incident Archives - Good News 24x7 https://www.goodnews24x7.com/tag/incident/ Kannada Fri, 03 Jul 2026 07:27:42 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg incident Archives - Good News 24x7 https://www.goodnews24x7.com/tag/incident/ 32 32 ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು https://www.goodnews24x7.com/car-runs-over-buddhist-monks-on-pilgrimage-9-dead/ Fri, 03 Jul 2026 07:27:42 +0000 https://www.goodnews24x7.com/?p=9756 ಥೈಲ್ಯಾಂಡ್‌ನ ಮುಕ್ದಹಾನ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ಅಪ್ಪ ಅಮ್ಮನಿಗೆ ತಿಳಿಯದೆ ಕಾರು ಚಲಾಯಿಸಿ, ತೀರ್ಥಯಾತ್ರೆಗೆ ಹೊರಟಿದ್ದ 9 ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಒಂಬತ್ತು ಸನ್ಯಾಸಿಗಳು ಮೃ*ತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ…

The post ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು appeared first on Good News 24x7.

]]>

ಥೈಲ್ಯಾಂಡ್‌ನ ಮುಕ್ದಹಾನ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ಅಪ್ಪ ಅಮ್ಮನಿಗೆ ತಿಳಿಯದೆ ಕಾರು ಚಲಾಯಿಸಿ, ತೀರ್ಥಯಾತ್ರೆಗೆ ಹೊರಟಿದ್ದ 9 ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಒಂಬತ್ತು ಸನ್ಯಾಸಿಗಳು ಮೃ*ತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಇಡೀ ಥೈಲ್ಯಾಂಡ್ ದೇಶವನ್ನು ತಲ್ಲಣಗೊಳಿಸಿದ್ದು, ರಸ್ತೆ ಸುರಕ್ಷತೆ ಮತ್ತು ಮಕ್ಕಳ ಮೇಲಿನ ನಿಗಾದ ಮಹತ್ವವನ್ನು ಎತ್ತಿ ತೋರಿಸಿದೆ
.
ಥೈಲ್ಯಾಂಡ್: ಯಾತ್ರೆಗೆ ಹೊರಟಿದ್ದ ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು

ಬ್ಯಾಂಕಾಕ್, ಜುಲೈ 03: ಈಶಾನ್ಯ ಥೈಲ್ಯಾಂಡ್‌ನ ಮುಕ್ದಹಾನ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರ ಹಾಗೂ ಮನಕಲಕುವ ಅಪಘಾತ(Accident)ವೊಂದು ಸಂಭವಿಸಿದೆ. ಹೆತ್ತವರ ಅನುಮತಿಯಿಲ್ಲದೆ 11 ವರ್ಷದ ಬಾಲಕನೊಬ್ಬ ವಾಹನ ಚಲಾಯಿಸಿಕೊಂಡು , ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದೆ. ಈ ಘೋರ ಅಪಘಾತದಲ್ಲಿ ಒಂಬತ್ತು ಬೌದ್ಧ ಸನ್ಯಾಸಿಗಳು ಸಾ*ವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

‘ಬುದ್ಧೋ ಬುದ್ಧೋ’ ಎನ್ನುತ್ತಿದ್ದಾಗಲೇ ಅಪ್ಪಳಿಸಿತು ಸಾ*ವು ಸುಮಾರು 35 ಸನ್ಯಾಸಿಗಳು ಮತ್ತು ಐದು ಜನ ಸಾಮಾನ್ಯ ಅನುಯಾಯಿಗಳ ಗುಂಪು ಮುಕ್ದಹಾನ್ ಪ್ರಾಂತ್ಯದ ರಸ್ತೆಯ ಮೂಲಕ ತೀರ್ಥಯಾತ್ರೆಗಾಗಿ ನಡೆದುಕೊಂಡು ಹೋಗುತ್ತಿತ್ತು. ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಬದುಕುಳಿದ ಫ್ರಾ ಸೋಂಪಾಂಗ್ ಎಂಬ ಸನ್ಯಾಸಿ ಘಟನೆ ಬಗ್ಗೆ ಮಾತನಾಡಿ, ನಾವೆಲ್ಲರೂ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರ ಜಪಿಸುತ್ತಾ ಸಾಗುತ್ತಿದ್ದೆವು. ಈ ವೇಳೆ ಬಾಲಕನೊಬ್ಬ ಓಡಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ ವೇಗದಲ್ಲಿ ನಮ್ಮ ಸಾಲಿಗೆ ಡಿಕ್ಕಿ ಹೊಡೆಯಿತು. ಮೊದಲ ಒಂಬತ್ತು ಸನ್ಯಾಸಿಗಳು ಬದುಕುಳಿದರು, ಆದರೆ ಉಳಿದವರು ಕಾರು ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಐವರು ಸನ್ಯಾಸಿಗಳು ಸ್ಥಳದಲ್ಲೇ ಮೃ*ತಪಟ್ಟರೆ, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರು ಸನ್ಯಾಸಿಗಳ ಸ್ಥಿತಿ ಗಂಭೀರವಾಗಿದೆ.

ಮನೆಯಲ್ಲಿ ಯಾರೂ ಇಲ್ಲದಾಗ ಕಾರು ತಂದಿದ್ದ ಬಾಲಕ ಪೊಲೀಸ್ ತನಿಖೆಯ ಪ್ರಕಾರ, ಅಪಘಾತದ ಸಮಯದಲ್ಲಿ ಬಾಲಕನ ಮನೆಯಲ್ಲಿ ಯಾರೂ ಇರಲಿಲ್ಲ. ಆತ ಅಸ್ವಸ್ಥನಾಗಿದ್ದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದ. ಈ ವೇಳೆ ಹೆತ್ತವರಿಗೆ ತಿಳಿಸದೆ ಕಾರಿನ ಕೀ ತಗೆದುಕೊಂಡು ರಸ್ತೆಗಿಳಿದಿದ್ದಾನೆ. ಕಾರು ಕಾಣೆಯಾಗಿರುವುದನ್ನು ಅರಿತ ಪೋಷಕರು ಪೊಲೀಸರಿಗೆ ದೂರು ನೀಡುವಷ್ಟರಲ್ಲೇ ಈ ಭೀಕರ ದುರಂತ ಸಂಭವಿಸಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಆತ ವಿಶೇಷ ಅಗತ್ಯವಿರುವ ಬಾಲಕ ಎಂದು ತಿಳಿದುಬಂದಿದ್ದು, ವೈದ್ಯರು ಮತ್ತು ಪೋಷಕರ ತಂಡ ಆತನನ್ನು ನೋಡಿಕೊಳ್ಳುತ್ತಿದೆ.

 

ಥೈಲ್ಯಾಂಡ್‌ನಲ್ಲಿ ಬೌದ್ಧ ಸನ್ಯಾಸಿಗಳನ್ನು ಅತ್ಯಂತ ಪವಿತ್ರವಾಗಿ ಮತ್ತು ಗೌರವದಿಂದ ಕಾಣಲಾಗುತ್ತದೆ. ಹೀಗಾಗಿ ಈ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಗಾಯಗೊಂಡ ಸನ್ಯಾಸಿಗಳ ಪ್ರಾಣ ಉಳಿಸಲು ಮುಕ್ದಹಾನ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ತುರ್ತು ರಕ್ತದಾನ ಮಾಡುವಂತೆ ಮನವಿ ಮಾಡಿದೆ.

ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನ್ನಾರತ್ ಈ ಕುರಿತು ಮಾತನಾಡಿ, ಈ ಘಟನೆ ಇಡೀ ದೇಶದ ರಸ್ತೆ ಸುರಕ್ಷತೆಗೆ ಒಂದು ದೊಡ್ಡ ಎಚ್ಚರಿಕೆಯಾಗಬೇಕು. ಅಪಘಾತಗಳನ್ನು ತಡೆಗಟ್ಟುವ ವಿಷಯದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ಎಷ್ಟು ಮುಖ್ಯ ಎಂಬುದಕ್ಕೆ ಇದೊಂದು ಕಣ್ಣು ತೆರೆಸುವ ಪಾಠ ಎಂದು ಹೇಳಿದ್ದಾರೆ. ವಾಹನವನ್ನು ಸದ್ಯ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

The post ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು appeared first on Good News 24x7.

]]>
ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. https://www.goodnews24x7.com/russias-deadliest-plane-crash-an-26-crashes-into-crimean-cliff-killing-29-military-personnel/ Wed, 01 Apr 2026 10:20:38 +0000 https://www.goodnews24x7.com/?p=9067 [ಮಾಸ್ಕೋ/ಕ್ರೈಮಿಯಾ]: ರಷ್ಯಾದ ರಕ್ಷಣಾ ಪಡೆಗೆ ಸೇರಿದ ‘An-26’ ಸೇನಾ ಸಾರಿಗೆ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ ಸಂಭವಿಸಿದೆ. ಕ್ರೈಮಿಯಾ ಪರ್ಯಾಯ ದ್ವೀಪದ ದುರ್ಗಮ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರಷ್ಯಾದ…

The post ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. appeared first on Good News 24x7.

]]>

[ಮಾಸ್ಕೋ/ಕ್ರೈಮಿಯಾ]: ರಷ್ಯಾದ ರಕ್ಷಣಾ ಪಡೆಗೆ ಸೇರಿದ ‘An-26’ ಸೇನಾ ಸಾರಿಗೆ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 29 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ ಸಂಭವಿಸಿದೆ. ಕ್ರೈಮಿಯಾ ಪರ್ಯಾಯ ದ್ವೀಪದ ದುರ್ಗಮ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರಷ್ಯಾದ ರಕ್ಷಣಾ ಸಚಿವಾಲಯ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿದೆ.

ಘಟನೆಯ ವಿವರ:
ಮಂಗಳವಾರ (ಮಾರ್ಚ್ 31) ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯ ಸುಮಾರಿಗೆ ಆಂಟೊನೊವ್ ಡಿಸೈನ್ ಬ್ಯೂರೋ ನಿರ್ಮಿತ An-26 ವಿಮಾನವು ಕ್ರೈಮಿಯಾ ಪರ್ಯಾಯ ದ್ವೀಪದ ಮೇಲೆ ತನ್ನ ನಿಯಮಿತ ಹಾರಾಟ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ವಿಮಾನವು ಇದ್ದಕ್ಕಿದ್ದಂತೆ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದಾರೆ, ಪರಿಣಾಮವಾಗಿ ವಿಮಾನವು ಬೆಟ್ಟದ ಬಂಡೆಗೆ ನೇರವಾಗಿ ಅಪ್ಪಳಿಸಿದೆ.

ಮೃತರ ವಿವರ:
ವಿಮಾನದಲ್ಲಿ ಒಟ್ಟು 29 ಜನರಿದ್ದರು ಎಂದು ವರದಿಯಾಗಿದೆ. ಇದರಲ್ಲಿ ಆರು ಮಂದಿ ವಿಮಾನ ಚಾಲನಾ ಸಿಬ್ಬಂದಿ (Crew Members) ಮತ್ತು 23 ಪ್ರಯಾಣಿಕರಿದ್ದರು. ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಹೊರತೆಗೆಯುವ ಪ್ರಕ್ರಿಯೆ ಜಾರಿಯಲ್ಲಿದೆ.

ಹಳೆಯ ವಿಮಾನಗಳ ಸುರಕ್ಷತೆ ಬಗ್ಗೆ ಪ್ರಶ್ನೆ:
An-26 ವಿಮಾನಗಳು 1960ರ ದಶಕದ ಅಂತ್ಯದಿಂದ ರಷ್ಯಾ ಮತ್ತು ಉಕ್ರೇನ್ ಸೇನೆಗಳಲ್ಲಿ ಸಕ್ರಿಯವಾಗಿವೆ. ಸರಕು ಸಾಗಣೆ ಮತ್ತು ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ವಿಮಾನಗಳು ದಶಕಗಳಷ್ಟು ಹಳೆಯದಾಗಿವೆ. ಈ ಹಿಂದೆಯೂ ಈ ವಿಮಾನಗಳು ಹಲವಾರು ಬಾರಿ ತಾಂತ್ರಿಕ ಕಾರಣಗಳಿಂದ ಅಪಘಾತಕ್ಕೀಡಾಗಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಅಪಘಾತ ನಡೆದ ಕ್ರೈಮಿಯಾ ಪ್ರಾಂತ್ಯವು 2014ರಿಂದ ರಷ್ಯಾದ ಅಧೀನದಲ್ಲಿದೆ.

ಕರಾಳ ಇತಿಹಾಸದ ಮೇಲೆ ಒಂದು ನೋಟ:
An-26 ವಿಮಾನಗಳ ಸುರಕ್ಷತಾ ದಾಖಲೆ ಇತ್ತೀಚಿನ ವರ್ಷಗಳಲ್ಲಿ ಕಳವಳಕಾರಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಪ್ರಮುಖ ಅಪಘಾತಗಳು ಇಲ್ಲಿವೆ:

  • 2022: ಉಕ್ರೇನ್‌ನ ಜಪೋರಿಝಿಯಾ ಪ್ರಾಂತ್ಯದಲ್ಲಿ ವಿಮಾನ ಪತನಗೊಂಡು ಓರ್ವ ಸಾವು.
  • 2020: ಉಕ್ರೇನ್‌ನಲ್ಲಿ ತರಬೇತಿ ವೇಳೆ ಸಂಭವಿಸಿದ ಅಪಘಾತದಲ್ಲಿ 27 ಜನರ ಪೈಕಿ 26 ಮಂದಿ ದಾರುಣವಾಗಿ ಮೃತಪಟ್ಟಿದ್ದರು.
  • 2020: ದಕ್ಷಿಣ ಸುಡಾನ್‌ನಲ್ಲಿ ನಡೆದ ಅಪಘಾತದಲ್ಲಿ ಐವರು ರಷ್ಯನ್ನರು ಸೇರಿದಂತೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದರು.
  • 2017: ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಪತನವಾಗಿ ನಾಲ್ವರು ಮೃತಪಟ್ಟಿದ್ದರು.

ಸದ್ಯ ರಷ್ಯಾದ ವಿಶೇಷ ತನಿಖಾ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಪ್ಪು ಪೆಟ್ಟಿಗೆ (Black Box) ಪತ್ತೆ ಹಚ್ಚುವ ಮೂಲಕ ಅಪಘಾತದ ನಿಖರ ಕಾರಣವನ್ನು ತಿಳಿಯಲು ಮುಂದಾಗಿದೆ. ಈ ಘಟನೆಯು ರಷ್ಯಾದ ವಾಯುಪಡೆಯ ಹಳೆಯ ವಿಮಾನಗಳ ಆಧುನೀಕರಣದ ಅಗತ್ಯವನ್ನು ಮತ್ತೊ

The post ರಷ್ಯಾದಲ್ಲಿ ಭೀಕರ ವಿಮಾನ ದುರಂತ: ಕ್ರೈಮಿಯಾ ಬಂಡೆಗೆ ಅಪ್ಪಳಿಸಿದ ‘An-26’, 29 ಸೇನಾ ಸಿಬ್ಬಂದಿ ದುರ್ಮರಣ. appeared first on Good News 24x7.

]]>
ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! https://www.goodnews24x7.com/cars-parked-in-front-of-the-house-caught-fire-two-cars-burnt-to-ashes-the-mischief-of-miscreants/ Thu, 20 Nov 2025 07:24:33 +0000 https://www.goodnews24x7.com/?p=8224 ನಂಜನಗೂಡಿನಲ್ಲಿ ಬಿಗಿ ಇಲ್ಲದ ಪೊಲೀಸ್ ಕಾರ್ಯವೈಖರಿಯ ವಿರುದ್ಧ ವ್ಯಾಪಕ ಆಕ್ರೋಶ ನಂಜನಗೂಡು: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.ಮಧ್ಯ ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮನೆಯವರು ಎಚ್ಚರವಾಗಿ…

The post ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! appeared first on Good News 24x7.

]]>

ನಂಜನಗೂಡಿನಲ್ಲಿ ಬಿಗಿ ಇಲ್ಲದ ಪೊಲೀಸ್ ಕಾರ್ಯವೈಖರಿಯ ವಿರುದ್ಧ ವ್ಯಾಪಕ ಆಕ್ರೋಶ

ನಂಜನಗೂಡು: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.ಮಧ್ಯ ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮನೆಯವರು ಎಚ್ಚರವಾಗಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಪರಿಸ್ಥಿತಿ ಕೈ ಮೀರಿದೆ.

ಕೊಲೆ ಸುಲಿಗೆ ಆಯ್ತು ಈಗ ಮನೆ ಮುಂದೆ ನಿಲ್ಲಿಸಿರುವ ಕಾರುಗಳಿಗೆ ಬೆಂಕಿ…!

ಪ್ರಶಾಂತ್ ಎಂಬುವರಿಗೆ ಸೇರಿದ ನ್ಯಾನೋ ಕಾರ್ ಹಾಗೂ ಅಭಿನಾಗಭೂಷಣ್ ಎಂಬುವರಿಗೆ ಸೇರಿದ ಮಹೇಂದ್ರ ಯುವ 500 ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನಲ್ಲಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.ರಾತ್ರಿ ಗಸ್ತು ಹೆಚ್ಚಿಸುವಂತೆ ಪೊಲೀಸರ ಮೇಲೆ ಸಾರ್ವಜನಿಕರು ಒತ್ತಡ ಹೇರಿದ್ದಾರೆ.ಕೊಲೆ,ಸುಲಿಗೆ ಆಯ್ತು ಇದೀಗ ಮನೆ ಮುಂದೆ ನಿಲ್ಲಿಸಿರುವ ವಾಹನಗಳಿಗೂ ರಕ್ಷಣೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

The post ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! appeared first on Good News 24x7.

]]>
11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* https://www.goodnews24x7.com/11-children-die-after-consuming-cough-syrup/ Sat, 04 Oct 2025 08:49:47 +0000 https://www.goodnews24x7.com/?p=7661 ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ…

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>

ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ ಚಿಟ್ ನೀಡಿವೆ. ಮಕ್ಕಳ ಸಾವಿಗೆ ಔಷಧ ಕಾರಣವಲ್ಲ ಎಂದು ಸಷ್ಟಪಡಿಸಿವೆ.

ಮಧ್ಯಪ್ರದೇಶದಲ್ಲಿ 9 ಮಕ್ಕಳು ಸಾವು: ಕಳೆದ 15 ದಿನದಲ್ಲಿ ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಈ ಮಕ್ಕಳ ಸಾವಿಗೆ ಕೋಲ್ಟಿಫ್ ಮತ್ತು ನೆಕ್‌ಸ್ಟೋ-ಡಿಎಸ್ ಕೆಮ್ಮಿನ ಔಷಧ ಸೇವನೆಯಿಂದ ಉಂಟಾದ ಕಿಡ್ನಿ ವೈಫಲ್ಯ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಮಧ್ಯ ಪ್ರದೇಶದ ಆರೋಗ್ಯ ಇಲಾಖೆಯು ಔಷಧದ ಪರೀಕ್ಷೆ ವೇಳೆ ಯಾವುದೇ ವಿಷಪೂರಿತ ಅಂಶ ಪತ್ತೆಯಾಗಿಲ್ಲ. ಔಷಧದ ನಿಷೇಧದ ಪ್ರಶ್ನೆಯೇ ಇಲ್ಲ. ಮಕ್ಕಳ ಸಾವಿಗೆ ಸಮಿತಿ ರಚಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.
ರಾಜಸ್ಥಾನದಲ್ಲಿ 2 ಮಕ್ಕಳ ಸಾವು: ರಾಜ ಸ್ಥಾನದ ಸಿಕಾರ್ ಮತ್ತು ಭರತ್‌ ಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದ್ದು, ಇಲ್ಲಿಯೂ ಸಹ ಔಷಧವೇ ಕಾರಣ ಎಂಬ ಆರೋಪವಿದೆ.

 

 

 

 

 

 

ತಮಿಳುನಾಡಿನಲ್ಲಿ ನಿಷೇಧ
ಮಕ್ಕಳ ಸಾವಿನ ಬೆನ್ನಲ್ಲೇ ತಮಿಳುನಾಡು ಸರ್ಕರ ಕೋಲ್ಟಿಫ್ ಸಿರಪ್ ಮೇಲೆ ನಿಷೇಧ ಹೇರಿದೆ. ತಮಿಳುನಾಡು ಔಷಧ ನಿಯಂತ್ರಣಾ ಮಂಡಳಿ ಈ ಕ್ರಮ ಕೈಗೊಂಡಿದೆ. ಘಟನೆ ಕುರಿತು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಆರೋಪವಿದೆ. ಆದರೆ ಅಲ್ಲಿನ ಸರ್ಕಾರವು ವೈದ್ಯರಿಗೆ ಕ್ಲೀನ್‌ ಚಿಟ್ ನೀಡಿದೆ. ರಾಜಸ್ಥಾನ ಔಷಧ ನಿಯಂತ್ರಣ ಮಂಡಳಿಯು ಔಷಧಗಳ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದೆ. ಎರಡೂ ಪ್ರಕರಣಗಳಲ್ಲಿಯೂ ಪೋಷಕರು ವೈದ್ಯರ ಸೂಚನೆಯಿಲ್ಲದೆಯೇ ಔಷಧ ನೀಡಿದ್ದೇ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.

2 ವರ್ಷದ ಮಕ್ಕಳಿಗೆ ಕೆಮ್ಮಿನೌಷಧ ಬೇಡ: ಕೇಂದ್ರದ ಎಚ್ಚರಿಕೆ
ಅತ್ತ ಕೇಂದ್ರ ಸರ್ಕಾರ ಕಫ್‌ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ಆರೋಪವನ್ನು ತಿರಸ್ಕರಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಈ ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.

ಜತೆಗೆ 2 ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡಬಾರದೆಂದು ಆದೇಶಿಸಿದೆ. ಜೊತೆಗೆ ಕೆಮ್ಮಿನ ಔಷಧದ ಪರಿಣಾಮ ಎಂಬ ಯಾವುದೇ ಪ್ರಕರಣ ಬಂದಲ್ಲಿ ಖಾಸಗಿ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶ ಹೊರಡಿಸಿದೆ.

The post 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿ ಸಾ* appeared first on Good News 24x7.

]]>
ಬಾಲ್ಯ ವಿವಾಹ ಮಾಡಲು ಮುಂದಾದ ಪೋಷಕರು, ಮಕ್ಕಳ ಸಹಾಯವಾಣಿಗೆ ಪೋಷಕರ ಮೇಲೆ ದೂರು ನೀಡಿದ ಬಾಲಕಿ https://www.goodnews24x7.com/parents-tried-to-get-her-married-as-a-child-girl-complained-to-the-child-helpline6398-2/ Wed, 20 Aug 2025 09:29:36 +0000 https://www.goodnews24x7.com/?p=6398 ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಶೇ 94 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಗೆ ಪೋಷಕರು ವಿವಾಹ ಮಾಡಲು ಯತ್ನಿಸಿದ ವಿದ್ಯಮಾನ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್​​​​, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ…

The post ಬಾಲ್ಯ ವಿವಾಹ ಮಾಡಲು ಮುಂದಾದ ಪೋಷಕರು, ಮಕ್ಕಳ ಸಹಾಯವಾಣಿಗೆ ಪೋಷಕರ ಮೇಲೆ ದೂರು ನೀಡಿದ ಬಾಲಕಿ appeared first on Good News 24x7.

]]>

ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಶೇ 94 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಗೆ ಪೋಷಕರು ವಿವಾಹ ಮಾಡಲು ಯತ್ನಿಸಿದ ವಿದ್ಯಮಾನ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್​​​​, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.ಉನ್ನತ ಶಿಕ್ಷಣದ ಕನಸು ಕಂಡಿದ್ದಳು. ಆದರೆ, ಪೋಷಕರು ಮದುವೆ ಮಾಡಿಸಲು ಮುಂದಾಗಿದ್​ದರು.
ಹುಡುಗನೊಬ್ಬನನ್ನು ನೋಡಿ ಒಂದು ತಿಂಗಳ ಒಳಗೆ ಮದುವೆ ಮಾಡಿಸಲು ಪೊಲೀಸರು ಮುಂದಾಗಿದ್ದರು. ಆದರೆ, ದಿಟ್ಟತನ ತೋರಿದ ಬಾಲಕಿ ‘ಮಕ್ಕಳ ಸಹಾಯವಾಣಿ’ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಆಕೆಯ ಮನೆಗೆ ತೆರಳಿ ಪೋಷಕರಿಗೆ ಬುದ್ಧಿವಾದ ಹೇಳಿದ್ದಾರೆ. ಬಾಲಕಿಯನ್ನು ರಕ್ಷಿಸಿ ಆಕೆಗೆ ಕಾಲೇಜೊಂದರಲ್ಲಿ ವಸತಿನಿಯಲಯದ ವ್ಯವಸ್ಥೆ ಮಾಡಿದ್ದಾರೆ.

ಬಾಲ್ಯ ವಿವಾಹ ಪ್ರಕರಣಗಳ ಜಿಲ್ಲಾವಾರು ವಿಂಗಡಣೆಯಲ್ಲಿ ಶಿವಮೊಗ್ಗ, ಬೆಳಗಾವಿ ಮತ್ತು ಚಿತ್ರದುರ್ಗ ಮೊದಲ ಮೂರು ಸ್ಥಾನಗಳಲ್ಲಿವೆ. ಮೈಸೂರು ಮತ್ತು ಮಂಡ್ಯ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿವೆ. ಈ ವರ್ಷ, ಏಪ್ರಿಲ್ ಮತ್ತು ಜೂನ್ 2025 ರ ನಡುವೆ, ರಾಜ್ಯದಲ್ಲಿ 211 ಪ್ರಕರಣಗಳು ವರದಿಯಾಗಿವೆ.
ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವೆ ಹೆಬ್ಬಾಳ್ಕರ್, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

The post ಬಾಲ್ಯ ವಿವಾಹ ಮಾಡಲು ಮುಂದಾದ ಪೋಷಕರು, ಮಕ್ಕಳ ಸಹಾಯವಾಣಿಗೆ ಪೋಷಕರ ಮೇಲೆ ದೂರು ನೀಡಿದ ಬಾಲಕಿ appeared first on Good News 24x7.

]]>