Kerala Archives - Good News 24x7 https://www.goodnews24x7.com/tag/kerala/ Kannada Tue, 07 Jul 2026 10:57:58 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kerala Archives - Good News 24x7 https://www.goodnews24x7.com/tag/kerala/ 32 32 ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ, 3 ಸಾ*ವು, ಹಲವರು ನಾಪತ್ತೆ https://www.goodnews24x7.com/landslide-in-wayanad-kerala-3-dead-many-missing/ Tue, 07 Jul 2026 10:57:58 +0000 https://www.goodnews24x7.com/?p=9783 2024ರ ಜುಲೈನಲ್ಲಿ ಸಂಭವಿಸಿದ ಭೂಕುಸಿತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು, ಆ ದುರಂತದಲ್ಲಿ ಸುಮಾರು 298 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿಯ ಅವಘಡ ಮರುಕಳಿಸಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ.…

The post ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ, 3 ಸಾ*ವು, ಹಲವರು ನಾಪತ್ತೆ appeared first on Good News 24x7.

]]>

2024ರ ಜುಲೈನಲ್ಲಿ ಸಂಭವಿಸಿದ ಭೂಕುಸಿತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು, ಆ ದುರಂತದಲ್ಲಿ ಸುಮಾರು 298 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿಯ ಅವಘಡ ಮರುಕಳಿಸಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ.

ಕೇರಳದ ವಯನಾಡಿನ ಕಲ್ಲಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ. ಸುರಂಗ ಮಾರ್ಗದ ಕಾಮಗಾರಿ ಸ್ಥಳದ ಮೇಲೆ ಮಣ್ಣಿನ ರಾಶಿ ಕುಸಿದು ಕಾರ್ಮಿಕರಿದ್ದ ಬಸ್‌ಗಳು ಹೂತುಹೋಗಿವೆ. ಭಾರೀ ಮಳೆಯ ನಡುವೆ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಸತೀಶನ್ ತುರ್ತು ಸಭೆ ಕರೆದಿದ್ದು, ಸಚಿವರು ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ.

ಕೇರಳದ ವಯನಾಡಿನಲ್ಲಿ ಮತ್ತೊಂದು ಭೀಕರ ಭೂಕುಸಿತ ಸಂಭವಿಸಿದೆ. ಅನಕ್ಕಂಫೊಯಿಲ್-ಕಲ್ಲಾಡಿ-ಮೇಪ್ಪಾಡಿ ಅವಳಿ ಸುರಂಗ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ದುರಂತ ನಡೆದಿದ್ದು, 3 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು ಏಳು ಮಂದಿ ಮಣ್ಣಿನಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. ಕನಿಷ್ಠ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೆಡ್ ಅಲರ್ಟ್ ಘೋಷಣೆ
ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ. ಮಲಪ್ಪುರಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಜಾರಿಯಲ್ಲಿದೆ. ಕೇವಲ ಒಂದು ದಿನದಲ್ಲಿ ವೈಥಿರಿಯಲ್ಲಿ 123 ಮಿ.ಮೀ ಮಳೆಯಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆ ಕರೆದಿದ್ದಾರೆ. ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಸಚಿವರಾದ ಟಿ. ಸಿದ್ದಿಕ್ ಮತ್ತು ಎ.ಪಿ. ಅನಿಲ್ ಕುಮಾರ್ ಅವರಿಗೆ ಸ್ಥಳಕ್ಕೆ ತೆರಳಿ ಉಸ್ತುವಾರಿ ನೋಡಿಕೊಳ್ಳುವಂತೆ ಆದೇಶಿಸಿದ್ದಾರೆ. ಕಲ್ಪೆಟ್ಟಾದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ.

The post ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ, 3 ಸಾ*ವು, ಹಲವರು ನಾಪತ್ತೆ appeared first on Good News 24x7.

]]>
70ನೇ ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಕನ್ನಡ ಕಲಾವಿದರು https://www.goodnews24x7.com/kannada-artists-wkannada-artists-who-won-the-70th-filmfare-awardsho-won-the-70th-filmfare-awards/ Sun, 22 Feb 2026 05:57:25 +0000 https://www.goodnews24x7.com/?p=8445   70ನೇ ಫಿಲ್ಮ್​ಫೇರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೊಚ್ಚಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಶ್ರೀಮುರಳಿ ಮತ್ತು ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಶಾಖಾಹಾರಿ’ ಸಿನಿಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಕೇರಳದ ಕೊಚ್ಚಿಯಲ್ಲಿ ‘70ನೇ ಫಿಲ್ಮ್​​ಫೇರ್…

The post 70ನೇ ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಕನ್ನಡ ಕಲಾವಿದರು appeared first on Good News 24x7.

]]>

 

70ನೇ ಫಿಲ್ಮ್​ಫೇರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೊಚ್ಚಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಶ್ರೀಮುರಳಿ ಮತ್ತು ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಶಾಖಾಹಾರಿ’ ಸಿನಿಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ.

ಕೇರಳದ ಕೊಚ್ಚಿಯಲ್ಲಿ ‘70ನೇ ಫಿಲ್ಮ್​​ಫೇರ್ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆದಿದೆ. 2024ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಝಗಮಗಿಸುವ ವೇದಿಕೆಯಲ್ಲಿ ಅವಾರ್ಡ್ ಫಂಕ್ಷನ್ ನಡೆಯಿತು. ‘ಕೋಳಿ ಎಸ್ರು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ‘ಬಘೀರ’ ಸಿನಿಮಾದ ನಟನೆಗಾಗಿ ಶ್ರೀಮುರಳಿ ಅವರಿಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಯಿತು.

‘ಕೆರೆಬೇಟೆ’ ಸಿನಿಮಾದಲ್ಲಿನ ನಟನೆಗಾಗಿ ಗೌರಿಶಂಕರ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ‘ಬ್ಲಿಂಕ್’ ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರು ಅತ್ಯುತ್ತಮ ಪೋಷಕ ನಟ ಪಶಸ್ತಿ ಪಡೆದರು. ‘ಭೀಮ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಿಯಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

70ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರ ಪಟ್ಟಿ: ಅತ್ಯುತ್ತಮ ಸಿನಿಮಾ: ಶಾಖಾಹಾರಿ (ನಿರ್ದೇಶನ: ಸಂದೀಪ್ ಸುಂಕದ್) ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೋಣನೂರು (ಹದಿನೇಳೆಂಟು) ಅತ್ಯುತ್ತಮ ನಿನಿಮಾ: ವಿಮರ್ಶಕರ ಆಯ್ಕೆ- ಬ್ಲಿಂಕ್ (ನಿರ್ದೇಶನ: ಶ್ರೀನಿಧಿ ಬೆಂಗಳೂರು) ಅತ್ಯುತ್ತಮ ಸಂಗೀತ: ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)

ಅತ್ಯುತ್ತಮ ಹೊಸ ನಟಿ: ಬಿಂಧು ಶಿವರಾಮ್ (ಕೆರೆಬೇಟೆ) ಅತ್ಯುತ್ತಮ ಹೊಸ ನಟ: ಸಮರ್​ಜಿತ್ ಲಂಕೇಶ್ (ಗೌರಿ) ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರುತಿ ಪ್ರಹ್ಲಾದ (ಹಿತ್ತಲಕ ಕರಿಬ್ಯಾಡ) ಅತ್ಯುತ್ತಮ ಹಿನ್ನೆಲೆ ಗಾಯಕ: ಜಸ್ಕರಣ್ ಸಿಂಗ್ (ದ್ವಾಪರ ದಾಟುತ) ಅತ್ಯುತ್ತಮ ಗೀತರಚನೆ: ನಾಗೇಂದ್ರ ಪ್ರಸಾದ್ (ದ್ವಾಪರ ದಾಟುತ)

The post 70ನೇ ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಕನ್ನಡ ಕಲಾವಿದರು appeared first on Good News 24x7.

]]>
ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಸಾ#ವಿನ ಕೊನೆಯ ಕ್ಷಣ ಹೇಗಿತ್ತು ಗೊತ್ತಾ? https://www.goodnews24x7.com/do-you-know-what-the-last-moments-of-confident-group-chairman-c-j-roys-death-were-like/ Sat, 31 Jan 2026 07:15:56 +0000 https://www.goodnews24x7.com/?p=8342 ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್  ಲಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. 57 ವರ್ಷದ ಈ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ ಪಿಸ್ತೂಲಿನಿಂದ ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವಾರು ಅನುಮಾನಗಳು…

The post ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಸಾ#ವಿನ ಕೊನೆಯ ಕ್ಷಣ ಹೇಗಿತ್ತು ಗೊತ್ತಾ? appeared first on Good News 24x7.

]]>

ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್  ಲಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. 57 ವರ್ಷದ ಈ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ ಪಿಸ್ತೂಲಿನಿಂದ ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವಾರು ಅನುಮಾನಗಳು ಕಾಡುತ್ತಿವೆ. ಅದರಲ್ಲದೆ ಅವರು ಬಳಸಿದ ಪಿಸ್ತೂಲಿಗೆ ಲೈಸೆನ್ಸ್ ಇರಲಿಲ್ಲವೆಂಬ ಶಂಕೆಯೂ ವ್ಯಕ್ತವಾಗಿದೆ.
ಕೇರಳದ ಕೊಚ್ಚಿಯಿಂದ ಬಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು ಬೆಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಕಳೆದ ಮೂರು ದಿನಗಳಿಂದ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಕಳೆದ ತಿಂಗಳು ಕಚೇರಿಯಲ್ಲಿ ನಡೆದ ದೊಡ್ಡ ಮಟ್ಟದ ದಾಳಿಯಲ್ಲಿ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ದಾಳಿ ನಡೆದಿತ್ತು.

ಆದಾಯ ತೆರಿಗೆ (ಐಟಿ) ಅಧಿಕಾರಿಗಳ ದಾಳಿ ವೇಳೆ ನಡೆದಿದ್ದೇನು?
ಮಧ್ಯಾಹ್ನ 12 ಗಂಟೆ: ಬೆಂಗಳೂರಿನ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಗೆ ಐ-ಟಿ ಅಧಿಕಾರಿಗಳ ಆಗಮನ
ಮಧ್ಯಾಹ್ನ 2 ಗಂಟೆ: ಕಚೇರಿಗೆ ಸಿ.ಜೆ. ರಾಯ್ ಆಗಮನ
ಮಧ್ಯಾಹ್ನ 2–3 ಗಂಟೆ:ಕೆಲವು ದಾಖಲೆಗಳಿಗೆ ಸಹಿ ಹಾಕಲು ಮತ್ತು ಪರಿಶೀಲಿಸಲು ಅಧಿಕಾರಿಗಳ ಸೂಚನೆ
ಮಧ್ಯಾಹ್ನ 3 ಗಂಟೆ: ರಾಯ್ ತಮ್ಮ ಖಾಸಗಿ ಕೇಬಿನ್‌ಗೆ ತೆರಳುತ್ತಾರೆ
ಮಧ್ಯಾಹ್ನ 3–3:10: ಪಿಸ್ತೂಲ್ ತೆಗೆದು ಎದೆಗೆ ಗುಂಡು ಹಾರಿಸಿಕೊಂಡು ಕುಸಿದು ಬೀಳುತ್ತಾರೆ
ಸಂಜೆ 3:10–4 ಗಂಟೆ: ಉದ್ಯೋಗಿಗಳು ಮತ್ತು ಅಧಿಕಾರಿಗಳು ರಾಯ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಎಚ್‌ಎಸ್‌ಆರ್ ಲೇಔಟ್‌ನ ಆಸ್ಪತ್ರೆಗೆ ಕರೆದೊಯ್ಯುತ್ತಾರೆ; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಯುತ್ತದೆ.
ಸುಮಾರು ಮಧ್ಯಾಹ್ನ 3 ಗಂಟೆಗೆ, ತಮ್ಮ ಕೇಬಿನ್‌ನಲ್ಲಿ ಕೆಲವು ದಾಖಲೆಗಳಿವೆ ಎಂದು ಹೇಳಿ ರಾಯ್ ಒಳಗೆ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಗುಂಡಿನ ಶಬ್ದ ಕೇಳಿಬಂದಿತ್ತು. ಕೇಬಿನ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಇತ್ತೋ ಇಲ್ಲವೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.

ದಾಖಲೆಗಳಿರುವ ಬ್ರೀಫ್‌ಕೇಸ್ ಮತ್ತು ಪಿಸ್ತೂಲ್ ಸದಾ ಜೊತೆಗೇ ಇಟ್ಟುಕೊಳ್ಳುತ್ತಿದ್ದ ರಾಯ್
ರಾಯ್ ಅವರ ಆಪ್ತ ಸಹಾಯಕ ಹೇಳುವಂತೆ, ಪಿಸ್ತೂಲ್ ಇದ್ದ ಕಾರಣ ರಾಯ್ ಸದಾ ತಮ್ಮ ಬ್ರೀಫ್‌ಕೇಸ್ ಅನ್ನು ಜೊತೆಗೇ ಇಟ್ಟುಕೊಳ್ಳುತ್ತಿದ್ದರು. ಅಪರೂಪಕ್ಕೆ ಅವುಗಳನ್ನು ಮರೆತರೂ ಸಹ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ತರಿಸಿಕೊಳ್ಳುತ್ತಿದ್ದರು.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸಿ.ಜೆ ರಾಯ್ ಆತ್ಮಹತ್ಯೆಗೆ ಬಳಸಿದ ಪಿಸ್ತೂಲಿನ ತಯಾರಿಕೆ ಮತ್ತು ಕ್ಯಾಲಿಬರ್ ಅನ್ನು ಬಾಲಿಸ್ಟಿಕ್ ತಜ್ಞರ ತಂಡ ಪರಿಶೀಲಿಸಿ ದೃಢಪಡಿಸಬೇಕಿದೆ ಎಂದಿದ್ದಾರೆ.
ಕಾನ್‌ಫಿಡೆಂಟ್ ಗ್ರೂಪ್‌ನ ಸ್ಥಾಪಕ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಐಟಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ದೂರಿನಲ್ಲಿ ಮಾಡಿಲ್ಲ. ಆದ್ದರಿಂದ ನಾವು ಅಸಹಜ ಮರಣ ಪ್ರಕರಣವನ್ನು ದಾಖಲಿಸಿದ್ದೇವೆ. ಕುಟುಂಬದವರು ಹೊಸ ಆರೋಪಗಳನ್ನು ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಅವರ ಸಹಾಯಕರೊಬ್ಬರು, ಇಷ್ಟು ವರ್ಷಗಳ ಕಾಲ ರಾಯ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಅವರು ದುರ್ಬಲ ಮನಸ್ಸಿನವರಾಗಿ ಎಂದಿಗೂ ಕಾಣಿಸಿಲ್ಲ ಎಂದು ಹೇಳಿದ್ದಾರೆ.

ಐ-ಟಿ ಅಧಿಕಾರಿಗಳೇ ಅವರ ಸಾವಿಗೆ ಕಾರಣವೆಂದ ಸಹೋದರ!
ರಾಯ್ ಅವರ ಸಹೋದರ ಮತ್ತು ವೈಟ್‌ಗೋಲ್ಡ್ ಸಂಸ್ಥೆಯ ಮಾಲೀಕ ಸಿ.ಜೆ. ಬಾಬು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಳೆದ ಮೂರು ದಿನಗಳಿಂದ ಕೇರಳದ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದರು ಎಂದು ಹೇಳಿದರು. ಅಧಿಕಾರಿಗಳಿಂದ ಒತ್ತಡದ ಆರೋಪ ಮಾಡಿರುವ ಅವರು, ರಾಯ್ ಅವರು ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಐಟಿ ತಂಡವೇ ಕಾರಣ ಎಂದು ಆರೋಪಿಸಿದ್ದಾರೆ.
ರಾಯ್ ಅವರ ಪತ್ನಿ, ಇಪ್ಪತ್ತರ ವಯಸ್ಸಿನ ಮಗ ಮತ್ತು ಮಗಳು ದುಬೈನಲ್ಲಿ ನೆಲೆಸಿದ್ದು, ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಾರೆಂದು ಹೇಳಲಾಗಿದೆ. ರಾಯ್ ಅವರ ತಾಯಿ ಕೊರಮಂಗಲದ ನೆಕ್ಸಸ್ ಮಾಲ್ ಸಮೀಪ ವಾಸಿಸುತ್ತಿದ್ದು, ಅವರು ಅಲ್ಲಿ ಅಪರೂಪಕ್ಕೆ ಮಾತ್ರ ತಂಗುತ್ತಿದ್ದರು ಎಂದು ಸಹಾಯಕರು ತಿಳಿಸಿದ್ದಾರೆ. ಬೆಂಗಳೂರಿಗೆ ಬಂದಾಗ ಸಾಮಾನ್ಯವಾಗಿ ಅವರು ಕೇಂದ್ರ ವ್ಯಾಪಾರ ವಲಯದ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಹೇಳಿದ್ದೇನು?
ಐಟಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿದ ಪೊಲೀಸರು, ಅಧಿಕಾರಿಗಳು ಕೇವಲ ಅವರ ಸಂಸ್ಥೆಯ ಮೇಲಿದ್ದ ನಿರ್ಬಂಧ ಆದೇಶಗಳನ್ನು ತೆರವುಗೊಳಿಸುವ ಸಲುವಾಗಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ರಾಯ್ ಅವರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ರಾಯ್​ ಎಷ್ಟು ಸುತ್ತು ಗುಂಡು ಹಾರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಬ್ಬ ಹಿರಿಯ ತನಿಖಾಧಿಕಾರಿ ಮಾತನಾಡಿ, ಗುಂಡಿನ ಶಬ್ದ ಕೇಳಿದ ತಕ್ಷಣ ಉದ್ಯೋಗಿಗಳು ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ನಂತರ ರಾಯ್ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆಂದರು ಎಂದು ಹೇಳಿದ್ದಾರೆ.

The post ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಸಾ#ವಿನ ಕೊನೆಯ ಕ್ಷಣ ಹೇಗಿತ್ತು ಗೊತ್ತಾ? appeared first on Good News 24x7.

]]>
ವಧುವಿಗೆ ಅಪಘಾತ – ಐಸಿಯುನಲ್ಲೇ ತಾಳಿ ಕಟ್ಟಿದ ವರ! https://www.goodnews24x7.com/bride-in-accident-groom-tied-the-knot-in-icu/ Sat, 22 Nov 2025 11:47:39 +0000 https://www.goodnews24x7.com/?p=8242 ತಿರುವನಂತಪುರ: ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತವಾಗಿ ಆಸ್ಪತ್ರೆಯ ಐಸಿಯುನಲ್ಲೇ ವರ ತಾಳಿ ಕಟ್ಟಿದ ಅಪರೂಪದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ…

The post ವಧುವಿಗೆ ಅಪಘಾತ – ಐಸಿಯುನಲ್ಲೇ ತಾಳಿ ಕಟ್ಟಿದ ವರ! appeared first on Good News 24x7.

]]>

ತಿರುವನಂತಪುರ: ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತವಾಗಿ ಆಸ್ಪತ್ರೆಯ ಐಸಿಯುನಲ್ಲೇ ವರ ತಾಳಿ ಕಟ್ಟಿದ ಅಪರೂಪದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ ನಿವಾಸಿ ಶರೋನ್ ವಿವಾಹ ಶುಕ್ರವಾರ ನಿಗದಿಯಾಗಿತ್ತು. ಈ ಹಿನ್ನೆಲೆ ವಧು ಅವನಿ ಮೇಕಪ್ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

https://www.facebook.com/reel/3798106020489452

ಆಸ್ಪತ್ರೆಗೆ ಬಂದ ಶರೋನ್ ಹಾಗೂ ಅವನಿ ಕುಟುಂಬಸ್ಥರು ಪೂರ್ವ ನಿಗದಿಯಾಗಿದ್ದಂತೆ ಶುಕ್ರವಾರ ಮಧ್ಯಾಹ್ನ 12:15 ರಿಂದ 12:30ರ ನಡುವೆ ಮದುವೆ ನೆರವೇರಿಸಲು ಅವಕಾಶ ಕಲ್ಪಿಸುವಂತೆ ಆಸ್ಪತ್ರೆಯವರಲ್ಲಿ ಮನವಿ ಮಾಡಿದ್ದರು. ಅದರಂತೆ ಆಸ್ಪತ್ರೆಯ ಐಸಿಯುನಲ್ಲೇ ಶರೋನ್ ಅವನಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ. ಕುಟುಂಬ ಸದಸ್ಯರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನ 4ನೇ ಮಹಡಿಯಿಂದ ಜಿಗಿದು ನರ್ಸಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಆಸ್ಪತ್ರೆಯಲ್ಲಿಯೇ ಸಮಾರಂಭ ನಡೆಸಬೇಕೆಂದು ವರನ ಕುಟುಂಬ ಮನವಿ ಮೇರೆಗೆ ಇಲ್ಲಿಯೇ ಮದುವೆ ನಡೆಸಿದ್ದೇವೆ ಎಂದು ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಇಂದು (ಶನಿವಾರ) ಅವನಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ತಿಳಿಸಿದ್ದಾರೆ.

The post ವಧುವಿಗೆ ಅಪಘಾತ – ಐಸಿಯುನಲ್ಲೇ ತಾಳಿ ಕಟ್ಟಿದ ವರ! appeared first on Good News 24x7.

]]>
ಮೆದುಳನ್ನು ತಿನ್ನುವ ಸೋಂಕು; ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು ಕೇರಳದಲ್ಲಿ ಹೈ ಅಲರ್ಟ್ https://www.goodnews24x7.com/brain-eating-amoeba-kills-19-infects-over-120-kerala-on-high-alert/ Fri, 19 Sep 2025 11:22:17 +0000 https://www.goodnews24x7.com/?p=7591 ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಪ್ರಕರಣಗಳು ಹೆಚ್ಚಾಗಿವೆ. ಕೇರಳದ ಬಹುತೇಕ ಕಡೆ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೀರಿನ ಮೂಲಕ ಹರಡುವ ಈ ಅಮೀಬಾ ಅತ್ಯಂತ ಅಪಾಯಕಾರಿ ಮತ್ತು ಮೆದುಳನ್ನು ತಲುಪಿದರೆ ಸಾವಿಗೆ ಕಾರಣವಾಗಬಹುದು. ಕೇರಳದಲ್ಲಿಯೇ ಈ ಸೋಂಕಿನ…

The post ಮೆದುಳನ್ನು ತಿನ್ನುವ ಸೋಂಕು; ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು ಕೇರಳದಲ್ಲಿ ಹೈ ಅಲರ್ಟ್ appeared first on Good News 24x7.

]]>

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಪ್ರಕರಣಗಳು ಹೆಚ್ಚಾಗಿವೆ. ಕೇರಳದ ಬಹುತೇಕ ಕಡೆ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೀರಿನ ಮೂಲಕ ಹರಡುವ ಈ ಅಮೀಬಾ ಅತ್ಯಂತ ಅಪಾಯಕಾರಿ ಮತ್ತು ಮೆದುಳನ್ನು ತಲುಪಿದರೆ ಸಾವಿಗೆ ಕಾರಣವಾಗಬಹುದು. ಕೇರಳದಲ್ಲಿಯೇ ಈ ಸೋಂಕಿನ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ಈ ರೋಗವನ್ನು ಹೇಗೆ ತಡೆಗಟ್ಟುವುದು ಎಂಬುದರ ಮಾಹಿತಿ ಇಲ್ಲಿದೆ.

ತಿರುವನಂತಪುರಂ: ಕಳೆದ ವರ್ಷಕ್ಕೆ ಹೋಲಿಸಿದರೆ ಕೇರಳದಲ್ಲಿ ಮೆದುಳನ್ನು ತಿನ್ನುವ ಅಮೀಬಾದಿಂದ (brain-eating amoeba) 19 ಸಾವುಗಳು ಸಂಭವಿಸಿವೆ ಮತ್ತು 120ಕ್ಕೂ ಅಧಿಕ ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ ವರ್ಷ 36 ಸೋಂಕುಗಳು ವರದಿಯಾಗಿತ್ತು. ಅವುಗಳಲ್ಲಿ 9 ಮಾರಕವಾಗಿತ್ತು. ಕೇರಳದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಪರೂಪದ ಹಾಗೂ ನೀರಿನಿಂದ ಹರಡುವ ‘ಮೆದುಳನ್ನು ತಿನ್ನುವ ಅಮೀಬಾ’ದಿಂದ ಉಂಟಾದ ಸೋಂಕುಗಳು ದ್ವಿಗುಣಗೊಂಡ ನಂತರ ಎಚ್ಚರಿಕೆ ವಹಿಸಲಾಗಿದೆ. ಸೆಪ್ಟೆಂಬರ್‌ನಲ್ಲಿಯೇ 9 ಸಾವುಗಳು ಸಂಭವಿಸಿದ್ದು, ಇಲ್ಲಿಯವರೆಗೆ 19 ಜನರು ಸಾವನ್ನಪ್ಪಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ 19 ಸಾವುಗಳು ದಾಖಲಾಗಿವೆ. ಈ ಅಂಕಿ ಅಂಶವು ಆಘಾತಕಾರಿಯಾಗಿದೆ. ಏಕೆಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಈ ಅಪರೂಪದ ಕಾಯಿಲೆಯ ಪ್ರಕರಣಗಳು ಒಟ್ಟು ಸಂಖ್ಯೆ 500ಕ್ಕಿಂತ ಕಡಿಮೆ. ಇವುಗಳಲ್ಲಿ, ಕೇರಳವೊಂದರಲ್ಲೇ 120 ಪ್ರಕರಣಗಳು ವರದಿಯಾಗಿವೆ. ಕೇರಳ ರಾಜ್ಯದಲ್ಲಿ ಈ ಸೋಂಕಿನ ಆತಂಕ ನಿರಂತರವಾಗಿ ಹೆಚ್ಚುತ್ತಿದೆ. ಈ ಅಮೀಬಾದಿಂದ ಉಂಟಾಗುವ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ ಎಂಬುದು ಇನ್ನಷ್ಟು ಆತಂಕ ಸೃಷ್ಟಿಸುವ ಸಂಗತಿ. ಈ ಸೋಂಕು ಮೆದುಳಿಗೆ ಹರಡಿದರೆ, ಅದು ಪ್ರಾಣವನ್ನೇ ಬಲಿ ಪಡೆಯಬಹುದು.

 

ಈ ಅಮೀಬಾ ಕೊಳಕು, ಬೆಚ್ಚಗಿನ ಸಿಹಿನೀರಿನಲ್ಲಿ ಬೆಳೆಯುತ್ತದೆ. ಸ್ನಾನ ಮಾಡುವಾಗ ಅಥವಾ ಈಜುವಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ, ಮೆದುಳನ್ನು ತಲುಪುತ್ತದೆ. ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಕೊಳಗಳು, ಸರೋವರಗಳು ಅಥವಾ ಈಜುಕೊಳಗಳಲ್ಲಿ ಈಜುವುದರಿಂದ ಅಪಾಯದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಸ್ನಾನ ಅಥವಾ ಮನೆಕೆಲಸಕ್ಕಾಗಿ ತೆರೆದ ನೀರನ್ನು ಬಳಸುತ್ತಾರೆ, ಅವರು ಸಹ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಅದಕ್ಕಾಗಿಯೇ ಈ ರೋಗದ ತಡೆಗಟ್ಟುವಿಕೆ ಮತ್ತು ಅರಿವು ನಿರ್ಣಾಯಕವಾಗಿದೆ.

ಅಮೀಬಾ ದೇಹದ ಮೇಲೆ ಹೇಗೆ ದಾಳಿ ಮಾಡುತ್ತದೆ?

ಸಫ್ದರ್ಜಂಗ್ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಜುಗಲ್ ಕಿಶೋರ್, ಮೆದುಳನ್ನು ತಿನ್ನುವ ಅಮೀಬಾ ಕುಡಿಯುವ ನೀರಿನ ಮೂಲಕ ದೇಹವನ್ನು ಪ್ರವೇಶಿಸುವುದಿಲ್ಲ, ಅದರ ಬದಲಿಗೆ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ ಎಂದು ವಿವರಿಸುತ್ತಾರೆ . ಈಜುವಾಗ, ಸ್ನಾನ ಮಾಡುವಾಗ ಅಥವಾ ನೀರಿನಲ್ಲಿ ನಡೆಯುವಾಗ ನೀರು ಮೂಗಿಗೆ ಸೇರಿದಾಗ, ಈ ಅಮೀಬಾ ನೇರವಾಗಿ ಮೆದುಳಿಗೆ ಚಲಿಸುತ್ತದೆ. ಇದು ಸೋಂಕನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಉಂಟಾಗುವ ರೋಗವನ್ನು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುತ್ತದೆ.

ಡಾ. ಕಿಶೋರ್ ಅವರ ಪ್ರಕಾರ, ಲಕ್ಷಣಗಳು ಆರಂಭದಲ್ಲಿ ಸಾಮಾನ್ಯ ವೈರಲ್ ಸೋಂಕನ್ನು ಹೋಲುತ್ತವೆ, ಆದರೆ ಕ್ರಮೇಣ ರೋಗಿಯು ಗೊಂದಲ, ಸೆಳೆತ ಮತ್ತು ಕೋಮಾವನ್ನು ಅನುಭವಿಸುತ್ತಾನೆ. ಈ ಸೋಂಕು ವೇಗವಾಗಿ ಹರಡುತ್ತದೆ ಮತ್ತು ಇದಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಅದಕ್ಕಾಗಿಯೇ ಮೆದುಳನ್ನು ತಿನ್ನುವ ಅಮೀಬಾವನ್ನು ವೈದ್ಯಕೀಯ ವಿಜ್ಞಾನದಲ್ಲಿ ಅತ್ಯಂತ ಅಪಾಯಕಾರಿ ಸೋಂಕುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಕೇರಳದಲ್ಲಿಯೇ ಈ ಸೋಂಕು ಏಕೆ ಹೆಚ್ಚುತ್ತಿದೆ?

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ವಿವರಿಸುವಂತೆ, ಕೇರಳದಲ್ಲಿ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು ಹೆಚ್ಚಾಗಲು ಅಲ್ಲಿನ ಬೆಚ್ಚಗಿನ ವಾತಾವರಣ ಒಂದು ಕಾರಣವಾಗಿರಬಹುದು. ಆಗಾಗ ಮಳೆ ಬೀಳುವುದು ಮತ್ತು ಅದರಿಂದ ಅಲ್ಲಲ್ಲಿ ನೀರು ನಿಲ್ಲುವುದು ಅಮೀಬಾಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ. ಅನೇಕ ಪ್ರದೇಶಗಳಲ್ಲಿ, ಜನರು ದೈನಂದಿನ ಅಗತ್ಯಗಳಿಗಾಗಿ ಕೊಳ ಮತ್ತು ಸರೋವರದ ನೀರನ್ನು ಬಳಸುತ್ತಾರೆ. ಇದು ಸೋಂಕಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದಲ್ಲದೆ, ನಗರ ಪ್ರದೇಶಗಳಲ್ಲಿ ಈಜುಕೊಳಗಳ ಕಳಪೆ ನೈರ್ಮಲ್ಯವು ಸೋಂಕಿನ ಹರಡುವಿಕೆಗೆ ಕಾರಣವಾಗಬಹುದು.

The post ಮೆದುಳನ್ನು ತಿನ್ನುವ ಸೋಂಕು; ಅಮೀಬಾದಿಂದ 19 ಜನ ಸಾವು, 120ಕ್ಕೂ ಹೆಚ್ಚು ಜನರಿಗೆ ಸೋಂಕು ಕೇರಳದಲ್ಲಿ ಹೈ ಅಲರ್ಟ್ appeared first on Good News 24x7.

]]>
‘ಗುಣಮಟ್ಟದ ಶಿಕ್ಷಣ ವರ್ಷ’ ಘೋಷಿಸಲು ಸಲಹೆ: ಶಾಸಕ ಸುರೇಶ್ ಕುಮಾರ್‌. https://www.goodnews24x7.com/suggestion-to-declare-quality-education-year-mla-suresh-kumar/ Sat, 23 Aug 2025 07:13:11 +0000 https://www.goodnews24x7.com/?p=6521 ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಮುಂದಿನ ಎರಡು ವರ್ಷಗಳನ್ನು ‘ಗುಣಮಟ್ಟದ ಶಿಕ್ಷಣ ವರ್ಷಗಳು’ ಎಂದು ಘೋಷಿಸಲು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಸರಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಅಭಿವೃದ್ಧಿಯ ಕುರಿತ ವಿಶೇಷ…

The post ‘ಗುಣಮಟ್ಟದ ಶಿಕ್ಷಣ ವರ್ಷ’ ಘೋಷಿಸಲು ಸಲಹೆ: ಶಾಸಕ ಸುರೇಶ್ ಕುಮಾರ್‌. appeared first on Good News 24x7.

]]>

ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಮುಂದಿನ ಎರಡು ವರ್ಷಗಳನ್ನು ‘ಗುಣಮಟ್ಟದ ಶಿಕ್ಷಣ ವರ್ಷಗಳು’ ಎಂದು ಘೋಷಿಸಲು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಸರಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಅಭಿವೃದ್ಧಿಯ ಕುರಿತ ವಿಶೇಷ ಚರ್ಚೆಯಲ್ಲಿ ಅವರು ಮಾತನಾಡಿದರು.

“ಪೋಷಕರು ಖಾಸಗಿ ಶಾಲೆಗಳ ಮೆಟ್ಟಿಲು ಚಡಪಡಿಸದೆ, ತಮ್ಮ ಮಕ್ಕಳನ್ನು ಇಚ್ಛೆಯಿಂದ ಸರಕಾರಿ ಶಾಲೆಗಳಿಗೆ ಕಳಿಸಲು ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಶಾಲೆಗಳ ಮಟ್ಟ ಸುಧಾರಣೆ ಅತ್ಯವಶ್ಯಕ,” ಎಂದು ಅವರು ಹೇಳಿದ್ದಾರೆ.

ಶಿಕ್ಷಕರನ್ನು ಕೇವಲ ಸಂಬಳಕ್ಕಾಗಿ ಕೆಲಸಮಾಡುವವರು ಎಂಬ ಬದಲು, ‘ಮುಂದಿನ ತಲೆಮಾರು ರೂಪಿಸುವ ಭಾಗಿಯಾಗಿರುವೆವು’ ಎಂಬ ಭಾವನೆ ಮೂಡಿಸುವಂತೆ ಪ್ರೇರೇಪಿಸಬೇಕೆಂದು ಅವರು ಅಭಿಪ್ರಾಯಪಟ್ಟರು. “ಸರಕಾರಿ ಶಾಲೆಗಳ ಅಗತ್ಯತೆ ಮತ್ತು ಅವುಗಳ ಪಾತ್ರವನ್ನು ಶಿಕ್ಷಕರಿಗೆ ಮನವರಿಕೆ ಮಾಡಿಸಬೇಕು,” ಎಂದರು.

ಅಲ್ಲದೆ, “ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಕೆಲಸ ಜೋರಾಗಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೇರಳ ಮಾದರಿಯ ‘ವಾಟರ್ ಬೆಲ್’ ವ್ಯವಸ್ಥೆಯನ್ನು ಅನುಸರಿಸಿ, ಇತರ ರಾಜ್ಯಗಳ ಉತ್ತಮ ನೀತಿಯ ಮಾದರಿಗಳನ್ನು ನಮ್ಮ ಶಾಲೆಗಳಲ್ಲೂ ಅಳವಡಿಸಬೇಕು,” ಎಂದು ಸರ್ಕಾರಕ್ಕೆ ಅವರು ಸಲಹೆ ನೀಡಿದರು.

The post ‘ಗುಣಮಟ್ಟದ ಶಿಕ್ಷಣ ವರ್ಷ’ ಘೋಷಿಸಲು ಸಲಹೆ: ಶಾಸಕ ಸುರೇಶ್ ಕುಮಾರ್‌. appeared first on Good News 24x7.

]]>
ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು https://www.goodnews24x7.com/transgender-woman-files-complaint-against-kerala-congress-mla/ Fri, 22 Aug 2025 06:29:39 +0000 https://www.goodnews24x7.com/?p=6453 ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ…

The post ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು appeared first on Good News 24x7.

]]>

ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ.

ಪಾಲಕ್ಕಾಡ್: ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಿದ್ದಾರೆ. ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ. ಚುನಾವಣಾ ಚರ್ಚೆಯ ಸಮಯದಲ್ಲಿ ಅವರು ಮೊದಲು ಭೇಟಿಯಾಗಿದ್ದರು. ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾದದ್ದು ಸಾಮಾಜಿಕ ಮಾಧ್ಯಮದಲ್ಲಿನ ಸಂದೇಶಗಳ ಮೂಲಕ ಅಸಹ್ಯಕರ ಅನುಭವವಾಗಿ ಬದಲಾಯಿತು ಎಂದು ಅವಂತಿಕಾ ಹೇಳಿದ್ದಾರೆ.

ಮಲಯಾಳಂ ನಟಿ ರಿನಿ ಜಾರ್ಜ್ ಮತ್ತು ನಂತರ ಬರಹಗಾರ ಹನಿ ಭಾಸ್ಕರನ್ ಅವರು ನೀಡಿದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗುರುವಾರ ಕೇರಳ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ . ಪ್ರಮುಖ ರಾಜಕೀಯ ಪಕ್ಷದ ನಾಯಕಿಯೊಬ್ಬರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್‌ಗೆ ಆಹ್ವಾನಿಸಿದ್ದಾರೆ ಎಂದು ರಿನಿ ಆರೋಪಿಸಿದ್ದರು . ಅವರು ಯಾರನ್ನೂ ಹೆಸರಿಸದಿದ್ದರೂ, ಬಿಜೆಪಿ ಮತ್ತು ಡಿವೈಎಫ್‌ಐ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಮ್‌ಕೂಟತಿಲ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದವು. ಹನಿ ಭಾಸ್ಕರನ್, ರಾಹುಲ್ ಅವರನ್ನು ಹೆಸರಿಸಿ , ಪದೇ ಪದೇ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ, ಯುವ ಕಾಂಗ್ರೆಸ್‌ನೊಳಗಿನ ದೂರುಗಳು ಬಗೆಹರಿಯದೆ ಉಳಿದಿವೆ ಎಂದು ಹೇಳಿದರು.

ತಮ್ಮ ರಾಜೀನಾಮೆಯಲ್ಲಿ, ರಾಹುಲ್ ಅವರು ತಾವು ರಾಜೀನಾಮೆ ನೀಡುತ್ತಿರುವುದು ತಪ್ಪು ಕಾರಣದಿಂದಲ್ಲ, ಬದಲಾಗಿ ಪಕ್ಷದ ಕಾರ್ಯಕರ್ತರು ಮುಂಬರುವ ಚುನಾವಣೆಗಳತ್ತ ಗಮನಹರಿಸಲು ಅವಕಾಶ ನೀಡುವ ಉದ್ದೇಶದಿಂದ ಎಂದು ಹೇಳಿದ್ದಾರೆ. ಪಕ್ಷದ ಯಾವುದೇ ನಾಯಕರು ರಾಜೀನಾಮೆ ನೀಡುವಂತೆ ತಮ್ಮನ್ನು ಕೇಳಿಲ್ಲ ಎಂದು ಅವರು ಒತ್ತಿ ಹೇಳಿದರು ಮತ್ತು ಅದು ತಮ್ಮ ವೈಯಕ್ತಿಕ ಜವಾಬ್ದಾರಿ ಎಂದು ಹೇಳಿದರು. ರಾಜೀನಾಮೆ ಬಗ್ಗೆ ಕೇರಳ ಸಚಿವೆ ಆರ್ ಬಿಂದು ಪ್ರತಿಕ್ರಿಯೆ ನೀಡಿದ್ದು, ಯುವ ಶಾಸಕ ರಾಹುಲ್ ವಿರುದ್ಧ ಅನೇಕ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರು ಯುವ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಮಾಜವನ್ನು ರಕ್ಷಿಸಲು ಅವರು ಶಾಸಕ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂದು ಹೇಳಿದರು.

The post ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು appeared first on Good News 24x7.

]]>
ರಿಷಬ್ ಶೆಟ್ಟಿ ಅವರ ‘ ಕಾಂತಾರ 1 ಚಿತ್ರಕ್ಕೆ ಮತ್ತೊಂದು ಕಂಟಕ, ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಸಾ*ವು https://www.goodnews24x7.com/another-thorn-in-rishab-shettys-kantara-1-another-artist-dies-of-heart-attack/ Thu, 12 Jun 2025 07:34:31 +0000 https://www.goodnews24x7.com/?p=4349 ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ಶೂಟಿಂಗ್ ಸಮಯದಲ್ಲಿ ಹಲವಾರು ಅಪಘಾತಗಳು ಮತ್ತು ಮರಣಗಳು ಸಂಭವಿಸಿವೆ. ಚಿತ್ರೀಕರಣದ ಸಮಯದಲ್ಲಿ ಬಸ್ ಅಪಘಾತ, ಕಲಾವಿದರ ಸಾವು ಮತ್ತು ಇತರ ಅನಾಹುತಗಳು ಸಂಭವಿಸಿವೆ. ಇದರಿಂದಾಗಿ ಚಿತ್ರತಂಡದ ಮೇಲೆ ದೈವದ ಎಚ್ಚರಿಕೆಯ ನಂಬಿಕೆ ಹೆಚ್ಚಾಗಿದೆ. ಅಕ್ಟೋಬರ್…

The post ರಿಷಬ್ ಶೆಟ್ಟಿ ಅವರ ‘ ಕಾಂತಾರ 1 ಚಿತ್ರಕ್ಕೆ ಮತ್ತೊಂದು ಕಂಟಕ, ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಸಾ*ವು appeared first on Good News 24x7.

]]>

ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ಶೂಟಿಂಗ್ ಸಮಯದಲ್ಲಿ ಹಲವಾರು ಅಪಘಾತಗಳು ಮತ್ತು ಮರಣಗಳು ಸಂಭವಿಸಿವೆ. ಚಿತ್ರೀಕರಣದ ಸಮಯದಲ್ಲಿ ಬಸ್ ಅಪಘಾತ, ಕಲಾವಿದರ ಸಾವು ಮತ್ತು ಇತರ ಅನಾಹುತಗಳು ಸಂಭವಿಸಿವೆ. ಇದರಿಂದಾಗಿ ಚಿತ್ರತಂಡದ ಮೇಲೆ ದೈವದ ಎಚ್ಚರಿಕೆಯ ನಂಬಿಕೆ ಹೆಚ್ಚಾಗಿದೆ. ಅಕ್ಟೋಬರ್ 2ರಂದು ರಿಲೀಸ್ ಆಗಲಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಸಾಲು ಸಾಲು ಹಿನ್ನಡೆ ಆಗುತ್ತಿದೆ. ಈ ಮೊದಲು ಕಲಾವಿದರು ತೆರಳುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಯಿತು. ಆ ಬಳಿಕ ತಂಡದ ಇಬ್ಬರು ಆರ್ಟಿಸ್ಟ್ಗಳು ಸಾವನಪ್ಪಿದರು. ಈಗ ಚಿತ್ರದ ಜೂನಿಯರ್ ಆರ್ಟಿಸ್ಟ್ ವಿಜು ವಿಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ರೀತಿಯ ಕೆಟ್ಟ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿರುವುದನ್ನು ನೋಡಿದರೆ ದೈವದ ಎಚ್ಚರಿಕೆ ನಿಜವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ದೈವದ ಎಚ್ಚರಿಕೆ
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿರುವ ಸೂಚನೆ ಸಿಕ್ಕ ಬೆನ್ನಲ್ಲೇ ಅವರು ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ಮತ್ತು ಜಾರಂದಾಯ ದೈವದ ಉತ್ಸವದಲ್ಲಿ ಭಾಗಿ ಆಗಿದ್ದರು. ಆಗ ರಿಷಬ್ಗೆ ದೈವ ಎಚ್ಚರಿಕೆಯನ್ನು ನೀಡಿತ್ತು. ‘ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ’ ಎಂದು ಎಚ್ಚರಿಸಿತ್ತು. ಅಲ್ಲದೆ, ಜಾಗೃತವಾಗಿರಲು ದೈವ ಸೂಚನೆ ನೀಡಿತ್ತು. ಈಗ ಎಚ್ಚರಿಕೆ ನಿಜವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಅದು 2024ರ ನವೆಂಬರ್ ತಿಂಗಳು. ಶೂಟಿಂಗ್ ಸಲುವಾಗಿ ಜೂನಿಯರ್ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್ ಪಲ್ಟಿ ಆಗಿತ್ತು. ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಈ ಘಟನೆ ನಡೆದಿತ್ತು. ಆರು ಮಂದಿ ಈ ಘಟನೆಯಲ್ಲಿ ಗಾಯಗೊಂಡರು.
ಮೇ ತಿಂಗಳಿಂದ ಈಚೆಗೆ ‘ಕಾಂತಾರ: ಚಾಪ್ಟರ್ 1’ ತಂಡದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಎಂಎಫ್ ಕಪಿಲ್ ಅವರು ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ನಿಧನ (ಮೇ) ಹೊಂದಿದ್ದರು. ‘ಆ ದಿನ ಯಾವುದೇ ಶೂಟಿಂಗ್ ಇರಲಿಲ್ಲ. ಹೀಗಾಗಿ, ಇದಕ್ಕೂ ಕಾಂತಾರ ಚಿತ್ರಕ್ಕೂ ಯಾವುದೇ ಲಿಂಕ್ ಮಾಡಬೇಡಿ’ ಎಂದು ತಂಡ ಕೇಳಿಕೊಂಡಿತ್ತು.  ಇದಾದ ಕೆಲವೇ ದಿನ ಅಂದರೆ ಮೇ 12ರಂದು ‘ಕಾಂತಾರ’ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಇವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈಗ ಮತ್ತೊಂದು ಅವಘಡ ಸಂಭವಿಸಿದೆ. ಕೇರಳದ ತ್ರಿಶೂರ್ನ ವಿಜು ವಿಕೆ ಎಂಬುವವರು ‘ಕಾಂತಾರ’ ಸಿನಿಮಾ ಶೂಟ್ಗಾಗಿ ಕರ್ನಾಟಕಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಹೃದಯಾಘಾತ ಆಗಿದೆ.
ವಿಜು ಅವರ ಮೃತದೇಹವನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರ ಕುಟುಂಬಸ್ಥರು ಕೇರಳದಿಂದ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

The post ರಿಷಬ್ ಶೆಟ್ಟಿ ಅವರ ‘ ಕಾಂತಾರ 1 ಚಿತ್ರಕ್ಕೆ ಮತ್ತೊಂದು ಕಂಟಕ, ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಸಾ*ವು appeared first on Good News 24x7.

]]>
ಪಾಕ್ ಪರ ಘೋಷಣೆ ಕೂಗಿದ್ರೂ ತಪ್ಪು : ಸಿಎಂ ಸಿದ್ದರಾಮಯ್ಯ. https://www.goodnews24x7.com/even-if-you-shout-slogans-in-favor-of-pakistan-it-is-wrong-investigate-and-take-appropriate-action-cm-siddaramaiah/ Wed, 30 Apr 2025 10:10:27 +0000 https://www.goodnews24x7.com/?p=3488 ಬೆಂಗಳೂರು : ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರೇ ಪಾಕ್ ಪರ ಘೊಣೆ ಕೂಗಿದರೂ ತಪ್ಪು ತನಿಖೆ ಮಾಡಿ ಸೂಕ್ತ ಕ್ರಮ…

The post ಪಾಕ್ ಪರ ಘೋಷಣೆ ಕೂಗಿದ್ರೂ ತಪ್ಪು : ಸಿಎಂ ಸಿದ್ದರಾಮಯ್ಯ. appeared first on Good News 24x7.

]]>

ಬೆಂಗಳೂರು : ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರೇ ಪಾಕ್ ಪರ ಘೊಣೆ ಕೂಗಿದರೂ ತಪ್ಪು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಪಿಗಳು ಯಾರೇ ಆಗಿದ್ದರೂ ಅವರ ವಿರುದ್ದ ಕ್ರಮ ಖಚಿತ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವತ್ತು ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.ಏ. 27 ರಂದು ಪಾಕಿಸ್ತಾನದ ವಿರುದ್ದ ಘೋಷಣೆ ಕೂಗಿದ್ದಕ್ಕೆ ಸ್ಥಳೀಯರ ಗುಂಪು ಘೋಷಣೆ ಕೂಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಆ ವ್ಯಕ್ತಿ ಮೃತಪಟ್ಟಿದ್ದು ಆತನ ಮೃತದೇಹ ಪತ್ತೆಯಾಗಿತ್ತು. ಮೃತ ಆರೋಪಿಯು ಕೇರಳದ ವಯನಾಡಿನ ಪುಲ್ಪಳಿ ನಿವಾಶಿ ಅಶ್ರಫ್ ಎಂದು ತಿಳಿದುಬಂದಿದೆ.

The post ಪಾಕ್ ಪರ ಘೋಷಣೆ ಕೂಗಿದ್ರೂ ತಪ್ಪು : ಸಿಎಂ ಸಿದ್ದರಾಮಯ್ಯ. appeared first on Good News 24x7.

]]>
ಈ ಪ್ರಸಿದ್ಧ ಭಾರತದ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಪ್ರವೇಶ! https://www.goodnews24x7.com/these-famous-indian-temples-do-not-allow-men/ Sun, 13 Apr 2025 05:37:20 +0000 https://www.goodnews24x7.com/?p=3189 ಭಾರತವು ತನ್ನ ಸನಾತನ ಧರ್ಮದ ಸಂಸ್ಕೃತಿಯಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಭಾರತವು ಎಣಿಕೆಗೂ ಮೀರಿದಷ್ಟು ದೇವಾಲಯಗಳನ್ನು ಒಳಗೊಂಡಿದೆ. ಆದಾಗ್ಯೂ, ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವಂತೆಯೇ, ಪುರುಷರಿಗೂ ವಿವಿಧ ಕಾರಣಗಳಿಗಾಗಿ ಕೆಲವು ದೇವಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ…

The post ಈ ಪ್ರಸಿದ್ಧ ಭಾರತದ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಪ್ರವೇಶ! appeared first on Good News 24x7.

]]>

ಭಾರತವು ತನ್ನ ಸನಾತನ ಧರ್ಮದ ಸಂಸ್ಕೃತಿಯಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಭಾರತವು ಎಣಿಕೆಗೂ ಮೀರಿದಷ್ಟು ದೇವಾಲಯಗಳನ್ನು ಒಳಗೊಂಡಿದೆ. ಆದಾಗ್ಯೂ, ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವಂತೆಯೇ, ಪುರುಷರಿಗೂ ವಿವಿಧ ಕಾರಣಗಳಿಗಾಗಿ ಕೆಲವು ದೇವಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಕಾಮಾಖ್ಯ ದೇವಸ್ಥಾನ, ಅಸ್ಸಾಂ

 

 

 

 

 

 

ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ ಬೆಟ್ಟದ ಮೇಲೆ ಕಾಮಾಖ್ಯ ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಕಾಮಾಕ್ಯ ದೇವಿಗಾಗಿ ಅಂಬುಬಾಚಿ ಮೇಳ ನಡೆಯುತ್ತದೆ. ಈ ಸಮಯದಲ್ಲಿ ದೇವಾಲಯವು ಮೂರು ದಿನಗಳ ಕಾಲ ಮುಚ್ಚಲ್ಪಡುತ್ತದೆ. ಆ ಅವಧಿಯಲ್ಲಿ ಪುರುಷರಿಗೆ ಪ್ರವೇಶವಿರಲಿಲ್ಲ.

ತಮಿಳುನಾಡಿನ ಕುಮಾರಿ ಅಮ್ಮನ್ ದೇವಾಲಯ

 

 

 

 

ತಮಿಳುನಾಡಿನ ಕನ್ಯಾಕುಮಾರಿ ದೇವಾಲಯವು ಪಾರ್ವತಿ ದೇವಿಯ ಅವತಾರವಾದ ಕನ್ಯಾಕುಮಾರಿಗೆ ಸಮರ್ಪಿತವಾದ ದೇವಾಲಯವಾಗಿದೆ. ದೇವಿಯ ವಿಗ್ರಹ ಇರುವ ಗರ್ಭಗುಡಿಯೊಳಗೆ ಪುರುಷರು, ವಿಶೇಷವಾಗಿ ವಿವಾಹಿತ ಪುರುಷರು ಪ್ರವೇಶಿಸಲು ಅವಕಾಶವಿಲ್ಲ. ಅಲ್ಲಿ ಮಹಿಳೆಯರು ಮಾತ್ರ ದೇವಿಯನ್ನು ನೇರವಾಗಿ ಪೂಜಿಸಬಹುದು. ದೇವಾಲಯದ ಸಂಪ್ರದಾಯಗಳು ಮತ್ತು ನಿಯಮಗಳ ಪ್ರಕಾರ, ಸನ್ಯಾಸಿಗಳು ದೇವಾಲಯದ ದ್ವಾರದಿಂದ ಮಾತ್ರ ಭೇಟಿ ನೀಡಬಹುದು, ಆದರೆ ವಿವಾಹಿತ ಪುರುಷರು ದೂರದಿಂದ ಪ್ರಾರ್ಥನೆ ಸಲ್ಲಿಸಬಹುದು.

ಬ್ರಹ್ಮ ದೇವಾಲಯ, ಪುಷ್ಕರ್, ರಾಜಸ್ಥಾನ

 

 

 

 

 

ಒಂದು ಪುರಾಣದ ಕಾರಣದಿಂದಾಗಿ ವಿವಾಹಿತ ಪುರುಷರು ಈ ಬ್ರಹ್ಮ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ಬ್ರಹ್ಮ ದೇವರನ್ನು ಪೂಜಿಸುವ ವಾರ್ಷಿಕ ಉತ್ಸವ ನಡೆಯುತ್ತದೆ. ಬ್ರಹ್ಮನು ಗಾಯತ್ರಿ ದೇವಿಯನ್ನು ಮದುವೆಯಾಗುತ್ತಾನೆ. ಇದು ಸರಸ್ವತಿ ದೇವಿಯನ್ನು ಕೋಪಗೊಳಿಸಿತು. ಸರಸ್ವತಿ ದೇವಿಯು ಈ ದೇವಾಲಯಕ್ಕೆ ಶಾಪ ನೀಡಿದ್ದಾಳೆಂದು ಹೇಳಲಾಗುತ್ತದೆ, ವಿವಾಹಿತ ಪುರುಷರು ಈ ದೇವಾಲಯಕ್ಕೆ ಪ್ರವೇಶಿಸಿ ಅಲ್ಲಿ ಪೂಜೆ ಸಲ್ಲಿಸಿದರೆ, ಅದು ಅವರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಈ ದೇವಾಲಯದ ಗರ್ಭಗುಡಿಗೆ ಪುರುಷರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಅಟ್ಟುಕಲ್ ಭಗವತಿ ದೇವಸ್ಥಾನ, ಕೇರಳ

 

 

 

 

 

ಅಟ್ಟುಕಲ್ ಭಗವತಿ ದೇವಸ್ಥಾನವನ್ನು ಮಹಿಳೆಯರ ಶಬರಿಮಲೆ ಎಂದೂ ಕರೆಯುತ್ತಾರೆ. ಅಟ್ಟುಕಲ್ ಪೊಂಗಲ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಸ್ಥಳವು ಪ್ರಪಂಚದಾದ್ಯಂತದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸುವ ಅತಿದೊಡ್ಡ ವಾರ್ಷಿಕ ಆಚರಣೆಯಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದೆ. ಅಟ್ಟುಕಲ್ ಪೊಂಗಲ್ ಹಬ್ಬದ ಸಮಯದಲ್ಲಿ, ಪುರುಷರಿಗೆ ದೇವಾಲಯದ ಆವರಣಕ್ಕೆ ಪ್ರವೇಶವಿಲ್ಲ.

ಜೋಧ್ಪುರದ ಸಂತೋಷಿ ಮಾತಾ ದೇವಾಲಯ

 

 

 

 

 

 

ಜೋಧ್ಪುರ ನಗರದಲ್ಲಿ ಪುರುಷರಿಗೆ ಒಳಗೆ ಪ್ರವೇಶವಿಲ್ಲ ಎಂಬ ಸಂತೋಷಿ ಮಾತಾ ದೇವಾಲಯವಿದೆ. ಶುಕ್ರವಾರ ತಾಯಿ ಸಂತೋಷಿಗೆ ಮೀಸಲಾದ ದಿನ. ಆದ್ದರಿಂದ, ಈ ದಿನದಂದು, ಮಹಿಳೆಯರು ಶಾಂತಿ ಮತ್ತು ಸಂತೋಷವನ್ನು ಅರಸುತ್ತಾ ದೇವಿಯನ್ನು ಭೇಟಿ ಮಾಡುತ್ತಾರೆ. ಮಹಿಳೆಯರು ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಿಸುತ್ತಾರೆ, ದೇವಾಲಯದ ಶಕ್ತಿಯು ಕುಟುಂಬ ಸಾಮರಸ್ಯ ಮತ್ತು ಸಂತೋಷಕ್ಕಾಗಿ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಈ ಸಮಯದಲ್ಲಿ, ಪುರುಷರಿಗೆ ಗರ್ಭಗುಡಿಯೊಳಗೆ ಪ್ರವೇಶವಿಲ್ಲ.

The post ಈ ಪ್ರಸಿದ್ಧ ಭಾರತದ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಪ್ರವೇಶ! appeared first on Good News 24x7.

]]>