ipl2026 Archives - Good News 24x7 https://www.goodnews24x7.com/tag/ipl2026/ Kannada Tue, 26 May 2026 12:33:56 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ipl2026 Archives - Good News 24x7 https://www.goodnews24x7.com/tag/ipl2026/ 32 32 ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! https://www.goodnews24x7.com/rcb-can-reach-the-final-without-playing-the-qualifier/ Tue, 26 May 2026 12:28:44 +0000 https://www.goodnews24x7.com/?p=9547 ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ, ಮಳೆ ನಿಯಮ ಆರ್‌ಸಿಬಿಗೆ ವರದಾನವಾಗಲಿದೆ.

ಐಪಿಎಲ್ ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ  7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ?

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

https://www.instagram.com/reel/DYzRfaoE5RV/?utm_source=ig_web_copy_link&igsh=MzRlODBiNWFlZA==ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

ಅಗ್ರಸ್ಥಾನದಲ್ಲಿ ಆರ್​ಸಿಬಿ


ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?


ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>
MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! https://www.goodnews24x7.com/mi-vs-rcb-big-fight-between-giants-at-wankhede-bangalore-ready-for-mumbai-challenge/ Sat, 11 Apr 2026 08:54:52 +0000 https://www.goodnews24x7.com/?p=9186 ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ…

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>

ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯನ್ನು ಎದುರಿಸಲು ಸಜ್ಜಾಗಿದೆ.

ವಾಂಖೆಡೆ ಪಿಚ್ ಮತ್ತು ಹವಾಮಾನ ವರದಿ:
ಬ್ಯಾಟ್ಸ್‌ಮನ್‌ಗಳ ಸ್ವರ್ಗವೆಂದೇ ಕರೆಯಲ್ಪಡುವ ವಾಂಖೆಡೆಯ ಕೆಂಪು ಮಣ್ಣಿನ ಪಿಚ್ ವೇಗ ಮತ್ತು ಬೌನ್ಸ್‌ಗೆ ಹೆಸರಾಗಿದೆ. ಇಲ್ಲಿನ ವೇಗದ ಔಟ್‌ಫೀಲ್ಡ್ ಬೃಹತ್ ಮೊತ್ತದ ರನ್ ಗಳಿಸಲು ಪೂರಕವಾಗಿದೆ. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನ 12ನೇ ಓವರ್ ಬಳಿಕ ಇಬ್ಬನಿ (Dew Factor) ಬೀಳುವ ನಿರೀಕ್ಷೆಯಿರುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಪಂದ್ಯದ ವೇಳೆ ಮಳೆ ಸಾಧ್ಯತೆ ಕೇವಲ ಶೇ.5 ರಷ್ಟು ಮಾತ್ರವಿದ್ದು, ಕ್ರಿಕೆಟ್ ಪ್ರಿಯರಿಗೆ ಯಾವುದೇ ಅಡ್ಡಿಯಿಲ್ಲದೆ ಪಂದ್ಯ ವೀಕ್ಷಿಸಲು ಅವಕಾಶವಿದೆ.

ಉಭಯ ತಂಡಗಳ ಮುಖಾಮುಖಿ ಹಾಗೂ ದಾಖಲೆಗಳು:
ಇತಿಹಾಸವನ್ನು ಗಮನಿಸಿದರೆ, ಈವರೆಗೆ ನಡೆದ 34 ಹಣಾಹಣಿಗಳಲ್ಲಿ ಮುಂಬೈ 19 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 15 ರಲ್ಲಿ ಜಯ ಸಾಧಿಸಿದೆ. ಮುಂಬೈ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 855 ರನ್ ಗಳಿಸುವ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಮುಂಬೈ ಪರ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧ 24 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. 2015 ರಲ್ಲಿ ಆರ್‌ಸಿಬಿ ಇದೇ ಮೈದಾನದಲ್ಲಿ 235 ರನ್ ಸಿಡಿಸಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ತನ್ನ ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಅದ್ಭುತ ದಾಖಲೆ ಹೊಂದಿದ್ದು, ಆರ್‌ಸಿಬಿ ವಿರುದ್ಧದ 12 ಪಂದ್ಯಗಳಲ್ಲಿ 8 ರಲ್ಲಿ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡು ಜಯಭೇರಿ ಬಾರಿಸುವ ಒತ್ತಡದಲ್ಲಿ ರಜತ್ ಪಾಟಿದಾರ್ ನೇತೃತ್ವದ ಬೆಂಗಳೂರು ತಂಡವಿದೆ.

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>
ಅಧ್ಬುತ ಕ್ಯಾಚ್ ಹಿಡಿದ ಸಾಲ್ಟ್ ಫ್ಯಾನ್ಸ್ ಆದ್ರು ಫ್ಲ್ಯಾಟ್…. https://www.goodnews24x7.com/%e0%b2%85%e0%b2%a7%e0%b3%8d%e0%b2%ac%e0%b3%81%e0%b2%a4-%e0%b2%95%e0%b3%8d%e0%b2%af%e0%b2%be%e0%b2%9a%e0%b3%8d-%e0%b2%b9%e0%b2%bf%e0%b2%a1%e0%b2%bf%e0%b2%a6-%e0%b2%b8%e0%b2%be%e0%b2%b2%e0%b3%8d/ Sun, 29 Mar 2026 06:11:25 +0000 https://www.goodnews24x7.com/?p=9027 ಐಪಿಎಲ್ 2026 ಟೂರ್ನಮೆಂಟ್‌ನ ಮೊದಲ ಪಂದ್ಯ ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು.ಈ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು.ಈ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ತಮ್ಮ ಅಮೋಘ ಫಿಲ್ಡಿಂಗ್ ಪ್ರದರ್ಶನದ ಮೂಲಕ…

The post ಅಧ್ಬುತ ಕ್ಯಾಚ್ ಹಿಡಿದ ಸಾಲ್ಟ್ ಫ್ಯಾನ್ಸ್ ಆದ್ರು ಫ್ಲ್ಯಾಟ್…. appeared first on Good News 24x7.

]]>

ಐಪಿಎಲ್ 2026 ಟೂರ್ನಮೆಂಟ್‌ನ ಮೊದಲ ಪಂದ್ಯ ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು.ಈ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು.ಈ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ತಮ್ಮ ಅಮೋಘ ಫಿಲ್ಡಿಂಗ್ ಪ್ರದರ್ಶನದ ಮೂಲಕ ಮೊದಲ ಪಂದ್ಯವನ್ನೇ ರೋಮಾಂಚನಗೊಳಿಸಿದರು. ಒಂದಲ್ಲ, ಎರಡಲ್ಲ.. ಈ ಪಂದ್ಯದಲ್ಲಿ ಸಾಲ್ಟ್ ಹಿಡಿದಿದ್ದು ಬರೋಬ್ಬರಿ 3 ಕ್ಯಾಚ್​ಗಳು. ಈ ಮೂರು ಕ್ಯಾಚ್​ಗಳು ಅಷ್ಟು ಸುಲಭದ ತುತ್ತಾಗಿರಲಿಲ್ಲ. ಹಾಗಿದ್ದರೂ ಫಿಲ್ ಸಾಲ್ಟ್ ಈ ಮೂರು ಕ್ಯಾಚ್ಗಳನ್ನು ಹಿಡಿದು ಎಸ್​ಆರ್​ಎಚ್ ರನ್​ ವೇಗಕ್ಕೆ ಕಡಿವಾಣ ಹಾಕಿದರು.

ಅದರಲ್ಲೂ ನಾಯಕ ಇಶಾನ್ ಕಿಶನ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 53 ಎಸೆತಗಳಲ್ಲಿ 97 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದ್ದ ಸ್ಫೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್ ಉರುಳಿಸುವಲ್ಲಿ ಸಾಲ್ಟ್ ಅವರ ಚಾಣಾಕ್ಷತನದ ಫಿಲ್ಡಿಂಗ್ ಎಲ್ಲರ ಗಮನ ಸೆಳೆಯಿತು. 22 ಎಸೆತಗಳಲ್ಲಿ 31 ರನ್ ಬಾರಿಸಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಲಾರಂಭಿಸಿದ ಕ್ಲಾಸೆನ್ ದೊಡ್ಡ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರು. ಇದಕ್ಕೆ ಪೂರಕವಾಗಿ ಕಿಶನ್ ಹಾಗೂ ಕ್ಲಾಸೆನ್ ಜೋಡಿ 13 ಓವರ್‌ಗಳಲ್ಲಿ ತಂಡವನ್ನು 126 ರನ್‌ಗಳ ಗಡಿ ದಾಟಿಸಿದ್ದರು. ಆದ್ದರಿಂದ, ಈ ಜೋಡಿ ಮುರಿಯದಿದ್ದರೆ, ಅದು 250 ರನ್‌ಗಳಾಗಬಹುದೆಂಬ ಭಯವಿತ್ತು. ಆದಾಗ್ಯೂ 14 ನೇ ಓವರ್‌ನಲ್ಲಿ ಈ ಜೋಡಿಯ ಜೊತೆಯಾಟ ಮುರಿದುಬಿತ್ತು. ಅದು ಸಾಲ್ಟ್ ಅವರ ಫಿಲ್ಡಿಂಗ್​ನಿಂದ.

 

14 ನೇ ಓವರ್ ಬೌಲ್ ಮಾಡಲು ಬಂದ ರೊಮಾರಿಯೊ ಶೆಫರ್ಡ್‌ ಅವರ ಮೊದಲ ಎಸೆತದಲ್ಲೇ ಹೆನ್ರಿಕ್ ಕ್ಲಾಸೆನ್ ಭರ್ಜರಿ ಸಿಕ್ಸರ್‌ ಹೊಡೆಯಲು ಪ್ರಯತ್ನಿಸಿದರು. ಆದರೆ ಬೌಂಡರಿ ಲೈನ್ ಬಳಿ ನಿಂತಿದ್ದ ಫಿಲ್ ಸಾಲ್ಟ್ ಅದ್ಭುತ ಕ್ಯಾಚ್ ಪಡೆದರು. ಆದರೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡರು. ಹೀಗಾಗಿ ಕ್ಯಾಚ್ ಪಡೆದ ಬಳಿಕ ಸಾಲ್ಟ್ ನೆಲಕ್ಕುರುಳಿದರು. ಇದರಿಂದ ಕ್ಯಾಚ್ ಪೂರ್ಣಗೊಂಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಫಿಲ್ಡ್ ಅಂಪೈರ್, ಮೂರನೇ ಅಂಪೈರ್​ನ ಮೊರೆ ಹೋದರು. ಕುಲಂಕುಶವಾಗಿ ಪರಿಶೀಲಿಸಿದ ಮೂರನೇ ಅಂಪೈರ್ ಫೇರ್ ಕ್ಯಾಚ್ ಎಂಬ ತೀರ್ಪು ನೀಡಿದರು. ಆದಾಗ್ಯೂ ಅಂಪೈರ್ ಅವರ ಈ ನಿರ್ಧಾರ ಎಸ್​ಆರ್​ಎಚ್ ಪಾಳಾಯದಲ್ಲಿ ಅಸಮಾಧಾನ ಮೂಡಿಸಿತು. ಏಕೆಂದರೆ ಸಾಲ್ಟ್ ಅವರ ದೇಹ ಬೌಂಡರಿ ಗೆರೆಗೆ ತಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಹೀಗಾಗಿ ಕ್ಲಾಸೆನ್ ಕೂಡ ನಾಲ್ಕನೇ ಅಂಪೈರ್ ಬಳಿ ಈ ಬಗ್ಗೆ ಚರ್ಚೆ ನಡೆಸಿದರಾದರೂ ಅದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ.

ಒಟ್ಟಾರೆಯಾಗಿ ಫಿಲ್ ಸಾಲ್ಟ್ ಅವರ ಅಮೋಘವಾದ ಫೀಲ್ಡಿಂಗ್ ಗೆ ಫಾನ್ಸ್ ಫುಲ್ ಫಿದಾ ಆಗಿದ್ದು , ಎಲ್ಲೆಡೆ ಮೆಚ್ಚುಗೆಯನ್ನ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಫಿಲ್ ಸಾಲ್ಟ್ ಅವರನ್ನ ಕೊಂಡಾಡಲಾಗುತ್ತಿದೆ.

The post ಅಧ್ಬುತ ಕ್ಯಾಚ್ ಹಿಡಿದ ಸಾಲ್ಟ್ ಫ್ಯಾನ್ಸ್ ಆದ್ರು ಫ್ಲ್ಯಾಟ್…. appeared first on Good News 24x7.

]]>