Kannada cinema Archives - Good News 24x7 https://www.goodnews24x7.com/tag/kannada-cinema/ Kannada Sun, 29 Mar 2026 09:35:13 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kannada cinema Archives - Good News 24x7 https://www.goodnews24x7.com/tag/kannada-cinema/ 32 32 ಹೊಸ ದಾಖಲೆಯೊಂದಿಗೆ ಉಳಿದವರು ಕಂಡಂತೆ ಸಿನಿಮಾಗೆ 12 ವರ್ಷ; ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ https://www.goodnews24x7.com/%e0%b2%b9%e0%b3%8a%e0%b2%b8-%e0%b2%a6%e0%b2%be%e0%b2%96%e0%b2%b2%e0%b3%86%e0%b2%af%e0%b3%8a%e0%b2%82%e0%b2%a6%e0%b2%bf%e0%b2%97%e0%b3%86-%e0%b2%89%e0%b2%b3%e0%b2%bf%e0%b2%a6%e0%b2%b5%e0%b2%b0%e0%b3%81/ Sun, 29 Mar 2026 09:35:13 +0000 https://www.goodnews24x7.com/?p=9045 Ulidavaru Kandanathe: ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿಯ ನಿರ್ದೇಶನ ಪ್ರತಿಭೆಯನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಅದು. ‘ಉಳಿದವರು ಕಂಡಂತೆ’ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ 12 ವರ್ಷ. ರಕ್ಷಿತ್ ಶೆಟ್ಟಿ, ‘ಉಳಿದವರು ಕಂಡಂತೆ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು,…

The post ಹೊಸ ದಾಖಲೆಯೊಂದಿಗೆ ಉಳಿದವರು ಕಂಡಂತೆ ಸಿನಿಮಾಗೆ 12 ವರ್ಷ; ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ appeared first on Good News 24x7.

]]>

Ulidavaru Kandanathe: ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿಯ ನಿರ್ದೇಶನ ಪ್ರತಿಭೆಯನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಅದು. ‘ಉಳಿದವರು ಕಂಡಂತೆ’ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ 12 ವರ್ಷ. ರಕ್ಷಿತ್ ಶೆಟ್ಟಿ, ‘ಉಳಿದವರು ಕಂಡಂತೆ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಸಿನಿಮಾವನ್ನು ನೆನಪು ಮಾಡಿಕೊಳ್ಳಲು ಏನೇನೋ ಹೊಸ ಕಾರಣಗಳು ಸಿಗುತ್ತಲೇ ಇರುತ್ತವೆ ಎಂದಿದ್ದಾರೆ. ಜೊತೆಗೆ ಒಂದು ಲಿಂಕ್ ಸಹ ಹಂಚಿಕೊಂಡಿದ್ದಾರೆ.

‘ಉಳಿದವರು ಕಂಡಂತೆ’ ರಕ್ಷಿತ್ ಶೆಟ್ಟಿಯ ಮೊದಲ ನಿರ್ದೇಶನದ ಸಿನಿಮಾ. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿಯ ನಿರ್ದೇಶನ ಪ್ರತಿಭೆಯನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಅದು. ‘ಉಳಿದವರು ಕಂಡಂತೆ’ ಬಿಡುಗಡೆ ಆಗಿ ಬರೋಬ್ಬರಿ 12 ವರ್ಷ.
‘ಉಳಿದವರು ಕಂಡಂತೆ’ ಸಿನಿಮಾ 2014 ರ ಮಾರ್ಚ್ 28ಕ್ಕೆ ಬಿಡುಗಡೆ ಆಗಿತ್ತು. ಲೈವ್ ಸೌಂಡ್,ಭಿನ್ನ ರೀತಿಯ ಸ್ಟೋರಿ ಟೆಲ್ಲಿಂಗ್ ಸೇರಿದಂತೆ ಹಲವು ಪ್ರಯೋಗಗಳನ್ನು ರಕ್ಷಿತ್ ಶೆಟ್ಟಿ ಮಾಡಿದ್ದರು. ಬಹುತೇಕ ವಿಮರ್ಶಕರು ಸಿನಿಮಾ ಚೆನ್ನಾಗಿಲ್ಲ ಎಂದೇ ಬರೆದರು. ಪ್ರೇಕ್ಷಕರಿಗೂ ಸಹ ಸಿನಿಮಾ ಆರಂಭದಲ್ಲಿ ಅರ್ಥವಾಗಲಿಲ್ಲ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಎನಿಸಿಕೊಂಡಿತು. ಆದರೆ ಸಿನಿಮಾಕ್ಕೆ ಒಂದು ಕಲ್ಟ್ ಅಭಿಮಾನಿ ವರ್ಗ ಹುಟ್ಟಿಕೊಳ್ತು, ಸಿನಿಮಾವನ್ನು ಪೈರಸಿ ಡೌನ್​​ಲೋಡ್ ಮಾಡಿ ಹೆಚ್ಚು ಮಂದಿ ನೋಡಿದರು. ಹಾಗೆ ನೋಡುತ್ತಾ-ನೋಡುತ್ತಾ ಸಿನಿಮಾ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇದೀಗ 21ನೇ ಶತಮಾನದ ಈ ವರೆಗಿನ ಅತ್ಯುತ್ತಮ 25 ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಜನಪ್ರಿಯ ಸಿನಿಮಾ ಮ್ಯಾಗಜೈನ್ ‘ದಿ ಹಾಲಿವುಡ್ ರಿಪೋರ್ಟರ್’ 2000ರ ಶತಕದಲ್ಲಿ ಅಥವಾ 21ನೇ ಶತಮಾನದ ಈ ವರೆಗಿನ ಅತ್ಯುತ್ತಮ 25 ಭಾರತೀಯ ಸಿನಿಮಾಗಳ ಪಟ್ಟಿ ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ‘ಉಳಿದವರು ಕಂಡಂತೆ’ ಸಿನಿಮಾ ಸ್ಥಾನ ಪಡೆದುಕೊಂಡಿದೆ. ‘ಲಗಾನ್’, ‘ಗ್ಯಾಂಗ್ಸ್ ಆಫ್ ವಸೇಪುರ್’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳಿರುವ ಪಟ್ಟಿಯಲ್ಲಿ ‘ಉಳಿದವರು ಕಂಡಂತೆ’ ಸಹ ಸ್ಥಾನ ಪಡೆದುಕೊಂಡಿರುವುದು ಮಾತ್ರವೇ ಅಲ್ಲದೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.

ಈ ಪಟ್ಟಿಯಲ್ಲಿ ಮಲಯಾಳಂನ ‘ಕುಂಬಳಂಗಿ ನೈಟ್ಸ್’, ‘ಮಹೇಶಿಂಟೆ ಪ್ರತಿಕಾರಂ’, ‘ಅಂಗಮಲೈ ಡೈರೀಸ್’, ‘ದೃಶ್ಯಂ’, ‘ದಿ ಗ್ರೇಟ್ ಇಂಡಿಯನ್ ಕಿಚನ್’ ಇನ್ನೂ ಹಲವು ಸಿನಿಮಾಗಳಿವೆ. ಹಿಂದಿಯ ‘ಲಗಾನ್’, ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಚಕ್ ದೇ ಇಂಡಿಯಾ’, ‘ದಿಲ್ ಚಾಹ್ತಾ ಹೈ’, ‘ಓಂಕಾರ’ ಇನ್ನೂ ಹಲವು ಸಿನಿಮಾಗಳಿವೆ. ತಮಿಳಿನ ‘ಅಲೈಪಾಯುತೆ’, ‘ಅನ್ಬೆ ಶಿವಂ’, ‘ಆಡುಕುಳಂ’, ‘ಪರಿಯೇರುಂ ಪೆರುಮಾಲ್’ ಇನ್ನೂ ಹಲವು ಸಿನಿಮಾಗಳಿವೆ. ಮರಾಠಿಯ ‘ಕೋರ್ಟ್’, ‘ಸೈರಾಟ್’ ಇನ್ನೂ ಕೆಲ ಸಿನಿಮಾಗಳಿವೆ. ತೆಲುಗಿನ ‘ಈಗ’ ಇದೆ. ಕನ್ನಡದ ‘ಉಳಿದವರು ಕಂಡಂತೆ’ ಸಿನಿಮಾ ಇದೆ. ‘ಉಳಿದವರು ಕಂಡಂತೆ’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ರಕ್ಷಿತ್ ಶೆಟ್ಟಿ ಅವರು ‘ಉಳಿದವರು ಕಂಡಂತೆ’ ಸಿನಿಮಾದ ಸ್ಪಿನ್ ಆಫ್ ಆಗಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಿಸಿದ್ದು, ಸಿನಿಮಾ ಘೋಷಿಸಿಯೇ ವರ್ಷಗಳು ಕಳೆದಿವೆ. ಇತ್ತೀಚೆಗಷ್ಟೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರೀಕರಣ ಶುರು ಮಾಡಿರುವುದಾಗಿ ಹೇಳಿದ್ದರು. ಮುಂದೇನಾಗುತ್ತದೆ ನೋಡಬೇಕಿದೆ.

The post ಹೊಸ ದಾಖಲೆಯೊಂದಿಗೆ ಉಳಿದವರು ಕಂಡಂತೆ ಸಿನಿಮಾಗೆ 12 ವರ್ಷ; ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ appeared first on Good News 24x7.

]]>
ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ https://www.goodnews24x7.com/famous-comedian-bank-janardhan-is-no-more/ Mon, 14 Apr 2025 04:09:31 +0000 https://www.goodnews24x7.com/?p=3216 ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆ ಎರಡರಲ್ಲೂ ತಮ್ಮ ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯತೆ ಪಡೆದಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್‌ ಕೊನೆಯುಸಿರೆಳೆದಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರಿಗೆ…

The post ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ appeared first on Good News 24x7.

]]>

ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆ ಎರಡರಲ್ಲೂ ತಮ್ಮ ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯತೆ ಪಡೆದಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್‌ ಕೊನೆಯುಸಿರೆಳೆದಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಬ್ಯಾಂಕ್ ಜನಾರ್ಧನ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ಬಾರಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆಗಾಗಿ ಅವರನ್ನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಬ್ಯಾಂಕ್ ಜನಾರ್ಧನ್ ಸಾವನ್ನಪ್ಪಿದ್ದಾರೆ.

ನಟ ಬ್ಯಾಂಕ್ ಜನಾರ್ಧನ್ ಮೂಲತಃ ಚಿತ್ರದುರ್ಗದವರು. 1948ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದವರು ಬ್ಯಾಂಕ್ ಜನಾರ್ಧನ್. ಶಾಲಾ ಶಿಕ್ಷಣವನ್ನ ಹುಟ್ಟೂರಲ್ಲೇ ಪಡೆದ ಜನಾರ್ಧನ್‌ ಆನಂತರ ಬ್ಯಾಂಕ್‌ನಲ್ಲಿ ಕೆಲಸ ಆರಂಭಿಸಿದರು. ಶಾಲಾ – ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲೇ ಜನಾರ್ಧನ್ ಅವರಿಗೆ ನಾಟಕದ ಗೀಳು ಅಂಟಿತ್ತು. ಹಲವು ನಾಟಕಗಳಲ್ಲಿ ಅಭಿನಯಿಸಿದ ನಂತರ ಬ್ಯಾಂಕ್ ಜನಾರ್ಧನ್‌ 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

The post ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ appeared first on Good News 24x7.

]]>
ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ದಾಸ. https://www.goodnews24x7.com/%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%bf%e0%b2%97%e0%b2%b3%e0%b2%bf%e0%b2%97%e0%b3%86-%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf-%e0%b2%97%e0%b3%81%e0%b2%a1/ Thu, 06 Mar 2025 10:46:45 +0000 https://www.goodnews24x7.com/?p=2634 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ… ಸದ್ಯ ದರ್ಶನ್ ಅವರು ಕಹಿ ಘಟನೆಗಳನ್ನ ಮರೆತು, ಮತ್ತೆ ಸಿನಿಮಾ ಶೂಟಿಂಗ್ ಕಡೆ ಗಮನ ಹರಿಸಲಿದ್ದಾರೆ. ಹೊರ ಬಂದ ಮೇಲೆ ತಮ್ಮ ಅಭಿಮಾನಿಗಳನ್ನ ಹಾಡಿ ಹೊಗಳಿದ್ದ ದಾಸ, ಇದೀಗ…

The post ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ದಾಸ. appeared first on Good News 24x7.

]]>

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ… ಸದ್ಯ ದರ್ಶನ್ ಅವರು ಕಹಿ ಘಟನೆಗಳನ್ನ ಮರೆತು, ಮತ್ತೆ ಸಿನಿಮಾ ಶೂಟಿಂಗ್ ಕಡೆ ಗಮನ ಹರಿಸಲಿದ್ದಾರೆ. ಹೊರ ಬಂದ ಮೇಲೆ ತಮ್ಮ ಅಭಿಮಾನಿಗಳನ್ನ ಹಾಡಿ ಹೊಗಳಿದ್ದ ದಾಸ, ಇದೀಗ ಹೊಸ ಸಿನಿಮಾಕ್ಕಾಗಿ ಕ್ಯಾಮೆರಾ ಮುಂದೆ ತಮ್ಮ ಅದ್ಭುತ ನಟನೆ ಮುಂದುವರೆಸಲಿದ್ದಾರೆ. ಇದೇ ವಾರ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ..

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್ ಸಿದ್ಧತೆ ಬಲೂ ಜೋರಾಗಿ ನಡೆಯುತ್ತಿದೆ. ದರ್ಶನ್ ಕೂಡ ಶೂಟಿಂಗ್ನಲ್ಲಿ ಭಾಗಿಯಾಗೋದು ಪಕ್ಕಾ ಆಗಿದೆ. ಈ ವಾರದಲ್ಲೇ ಚಿತ್ರೀಕರಣ ನಡೆಯಲಿದ್ದು , ಚಿತ್ರೀಕರಣದಲ್ಲಿ ಇತರೆ ಕಲಾವಿದರು ತಮ್ಮ ಪಾತ್ರ ನಿಭಾಯಿಸಲಿದ್ದಾರೆ.
ಮಾರ್ಚ್ 8 ರಂದು ಡೆವಿಲ್ ಶೂಟಿಂಗ್ ಬೆಂಗಳೂರಲ್ಲಿ ಆರಂಭವಾಗಲಿದ್ದು , ಬಳಿಕ ಚಿತ್ರತಂಡ ಮೈಸೂರಿಗೆ ಸ್ಥಳಾಂತರಗೊಂಡು ಶೂಟಿಂಗ್ ನಡೆಸಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೆಲವೊಂದಿಷ್ಟು ಆಗಿದೆ. ಉಳಿದಿದ್ದನ್ನು ಈಗ ಮಾಡಲಾಗುತ್ತಿದೆ. ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾದ ಶೂಟಿಂಗ್ ಮುಂದುವರೆಯಲಿದೆ.
ಜೂನ್ 11 ರಂದು ಮೈಸೂರಲ್ಲಿ ಡೆವಿಲ್ ಚಿತ್ರೀಕರಣ ನಡೆಯುತ್ತಿರುವಾಗಲೇ ದರ್ಶನ್ ಅವರನ್ನು ಪೊಲೀಸರು ಪ್ರಕರಣವೊಂದರಲ್ಲಿ ಅರೆಸ್ಟ್ ಮಾಡಿದ್ದರು. ಅಂದು ನಿಂತು ಹೋಗಿದ್ದ ಚಿತ್ರೀಕರಣವನ್ನು 10 ತಿಂಗಳ ಬಳಿಕ ಮತ್ತೆ ಮಾಡಲಾಗುತ್ತಿದೆ.
ಈ ಸುದ್ದಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಹೇಳ ತೀರದ ಸಂತಸವನ್ನು ಉಂಟುಮಾಡಿದೆ.

 

The post ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ದಾಸ. appeared first on Good News 24x7.

]]>
ತಿರುಪತಿಯ ಪ್ರಸಾದದಲ್ಲಿ ಹುಳುಗಳು ಪತ್ತೆ https://www.goodnews24x7.com/%e0%b2%a4%e0%b2%bf%e0%b2%b0%e0%b3%81%e0%b2%aa%e0%b2%a4%e0%b2%bf%e0%b2%af-%e0%b2%aa%e0%b3%8d%e0%b2%b0%e0%b2%b8%e0%b2%be%e0%b2%a6%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%81%e0%b2%b3/ Sun, 06 Oct 2024 06:22:08 +0000 https://www.goodnews24x7.com/?p=747 ತಿರುಪತಿಯ ಪ್ರಸಾದದಲ್ಲಿ ಹುಳುಗಳು ಸಿಕ್ಕಿವೆ ಎಂದು ಭಕ್ತರು ಆರೋಪಿಸಿದ್ದಾರೆ. ದೇವಾಲಯವನ್ನು ನೋಡಿಕೊಳ್ಳುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ಆರೋಪವನ್ನು ತಳ್ಳಿಹಾಕಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ. ಇದಕ್ಕೆ ಕಾರಣರಾದವರ…

The post ತಿರುಪತಿಯ ಪ್ರಸಾದದಲ್ಲಿ ಹುಳುಗಳು ಪತ್ತೆ appeared first on Good News 24x7.

]]>

ತಿರುಪತಿಯ ಪ್ರಸಾದದಲ್ಲಿ ಹುಳುಗಳು ಸಿಕ್ಕಿವೆ ಎಂದು ಭಕ್ತರು ಆರೋಪಿಸಿದ್ದಾರೆ. ದೇವಾಲಯವನ್ನು ನೋಡಿಕೊಳ್ಳುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ಆರೋಪವನ್ನು ತಳ್ಳಿಹಾಕಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆಂದು ಹೇಳಿದ್ದಾರೆ.

 

 

ಭಕ್ತರೊಬ್ಬರು ಮಾತನಾಡಿ, ನಾನು ವಾರಂಗಲ್​ನಿಂದ ತಿಮ್ಮಪ್ಪನ ದರ್ಶನಕ್ಕೆಂದು ತೆರಳಿದ್ದೆ, ಮೊಸರನ್ನ ಊಟ ಮಾಡುವ ಸಮಯದಲ್ಲಿ ಊಟದಲ್ಲಿ ಹುಳು ಸಿಕ್ಕಿತ್ತು. ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದೆ ಆದರೆ ಅವರ ಪ್ರತಿಕ್ರಿಯೆ ಆಘಾತಕಾರಿಯಾಗಿತ್ತು,ಇದು ಕೆಲವೊಮ್ಮೆ ಸಂಭವಿಸುತ್ತದೆ. ಸರ್ಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಉತ್ತರ ಕೊಟ್ಟಿದ್ದರು.

ವಿಷಯ ತಿಳಿದ ನಂತರ ದೇವಾಲಯದ ಸಿಬ್ಬಂದಿ ತಮ್ಮನ್ನು ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು ಎಂದು ಭಕ್ತ ಆರೋಪಿಸಿದ್ದಾರೆ. ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಾವು ಊಟ ಮಾಡುವಾಗ ಮಧ್ಯಾಹ್ನ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಚಂದು ಸೇರಿಸಲಾಗಿದೆ.

The post ತಿರುಪತಿಯ ಪ್ರಸಾದದಲ್ಲಿ ಹುಳುಗಳು ಪತ್ತೆ appeared first on Good News 24x7.

]]>
ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ https://www.goodnews24x7.com/%e0%b2%a6%e0%b2%b3%e0%b2%aa%e0%b2%a4%e0%b2%bf-%e0%b2%b5%e0%b2%bf%e0%b2%9c%e0%b2%af%e0%b3%8d-%e0%b2%95%e0%b3%8a%e0%b2%a8%e0%b3%87-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%95/ Wed, 02 Oct 2024 13:27:03 +0000 https://www.goodnews24x7.com/?p=710 ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್​’ ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.   ತಮಿಳು ಸೂಪರ್‌…

The post ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ appeared first on Good News 24x7.

]]>

ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್​’ ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

 

ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ನಟನ ಕೊನೆ ಚಿತ್ರ. ಅಲ್ಲದೇ, ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಹಿನ್ನೆಲೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರಕ್ಕೀಗ ಕರುನಾಡಿನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಎಂಟ್ರಿಯಾಗಿದೆ.

 

ಚಿತ್ರ ನಿರ್ಮಾಪಕರು ಇಂದು ತಮ್ಮ ತಂಡಕ್ಕೆ ಪೂಜಾ ಹೆಗ್ಡೆ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ”ಕೆವಿಎನ್ ಪ್ರೊಡಕ್ಷನ್ಸ್‌” ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡುವ ಮೂಲಕ ಕರಾವಳಿ ಬೆಡಗಿಯ ಎಂಟ್ರಿ ಘೋಷಿಸಿದ್ದಾರೆ.

 

The post ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ appeared first on Good News 24x7.

]]>
ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಸಮಿತಿ ಮಾಡಿ – ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ https://www.goodnews24x7.com/make-a-committee-in-kannada-film-industry-like-hema-committee-fire-organization-appealed-to-cm-siddaramaiah/ Thu, 05 Sep 2024 07:45:33 +0000 https://www.goodnews24x7.com/?p=520 ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಸಮಿತಿ ಮಾಡಿ – ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ರಚನೆಯಾದ ಹಾಗೇ ನಮ್ಮಲ್ಲೂ ಕನ್ನಡ ಚಲನ ಚಿತ್ರರಂಗದಲ್ಲೂ ಅಂತಹದೇ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು…

The post ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಸಮಿತಿ ಮಾಡಿ – ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ appeared first on Good News 24x7.

]]>

ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಸಮಿತಿ ಮಾಡಿ – ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ

ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ರಚನೆಯಾದ ಹಾಗೇ ನಮ್ಮಲ್ಲೂ ಕನ್ನಡ ಚಲನ ಚಿತ್ರರಂಗದಲ್ಲೂ ಅಂತಹದೇ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು ಕೇಳಿ ಬಂದಿದೆ. ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ನಟ ಚೇತನ್ ನೇತೃತ್ವದ ‘ಫೈರ್’ ಸಂಸ್ಥೆ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.

ಸದ್ಯದಲ್ಲೇ ಸಮಿತಿ ರಚನೆಯ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದು ಸಿಎಂ ‘ಫೈರ್’ ತಂಡಕ್ಕೆ ಭರವಸೆ ನೀಡಿದ್ದಾರೆ. ಸೆ.10ರ ಬಳಿಕ ಮತ್ತೊಮ್ಮೆ ಸಭೆ ಮಾಡೋಣ ಎಂದು `ಫೈರ್’ ತಂಡಕ್ಕೆ ತಿಳಿಸಿದ್ದಾರೆ. ಇನ್ನೂ ಸಿಎಂ ಜೊತೆಗಿನ ಸಭೆಯಲ್ಲಿ ನಟ ಚೇತನ್ ಜೊತೆ ನೀತು ಶೆಟ್ಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಭಾಗಿಯಾಗಿದ್ದರು.

The post ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲೂ ಸಮಿತಿ ಮಾಡಿ – ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ appeared first on Good News 24x7.

]]>