investigation. Archives - Good News 24x7 https://www.goodnews24x7.com/tag/investigation/ Kannada Wed, 08 Jul 2026 08:02:47 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg investigation. Archives - Good News 24x7 https://www.goodnews24x7.com/tag/investigation/ 32 32 ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ https://www.goodnews24x7.com/renukaswamy-murder-case-police-search-for-deal-makers/ Wed, 08 Jul 2026 08:02:47 +0000 https://www.goodnews24x7.com/?p=9810 ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ…

The post ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ appeared first on Good News 24x7.

]]>

ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಕೆಲ ‘ಪ್ರಭಾವಿ’ಗಳು ಇರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಮೂಡಿದ್ದು, ಆ ‘ಪ್ರಭಾವಿ’ಗಳ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

ತನಿಖೆ ವೇಳೆ ಆರೋಪಿಗಳಿಂದ ಪೊಲೀಸರು ಹೇಳಿಕೆ, ಮರು ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಆದರೆ ಆರೋಪಿಗಳು ಪೊಲೀಸರ ವಿಚಾರಣೆಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎನ್ನಲಾಗುತ್ತಿದೆ. ಮುಖ್ಯವಾಗಿ ಪುನೀತ್ ಎಂಬ ಆರೋಪಿ, ಸಾಕ್ಷ್ಯಗಳ ಹೇಳಿಕೆಗಳನ್ನು ಬದಲಾಯಿಸಿಕೊಡುವ ‘ಡೀಲ್’ ಪಡೆದಿದ್ದ ಎನ್ನಲಾಗುತ್ತಿದೆ. ಈತ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಲೆ ನೋವಾಗಿದೆ ಎನ್ನಲಾಗಿದೆ.

ಈಗಾಗಲೇ ಆರೋಪಿಗಳ ಮೊಬೈಲ್​​ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಕೆಲವೇ ದಿನಗಳಲ್ಲಿ ವರದಿ ಬರಲಿದ್ದು, ಈ ವೇಳೆ ಆರೋಪಿಗಳು ಯಾರೊಟ್ಟಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿಯಲಿದೆ. ಆರೋಪಿಗಳ ಬಂಧನ ಆಗುವ ಮೊದಲೇ ಅವರುಗಳು ಮೊಬೈಲ್ ಕರೆ ದಾಖಲೆಗಳು, ವಾಟ್ಸ್ ಆಪ್ ಚಾಟ್ ಇನ್ನಿತರೆ ಮಾಹಿತಿಗಳನ್ನು ಡಿಲೀಟ್ ಮಾಡಿದ್ದರು. ಫಾರೆನ್ಸಿಕ್ ತನಿಖೆಯಿಂದ ಆ ವರದಿಗಳನ್ನೆಲ್ಲ ಮರಳಿ ಪಡೆಯುವ ಪ್ರಯತ್ನದಲ್ಲಿ ಪೊಲೀಸರು ಇದ್ದಾರೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಕೆಲವರು ಕಾನ್ಫರೆನ್ಸ್ ಕಾಲ್​​ನಲ್ಲಿ ಇದ್ದರು ಎನ್ನಲಾಗುತ್ತಿದ್ದು, ಆ ಕಾಲ್​​ನಲ್ಲಿ ಆರೋಪಿಗಳ ಹೊರತಾಗಿ ಇನ್ಯಾರ್ಯಾರು ಇದ್ದರು ಎಂಬುದು ವರದಿ ಮೂಲಕ ಬಹಿರಂಗವಾಗುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದು, ಪ್ರಕರಣದ 49ನೇ ಸಾಕ್ಷಿ ಆಗಿರುವ ದುರ್ಗಾ ಬಾರ್​​​ನ ಸಂದೀಪ್ ಎಂಬುವರಿಗೆ ಆಕರ್ಷ್ ಎಂಬ ವ್ಯಕ್ತಿಯಿಂದ ಕರೆ ಮಾಡಿಸಿ, ತಾವು ಹೇಳಿಕೊಟ್ಟಂತೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಬೇಕು ಎಂದು ಆರೋಪಿಗಳು ಹೇಳಿದ್ದರಂತೆ. ಆದರೆ ಸಂದೀಪ್, ನ್ಯಾಯಾಲಯದ ಮುಂದೆ ತಮಗೆ ಸುಳ್ಳು ಸಾಕ್ಷ್ಯ ನುಡಿಯುವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ ಎಂದು ಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

The post ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ appeared first on Good News 24x7.

]]>
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ https://www.goodnews24x7.com/%e0%b2%b2%e0%b2%82%e0%b2%9a-kas-officer-caught-in-lokayukta-trap-while-accepting-bribe%e0%b2%b8%e0%b3%8d%e0%b2%b5%e0%b3%80%e0%b2%95%e0%b2%b0%e0%b2%bf%e0%b2%b8%e0%b3%81%e0%b2%b5%e0%b2%be%e0%b2%97/ Wed, 29 Apr 2026 11:15:42 +0000 https://www.goodnews24x7.com/?p=9488 ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ…

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>

ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ ಅವರು, ಇಂದು ದೂರುದಾರ ರವಿಕುಮಾರ್ ಅವರಿಂದ ಎರಡನೇ ಕಂತಿನ 15 ಲಕ್ಷ ರೂಪಾಯಿಗಳನ್ನು ತಮ್ಮ ಹೊರಗುತ್ತಿಗೆ ಚಾಲಕ ಕುಮಾರ್ ಮೂಲಕ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ರೆಡ್‌ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>
ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ https://www.goodnews24x7.com/nashik-tcs-conversion-case-explosive-information-in-sit-investigation%e0%b2%a8%e0%b2%be%e0%b2%b8%e0%b2%bf%e0%b2%95%e0%b3%8d-%e0%b2%9f%e0%b2%bf%e0%b2%b8%e0%b2%bf%e0%b2%8e%e0%b2%b8%e0%b3%8d-%e0%b2%ae/ Tue, 28 Apr 2026 12:18:34 +0000 https://www.goodnews24x7.com/?p=9469 ನಾಸಿಕ್‌ನ ಟಿಸಿಎಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರ ಮತ್ತು ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾದ ನಿದಾ ಖಾನ್ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (SIT), ಈ…

The post ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ appeared first on Good News 24x7.

]]>

ನಾಸಿಕ್‌ನ ಟಿಸಿಎಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರ ಮತ್ತು ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾದ ನಿದಾ ಖಾನ್ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (SIT), ಈ ಜಾಲವು ಕೇವಲ ನಾಸಿಕ್‌ಗೆ ಸೀಮಿತವಾಗಿಲ್ಲ, ಬದಲಾಗಿ ಮಾಲೆಗಾಂವ್‌ನಿಂದ ಹಿಡಿದು ಮಲೇಷ್ಯಾದವರೆಗೂ ಹರಡಿದೆ ಎಂಬ ಆಘಾತಕಾರಿ ಅಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ವಿಶೇಷ ಸರ್ಕಾರಿ ವಕೀಲ ಅಜಯ್ ಮಿಶ್ರಾ ಅವರು ಈ ಕುರಿತು ಹೊಸ ಸಾಕ್ಷ್ಯಗಳನ್ನು ಮಂಡಿಸಿದ್ದು, ಪ್ರಕರಣದ ಅಂತರರಾಷ್ಟ್ರೀಯ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಆರೋಪಿ ನಿದಾ ಖಾನ್ ದೂರುದಾರರ ಮೇಲೆ ತೀವ್ರವಾದ ಧಾರ್ಮಿಕ ಪ್ರಭಾವ ಬೀರಲು ಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತರಿಗೆ ಬುರ್ಖಾ, ಹಿಜಾಬ್ ಮತ್ತು ಧಾರ್ಮಿಕ ಪುಸ್ತಕಗಳನ್ನು ನೀಡಿ, ನಮಾಜ್ ಮಾಡುವ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ, ದೂರುದಾರರ ಮೊಬೈಲ್‌ನಲ್ಲಿ ಧಾರ್ಮಿಕ ಶಿಕ್ಷಣದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಸಿ, ಅವರ ಹೆಸರನ್ನು ‘ಹಾನಿಯಾ’ ಎಂದು ಬದಲಾಯಿಸುವ ಸಂಚು ರೂಪಿಸಲಾಗಿತ್ತು. ಮಲೇಷ್ಯಾದಲ್ಲಿ ಉದ್ಯೋಗದ ಆಮಿಷವೊಡ್ಡಿ ಮತಾಂತರಕ್ಕೆ ಪ್ರೇರೇಪಿಸಲಾಗುತ್ತಿತ್ತು ಎಂಬುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಸ್ತುತ ನಿದಾ ಖಾನ್ ತಲೆಮರೆಸಿಕೊಂಡಿದ್ದು, ಆಕೆಯ ಮೊಬೈಲ್ ಫೋನ್ ವಶಪಡಿಸಿಕೊಳ್ಳುವುದು ತನಿಖೆಗೆ ಅತ್ಯಗತ್ಯವಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಒಂದು ವೇಳೆ ಆಕೆಗೆ ನಿರೀಕ್ಷಣಾ ಜಾಮೀನು ನೀಡಿದರೆ, ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ಸಂತ್ರಸ್ತರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಸಂತ್ರಸ್ತರು ಇರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಶಂಕಿಸಿವೆ.

ಮತ್ತೊಂದೆಡೆ, ನಿದಾ ಖಾನ್ ಪರ ವಕೀಲ ರಾಹುಲ್ ಕಸ್ಲಿವಾಲ್ ಈ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ನಿರ್ದಿಷ್ಟವಾದ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದನ್ನು ಉಲ್ಲೇಖಿಸಿದ ಅವರು, ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಇಷ್ಟು ದೊಡ್ಡ ಮಟ್ಟದ ತನಿಖೆ ಅನಗತ್ಯ ಎಂದು ವಾದಿಸಿದರು. ಅಲ್ಲದೆ, ಒಂದೇ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ಪ್ರತ್ಯೇಕ ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸದ್ಯ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 02ಕ್ಕೆ ಮುಂದೂಡಿದ್ದು, ಅಂದು ಎರಡೂ ಕಡೆಯ ವಾದ-ಪ್ರತಿವಾದಗಳು ಮುಂದುವರಿಯಲಿವೆ.

The post ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ appeared first on Good News 24x7.

]]>
ಬೇಸಿಗೆ ರಜೆಯ ಸಂಭ್ರಮದ ನಡುವೆ ದು*ತ: ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು! https://www.goodnews24x7.com/amidst-the-celebration-of-summer-vacation-the-father-in-law-also-drowned/ Mon, 20 Apr 2026 09:56:38 +0000 https://www.goodnews24x7.com/?p=9328 ಶಾಲೆಗೆ ಬೇಸಿಗೆ ರಜೆ ಇದೆ ಎಂದು ಸಂಭ್ರಮದಿಂದ ಮಾವನ ಮನೆಗೆ ಬಂದಿದ್ದ ಬಾಲಕ ಹಾಗೂ ಆತನನ್ನು ರಕ್ಷಿಸಲು ಹೋದ ಮಾವ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಎನ್. ಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯ ವಿವರ: ಸೋಮನಹಳ್ಳಿ…

The post ಬೇಸಿಗೆ ರಜೆಯ ಸಂಭ್ರಮದ ನಡುವೆ ದು*ತ: ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು! appeared first on Good News 24x7.

]]>

ಶಾಲೆಗೆ ಬೇಸಿಗೆ ರಜೆ ಇದೆ ಎಂದು ಸಂಭ್ರಮದಿಂದ ಮಾವನ ಮನೆಗೆ ಬಂದಿದ್ದ ಬಾಲಕ ಹಾಗೂ ಆತನನ್ನು ರಕ್ಷಿಸಲು ಹೋದ ಮಾವ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಎನ್. ಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಘಟನೆಯ ವಿವರ:
ಸೋಮನಹಳ್ಳಿ ಗ್ರಾಮದ ಪ್ರತೀಕ್ (12) ಮೃತಪಟ್ಟ ಬಾಲಕ. ಈತ ರಜೆ ಕಳೆಯಲೆಂದು ತನ್ನ ಮಾವ ಪ್ರಭಾಕರ್ (45) ಅವರ ಮನೆಗೆ ಬಂದಿದ್ದ. ಇಂದು ಇಬ್ಬರೂ ಗ್ರಾಮದ ಕೆರೆಯ ದಡದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಕಸ್ಮಿಕವಾಗಿ ಪ್ರತೀಕ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ.

ರಕ್ಷಿಸಲು ಹೋದಾಗ ಸಂಭವಿಸಿದ ವಿಧಿಲಿಖಿತ:
ತನ್ನ ಕಣ್ಣೆದುರೇ ಅಳಿಯ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಗಾಬರಿಗೊಂಡ ಪ್ರಭಾಕರ್, ಆತನನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ತಕ್ಷಣ ಕೆರೆಗೆ ಇಳಿದಿದ್ದಾರೆ. ಆದರೆ, ಪ್ರಭಾಕರ್ ಅವರಿಗೆ ಈಜು ಬರುತ್ತಿರಲಿಲ್ಲ. ಅಳಿಯನನ್ನು ಉಳಿಸುವ ಪ್ರಯತ್ನದಲ್ಲಿ ಅವರು ಕೂಡ ನೀರಿನ ಆಳಕ್ಕೆ ಸಿಲುಕಿದ್ದಾರೆ. ಅಂತಿಮವಾಗಿ ಇಬ್ಬರೂ ಉಸಿರುಗಟ್ಟಿ ಕೆರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ:
ಘಟನೆಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಸದ್ಯ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

The post ಬೇಸಿಗೆ ರಜೆಯ ಸಂಭ್ರಮದ ನಡುವೆ ದು*ತ: ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು! appeared first on Good News 24x7.

]]>
ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. https://www.goodnews24x7.com/sexual-assault-charges-renowned-malayalam-director-ranjith-arrested-sent-to-14-days-judicial-custody/ Wed, 01 Apr 2026 10:06:46 +0000 https://www.goodnews24x7.com/?p=9063 ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು…

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>

ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು ಸೋಮವಾರ ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ರಂಜಿತ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧನದ ಬಳಿಕ ರಂಜಿತ್ ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (JFMC) ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಸದ್ಯ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಕೊಚ್ಚಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ನಿರ್ದೇಶಕ ರಂಜಿತ್ ವಿರುದ್ಧ ಈ ಹಿಂದೆಯೂ ಇಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. 2024ರಲ್ಲಿ ಬಂಗಾಳಿ ನಟಿಯೊಬ್ಬರು 2009ರ ಘಟನೆಯನ್ನು ಉಲ್ಲೇಖಿಸಿ ದೂರು ನೀಡಿದ್ದರು. ಇದು ರಂಜಿತ್ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವಾಗಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ರಂಜಿತ್, ಇವೆಲ್ಲವೂ ಸುಳ್ಳು ದೂರುಗಳು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>
ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್: ಎಂಜಿನ್ ದೋಷದ ಮಧ್ಯೆಯೂ 161 ಪ್ರಯಾಣಿಕರು ಸುರಕ್ಷಿತ https://www.goodnews24x7.com/dehali-vimana-nilda%e1%b9%87adalli-i%e1%b9%87%e1%b8%8digo-vimanada-turtu-lya%e1%b9%87%e1%b8%8di%e1%b9%85g-enjin-do%e1%b9%a3ada-madhyeyu-161-praya%e1%b9%87ikaru-surak%e1%b9%a3ita-indigoflight/ Sat, 28 Mar 2026 09:20:07 +0000 https://www.goodnews24x7.com/?p=8993 ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಧ್ಯಾಹ್ನದ ವೇಳೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ವಿಮಾನವನ್ನು ತುರ್ತು ಭೂಸ್ಪರ್ಶಕ್ಕೆ ಒಳಪಡಿಸಲಾಯಿತು. ಬೆಳಗ್ಗೆ ಸುಮಾರು 10:50ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ರನ್‌ವೇ 28ರಲ್ಲಿ ತುರ್ತು…

The post ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್: ಎಂಜಿನ್ ದೋಷದ ಮಧ್ಯೆಯೂ 161 ಪ್ರಯಾಣಿಕರು ಸುರಕ್ಷಿತ appeared first on Good News 24x7.

]]>

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಧ್ಯಾಹ್ನದ ವೇಳೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ವಿಮಾನವನ್ನು ತುರ್ತು ಭೂಸ್ಪರ್ಶಕ್ಕೆ ಒಳಪಡಿಸಲಾಯಿತು. ಬೆಳಗ್ಗೆ ಸುಮಾರು 10:50ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ರನ್‌ವೇ 28ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಸುರಕ್ಷತಾ ಕ್ರಮಗಳ ನಡುವೆ ವಿಮಾನವನ್ನು ಯಶಸ್ವಿಯಾಗಿ ನೆಲಕ್ಕಿಳಿಸಲಾಯಿತು.

ಬೋಯಿಂಗ್ 737 ಮಾದರಿಯ ಈ ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರು ಇದ್ದರು. ತುರ್ತು ಲ್ಯಾಂಡಿಂಗ್ ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರತೆಗೆದು ಸ್ಥಳಾಂತರಿಸಲಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ತುರ್ತು ಸೇವಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದರು.

ಈ ವಿಮಾನವು ಮೂಲತಃ ಟರ್ಕಿಯ ಕೊರೆಂಡನ್ ಏರ್‌ಲೈನ್ಸ್‌ಗೆ ಸೇರಿದದ್ದಾಗಿದ್ದು, ಇಂಡಿಗೋ ಕಂಪನಿಯು ಅದನ್ನು ಲೀಸ್ ಆಧಾರದಲ್ಲಿ ಬಳಸುತ್ತಿತ್ತು. ತಾಂತ್ರಿಕ ದೋಷದ ನಿಖರ ಕಾರಣವನ್ನು ಪತ್ತೆಹಚ್ಚಲು ತಜ್ಞರು ಪರಿಶೀಲನೆ ಆರಂಭಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

The post ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್: ಎಂಜಿನ್ ದೋಷದ ಮಧ್ಯೆಯೂ 161 ಪ್ರಯಾಣಿಕರು ಸುರಕ್ಷಿತ appeared first on Good News 24x7.

]]>
ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ. https://www.goodnews24x7.com/dharmasthala-case-complainant-did-not-say-that-a-group-contacted-him-in-tamil-nadu-sit-clarifies/ Tue, 19 Aug 2025 04:54:46 +0000 https://www.goodnews24x7.com/?p=6373 ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಮಿಳುನಾಡಿನಲ್ಲಿ ಗುಂಪೊಂದು ದೂರುದಾರನನ್ನು ಸಂಪರ್ಕಿಸಿತ್ತೆಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ತನಿಖೆಯ ವೇಳೆ ದೂರುದಾರನು ಯಾವುದೇ ಇಂತಹ ಹೇಳಿಕೆ ನೀಡಿಲ್ಲ ಎಂದು ಅಧಿಕಾರಿಗಳು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.…

The post ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ. appeared first on Good News 24x7.

]]>

ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಮಿಳುನಾಡಿನಲ್ಲಿ ಗುಂಪೊಂದು ದೂರುದಾರನನ್ನು ಸಂಪರ್ಕಿಸಿತ್ತೆಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ತನಿಖೆಯ ವೇಳೆ ದೂರುದಾರನು ಯಾವುದೇ ಇಂತಹ ಹೇಳಿಕೆ ನೀಡಿಲ್ಲ ಎಂದು ಅಧಿಕಾರಿಗಳು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ಹಿಂದೆ ಕೆಲ ಮಾಧ್ಯಮ ವರದಿಗಳ ಪ್ರಕಾರ, “2014ರ ನಂತರ ತಮಿಳುನಾಡಿನಲ್ಲಿ ಇದ್ದಾಗ 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ಕೇಳಿದ್ದರು. ನಾನು ಕಾನೂನುಬದ್ಧವಾಗಿ ಶವ ಹೂತಿದ್ದೆನೆಂದು ತಿಳಿಸಿದ್ದೆ. ಆದರೆ ಅವರು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದರು,” ಎಂಬುವಾಗಿ ದೂರುದಾರ ಹೇಳಿಕೆ ನೀಡಿದ್ದಾನೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದಗಳು ಹೆಚ್ಚಾಗಿದ್ದವು.

ಆದರೆ, ಎಸ್‌ಐಟಿ ಈ ವರದಿಗಳನ್ನು ನಿರಾಕರಿಸಿದ್ದು, “ವಿಚಾರಣೆಯಲ್ಲಿ ದೂರುದಾರನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಅವರು ಸೆಕ್ಷನ್ 164ರಡಿಯಲ್ಲಿ ನೀಡಿರುವ ಹೇಳಿಕೆಯನ್ನು ನಾವು ದಾಖಲಿಸುತ್ತಿದ್ದೇವೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಷ್ಟೇ ಅಲ್ಲದೆ, ಮೊದಲು ದೂರುದಾರ ನೀಡಿರುವ ಹೇಳಿಕೆಗಳ ನಿಖರತೆಯನ್ನು ಪರಿಶೀಲಿಸಲಾಗುವುದು. ದೂರುದಾರರೊಂದಿಗೆ ಕೆಲಸ ಮಾಡಿದ ಗ್ರಾಪಂ ಅಧಿಕಾರಿಗಳು, ಸೇವೆಯಲ್ಲಿದ್ದ ಪೊಲೀಸರು ಹಾಗೂ ಇತರ ಸಿಬ್ಬಂದಿಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಈ ನಡುವೆ, ಎಸ್‌ಐಟಿ ಯೂಟ್ಯೂಬರ್‌ಗಳಿಗೆ ನೋಟಿಸ್ ನೀಡಿದೆಯೆಂಬ ಸುದ್ದಿಗಳನ್ನೂ ಅಧಿಕಾರಿಗಳು ಖಂಡಿಸಿದ್ದಾರೆ. “ಯಾವುದೇ ನೋಟಿಸ್ ನೀಡಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1994ರಿಂದ 2014ರವರೆಗೆ ಕೆಲಸ ಮಾಡಿದ ಕೆಲ ಸಿಬ್ಬಂದಿಗೆ ಸಮನ್ಸ್ ನೀಡಲಾಗಿದ್ದು, ಅವರಿಂದ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ.

ಇನ್ನೊಂದು ಮೂಲದ ಪ್ರಕಾರ, ಮಂಗಳವಾರ ಸಾಕ್ಷಿ-ದೂರುದಾರರೊಂದಿಗೆ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳನ್ನೂ ಎಸ್‌ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ದೂರುದಾರರು ಉಲ್ಲೇಖಿಸಿರುವ ತಲೆಬುರುಡೆ ಹಾಗೂ ಇತರ ಸ್ಥಳಗಳ ಬಗ್ಗೆ ಮುಂದಿನ ಹಂತದಲ್ಲಿ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಮೂಲಗಳು ತಿಳಿಸಿವೆ.

The post ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ. appeared first on Good News 24x7.

]]>
ಧ*ರ್ಮಸ್ಥಳದಲ್ಲಿ ನೂರಾರು ಶ*ಗಳ ಹೂತಿಟ್ಟ ಕೇಸ್: 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ. https://www.goodnews24x7.com/hundreds-of-bodies-buried-in-dharmasthala-bones-found-at-6th-point/ Thu, 31 Jul 2025 11:14:43 +0000 https://www.goodnews24x7.com/?p=5194 ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ದೂರುದಾರ ಗುರುತಿಸಿದ 6 ನೇ ಪಾಯಿಂಟ್ ನಲ್ಲಿ 2 ಮೂಳೆಗಳು ಸಿಕ್ಕಿದೆ ಎಂಬ…

The post ಧ*ರ್ಮಸ್ಥಳದಲ್ಲಿ ನೂರಾರು ಶ*ಗಳ ಹೂತಿಟ್ಟ ಕೇಸ್: 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ. appeared first on Good News 24x7.

]]>

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದೂರುದಾರ ಗುರುತಿಸಿದ 6 ನೇ ಪಾಯಿಂಟ್ ನಲ್ಲಿ 2 ಮೂಳೆಗಳು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. 2 ಎಲುಬುಗಳು ಸಿಕ್ಕ ಬಗ್ಗೆ ಎಸ್ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೆಚ್ಚಿನ ಆಳ ತೆಗೆಯಲು ಮುಂದಾಗಿದ್ದಾರೆ.

ಮೂಳೆ ಸಿಕ್ಕ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿ ಅಗೆಯಲಾಗುತ್ತಿದ್ದು, ಎಸ್ ಐಟಿ ತಂಡದ ಅಧಿಕಾರಿಗಳು ಮೂಳೆ ಸಿಕ್ಕ ಬಗ್ಗೆ ಲ್ಯಾಪ್ ಟಾಪ್ ನಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಜಿಪಿಎಸ್ ಆನ್ ಮಾಡಿಕೊಂಡು ರಿಪೋರ್ಟ್ ದಾಖಲು ಮಾಡಿಕೊಂಡಿದ್ದಾರೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ಆದರೆ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.

The post ಧ*ರ್ಮಸ್ಥಳದಲ್ಲಿ ನೂರಾರು ಶ*ಗಳ ಹೂತಿಟ್ಟ ಕೇಸ್: 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ. appeared first on Good News 24x7.

]]>
ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಬೆನ್ನಿಗೆ ಗುಂಡು ಹಾರಿಸಿ ಕೊಂ*ದ ತಂದೆ! https://www.goodnews24x7.com/tennis-player-radhika-yadav-shot-dead-by-father/ Fri, 11 Jul 2025 10:35:09 +0000 https://www.goodnews24x7.com/?p=5031 ನವದೆಹಲಿ : ತನ್ನದೇ ಸ್ವಂತ ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ತನ್ನ ತಂದೆಯೊಂದಲೇ ಭೀಕರವಾಗಿ ಕೊಲೆಯಾಗಿದ್ದಾರೆ. ಗುರುಗ್ರಾಮದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಅಡುಗೆ ಮಾಡುತ್ತಿದ್ದಾಗ ರಾಧಿಕಾ ಅವರ ಹಿಂಭಾಗಕ್ಕೆ 3…

The post ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಬೆನ್ನಿಗೆ ಗುಂಡು ಹಾರಿಸಿ ಕೊಂ*ದ ತಂದೆ! appeared first on Good News 24x7.

]]>

ನವದೆಹಲಿ : ತನ್ನದೇ ಸ್ವಂತ ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ತನ್ನ ತಂದೆಯೊಂದಲೇ ಭೀಕರವಾಗಿ ಕೊಲೆಯಾಗಿದ್ದಾರೆ. ಗುರುಗ್ರಾಮದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಅಡುಗೆ ಮಾಡುತ್ತಿದ್ದಾಗ ರಾಧಿಕಾ ಅವರ ಹಿಂಭಾಗಕ್ಕೆ 3 ಬಾರಿ ಗುಂಡು ಹಾರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಆಕೆಯ ಪ್ರಮುಖ ಅಂಗಗಳಿಗೆ ಗಾಯಗಳಾಗಿ ಅವರು ತಕ್ಷಣವೇ ಸಾವನ್ನಪ್ಪಿದ್ದಾರೆ.


ಕೊಲೆ ಆರೋಪಿ ಹಾಗೂ ಮೃತ ಯುವತಿಯ ತಂದೆ ದೀಪಕ್ ಯಾದವ್ ಅವರನ್ನು ಬಂಧಿಸಲಾಗಿದೆ. ಅವರ ಬಳಿಯಿದ್ದ ಲೈಸೆನ್ಸ್ ಪಡೆದ ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ರಾಧಿಕಾ ಯಾದವ್ ಅವರ 51 ವರ್ಷದ ತಂದೆ ತಮ್ಮ ಮಗಳು ಸ್ವಂತ ಟೆನಿಸ್ ಅಕಾಡೆಮಿ ನಡೆಸುತ್ತಿದ್ದುದಕ್ಕೆ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.


ಪೊಲೀಸರ ಪ್ರಕಾರ, ದೀಪಕ್ ಯಾದವ್ ಅವರ ಊರಾದ ವಜೀರಾಬಾದ್ನಲ್ಲಿ ಗ್ರಾಮಸ್ಥರು ಮತ್ತು ಗೆಳೆಯರಿಂದ ಬಂದ ನಿಂದನೆಗಳಿಂದ ಕೋಪಗೊಂಡಿದ್ದರು. ಅವರ ಗೆಳೆಯರು, ಸಂಬಂಧಿಕರು ದೀಪಕ್ ತಮ್ಮ ಮಗಳ ಟೆನಿಸ್ ಅಕಾಡೆಮಿಯಿಂದ ಪಡೆಯುವ ಆದಾಯದಿಂದ ಬದುಕುತ್ತಿದ್ದಕ್ಕಾಗಿ ಅಪಹಾಸ್ಯ ಮಾಡಿದ್ದರು. ಇದರಿಂದ ದೀಪಕ್ ಯಾದವ್ ಮಗಳ ಮೇಲೆ ಕೋಪಗೊಂಡಿದ್ದರು. ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಅನೇಕ ಬಾರಿ ಹೇಳಿದ್ದರು. ಆದರೆ, ಆಕೆ ಒಪ್ಪಿರಲಿಲ್ಲ. ಇದೇ ವಿಷಯದ ಜಗಳದಿಂದ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರ ಪ್ರಕಾರ, ತಂದೆ ತನ್ನ ಮಗಳ ವೃತ್ತಿಜೀವನ ಮತ್ತು ಗಳಿಕೆಯ ಬಗ್ಗೆ ಸಾಮಾಜಿಕ ಟೀಕೆಗಳಿಂದಾಗಿ ಕಳೆದ 15 ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ತಂದೆ ಮತ್ತು ಮಗಳ ನಡುವಿನ ಇತ್ತೀಚಿನ ವಾಗ್ವಾದವು ರಾಧಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಿಂದ ಹುಟ್ಟಿಕೊಂಡಿರಬಹುದು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ರಾಧಿಕಾ ಯಾದವ್ ಯಾರು?


ರಾಧಿಕಾ ಒಬ್ಬ ಪ್ರತಿಭಾನ್ವಿತ ಮತ್ತು ಭರವಸೆಯ ಟೆನಿಸ್ ಕ್ರೀಡಾಪಟು. ಸ್ಕಾಟಿಷ್ ಹೈ ಇಂಟರ್ನ್ಯಾಷನಲ್ ಶಾಲೆಯ ಪದವೀಧರೆ. ಆಕೆ 2018ರಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಶಾಲೆಯಲ್ಲಿ ಓದುವಾಗಲೇ ಆಕೆ ಟೆನಿಸ್ಗೆ ಕಾಲಿಟ್ಟರು. ರಾಧಿಕಾ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ನಲ್ಲಿ ಡಬಲ್ಸ್ ಟೆನಿಸ್ ಆಟಗಾರ್ತಿಯಾಗಿ 113ನೇ ಸ್ಥಾನ ಪಡೆದಿದ್ದರು. ಐಟಿಎಫ್ ಡಬಲ್ಸ್ನಲ್ಲಿ ಅವರು ಅಗ್ರ 200ರೊಳಗೆ ಸ್ಥಾನ ಪಡೆದಿದ್ದರು. ಆಕೆ ಇತ್ತೀಚೆಗೆ ಭುಜದ ಗಾಯದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆಗೂ ಒಳಗಾಗಿದ್ದರು. ಆದರೂ ಅಕಾಡೆಮಿಯನ್ನು ನಡೆಸುವುದನ್ನು ನಿಲ್ಲಿಸಲಿಲ್ಲ.

The post ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಬೆನ್ನಿಗೆ ಗುಂಡು ಹಾರಿಸಿ ಕೊಂ*ದ ತಂದೆ! appeared first on Good News 24x7.

]]>
ರಾಮನಗರ ದಿವ್ಯಾಂಗ ಬಾಲಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! https://www.goodnews24x7.com/big-twist-in-ramanagara-divyang-girl-case/ Sun, 18 May 2025 07:21:47 +0000 https://www.goodnews24x7.com/?p=3947 ರಾಮನಗರ : ರಾಮನಗರದಲ್ಲಿ ನಡೆದಿದ್ದ ದಿವ್ಯಾಂಗ ಬಾಲಕಿಯ ಕೊ*ಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಮರ್ಡ*ರ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆದರೆ ಇದೀಗ ಮರ್ಡ*ರ್ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಅತ್ಯಾ*ಚಾರ ನಡೆದಿಲ್ಲವೆಂಬುದು…

The post ರಾಮನಗರ ದಿವ್ಯಾಂಗ ಬಾಲಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! appeared first on Good News 24x7.

]]>

ರಾಮನಗರ : ರಾಮನಗರದಲ್ಲಿ ನಡೆದಿದ್ದ ದಿವ್ಯಾಂಗ ಬಾಲಕಿಯ ಕೊ*ಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಮರ್ಡ*ರ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆದರೆ ಇದೀಗ ಮರ್ಡ*ರ್ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಅತ್ಯಾ*ಚಾರ ನಡೆದಿಲ್ಲವೆಂಬುದು ಎಫ್ಎಸ್ಎಲ್ ವರದಿಯಲ್ಲಿ ಧೃಡಪಟ್ಟಿದೆ. ಜೊತೆಗೆ ಪ್ರಕರಣದ ತನಿಖೆ ಬಗ್ಗೆ ಅಲೆಮಾರಿ ಹಕ್ಕಿಪಿಕ್ಕಿ ಬುಡುಕಟ್ಟು ಸಮುದಾಯದ ರಾಜ್ಯಾಧ್ಯಕ್ಷ ಜಗ್ಗು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದ್ದ 14 ವರ್ಷದ ದಿವ್ಯಾಂಗ ಬಾಲಕಿಯ ಕೊ*ಲೆ ಪ್ರಕರಣಕ್ಕೆ ಬಿಗ್ ಟಿಸ್ಟ್ ಸಿಕ್ಕಿದ್ದು, ಮೇಲ್ನೋಟಕ್ಕೆ ಬಾಲಕಿಯದ್ದು ಕೊ*ಲೆ ಅಲ್ಲ, ರೈಲು ಡಿಕ್ಕಿ ಹೊಡೆದು ಸಾ*ವನ್ನಪ್ಪಿದ್ದಾಳೆ. ಜೊತೆಗೆ ಬಾಲಕಿಯ ಮೇಲೆ ಯಾವುದೇ ಅತ್ಯಾ*ಚಾರ ನಡೆದಿಲ್ಲವೆಂಬುವುದು ಎಫ್ಎಸ್ಎಲ್ ವರದಿಯಲ್ಲಿ ಧೃಡವಾಗಿದೆ. ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯ 14 ವರ್ಷದ ದಿವ್ಯಾಂಗ ಬಾಲಕಿ ಮೇ 11 ರ ಸಂಜೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಆನಂತರ ಮೇ 12 ರಂದು ಹಕ್ಕಿಪಿಕ್ಕಿ ಕಾಲೋನಿ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬಾಲಕಿಯ ಸಾ*ವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಅತ್ಯಾ*ಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಈ ನಿಟ್ಟಿನಲ್ಲಿ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.


ವಿಶೇಷ ತಂಡಗಳನ್ನ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಬಿಡದಿ ಪೊಲೀಸರು, ಮರಣೋತ್ತರ ಪರೀಕ್ಷೆ ಜೊತೆಗೆ ಎಫ್ಎಸ್ಎಲ್ಗೂ ಕಳುಹಿಸಿದ್ದರು. ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಬಾಲಕಿಯ ಮೇಲೆ ಯಾವುದೇ ಅತ್ಯಾ*ಚಾರ ನಡೆದಿರುವುದು ಧೃಡವಾಗಿಲ್ಲ. ಜೊತೆ ಬಾಲಕಿಯ ಮೇಲೆ ಯಾವುದೇ ಸುಟ್ಟ ಗುರುತುಗಳು ಪತ್ತೆಯಾಗಿಲ್ಲ. ಅಲ್ಲದೆ ಸಿಸಿ ಟಿವಿ ಆಧಾರದ ಮೇಲೆ ಮೇಲ್ನೋಟಕ್ಕೆ ರೈಲು ಡಿಕ್ಕಿ ಹೊಡೆದು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಇನ್ನು ಪೊಲೀಸರ ಕೈ ಸೇರಿರುವ FSL ವರದಿಯಿಂದ ಬಾಲಕಿಯ ಮೇಲೆ ಅತ್ಯಾ*ಚಾರ ನಡೆದಿಲ್ಲದಿರುವುದು ಗೊತ್ತಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಯಿಂದ ಇದು ಆತ್ಮ*ಹತ್ಯೆಯಾ ಅಥವಾ ಕೊ*ಲೆಯಾ ಎಂಬುವುದು ತಿಳಿಯಲಿದೆ. ಮರಣೋತ್ತರ ವರದಿ ಸೋಮವಾರ ಪೊಲೀಸರ ಕೈ ಸೇರಲಿದೆ. ಆ ಬಳಿಕ ಸಾ*ವಿಗೆ ನಿಖರ ಕಾರಣ ತಿಳಿಯಲಿದೆ. ಇನ್ನು ಬಾಲಕಿಯ ಸಾ*ವಿನ ಸುದ್ದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

The post ರಾಮನಗರ ದಿವ್ಯಾಂಗ ಬಾಲಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! appeared first on Good News 24x7.

]]>