husband wife Archives - Good News 24x7 https://www.goodnews24x7.com/tag/husband-wife/ Kannada Mon, 09 Jun 2025 11:43:59 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg husband wife Archives - Good News 24x7 https://www.goodnews24x7.com/tag/husband-wife/ 32 32 ಸುಂದರ ಕ್ಷಣಕ್ಕೆ ಸಾಕ್ಷಿಯಾದ ಗೆಲುವು…. ಪತ್ನಿಯ ಗೆಲುವನ್ನು ತನ್ನ ಗೆಲುವೆಂದು ಸಂಭ್ರಮಿಸಿದ ಪತಿ…. https://www.goodnews24x7.com/%e0%b2%b8%e0%b3%81%e0%b2%82%e0%b2%a6%e0%b2%b0-%e0%b2%95%e0%b3%8d%e0%b2%b7%e0%b2%a3%e0%b2%95%e0%b3%8d%e0%b2%95%e0%b3%86-%e0%b2%b8%e0%b2%be%e0%b2%95%e0%b3%8d%e0%b2%b7%e0%b2%bf%e0%b2%af%e0%b2%be%e0%b2%a6/ Mon, 09 Jun 2025 11:43:59 +0000 https://www.goodnews24x7.com/?p=4293 ಮದುವೆಯಾದ ಬಳಿಕ ಹೆಣ್ಣು ಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಗಂಡ ಮನೆ ಮಕ್ಕಳು ಎಂದು ತನ್ನ ಕುಟುಂಬಕ್ಕಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಜಿಸಬೇಕಾಗುತ್ತದೆ. ಆದರೆ ತನ್ನ ಕನಸುಗಳಿಗೆ ಬೆಂಬಲ ನೀಡುವ ಪತಿ ಸಿಕ್ಕರೆ ಆಕೆಯಷ್ಟು ಅದೃಷ್ಟವಂತೆ ಬೇರೆ ಯಾರು ಇಲ್ಲ. ಇದೀಗ…

The post ಸುಂದರ ಕ್ಷಣಕ್ಕೆ ಸಾಕ್ಷಿಯಾದ ಗೆಲುವು…. ಪತ್ನಿಯ ಗೆಲುವನ್ನು ತನ್ನ ಗೆಲುವೆಂದು ಸಂಭ್ರಮಿಸಿದ ಪತಿ…. appeared first on Good News 24x7.

]]>

ಮದುವೆಯಾದ ಬಳಿಕ ಹೆಣ್ಣು ಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಗಂಡ ಮನೆ ಮಕ್ಕಳು ಎಂದು ತನ್ನ ಕುಟುಂಬಕ್ಕಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಜಿಸಬೇಕಾಗುತ್ತದೆ. ಆದರೆ ತನ್ನ ಕನಸುಗಳಿಗೆ ಬೆಂಬಲ ನೀಡುವ ಪತಿ ಸಿಕ್ಕರೆ ಆಕೆಯಷ್ಟು ಅದೃಷ್ಟವಂತೆ ಬೇರೆ ಯಾರು ಇಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿ ವೇದಿಕೆಯ ಮೇಲೆ ಗೆಲುವಿನ ಕಿರೀಟ ಅಲಂಕರಿಸಿದರೆ ಪತಿ ಸಿಳ್ಳೆ ಹೊಡೆದು ಆ ಕ್ಷಣವನ್ನು ಸಂಭ್ರಮಿಸಿರುವ ವಿಡಿಯೋವೊಂದು ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

ಪ್ರತಿಯೊಬ್ಬ ಹೆಣ್ಣು ಗಂಡ ತನ್ನ ಜೊತೆಗೆ ನಿಲ್ಲಬೇಕು, ತನ್ನ ಸಂತೋಷ, ನೋವು ಹಾಗೂ ಕನಸುಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಬಯಸುತ್ತಾಳೆ. ಅಂತಹ ಗಂಡ ಸಿಕ್ಕರೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ, ಅಂತಹ ಗಂಡನನ್ನು ಪಡೆದಿರುವುದೇ ಆಕೆಯ ಅದೃಷ್ಟ ಎನ್ನಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋವು ಪತಿಯೂ ತನ್ನ ಪತ್ನಿಯ ಕನಸಿಗೆ ಹಾಗೂ ಗೆಲುವಿಗೆ ಹೇಗೆ ಬೆಂಬಲವಾಗಿ ನಿಂತಿದ್ದಾನೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹೌದು, ವೇದಿಕೆಯ ಮೇಲೆ ಮಹಿಳೆಯೊಬ್ಬಳು ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ವೇದಿಕೆ ಮುಂಭಾಗದಲ್ಲಿ ಪತಿಯೂ ಮಗನನ್ನು ಎತ್ತಿಕೊಂಡು ಈ ಗೆಲುವನ್ನು ಸಂಭ್ರಮಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ಈಕೆ ನಿಜಕ್ಕೂ ಅದೃಷ್ಟವಂತೆ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಗಂಡಸರು ಅಡುಗೆ ಮಾಡೋದಕ್ಕೆ, ಮನೆ ಸ್ವಚ್ಛಗೊಳಿಸುವುದಕ್ಕೆ ಹಾಗೂ ಮನೆಯ ನಿರ್ವಹಿಸುವುದಕ್ಕೆ ಮದುವೆಯಾಗಲ್ಲ, ಕೆಲವರು ಮಾತ್ರ ತಮ್ಮ ಪತ್ನಿ ಗೆಲುವುದನ್ನು ನೋಡಲು ಇಷ್ಟ ಪಡುತ್ತಾರೆ. ಗೆದ್ದರೆಅದನ್ನು ಸಂಭ್ರಮಿಸುತ್ತಾರೆ ಎಂದು ಬರೆಯಲಾಗಿದೆ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಅಡುಗೆ ಕೆಲಸದಲ್ಲಿ ಬ್ಯುಸಿಯಾಗಿರುವುದನ್ನು ನೋಡಬಹುದು. ಆ ಬಳಿಕ ಬಾಡಿ ಬಿಲ್ಡಿಂಗ್ನಲ್ಲಿ ಗೆಲುವು ಸಾಧಿಸಿ ವೇದಿಕೆಯ ಮೇಲೆ ನಿಂತಿರುವ ಪತ್ನಿಯನ್ನು ಕಂಡು ಪತಿಯೂ ಖುಷಿ ಪಟ್ಟಿದ್ದಾನೆ. ಮಗುವನ್ನು ಎತ್ತಿಕೊಂಡು ಸ್ಟೇಜ್ ಮುಂದೆ ನಿಂತಿದ್ದ ಸಿಳ್ಳೆ ಹೊಡೆದು ಪತ್ನಿಯ ಗೆಲುವನ್ನು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

 

 

The post ಸುಂದರ ಕ್ಷಣಕ್ಕೆ ಸಾಕ್ಷಿಯಾದ ಗೆಲುವು…. ಪತ್ನಿಯ ಗೆಲುವನ್ನು ತನ್ನ ಗೆಲುವೆಂದು ಸಂಭ್ರಮಿಸಿದ ಪತಿ…. appeared first on Good News 24x7.

]]>
ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು. https://www.goodnews24x7.com/%e0%b2%95%e0%b3%81%e0%b2%a1%e0%b2%bf%e0%b2%a6-%e0%b2%ae%e0%b2%a4%e0%b3%8d%e0%b2%a4%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%a4%e0%b2%bf%e0%b2%97%e0%b3%86-%e0%b2%86/ Sun, 05 Jan 2025 05:10:10 +0000 https://www.goodnews24x7.com/?p=1578 ಭೋಪಾಲ್ :- ಕುಡಿದ ಅಮಲಿನಲ್ಲಿ ಗಂಡ ಹೆಂಡತಿಗೆ ಹೊಡೆಯುವುದು, ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬಳು ಮಹಿಳೆ ತಾನೇ ಕಂಠಪೂರ್ತಿ ಕುಡಿದು ಗಂಡನಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದ್ದಾಳೆ. ಕುಡುಕಿ ಹೆಂಡತಿಯ…

The post ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು. appeared first on Good News 24x7.

]]>

ಭೋಪಾಲ್ :- ಕುಡಿದ ಅಮಲಿನಲ್ಲಿ ಗಂಡ ಹೆಂಡತಿಗೆ ಹೊಡೆಯುವುದು, ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬಳು ಮಹಿಳೆ ತಾನೇ ಕಂಠಪೂರ್ತಿ ಕುಡಿದು ಗಂಡನಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದ್ದಾಳೆ. ಕುಡುಕಿ ಹೆಂಡತಿಯ ಕಾಟ ತಾಳಲಾರದೆ ನೊಂದ ಪತಿ ಪೊಲೀಸರ ಮೊರೆ ಹೋಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಗರದ ವಿಶ್ವಕರ್ಮ ನಗರದಲ್ಲಿ 45 ವರ್ಷದ ಮಹಿಳೆಯೊಬ್ಬರು 61 ವರ್ಷದ ತನ್ನ ಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ಸುಮಾರು 12 ಸ್ಥಳಗಳಲ್ಲಿ ಕಚ್ಚಿ ಗಾಯಗೊಳಿಸಿದ್ದು, ತನ್ನ ಉಗುರುಗಳಿಂದ ಪರಚಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ ಅವನ ಮೇಲೆ ಆಸಿಡ್ ಕೂಡ ಎರಚಿದ್ದಾರೆ. ಆಸಿಡ್ ಆತನಿಗೆ ತಾಗದಿದ್ದರೂ, ಅವರ ಬಟ್ಟೆಗಳಿಗೆ ಆ್ಯಸಿಡ್ ತಾಗಿ ಹಾಳಾಗಿದೆ. ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದಾರೆ. ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ.
ವಿಶ್ವಕರ್ಮ ನಗರದಲ್ಲಿ ವಾಸವಾಗಿರುವ ಟ್ರಕ್ ಚಾಲಕ 61 ವರ್ಷದ ನಾರಾಯಣ ಲೋಧಿ ತನ್ನ ಎರಡನೇ ಪತ್ನಿ 45 ವರ್ಷದ ದುರ್ಗಾ ಲೋಧಿಯೊಂದಿಗೆ ವಾಸವಾಗಿದ್ದರು. ದುರ್ಗಾಗೆ ಮೊದಲ ಗಂಡನಿಂದ 12 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಾರಾಯಣ ತಮ್ಮ ವೃತ್ತಿಯ ಕಾರಣದಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದರು.
ಮನೆಯಲ್ಲಿ ಕೆಲವು ವಸ್ತುಗಳು ಕಾಣೆಯಾಗಿರುವ ಬಗ್ಗೆ ಅವರು ಪತ್ನಿಯೊಂದಿಗೆ ಜಗಳವಾಡಿದ್ದಾರೆ. ವಾಗ್ವಾದ ಎಷ್ಟರಮಟ್ಟಿಗೆ ಏರಿತೆಂದರೆ, ಮದ್ಯವ್ಯಸನಿಯಾಗಿದ್ದ ದುರ್ಗಾ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಹಲವೆಡೆ ಕಚ್ಚಿ, ಪರಚಿದ್ದಾರೆ. ನಾರಾಯಣ ಓಡಿಹೋಗಲು ಯತ್ನಿಸಿದ್ದು, ದುರ್ಗಾ ಆತನ ಮೇಲೆ ಆಸಿಡ್ ಎರಚಿದ್ದಾಳೆ. ಅದೃಷ್ಟವಶಾತ್ ಆ್ಯಸಿಡ್ ನಾರಾಯಣ ಅವರ ಮೈಮೇಲೆ ಬೀಳದೆ ಬಟ್ಟೆ ಮೇಲೆ ಬಿದ್ದಿದೆ. ಇದರಿಂದ ಅವರ ಬಟ್ಟೆ ಸ್ವಲ್ಪ ಸುಟ್ಟಿದೆ.

ದುರ್ಗಾಗೆ ಕುಡಿತದ ಚಟವಿದೆ ಎಂದು ನಾರಾಯಣ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಆಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದಿದ್ದಾರೆ. ದುರ್ಗಾ ವಿರುದ್ಧ ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ. ಹೀಗಾಗಿ, ಆಕೆಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

The post ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು. appeared first on Good News 24x7.

]]>