Kannadasinger Archives - Good News 24x7 https://www.goodnews24x7.com/tag/kannadasinger/ Kannada Tue, 11 Nov 2025 12:20:28 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kannadasinger Archives - Good News 24x7 https://www.goodnews24x7.com/tag/kannadasinger/ 32 32 ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್ https://www.goodnews24x7.com/singer-ananya-bhatt-enters-into-married-life/ Tue, 11 Nov 2025 12:20:28 +0000 https://www.goodnews24x7.com/?p=8130 ಕನ್ನಡದ ಜನಪ್ರಿಯ ಗಾಯಕಿ ಅನನ್ಯಾ ಭಟ್ (Ananya Bhat) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಲೂಸಿಯಾ, ಟಗರು ಸಿನಿಮಾ ಹಾಡುಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಡ್ರಮ್ಮರ್ ಮಂಜು, ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಡ್ರಮ್ಮರ್ ಮಂಜುನಾಥ್ ಜೊತೆ ಅನನ್ಯಾ ಭಟ್…

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್ appeared first on Good News 24x7.

]]>

ಕನ್ನಡದ ಜನಪ್ರಿಯ ಗಾಯಕಿ ಅನನ್ಯಾ ಭಟ್ (Ananya Bhat) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಲೂಸಿಯಾ, ಟಗರು ಸಿನಿಮಾ ಹಾಡುಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

ಡ್ರಮ್ಮರ್ ಮಂಜು, ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಡ್ರಮ್ಮರ್ ಮಂಜುನಾಥ್ ಜೊತೆ ಅನನ್ಯಾ ಭಟ್ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರು ಒಂದೇ ಬ್ಯಾಂಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ತುಂಬಾ ವರ್ಷಗಳ ಗೆಳೆಯರಾಗಿದ್ದರು. ನಿನ್ನೆ ತಿರುಪತಿಯಲ್ಲಿ (Tirupati) ಕುಟುಂಬಸ್ಥರು, ಆಪ್ತ ಬಳಗದ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು ಪಂಡಿತರು ಆದ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದಾರೆ. ಅನನ್ಯಾ ಭಟ್ ಅವರು ಸಿನಿಮಾ ಹಾಡು, ಭಕ್ತಿ ಗೀತೆ, ಜಾನಪದ ಗೀತೆಗಳನ್ನ ತಮ್ಮ ಮಧುರ ಕಂಠದಿಂದ ಹಾಡಿ ಖ್ಯಾತಿ ಪಡೆದಿದ್ದಾರೆ.

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್ appeared first on Good News 24x7.

]]>
ರಘು ದೀಕ್ಷಿತ್ ಜೊತೆ ನೆರವೇರಿತು ಗಾಯಕಿ ವಾರಿಜಶ್ರೀ ಮದುವೆ https://www.goodnews24x7.com/singer-varijashree-gets-married-to-raghu-dixit/ Fri, 24 Oct 2025 11:59:51 +0000 https://www.goodnews24x7.com/?p=7830 ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಹಾಗೂ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು, ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸಡಗರದಿಂದ ಈ ವಿವಾಹ ನೆರವೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜೋಡಿಗೆ…

The post ರಘು ದೀಕ್ಷಿತ್ ಜೊತೆ ನೆರವೇರಿತು ಗಾಯಕಿ ವಾರಿಜಶ್ರೀ ಮದುವೆ appeared first on Good News 24x7.

]]>

ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಹಾಗೂ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು, ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸಡಗರದಿಂದ ಈ ವಿವಾಹ ನೆರವೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು 2ನೇ ಮದುವೆ ಆಗಿದ್ದಾರೆ. ಗಾಯಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ರಘು ದೀಕ್ಷಿತ್ ಮತ್ತು ವಾರಿಜಶ್ರೀ ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಇತ್ತೀಚೆಗಷ್ಟೇ ಸುದ್ದಿ ಹೊರಬಿದ್ದಿತ್ತು. ಆ ಬಗ್ಗೆ ಮಾಧ್ಯಮವೊಂದಕ್ಕೆ ರಘು ದೀಕ್ಷಿತ್ ಅವರು ಪ್ರತಿಕ್ರಿಯೆ ಕೂಡ ನೀಡಿದ್ದರು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ (Raghu Dixit Marriage) ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಈ ಜೋಡಿಗೆ ಅಭಿನಂದನೆ ತಿಳಿಸಲಾಗಿದೆ.

ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರಿಗೂ ಬೇಡಿಕೆ ಇದೆ. ಗಾಯಕಿಯಾಗಿ, ಕೊಳಲು ವಾದಕಿಯಾಗಿ ವಾರಿಜಶ್ರೀ ಅವರು ಖ್ಯಾತಿ ಗಳಿಸಿದ್ದಾರೆ. ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಪರಿಚಯದಿಂದ ಪ್ರೀತಿ ಬೆಳೆದು, ಕುಟುಂಬದ ಒಪ್ಪಿಗೆ ಪಡೆದು ಅವರಿಬ್ಬರು ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ರಘು ದೀಕ್ಷಿತ್-ವಾರಿಜಶ್ರೀ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ. ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರಘು ದೀಕ್ಷಿತ್ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ನೋಡಿದ ಅಭಿಮಾನಿಗಳು ಕಮೆಂಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಯಮುನಾ ಶ್ರೀನಿಧಿ ಅವರು ಮದುವೆಯ ಫೋಟೋಗಳನ್ನು ಹಂಚಿಕೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ. ‘ಕನ್ನಡ ನಾಡಿನ ಹೆಮ್ಮೆಯ ಸಂಗೀತಗಾರ ರಘು ದೀಕ್ಷಿತ್ ಹಾಗೂ ಪ್ರತಿಭಾವಂತ ಸಂಗೀತಗಾರ್ತಿ ವಾರಿಜಾ ವೇಣುಗೋಪಾಲ್ ಅವರ ವಿವಾಹದ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಜೀವನ ಸಂಗಮವು ಪ್ರೀತಿ, ಸಂತೋಷ ಮತ್ತು ಸಂಗೀತದ ಸುಂದರ ರಾಗಗಳಿಂದ ತುಂಬಿರಲಿ’ ಎಂದು ಅವರು ಹಾರೈಸಿದ್ದಾರೆ.

50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರಿಗೆ ಇದು 2ನೇ ಮದುವೆ. ಈ ಮೊದಲು (2005) ಅವರು ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ವಿವಾಹ ಆಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು. ಬಳಿಕ ಇನ್ನೊಂದು ಮದುವೆ ಬಗ್ಗೆ ರಘು ದೀಕ್ಷಿತ್ ಅವರು ಆಲೋಚನೆ ಮಾಡಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಬೆಳೆದ ಬಳಿಕ ಮದುವೆ ಬಗ್ಗೆ ನಿರ್ಧರಿಸಿದರು. ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು.

 

The post ರಘು ದೀಕ್ಷಿತ್ ಜೊತೆ ನೆರವೇರಿತು ಗಾಯಕಿ ವಾರಿಜಶ್ರೀ ಮದುವೆ appeared first on Good News 24x7.

]]>