international cricket Archives - Good News 24x7 https://www.goodnews24x7.com/tag/international-cricket/ Kannada Fri, 27 Jun 2025 12:16:04 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg international cricket Archives - Good News 24x7 https://www.goodnews24x7.com/tag/international-cricket/ 32 32 ಟಿ20 ಪವರ್ಪ್ಲೇ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ…. https://www.goodnews24x7.com/%e0%b2%9f%e0%b2%bf20-%e0%b2%aa%e0%b2%b5%e0%b2%b0%e0%b3%8d%e0%b2%aa%e0%b3%8d%e0%b2%b2%e0%b3%87-%e0%b2%a8%e0%b2%bf%e0%b2%af%e0%b2%ae%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%a6/ Fri, 27 Jun 2025 12:16:04 +0000 https://www.goodnews24x7.com/?p=4733 ಐಸಿಸಿ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪವರ್ಪ್ಲೇ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮಳೆ ಅಥವಾ ಇತರ ಕಾರಣಗಳಿಂದ ಓವರ್ಗಳು ಕಡಿಮೆಯಾದರೆ ಪವರ್ಪ್ಲೇ, ಓವರ್ಗಳ ಬದಲಿಗೆ ಚೆಂಡುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, 5 ಓವರ್ಗಳ ಪಂದ್ಯದಲ್ಲಿ 1.3 ಓವರ್ಗಳು ಪವರ್ಪ್ಲೇ…

The post ಟಿ20 ಪವರ್ಪ್ಲೇ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ…. appeared first on Good News 24x7.

]]>

ಐಸಿಸಿ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪವರ್ಪ್ಲೇ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮಳೆ ಅಥವಾ ಇತರ ಕಾರಣಗಳಿಂದ ಓವರ್ಗಳು ಕಡಿಮೆಯಾದರೆ ಪವರ್ಪ್ಲೇ, ಓವರ್ಗಳ ಬದಲಿಗೆ ಚೆಂಡುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, 5 ಓವರ್ಗಳ ಪಂದ್ಯದಲ್ಲಿ 1.3 ಓವರ್ಗಳು ಪವರ್ಪ್ಲೇ ಆಗಿರುತ್ತದೆ. ಈ ನಿಯಮ ಜುಲೈ 2 ರಿಂದ ಜಾರಿಗೆ ಬರುತ್ತದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ ಐಸಿಸಿ ತನ್ನ ಹಳೆಯ ನಿಯಮಗಳಲ್ಲಿ ಬದಲಾವಣೆಗಳನ್ನು ತರುವುದರೊಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಆ ಪ್ರಕಾರ, ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ಜಾರಿಗೆ ತಂದಿದ್ದ ಐಸಿಸಿ, ಇದೀಗ ಟಿ20 ಕ್ರಿಕೆಟ್ನ ನಿಯಮದಲ್ಲೂ ಒಂದು ಬದಲಾವಣೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್ ಸಾಕಷ್ಟು ಮನ್ನಣೆಗಳಿಸುತ್ತಿದೆ. ಪ್ರತಿ ದೇಶಗಳು ಸಹ ಟಿ20 ಲೀಗ್ಗಳನ್ನು ಆಯೋಜಿಸುವ ಮೂಲಕ ಜನರನ್ನು ಕ್ರಿಕೆಟ್ನತ್ತ ಸೆಳೆಯುತ್ತಿವೆ. ಇದನ್ನು ಅರಿತುಕೊಂಡಿರುವ ಐಸಿಸಿ ಇದೀಗ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳ ಪವರ್ಪ್ಲೇ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಐಸಿಸಿ ತಂದಿರುವ ಹೊಸ ಬದಲಾವಣೆಯ ಪ್ರಕಾರ, ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಇನ್ನಿಂಗ್ಸ್ನ ಓವರ್ಗಳನ್ನು ಕಡಿಮೆ ಮಾಡಿದರೆ, ಪವರ್ಪ್ಲೇ ಓವರ್ಗಳನ್ನು ಓವರ್ಗಳ ಬದಲಿಗೆ ಚೆಂಡುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, 20 ಓವರ್ಗಳ ಇನ್ನಿಂಗ್ಸ್ನಲ್ಲಿ ಮೊದಲ 6 ಓವರ್ಗಳು ಪವರ್ಪ್ಲೇ ಆಗಿದ್ದವು. ಈ 6 ಓವರ್ಗಳಲ್ಲಿ ಫೀಲ್ಡಿಂಗ್ ಮಾಡುತ್ತಿರುವ ತಂಡವು 30 ಯಾರ್ಡ್ ವೃತ್ತದ ಹೊರಗೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್ಗಳನ್ನು ಇರಿಸುವಂತಿಲ್ಲ. ಆ ಬಳಿಕ ಅಂದರೆ 6 ಓವರ್ ಮುಗಿದ ನಂತರ ಉಳಿದ ಓವರ್ಗಳಲ್ಲಿ, 30 ಯಾರ್ಡ್ ವೃತ್ತದ ಹೊರಗೆ ಐದು ಫೀಲ್ಡರ್ಗಳನ್ನು ನಿಲ್ಲಿಸಬಹುದು.

The post ಟಿ20 ಪವರ್ಪ್ಲೇ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ…. appeared first on Good News 24x7.

]]>
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. https://www.goodnews24x7.com/%e0%b2%85%e0%b2%82%e0%b2%a4%e0%b2%be%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d/ Thu, 26 Jun 2025 12:27:50 +0000 https://www.goodnews24x7.com/?p=4680 ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ, ಶಾರ್ಟ್ ರನ್‌ಗೆ ಹೆಚ್ಚಿನ ದಂಡ, ಡಿಆರ್‌ಎಸ್‌ನಲ್ಲಿ ಬದಲಾವಣೆ ಮತ್ತು ಏಕದಿನ ಪಂದ್ಯಗಳಲ್ಲಿ 35ನೇ ಓವರ್‌ನಿಂದ ಒಂದೇ ಹೊಸ ಚೆಂಡು ಬಳಕೆ…

The post ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. appeared first on Good News 24x7.

]]>

ಜುಲೈ 2 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮ, ಶಾರ್ಟ್ ರನ್‌ಗೆ ಹೆಚ್ಚಿನ ದಂಡ, ಡಿಆರ್‌ಎಸ್‌ನಲ್ಲಿ ಬದಲಾವಣೆ ಮತ್ತು ಏಕದಿನ ಪಂದ್ಯಗಳಲ್ಲಿ 35ನೇ ಓವರ್‌ನಿಂದ ಒಂದೇ ಹೊಸ ಚೆಂಡು ಬಳಕೆ ಮುಂತಾದ ಪ್ರಮುಖ ಬದಲಾವಣೆಗಳನ್ನು ಐಸಿಸಿ ಘೋಷಿಸಿದೆ. ಲಾಲಾರಸ ಹಚ್ಚುವುದರಿಂದ ಚೆಂಡು ಬದಲಾಗುವುದಿಲ್ಲ ಎಂಬುದು ಮತ್ತೊಂದು ಮಹತ್ವದ ಬದಲಾವಣೆ.ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಜಾರಿಗೆ ತಂದ ಒಂದು ವರ್ಷದ ನಂತರ, ಇದೀಗ ಈ ನಿಯಮವನ್ನು ಟೆಸ್ಟ್‌ನಲ್ಲೂ ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ. ವಾಸ್ತವವಾಗಿ ಟೆಸ್ಟ್‌ಗಳಲ್ಲಿ ನಿಧಾನಗತಿಯ ಓವರ್ ದರವು ಒಂದು ದೊಡ್ಡ ಸಮಸ್ಯೆಯಾಗಿದೆ. ಈಗ ಹೊಸ ಐಸಿಸಿ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ, ತಂಡಕ್ಕೆ ಅಂಪೈರ್‌ನಿಂದ ಎರಡು ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಇದರ ನಂತರವೂ ಬೌಲಿಂಗ್ ತಂಡ ನಿಧಾನ ಮಾಡಿದರೆ, ಪ್ರತಿ ಬಾರಿಯೂ ಐದು ರನ್‌ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. 80 ಓವರ್‌ಗಳ ನಂತರ ಎಚ್ಚರಿಕೆಗಳನ್ನು ಮತ್ತೆ ಹೊಸದಾಗಿ ಆರಂಭಿಸಲಾಗುತ್ತದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಾತ್ರ ಅನ್ವಯಿಸುತ್ತದೆ.

ಐಸಿಸಿ ಕೂಡ ಶಾರ್ಟ್ ರನ್​ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ, ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಮಾಡಿದರೆ ಐದು ರನ್​ಗಳ ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಹೆಚ್ಚುವರಿ ರನ್ ಕದಿಯಲು ರನ್ ಪೂರ್ಣಗೊಳಿಸದಿದ್ದರೆ (ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್ ಎರಡನೇ ರನ್ ಕದಿಯುವ ಯತ್ನದಲ್ಲಿ ನಾನ್ ಸ್ಟ್ರೈಕ್ ತುದಿಯನ್ನು ಮುಟ್ಟದೆ ವಾಪಸ್ ಆಗಿದ್ದರೆ), ಅಂಪೈರ್ ಫೀಲ್ಡಿಂಗ್ ತಂಡವನ್ನು ಯಾವ ಬ್ಯಾಟ್ಸ್​ಮನ್ ಸ್ಟ್ರೈಕ್​ನಲ್ಲಿ ಇರಬೇಕೆಂದು ಕೇಳುತ್ತಾರೆ. ಫೀಲ್ಡಿಂಗ್ ತಂಡ ಯಾವ ಆಟಗಾರನ ಹೆಸರನ್ನು ಹೇಳುತ್ತದೋ ಆತ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಶಾರ್ಟ್ ರನ್ ಮಾಡಿದ ಬ್ಯಾಟ್ಸ್​ಮನ್ ತಂಡಕ್ಕೆ ಐದು ರನ್​ಗಳ ದಂಡ ವಿಧಿಸಲಾಗುತ್ತದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಲಾಲಾರಸ ಹಚ್ಚುವ ನಿಷೇಧ ಮುಂದುವರಿಯಲಿದೆ. ಈ ಹಿಂದೆ ಬೌಲರ್‌ಗಳಿಗೆ ಹೊಸ ಚೆಂಡು ಅಗತ್ಯವಿದ್ದಾಗ, ಅವರು ಚೆಂಡಿನ ಮೇಲೆ ಲಾಲಾರಸವನ್ನು ಹಚ್ಚುತ್ತಿದ್ದರು. ಲಾಲಾರಸವನ್ನು ಹಚ್ಚುವುದರಿಂದ ಚೆಂಡು ಹಾಳಾಗುತ್ತಿತ್ತು. ಆ ನಂತರ ಬೌಲರ್​ಗಳು ಬೌಲಿಂಗ್ ಸಮಯದಲ್ಲಿ ತಮಗೆ ಅನುಕೂಲವಾಗುವಂತೆ ಅಂಪೈರ್‌ಗಳಿಂದ ಹೊಸ ಚೆಂಡನ್ನು ಕೇಳುತ್ತಿದ್ದರು. ಆದರೀಗ ಹೊಸ ನಿಯಮದ ಪ್ರಕಾರ, ಚೆಂಡಿನ ಮೇಲೆ ಲಾಲಾರಸ ಬಿದ್ದರೆ ಅಂಪೈರ್‌ಗಳು ಅದನ್ನು ಬದಲಾಯಿಸುವುದು ಕಡ್ಡಾಯವಲ್ಲ. ಚೆಂಡು ಸಂಪೂರ್ಣವಾಗಿ ಒದ್ದೆಯಾಗಿ ಕಂಡುಬಂದಾಗ ಅಥವಾ ಹಾನಿಗೊಳಗಾದಾಗ ಮಾತ್ರ ಅದನ್ನು ಬದಲಾಯಿಸಲಾಗುತ್ತದೆ. ಚೆಂಡನ್ನು ಬದಲಾಯಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಅಂಪೈರ್‌ಗಳ ವಿವೇಚನೆಗೆ ಬಿಡಲಾಗಿದೆ. ಇಲ್ಲಿ ಅಂಪೈರ್‌ಗಳಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ.

ಐಸಿಸಿ ಡಿಆರ್‌ಎಸ್ ಪ್ರೋಟೋಕಾಲ್‌ನಲ್ಲಿಯೂ ದೊಡ್ಡ ಬದಲಾವಣೆಯನ್ನು ಮಾಡಿದೆ. ಒಬ್ಬ ಬ್ಯಾಟ್ಸ್‌ಮನ್‌ಗೆ ಕ್ಯಾಚ್ ಔಟ್ ನೀಡಿದರೆ ಅವನು ರಿವ್ಯೂ ಕೇಳುತ್ತಾನೆ ಎಂದು ಭಾವಿಸೋಣ. ಅಲ್ಟ್ರಾಎಡ್ಜ್‌ನಲ್ಲಿ ಚೆಂಡು ಬ್ಯಾಟ್ ಅನ್ನು ತಾಗದೆ ಪ್ಯಾಡ್‌ಗೆ ತಗುಲಿದೆ ಎಂದು ತೋರಿಸುತ್ತದೆ. ಕ್ಯಾಚ್ ಔಟ್ ಎಂದು ಘೋಷಿಸಿದ ನಂತರ, ಟಿವಿ ಅಂಪೈರ್ ಈಗ ಮತ್ತೊಂದು ಔಟ್ ಮೋಡ್ ಅನ್ನು ಪರಿಶೀಲಿಸುತ್ತಾರೆ (ಉದಾಹರಣೆಗೆ ಎಲ್‌ಬಿಡಬ್ಲ್ಯೂ). ಈ ಹಿಂದೆ, ಕ್ಯಾಚ್ ಔಟ್ ಆಗದಿದ್ದರೆ, ಎಲ್‌ಬಿಡಬ್ಲ್ಯೂಗೆ ಡೀಫಾಲ್ಟ್ ನಿರ್ಧಾರವು “ನಾಟ್ ಔಟ್” ಆಗಿತ್ತು. ಆದರೆ ಹೊಸ ನಿಯಮದಲ್ಲಿ, ಎಲ್‌ಬಿಡಬ್ಲ್ಯೂಗಾಗಿ ಬಾಲ್-ಟ್ರ್ಯಾಕಿಂಗ್ ಗ್ರಾಫಿಕ್ ಅನ್ನು ತೋರಿಸಲಾಗುತ್ತದೆ ಮತ್ತು ಬ್ಯಾಟ್ಸ್‌ಮನ್ ಇಲ್ಲಿ ಔಟ್ ಎಂದು ಕಂಡುಬಂದರೆ, ಅವನು ಪೆವಿಲಿಯನ್‌ಗೆ ಹಿಂತಿರುಗಬೇಕಾಗುತ್ತದೆ.

 

ಐಸಿಸಿ ಅಂಪೈರ್ ಮತ್ತು ಆಟಗಾರರ ವಿಮರ್ಶೆ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಇದರರ್ಥ ಮೊದಲು ಟಿವಿ ಅಂಪೈರ್ ಮೊದಲು ಅಂಪೈರ್ ವಿಮರ್ಶೆಯನ್ನು ಮತ್ತು ನಂತರ ಆಟಗಾರನ ವಿಮರ್ಶೆಯನ್ನು ಪರಿಗಣಿಸುತ್ತಿದ್ದರು, ಆದರೆ ಹೊಸ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಮೊದಲ ಘಟನೆಯಲ್ಲಿಯೇ ಔಟ್ ಆಗಿದ್ದರೆ, ಚೆಂಡು ಡೆಡ್ ಆಗುತ್ತದೆ. ಎರಡನೇ ರಿವ್ಯೂ ಅನ್ನು ಪರಿಶೀಲಿಸಲಾಗುವುದಿಲ್ಲ. ಉದಾಹರಣೆಗೆ, ಎಲ್‌ಬಿಡಬ್ಲ್ಯೂಗೆ ಮೇಲ್ಮನವಿ ಸಲ್ಲಿಸಿ ರನ್ ಔಟ್ ಆಗಿದ್ದರೆ, ಟಿವಿ ಅಂಪೈರ್ ಮೊದಲು ಎಲ್‌ಬಿಡಬ್ಲ್ಯೂ ಅನ್ನು ಪರಿಶೀಲಿಸುತ್ತಾರೆ, ಏಕೆಂದರೆ ಅದು ಮೊದಲು ಸಂಭವಿಸಿತು. ಬ್ಯಾಟ್ಸ್‌ಮನ್ ಔಟ್ ಆಗಿದ್ದರೆ, ಚೆಂಡು ಅಲ್ಲಿಯೇ ಡೆಡ್ ಆಗುತ್ತದೆ.

 

ಕ್ಯಾಚ್‌ಗಳಿಗೆ ಸಂಬಂಧಿಸಿದಂತೆ ಐಸಿಸಿ ಒಂದು ದೊಡ್ಡ ನಿಯಮವನ್ನು ಸಹ ಬದಲಾಯಿಸಿದೆ. ಪ್ರಸ್ತುತ ಫೀಲ್ಡ್ ಅಂಪೈರ್‌ಗಳಿಗೆ ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲದಿದ್ದಾಗ ಟಿವಿ ಅಂಪೈರ್ ಮೊರೆ ಹೋಗುತ್ತಿದ್ದರು. ಇದನ್ನು ಮೂರನೇ ಅಂಪೈರ್ ಪರಿಶೀಲಿಸಿದ ಸಮಯದಲ್ಲಿ ಅದು ನೋ ಬಾಲ್ ಆಗಿದ್ದರೆ, ಬ್ಯಾಟಿಂಗ್ ತಂಡಕ್ಕೆ ಒಂದು ರನ್ ಸಿಗುತ್ತಿತ್ತು ಮತ್ತು ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ, ಈಗ ಮೂರನೇ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುತ್ತಾರೆ. ಕ್ಯಾಚ್ ಸರಿಯಾಗಿದ್ದರೆ, ಬ್ಯಾಟಿಂಗ್ ತಂಡವು ನೋ-ಬಾಲ್‌ಗೆ ಕೇವಲ ಒಂದು ಹೆಚ್ಚುವರಿ ರನ್ ಮಾತ್ರ ಪಡೆಯುತ್ತದೆ. ಆದರೆ ಕ್ಯಾಚ್ ಪೂರ್ಣಗೊಂಡಿಲ್ಲದಿದ್ದರೆ, ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ರನ್​ಗಾಗಿ ಓಡಿದ್ದರೆ, ಆಗ ನೋ ಬಾಲ್​ ಜೊತೆಗೆ ಬ್ಯಾಟ್ಸ್​ಮನ್​ಗಳು ಎಷ್ಟು ರನ್​ಗಳನ್ನು ಓಡಿರುತ್ತಾರೋ ಅಷ್ಟು ರನ್​ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.

 

ಏಕದಿನ ಕ್ರಿಕೆಟ್‌ನಲ್ಲಿ 35 ನೇ ಓವರ್ ನಂತರ ಒಂದೇ ಹೊಸ ಚೆಂಡನ್ನು ಬಳಸಲು ಐಸಿಸಿ ಅವಕಾಶ ನೀಡಿದೆ. ಇದು ಈಗ ಡೆತ್ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ಬೌಂಡರಿಯಲ್ಲಿನ ಕ್ಯಾಚ್‌ಗಳ ಬಗ್ಗೆಯೂ ಐಸಿಸಿ ಬದಲಾವಣೆಗಳನ್ನು ಮಾಡಿದೆ. ಬೌಂಡರಿಯ ಹೊರಗಿನಿಂದ ಆಟಗಾರನು ಚೆಂಡನ್ನು ಸ್ಪರ್ಶಿಸಿದರೆ, ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಫೀಲ್ಡರ್‌ಗಳು ಬೌಂಡರಿಯ ಹೊರಗಿನಿಂದ ಒಮ್ಮೆ ಮಾತ್ರ ಬೌನ್ಸ್ ಮಾಡುವ ಮೂಲಕ ಚೆಂಡನ್ನು ಹಿಡಿಯಬಹುದು.

 

 

 

 

 

 

The post ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ…. appeared first on Good News 24x7.

]]>
ನಿಕೋಲಸ್ ಪೂರನ್ ದಿಢೀರ್ ನಿವೃತ್ತಿ; https://www.goodnews24x7.com/%e0%b2%a8%e0%b2%bf%e0%b2%95%e0%b3%8b%e0%b2%b2%e0%b2%b8%e0%b3%8d-%e0%b2%aa%e0%b3%82%e0%b2%b0%e0%b2%a8%e0%b3%8d-%e0%b2%a6%e0%b2%bf%e0%b2%a2%e0%b3%80%e0%b2%b0%e0%b3%8d-%e0%b2%a8%e0%b2%bf%e0%b2%b5/ Wed, 11 Jun 2025 11:58:10 +0000 https://www.goodnews24x7.com/?p=4326 ವೆಸ್ಟ್ ಇಂಡೀಸ್ನ ಸ್ಟಾರ್ ಬ್ಯಾಟರ್ ನಿಕೋಲಸ್ ಪೂರನ್ ಮಂಗಳವಾರ ಯಾವುದೇ ಕಾರಣಗಳನ್ನು ನೀಡದೆ ತಮ್ಮ 29 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಿದರು. ಹಠಾತ್ ನಿವೃತ್ತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಿಂದ ಹೊರಗುಳಿದ ಕೆಲವು ದಿನಗಳ ಬೆನ್ನಲ್ಲೇ…

The post ನಿಕೋಲಸ್ ಪೂರನ್ ದಿಢೀರ್ ನಿವೃತ್ತಿ; appeared first on Good News 24x7.

]]>

ವೆಸ್ಟ್ ಇಂಡೀಸ್ನ ಸ್ಟಾರ್ ಬ್ಯಾಟರ್ ನಿಕೋಲಸ್ ಪೂರನ್ ಮಂಗಳವಾರ ಯಾವುದೇ ಕಾರಣಗಳನ್ನು ನೀಡದೆ ತಮ್ಮ 29 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಿದರು. ಹಠಾತ್ ನಿವೃತ್ತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಿಂದ ಹೊರಗುಳಿದ ಕೆಲವು ದಿನಗಳ ಬೆನ್ನಲ್ಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಎಡಗೈ ಬ್ಯಾಟರ್ 106 ಪಂದ್ಯಗಳೊಂದಿಗೆ ವೆಸ್ಟ್ ಇಂಡೀಸ್ನ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ ಮತ್ತು ಟಿ 20 ಪಂದ್ಯಾವಳಿಯಲ್ಲಿ 26.14 ಸರಾಸರಿ ಹಾಗೂ136.39 ಸ್ಟೈಕ್ ರೇಟ್ ನೊಂದಿಗೆ 2275 ರನ್ ಗಳಿಸಿದ್ದಾರೆ. ಇನ್ನೂ 61 ಏಕದಿನ ಪಂದ್ಯಗಳಲ್ಲಿ 39.66ರ ಸರಾಸರಿಯಲ್ಲಿ ಅವರು 1983 ರನ್ ಗಳಿಸಿದ್ದಾರೆ.

The post ನಿಕೋಲಸ್ ಪೂರನ್ ದಿಢೀರ್ ನಿವೃತ್ತಿ; appeared first on Good News 24x7.

]]>
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ https://www.goodnews24x7.com/moeen-ali-has-announced-his-retirement-from-international-cricket/ Sun, 08 Sep 2024 09:06:23 +0000 https://www.goodnews24x7.com/?p=537 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ ಇಂಗ್ಲೆಂಡ್​ನ ಆಲ್​ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮೊಯೀನ್ ಅಲಿ 2019 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2022 ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದೀಗ…

The post ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ appeared first on Good News 24x7.

]]>

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ

ಇಂಗ್ಲೆಂಡ್​ನ ಆಲ್​ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮೊಯೀನ್ ಅಲಿ 2019 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2022 ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದೀಗ ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದರಿತಿರುವ ಮೊಯೀನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

37 ವರ್ಷದ ಮೊಯಿನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್​, 138 ಏಕದಿನ, 92 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡವು 2019ರಲ್ಲಿ ಏಕದಿನ ವಿಶ್ವಕಪ್​, 2022ರಕ್ಕು ಟಿ-20 ವಿಶ್ವಕಪ್​ ಗೆದ್ದುಕೊಂಡಿತ್ತು. ಮೊಯಿನ್ ಅಲಿ ಆ ತಂಡದ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರೂ, ಐಪಿಎಲ್​ನಂತ ಟೂರ್ನಿಗಳಲ್ಲಿ ಅವರು ಆಡಲಿದ್ದಾರೆ.

The post ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ appeared first on Good News 24x7.

]]>