JAMBU SAVARI Archives - Good News 24x7 https://www.goodnews24x7.com/tag/jambu-savari/ Kannada Fri, 04 Sep 2026 10:31:07 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg JAMBU SAVARI Archives - Good News 24x7 https://www.goodnews24x7.com/tag/jambu-savari/ 32 32 ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು https://www.goodnews24x7.com/government-to-honour-fans-demand-abhimanyu-to-be-made-into-a-flag-elephant/ Fri, 04 Sep 2026 10:31:07 +0000 https://www.goodnews24x7.com/?p=9963 ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ…

The post ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು appeared first on Good News 24x7.

]]>

ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ ಘೋಷಿಸಲಾಗಿದ್ದು, ದಸರಾ ಮೆರವಣಿಗೆಯಲ್ಲಿ ಅಭಿಮನ್ಯು ಭಾಗವಹಿಸುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತ್ತು. ದಿಗ್ಗಜ ಆನೆ ಅರ್ಜುನನಿಗೆ ನೀಡಿದಂತೆ ಅಭಿಮನ್ಯುವಿಗೂ ಗೌರವಪೂರ್ಣ ವಿದಾಯ ನೀಡಬೇಕು ಹಾಗೂ ಕೊನೆಯ ಬಾರಿಗೆ ನಿಶಾನೆ ಆನೆಯಾಗಿ ಕೊಂಡೊಯ್ಯಬೇಕು ಎಂದು ಸಾರ್ವಜನಿಕರು ಮತ್ತು ವನ್ಯಜೀವಿ ಪ್ರಿಯರು ವ್ಯಾಪಕ ಒತ್ತಡ ತಂದಿದ್ದರು. ಜನರ ಈ ಭಾವನಾತ್ಮಕ ಬೇಡಿಕೆಗೆ ಸ್ಪಂದಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, 2026ರ ದಸರಾ ಮಹೋತ್ಸವದಲ್ಲಿ ಅಭಿಮನ್ಯುಗೆ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ದಸರಾ ಪರಂಪರೆಯಲ್ಲಿ ತನ್ನ ಶಿಸ್ತು ಹಾಗೂ ಧೈರ್ಯದಿಂದ ನಾಡಿನ ಜನರ ಪ್ರೀತಿ ಗಳಿಸಿರುವ ಅಭಿಮನ್ಯು, ಸಚಿವರ ಈ ಹೊಸ ಆದೇಶದಿಂದ ಮತ್ತೊಮ್ಮೆ ಗಜಪಡೆಯ ಮುಂಚೂಣಿಯಲ್ಲಿ ಕಂಗೊಳಿಸುವುದು ಖಚಿತವಾಗಿದ್ದು, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿ

The post ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು appeared first on Good News 24x7.

]]>