intensifies Archives - Good News 24x7 https://www.goodnews24x7.com/tag/intensifies/ Kannada Sat, 28 Mar 2026 09:59:12 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg intensifies Archives - Good News 24x7 https://www.goodnews24x7.com/tag/intensifies/ 32 32 ದೇಶವ್ಯಾಪಿ 1,100ಕ್ಕೂ ಹೆಚ್ಚು ಹುಸಿ ಬಾಂ* ಬೆದರಿಕೆ ಪ್ರಕರಣ: ಮೈಸೂರಿನಲ್ಲಿ ಆರೋಪಿ ಬಂಧನ, ದೆಹಲಿ ಪೊಲೀಸರಿಂದ ವಿಚಾರಣೆ ತೀವ್ರ https://www.goodnews24x7.com/more-than-1100-fake-bomb-threats-across-the-country-accused-arrested-in-mysore-delhi-police-intensifies-interrogation/ Sat, 28 Mar 2026 09:56:16 +0000 https://www.goodnews24x7.com/?p=8997 ಮೈಸೂರು: ದೇಶದ ವಿವಿಧ ಭಾಗಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಬಹು ದೊಡ್ಡ ಹುಸಿ ಬಾಂಬ್ ಬೆದರಿಕೆ ಜಾಲವನ್ನು ಪತ್ತೆಹಚ್ಚಿದ ದೆಹಲಿ ಪೊಲೀಸರು, ಮೈಸೂರಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ಶ್ರೀನಿವಾಸ್ ಅಲಿಯಾಸ್ ಶ್ರೀನಿವಾಸ್ ಲೂಯಿಸ್…

The post ದೇಶವ್ಯಾಪಿ 1,100ಕ್ಕೂ ಹೆಚ್ಚು ಹುಸಿ ಬಾಂ* ಬೆದರಿಕೆ ಪ್ರಕರಣ: ಮೈಸೂರಿನಲ್ಲಿ ಆರೋಪಿ ಬಂಧನ, ದೆಹಲಿ ಪೊಲೀಸರಿಂದ ವಿಚಾರಣೆ ತೀವ್ರ appeared first on Good News 24x7.

]]>

ಮೈಸೂರು: ದೇಶದ ವಿವಿಧ ಭಾಗಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಬಹು ದೊಡ್ಡ ಹುಸಿ ಬಾಂಬ್ ಬೆದರಿಕೆ ಜಾಲವನ್ನು ಪತ್ತೆಹಚ್ಚಿದ ದೆಹಲಿ ಪೊಲೀಸರು, ಮೈಸೂರಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ಶ್ರೀನಿವಾಸ್ ಅಲಿಯಾಸ್ ಶ್ರೀನಿವಾಸ್ ಲೂಯಿಸ್ ಎಂದು ಗುರುತಿಸಲಾಗಿದೆ. ದೇಶದ ಹಲವು ಪ್ರಮುಖ ನಗರಗಳಲ್ಲಿ ನ್ಯಾಯಾಲಯಗಳು, ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಆತಂಕ ಹುಟ್ಟಿಸುವ ಇಮೇಲ್‌ಗಳನ್ನು ಕಳುಹಿಸಿದ್ದ ಆರೋಪ ಈತನ ಮೇಲಿದೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಸುಮಾರು 1,100ಕ್ಕೂ ಹೆಚ್ಚು ಹುಸಿ ಬಾಂ* ಬೆದರಿಕೆ ಸಂದೇಶಗಳನ್ನು ರವಾನಿಸಿ ಭದ್ರತಾ ವ್ಯವಸ್ಥೆಗಳಿಗೆ ಸವಾಲು ಹಾಕಿದ್ದಾನೆ. ಈ ಬೆದರಿಕೆಗಳ ಪರಿಣಾಮವಾಗಿ ಅನೇಕ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಪರಿಶೀಲನೆ ಕಾರ್ಯಾಚರಣೆ ಮತ್ತು ಜನರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಮೈಸೂರಿಗೆ ಬಂದು ಆರೋಪಿ ಬಂಧಿಸಿದ್ದಾರೆ.

ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್ ಸೇರಿದಂತೆ ತಾಂತ್ರಿಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲಿಸಿ ಇನ್ನಷ್ಟು ಮಾಹಿತಿಯನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯುವ ಸಾಧ್ಯತೆ ಇದ್ದು, ಈತನ ಹಿಂದೆ ಇನ್ನಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

The post ದೇಶವ್ಯಾಪಿ 1,100ಕ್ಕೂ ಹೆಚ್ಚು ಹುಸಿ ಬಾಂ* ಬೆದರಿಕೆ ಪ್ರಕರಣ: ಮೈಸೂರಿನಲ್ಲಿ ಆರೋಪಿ ಬಂಧನ, ದೆಹಲಿ ಪೊಲೀಸರಿಂದ ವಿಚಾರಣೆ ತೀವ್ರ appeared first on Good News 24x7.

]]>