#Husband and wife Archives - Good News 24x7 https://www.goodnews24x7.com/tag/husband-and-wife/ Kannada Mon, 09 Mar 2026 12:04:06 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #Husband and wife Archives - Good News 24x7 https://www.goodnews24x7.com/tag/husband-and-wife/ 32 32 ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! https://www.goodnews24x7.com/couple-commits-suicide-by-strangling-childcouple-commits-suicide-by-strangling-child/ Mon, 09 Mar 2026 12:03:54 +0000 https://www.goodnews24x7.com/?p=8808   ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು…

The post ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! appeared first on Good News 24x7.

]]>

 

ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿ ತಾವು ಸಾವಿನ ಮನೆ ಸೇರಿದ್ದಾರೆ.ಆದ್ರೆ, ಪವಾಡಸದೃಶ ರೀತಿಯಲ್ಲಿ ಮಗು ಬದುಕುಳಿದಿದೆ.

ಕೌಟುಂಬಿಕ ಕಲಹಕ್ಕೆ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪವಾಡದಂತೆ ಬದುಕುಳಿದಿದ್ದು, ಇದೀಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಹೃದಯ ವಿದ್ರಾವಕ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ‌ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವಿನೊಂದಿಗೆ ಮಂಡ್ಯದ ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದ್ರೆ, ಗಂಡ ಹೆಂಡತಿ ನಡುವೆ ಅದೇನಾಗಿತ್ತೋ ಏನೋ ದಂಪತಿ ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಆದ್ರೆ, ದಂಪತಿ ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವನ್ನು ಸಹ ಕೊಲ್ಲಲು ತೀರ್ಮಾನಿಸಿದ್ದರು.

ಸ್ನೇಹಿತೆಯ ಲವ್​​ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ
ಅದರಂತೆ ಮಗುವನ್ನು ಕತ್ತು ಹಿಸುಕಿದ್ದಾರೆ. ಇದರಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಬಳಿಕ ದಂಪತಿ ಮಗು ಸಾವನ್ನಪ್ಪಿದೆ ಎಂದು ತಾವು ಸಹ ನೇಣಿಗೆ ಕೊರಳೊಡ್ಡಿದ್ದಾರೆ. ಆದ್ರೆ, ದಂಪತಿ ಸಾವನ್ನಪ್ಪುತ್ತಿದ್ದಂತೆಯೇ ಇನ್ನೊಂದೆಡೆ ಮಗು ಉಸಿರಾಡಿದ್ದು, ಪವಾಡದ ತೀರಿಯಲ್ಲಿ ಬದುಕುಳಿದಿದೆ. ಆದ್ರೆ, ತಂದೆ ತಾಯಿ ಇಲ್ಲದೇ ಅನಾಥವಾಗಿದ್ದು, ಎರಡು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನನ್ನು ಬದುಕುಳಿದ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಂಪತಿಯ ಕೆಟ್ಟ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಂಟುಂಬಿಕ ಕಲಹದಿಂದ ಬೇಸತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ.

 

The post ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! appeared first on Good News 24x7.

]]>