Kamanabillu Archives - Good News 24x7 https://www.goodnews24x7.com/tag/kamanabillu/ Kannada Mon, 23 Jun 2025 10:39:55 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kamanabillu Archives - Good News 24x7 https://www.goodnews24x7.com/tag/kamanabillu/ 32 32 ವಿಶ್ವ ಯೋಗ ದಿನದಂದು ಮತ್ತೆ ವೈರಲ್ ಆದ ಅಣ್ಣಾವ್ರ ವಿಡಿಯೋಗಳು…. https://www.goodnews24x7.com/%e0%b2%b5%e0%b2%bf%e0%b2%b6%e0%b3%8d%e0%b2%b5-%e0%b2%af%e0%b3%8b%e0%b2%97-%e0%b2%a6%e0%b2%bf%e0%b2%a8%e0%b2%a6%e0%b2%82%e0%b2%a6%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%b5/ Mon, 23 Jun 2025 10:39:55 +0000 https://www.goodnews24x7.com/?p=4627 ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ ಸಲುವಾಗಿ ಯೋಗ ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರು ಮಾಡದೇ ಇರುವ ಪಾತ್ರಗಳೇ ಇಲ್ಲ.…

The post ವಿಶ್ವ ಯೋಗ ದಿನದಂದು ಮತ್ತೆ ವೈರಲ್ ಆದ ಅಣ್ಣಾವ್ರ ವಿಡಿಯೋಗಳು…. appeared first on Good News 24x7.

]]>

ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ ಸಲುವಾಗಿ ಯೋಗ ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರು ಮಾಡದೇ ಇರುವ ಪಾತ್ರಗಳೇ ಇಲ್ಲ. ದೇವರಿಂದ ದಾನವರ ತನಕ, ರಾಜನಿಂದ ರೈತನ ತನಕ ಎಲ್ಲ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡರು. ಅಂಥ ಪಾತ್ರಗಳಿಗೆ ಬಹಳ ಸುಲಭವಾಗಿ ಒಪ್ಪಿಕೊಳ್ಳಲು ಅವರಿಗೆ ಯೋಗ ಕೂಡ ಸಹಕಾರಿ ಆಯಿತು. ಯಾಕೆಂದರೆ, ಅಣ್ಣಾವ್ರು ಕೂಡ ಅತ್ಯುತ್ತಮ ಯೋಗಪಟು ಆಗಿದ್ದರು. ಹಠಯೋಗದಲ್ಲಿ ಅವರು ಪರಿಣತಿ ಹೊಂದಿದ್ದರು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅದನ್ನು ತೋರಿಸಲಾಗಿದೆ. ಅದೇ ರೀತಿ ಡಾ. ರಾಜ್ಕುಮಾರ್ ಅವರ ಹಲವು ವಿಡಿಯೋಗಳು ಮತ್ತೆ ವೈರಲ್ ಆಗಿವೆ.

ಡಾ. ರಾಜ್ಕುಮಾರ್ ಅವರು ಬಾಲ್ಯದಿಂದಲೇ ಯೋಗ ಕಲಿತವರಲ್ಲ. 50 ವರ್ಷ ವಯಸ್ಸಿನ ಬಳಿಕ ಅವರು ಯೋಗಾಭ್ಯಾಸ ಮಾಡಲು ಆರಂಭಿಸಿದರು. ಅದರಿಂದ ಅವರಿಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಕ್ಕಿತು. ಇದರ ಬಗ್ಗೆ ಜನಸಾಮಾನ್ಯರಿಗೂ ಹೆಚ್ಚಾಗಿ ತಿಳಿಯಲಿ ಎಂಬ ಕಾರಣದಿಂದ ಸಿನಿಮಾದಲ್ಲೂ ಯೋಗಾಭ್ಯಾಸದ ದೃಶ್ಯಗಳನ್ನು ತೋರಿಸಿದರು.ಆಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ. ಜನರನ್ನು ತಲುಪಲು ಸಿನಿಮಾವೇ ದೊಡ್ಡ ಮಾಧ್ಯಮ ಆಗಿತ್ತು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರು ಯೋಗಾಭ್ಯಾಸ ಮಾಡುವುದು ನೋಡಿ ಸ್ಫೂರ್ತಿ ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಆ ಬಳಿಕವೇ ಯೋಗ ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡ ಅಭಿಮಾನಿಗಳ ಸಂಖ್ಯೆ ಅಪಾರ.

 

The post ವಿಶ್ವ ಯೋಗ ದಿನದಂದು ಮತ್ತೆ ವೈರಲ್ ಆದ ಅಣ್ಣಾವ್ರ ವಿಡಿಯೋಗಳು…. appeared first on Good News 24x7.

]]>