IndependenceDay Archives - Good News 24x7 https://www.goodnews24x7.com/tag/independenceday/ Kannada Sun, 24 Aug 2025 06:11:24 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg IndependenceDay Archives - Good News 24x7 https://www.goodnews24x7.com/tag/independenceday/ 32 32 2 ಲಡ್ಡುಗಾಗಿ ಸಿಎಂ ಹೆಲ್ಪ್ ಲೇನ್‌ ಗೆ ವ್ಯಕ್ತಿ ದೂರು! https://www.goodnews24x7.com/man-complains-to-cm-helpline-for-2-laddus/ Sun, 24 Aug 2025 06:10:52 +0000 https://www.goodnews24x7.com/?p=6622 ಸಾಮಾನ್ಯವಾಗಿ ಮೂಲಸೌಕರ್ಯದ ಬಗ್ಗೆ ದೂರು ನೀಡಲು ಸಿಎಂ ಹೆಲ್ಪ್ ಲೇನ್ ಗೆ ಜನರು ಕಾಲ್ ಮಾಡ್ತಾರೆ. ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹ ತನಗೆ ಗ್ರಾಮ ಪಂಚಾಯತಿನಿಂದ ಒಂದೇ ಲಡ್ಡು ಕೊಟ್ಟರು. ನನಗೆ ಇನ್ನೊಂದು ಲಡ್ಡು ಕೊಡಬೇಕೆಂದು ದೂರು ನೀಡಿದ್ದಾನೆ.ಸಾಮಾನ್ಯವಾಗಿ…

The post 2 ಲಡ್ಡುಗಾಗಿ ಸಿಎಂ ಹೆಲ್ಪ್ ಲೇನ್‌ ಗೆ ವ್ಯಕ್ತಿ ದೂರು! appeared first on Good News 24x7.

]]>

ಸಾಮಾನ್ಯವಾಗಿ ಮೂಲಸೌಕರ್ಯದ ಬಗ್ಗೆ ದೂರು ನೀಡಲು ಸಿಎಂ ಹೆಲ್ಪ್ ಲೇನ್ ಗೆ ಜನರು ಕಾಲ್ ಮಾಡ್ತಾರೆ. ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹ ತನಗೆ ಗ್ರಾಮ ಪಂಚಾಯತಿನಿಂದ ಒಂದೇ ಲಡ್ಡು ಕೊಟ್ಟರು. ನನಗೆ ಇನ್ನೊಂದು ಲಡ್ಡು ಕೊಡಬೇಕೆಂದು ದೂರು ನೀಡಿದ್ದಾನೆ.ಸಾಮಾನ್ಯವಾಗಿ ಜನರು ತಮ್ಮ ದೂರುಗಳ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮುಗೆ ಪೋನ್ ಮಾಡ್ತಾರೆ. ಸಿಎಂ ಹೆಲ್ಪ್ ಲೇನ್ ಗೂ ಪೋನ್ ಮಾಡಿ ದೂರುಗಳನ್ನು ಹೇಳಿಕೊಳ್ಳುತ್ತಾರೆ. ತಮ್ಮ ಮನೆಯ ರೋಡ್ ಸರಿ ಇಲ್ಲ. ಕರೆಂಟ್ ಇಲ್ಲ. ಊರಿಗೆ ಹೋಗಲು ರಸ್ತೆ ಇಲ್ಲ. ಜಮೀನಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳೋದು ಸಾಮಾನ್ಯ.ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹಾ ಎಂಬ ವ್ಯಕ್ತಿ ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ಹೆಲ್ಪ್ ಲೇನ್ ಗೆ ಪೋನ್ ಮಾಡಿ ವಿಚಿತ್ರ ದೂರು ನೀಡಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಲ್ಲರಿಗೂ ಎರಡೆರಡು ಲಡ್ಡು ನೀಡಿದ್ದರು.

 

ಶಬರಿಮಲೆ: ದಟ್ಟಣೆ ನಿಯಂತ್ರಣಕ್ಕೆ ಎಐ ಕ್ಯಾಮೆರಾ, ಡ್ರೋನ್ ಬಳಕೆಗೆ ಕೆಎಸ್‌ಆರ್‌ಟಿಸಿ ಚಿಂತನೆ.

ನನಗೆ ಮಾತ್ರವೇ ಒಂದೇ ಒಂದು ಲಡ್ಡು ನೀಡಿದ್ದಾರೆ. ನನಗೂ ಎರಡು ಲಡ್ಡು ನೀಡಬೇಕಾಗಿತ್ತು ಎಂದು ಸಿಎಂ ಹೆಲ್ಪ್ ಲೇನ್ ಗೆ ದೂರು ನೀಡಿದ್ದಾನೆ. ಗ್ರಾಮ ಪಂಚಾಯತ್ ಭವನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲಡ್ಡು ವಿತರಣೆ ವೇಳೆ ತನಗೆ 2 ಲಡ್ಡು ನೀಡಬೇಕಾಗಿತ್ತು. ನಾನು 2 ಲಡ್ಡು ನೀಡುವಂತೆ ಕೇಳಿದರೂ ಕೊಟ್ಟಿಲ್ಲ ಎಂದು ಸಿಎಂ ಹೆಲ್ಪ್ ಲೇನ್ ಗೆ ಪೋನ್ ಮಾಡಿ ದೂರು ಅನ್ನು ಕಮಲೇಶ್ ಕುಶ್ವಾಹ ರಿಜಿಸ್ಟರ್ ಮಾಡಿದ್ದಾನೆ.ದ್ವಜಾರೋಹಣದ ಬಳಿಕ ಗ್ರಾಮ ಪಂಚಾಯತ್ ಸರಿಯಾಗಿ ಎಲ್ಲರಿಗೂ ಸಿಹಿ ಹಂಚುವಲ್ಲಿ ವಿಫಲವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ದೂರು ನೀಡಿದ್ದಾನೆ.ಈ ಸಮಸ್ಯೆ ಬಗ್ಗೆ ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ್ ಇದು ನಿಜವಾಗಿ ನಡೆದ ಘಟನೆ ಎನ್ನುವುದನ್ನು ಖಚಿತಪಡಿಸಿದ್ದಾರೆ. ಜೊತೆಗೆ ಘಟನೆ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದಾರೆ. ಗ್ರಾಮಸ್ಥರು ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಪಂಚಾಯತ್ ಪಿವನ್, ಕಮಲೇಶ್ ಕುಶ್ವಾಹಾಗೆ ಒಂದು ಲಡ್ಡು ನೀಡಿದ್ದಾರೆ. ಆದರೇ, ಕಮಲೇಶ್ ಕುಶ್ವಾಹ ತನಗೆ ಎರಡು ಲಡ್ಡು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಎರಡು ಲಡ್ಡು ಕೊಡಲು ಪಿವನ್ ನಿರಾಕರಿಸಿದ್ದಾನೆ. ಆಗ ಕಮಲೇಶ್ ಕುಶ್ವಾಹ ಸಿಎಂ ಹೆಲ್ಪ್ ಲೇನ್ ಗೆ ಕರೆ ಮಾಡಿದ್ದಾನೆ ಎಂದು ಪಂಚಾಯತ್ ಸೆಕ್ರೆಟರಿ ರವೀಂದ್ರ ಶ್ರೀವಾಸ್ತವ್ ಹೇಳಿದ್ದಾರೆ. ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಗ್ರಾಮ ಪಂಚಾಯತ್ ಒಂದು ಕೆಜಿ ಸ್ವೀಟ್ ಖರೀದಿಸಿ, ಕಮಲೇಶ್ ಕುಶ್ವಾಹಗೆ ನೀಡಿ ಕ್ಷಮೆ ಕೇಳಲು ನಿರ್ಧರಿಸಿದೆ. ಈ ಮೂಲಕ ಕಮಲೇಶ್ ಕುಶ್ವಾಹನನ್ನು ಸಮಾಧಾನಪಡಿಸಲು ಗ್ರಾಮ ಪಂಚಾಯತ್ ನಿರ್ಧರಿಸಿದೆ.

The post 2 ಲಡ್ಡುಗಾಗಿ ಸಿಎಂ ಹೆಲ್ಪ್ ಲೇನ್‌ ಗೆ ವ್ಯಕ್ತಿ ದೂರು! appeared first on Good News 24x7.

]]>
ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. https://www.goodnews24x7.com/darshan-sits-sullenly-after-not-attending-independence-day-celebrations/ Sat, 16 Aug 2025 06:04:56 +0000 https://www.goodnews24x7.com/?p=6169 ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಧ್ಯಂತರ ಜಾಮೀನು ಪಡೆದು ಹಲವು ಷರತ್ತುಗಳನ್ನು ಉಲ್ಲಂಘಿಸಿರೋದು ಇದಕ್ಕೆ ಕಾರಣ. ಬೆನ್ನು ನೋವು ಎಂದು ವಿಚಾರಣೆಗೆ ಗೈರು ಹಾಜರಾಗಿದ್ದರೂ, ಸಿನಿಮಾ ಪ್ರದರ್ಶನದಲ್ಲಿ…

The post ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. appeared first on Good News 24x7.

]]>

ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್.

ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಧ್ಯಂತರ ಜಾಮೀನು ಪಡೆದು ಹಲವು ಷರತ್ತುಗಳನ್ನು ಉಲ್ಲಂಘಿಸಿರೋದು ಇದಕ್ಕೆ ಕಾರಣ. ಬೆನ್ನು ನೋವು ಎಂದು ವಿಚಾರಣೆಗೆ ಗೈರು ಹಾಜರಾಗಿದ್ದರೂ, ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ.

ನಟ ದರ್ಶನ್ ಅವರು ಸದ್ಯ ಜೈಲು ಹಕ್ಕಿ ಆಗಿದ್ದಾರೆ. ಇಷ್ಟು ದಿನ ಜಾಮೀನು ಪಡೆದು ಹಾಯಾಗಿ ಓಡಾಡಿಕೊಂಡಿದ್ದ ಅವರಿಗೆ ಈಗ ಮತ್ತೆ ಜೈಲಿನೂಟ ಮಾಡುವ ಪರಿಸ್ಥಿತಿ ಬಂದಿದೆ. ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದ ಅವರು, ನಂತರ ಪೂರ್ತಿ ಪ್ರಮಾಣದ ಜಾಮೀನು ಪಡೆದರು. ಶೂಟಿಂಗ್​ಗಾಗಿ ಹಾಯಾಗಿ ಸುತ್ತಾಡಿಕೊಂಡಿದ್ದರು. ವಿದೇಶಕ್ಕೂ ಕೂಡ ಹೋಗಿ ಬಂದರು. ಇದೆಲ್ಲವನ್ನೂ ಸುಪ್ರೀಂಕೋರ್ಟ್ ಪರಿಗಣಿಸಿದೆ. ಹೀಗಾಗಿ, ಅವರ ಜಾಮೀನು ರದ್ದಾಗಿದೆ. ಇದರಿಂದ ದರ್ಶನ್ ಜೈಲಿ​ನಲ್ಲಿ ಮಂಕಾಗಿ ಕುಳಿತಿದ್ದಾರೆ.

ದರ್ಶನ್ ಅವರು ಜಾಮೀನು ಪಡೆದ ಬಳಿಕ ಮಾಡಿದ ತಪ್ಪು ಒಂದೆರಡಲ್ಲ. ಅವರು ಬೇಕಾಬಿಟ್ಟಿ ನಡೆದುಕೊಂಡಿದ್ದೇ ಅವರಿಗೆ ಮುಳುವಾಯಿತು. ಪ್ರಕರಣದ ಸಾಕ್ಷಿ ಚಿಕ್ಕಣ್ಣ ಜೊತೆ ದರ್ಶನ್ ಸುತ್ತಾಟ ಮಾಡಿಕೊಂಡಿದ್ದರು. ಬೆನ್ನು ನೋವಿನ ಕಾರಣ ನೀಡಿ ವಿಚಾರಣೆಗೆ ಗೈರಾಗೋ ಅವರು, ಮರುದಿನವೇ ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ಇದೆಲ್ಲವೂ ಕೋರ್ಟ್ ಕಣ್ಣು ಕುಕ್ಕಿದೆ. ಹೀಗಾಗಿ, ಕೋರ್ಟ್ ಮತ್ತೆ ಅವರನ್ನು ಜೈಲಿಗೆ ಕಳುಹಿಸಿದೆ.

ಸದ್ಯ ದರ್ಶನ್ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ ಎನ್ನಲಾಗಿದೆ. ಆಗಸ್ಟ್ 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ವತಂತ್ರ್ಯೋತ್ಸವದ ಸೆಲೆಬ್ರೇಷನ್ ನಡೆದಿದೆ. ಆದರೆ, ಇದರಲ್ಲಿ ಭಾಗಿ ಅವರು ನಿರಾಕರಿಸಿದ್ದಾರೆ. ಕರೆದಾಗ ‘ನಾನು ಬರಲ್ಲ’ ಎಂದಷ್ಟೇ ಹೇಳಿ ಮತ್ತೆ ಮೌನಕ್ಕೆ ಜಾರಿದ್ದಾರೆ ಎಂದು ವರದಿ ಆಗಿದೆ.

ದರ್ಶನ್​ ಅವರಿಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಅವರ ಕೈದಿ ಸಂಖ್ಯೆ 7314, ಪವಿತ್ರಾ ಗೌಡ ಕೈದಿ ಸಂಖ್ಯೆ 7313. ದರ್ಶನ್​ಗೆ ಜಾಮೀನು ರದ್ದು ಮಾಡಿರೋದು ಸುಪ್ರೀಂಕೋರ್ಟ್. ಹೀಗಾಗಿ, ಅವರು ಸುಪ್ರೀಂಕೋರ್ಟ್​ನ ವಿಸ್ತ್ರತ ಪೀಠಕ್ಕೆ ತೆರಳಿ ಜಾಮೀನು ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಆದೇಶದಲ್ಲಿ ತಪ್ಪಿದೆ ಎಂಬುದನ್ನು ತೋರಿಸಿದರೆ ಮಾತ್ರ ಕೋರ್ಟ್ ವಿಚಾರಣೆಗೆ ಒಪ್ಪುತ್ತದೆ. ಇದು ಸಾಧ್ಯವಾಗದ ಮಾತು. ಇನ್ನು, ಅವರು ಮತ್ತೊಮ್ಮೆ ಕೆಳ ಹಂತದ ಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿರುವುದರಿಂದ ಇಲ್ಲಿಯೂ ಅಷ್ಟು ಸುಲಭದಲ್ಲಿ ಜಾಮೀನು ಸಿಗೋದಿಲ್ಲ. ಬೆನ್ನು ನೋವಿನ ಕಾರಣ ನೀಡಿದರೂ ಅದು ಈ ಬಾರಿ ಕೆಲಸ ಮಾಡೋದು ಅನುಮಾನ.

The post ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್. appeared first on Good News 24x7.

]]>
79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಭಾಷಣ. https://www.goodnews24x7.com/cm-siddaramaiahs-speech-on-the-occasion-of-79th-independence-day/ Fri, 15 Aug 2025 07:08:17 +0000 https://www.goodnews24x7.com/?p=6152 ಬೆಂಗಳೂರು, ಆಗಸ್ಟ್ 15: ಹೊಸ ತಲೆಮಾರಿನ ಮಕ್ಕಳಲ್ಲಿ ಬದಲಾವಣೆ ತರುವುದಕ್ಕಾಗಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. 79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಾಣೆಕ್ ಷಾ ಪರೇಡ್…

The post 79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಭಾಷಣ. appeared first on Good News 24x7.

]]>

ಬೆಂಗಳೂರು, ಆಗಸ್ಟ್ 15: ಹೊಸ ತಲೆಮಾರಿನ ಮಕ್ಕಳಲ್ಲಿ ಬದಲಾವಣೆ ತರುವುದಕ್ಕಾಗಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಗಮನಿಸಿರುವ ಹಾಗೆ ನಮ್ಮ ಹೊಸ ತಲೆಮಾರು ಮೊಬೈಲ್ ಫೋನು, ಇಂಟರ್ನೆಟ್ಟು ಮುಂತಾದವುಗಳ ಭರಾಟೆಯಲ್ಲಿ ವಿಪರೀತ ತಲ್ಲಣಗಳನ್ನು ಎದುರಿಸುತ್ತಿದೆ. ಖಿನ್ನತೆ, ಆತಂಕ, ವಿನಾಕಾರಣ ಸಿಟ್ಟು, ದ್ವೇಷ ಮುಂತಾದ ಭಾವನೆಗಳಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದೆ. ಈ ಸಾಮಾಜಿಕ ಸಮಸ್ಯೆಯನ್ನು ಹೋಗಲಾಡಿಸಲು ನಾವೆಲ್ಲರೂ ಸೇರಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಇದಕ್ಕಾಗಿ ನಾವು ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಎಂಬ ಹೊಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಾವು ಕೇವಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಜನರ ಜೀವನವನ್ನು ಬದಲಾಯಿಸುವಂತಹ ಆಲೋಚನೆಗಳು, ಆವಿಷ್ಕಾರಗಳು ಮತ್ತು ಹೊಸತನಗಳನ್ನು ಸೃಷ್ಟಿಸುತ್ತಿದ್ದೇವೆ. ನಮ್ಮ ಈ ಆಲೋಚನೆಗಳು ಗಡಿಯಾಚೆಗೂ ತಲುಪಿವೆ ಎಂದು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾತಿ ಗಣತಿಯ ಅಗತ್ಯ ಒತ್ತಿಹೇಳಿದ ಸಿದ್ದರಾಮಯ್ಯ
ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಸರ್ಕಾರವು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ವರದಿಯನ್ನು ನೀಡಿದ ಕೂಡಲೇ ಅದನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಹೇಳಿದರು. ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಅಗತ್ಯವನ್ನು ಒತ್ತಿಹೇಳಿದರು.

ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಬಗ್ಗೆ ಉಲ್ಲೇಖಿಸಿದ ಅವರು, ರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಹಾಗೆಯೇ ನಾವೆಲ್ಲರೂ ನಮ್ಮ ಹೆಮ್ಮೆಯ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕಾಗಿದೆ. ಈ ಹೋರಾಟದಲ್ಲಿ ಪ್ರತಿ ಪ್ರಜೆಯೂ ಯೋಧರಂತೆ ಕೆಲಸ ಮಾಡಬೇಕಾಗಿದೆ. ಸರ್ಕಾರವು ಈಗಾಗಲೇ ಈ ವಿಚಾರದಲ್ಲಿ ಸಕಲ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ ಎಂದರು.

 

ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ
ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು. ಅಲ್ಲದೆ, ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಹಂಚಿಕೆ ಆಗುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಜಮ್ಮಿ ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಮಡಿದವರು, ಪಾಕ್ ವಿರುದ್ಧ ಹೋರಾಡಿ ಮಡಿದವರಿಗೂ ಸಿದ್ದರಾಮಯ್ಯ ಗೌರವ ಅರ್ಪಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ 101 ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25 ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ: ಇತಿಹಾಸದ ಮೆಲುಕು ಹಾಕಿದ ಸಿಎಂ
ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕಿತ್ತೆಸೆದು ಧೈರ್ಯ, ತ್ಯಾಗ, ಸ್ವರಾಜ್ಯದ ಸಂಕೇತ ಮತ್ತು ಸಮಸ್ತ ಶಕ್ತಿಯಾದ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಲಾಯಿತು. ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ದೀರ್ಘಕಾಲದ ಹೋರಾಟದಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಎಲ್ಲಾ ಅಮರ ವೀರರನ್ನು ಧನ್ಯತಾಭಾವದಿಂದ ಸ್ಮರಿಸೋಣ. ಅವರಿಗೆ ನಮಿಸೋಣ. ಹಾಗೆಯೇ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು ಎಂಬುದು ಗಮನಾರ್ಹ.

ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಹಲಗಲಿಯ ವೀರ ಬೇಡರು, ಮೈಲಾರ ಮಹಾದೇವಪ್ಪ, ಬೂದಿ ಬಸಪ್ಪ ನಾಯಕ ಮುಂತಾದವರು ಹಾಗೂ ಶ್ರೀರಂಗಪಟ್ಟಣ, ಸುರಪುರ, ಕಿತ್ತೂರು, ಈಸೂರು, ವಿಧುರಾಶ್ವತ್ಥ, ಶಿವಪುರ, ಅಂಕೋಲ ಮುಂತಾದ ಸ್ಥಳಗಳು ಬ್ರಿಟೀಷರನ್ನು ನಡುಗಿಸಿದ್ದವು. ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೆ ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಗೌರವಿಸೋಣ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಾಣ ಮಾಡುವುದರ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದು ಸಿದ್ದರಾಮಯ್ಯ ಕರೆ ನೀಡಿದರು.

The post 79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಭಾಷಣ. appeared first on Good News 24x7.

]]>