JusticeRajeshBindal Archives - Good News 24x7 https://www.goodnews24x7.com/tag/justicerajeshbindal/ Kannada Sat, 09 Aug 2025 12:13:34 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg JusticeRajeshBindal Archives - Good News 24x7 https://www.goodnews24x7.com/tag/justicerajeshbindal/ 32 32 ಮಾಧ್ಯಮ ಪ್ರಸಾರ ನಿರ್ಭಂಧಕ್ಕೆ ಸುಪ್ರೀಂ ಹಿಂದೇಟು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ https://www.goodnews24x7.com/supreme-court-refuses-to-block-media-broadcasting-supreme-court-orders-fresh-determination-of-harshendra-kumars-petition/ Sat, 09 Aug 2025 12:13:34 +0000 https://www.goodnews24x7.com/?p=5662 ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಹರ್ಷೇಂದ್ರ ಕುಮಾರ್ ಅವರು ಸುಪ್ರೀಂಗೆ ಸಲ್ಲಿಸಿದ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. “ದಿನೇ ದಿನೇ ಸುದ್ದಿ…

The post ಮಾಧ್ಯಮ ಪ್ರಸಾರ ನಿರ್ಭಂಧಕ್ಕೆ ಸುಪ್ರೀಂ ಹಿಂದೇಟು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ appeared first on Good News 24x7.

]]>

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಹರ್ಷೇಂದ್ರ ಕುಮಾರ್ ಅವರು ಸುಪ್ರೀಂಗೆ ಸಲ್ಲಿಸಿದ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

“ದಿನೇ ದಿನೇ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಿಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ” ಎಂದು ಧರ್ಮಸ್ಥಳ ದೇವಾಲಯದ ಆಡಳಿತ ಮಂಡಳಿ ಪರ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದರು.
ವಿಚಾರ ಆಲಿಸಿದ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿಂದ ಪೀಠವು “ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ, ಗ್ಯಾಗ್ ಆದೇಶ ಹೊರಡಿಸಲಾಗುತ್ತದೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನು ಹತ್ತಿಕುತ್ತವೆ. ನಾವು ತಡೆಯಾಗ್ನೇ ನೀಡಿದರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ” ಎಂದು ಹೇಳಿತು

ವಿಚಾರಣೆ ವೇಳೆ ಮಾತನಾಡಿದ ಹೊರಟಗಿಯವರು “ಮಾಧ್ಯಮ ನಿರ್ಬಂಧದ ತೆರವು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಒಬ್ಬ ವ್ಯಕ್ತಿ ಅಷ್ಟೇ, ಅವರಿಗಷ್ಟೇ ಪರಿಹಾರ ಸಿಗಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಉಳಿದ 299 ಮಂದಿಗೂ ಅಂದರೆ ಮಾಧ್ಯಮ ಸಂಸ್ಥೆಗಳಿಗೂ ಸಹ ಲಾಭ ದೊರೆತಿದ್ದು ಹೇಗೆ? ಹೀಗಾಗಿ ಪೀಠವು ಏನಾದರೂ ಒಂದು ರಕ್ಷಣೆಯನ್ನು ನೀಡಬೇಕು” ಎಂದು ಮಧ್ಯಂತರ ಪರಿಹಾರಕ್ಕಾಗಿ ಮನವಿ ಮಾಡಿದರು .

ವಾದ ಆಲಿಸಿದ ಸುಪ್ರೀಂ ಕೋರ್ಟ್ ಅಂತಿಮವಾಗಿ ಮಧ್ಯಂತರ ನಿರ್ಬಂಧಕ ಆದೇಶವನ್ನು ಕೋರಿರುವ ದೇವಾಲಯ ಆಡಳಿತದ ಅರ್ಜಿಯನ್ನು ಹೊಸದಾಗಿ ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು

The post ಮಾಧ್ಯಮ ಪ್ರಸಾರ ನಿರ್ಭಂಧಕ್ಕೆ ಸುಪ್ರೀಂ ಹಿಂದೇಟು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ appeared first on Good News 24x7.

]]>