನಾಮೆ) ಅಲ್ಲಿಗೆ ಕೈ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅನ್ ಸೈನಡ್ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ . 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ ಅಲ್ಲಿಗೆ ಕೈ ಬಿಟ್ಟಿದ್ದೇನೆ. ಬೆಂಗಳೂರಲ್ಲಿ ಸಭೆ ಮಾಡೋದಾಗಿ ಅಂದು ಕೊಂಡಿದ್ದೇವೆ. ಎಲ್ಲರೂ ಸಹ ನೀವೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂತು . ನಮ್ಮ ಶಾಸನ ಸಭೆ ಸದಸ್ಯರು ನೋಡೋಣ ರಾಜೀನಾಮೆ ಬೇಡ ಎಂದಿದ್ದಾರೆ. ಪುಟ್ಟಣ್ಣ ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಅಂದ್ರು. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದಕ್ಕೆ ನಾನು ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದರು.

ಈ ಹಿಂದೆ ಇಂತಹ ಘಟನೆ ಆಗಿಲ್ಲ. ಮಾರ್ಚ್ 19, 20, 21ಕ್ಕೆ ಸದನ ಮುಂದುವರೆಸಲಾಗದಂತೆ ಆಯ್ತು. ಬಜೆಟ್ ಮೇಲೆ ಸಿಎಂ ಉತ್ತರ ಕೊಟ್ಟ ನಂತರ ಹನಿಟ್ರ್ಯಾಪ್ ಉತ್ತರ ಕೊಡಿಸುತ್ತೇನೆ ಎಂದು ಹೇಳಿದ್ದೆ. ತಪ್ಪಿಗಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಹ ಹೇಳಿದ್ದರು. ಆದರೂ ಅದೇ ಗದ್ದಲದಲ್ಲಿ ಬಿಲ್ ಕೂಡ ಪಾಸ್ ಆಯ್ತು. ಚರ್ಚೆ ಆಗದೆ ಈ ರೀತಿ ಗದ್ದಲದಲ್ಲಿ ಬಿಲ್ ಪಾಸ್ ಆಗಬಾರದು. ಅದು ಜನರಿಗೆ ಮೋಸ ಮಾಡಿದಂತೆ. ನಾನು ಅಲ್ಲಿ ಇದ್ರು ಕೂಡ ಈ ರೀತಿ ಮಾಡಿದ್ರು . ಹೀಗಾಗಿ ಮನಸ್ಸಿಗೆ ಬೇಜಾರ್ ಆಯ್ತು ಎಂದು ಬೇಸರ ಹೊರಹಾಕಿದರು.
ಹಲವು ನಾಯಕರು ರಾಜೀನಾಮೆ ಕೊಡುವುದರಿಂದ ಎಲ್ಲಾ ಬಗೆ ಹರಿಯುವುದಿಲ್ಲ ಅಂದ್ರು. ಹೀಗಾಗಿ ರಾಜೀನಾಮೆ ನೀಡಬಾರದು ಎಂದು ಈಗಾಗಲೇ ತೀರ್ಮಾನ ಮಾಡಿದ್ದೇನೆ. 27ರ ನಂತರ ಎಲ್ಲಾ 75 ಸದಸ್ಯರಿಗೆ ಪತ್ರ ಕಳುಹಿಸುತ್ತೇನೆ. ಯಾರು ನನ್ನ ಮಾತು ಮೀರಲ್ಲ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನ ದಿನಮಾನಗಳಲ್ಲಿ ಒಣ ಪ್ರತಿಷ್ಠೆನೇ ಜಾಸ್ತಿ ಆಗಿದೆ. ಜನರ ಅಭಿವೃದ್ಧಿ ಬಗ್ಗೆ ಯಾವ ಚರ್ಚೆ ಕೂಡ ಆಗಿಲ್ಲ . ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತೇವೆ ಅಂದ್ರೆ ಮುಗಿದೋಯ್ತು. ಮುಂದಿನ ಅಧಿವೇಶನಕ್ಕೆ ಸದನ ಉತ್ತಮಗೊಳಿಸುವ ಕೆಲಸ ಮಾಡುತ್ತೇವೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗೋದು ಸಹಜವಾಗಿ ಕಣ್ಣಲ್ಲಿ ನೀರು ಬರುತ್ತೆ. ವ್ಯವಸ್ಥೆ ಸರಿ ಪಡಿಸಲು ಏನಾದರೂ ಮಾಡಬೇಕು . ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

The post ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ. appeared first on Good News 24x7.

]]>