JAIL Archives - Good News 24x7 https://www.goodnews24x7.com/tag/jail/ Kannada Mon, 10 Nov 2025 12:56:28 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg JAIL Archives - Good News 24x7 https://www.goodnews24x7.com/tag/jail/ 32 32 ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ https://www.goodnews24x7.com/parappana-agrahara-jail-provides-all-facilities-to-muslims-terrorists-opposition-leader-r-ashok/ Mon, 10 Nov 2025 12:56:28 +0000 https://www.goodnews24x7.com/?p=8097 ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ…

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ appeared first on Good News 24x7.

]]>

ಬೆಂಗಳೂರು: ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿವೆ. ಜೈಲಿನಿಂದ ಹೊರಬಿದ್ದ ದೃಶ್ಯಗಳು ಜೈಲು ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಉಗ್ರರು, ನಟೋರಿಯಸ್ ರೇಪಿಸ್ಟ್ ಹಾಗೂ ಅಪಾಯಕಾರಿ ಕೈದಿಗಳಿಗೆ ಸಿಗ್ತಿರೋ ಸವಲತ್ತು ಸಮಾಜವನ್ನ ಆತಂಕಕ್ಕೆ ದೂಡುವಂತೆ ಮಾಡಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನ ಹೊಣೆ ಮಾಡಿರೋ ಬಿಜೆಪಿ ನಿಗಿನಿಗಿ ಅಂತಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮುಸಲ್ಮಾನರನ್ನು ಮುಟ್ಟಿದರೆ ನಮಗೆ ಪ್ರಮೋಷನ್ ಇಲ್ಲ ಅಂತಾ ಕರ್ನಾಟಕದ ಪೊಲೀಸರು ಭಯಗೊಂಡಿದ್ದಾರೆ. ಯಾವ ಸ್ಟೇಷನ್ ಗಳಲ್ಲೂ ಈಗ ಮುಸಲ್ಮಾನರ ಮೇಲೆ ಏನೂ ಕೇಸ್ ಮಾಡಲ್ಲ. ಈಗ ಅದು ಪರಪ್ಪನ ಅಗ್ರಹಾರದವರೆಗೆ ಹೋಗಿದೆ. ಪರಪ್ಪನ ಅಗ್ರಹಾರದಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ದೇಶದಲ್ಲಿರುವ ಎಲ್ಲಾ ಭಯೋತ್ಪಾದಕರು ನಮಗೆ ಕರ್ನಾಟಕ ಕೊಡಿ ಎಂದು ಅರ್ಜಿ ಹಾಕುತ್ತಿದ್ದಾರಂತೆ. ದರ್ಶನ್ ಬೀಡಿ ಸೇದಿದ್ದಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿ ಬೇಲ್ ಕ್ಯಾನ್ಸಲ್ ಮಾಡಿಸಿದರು. ಇದರಲ್ಲಿ ಸುಪ್ರೀಂ ಕೋರ್ಟ್ ಗೆ ಸರ್ಕಾರ ಹೋಗಲ್ಲ. ದರ್ಶನ್ ಗೆ ಒಂದು ಕಾನೂನು, ಭಯೋತ್ಪಾದಕರಿಗೆ ರಾಜಾತಿಥ್ಯ. ಯಾಕೆಂದರೆ ದರ್ಶನ್ ಹಿಂದೂ, ಇವರು ಮುಸಲ್ಮಾನರು. ದರ್ಶನ್ ತಪ್ಪು ಮಾಡಿದ್ದಾರೆ, ಇಲ್ಲ ಅಂತಾ ಹೇಳಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ ತಾನೇ. ದೇಶದ್ರೋಹಿಗೆ ಒಂದು ಕಾನೂನು, ದರ್ಶನ್ ಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದರು.

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ವಿಪಕ್ಷ ನಾಯಕ ಆರ್. ಅಶೋಕ್ appeared first on Good News 24x7.

]]>
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು https://www.goodnews24x7.com/parappana-agrahara-jail-inmates-given-royal-hospitality-fir-filed/ Mon, 10 Nov 2025 12:42:35 +0000 https://www.goodnews24x7.com/?p=8089 ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್​ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್​​ಐಎ ಕೂಡ ಮಧ್ಯೆ ಪ್ರವೇಶಿಸಿದೆ.…

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು appeared first on Good News 24x7.

]]>

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್​ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್​​ಐಎ ಕೂಡ ಮಧ್ಯೆ ಪ್ರವೇಶಿಸಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ (parappana agrahara jail) ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ಐಷಾರಾಮಿ ಬದುಕಿನ ಒಂದೊಂದೇ ಕರಾಳತೆ ಬಯಲಾಗುತ್ತಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಅಲರ್ಟ್ ಆಗಿದೆ. ಇಬ್ಬರು ಜೈಲಧಿಕಾರಿಗಳ ತಲೆದಂಡವಾಗಿದೆ. ಇದೀಗ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಎನ್​​ಸಿಆರ್​​ ಮತ್ತು ಒಂದು ಎಫ್​​ಐಆರ್​​​ ದಾಖಲಾಗಿದೆ. ಜೊತೆಗೆ ಎನ್​​ಐಎ ಎಂಟ್ರಿ ಆಗಿದೆ.

ವಿಕೃತ ಕಾಮಿ, ನಟೋರಿಯಸ್ ರೌಡಿಶೀಟರ್​ಗಳು, ಅಷ್ಟೇ ಯಾಕೆ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು ಪರಪ್ಪನ ಅಗ್ರಹಾರ ಜೈಲಿಗೆ ಯಾವುದೋ ರೆಸಾರ್ಟ್​​ಗೆ ಬಂದಂತಿದ್ದಾರೆ. ಹೈಪ್ರೊಫೈಲ್ ಕೇಸ್​ಗಳ ಆರೋಪಿಗಳು, ಅಪರಾಧಿಗಳು ಶಿಕ್ಷೆ ಸನುಭವಿಸುತ್ತಿರುವ ಈ ಜೈಲು ಕ್ರಿಮಿನಲ್​ಗಳ ಪಾಲಿಗೆ ಸ್ವರ್ಗ. ಅದಕ್ಕೆ ಸಾಕ್ಷಿಯಾಗಿ ಕೈದಿಗಳು ಮೋಜು ಮಸ್ತಿ ಮಾಡುತ್ತಿದ್ದ ಸಾಲು ಸಾಲು ವಿಡಿಯೋಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿವೆ.

ಒಟ್ಟು ನಾಲ್ಕು ಪ್ರಕರಣಗಳ ದಾಖಲು
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಈವರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ದೂರು ದಾಖಲಾಗಿವೆ. ಈ ಪೈಕಿ ಮೂರು ಎನ್​​ಸಿ ಆರ್​​ ದಾಖಲಾದರೆ, ಒಂದು ಎಫ್ಐಆರ್​​ ದಾಖಲಾಗಿದೆ.
ಇಂದು ಸಸ್ಪೆಂಡ್ ಆಗಿರುವ ಜೈಲಿನ ಅಧೀಕ್ಷಕ ಮ್ಯಾಗೇರಿ ಅವರಿಂದಲೇ ದೂರು ನೀಡಲಾಗಿದೆ. ಅವರ ದೂರಿನ ಮೇರೆಗೆ ಜೈಲಿನಲ್ಲಿ ತಟ್ಟೆ, ಡ್ರಮ್ ಬಾರಿಸಿ ಡ್ಯಾನ್ಸ್ ಮಾಡಿದ್ದ ಸಜಾ ಬಂಧಿ ಪ್ಯಾಟ್ರಿಕ್ ಟೀಮ್​​​ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎನ್​​ಸಿಆರ್​​ ಪ್ರಕರಣಗಳನ್ನ ಪೊಲೀಸರು ಎಫ್ಐಆರ್ ಮಾಡಿಕೊಳ್ಳಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಎನ್​ಐಎ ಅಧಿಕಾರಿಗಳ ಎಂಟ್ರಿ
ಇನ್ನು ಪರಪ್ಪನ ಅಗ್ರಹಾರದಲ್ಲಿ ಉಗ್ರರ ಕೈಗೆ ಮೊಬೈಲ್ ಸಿಗುತ್ತಿದ್ದಂತೆ ಎನ್​ಐಎ ಅಧಿಕಾರಿಗಳ ಎಂಟ್ರಿಯಾಗಿದೆ. ಸಿಸಿಬಿ ಕಚೇರಿಗೆ ಬಂದ ಅಧಿಕಾರಿಗಳ ತಂಡ, ಜೈಲಿನಲ್ಲಿ ಯಾವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆ? ಜೈಲಿನಲ್ಲಿ ಉಗ್ರರು ಬಳಸುತ್ತಿದ್ದ ಮೊಬೈಲ್ ಫೋನ್ ಸಿಕ್ಕಿದೆಯಾ ಎಂಬೆಲ್ಲಾ ಮಾಹಿತಿ ಪಡೆದಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.

ಇಂದು ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಹತ್ವದ ಸಭೆ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪರಮೇಶ್ವರ್, ತರಾಟೆಗೆ ತೆಗೆದುಕೊಂಡರು. ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್, ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ, ಹಾಗೂ ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಎಂಬುವವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್​ರನ್ನು ಬೇರೆ ಕಡೆಗೆ ಎತ್ತಂಗಡಿ ಮಾಡಲಾಗಿದೆ.

The post ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು appeared first on Good News 24x7.

]]>
ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ https://www.goodnews24x7.com/wife-attacked-for-not-making-chicken-soup-husband-goes-to-jail-after-losing-wife/ Sun, 14 Sep 2025 11:04:58 +0000 https://www.goodnews24x7.com/?p=7541 ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್​ ಲೇವೆಲ್​​​ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ…

The post ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ appeared first on Good News 24x7.

]]>

ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್​ ಲೇವೆಲ್​​​ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ.

ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ ಕಳೆದುಕೊಂಡಿದ್ದಾಳೆ. ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿ ನದಿಗೆ ಎಸೆದು ಬಂದಿದ್ದ. ಕಳೆದ ಆಗಸ್ಟ್​​ನಲ್ಲಿಯೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಆಗಿದ್ದೇನು..?
ರೀನಾ ಎಂಬ 21 ವರ್ಷದ ಹುಡುಗಿ ನಿಗಮ್ ಎಂಬಾತನ ಮದುವೆ ಆಗಿದ್ದಳು. ಕಳೆದ ಆಗಸ್ಟ್ 21 ರಂದು ನಿಗಮ್ ಮನೆಗೆ ಮದ್ಯ ಸೇವಿಸಿ ಬಂದಿದ್ದ. ಬರುವಾಗ ಚಿಕನ್ ತೆಗೆದುಕೊಂಡು ಬಂದಿದ್ದ. ಚಿಕನ್ ತಂದಿದ್ದ ಆತ, ಪತ್ನಿ ಕೋಳಿ ಸಾರು ಮಾಡುತ್ತಾಳೆ ಅಂದುಕೊಂಡಿದ್ದ. ಆದರೆ ಆಕೆ, ಮುಂಚೆಯೇ ಸಾಂಬರ್​​ಗೆ ತಯಾರಿ ಮಾಡಿದ್ದರಿಂದ ತರಕಾರಿ ಸಾರು ಮಾಡಿದ್ದಳು. ಇದರಿಂದ ಕೋಪಿಸಿಕೊಂಡು ಆತ, ರೀನಾ ಮೇಲೆ ಹಲ್ಲೆ ಮಾಡಿದ್ದಾನೆ.
ಗಂಡನ ಹಲ್ಲೆಯಿಂದ ಮನನೊಂದ ರೀನಾ ದುಡುಕಿ ನಿರ್ಧಾರಕ್ಕೆ ಬಂದು ನೇಣು ಬಿಗಿದುಕೊಂಡಿದ್ದಾಳೆ. ಹೆಂಡತಿ ಮೃತಪಟ್ಟಿರೋದು ಗೊತ್ತಾಗುತ್ತಿದ್ದಂತೆಯೇ ನಿಗಮ್ ಭಯಭೀತನಾದ. ನಂತರ ಸಂಬಂಧಿಕರ ಸಹಾಯದಿಂದ ರೀನಾಳ ಮೃತ ದೇಹವನ್ನು ಗಂಗಾ ನದಿಗೆ ಎಸೆದು ಬಂದಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ.

ತನಿಖೆಯಲ್ಲಿ ಸತ್ಯ ಬಯಲು
ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮಿಸ್ಸಿಂಗ್ ಕೇಸ್ ದಾಖಲಾಗುತ್ತಿದ್ದಂತೆಯೇ ರೀನಾಳ ಕುಟುಂಬಸ್ಥರು ನಿಗಮ್ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳ ಕೇಸ್ ದಾಖಲಿಸಿದ್ದರು. ನಂತರ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ.

The post ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ appeared first on Good News 24x7.

]]>
ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಕೂಲಿಕೆಲಸಗಾರ…! https://www.goodnews24x7.com/prajwal-revanna-is-now-a-wage-laborer-in-jail/ Thu, 28 Aug 2025 14:59:02 +0000 https://www.goodnews24x7.com/?p=6908 ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಕೃಷಿ ಕೂಲಿ ಕೆಲಸ ಮಾಡುವುದಾಗಿ ಹೇಳಿದ ಪ್ರಜ್ವಲ್ ಕೃಷಿ ಜೊತೆಗೆ ಅಡ್ಮಿನಿಸ್ಟ್ರೇಟೀವ್ ಕೆಲಸ ಮಾಡುವ ಪ್ರಜ್ವಲ್ ಅಪರಾಧಿಗಳು ಜೈಲಿನಲ್ಲಿ ಯಾವುದಾದರೂ ಕೆಲಸ ಮಾಡಲೇಬೇಕು ರೇಪ್ ಕೇಸ್ ನಲ್ಲಿ ಅಪರಾಧಿ ಆಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ…

The post ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಕೂಲಿಕೆಲಸಗಾರ…! appeared first on Good News 24x7.

]]>

ಪ್ರಜ್ವಲ್ ರೇವಣ್ಣ
ಜೈಲಿನಲ್ಲಿ ಕೃಷಿ ಕೂಲಿ ಕೆಲಸ ಮಾಡುವುದಾಗಿ ಹೇಳಿದ ಪ್ರಜ್ವಲ್
ಕೃಷಿ ಜೊತೆಗೆ ಅಡ್ಮಿನಿಸ್ಟ್ರೇಟೀವ್ ಕೆಲಸ ಮಾಡುವ ಪ್ರಜ್ವಲ್
ಅಪರಾಧಿಗಳು ಜೈಲಿನಲ್ಲಿ ಯಾವುದಾದರೂ ಕೆಲಸ ಮಾಡಲೇಬೇಕು
ರೇಪ್ ಕೇಸ್ ನಲ್ಲಿ ಅಪರಾಧಿ ಆಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ಕೊನೆಗೂ ಜೈಲಿನಲ್ಲಿ ಏನು ಕೆಲಸ ಮಾಡುತ್ತೇನೆ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ಆರೋಪ ಸಾಬೀತಾದ ಅಪರಾಧಿಗಳು ಯಾವುದಾದರೊಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು. ಜೈಲಿನಲ್ಲಿ ಈ ಕೂಲಿ ಕೆಲಸ ಮಾಡಿದ್ದಕ್ಕೆ ಕೂಲಿ ಹಣವನ್ನು ನೀಡಲಾಗುತ್ತೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನಲ್ಲಿ ಈಗ ತಾನು ಕೃಷಿ ಕೆಲಸ ಮಾಡುತ್ತೇನೆ. ಜೊತೆಗೆ ಅಡ್ಮಿನಿಸ್ಟ್ರೇಟೀವ್ ಕೆಲಸಗಳನ್ನು ಮಾಡುತ್ತೇನೆ ಎಂದು ಜೈಲು ಅಧಿಕಾರಿಗಳಿಗೆ ಹೇಳಿದ್ದಾರೆ. ಹೀಗಾಗಿ ಈಗ ಪ್ರಜ್ವಲ್ , ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೃಷಿ ಕೂಲಿ ಕೆಲಸಗಾರ. ಜೊತೆಗೆ ಅಡ್ಮಿನಿಸ್ಟ್ರೇಟಿವ್ ಕೆಲಸಗಳ ಕೂಲಿ ಕೆಲಸಗಾರ.
ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ ದಿನಕ್ಕೆ 615 ರೂಪಾಯಿ ಕೂಲಿ ನಿಗದಿಯಾಗಲಿದೆ.
ಜೈಲಿನ ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ.

ಜೈಲು ಕಾಯ್ದೆ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸವನ್ನು ಸಜಾ ಬಂಧಿಗಳು ಮಾಡಬೇಕು ಅಥವಾ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ಮಾಡ್ತೀನಿ ಅಂತ ಜೈಲು ಅಧಿಕಾರಿಗಳಿಗೆ ತಿಳಿಸಬೇಕು. ಈಗ ಪ್ರಜ್ವಲ್ ರೇವಣ್ಣ ತಾನು ಕೃಷಿ ಕೆಲಸ ಹಾಗೂ ಅಡ್ಮಿನಿಸ್ಟ್ರೇಟಿವ್ ಕೆಲಸ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.

 

The post ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಕೂಲಿಕೆಲಸಗಾರ…! appeared first on Good News 24x7.

]]>
ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ. https://www.goodnews24x7.com/do-you-know-how-much-prajwal-revanna-earns-per-day-work-distribution-in-jail-soon/ Fri, 22 Aug 2025 13:29:51 +0000 https://www.goodnews24x7.com/?p=6486 ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ…

The post ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ. appeared first on Good News 24x7.

]]>

ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ ಜೈಲ್ಲಿ‌ನಲ್ಲಿ ಏನು ಕೆಲಸ ಕೊಡಬೇಕು ಎಂಬುದರ ಬಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣಗೆ ಜೈಲ್ಲಿನಲ್ಲಿ ಕೆಲಸವನ್ನು ನೀಡಲಿದ್ದಾರೆ.
ಸದ್ಯ ಪ್ರಜ್ವಲ್ ವಿದ್ಯಾಭ್ಯಾಸ ಮೇಲೆ ಕೆಲಸ ನೀಡಲು ಚಿಂತನೆ ನಡೆದಿದೆ. ಅಪರಾಧಿ ಪ್ರಜ್ವಲ್ ಬಿ.ಇ. ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.

 

 

ವ್ಯಾಸಂಗಕ್ಕೆ ಹೊಂದಿಕೊಳ್ಳುವ ಕೆಲಸ ನೀಡಲು ಜೈಲು ಅಧಿಕಾರಿಗಳ ಪ್ಲ್ಯಾನ್ ಮಾಡಿದ್ದಾರೆ. ಸಜಾಬಂಧಿ ಖೈದಿಗಳು ಕಡ್ಡಾಯವಾಗಿ ಜೈಲ್ಲಿ‌ನಲ್ಲಿರುವ ಯಾವುದಾದರೊಂದು ಕೆಲಸ ಮಾಡಬೇಕು. ಜೈಲಿನಲ್ಲಿ ಬೇಕರಿ, ತೋಟಗಾರಿಕೆ, ಗ್ರಂಥಾಲಯ ನಿರ್ವಹಣೆ, ಶಿಕ್ಷಣ, ಮಗ್ಗ, ಸಣ್ಣ ಪುಟ್ಟ ಕೈಗಾರಿಕೆ ಕೆಲಸ , ಅಡುಗೆ ಮನೆ ನಿರ್ವಹಣೆ, ಅಡ್ಮಿನಿಸ್ಟ್ರೇಶನ್ ನೋಡಿಕೊಳ್ಳುವುದು, ಸ್ಕಿಲ್ ಡೆವಲಪ್ಮೆಂಟ್ ಮುಂತಾದ ಕೆಲಸಗಳು ಇವೆ . ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ 615 ರೂಪಾಯಿ ಕೂಲಿ ನಿಗದಿಯಾಗಲಿದೆ.ಜೈಲಿನ ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ. ಜೈಲು ಕಾಯ್ದೆ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸವನ್ನು ಸಜಾ ಬಂಧಿಗಳು ಮಾಡಬೇಕು ಅಥವಾ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ಮಾಡ್ತೀನಿ ಅಂತ ಜೈಲು ಅಧಿಕಾರಿಗಳಿಗೆ ತಿಳಿಸಬೇಕು. ಸದ್ಯ ಸಜಾ ಖೈದಿಯಾಗಿರುವ ಪ್ರಜ್ವಲ್ ಯಾವ ಕೆಲಸ ಜೈಲಿನಲ್ಲಿ ಮಾಡ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.

The post ಪ್ರಜ್ವಲ್ ರೇವಣ್ಣಗೆ ದಿನಕ್ಕೆ ಎಷ್ಟು ಕೂಲಿ ಗೊತ್ತಾ? ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆ. appeared first on Good News 24x7.

]]>
ನಟಿ ರನ್ಯಾ ರಾವ್​ಗೆ ಒಂದು ವರ್ಷ ಜೈಲೇ ಗತಿ ಜಾಮೀನಿನ​ ಮಾತೇ ಇಲ್ಲ! https://www.goodnews24x7.com/%e0%b2%a8%e0%b2%9f%e0%b2%bf-%e0%b2%b0%e0%b2%a8%e0%b3%8d%e0%b2%af%e0%b2%be-%e0%b2%b0%e0%b2%be%e0%b2%b5%e0%b3%8d%e0%b2%97%e0%b3%86-%e0%b2%92%e0%b2%82%e0%b2%a6%e0%b3%81-%e0%b2%b5%e0%b2%b0/ Thu, 17 Jul 2025 08:53:39 +0000 https://www.goodnews24x7.com/?p=5142 ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎನ್ನಲಾಗಿದೆ. ಕಠಿಣ ಕಾಯ್ದೆಯಾದ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಿಂದಾಗಿ ಅವರು ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾಗಿದೆ. ಅವರು ವಿದೇಶದಿಂದ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು ಮತ್ತು ಪೊಲೀಸ್…

The post ನಟಿ ರನ್ಯಾ ರಾವ್​ಗೆ ಒಂದು ವರ್ಷ ಜೈಲೇ ಗತಿ ಜಾಮೀನಿನ​ ಮಾತೇ ಇಲ್ಲ! appeared first on Good News 24x7.

]]>

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎನ್ನಲಾಗಿದೆ. ಕಠಿಣ ಕಾಯ್ದೆಯಾದ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಿಂದಾಗಿ ಅವರು ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾಗಿದೆ. ಅವರು ವಿದೇಶದಿಂದ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಮಾರ್ಚ್ 3ರಂದು ನಟಿ ರನ್ಯಾ ರಾವ್ ಅವರ ಬಂಧನ ಆಯಿತು. ಕಳೆದ ನಾಲ್ಕು ತಿಂಗಳಿಂದ ಅವರು ಜೈಲಿನಲ್ಲೇ ಇದ್ದಾರೆ. ಒಟ್ಟೂ ಒಂದು ವರ್ಷ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಜಾಮೀನು ಪಡೆದು ಹೊರಬರಬೇಕು ಎಂದುಕೊಂಡಿದ್ದ ಅವರಿಗೆ ಈ ವಿಚಾರ ತಿಳಿದು ಮತ್ತಷ್ಟು ಚಿಂತೆ ಉಂಟಾಗಿದೆ. ಹಾಗಾದರೆ ಅವರಿಗೆ ಜಾಮೀನು ಸಿಗದೇ ಇರಲು ಕಾರಣ ಎಂಬುದರ ವಿವರ ಇಲ್ಲಿದೆ.

ರನ್ಯಾ ರಾವ್ ಅವರು ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದರು. ಈ ರೀತಿಯಲ್ಲಿ ಅವರು ಈಗಾಗಲೇ ಸಾಕಷ್ಟು ವಂಚನೆ ಮಾಡಿದ್ದಾರೆ. ಇದಕ್ಕೆ ರನ್ಯಾ ಪೊಲೀಸ್ ವ್ಯವಸ್ಥೆಯನ್ನು ಕೂಡ ಬಳಕೆ ಮಾಡಿಕೊಂಡ ಆರೋಪ ಇದೆ. ಅವರ ಬಂಧನದ ಬಳಿಕ ಈ ಜಾಲದ ಉದ್ದ-ಅಗಲ ಗೊತ್ತಾಗಿದೆ. ಅವರು ಬಂಧನಕ್ಕೆ ಒಳಗಾದಾಗಿನಿಂದಲೂ ಜಾಮೀನು ಪಡೆಯುವ ಪ್ರಯತ್ನದಲ್ಲಿ ಇದ್ದರು. ಆದರೆ, ಒಂದು ವರ್ಷಗಳ ಕಾಲ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ.

ರನ್ಯಾ ರಾವ್ ಅವರನ್ನು ಬಂಧಿಸಿದ್ದು ಡಿಆರ್​ಐ ಅಧಿಕಾರಿಗಳು. ರನ್ಯಾ ಹಾಗೂ ಅವರ ಸಹಚರರ ವಿರುದ್ಧ ಕಠಿಣವಾದ ‘ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ’ ಕಾಫೆಪೊಸಾ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಕಠಿಣವಾದ ಕಾಯ್ದೆ ಆಗಿದೆ. ಈ ಕಾಯ್ದೆಯ ಅಡಿ ದೂರು ದಾಖಲಾದರೆ ಜಾಮೀನು ನೀಡಲಾಗುವುದಿಲ್ಲ. ಒಂದೊಮ್ಮೆ ಆರೋಪಿಗಳಿಗೆ ಬೇರೆ ಪ್ರಕರಣಗಳಲ್ಲಿ ಜಾಮೀನು ದೊರೆತರೂ ಸಹ ಅವರ ಬಿಡುಗಡೆ ಆಗುವುದಿಲ್ಲ.

The post ನಟಿ ರನ್ಯಾ ರಾವ್​ಗೆ ಒಂದು ವರ್ಷ ಜೈಲೇ ಗತಿ ಜಾಮೀನಿನ​ ಮಾತೇ ಇಲ್ಲ! appeared first on Good News 24x7.

]]>