Job Archives - Good News 24x7 https://www.goodnews24x7.com/tag/job/ Kannada Thu, 04 Sep 2025 06:14:48 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Job Archives - Good News 24x7 https://www.goodnews24x7.com/tag/job/ 32 32 ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೆಷ್ಟು ? https://www.goodnews24x7.com/how-many-government-posts-are-vacant-in-the-state-2/ Thu, 04 Sep 2025 06:14:48 +0000 https://www.goodnews24x7.com/?p=7334 ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ. ಇಂದು ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ…

The post ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೆಷ್ಟು ? appeared first on Good News 24x7.

]]>

ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ.

ಇಂದು ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಖಾಲಿ ಇರೋ 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲೇಬೇಕಾದ ಒತ್ತಡದಲ್ಲಿದೆ.

ಸದ್ಯ ಸರ್ಕಾರ 5.88 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ 96,844 ಜನರು ಹೊರಗುತ್ತಿಗೆ ಪಡೆದಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೇಳಿದೆ. ಅದ್ರಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆಯೇ 15,824 ಹೊರಗುತ್ತಿಗೆ ಪಡೆದ ಉದ್ಯೋಗಿಗಳನ್ನು ಹೊಂದಿದೆ. ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಮಂದಿ ಹೊರಗುತ್ತಿಗೆ ನೌಕರರು ಇದ್ದಾರೆ.

9 ತಿಂಗಳು ಸರ್ಕಾರ ನೇಮಕವೇ ಮಾಡಿಲ್ಲ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಆಗೋವರೆಗೂ ಯಾವುದೇ ನೇಮಕಾತಿ ಬೇಡ ಎಂದು ಸರ್ಕಾರ ಈ ಹಿಂದೆ ಆದೇಶಿಸಿತ್ತು. ಹಾಗಾಗಿ ನವೆಂಬರ್ 2024 ರಿಂದ ಆಗಸ್ಟ್ 2025ರ ನಡುವೆ 9 ತಿಂಗಳ ಕಾಲ ಸರ್ಕಾರ ಯಾವುದೇ ಹೊಸ ನೇಮಕಾತಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಒಳಮೀಸಲಾತಿ ಜಾರಿ ಮಾಡಿದ್ದು, ಸರ್ಕಾರ ನೇಮಕಾತಿಗೆ ಮುಂದಾಗಿದೆ. ಇದು ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್​ನ್ಯೂಸ್​ ಆಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು 15,376 ಮಂದಿ ಮತ್ತು ಆರೋಗ್ಯ ಇಲಾಖೆ 11,424 ಹೊರಗುತ್ತಿಗೆ ನೌಕರರನ್ನು ಹೊಂದಿದೆ. ಹೊರಗುತ್ತಿಗೆ ನೌಕರರ ವೇತನಕ್ಕಾಗಿ ಸರ್ಕಾರ ಈ ವರ್ಷ 2,273 ಕೋಟಿ ಮೀಸಲಿಟ್ಟಿದೆ. ಒಟ್ಟಾರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ವೇತನ ಬಿಲ್ 85,860 ಕೋಟಿ ರೂ. ತಲುಪಲಿದೆ. ಇದು ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೇಗಾದ್ರೂ ಈ ವರ್ಷದಲ್ಲೇ 96,844 ಹೊರಗುತ್ತಿಗೆ ಉದ್ಯೋಗಿಗಳ ಜಾಗದಲ್ಲಿ ಪರ್ಮನೆಂಟ್​​ ಎಂಪ್ಲಾಯ್​ಗಳ ನೇಮಕಾತಿ ಮಾಡಲು ಸರ್ಕಾರ ನಿರ್ಧರಿಸಿದೆ.

2023ರ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. 2023 ಮತ್ತು 2024ರಲ್ಲಿ ಕೆಪಿಎಸ್‌ಸಿ ಮೂಲಕ 1,961 ಖಾಲಿ ಹುದ್ದೆ ಭರ್ತಿ ಮಾಡಿತ್ತು. ಹಾಗೆಯೇ 709 ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು 4,880 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಅದಾದ ನಂತರ ಇದುವರೆಗೂ ಯಾವುದೇ ನೇಮಕಾತಿ ಆಗಿಲ್ಲ.

ಈಗ ಸಿದ್ದರಾಮಯ್ಯ ಸರ್ಕಾರ ನೇಮಕಾತಿ ಸ್ಥಗಿತ ಆದೇಶವನ್ನು ತೆಗೆದುಹಾಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ನೇಮಕಾತಿ ಪ್ರಾರಂಭಿಸಲಿದೆ. ಈ ವರ್ಷ ಕನಿಷ್ಠ 50% ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

The post ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೆಷ್ಟು ? appeared first on Good News 24x7.

]]>
ಉದ್ಯೋಗಕಾಂಕ್ಷಿಗಳಿಗೆ ದೊಡ್ಮನೆಯ ರಾಘಣ್ಣ ಬೆಂಬಲ.. ಹೊಸ ನೇಮಕಾತಿಗಾಗಿ ಸರ್ಕಾರಕ್ಕೆ ಒತ್ತಾಯ. https://www.goodnews24x7.com/dodmane-raghanna-supports-job-seekers-urges-government-for-new-recruitment/ Thu, 07 Aug 2025 06:38:48 +0000 https://www.goodnews24x7.com/?p=5491 ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್​ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು. ಬೆಂಗಳೂರು: ಕೆಲ ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಶೀಘ್ರವೇ ಹೊಸ ನೇಮಕಾತಿ…

The post ಉದ್ಯೋಗಕಾಂಕ್ಷಿಗಳಿಗೆ ದೊಡ್ಮನೆಯ ರಾಘಣ್ಣ ಬೆಂಬಲ.. ಹೊಸ ನೇಮಕಾತಿಗಾಗಿ ಸರ್ಕಾರಕ್ಕೆ ಒತ್ತಾಯ. appeared first on Good News 24x7.

]]>

ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್​ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು.

ಬೆಂಗಳೂರು: ಕೆಲ ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಶೀಘ್ರವೇ ಹೊಸ ನೇಮಕಾತಿ ಆರಂಭಿಸಬೇಕು ಎಂದು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಆಗ್ರಹಿಸಿದ್ದಾರೆ.

ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್​ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು. ಸುಮಾರು ವರ್ಷಗಳಿಂದ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಹಾಗಾಗಿ, ಶೀಘ್ರದಲ್ಲೇ ನೇಮಕಾತಿಗಳನ್ನ ಆರಂಭಿಸಿ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದ್ದಾರೆ.

ಹೊಸ ನೇಮಕಾತಿಗೆ ಸಂಬಂಧಿಸಿದಂತೆ ಉದ್ಯೋಗಕಾಂಕ್ಷಿಗಳು ಆಗಸ್ಟ್ 11 ರಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ಹಿರಿಯ ನಟ ರಾಘಣ್ಣ ಅವರು ಬೆಂಬಲ ಸೂಚಿಸಲಿದ್ದಾರೆ. ಉದ್ಯೋಗಕಾಂಕ್ಷಿಗಳಿಗೆ ಸಪೋರ್ಟ್ ಮಾಡಲಿದ್ದಾರೆ. ಅಭ್ಯರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದ್ದು ಮುಂದೆ ಏನು ಮಾಡೋದು ಅಂತ ಯೋಜನೆಯಲ್ಲಿದ್ದಾರೆ. ಅಕಾಡೆಮಿಗಳು ಮುಚ್ಚಲಾಗುತ್ತಿದೆ. ಜನಗಳು ವಾಪಸ್ ಊರುಗಳಿಗೆ ಹೋಗಲು ಆಗದೇ ಬೆಂಗಳೂರಲ್ಲೇ ಇದ್ದಾರೆ. ಸರ್ಕಾರ ಆದಷ್ಟೂ ಬೇಗ ಹೊಸ ನೇಮಕಾತಿಗಳನ್ನ ಆರಂಭಿಸಬೇಕು ಅಂತ ಒತ್ತಾಯಿಸಿದ್ದಾರೆ.

The post ಉದ್ಯೋಗಕಾಂಕ್ಷಿಗಳಿಗೆ ದೊಡ್ಮನೆಯ ರಾಘಣ್ಣ ಬೆಂಬಲ.. ಹೊಸ ನೇಮಕಾತಿಗಾಗಿ ಸರ್ಕಾರಕ್ಕೆ ಒತ್ತಾಯ. appeared first on Good News 24x7.

]]>