Journalists Archives - Good News 24x7 https://www.goodnews24x7.com/tag/journalists/ Kannada Wed, 13 Aug 2025 08:22:11 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Journalists Archives - Good News 24x7 https://www.goodnews24x7.com/tag/journalists/ 32 32 “ಟೀ-ಶರ್ಟ್ ಮೇಲೆ ನನ್ನ ಫೋಟೋ ಯಾಕೆ? ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿಯ ಕಿಡಿ!” https://www.goodnews24x7.com/%e1%b9%adi-sar%e1%b9%ad-mele-nanna-pho%e1%b9%ado-yake-priya%e1%b9%85ka-gandhi-viruddha-mi%e1%b9%87%e1%b9%ada-deviya-ki%e1%b8%8di-sivan-biharada-matadarara-pa%e1%b9%ad%e1%b9%adiya-pari/ Wed, 13 Aug 2025 07:56:03 +0000 https://www.goodnews24x7.com/?p=6014 ಸಿವಾನ್:‌ ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆಯಲ್ಲಿ, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಹಾರದ ಮತದಾರರ ಪಟ್ಟಿಯಲ್ಲಿ 124 ವರ್ಷದ ಮಹಿಳೆ ಎಂದು ನಮೂದಾಗಿರುವ ಮಿಂಟಾ ದೇವಿ ಎಂಬ ಮಹಿಳೆಯ ಫೋಟೋ ಇರುವ…

The post “ಟೀ-ಶರ್ಟ್ ಮೇಲೆ ನನ್ನ ಫೋಟೋ ಯಾಕೆ? ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿಯ ಕಿಡಿ!” appeared first on Good News 24x7.

]]>

ಸಿವಾನ್:‌ ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆಯಲ್ಲಿ, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಹಾರದ ಮತದಾರರ ಪಟ್ಟಿಯಲ್ಲಿ 124 ವರ್ಷದ ಮಹಿಳೆ ಎಂದು ನಮೂದಾಗಿರುವ ಮಿಂಟಾ ದೇವಿ ಎಂಬ ಮಹಿಳೆಯ ಫೋಟೋ ಇರುವ ಟೀ-ಶರ್ಟ್‌ ಧರಿಸಿದ್ದರು.

ಇದೀಗ ಮಿಂಟಾ ದೇವಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನನ್ನ ಫೋಟೋ ಇರುವ ಟೀ-ಶರ್ಟ್‌ನ್ನು ಧರಿಸಲು ನಿಮಗೆ ಅಧಿಕಾರ ನೀಡಿದವರು ಯಾರು?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸಿವಾನ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಿಂಟಾ ದೇವಿ, “ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನನ್ನ ಫೋಟೋ ಇರುವ ಟೀ-ಶರ್ಟ್‌ ಧರಿಸಿ ಪ್ರತಿಭಟನೆ ಮಾಡಿರುವುದು ಅಕ್ಷಮ್ಯ ಅಪರಾಧ” ಎಂದು ಗುಡುಗಿದ್ದಾರೆ.

“ಮತದಾರರ ಪಟ್ಟಿಯಲ್ಲಿ ನನ್ನ ವಯಸ್ಸು 124 ವರ್ಷ ಎಂದು ನಮೂದಾಗಿರುವ ಬಗ್ಗೆ ನನಗೆ 2-4 ದಿನಗಳ ಹಿಂದೆ ತಿಳಿಯಿತು. ಮತದಾರರ ಪಟ್ಟಿಯಲ್ಲಿ ಏನೋ ವ್ಯತ್ಯಾಸ ಆಗಿದೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಆಡಳಿತದಿಂದ ಇದುವರೆಗೂ ಯಾವ ಕರೆಯೂ ಬಂದಿಲ್ಲ. ಆದರೆ ಈ ವಿಷಯವನ್ನು ತಮ್ಮ ರಾಜಕೀಯಕ್ಕಾಗಿ ಪ್ರತಿಪಕ್ಷದವರು ಬಳಸಿಕೊಳ್ಳುತ್ತಿರುವುದನ್ನು ನಾನು ವಿರೋಧಿಸುತ್ತೇನೆ” ಎಂದು ಮಿಂಟಾ ದೇವಿ ಗುಡುಗಿದ್ದಾರೆ.

ಮುಂದುವರೆದು, “ಕಾಂಗ್ರೆಸ್‌ ನಾಯಕರು ನನ್ನ ವಯಸ್ಸಿನ ಬಗ್ಗೆ ಏಕಿಷ್ಟು ತಲೆ ಕೆಡಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ವಿವರಗಳನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹವಾಗಿದೆ. ಆದರೆ ಕಾಂಗ್ರೆಸ್‌ ನಾಯಕರು ನನ್ನ ಅನುಮತಿ ಇಲ್ಲದೇ ನನ್ನ ಫೊಟೋವನ್ನು ಟೀ-ಶರ್ಟ್‌ ಮೇಲೆ ಅಚ್ಚು ಹಾಕಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗೆ ಮಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಮಿಂಟಾ ದೇವಿ ಖಾರವಾಗಿ ಪ್ರಶ್ನಿಸಿದ್ದಾರೆ. ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಇದೀಗ ದೇಶಾದ್ಯಂತ ಗಮನ ಸೆಳೆಯುತ್ತಿದೆ.

“ನನ್ನ ಹೆಸರನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುವುದು ನನಗೆ ಇಷ್ಟವಿಲ್ಲ. ನನಗೂ ವಿಪಕ್ಷ ನಾಯಕರಿಗೂ ಯಾವ ಸಂಬಂಧವೂ ಇಲ್ಲ. ಪ್ರಿಯಾಂಕಾ ಗಾಂಧಿ ಆಗಲಿ ಇತರ ಕಾಂಗ್ರೆಸ್‌ ನಾಯಕರಾಗಲಿ ನನಗೆ ಗೊತ್ತಿಲ್ಲ. ಹಾಗಿದ್ದ ಮೇಲೆ ಅವರು ನನ್ನ ಫೋಟೋ ಇರುವ ಟೀ-ಶರ್ಟ್‌ ಧರಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ” ಎಂದು ಮಿಂಟಾ ದೇವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧವೂ ಆಕ್ರೋಶ:
ಇನ್ನು ಮತದಾರರ ಪಟ್ಟಿಯಲ್ಲಿ ತಮ್ಮ ವಯಸ್ಸನ್ನು 124 ವರ್ಷ ಎಂದು ನಮೂದಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಿಂಟಾ ದೇವಿ, ” ಸರ್ಕಾರದ ದಾಖಲೆಗಳ ಪ್ರಕಾರ ನನ್ನ ವಯಸ್ಸು 124 ವರ್ಷ ಎಂದಾದರೆ ಸರ್ಕಾರವೇಕೆ ನನಗೆ ವೃದ್ಧಾಪ್ಯ ವೇತನ ನೀಡುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ನನ್ನ ಆಧಾರ್ ಕಾರ್ಡ್‌ನಲ್ಲಿ 15-07-1990 ಅನ್ನು ನನ್ನ ಜನ್ಮ ದಿನಾಂಕವಾಗಿ ಉಲ್ಲೇಖಿಸಲಾಗಿದೆ. ಅದರಂತೆ ನನಗೀಗ 35 ವರ್ಷ. ಆದರೆ ನನಗೆ 124 ವರ್ಷ ಆಗಿದೆ ಎಂದು ಹೇಳುವ ಮೂಲಕ ತಪ್ಪು ಮಾಹಿತಿ ನೀಡಲಾಗಿದೆ” ಎಂದು ಮಿಂಟಾ ದೇವಿ ತೀವ್ರ ಅಸಮಧಾನ ಹೊರಹಾಕಿದ್ದಾರೆ.

The post “ಟೀ-ಶರ್ಟ್ ಮೇಲೆ ನನ್ನ ಫೋಟೋ ಯಾಕೆ? ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿಯ ಕಿಡಿ!” appeared first on Good News 24x7.

]]>
ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕಿದ ವಕೀಲ ಅರುಣ್ ಕುಮಾರ್. https://www.goodnews24x7.com/advocate-arun-kumar-directly-challenges-minister-mahadevappa-to-debate-if-he-makes-a-statement-against-the-constitution/ Fri, 20 Jun 2025 12:52:19 +0000 https://www.goodnews24x7.com/?p=4548 ಮೈಸೂರು : ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಚೇಲಾಗಳ ಮೂಲಕ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕುತ್ತೇವೆ. ನಾವು ನಿಮ್ಮ ಮೇಲೆ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ…

The post ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕಿದ ವಕೀಲ ಅರುಣ್ ಕುಮಾರ್. appeared first on Good News 24x7.

]]>

ಮೈಸೂರು : ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಚೇಲಾಗಳ ಮೂಲಕ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕುತ್ತೇವೆ. ನಾವು ನಿಮ್ಮ ಮೇಲೆ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಎಂದು ವಕೀಲ ಅರುಣ್ ಕುಮಾರ್ ಸವಾಲು ಹಾಕಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆ ಮತ್ತು ಒಳ ಮೀಸಲಾತಿ ಹೋರಾಟ ಸಮಿತಿಯಿಂದ ವಕೀಲ ಅರುಣ್ ಕುಮಾರ್, ಭಾಸ್ಕರ್ ಪ್ರಸಾದ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುದ್ದಿಗೋಷ್ಠಿ ಮಾತನಾಡಿದ ವಕೀಲ ಅರುಣ್ ಕುಮಾರ್, ಒಳ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಬಂದು ಒಂದು ವರ್ಷ ಆಗಿದೆ. ಇತರೆ ರಾಜ್ಯಗಳು ಬೇಗ ಡಾಟಾ ಕಲೆಕ್ಟ್ ಮಾಡಿವೆ.ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮಾದಿಗರ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಸಮುದಾಯದ ಮತ ಬ್ಯಾಂಕ್ ಪಡೆಯಲು ಪಿತೂರಿ ಮಾಡುತ್ತಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಡೋಂಗಿ ರಾಜಕಾರಣ ಅನುಸರಿಸುತ್ತಿದೆ. ಒಳ ಮೀಸಲಾತಿ ಕೊಡುವ ವೇಳೆ ಸಮೀಕ್ಷೆ ಅವಶ್ಯಕತೆ ಇಲ್ಲ. ಸರ್ಕಾರ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಡುವ ನಿರ್ಧಾರ ಮಾಡಿಲ್ಲ. ಒಳ ಮೀಸಲಾತಿ ಕೊಡುವ ಮುನ್ನ ಸರ್ಕಾರಿ ಹುದ್ದೆ ಭರ್ತಿ ಮಾಡುವ ಹುನ್ನಾರ ಕಾಂಗ್ರೆಸ್ ನದ್ದು ಎಂದು ಕಿಡಿಕಾರಿದರು.

ಮಹದೇವಪ್ಪ ಏನು ದೊಡ್ಡ ವ್ಯಕ್ತಿ ಅಲ್ಲ. ನಮ್ಮ ಮೇಲೆ ಇನ್ನು ನೂರು ಕೇಸ್ ಹಾಕಲಿ. ಇಂತಹ ಎಷ್ಟೇ ಕೇಸ್ ಗಳನ್ನ ಹಾಕಿದರೂ ನಾವು ಹೆದರಲ್ಲ. ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗ ಮಹದೇವಪ್ಪ ತೀರ್ಥ ತೆಗೆದುಕೊಳ್ಳದೆ ಬಂದಿರಿ. ನಮ್ಮ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗಿದೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ನಿಮ್ಮ ಮೇಲೂ ಕೇಸ್ ಹಾಕುತ್ತೇವೆ. ಗುಂಪು ಕಟ್ಟಿ ಎತ್ತಿ ಕಟ್ಟುವ ಕೆಲಸ ಮಾಡ್ತಿರೋದು ಮಹದೇವಪ್ಪ. ಮಹದೇವಪ್ಪನವರ ಮೇಲೆ ಹಾಕಿರುವ ಕೇಸ್ ಸ್ಟೇಟಸ್ ಬಗ್ಗೆ ಪೊಲೀಸ್ ಕಮಿಷನರ್ ನವರು ಮಾಹಿತಿ ನೀಡಬೇಕು ಎಂದು ವಕೀಲ ಅರುಣ್ ಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯ ಭಾಸ್ಕರ್ ಪ್ರಸಾದ್, ಒಳ ಮೀಸಲಾತಿ ಹಕ್ಕಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಹೆದರಿರುವ ಸರ್ಕಾರ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಎಂಎಲ್ ಸಿ ತಿಮ್ಮಯ್ಯ ಒಬ್ಬ ಪೇಮೆಂಟ್ ಗಿರಾಕಿ. ಇಂತಹವರು ನಮ್ಮ ಸಮುದಾಯದ ಕುಲಕಂಟಕರು ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್ ನವರು ಕಾನೂನಿನ ಪ್ರಕಾರ ಕೆಲಸ ಮಾಡಿ. ಕಾಂಗ್ರೆಸ್ ಪೊಲೀಸ್ ನವರ ರೀತಿ ಕೆಲಸ ಮಾಡಬೇಡಿ. ಮಹದೇವಪ್ಪ, ತಿಮ್ಮಯ್ಯ ದೂರು ಕೊಟ್ರೆ ಕೇಸ್ ಹಾಕುತ್ತೀರಿ. ನಾವು ದೂರು ಕೊಟ್ರೆ ಪ್ರಕರಣ ದಾಖಲು ಮಾಡಲ್ಲ. ಹೆಚ್ ಸಿ ಮಹದೇವಪ್ಪ, ತಿಮ್ಮಯ್ಯ ನೀವು ಕಾಂಗ್ರೆಸ್ ನ ಮಕ್ಕಳಾದ್ರೆ ನಮ್ಮ ಹೋರಾಟ ತಡೆಯುವ ಕೆಲಸ ಮಾಡಿ. ಮುಂದಿನ ಚುನಾವಣೆಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

The post ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕಿದ ವಕೀಲ ಅರುಣ್ ಕುಮಾರ್. appeared first on Good News 24x7.

]]>
ಮಹಿಳೆಗೆ ಬೆದರಿಕೆಯೊಡ್ಡಿದ : ಒಬ್ಬ ಪೊಲೀಸ್ ಕಾನ್‌ಸ್ಟೇಬಲ್, ಇಬ್ಬರು ಮೈಸೂರು ಮೂಲದ ಪತ್ರಕರ್ತರು ಸೇರಿ ಮೂವರ ಬಂಧನ. https://www.goodnews24x7.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%97%e0%b3%86-%e0%b2%ac%e0%b3%86%e0%b2%a6%e0%b2%b0%e0%b2%bf%e0%b2%95%e0%b3%86%e0%b2%af%e0%b3%8a%e0%b2%a1%e0%b3%8d%e0%b2%a1%e0%b2%bf%e0%b2%a6/ Sat, 11 Jan 2025 09:31:12 +0000 https://www.goodnews24x7.com/?p=1680 ಮೈಸೂರು :- ಮಹಿಳೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಆರೋಪ ಹೊರಸಿ ಆಕೆಗೆ ಬೆದರಿಕೆಯೊಡ್ಡಿ ಚಿನ್ನದ ಓಲೆ ಕಸಿದುಕೊಂಡ ಆರೋಪದ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಾಗೂ ಇಬ್ಬರು ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಎಚ್.ಹನುಮಂತರಾಜ್, ಪತ್ರಕರ್ತರಾದ…

The post ಮಹಿಳೆಗೆ ಬೆದರಿಕೆಯೊಡ್ಡಿದ : ಒಬ್ಬ ಪೊಲೀಸ್ ಕಾನ್‌ಸ್ಟೇಬಲ್, ಇಬ್ಬರು ಮೈಸೂರು ಮೂಲದ ಪತ್ರಕರ್ತರು ಸೇರಿ ಮೂವರ ಬಂಧನ. appeared first on Good News 24x7.

]]>

ಮೈಸೂರು :- ಮಹಿಳೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಆರೋಪ ಹೊರಸಿ ಆಕೆಗೆ ಬೆದರಿಕೆಯೊಡ್ಡಿ ಚಿನ್ನದ ಓಲೆ ಕಸಿದುಕೊಂಡ ಆರೋಪದ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಾಗೂ ಇಬ್ಬರು ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಎಚ್.ಹನುಮಂತರಾಜ್, ಪತ್ರಕರ್ತರಾದ ರವಿಚಂದ್ರ ಹಂಚ್ಯಾ ಹಾಗೂ ಮಂಜುನಾಥ್ ಬಂಧಿತರು. ಮತ್ತೊಬ್ಬ ಪತ್ರಕರ್ತ ಸೂರ್ಯವರ್ಧನ್, ಯೋಗೇಶ್ ಹಾಗೂ ದೊರೆಸ್ವಾಮಿ ತಲೆಮರೆಸಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮೂವರ ಬಂಧನಕ್ಕೆ ಹೆಬ್ಬಾಳ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಮಾಧ್ಯಮದ ಹೆಸರೇಳಿಕೊಂಡ ಈ ಆರೋಪಿಗಳು ಡಿ.೨೮ ರಂದು ಸಂಜೆ ನಗರದ ಹೆಬ್ಬಾಳಿನ ಮಹಿಳೆಯ ಮನೆಗೆ ತೆರಳಿ, ನೀವು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಬೆದರಿಸಿ, ನಮ್ಮೊಂದಿಗೆ ಪೊಲೀಸರೂ ಬಂದಿದ್ದಾರೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂಬುದಾಗಿ ಭಯ ಹುಟ್ಟಿಸಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಾನು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದರೂ ಒಪ್ಪದ ಅವರು, ಈ ವಿಚಾರವನ್ನು ಎಲ್ಲಿಯೂ ಹೇಳದಿರಲು ೧ ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಒಡ್ಡಿದರು. ನನ್ನ ಬಳಿ ಅಷ್ಟು ಹಣವಿಲ್ಲವೆಂದಾಗ, ಆ ಮಹಿಳೆಯ ಕಿವಿಯ ಚಿನ್ನದ ಓಲೆಯನ್ನು ಬಲವಂತದಿಂದ ಬಿಚ್ಚಿಸಿ ಪಡೆದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಹಣವನ್ನು ಆದಷ್ಟು ಬೇಗ ನೀಡುವಂತೆ ತಿಳಿಸಿ ಅವರು ಅಲ್ಲಿಂದ ತೆರಳಿದ್ದರು. ಘಟನೆಯ ಬಳಿಕ ದೂರು ನೀಡಿದ್ದು, ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಕಿವಿಯೋಲೆ ನೀಡಿರುವ ವಿಚಾರವನ್ನು ಮನೆಯಲ್ಲಿ ತಿಳಿಸಿರಲಿಲ್ಲ. ಅವರನ್ನು ಕರೆದು ಎಚ್ಚರಿಕೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೆ. ನಂತರ ಆರೋಪಿಗಳು ಓಲೆ ವಾಪಸ್ ನೀಡಿ, ೧ ಲಕ್ಷ ರೂ. ನೀಡುವಂತೆ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವವರ ಪತ್ತೆಗೆ ಮುಂದಾಗಿದ್ದಾರೆ.

The post ಮಹಿಳೆಗೆ ಬೆದರಿಕೆಯೊಡ್ಡಿದ : ಒಬ್ಬ ಪೊಲೀಸ್ ಕಾನ್‌ಸ್ಟೇಬಲ್, ಇಬ್ಬರು ಮೈಸೂರು ಮೂಲದ ಪತ್ರಕರ್ತರು ಸೇರಿ ಮೂವರ ಬಂಧನ. appeared first on Good News 24x7.

]]>
ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ https://www.goodnews24x7.com/patrakartarada-ravi-ko%e1%b9%adi-hagu-ke-sivakumar-avarige-maijipasandinda-abhinandane-karna%e1%b9%adaka-madhyama-aka%e1%b8%8demiya-sadasyaragi-nemakago%e1%b9%87%e1%b8%8diruva-andolana-patrikeya-samp/ Thu, 26 Sep 2024 13:09:34 +0000 https://www.goodnews24x7.com/?p=661 ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಆಂದೋಲನ ಪತ್ರಿಕೆಯ ಸಂಪಾದಕಾದ ಶ್ರೀ ರವಿ ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ…

The post ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ appeared first on Good News 24x7.

]]>

ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ

ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಆಂದೋಲನ ಪತ್ರಿಕೆಯ ಸಂಪಾದಕಾದ ಶ್ರೀ ರವಿ ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಯ ಅಧ್ಯಯನ ಸಮಿತಿಗೆ ಸದಸ್ಯರಾಗಿ ನೇಮಕ.

ಬಹುದಿನಗಳ ಬೇಡಿಕೆಯಾಗಿದ್ದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮತ್ತು ಆಡಳಿತ ಮಂಡಳಿ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

The post ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ appeared first on Good News 24x7.

]]>