ICCWomensWorldCup Archives - Good News 24x7 https://www.goodnews24x7.com/tag/iccwomensworldcup/ Kannada Sun, 02 Nov 2025 11:31:08 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ICCWomensWorldCup Archives - Good News 24x7 https://www.goodnews24x7.com/tag/iccwomensworldcup/ 32 32 World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ https://www.goodnews24x7.com/world-cup-2025-world-cup-final-yet-to-start-heavy-rain-in-mumbai/ Sun, 02 Nov 2025 11:31:08 +0000 https://www.goodnews24x7.com/?p=8002 ICC Women’s World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು…

The post World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ appeared first on Good News 24x7.

]]>

ICC Women’s World Cup 2025 Final: ಮುಂಬೈನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಭಾರತ-ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆಯಿಂದ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಒಂದು ವೇಳೆ ಇಂದು ಪಂದ್ಯ ನಡೆಯದಿದ್ದರೆ, ನವೆಂಬರ್ 2 ರಂದು ಮೀಸಲು ದಿನದಂದು ಪಂದ್ಯ ಪೂರ್ಣಗೊಳಿಸಲಾಗುತ್ತದೆ. ಮಳೆ ನಿಂತರೆ 20 ಓವರ್‌ಗಳ ಪಂದ್ಯ ನಡೆಸಲು ಪ್ರಯತ್ನಿಸಲಾಗುತ್ತದೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಫೈನಲ್ (ICC Women’s World Cup 2025 Final) ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ (India vs South Africa) ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಆದರೆ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದಾಗಿ ಇದುವರೆಗೂ ಆರಂಭವಾಗಿಲ್ಲ. ವಾಸ್ತವವಾಗಿ ಪಂದ್ಯದ ದಿನದಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಅದರಂತೆ ಮುಂಬೈನಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ಇದರಿಂದಾಗಿ ಟಾಸ್ ಕೂಡ ನಡೆದಿಲ್ಲ.

ಶೇ. 63 ರಷ್ಟು ಮಳೆ
ಹವಾಮಾನ ಇಲಾಖೆಯ ವರದಿ ಪ್ರಕಾರ ನವಿ ಮುಂಬೈನಲ್ಲಿ ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 63 ರಷ್ಟು ಇರಲಿದೆ ಎಂದು ವರದಿಯಾಗಿತ್ತು. ಅದರಂತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಒಂದೊಮ್ಮೆ ಮಳೆ ಕೊಂಚ ವಿರಾಮ ತೆಗೆದುಕೊಂಡ ಕಾರಣ 3 ಗಂಟೆಗೆ ಟಾಸ್ ನಡೆಸಲು ತೀರ್ಮಾನಿಸಲಾಗಿತ್ತು. ಹಾಗೆಯೇ 3:30 ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮತ್ತೆ ಮಳೆ ಸುರಿಯಲಾರಂಭಿಸಿದೆ.

ಮೀಸಲು ದಿನ ನಿಗದಿಪಡಿಸಲಾಗಿದೆ
ಮಳೆ ಧಾರಕಾರವಾಗಿ ಸುರಿಯುತ್ತಿರುವ ಕಾರಣ ಈ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಅಭಿಮಾನಿಗಳು ಚಿಂತಿಸಬೇಕಿಲ್ಲ. ಏಕೆಂದರೆ ಮಳೆಯಿಂದಾಗಿ ಇಂದು ಪಂದ್ಯ ನಡೆಯದಿದ್ದರೆ, ಮೀಸಲು ದಿನದಂದು ಈ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಮಳೆಯ ಮುನ್ಸೂಚನೆಯನ್ನು ಗಮನದಲಿಟ್ಟುಕೊಂಡು ಆಯೋಜಕರು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿದ್ದರು. ಅದರಂತೆ ಫೈನಲ್ ಪಂದ್ಯಕ್ಕೆ ನವೆಂಬರ್ 2 ಅನ್ನು ಮೀಸಲು ದಿನವಾಗಿ ಕಾಯ್ದಿರಿಸಲಾಗಿದೆ.

 

The post World Cup 2025: ಇನ್ನೂ ಆರಂಭವಾಗದ ವಿಶ್ವಕಪ್ ಫೈನಲ್ ; ಮುಂಬೈನಲ್ಲಿ ಭಾರಿ ಮಳೆ appeared first on Good News 24x7.

]]>