insurance money Archives - Good News 24x7 https://www.goodnews24x7.com/tag/insurance-money/ Kannada Tue, 04 Feb 2025 10:39:30 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg insurance money Archives - Good News 24x7 https://www.goodnews24x7.com/tag/insurance-money/ 32 32 ವಿಮೆ ಹಣಕ್ಕಾಗಿ ತಂಗಿಯನ್ನೇ ಕೊಂ* ಅಣ್ಣ! https://www.goodnews24x7.com/%e0%b2%b5%e0%b2%bf%e0%b2%ae%e0%b3%86-%e0%b2%b9%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%a4%e0%b2%82%e0%b2%97%e0%b2%bf%e0%b2%af%e0%b2%a8%e0%b3%8d%e0%b2%a8%e0%b3%87/ Tue, 04 Feb 2025 10:39:30 +0000 https://www.goodnews24x7.com/?p=2240 ಹೈದರಾಬಾದ್: ಇನ್ಷುರೆನ್ಸ್ ಹಣವನ್ನು ಪಡೆಯಲು ತನ್ನ ತಂಗಿಯನ್ನು ಕೊಂದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಾಲಪತಿ ಅಶೋಕ್ ಕುಮಾರ್ ರೆಡ್ಡಿ ಎಂಬಾತ ತಿಂಗಳುಗಟ್ಟಲೆ ಪ್ಲಾನ್ ಮಾಡಿ, ಆಕೆಗೆ 1 ಕೋಟಿ ರೂ. ವಿಮೆ ಮಾಡಿಸಿದ್ದ. ಬಳಿಕ ಆಕೆಯ ಸಾವನ್ನು ಆತ ಅಪಘಾತವೆಂದು ಬಿಂಬಿಸಿದ್ದ.…

The post ವಿಮೆ ಹಣಕ್ಕಾಗಿ ತಂಗಿಯನ್ನೇ ಕೊಂ* ಅಣ್ಣ! appeared first on Good News 24x7.

]]>

ಹೈದರಾಬಾದ್: ಇನ್ಷುರೆನ್ಸ್ ಹಣವನ್ನು ಪಡೆಯಲು ತನ್ನ ತಂಗಿಯನ್ನು ಕೊಂದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಾಲಪತಿ ಅಶೋಕ್ ಕುಮಾರ್ ರೆಡ್ಡಿ ಎಂಬಾತ ತಿಂಗಳುಗಟ್ಟಲೆ ಪ್ಲಾನ್ ಮಾಡಿ, ಆಕೆಗೆ 1 ಕೋಟಿ ರೂ. ವಿಮೆ ಮಾಡಿಸಿದ್ದ. ಬಳಿಕ ಆಕೆಯ ಸಾವನ್ನು ಆತ ಅಪಘಾತವೆಂದು ಬಿಂಬಿಸಿದ್ದ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅಶೋಕ್ ಕುಮಾರ್ ರೆಡ್ಡಿ ತನ್ನ ತಂಗಿಯನ್ನು ಕೊಂದು, ಆಕೆಯ ಸಾವನ್ನು ಅಪಘಾತವೆಂದು ಬಿಂಬಿಸಿದ್ದ. 1 ಕೋಟಿ ರೂ. ವಿಮಾ ಹಣವನ್ನು ಪಡೆಯಲು ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 1 ಕೋಟಿ ರೂ. ವಿಮಾ ಪಾವತಿಯನ್ನು ವಂಚಿಸಲು ತನ್ನ ವಿಚ್ಛೇದಿತ ಮತ್ತು ಮಕ್ಕಳಿಲ್ಲದ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. 2024ರ ಫೆಬ್ರವರಿ 2ರಂದು ಪೊಡಿಲಿಯ ಪೆಟ್ರೋಲ್ ಬಂಕ್ ಬಳಿ ನಡೆದ ಈ ಅಪರಾಧಕ್ಕಾಗಿ ಆರೋಪಿಯಾಗಿರುವ 30 ವರ್ಷದ ಮಾಲಪತಿ ಅಶೋಕ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿಗೇನಾಯ್ತು ?
ಭಾರೀ ಸಾಲಗಳಿಂದ ಬಳಲುತ್ತಿದ್ದ ಅಶೋಕ್, ತನ್ನ ತಂಗಿಯ ಜೀವಕ್ಕೆ ವಿಮೆ ಮಾಡಿಸಿ, ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ, ಅಶೋಕ್ ತನ್ನ ತಂಗಿಯನ್ನು ಓಂಗೋಲ್ಗೆ ಆಸ್ಪತ್ರೆಗೆ ಭೇಟಿ ನೀಡುವ ನೆಪದಲ್ಲಿ ತನ್ನ ಕಾರಿನೊಳಗೆ ಕೂರಿಸಿಕೊಂಡಿದ್ದ. ಅಲ್ಲಿಂದ ವಾಪಾಸ್ ಬರುವಾಗ ಆಕೆಗೆ ನಿದ್ರೆ ಮಾತ್ರೆಗಳನ್ನು ನೀಡಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

The post ವಿಮೆ ಹಣಕ್ಕಾಗಿ ತಂಗಿಯನ್ನೇ ಕೊಂ* ಅಣ್ಣ! appeared first on Good News 24x7.

]]>
ವಿಮೆ ಹಣಕ್ಕಾಗಿ ಮಗನೇ ತನ್ನ ತಂದೆಯನ್ನು ಕೊ* ಮಾಡಿ, ಬಳಿಕ ಅಪಘಾತ ಎಂದು ಬಿಂಬಿಸಲು ಯತ್ನ: ಪಿರಿಯಾಪಟ್ಟಣದಲ್ಲಿ ಘಟನೆ. https://www.goodnews24x7.com/%e0%b2%b5%e0%b2%bf%e0%b2%ae%e0%b3%86-%e0%b2%b9%e0%b2%a3%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%ae%e0%b2%97%e0%b2%a8%e0%b3%87-%e0%b2%a4%e0%b2%a8%e0%b3%8d%e0%b2%a8-%e0%b2%a4/ Sat, 28 Dec 2024 06:49:23 +0000 https://www.goodnews24x7.com/?p=1307 ಪಿರಿಯಾಪಟ್ಟಣ :- ವಿಮೆ ಹಣದ ಆಸೆಗಾಗಿ ತಂದೆಯನ್ನೇ ಕೊಲೆ ಮಾಡಿದ ಮಗನೊಬ್ಬ ಬಳಿಕ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಹೆಣೆಯಲು ಯತ್ನಿಸಿದ ಪ್ರಕರಣ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಹತ್ಯೆ ಮಾಡಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ಗೆರೋಸಿ…

The post ವಿಮೆ ಹಣಕ್ಕಾಗಿ ಮಗನೇ ತನ್ನ ತಂದೆಯನ್ನು ಕೊ* ಮಾಡಿ, ಬಳಿಕ ಅಪಘಾತ ಎಂದು ಬಿಂಬಿಸಲು ಯತ್ನ: ಪಿರಿಯಾಪಟ್ಟಣದಲ್ಲಿ ಘಟನೆ. appeared first on Good News 24x7.

]]>

ಪಿರಿಯಾಪಟ್ಟಣ :- ವಿಮೆ ಹಣದ ಆಸೆಗಾಗಿ ತಂದೆಯನ್ನೇ ಕೊಲೆ ಮಾಡಿದ ಮಗನೊಬ್ಬ ಬಳಿಕ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಹೆಣೆಯಲು ಯತ್ನಿಸಿದ ಪ್ರಕರಣ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಹತ್ಯೆ ಮಾಡಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯ ಪಾಂಡು ಎಂಬಾತನೇ ತನ್ನ ತಂದೆ ಅಣ್ಣಪ್ಪ ಅವರನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿ ಬುಧವಾರ ಈ ಘಟನೆ ನಡೆದಿದೆ.

ಅಣ್ಣಪ್ಪನ ಹೆಸರಲ್ಲಿ ವಿಮೆ ಮಾಡಿಸಿದ ಮಗ ಪಾಂಡು, ಆ ಹಣದ ಆಸೆಗೆ ಕೃತ್ಯ ಎಸಗಿದ್ದಾನೆ. ‘ನಿಮಗೆ ಟಿಬೇಟಿಯನ್ ಮೊದಲನೇ ಕ್ಯಾಂಪಿನಲ್ಲಿ ಕೆಲಸ ಇದೆ, ನೀವು ಹೋಗಿ’ ಎಂದು ತಂದೆಗೆ ಹೇಳಿರುವ ಆರೋಪಿ, ಬಳಿಕ ಹಿಂಬದಿಯಿಂದ ಫಾಲೋ ಮಾಡಿಕೊಂಡು ಬಂದು ತಲೆ ಭಾಗಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಣ್ಣಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಆರೋಪಿಯು ತಂದೆಯ ಶವವನ್ನು ಬಿ.ಎಂ. ರಸ್ತೆಯ ಮಂಚ ದೇವನಹಳ್ಳಿ ಸಮೀಪ ಬಿಸಾಡಿದ್ದಾನೆ. ಸ್ವಲ್ಪ ಸಮಯದ ನಂತರ ಪೊಲೀಸ್ ಠಾಣೆಗೆ ಬಂದು ತನ್ನ ತಂದೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿ ದೂರು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಂಡು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡ ಅನುಮಾನದ ಮೇಲೆ ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ಧಾನೆ. ತನ್ನ ತಂದೆ ಹೆಸರಿನಲ್ಲಿ ಇನ್ಶೂರೆನ್ಸ್ ಇದೆ. ಹೀಗಾಗಿ, ಅವರು ಅಪಘಾತದಲ್ಲಿ ಸಾವನ್ನಪ್ಪಿದರೆ ಡಬಲ್ ಹಣ ಸಿಗುವ ಆಸೆಯಲ್ಲಿ ಈ ಕೃತ್ಯ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ಧಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ, ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ದುಃಖಿತನಾದ ಅಣ್ಣಪ್ಪ ಅವರ ಅಣ್ಣ ಧರ್ಮ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಬೈಲುಕುಪ್ಪೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

The post ವಿಮೆ ಹಣಕ್ಕಾಗಿ ಮಗನೇ ತನ್ನ ತಂದೆಯನ್ನು ಕೊ* ಮಾಡಿ, ಬಳಿಕ ಅಪಘಾತ ಎಂದು ಬಿಂಬಿಸಲು ಯತ್ನ: ಪಿರಿಯಾಪಟ್ಟಣದಲ್ಲಿ ಘಟನೆ. appeared first on Good News 24x7.

]]>