jump Archives - Good News 24x7 https://www.goodnews24x7.com/tag/jump/ Kannada Sat, 30 Aug 2025 07:54:25 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg jump Archives - Good News 24x7 https://www.goodnews24x7.com/tag/jump/ 32 32 ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. https://www.goodnews24x7.com/current-tower-climber-man-forced-to-marry-wifes-sister/ Sat, 30 Aug 2025 07:54:00 +0000 https://www.goodnews24x7.com/?p=7009 ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ. ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ…

The post ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. appeared first on Good News 24x7.

]]>

ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ.

ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ ಮೊದಲ ಪತ್ನಿಯನ್ನು ಮದುವೆಯಾಗಿದ್ದ. ಆದರೆ ಮದುವೆಯಾಗಿ ಒಂದು ವರ್ಷವಲ್ಲದೆ ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದಳು. ಪತ್ನಿಯ ನಿಧನದ ನಂತರ, ಅವನು ಆಕೆಯ ತಂಗಿಯ ಜೊತೆ ಮದುವೆಯಾಗಿದನು. ಈ ದಂಪತಿಗೆ ಈಗ ಎರಡು ವರ್ಷ.

ಆದರೆ ಇತ್ತೀಚೆಗೆ ರಾಜ್ ತನ್ನ ಮುದ್ದಾದ ಪತ್ನಿಯ ಮತ್ತೊಬ್ಬ ತಂಗಿಯನ್ನು ಮದುವೆಯಾಗಬೇಕು ಎಂದು ಹೇಳಿದ್ದು, ಮನೆಯವರ ವಿರೋಧ ಎದುರಾಗಿದೆ. ಈ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ ಗುರುವಾರ ಬೆಳಿಗ್ಗೆ ಒಂದು ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಧಮಕಿ ನೀಡಿದ್ದಾನೆ.

‘ನಾದಿನಿಯನ್ನು ಮದುವೆ ಮಾಡಿಸುತ್ತೀರಾ ಇಲ್ಲವೇ ನಾನು ಜಂಪ್ ಮಾಡ್ತೀನಿ’ ಎಂದು ಬೆದರಿಕೆ:

ಬಾಲಿವುಡ್ ಶೋಲೆ ಸಿನಿಮಾ ಶೈಲಿಯಲ್ಲಿ ರಾಜ್ ಟವರ್ ಮೇಲಿಂದಲೇ ಬೊಬ್ಬೆ ಹಾಕುತ್ತಾ “ನಾದಿನಿಯನ್ನು ನನ್ನಿಗೆ ಮದುವೆ ಮಾಡಿಸಿ” ಎಂದು ಕೂಗಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸತತ 7 ಗಂಟೆಗಳ ಸಾಹಸ ನಂತರ ಅವನನ್ನು ಟವರ್‌ನಿಂದ ಕೆಳಗೆ ಇಳಿಸಲು ಯಶಸ್ವಿಯಾದರು. ಕೊನೆಗೆ ನಾದಿನಿಯೊಂದಿಗೆ ಮದುವೆ ಮಾಡಿಸುತ್ತೇವೆ ಎಂಬ ಭರವಸೆ ನೀಡಿದ ನಂತರ ಮಾತ್ರ ಆತ ಕೆಳಗಿಳಿದ.

ಪ್ರೀತಿಯ ನಾಟಕವೇ ಪಕ್ಕಾ ಸಾಂಡಲ್‌ವುಡ್ ಸೀನ್!

ಟವರ್ ಮೇಲಿನ ಈ ಹೈಡ್ರಾಮಾ ಸ್ಥಳೀಯ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಜ್ ಸಕ್ಸೇನಾ ತನ್ನ ಮೇಲಿಂದಲೇ ನಾದಿನಿಯೂ ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿದ್ದಾನೆ.

The post ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. appeared first on Good News 24x7.

]]>