Kannadafilmindustry Archives - Good News 24x7 https://www.goodnews24x7.com/tag/kannadafilmindustry/ Kannada Sat, 07 Mar 2026 06:38:35 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kannadafilmindustry Archives - Good News 24x7 https://www.goodnews24x7.com/tag/kannadafilmindustry/ 32 32 ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ https://www.goodnews24x7.com/the-residence-of-a-kannada-film-personality-will-become-a-museum/ Sat, 07 Mar 2026 06:33:10 +0000 https://www.goodnews24x7.com/?p=8757 ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಮೈಸೂರು ಜಿಲ್ಲೆಯ ಕಣಗಾಲ್‌ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ…

The post ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ appeared first on Good News 24x7.

]]>

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಮೈಸೂರು ಜಿಲ್ಲೆಯ ಕಣಗಾಲ್‌ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು.

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರ ಮನೆಯೊಂದು ಮ್ಯೂಸಿಯಂ ರೂಪ ಪಡೆದುಕೊಳ್ಳುತ್ತಿರುವುದು ಇದೇ ಮೊದಲು. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್‌ ಗ್ರಾಮದಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ನಿವಾಸ ಇದೆ. ಪುಟ್ಟಣ್ಣ ಕಣಗಾಲ್‌ ಅಳಿಯ ಹಾಗೂ ಪತ್ರಕರ್ತ ಸುಂದರೇಶ್‌, ಪುಟ್ಟಣ್ಣ ಹೆಸರು ಉಳಿಸುವಂತಹ ಯಾವುದಾದರೂ ಯೋಜನೆ ರೂಪಿಸಿ ಎಂದು ಸರ್ಕಾರಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಜೊತೆಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ ಕೆ ವಿಶ್ವನಾಥ್‌ ನೇತೃತ್ವದಲ್ಲಿ ಸಂಘದ ಸದಸ್ಯರು ಕಣಗಾಲ್‌ ಗ್ರಾಮಕ್ಕೆ ತೆರಳಿ ಭೇಟಿ ಕೊಟ್ಟು ನಂತರ ಸ್ಮಾರಕ ರೂಪಿಸಲು ಮನವಿ ಪತ್ರ ಕೊಟ್ಟಿದ್ದರು.

ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದೆ.

ಬ್ಯಾನ್ ಆಗಿದ್ದ ಕಾದಂಬರಿಯನ್ನೇ ಸಿನಿಮಾ ಮಾಡಿದ್ದ ಪುಟ್ಟಣ್ಣ ಕಣಗಾಲ್; ನೀವೂ ನೋಡಿರಬಹುದು!
ಪುಟ್ಟಣ್ಣ ಕಣಗಾಲ್‌ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿಸುವ ರಾಜ್ಯ ಸರ್ಕಾರದ ಯೋಜನೆ ಸ್ವಾಗತಾರ್ಹ. ನಮ್ಮ ಸಂಘದಿಂದಲೂ ಮನವಿ ಮಾಡಿಕೊಂಡಿದ್ದೇವೆ. ಹಿರಿಯ ನಿರ್ದೇಶಕನನ್ನು ಗೌರವಿಸುವ ಈ ಯೋಜನೆ ಆದಷ್ಟು ಬೇಗ ಜಾರಿ ಆಗಲಿ.ಕಣಗಾಲ್‌ನಲ್ಲಿ ಪುಟ್ಟಣ್ಣ ಮನೆ ತುಂಬಾ ಶಿಥಿಲಗೊಂಡಿದೆ. ಅದನ್ನು ಯಾವ ರೀತಿ ಮ್ಯೂಸಿಯಂ ಮಾಡುತ್ತಾರೋ, ಯಾವ ರೀತಿ ನಿರ್ವಹಣೆ ಮಾಡುತ್ತಾರೋ ನೋಡಬೇಕು. ಆದರೆ, ಯೋಜನೆ ಒಳ್ಳೆಯದು.

The post ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ appeared first on Good News 24x7.

]]>
2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು? https://www.goodnews24x7.com/what-did-the-people-of-the-state-get-in-the-2026-budget/ Fri, 06 Mar 2026 11:47:36 +0000 https://www.goodnews24x7.com/?p=8725 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ಮಹತ್ವದ ಆಯವ್ಯಯ ಮಂಡಿಸುತ್ತಿದ್ದಾರೆ. ಇದು ಕೇವಲ ಬಜೆಟ್ ಮಾತ್ರವಲ್ಲ, ರಾಜ್ಯದ ಇತಿಹಾಸದಲ್ಲೇ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ.ಕರುನಾಡಿನ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಈಗ ಎಲ್ಲರ ಕಣ್ಣು…

The post 2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು? appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ಮಹತ್ವದ ಆಯವ್ಯಯ ಮಂಡಿಸುತ್ತಿದ್ದಾರೆ. ಇದು ಕೇವಲ ಬಜೆಟ್ ಮಾತ್ರವಲ್ಲ, ರಾಜ್ಯದ ಇತಿಹಾಸದಲ್ಲೇ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ.ಕರುನಾಡಿನ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಈಗ ಎಲ್ಲರ ಕಣ್ಣು ಇಂದು ಮಂಡನೆಯಾಗಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಮೇಲಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಹಾಗೂ ದೇಶದಲ್ಲಿ ಎರಡನೇ ಅತಿ ಹೆಚ್ಚು ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯ ತಮ್ಮ ಆಯ-ವ್ಯಯ ಲೆಕ್ಕ ಬಿಚ್ಚಿಟ್ಟಿದ್ದಾರೆ .

ರಾಜ್ಯದ ಕೆಲ ದೇವಸ್ಥಾನಗಳಿಗೂ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಕುಕ್ಕೆ ಶ್ರೀ ಸುಬ್ರಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ ಮಾಡಲಾಗಿದೆ. ಹೊರ ರಾಜ್ಯದ ಪುಣ್ಯ ಕ್ಷೇತ್ರಗಳಲ್ಲಿರುವ ಮುಜರಾಯಿ ಅಧೀನದ ಛತ್ರಗಳ ನವೀಕರಣ, ವಾರಣಾಸಿಯ ಛತ್ರ, ಮಂತ್ರಾಲಯ ಶ್ರೀ ರಾಘವೇಂದ್ರ ದೇವಸ್ಥಾನದ ಛತ್ರ, ಶ್ರೀಶೈಲಂ ಕ್ಷೇತ್ರದ ಛತ್ರ, ತುಳಜಾಪುರ ಕ್ಷೇತ್ರದ ಛತ್ರ ನವೀಕರಣಕ್ಕೆ ನಿರ್ಧಾರ ಮಾಡಿದ್ದಾರೆ. ಮುಜರಾಯಿ ವ್ಯಾಪ್ತಿಯ 259 ಕಲ್ಯಾಣಿಗಳನ್ನು ಪುಮಶ್ಚೇತನಕ್ಕೆ ಕ್ರಮ, ಕಾಶ್ಮೀರದ ಮಾತಾ ವೈಷ್ಣೋದೇವಿ ಯಾತ್ರಿಕರಿಗೆ 5 ಸಾವಿರ ಧನಸಹಾಯ, ಡಿಬಿಟಿ ಮೂಲಕ ಯಾತ್ರಿಕರಿಗೆ ಹಣ ಸಂದಾಯ ಮಾಡಲು ಒಪ್ಪಿಗೆ ನೀಡಲಾಗಿದೆ.

ಈ ವರ್ಷ 2026-27ನೇ ಸಾಲಿನ ರಾಜ್ಯ ಬಜೆಟ್​​ ಮಂಡನೆ ಮಾಡಲಾಗಿದೆ. ಈ ಬಾರಿ ಇಲಾಖೆಗಳಿಗೆ ರೆವಿನ್ಯೂ ಟಾರ್ಗೆಟ್ ನೀಡಲಾಗಿದೆ.

ಸಾರಿಗೆ ಇಲಾಖೆಗೆ: 15500 ಕೋಟಿ ಟಾರ್ಗೆಟ್
ನೊಂದಣಿ ಮುದ್ರಾಂಕ: 29000 ಕೋಟಿ ಟಾರ್ಗೆಟ್
ಅಬಕಾರಿ ಇಲಾಖೆಗೆ: 45000 ಕೋಟಿ ಟಾರ್ಗೆಟ್
ಗಣಿ ಇಲಾಖೆಗೆ: 11000 ಕೋಟಿ ಟಾರ್ಗೆಟ್
ವಾಣಿಜ್ಯ ಇಲಾಖೆಗೆ: 125000 ಕೋಟಿ ಟಾರ್ಗೆಟ್

 

ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಕಿರು ಕಾಣಿಕೆ ಕೊಟ್ಟ ರಾಜ್ಯ ಸರ್ಕಾರ!

ಈ ವರ್ಷದ ಬಜೆಟ್​​ನಲ್ಲಿ ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಕಿರು ಕಾಣಿಕೆ ಕೊಟ್ಟಿದೆ. ಫಿಲ್ಮಿ ಸಿಟಿ ಯಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಸಿದ್ದರಾಮಯ್ಯ ಚಿತ್ರರಂಗಕ್ಕೆ ಸಿನಿಮಿತ್ರನ ಕಾಣಿಕೆ ಕೊಟ್ಟಿದ್ದಾರೆ. ಚಿತ್ರರಂಗದ ನೆರವಿಗೆ “ಸಿನಿ ಮಿತ್ರ” ಡಿಜಿಟಲ್ ವ್ಯವಸ್ಥೆ ಜಾರಿಗೆ ಅಸ್ತು ಎನ್ನಲಾಗಿದೆ. ಉತ್ತಮ ಚಿತ್ರಗಳಿಗೆ ಸಬ್ಸಿಡಿಗಾಗಿ 20 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಆದರೆ ಮೈಸೂರಿನ ಫಿಲ್ಮಿ ಸಿಟಿ ಕೆಲಸ ಆರಂಭಿಸುವ ಬಗ್ಗೆ ಬಜೆಟ್ ನಲ್ಲಿ ಸುಳಿವು ಇಲ್ಲ, ಈ ಬಾರಿಯ ಬಜೆಟ್ ನಲ್ಲೂ ಜನತಾ ಟಾಕೀಸ್ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ.

ರಾಜ್ಯ ಬಜೆಟ್​​ನಲ್ಲಿ ಈ ಬಾರಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ?

ಈ ಬಾರಿಯ 2026-27 ನೇ ಸಾಲಿನ ಬಜೆಟ್​​ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಘೋಷಣೆ ಮಾಡಿದ್ದಾರೆ ನೋಡಿ.
ಪಶುಸಂಗೋಪನೆ – 4084 ಕೋಟಿ
ಕೃಷಿ ಮತ್ತು ತೋಟಗಾರಿಕೆ – 8373 ಕೋಟಿ
ಆಹಾರ, ನಾಗರೀಕ ಸರಬರಾಜು – 7942 ಕೋಟಿ
ಲೊಕೋಪಯೋಗಿ – 11424 ಕೋಟಿ
ಸಮಾಜ ಕಲ್ಯಾಣ ಇಲಾಖೆ- 18612 ಕೋಟಿ
ಕಂದಾಯ ಇಲಾಖೆ- 19845 ಕೋಟಿ
ಆರೋಗ್ಯ ಕುಟುಂಬ ಕಲ್ಯಾಣ – 17818 ಕೋಟಿ
ಶಿಕ್ಷಣ ಇಲಾಖೆ- 47224 ಕೋಟಿ
ಮಹಿಳಾ ಮಕ್ಕಳ ಕಲ್ಯಾಣ – 34929 ಕೋಟಿ
ಇಂಧನ ಇಲಾಖೆ- 29947 ಕೋಟಿ
ಗ್ರಾಮೀಣಾಭಿವೃದ್ಧಿ ಇಲಾಖೆ- 26559 ಕೋಟಿ
ನೀರಾವರಿ- 22436 ಕೋಟಿ
ನಗರಾಭಿವೃದ್ಧಿ,ವಸತಿ ಇಲಾಖೆ- 22203 ಕೋಟಿ

ಒಳಾಡಳಿತ ಬಂದರು- 23100 ಕೋಟಿ
ಇತರೆ ವೆಚ್ಚ- 172757 ಕೋಟಿ

ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯೂ ಹಣ ಮೀಸಲಿಟ್ಟ ಸರ್ಕಾರ

ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯೂ ಸರ್ಕಾರ ಹಣ ಮೀಸಲಿಟ್ಟಿದೆ. ಹಾಗಾದ್ರೆ ಯಾವೆಲ್ಲಾ ಯೋಜನೆ ಎಷ್ಟು ಅನುದಾನ ಮೀಸಲಿಟ್ಟಿದ್ದಾರೆ?
ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಹಣ ಮೀಸಲು
ಅನ್ನ ಭಾಗ್ಯ ಯೋಜನೆಗೆ 6,200 ಕೋಟಿ ಮೀಸಲು
ಗೃಹ ಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ ಮೀಸಲು
ಶಕ್ತಿ ಯೋಜನೆಗೆ 5,300 ಕೋಟಿ ಹಣ ಮೀಸಲು
ಯುವ ನಿಧಿಗೆ ಯಾವುದೇ ಅನುದಾನ ಮೀಸಲಿಡದ ಸರ್ಕಾರ

The post 2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು? appeared first on Good News 24x7.

]]>
ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 45 ವರ್ಷ; ನೆನಪಿನ ಪುಟ ತೆರೆದ ನವರಸ ನಾಯಕ ಜಗ್ಗೇಶ್ https://www.goodnews24x7.com/45-years-since-entering-the-film-industry-navarasa-nayaka-jaggesh-opens-a-page-of-memories/ Tue, 18 Nov 2025 06:55:34 +0000 https://www.goodnews24x7.com/?p=8194 ಯಾವುದೇ ಹಿನ್ನೆಲೆ ಇಲ್ಲದೇ ಬಂದ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದರು. ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿ ಇಂದಿಗೆ (ನವೆಂಬರ್ 17) 45 ವರ್ಷಗಳನ್ನು ಪೂರೈಸಿದ್ದಾರೆ. ಈ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಜರ್ನಿಯ ನೆನಪು ಮೆಲುಕು…

The post ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 45 ವರ್ಷ; ನೆನಪಿನ ಪುಟ ತೆರೆದ ನವರಸ ನಾಯಕ ಜಗ್ಗೇಶ್ appeared first on Good News 24x7.

]]>

ಯಾವುದೇ ಹಿನ್ನೆಲೆ ಇಲ್ಲದೇ ಬಂದ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದರು. ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿ ಇಂದಿಗೆ (ನವೆಂಬರ್ 17) 45 ವರ್ಷಗಳನ್ನು ಪೂರೈಸಿದ್ದಾರೆ. ಈ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಜರ್ನಿಯ ನೆನಪು ಮೆಲುಕು ಹಾಕಿದ್ದಾರೆ.

ಖ್ಯಾತ ನಟ ಜಗ್ಗೇಶ್ (Jaggesh) ಅವರು ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳ ಅನುಭವ ಹೊಂದಿದ್ದಾರೆ. ಅನೇಕ ಏಳು-ಬೀಳುಗಳನ್ನು ಅವರು ನೋಡಿದ್ದಾರೆ. ಇಂದಿಗೆ (ನವೆಂಬರ್ 17) ‘ನವರಸ ನಾಯಕ’ ಜಗ್ಗೇಶ್ ಅವರು ಚಿತ್ರರಂಗಕ್ಕೆ (Kannada Film Industry) ಕಾಲಿಟ್ಟು ಬರೋಬ್ಬರಿ 45 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಸ್ಟಾರ್ ನಟನಾಗಿ ಯಶಸ್ಸು ಕಂಡಿದ್ದಾರೆ. ಎಷ್ಟೇ ಸಾಧನೆ ಮಾಡಿದರೂ ಕೂಡ ಅವರು ತಮಗೆ ಅವಕಾಶ ಕೊಟ್ಟವರನ್ನು ಇಂದಿಗೂ ಮರೆತಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಅವರು ಎಲ್ಲವನ್ನೂ ನೆನಪು ಮಾಡಿಕೊಂಡಿದ್ದಾರೆ. ಅವರ ಪೋಸ್ಟ್ ಇಲ್ಲಿದೆ.‘1980 ನವಂಬರ್ 17ನೇ ತಾರೀಖು. ಆಗ ನನಗೆ 18 ವರ್ಷ ವಯಸ್ಸು. ನಾನು ಬಣ್ಣಹಚ್ಚಿ ನಟಿಸಿದ ಚಿತ್ರ ‘ಕನ್ನಡತಿ ಮಾನವತಿ’. ಸ್ಥಳ ಗುಬ್ಬಿ ಚನ್ನಬಸವೇಶ್ವರ ಆಲಯ. ಬಣ್ಣ ಹಚ್ಚಿದವರು ಅಂಬರೀಶ್ ಅವರ ಮೇಕಪ್ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಅವರ ಶಿಷ್ಯ ಕೃಷ್ಣ. ಪಾತ್ರ ಕೊಡಿಸಿದವ ನನ್ನ ಮಿತ್ರ ಶಂಭು’ ಎಂದು ಜಗ್ಗೇಶ್ ಅವರು ಆ ದಿನಗಳ ಪುಟ ತೆರೆದಿದ್ದಾರೆ.

‘ನನಗೆ ಮೀಸೆ ಬರೆದವರು ಹಾಸ್ಯನಟ ರನ್ನಾಕರ್. ಚಿತ್ರದ ನಾಯಕ ರಾಮಕೃಷ್ಣ. ನಾಯಕಿ ಪ್ರಮೀಳ ಜೋಯ್ಸ್. ನನ್ನ ಜೊತೆ ನಟಿಸಿದ ನಟಿ ಸಿಹಿಕಹಿ ಗೀತಾ ಅಕ್ಕ. ಚಿತ್ರ ಬಿಡುಗಡೆ ಆಗಲಿಲ್ಲ. ನನ್ನ ಅದೃಷ್ಟ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮಗ ಮುರಳಿ ಅವರ ಚಿತ್ರ ‘ಬಿಳಿ ಗುಲಾಬಿ’ ಸಿಗಲು ಕಾರಣವಾದರು ಪುಟ್ಟಣ್ಣ ಕಣಗಲ್ ಅವರ ಸಹಾಯಕ ನಿರ್ದೇಶಕ ದಿವಂಗತ ಅರಕಲಗೂಡು ನಂಜುಂಡ’ ಎಂದಿದ್ದಾರೆ ಜಗ್ಗೇಶ್. ‘ನಂತರ ಕೆ.ವಿ. ಜಯರಾಂ ಅವರ ಕೃಪೆಯಿಂದ ಅವರ ‘ಇಬ್ಬನಿ ಕರಗಿತು’ ಸಿನಿಮಾದಲ್ಲಿ ಮುಂದುವರಿದು, 1984ರಲ್ಲಿ ‘ಶ್ವೇತ ಗುಲಾಬಿ’ ಚಿತ್ರದ ಅವಕಾಶ ಸಿಕ್ಕು ನಂತರ ಪರಿಮಳ ನಾನು ಮದುವೆಯಾಗಿ ಸ್ಟೇಷನ್ ಸುಪ್ರೀಮ್ ಕೋರ್ಟು ಅವಾಂತರ ಮುಗಿಸಿ ನಂತರ ಹಿಂದೆ ನೋಡದೇ ರಾಯರ ಕೃಪೆಯಿಂದ ಅಂದಿನ ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ವಿವಿಧ ಪಾತ್ರ ಮಾಡುತ್ತ ಬೆಳೆದುನಿಂತೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

‘ಇಂದಿಗೆ ನನ್ನ ಸಿನಿಮಾ ಪ್ರಯಾಣಕ್ಕೆ 45 ವರ್ಷ ಆಯುಷ್ಯ. ನಡೆದು ಬಂದ ದಾರಿ ನೆನಪಿನ ಬುತ್ತಿ. ಮುಂದೆಯೂ ನಿಮ್ಮ ಪ್ರೀತಿ ನನ್ನ ಮೇಲಿರಲಿ ಹಾಗೂ ನನ್ನಂತೆ ಮುಂದೆ ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರ ಹರಸಿ ಬೆಳೆಸಿ. ಶುಭಸಂಜೆ’ ಎಂದು ಜಗ್ಗೇಶ್ ಅವರು ಪೋಸ್ಟ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಖ್ಯಾತಿ ಪಡೆದ ಅವರು ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ.

The post ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 45 ವರ್ಷ; ನೆನಪಿನ ಪುಟ ತೆರೆದ ನವರಸ ನಾಯಕ ಜಗ್ಗೇಶ್ appeared first on Good News 24x7.

]]>
ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ https://www.goodnews24x7.com/chikkanna-finally-says-goodbye-to-bachelor-life-comedy-star-chikkannas-marriage-is-fixed/ Mon, 01 Sep 2025 04:13:16 +0000 https://www.goodnews24x7.com/?p=7182 ಚಿಕ್ಕಣ್ಣ ಮದುವೆ: ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಣ್ಣ ಮದವೆ ಆಗುತ್ತಿರುವ ಯುವತಿ ಯಾರು? ಯಾವ ಊರು? ನಟಿಯಾ?…

The post ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ appeared first on Good News 24x7.

]]>

ಚಿಕ್ಕಣ್ಣ ಮದುವೆ: ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಣ್ಣ ಮದವೆ ಆಗುತ್ತಿರುವ ಯುವತಿ ಯಾರು? ಯಾವ ಊರು? ನಟಿಯಾ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ. ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಣ್ಣ ಇಷ್ಟ ವರ್ಷ ಬ್ಯಾಚುಲರ್ ಆಗಿದ್ದರು.

ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ವಿವಾಹವಾಗುತ್ತಿದ್ದಾರೆ. ಮನೆಯವರು ನೋಡಿರುವ ಸಂಬಂಧ ಇದು ಎನ್ನಲಾಗಿದೆ.
ಚಿಕ್ಕಣ್ಣ ಅವರ ಮದುವೆ ನಿಶ್ಚಯವನ್ನು ಸದ್ದಿಲ್ಲದೆ ಮುಗಿಸಿಕೊಂಡಿದ್ದಾರೆ. ಹೂ ಮುಡಿಸುವ ಶಾಸ್ತ್ರವನ್ನು ಮಾಡಿ ಆಗಿದೆ. ಮದುವೆಯ ದಿನಾಂಕವೂ ನಿಗದಿ ಆಗಿದೆಯಂತೆ ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಮಹದೇವಪುರ ಗ್ರಾಮದ ಯುವತಿ ಈಕೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆಚಿಕ್ಕಣ್ಣ ಟಾಕ್ ಶೋಗಳಲ್ಲಿ ಮದುವೆ ವಿಷಯ ಮಾತಾಡಿದಾಗೆಲ್ಲ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದರು. ಈಗ ಕೊನೆಗೆ ಗೃಹಸ್ಥರಾಗಲು ಸಜ್ಜಾಗಿದ್ದಾರೆ.

The post ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ appeared first on Good News 24x7.

]]>
ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ವಶಪಡಿಸಿಕೊಳ್ಳುವಂತೆ ಸರ್ಕಾರದಿಂದ ಪತ್ರ ? https://www.goodnews24x7.com/government-letter-to-seize-abhiman-studio-where-vishnus-tomb-was-located/ Fri, 29 Aug 2025 09:08:46 +0000 https://www.goodnews24x7.com/?p=6950 ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ…

The post ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ವಶಪಡಿಸಿಕೊಳ್ಳುವಂತೆ ಸರ್ಕಾರದಿಂದ ಪತ್ರ ? appeared first on Good News 24x7.

]]>

ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ.

ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ಸರ್ಕಾರಿ ಆದೇಶದ ಅನ್ವಯ ಏಪ್ರಿಲ್‌ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು.

ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.

The post ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ವಶಪಡಿಸಿಕೊಳ್ಳುವಂತೆ ಸರ್ಕಾರದಿಂದ ಪತ್ರ ? appeared first on Good News 24x7.

]]>
ವಿಚ್ಛೇದನಕ್ಕೆ ಮುಂದಾದ ಅಜಯ್ ರಾವ್ ದಂಪತಿ ! ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ ಪತ್ನಿ . https://www.goodnews24x7.com/ajay-rao-couple-set-for-divorce-wife-files-for-divorce/ Sat, 16 Aug 2025 09:13:54 +0000 https://www.goodnews24x7.com/?p=6204 ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಜಯ್ ರಾವ್ ಹಾಗೂ ಸ್ವಪ್ನ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಇಬ್ಬರೂ ಸಹ 2014 ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಮದುವೆಯಾದ 11…

The post ವಿಚ್ಛೇದನಕ್ಕೆ ಮುಂದಾದ ಅಜಯ್ ರಾವ್ ದಂಪತಿ ! ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ ಪತ್ನಿ . appeared first on Good News 24x7.

]]>

ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಜಯ್ ರಾವ್ ಹಾಗೂ ಸ್ವಪ್ನ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಇಬ್ಬರೂ ಸಹ 2014 ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಮದುವೆಯಾದ 11 ವರ್ಷದ ಬಳಿಕ ಇದೀಗ ಈ ದಂಪತಿ ಬೇರಾಗುತ್ತಿದ್ದಾರೆ.ಇಬ್ಬರ ವಿಚ್ಛೇದನಕ್ಕೆ ನಿಖರ ಕಾರಣಗಳು ಇನ್ನಷ್ಟೆ ತಿಳಿಯಬೇಕಿದೆ. ಸದ್ಯ ನಟ ಅಜಯ್‌ ರಾವ್‌ ಪತ್ನಿ ಸಪ್ನಾ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮದುವೆಗೂ ಮುಂಚೆಯೇ ಅಜಯ್‌ ರಾವ್‌ ಡಿವೋರ್ಸ್‌ ಬಗ್ಗೆ ಭವಿಷ್ಯ!
ನಟ ಅಜಯ್‌ ರಾವ್‌, ಸ್ವಪ್ನ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಈ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಈ ಜೋಡಿ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದರು , ಆದರೆ ಮದುವೆಗೆ ಮುಂಚೆಯೇ ಇವರಿಬ್ಬರ ಡಿವೋರ್ಸ್‌ ಭವಿಷ್ಯ ನುಡಿದಿದ್ರಂತೆ.

ಈಗೆಲ್ಲಾ ಡಿವೋರ್ಸ್‌ ಟ್ರೆಂಡ್‌ ಹೆಚ್ಚಾಗಿದೆ. ಸಣ್ಣ-ಪುಟ್ಟ ಕಾರಣಗಳಿಗೆ ಮದುವೆ ಆದ ಕೆಲ ದಿನಗಳಲ್ಲೇ ಡಿವೋರ್ಸ್‌ ತೆಗೆದುಕೊಂಡಿರುವ ಸೆಲೆಬ್ರಿಟಿಗಳ ಉದಾಹರಣೆಗಳಿವೆ. ಮದುವೆ ಆದಮೇಲೆ ಡಿವೋರ್ಸ್‌ ತೆಗೆದುಕೊಳ್ಳುವುದು ಕಾಮನ್‌ ಆಗಿಬಿಟ್ಟಿದೆ. ಆದರೆ ಮದುವೆಗೆ ಮುಂಚೆಯೇ ನಟ ಅಜಯ್‌ ರಾವ್‌ ಅವರ ಡಿವೋರ್ಸ್‌ ಬಗ್ಗೆ ಒಬ್ಬರು ಭವಿಷ್ಯ ನುಡಿದಿದ್ದರಂತೆ. ಒಳ್ಳೆ ಮುಹೂರ್ತದಲ್ಲಿ ಮದುವೆಯಾಗುತ್ತಿಲ್ಲ, ಹಾಗಾಗಿ ಮದುವೆಯಾದ ಒಂದೇ ವರ್ಷದಲ್ಲಿ ಅಜಯ್‌ ರಾವ್ ಮತ್ತು ಸ್ವಪ್ನ ಅವರ ಡಿವೋರ್ಸ್‌ ಆಗಲಿದೆ ಎಂದಿದ್ದರಂತೆ.

ಅಜಯ್‌ ರಾವ್‌ ಮದುವೆ
ನಟ ಅಜಯ್‌ ರಾವ್‌ ಮತ್ತು ಸ್ವಪ್ನ ಅಜಯ್‌ ರಾವ್‌ ಅವರು 2014 ಡಿಸೆಂಬರ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಯದ್ದು ಲವ್‌ ಕಂ ಅರೇಂಜ್‌ ಮ್ಯಾರೇಜ್‌. ಹೀಗೆ ಪರಿಚಯವಾಗಿ, ಆ ಪರಿಯಚಯ ಸ್ನೇಹಕ್ಕೆ ಮತ್ತು ಸ್ನೇಹ ಪ್ರೀತಿಗೆ ತಿರುಗಿ ನಂತರ ಸಪ್ತಪದಿ ತುಳಿದಿದ್ದರು. ಸದ್ಯ ಈ ಜೋಡಿಗೆ ಚೆರಿಷ್ಮಾ ಎಂಬ ಹೆಸರಿನ ಮುದ್ದಾಗ ಮಗಳಿದ್ದಾಳೆ.

ತಪ್ಪು ಮುಹೂರ್ತದಲ್ಲಿ ಮದುವೆಯಾದೆ!
ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ನಾನು ನಂಬುತ್ತೇನೆ ಆದರೂ ನಾನು ಅದನ್ನು ಫಾಲೋ ಮಾಡಲ್ಲ. ನಾನು ಮದುವೆ ಆಗಿದ್ದು ತಪ್ಪು ಮುಹೂರ್ತದಲ್ಲಿ. ನನ್ನ ಮೊದಲನೇ ಪ್ರೊಡಕ್ಷನ್‌ ಸಿನಿಮಾ ʻಕೃಷ್ಣ ಲೀಲಾʼ ಮಾಡಿದ್ದು ತಪ್ಪು ಮುಹೂರ್ತದಲ್ಲಿ”
ಮದುವೆಯಾದ ಮುಹೂರ್ತದಲ್ಲಿ, ʻನೀವಿಬ್ಬರು ಒಂದು ವರ್ಷವೂ ಜೊತೆ ಇರಲ್ಲ, ಡಿವೋರ್ಸ್‌ ಆಗುತ್ತೆʼ ಅಂದಿದ್ದರು. ಆದರೆ ನಾನು ಯಾವ ಮುಹೂರ್ತವೂ ನೋಡಲ್ಲ. ನನಗೆ ಜ್ಯೋತಿಷ್ಯ ಓದುವುದಕ್ಕೆ ಬರುತ್ತೆ. ನಾನು ಸ್ಟಡಿ ಮಾಡಿದಾಗ, ಹೌದಲ್ವಾ ಇದು ತಪ್ಪು ಮುಹೂರ್ತ ಅನ್ನೋದು ನಂತರ ಗೊತ್ತಾಯ್ತು. ಜೀವನದಲ್ಲಿ ಏನೂ ಬಂದರೂ ನಾನು ಸ್ವೀಕರಿಸುತ್ತೇನೆ” ಎಂದಿದ್ದರು.

The post ವಿಚ್ಛೇದನಕ್ಕೆ ಮುಂದಾದ ಅಜಯ್ ರಾವ್ ದಂಪತಿ ! ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ ಪತ್ನಿ . appeared first on Good News 24x7.

]]>
ಉಪೇಂದ್ರನನ್ನ ಹಾಡಿಹೊಗಳಿದ ತಲೈವಾ! ” ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ ” ಎಂದ ರಜನಿಕಾಂತ್. https://www.goodnews24x7.com/upendrananna-ha%e1%b8%8d%cc%94ihoga%e1%b8%b7ida-talaiva-buddhivanta-nirdesakarigella-upendra-avare-do%e1%b8%8d%e1%b8%8da-spurti-enda-rajanikant-realstarupendrasuperstarrajinikanthviral/ Wed, 13 Aug 2025 07:33:48 +0000 https://www.goodnews24x7.com/?p=6008 ‘ಸೂಪರ್ ಸ್ಟಾರ್‌’ ರಜನಿಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ‘ರಿಯಲ್ ಸ್ಟಾರ್‌’ ಉಪೇಂದ್ರ ಕೂಡ ನಟಿಸಿದ್ದಾರೆ. ‘ಕೂಲಿ’ ಸಿನಿಮಾದಲ್ಲಿ ಉಪ್ಪಿ ಕಲೀಶ ಎಂಬ ಪಾತ್ರ ಮಾಡಿದ್ದು, ಅವರನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಸದ್ಯ ಉಪೇಂದ್ರ ಅವರ ಬಗ್ಗೆ ರಜನಿಕಾಂತ್ ಹೊಗಳಿ…

The post ಉಪೇಂದ್ರನನ್ನ ಹಾಡಿಹೊಗಳಿದ ತಲೈವಾ! ” ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ ” ಎಂದ ರಜನಿಕಾಂತ್. appeared first on Good News 24x7.

]]>

‘ಸೂಪರ್ ಸ್ಟಾರ್‌’ ರಜನಿಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ‘ರಿಯಲ್ ಸ್ಟಾರ್‌’ ಉಪೇಂದ್ರ ಕೂಡ ನಟಿಸಿದ್ದಾರೆ. ‘ಕೂಲಿ’ ಸಿನಿಮಾದಲ್ಲಿ ಉಪ್ಪಿ ಕಲೀಶ ಎಂಬ ಪಾತ್ರ ಮಾಡಿದ್ದು, ಅವರನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಸದ್ಯ ಉಪೇಂದ್ರ ಅವರ ಬಗ್ಗೆ ರಜನಿಕಾಂತ್ ಹೊಗಳಿ ಮಾತನಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ.

‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ಉಪೇಂದ್ರ ನಟನೆ ‘ಕೂಲಿ’ ಚಿತ್ರದಲ್ಲಿ ಕಲೀಶ ಎಂಬ ಪಾತ್ರವನ್ನು ಮಾಡಿರುವ ಉಪೇಂದ್ರ, ಅವರ ಪ್ರತಿಭೆಯನ್ನು ಬಹಿರಂಗ ವೇದಿಕೆಯಲ್ಲಿ ಹೊಗಳಿದ ರಜನಿಕಾಂತ್
‘ನನ್ನ ಬಾಷಾ ಸಿನಿಮಾಕ್ಕಿಂತ ಓಂ 10 ಪಟ್ಟು ದೊಡ್ಡದು’ ಎಂದ ರಜನಿಕಾಂತ್; ಉಪೇಂದ್ರಗೆ ‘ತಲೈವಾ’ ಭಾರಿ ಮೆಚ್ಚುಗೆ!

ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ‘ಸೂಪರ್ ಸ್ಟಾರ್‌’ ರಜನಿಕಾಂತ್ ಜೊತೆಗೆ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾದ ಆಡಿಯೋ ಈಚೆಗೆ ಚೆನ್ನೈನಲ್ಲಿ ನಡೆದಿತ್ತು. ಈ ವೇಳೆ ರಜನಿಕಾಂತ್ ಅವರು ಉಪೇಂದ್ರ ಅವರನ್ನ ಮನಸಾರೆ ಹೊಗಳಿದ್ದಾರೆ. ಜೊತೆಗೆ ‘ಓಂ’ ಚಿತ್ರವನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ.

ಏನೇನ್ ಮಾತಾಡಿದ್ರು ರಜನಿಕಾಂತ್?
‘ಕೂಲಿ’ ಚಿತ್ರದಲ್ಲಿ ಉಪೇಂದ್ರ ಅವರು ಕಲೀಶ ಎಂಬ ಪಾತ್ರವನ್ನು ಮಾಡಿದ್ದಾರೆ. ಆ ಬಗ್ಗೆ ಮಾತನಾಡುತ್ತಾ ರಜನಿಕಾಂತ್, “ನಮ್ಮ ಸಿನಿಮಾದಲ್ಲಿ ಉಪೇಂದ್ರ ಅವರು ಒಂದು ಪಾತ್ರ ಮಾಡಿದ್ದಾರೆ. ಭಾರತದ ಅತ್ಯಂತ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ. ಮಲಯಾಳಂ, ಹಿಂದಿ, ತೆಲುಗು, ತಮಿಳು ಎಲ್ಲಾ ಭಾಷೆಯವರಿಗೂ ಉಪೇಂದ್ರ ಸ್ಪೂರ್ತಿ. ಅಂತಹ ದೊಡ್ಡ ಡೈರೆಕ್ಟರ್. ಅವರಿಗೆ ನಟನಾಗಬೇಕು ಎಂದು ಇಷ್ಟವಿರಲಿಲ್ಲ. ಅವರು ಮೂಲತಃ ನಿರ್ದೇಶಕರು” ಎಂದು ಹೇಳಿದ್ದಾರೆ.

“ಅವರು ‘ಓಂ’ ಅಂತ ಒಂದು ಸಿನಿಮಾವನ್ನು ಶಿವರಾಜ್‌ಕುಮಾರ್‌ಗೆ ಮಾಡಿದ್ದಾರೆ. ನನಗೆ ಇಲ್ಲಿ ‘ಬಾಷಾ’ ಸಿನಿಮಾ ಹೇಗೋ, ಅಲ್ಲಿ (ಕರ್ನಾಟಕದಲ್ಲಿ) ಅದಕ್ಕಿಂತಲೂ 10 ಪಟ್ಟು ದೊಡ್ಡ ಸಿನಿಮಾ ‘ಓಂ’. ಆದಾದ ಮೇಲೆ ಅವರು ಮಾಡಿರುವ ಒಂದೊಂದು ಪಾತ್ರಗಳು ಡಿಫರೆಂಟ್‌. ಈಗ ಲೋಕೇಶ್ ಕನಕರಾಜ್ ನಾನ್ ಲೀನಿಯರ್ ಅಂತೇನೋ ಟೆಕ್ನಿಕ್ ಬಳಸುತ್ತಾರಲ್ವಾ? ಅದನ್ನು ಉಪೇಂದ್ರ ಅಂದೇ ಮಾಡಿದ್ದಾರೆ” ಎಂದು ರಜನಿಕಾಂತ್ ಹೇಳಿದ್ದಾರೆ.

“ತುಂಬಾ ಓದಿಕೊಂಡಿದ್ದಾರೆ. ಜನರ ಮೇಲೆ ಸಾಕಷ್ಟು ಪ್ರೀತಿ ತೋರುತ್ತಾರೆ. ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಕ್ಕೆ ನಾನಂತೂ ತುಂಬಾ ಖುಷಿಯಾಗಿದ್ದೇನೆ” ಎಂದು ರಜನಿಕಾಂತ್ ಹೇಳಿದ್ದಾರೆ. ಇನ್ನು, ರಜನಿಕಾಂತ್ ಅವರ ಬಗ್ಗೆ ಖುಷಿಯಿಂದ ಮಾತನಾಡಿರುವ ಉಪೇಂದ್ರ, “ನಾನು ಈಗ ಹೇಳುವುದು ಅತಿಶಯೋಕ್ತಿ ಎನಿಸಬಹುದು. ಆದರೆ ನಾನು ನಿಜವಾಗಿಯೂ ಹೇಳುತ್ತಿದ್ದೇನೆ, ನಾನು 25 ವರ್ಷದ ಹಿಂದೆ ತಲೈವಾ ಅವರನ್ನು ಭೇಟಿಯಾದೆ. ಅದು ನನಗೆ ಯಾವತ್ತೂ ಮರೆಯದಂತಹ ಕ್ಷಣ. ಅಂದಿನಿಂದ ದ್ರೋಣಾಚಾರ್ಯರನ್ನು ಏಕಲವ್ಯ ಹೇಗೆ ಫಾಲೋ ಮಾಡುತ್ತಾನೋ, ಹಾಗೇ ನಾನು ಫಾಲೋ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ದ್ರೋಣಾಚಾರ್ಯ ಬೆರಳು ಕೇಳಿದ್ದ.. ಆದ್ರೆ…
“ಅಂದು ದ್ರೋಣಾಚಾರ್ಯ ಮೊದಲ ಬಾರಿಗೆ ಏಕಲವ್ಯನನ್ನು ಭೇಟಿಯಾದಾಗ ಬೆರಳು ಕೇಳಿದ್ದ. ಆದರೆ ಈ ದ್ರೋಣಾಚಾರ್ಯ (ರಜನಿಕಾಂತ್) ಈ ಏಕಲವ್ಯನ (ಉಪೇಂದ್ರ) ಬೆರಳು ಹಿಡಿದುಕೊಂಡು ಕೂಲಿ ಅನ್ನೋ ಪ್ರಪಂಚಕ್ಕೆ ಕರೆದುಕೊಂಡು ಬಂದರು. ಆದರೆ ಆ ಪ್ರಪಂಚದಲ್ಲಿ ನಾಗಾರ್ಜುನ, ಆಮಿರ್ ಖಾನ್, ಸತ್ಯರಾಜ್.. ಅಬ್ಬಬ್ಬಾ.. ನಾನಿದನ್ನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲಾ ಸ್ಟಾರ್‌ಗಳಿಗೂ ಅಭಿಮಾನಿಗಳು ಇರುತ್ತಾರೆ. ಆ ಎಲ್ಲಾ ಸ್ಟಾರ್‌ಗಳು ನಿಮಗೆ (ರಜನಿಕಾಂತ್‌) ಅಭಿಮಾನಿಗಳಾಗಿರುತ್ತಾರೆ. ‘ಕೂಲಿ’ ಅನ್ನೋದು ಹಬ್ಬ. ನಾವೆಲ್ಲರೂ ಆಗಸ್ಟ್ 14ರಂದು ಸೆಲೆಬ್ರೇಷನ್ ಮಾಡೋಣ” ಎಂದು ಹೇಳಿದ್ದಾರೆ ಉಪೇಂದ್ರ.

ಸನ್‌ ಪಿಕ್ಚರ್ಸ್ ನಿರ್ಮಾಣ ಮಾಡಿರುವ ‘ಕೂಲಿ’ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಶ್ರುತಿ ಹಾಸನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದು, ಆಗಸ್ಟ್ 14ರಂದು ಬಹುಭಾಷೆಯಲ್ಲಿ ‘ಕೂಲಿ’ ಸಿನಿಮಾ ರಿಲೀಸ್ ಆಗಲಿದೆ.

The post ಉಪೇಂದ್ರನನ್ನ ಹಾಡಿಹೊಗಳಿದ ತಲೈವಾ! ” ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ ” ಎಂದ ರಜನಿಕಾಂತ್. appeared first on Good News 24x7.

]]>
ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ನಿಧನ. https://www.goodnews24x7.com/veteran-actress-of-kannada-film-industry-b-saroja-devi-passes-away/ Mon, 14 Jul 2025 05:28:05 +0000 https://www.goodnews24x7.com/?p=5083 ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ…

The post ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ನಿಧನ. appeared first on Good News 24x7.

]]>

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.


ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು. ಅವರು ಬೆಂಗಳೂರಿನಲ್ಲಿ ಹುಟ್ಟಿದರು. ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ ಅವರು ಹೌಸ್ವೈಫ್ ಆಗಿದ್ದರು. ಸರೋಜಾ ಬಳಿ ಭೈರಪ್ಪ ಅವರು ಡ್ಯಾನ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು. ಅವರು ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು.

1955ರಲ್ಲಿ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆಗ ಅವರಿಗೆ 17 ವರ್ಷ. ಆ ಬಳಿಕ ಆಫರ್ಗಳು ಅವರನ್ನು ಹುಡುಕಿ ಬಂದವು. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೋ ಸರೋಜಾ ದೇವಿ ಅವರು ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡರು.

ಮೇರು ನಟರಾದ ರಾಜ್ಕುಮಾರ್, ಕಲ್ಯಾಣ್ ಕುಮಾರ್ ಮೊದಲಾದವರ ಜೊತೆ ಸರೋಜಾ ದೇವಿ ತೆರೆ ಹಂಚಿಕೊಂಡರು. ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’, ಹಿಂದಿಯಲ್ಲಿ ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು.

90ರ ದಶಕದ ಬಳಿಕ ಸರೋಜಾ ದೇವಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಪುನೀತ್ ನಟನೆಯ 2019ರ ‘ನಟಸಾರ್ವಭೌಮ’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದರು. ಸರೋಜಾ ದೇವಿ ಆಗಿಯೇ ಅವರು ಸಿನಿಮಾದಲ್ಲಿ ಕಾಣಿಸಿಕೊಂಡರು.

The post ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ನಿಧನ. appeared first on Good News 24x7.

]]>