implementation Archives - Good News 24x7 https://www.goodnews24x7.com/tag/implementation/ Kannada Fri, 24 Apr 2026 13:36:37 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg implementation Archives - Good News 24x7 https://www.goodnews24x7.com/tag/implementation/ 32 32 ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ: ರಾಜ್ಯ ಸರ್ಕಾರದ ಐತಿಹಾಸಿಕ ಆದೇಶ. https://www.goodnews24x7.com/scheduled-caste-internal-reservation-implementation-state-governments-historic-order/ Fri, 24 Apr 2026 13:36:37 +0000 https://www.goodnews24x7.com/?p=9394 ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ (SC) ದಶಕಗಳ ಕಾಲದ ಬೇಡಿಕೆಯಾದ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಆಗಸ್ಟ್ 19ರಂದು ಕೈಗೊಂಡ ನಿರ್ಧಾರದಂತೆ, ಶಿಕ್ಷಣ ಮತ್ತು ಉದ್ಯೋಗದ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ಮೀಸಲಾತಿ…

The post ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ: ರಾಜ್ಯ ಸರ್ಕಾರದ ಐತಿಹಾಸಿಕ ಆದೇಶ. appeared first on Good News 24x7.

]]>

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ (SC) ದಶಕಗಳ ಕಾಲದ ಬೇಡಿಕೆಯಾದ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಆಗಸ್ಟ್ 19ರಂದು ಕೈಗೊಂಡ ನಿರ್ಧಾರದಂತೆ, ಶಿಕ್ಷಣ ಮತ್ತು ಉದ್ಯೋಗದ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈ ಮಹತ್ವದ ಬದಲಾವಣೆಗೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಆಯೋಗದ ಶಿಫಾರಸುಗಳು ಮೂಲಾಧಾರವಾಗಿದ್ದು, ಒಟ್ಟು ಶೇಕಡಾ 17 ರಷ್ಟು ಲಭ್ಯವಿರುವ ಮೀಸಲಾತಿಯನ್ನು ವಿವಿಧ ಉಪಪಂಗಡಗಳಿಗೆ ಹಂಚಿಕೆ ಮಾಡಲಾಗಿದೆ.

ಸರ್ಕಾರದ ಹೊಸ ಆದೇಶದ ಪ್ರಕಾರ, ಮೀಸಲಾತಿಯನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮಾದಿಗ ಸೇರಿದಂತೆ 18 ಉಪಜಾತಿಗಳನ್ನು ಹೊಂದಿರುವ ‘ಎಡಗೈ’ (Left Wing) ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ನೀಡಲಾಗಿದೆ. ಅದೇ ರೀತಿ, ಹೊಲೆಯ ಹಾಗೂ ಚಲವಾದಿ ಸೇರಿದಂತೆ 20 ಜಾತಿಗಳನ್ನೊಳಗೊಂಡ ‘ಬಲಗೈ’ (Right Wing) ಸಮುದಾಯಕ್ಕೂ ಶೇ. 6 ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಇನ್ನುಳಿದಂತೆ ಲಂಬಾಣಿ, ಭೋವಿ, ಕೊರಚ, ಕೊರಮ ಹಾಗೂ ಅಲೆಮಾರಿಗಳು ಸೇರಿದಂತೆ ಒಟ್ಟು 63 ಉಪಜಾತಿಗಳನ್ನು ಹೊಂದಿರುವ ‘ಇತರೆ’ ಸಮುದಾಯಗಳಿಗೆ ಶೇ. 5 ರಷ್ಟು ಒಳ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.

ನಾಗಮೋಹನದಾಸ್ ಆಯೋಗವು ಈ ಹಿಂದೆ ಸಮುದಾಯಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ ವಿಭಿನ್ನ ಪ್ರಮಾಣದ ಮೀಸಲಾತಿಗೆ ಶಿಫಾರಸು ಮಾಡಿತ್ತಾದರೂ, ರಾಜ್ಯ ಸರ್ಕಾರವು ಸಮುದಾಯಗಳ ಹಿತದೃಷ್ಟಿಯಿಂದ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾದ (ತಲಾ ಶೇ. 6) ಮೀಸಲಾತಿಯನ್ನು ನೀಡಿ ಅಂತಿಮ ಆದೇಶ ಹೊರಡಿಸಿದೆ. ಇದರಿಂದಾಗಿ ಸಮಾಜದ ಕಟ್ಟಕಡೆಯ ಸಮುದಾಯಗಳಿಗೂ ಸರ್ಕಾರಿ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳು ನ್ಯಾಯಯುತವಾಗಿ ತಲುಪಲಿವೆ ಎಂಬುದು ಸರ್ಕಾರದ ಆಶಯವಾಗಿದೆ.

The post ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ: ರಾಜ್ಯ ಸರ್ಕಾರದ ಐತಿಹಾಸಿಕ ಆದೇಶ. appeared first on Good News 24x7.

]]>
ಏ.17ಕ್ಕೆ ಜಾತಿ ಗಣತಿ ವರದಿ ಜಾರಿ ಬಗ್ಗೆ ಚರ್ಚಿಸಲು ಸಚಿವ ಸಂಪುಟ ವಿಶೇಷ ಸಭೆಗೆ ನಿರ್ಧಾರ. https://www.goodnews24x7.com/%e0%b2%8f-17%e0%b2%95%e0%b3%8d%e0%b2%95%e0%b3%86-%e0%b2%9c%e0%b2%be%e0%b2%a4%e0%b2%bf-%e0%b2%97%e0%b2%a3%e0%b2%a4%e0%b2%bf-%e0%b2%b5%e0%b2%b0%e0%b2%a6%e0%b2%bf-%e0%b2%9c%e0%b2%be%e0%b2%b0%e0%b2%bf/ Fri, 11 Apr 2025 09:43:24 +0000 https://www.goodnews24x7.com/?p=3160 ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ ವರದಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ…

The post ಏ.17ಕ್ಕೆ ಜಾತಿ ಗಣತಿ ವರದಿ ಜಾರಿ ಬಗ್ಗೆ ಚರ್ಚಿಸಲು ಸಚಿವ ಸಂಪುಟ ವಿಶೇಷ ಸಭೆಗೆ ನಿರ್ಧಾರ. appeared first on Good News 24x7.

]]>

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ ವರದಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಮಂಡಿಸಲಾಗಿದ್ದು ಆದರೆ ಜಾತಿಗಣತಿ ವರದಿ ಬಗ್ಗೆ ಸಚಿವರು ಯಾವುದೇ ಪರ ವಿರೋಧ ಚರ್ಚೆ ಮಾಡಿಲ್ಲ. ಕೇವಲ ವರದಿ ಮಂಡಿಸಲಾಗಿದೆ ಎನ್ನಲಾಗಿದೆ. ಜಾತಿ ಗಣತಿ ವರದಿ ಅನುಷ್ಟಾನ ಕುರಿತು ಬಗ್ಗೆ ಚರ್ಚಿಸಲು ಏಪ್ರಿಲ್ 17ಕ್ಕೆ ಸಚಿವ ಸಂಪುಟ ವಿಶೇಷ ಸಭೆ ಕರೆಯಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ಓಪನ್ ಮಾಡಿದ ನಂತರ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ತೀರ್ಮಾನ ಮಾಡಿದ್ದಾರೆ. ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಆ ಸಭೆಯಲ್ಲಿ ಜಾತಿ ಗಣತಿ ವಿಚಾರವಾಗಿ ತೀರ್ಮಾನ ಕೈಗೊಳ್ಳಬಹುದು ಎನ್ನಲಾಗಿದೆ.

The post ಏ.17ಕ್ಕೆ ಜಾತಿ ಗಣತಿ ವರದಿ ಜಾರಿ ಬಗ್ಗೆ ಚರ್ಚಿಸಲು ಸಚಿವ ಸಂಪುಟ ವಿಶೇಷ ಸಭೆಗೆ ನಿರ್ಧಾರ. appeared first on Good News 24x7.

]]>