important Archives - Good News 24x7 https://www.goodnews24x7.com/tag/important/ Kannada Fri, 05 Sep 2025 05:33:20 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg important Archives - Good News 24x7 https://www.goodnews24x7.com/tag/important/ 32 32 ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ! https://www.goodnews24x7.com/evms-are-enough-ballot-papers-are-needed/ Fri, 05 Sep 2025 05:33:20 +0000 https://www.goodnews24x7.com/?p=7364 ದೇಶದಲ್ಲಿ ಎರಡೇ ಚರ್ಚೆ, ಒಂದು ಜಿಎಸ್​​ಟಿ, ಇನ್ನೊಂದು ವೋಟ್​​​ ಚೋರಿ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ದಾಳ…

The post ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ! appeared first on Good News 24x7.

]]>

ದೇಶದಲ್ಲಿ ಎರಡೇ ಚರ್ಚೆ, ಒಂದು ಜಿಎಸ್​​ಟಿ, ಇನ್ನೊಂದು ವೋಟ್​​​ ಚೋರಿ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ದಾಳ ಉರುಳಿಸಿದೆ. ಅಷ್ಟೇ ಅಲ್ಲ, ಸಂಪುಟ ಸಭೆಯಲ್ಲಿ ಹಲವು ವಿಚಾರಗಳಲ್ಲಿ ಹೊಸ ನಿರ್ಧಾರಗಳನ್ನ ತಳೆದಿದೆ.

ಕಾಂಗ್ರೆಸ್ ಪಕ್ಷಕ್ಕೆ ದೇಶದ ಚುನಾವಣಾ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ. ಇವಿಎಂ ಮೇಲಂತೂ ಎಳ್ಳಷ್ಟು ವಿಶ್ವಾಸವಿಲ್ಲ. ಹೀಗಾಗಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧವೇ ಕೈ ನಾಯಕ ರಾಹುಲ್ ಗಾಂಧಿ ಸಿಡಿದೆದ್ದಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ ನಡೆಸ್ತಿದ್ದಾರೆ. ಇದ್ರ ಮಧ್ಯೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ನಿಲುವು ತಳೆದಿದೆ.

ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸ್ತಾನೆ ಇದೆ. ಈ ಮಧ್ಯೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರಗಳನ್ನ ಕೈಗೊಂಡಿದೆ. ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ಅಂತ ಚುನಾವಣೆ ಆಯೋಗಕ್ಕೆ ಸಂಪುಟದಿಂದ ಶಿಫಾರಸು ಮಾಡಿದೆ. ಸದ್ಯಕ್ಕೆ ಗ್ರಾಮ ಪಂಚಾಯ್ತಿಯಲ್ಲಿ ಮಾತ್ರ ಬ್ಯಾಲೇಟ್​​ ಬಳಕೆಯಲ್ಲಿದೆ. ಪುರಸಭೆ, ನಗರಸಭೆ, ಪಾಲಿಕೆ ಎಲೆಕ್ಷನ್​​ನಲ್ಲಿ ಇವಿಎಂ ಪ್ರಯೋಗ ನಡೆದಿದೆ.

ಇತ್ತೀಚೆಗೆ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬದಲಾವಣೆಯಾಗಿದೆ.ಮತಗಳ್ಳತನ ಚರ್ಚೆ ಆಗ್ತಿದ್ದು, ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸ ಕುಗ್ಗಿದೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್​ಗೆ ಆದ್ಯತೆ ನೀಡಿ . ಇವಿಎಂ ಬದಲು ಬ್ಯಾಲೆಟ್ ಪೇಪರ್ ಜಾರಿಗೆ ನಿಯಮಗಳನ್ನು ರೂಪಿಸಿ
ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಂಪುಟ ಒಪ್ಪಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಅದರಲ್ಲಿ 2025ರ ವರ್ಷಾಂತ್ಯದೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನವೆಂಬರ್‌ ವೇಳೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

The post ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ! appeared first on Good News 24x7.

]]>
ಗಣೇಶನ ಕೆಲವು ಪ್ರಮುಖ ಭಂಗಿಗಳ ಅರ್ಥ ಗೊತ್ತಾ..? https://www.goodnews24x7.com/do-you-know-the-meaning-of-some-important-poses-of-ganesha/ Wed, 27 Aug 2025 09:25:24 +0000 https://www.goodnews24x7.com/?p=6798   ಪ್ರತಿ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಬುಧವಾರ, ಆಗಸ್ಟ್ 27 ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಕೆಲವೊಂದು ಜಾಗದಲ್ಲಿ ಒಂದುದಿನ, ಮೂರು ದಿನ ಅಥವಾ 10 ದಿನಗಳ…

The post ಗಣೇಶನ ಕೆಲವು ಪ್ರಮುಖ ಭಂಗಿಗಳ ಅರ್ಥ ಗೊತ್ತಾ..? appeared first on Good News 24x7.

]]>

 

ಪ್ರತಿ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಬುಧವಾರ, ಆಗಸ್ಟ್ 27 ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಕೆಲವೊಂದು ಜಾಗದಲ್ಲಿ ಒಂದುದಿನ, ಮೂರು ದಿನ ಅಥವಾ 10 ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ಗಣೇಶನನ್ನು ವಿಘ್ನಹರ್ತ ಮತ್ತು ಮಂಗಳಕರ್ತ ಎಂದು ಕರೆಯಲಾಗುತ್ತದೆ. ಗಣೇಶನ ವಿಗ್ರಹಗಳಲ್ಲಿ ಕಂಡುಬರುವ ಪ್ರತಿಯೊಂದು ಭಂಗಿಯು ವಿಭಿನ್ನ ಅರ್ಥವನ್ನು ಹೊಂದಿದೆ, ಜೀವನದ ಆಳವಾದ ಸಂದೇಶಗಳನ್ನು ನೀಡುತ್ತದೆ.

ಕುಳಿತ ಗಣೇಶ (ಧ್ಯಾನ ಮತ್ತು ನಿಶ್ಚಲತೆ):
ಕುಳಿತಿರುವ ಗಣೇಶ ಎಂದರೆ ಮನಸ್ಸು ಮತ್ತು ಜೀವನದಲ್ಲಿ ಸ್ಥಿರತೆ ಎಂದರ್ಥ. ಕುಳಿತಿರುವ ಗಣಪತಿಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದರಿಂದ ಇದನ್ನು “ಲಕ್ಷ್ಮಿ ಗಣೇಶ” ಎಂದೂ ಕರೆಯುತ್ತಾರೆ. ಗಣೇಶನ ಈ ಭಂಗಿಯು ಮನೆಯಲ್ಲಿ ಇಡಲು ಅತ್ಯಂತ ಮಂಗಳಕರವಾಗಿದೆ.

ನಿಂತ ಗಣೇಶ (ಪ್ರಗತಿ ಮತ್ತು ಸಾಧನೆ):
ನಿಂತಿರುವ ಗಣೇಶನು ಉತ್ಸಾಹ ಮತ್ತು ಪ್ರಗತಿಯ ಸಂಕೇತ. ಗಣೇಶನ ಈ ಭಂಗಿಯು ವ್ಯವಹಾರ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸಲು ಶುಭವೆಂದು ಪರಿಗಣಿಸಲಾಗಿದೆ. ಈ ಭಂಗಿಯಲ್ಲಿರುವ ಗಣೇಶನ ಚಿತ್ರವನ್ನು ಕಚೇರಿಯಲ್ಲಿ ಇಡಬೇಕು.

ಮಲಗಿರುವ ಗಣೇಶ (ವಿಶ್ರಾಂತಿ ಮತ್ತು ತೃಪ್ತಿ):
ಗಣೇಶನ ಮಲಗಿರುವ ಭಂಗಿಯು ಜೀವನದಲ್ಲಿ ತೃಪ್ತಿ ಮತ್ತು ಮಾನಸಿಕ ಶಾಂತಿಯ ಸಂದೇಶವನ್ನು ನೀಡುತ್ತದೆ. ಕಠಿಣ ಪರಿಶ್ರಮದ ನಂತರ ವಿಶ್ರಾಂತಿಯೂ ಅಷ್ಟೇ ಮುಖ್ಯ ಎಂದು ಈ ಭಂಗಿಯು ಕಲಿಸುತ್ತದೆ.

ನೃತ್ಯ ಗಣೇಶ (ಸಂತೋಷ ಮತ್ತು ಶಕ್ತಿ):
ನಟರಾಜ ರೂಪದಲ್ಲಿ ನೃತ್ಯ ಮಾಡುವ ಗಣೇಶನು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಈ ರೂಪವು ಜೀವನದಲ್ಲಿ ಸಂತೋಷ ಮತ್ತು ಆಚರಣೆಯ ಮಹತ್ವವನ್ನು ಸೂಚಿಸುತ್ತದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಈ ಭಂಗಿಯಲ್ಲಿ ಗಣೇಶನ ಚಿತ್ರವನ್ನು ಹಾಕಬಹುದು.

ಬಾಲ ಗಣೇಶ (ಶುದ್ಧತೆ ಮತ್ತು ಮುಗ್ಧತೆ):
ಬಾಲರೂಪದಲ್ಲಿರುವ ಗಣಪತಿಯು ಮುಗ್ಧತೆ, ಸರಳತೆ ಮತ್ತು ಶುದ್ಧ ಭಕ್ತಿಯ ಸಂಕೇತ. ಮಕ್ಕಳು ಈ ರೂಪದೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆಂದು ಭಾವಿಸುತ್ತಾರೆ. ಈ ಭಂಗಿಯಲ್ಲಿರುವ ಗಣೇಶನ ಚಿತ್ರವನ್ನು ಮನೆಯಲ್ಲಿ ಮಕ್ಕಳ ಕೋಣೆಯಲ್ಲಿ ಇಡಬೇಕು.

ಇಲಿಯ ಮೇಲೆ ಕುಳಿತ ಗಣೇಶ (ವಿನಮ್ರತೆ ಮತ್ತು ನಿಯಂತ್ರಣ):
ಗಣಪತಿಯ ವಾಹನ ಇಲಿ. ಗಣೇಶ ಇಲಿಯ ಮೇಲೆ ಸವಾರಿ ಮಾಡುವ ಭಂಗಿಯು ದೊಡ್ಡವರು ಅಥವಾ ಸಣ್ಣವರು ಎಲ್ಲರೂ ಮುಖ್ಯ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಈ ಭಂಗಿಯು ಆಸೆಗಳ ಮೇಲಿನ ನಿಯಂತ್ರಣದ ಸಂಕೇತವಾಗಿದೆ.

ಬಲಭಾಗದಲ್ಲಿ ಸೊಂಡಿಲು ಹೊಂದಿರುವ ಗಣೇಶ:
ಬಲ ಸೊಂಡಿಲು ಹೊಂದಿರುವ ಗಣೇಶನನ್ನು “ಸಿದ್ಧಿ ವಿನಾಯಕ” ಎಂದು ಕರೆಯಲಾಗುತ್ತದೆ. ಈ ರೂಪವನ್ನು ಬಹಳ ಜಾಗೃತ ಎಂದು ಪರಿಗಣಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾದ ನಿಯಮಗಳೊಂದಿಗೆ ಪೂಜಿಸಬೇಕು. ಇದು ಯಶಸ್ಸು ಮತ್ತು ಕೆಲಸದ ಸಾಧನೆಯ ಸಂಕೇತವಾಗಿದೆ.

ಎಡಭಾಗದಲ್ಲಿ ಸೊಂಡಿಲು ಹೊಂದಿರುವ ಗಣೇಶ:
ಮನೆಯಲ್ಲಿ ಪ್ರತಿಷ್ಠಾಪಿಸಲು ಎಡಮುರಿ ಗಣೇಶ ಅತ್ಯಂತ ಸಾಮಾನ್ಯ ಮತ್ತು ಸೂಕ್ತವಾದ ರೂಪವಾಗಿದೆ. ಎಡಗಡೆಗೆ ಸೊಂಡಿಲು ಇರುವ ಗಣೇಶನ ಸೌಮ್ಯತೆ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.

ಜ್ಞಾನ ಮುದ್ರೆ (ಬುದ್ಧಿವಂತಿಕೆ ಮತ್ತು ವಿವೇಚನೆ):
ಗಣೇಶನ ಹೆಬ್ಬೆರಳು ಮತ್ತು ತೋರುಬೆರಳನ್ನು ಸೇರಿಸಿ ಮಾಡಿದ ಮುದ್ರೆಯನ್ನು ಧ್ಯಾನ, ಸಮತೋಲನ ಮತ್ತು ವಿವೇಚನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

The post ಗಣೇಶನ ಕೆಲವು ಪ್ರಮುಖ ಭಂಗಿಗಳ ಅರ್ಥ ಗೊತ್ತಾ..? appeared first on Good News 24x7.

]]>
ನಟ ದರ್ಶನ್ ವಿರುದ್ದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ: ಸುಪ್ರೀಂಕೋರ್ಟ್ನಲ್ಲಿ ವಾದ. https://www.goodnews24x7.com/no-evidence-in-renukaswamy-murder-case-against-actor-darshan-argument-in-supreme-court/ Tue, 22 Apr 2025 11:26:58 +0000 https://www.goodnews24x7.com/?p=3351 ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿಲಾಗಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ. ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ನಟ ದರ್ಶನ್ ಪರ ವಾದ…

The post ನಟ ದರ್ಶನ್ ವಿರುದ್ದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ: ಸುಪ್ರೀಂಕೋರ್ಟ್ನಲ್ಲಿ ವಾದ. appeared first on Good News 24x7.

]]>

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿಲಾಗಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ನಟ ದರ್ಶನ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ನಟ ದರ್ಶನ್ ವಿರುದ್ದ ಯಾವುದೇ ಸಾಕ್ಷ್ಯಗಳಿಲ್ಲ ಯಾವ ಜಾಗದಲ್ಲಿಯೂ ಸಾಕ್ಷ್ಯಾಧಾರಗಳು ಇಲ್ಲ ಎಂದರು.


ಈ ವೇಳೆ ಹತ್ಯೆ ಮಾಡಿದಕ್ಕೆ ಫೋಟೋಗಳಿವೆ ಎಂದು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ಹೇಳಿದರು. ವಾದ ಮುಂದುವರೆಸಿದ ಅಭಿಷೇಕ್ ಮನು ಸಿಂಘ್ವಿ ಇಡೀ ಪ್ರಕರಣ ಎರಡು ಹೇಳಿಕೆ ಮೇಲೆ ನಿಂತಿದೆ ಪವಿತ್ರಾಗೆ ಕೆಟ್ಟ ಮೆಸೇಜ್ ಮಾಡಿದ್ದಾರೆ ಅಂತಾ ಆರೋಪವಿದೆ. ನಕಲಿ ಸಾಕ್ಷ್ಯಗಳನ್ನ ಸೃಷ್ಠಿ ಮಾಡಿದ್ದಾರೆ ಎಂದರು.
ಶೇಡ್ ಬಳಿ ನಡೆದ ಘಟನೆ ವಿವರಿಸಿದ ಪೊಲೀಸರ ಪರ ವಕೀಲ ಸಿದ್ದಾರ್ಥ್ ಲೂಥ್ರಾ, ಎಲೆಕ್ಟ್ರಾನಿಕ್ ಎವಿಡೆನ್ಸ್ ಇದೆ. ಸಿಸಿಟಿವಿ ದೃಶ್ಯ ಕೂಡ ಸಿಕ್ಕಿದೆ. ಎಲೆಕ್ಟ್ರಿಕ್ ಬಳಸಿ ರೇಣುಕಾಸ್ವಾಮಿಗೆ ಹಿಂಸೆ ನೀಡಲಾಗಿದೆ. ಮೂಳೆಗಳು ಮುರಿದವೆ ರಕ್ತ ಸುರಿದಿದೆ ದೇಹದ ಪ್ರಮುಖ ಭಾಗ ರಕ್ತ ಹೆಪ್ಪುಗಟ್ಟಿದೆ ಎಂದು ವಾದಿಸಿದರು.

The post ನಟ ದರ್ಶನ್ ವಿರುದ್ದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ: ಸುಪ್ರೀಂಕೋರ್ಟ್ನಲ್ಲಿ ವಾದ. appeared first on Good News 24x7.

]]>