Kiccha Archives - Good News 24x7 https://www.goodnews24x7.com/tag/kiccha/ Kannada Mon, 06 Jul 2026 08:12:02 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kiccha Archives - Good News 24x7 https://www.goodnews24x7.com/tag/kiccha/ 32 32 ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ https://www.goodnews24x7.com/sudeep-was-the-last-choice-for-the-film-eega-rajamouli/ Fri, 03 Jul 2026 06:37:27 +0000 https://www.goodnews24x7.com/?p=9753 ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ಸೂಪರ್ ಹಿಟ್ ‘ಈಗ’ ಸಿನಿಮಾ ಇತ್ತೀಚೆಗೆ ವಿದೇಶದ ವಿಶೇಷ ಪ್ರದರ್ಶನದಲ್ಲೂ ಧೂಳೆಬ್ಬಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಳೆಯ ವಿಡಿಯೋದಲ್ಲಿ, ‘ಈಗ’ ಚಿತ್ರದ ಜಟಿಲ ಖಳನಾಯಕನ ಪಾತ್ರಕ್ಕೆ ಸುದೀಪ್ ಅವರನ್ನೇ…

The post ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ appeared first on Good News 24x7.

]]>

ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ಸೂಪರ್ ಹಿಟ್ ‘ಈಗ’ ಸಿನಿಮಾ ಇತ್ತೀಚೆಗೆ ವಿದೇಶದ ವಿಶೇಷ ಪ್ರದರ್ಶನದಲ್ಲೂ ಧೂಳೆಬ್ಬಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಳೆಯ ವಿಡಿಯೋದಲ್ಲಿ, ‘ಈಗ’ ಚಿತ್ರದ ಜಟಿಲ ಖಳನಾಯಕನ ಪಾತ್ರಕ್ಕೆ ಸುದೀಪ್ ಅವರನ್ನೇ ಆಯ್ಕೆ ಮಾಡಲು ಇದ್ದ ಮುಖ್ಯ ಕಾರಣ ಹಾಗೂ ಅಮಿತಾಭ್ ಬಚ್ಚನ್ ಎದುರು ಅವರ ನಟನೆ ನೋಡಿ ಬೆರಗಾದ ಕ್ಷಣವನ್ನು ರಾಜಮೌಳಿ ಬಿಚ್ಚಿಟ್ಟಿದ್ದಾರೆ.

ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಕಾಂಬಿನೇಶನ್‌ನ ‘ಈಗ’ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ಸುದೀಪ್ ಅವರ ಅಪ್ರತಿಮ ಖಳನಾಯಕನ ನಟನೆಗೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ವಿದೇಶದಲ್ಲಿ ನಡೆದಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಳೆಯ ಸಂದರ್ಶನದ ವಿಡಿಯೋವೊಂದರಲ್ಲಿ ರಾಜಮೌಳಿ ಅವರು, ‘ಈಗ’ ಚಿತ್ರಕ್ಕೆ ಸುದೀಪ್ ಅವರನ್ನೇ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಲು ಇದ್ದ ಮುಖ್ಯ ಕಾರಣವನ್ನು ಬಹಿರಂಗಪಡಿಸಿದ್ದರು.

‘ಚಿತ್ರದಲ್ಲಿ ಅಷ್ಟು ಭಯಾನಕ ವಿಲನ್ ಆಗಿರುವ ವ್ಯಕ್ತಿ, ತನ್ನ ಮೊದಲ ಡೈಲಾಗ್‌ನಲ್ಲೇ ‘ಪ್ರತಿ ವಿಷಯಕ್ಕೂ ವೈಲೆನ್ಸ್ ಯಾಕೆ?’ ಅಂತಾನೆ. ಆಮೇಲೆ ಆತ ತುಂಬಾ ವೈಲೆಂಟ್ ಆಗಿ ಬದಲಾಗುತ್ತಾನೆ. ಮಧ್ಯದಲ್ಲಿ ಕಾಮಿಡಿ ಮಾಡುತ್ತಾನೆ, ರೋಮ್ಯಾಂಟಿಕ್ ಆಗುತ್ತಾನೆ, ನಂತರ ಹುಚ್ಚನಂತೆ ಆಡುತ್ತಾನೆ. ಇಷ್ಟೂ ಶೇಡ್‌ಗಳನ್ನು ನಟನೆಯಲ್ಲಿ ತೋರಿಸುವುದು ಕತ್ತಿಯ ಮೇಲಿನ ನಡಿಗೆಯಿದ್ದಂತೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅದು ಓವರ್ ಆಕ್ಟಿಂಗ್ ಎನಿಸಿಕೊಳ್ಳುತ್ತದೆ’ ಎಂದು ರಾಜಮೌಳಿ ಆ ಪಾತ್ರದ ಗಾಂಭೀರ್ಯತೆಯನ್ನು ವಿವರಿಸಿದ್ದರು.

ಅಮಿತಾಭ್ ಬಚ್ಚನ್ ಮುಂದೆ ಸುದೀಪ್ ನಟನೆ ನೋಡಿ ಬೆರಗಾಗಿದ್ದರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರನ್’ ಚಿತ್ರದಲ್ಲಿ ಸುದೀಪ್ ಅವರ ನಟನೆಯನ್ನು ನೋಡಿ ತಾನು ಫುಲ್ ಫ್ಲಾಟ್ ಆಗಿದ್ದಾಗಿ ರಾಜಮೌಳಿ ನೆನಪಿಸಿಕೊಂಡಿದ್ದಾರೆ. ‘ರನ್ ಸಿನಿಮಾದಲ್ಲಿ ಸುದೀಪ್ ಅವರ ಸೂಕ್ಷ್ಮ ನಟನೆ ಹಾಗೂ ಮ್ಯಾನರಿಸಂ ಅದ್ಭುತವಾಗಿತ್ತು. ಅದರಲ್ಲೂ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅವರ ಮುಂದೆಯೇ ಅಷ್ಟು ಭರ್ಜರಿಯಾಗಿ ನಟಿಸುವುದನ್ನು ಕಂಡು, ಸುದೀಪ್ ನಿಜಕ್ಕೂ ಒಬ್ಬ ಗ್ರೇಟ್ ಆಕ್ಟರ್ ಎಂದು ನನಗೆ ಅನಿಸಿತ್ತು. ಹಾಗಾಗಿ ‘ಈಗ’ ಚಿತ್ರದ ಕ್ಯಾರೆಕ್ಟರ್ ರೆಡಿಯಾದ ತಕ್ಷಣ ನಮಗೆ ಮೊದಲು ನೆನಪಾಗಿದ್ದೇ ಸುದೀಪ್’ ಎಂದಿದ್ದರು ರಾಜಮೌಳಿ

ಸುದೀಪ್ ಅವರೇ ಫಸ್ಟ್… ಅವರೇ ಲಾಸ್ಟ್
ಸಂದರ್ಶನದ ಕೊನೆಯಲ್ಲಿ ನಿರೂಪಕರು, ‘ಹಾಗಾದರೆ ಈ ಪಾತ್ರಕ್ಕೆ ನಿಮ್ಮ ಮೊದಲ ಆಯ್ಕೆ ಸುದೀಪ್ ಅವರೇನಾ?’ ಎಂದು ಕೇಳಿದಾಗ, ರಾಜಮೌಳಿ ಅವರು ನಗುತ್ತಾ, ‘ಫಸ್ಟ್ ಚಾಯ್ಸ್ ಕೂಡ ಅವರೇ, ಲಾಸ್ಟ್ ಚಾಯ್ಸ್ ಕೂಡ ಅವರೇ! ಫೈನಲ್ ಆಗಿ ಎಲ್ಲವೂ ಅವರೇ ಆಗಿದ್ದರು’ ಎಂದು ಹೇಳುವ ಮೂಲಕ ಕಿಚ್ಚನ ಮೇಲಿರುವ ತಮ್ಮ ಗೌರವ ಹಾಗೂ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.

The post ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ appeared first on Good News 24x7.

]]>
ಸುದೀಪ್​ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೀಸರ್ ಬಿಡುಗಡೆ ! https://www.goodnews24x7.com/new-movie-teaser-released-for-sudeeps-birthday/ Tue, 02 Sep 2025 05:50:42 +0000 https://www.goodnews24x7.com/?p=7254 ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ. ಅಭಿನಯ ಚಕ್ರವರ್ತಿ, ಬಾದ್ ಷಾ ಕಿಚ್ಚ ಸುದೀಪ್​ಗೆ ಇಂದು ಹುಟ್ಟು ಹಬ್ಬದ…

The post ಸುದೀಪ್​ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೀಸರ್ ಬಿಡುಗಡೆ ! appeared first on Good News 24x7.

]]>

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ.

ಅಭಿನಯ ಚಕ್ರವರ್ತಿ, ಬಾದ್ ಷಾ ಕಿಚ್ಚ ಸುದೀಪ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇಂದು ಸ್ಯಾಂಡಲ್​ವುಡ್​ ಸ್ಟಾರ್​ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿಚ್ಚನ ಅಭಿಮಾನಿಗಳು ಮಧ್ಯರಾತ್ರಿಯೇ ಹಬ್ಬದ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಕಿಚ್ಚ ಸುದೀಪ್ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಅನೌನ್ಸ್​ ಆಗಿದೆ.

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಒಂದಿನ ಮೊದಲೇ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ. ಈವರೆಗೂ ಕೆ-47 ಎನ್ನುವ ಹೆಸರಿನಲ್ಲೇ ಶೂಟಿಂಗ್ ಮಾಡಿ ಪೂರ್ಣಗೊಳಿಸಲಾಗಿದೆ. ಕಿಚ್ಚನ ಹೊಸ ಸಿನಿಮಾ ರಿಲೀಸ್​ಗೂ ರೆಡಿಯಾಗಿದ್ದು ಡಿಸೆಂಬರ್​ನಲ್ಲಿ ಅಂದರೆ ಕ್ರಿಸ್​ಮಸ್​ಗೆ ಅಭಿಮಾನಿಗಳು ಈ ಸಿನಿಮಾವನ್ನು ಬಿಗ್​ ಸ್ಕ್ರೀನ್​ನಲ್ಲಿ ನೋಡಬಹುದು.

ಹೆಸರಿಡದ ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಕಿಚ್ಚನ ಬರ್ತ್​ಡೇಗೂ ಒಂದಿನ ಮೊದಲೇ ಮೂವಿಯ ಟೈಟಲ್​ ಟೀಸರ್​ ರಿಲೀಸ್ ಮಾಡಲಾಗಿದೆ. ಮಾರ್ಕ್​ ಎನ್ನುವುದು ಮೂವಿಯ ಹೆಸರು ಆಗಿದೆ. ಸುದೀಪ್ ಕೂಡ ಮಾರ್ಕ್​ ಟೀಸರ್​ನಲ್ಲಿ ರಗಡ್​ ಅಂದರೆ ಫುಲ್ ರಗಡ್​ ಲುಕ್​ನಲ್ಲಿ ಕಾಣಿಸಿದ್ದಾರೆ. ಮಾರ್ಕ್​ ಸಿನಿಮಾದ ಬ್ಯಾಗ್ರೌಂಡ್ ಮ್ಯೂಸಿಕ್​ ಅಂತೂ ಮೈನವಿರೇಳಿಸುವಂತೆ ಇದೆ.

ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಕಿಚ್ಚನ ಕಾಂಬೋದಲ್ಲಿ ಬರುತ್ತಿರುವ ಇದು 2ನೇ ಮೂವಿ ಆಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್​​ನಲ್ಲಿ ಮ್ಯಾಕ್ಸ್​ ಸಿನಿಮಾ ತೆರೆ ಮೇಲೆ ಅಬ್ಬರಿಸಿತ್ತು. ಅಭಿಮಾನಿಗಳಿಗೂ ಸಖತ್ ಮನರಂಜನೆ ನೀಡಿತ್ತು. ಇದು ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯನ ಮೊದಲ ವಿಜಯ ಆಗಿತ್ತು. ಅದರಂತೆ ಮತ್ತೊಂದು ಜಯಭೇರಿ ಬಾರಿಸಲು ಇಬ್ಬರು ರೆಡಿಯಾಗಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆಗೆ ಬರಲಿದೆ.

ಈ ಮಾರ್ಕ್​ ಸಿನಿಮಾಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಮ್ಯೂಸಿಕ್ ಇದಕ್ಕಿದೆ. ಸತ್ಯಜ್ಯೋತಿ ಫಿಲಂ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ಈ ಮೂವಿಗೆ ಬಂಡವಾಳ ಹಾಕಿದ್ದು ಲಾಭದ ನಿರೀಕ್ಷೆಯಲ್ಲಿವೆ. ಕಿಚ್ಚನ ಬರ್ತ್​ಡೇಗೆ ಸದ್ಯ ಟೈಟಲ್​ ಟೀಸರ್​ ಒಂದೇ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಯಾರು ಯಾರು ಅಭಿನಯ ಮಾಡುತ್ತಿದ್ದಾರೆ, ಹೀರೋಯಿನ್ ಯಾರು, ಪೋಷಕ ಪಾತ್ರಗಳ ಹೆಸರು ರಿವೀಲ್ ಆಗಬೇಕಿದೆ ಅಷ್ಟೇ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ.

The post ಸುದೀಪ್​ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೀಸರ್ ಬಿಡುಗಡೆ ! appeared first on Good News 24x7.

]]>
ಸಲ್ಲುನಿಂದ ಕಿಚ್ಚ ಸುದೀಪ್​ಗೆ ಸಿಕ್ಕಿರೋದು ಕೋಟಿ ಬೆಲೆಬಾಳೋ ಉಡುಗೊರೆ  … https://www.goodnews24x7.com/kiccha-sudeep-got-a-gift-worth-crores-from-sallu/ Tue, 02 Sep 2025 05:17:03 +0000 https://www.goodnews24x7.com/?p=7243 ಕಿಚ್ಚ ಸುದೀಪ್ ಅವರ 52ನೇ ಹುಟ್ಟುಹಬ್ಬ. ಈ ವೇಳೆ ಒಂದು ಹಳೆಯ ಘಟನೆ ನೆನಪಿಸಿಕೊಳ್ಳೋಣ. ಸಲ್ಮಾನ್ ಖಾನ್ ಅವರು ಸುದೀಪ್ ಅವರಿಗೆ ಐಷಾರಾಮಿ ಕಾರುಗಳು ಮತ್ತು ಜಿಮ್ ಉಪಕರಣಗಳನ್ನು ಉಡುಗೊರೆಯಾಗಿ ನೀಡಿದ್ದರು . ‘ದಬಾಂಗ್ 3’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರ…

The post ಸಲ್ಲುನಿಂದ ಕಿಚ್ಚ ಸುದೀಪ್​ಗೆ ಸಿಕ್ಕಿರೋದು ಕೋಟಿ ಬೆಲೆಬಾಳೋ ಉಡುಗೊರೆ  … appeared first on Good News 24x7.

]]>

ಕಿಚ್ಚ ಸುದೀಪ್ ಅವರ 52ನೇ ಹುಟ್ಟುಹಬ್ಬ. ಈ ವೇಳೆ ಒಂದು ಹಳೆಯ ಘಟನೆ ನೆನಪಿಸಿಕೊಳ್ಳೋಣ. ಸಲ್ಮಾನ್ ಖಾನ್ ಅವರು ಸುದೀಪ್ ಅವರಿಗೆ ಐಷಾರಾಮಿ ಕಾರುಗಳು ಮತ್ತು ಜಿಮ್ ಉಪಕರಣಗಳನ್ನು ಉಡುಗೊರೆಯಾಗಿ ನೀಡಿದ್ದರು . ‘ದಬಾಂಗ್ 3’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರ ನಡುವೆ ಬಲವಾದ ಬಾಂಧವ್ಯ ಬೆಳೆದಿದೆ.

ಕಿಚ್ಚ ಸುದೀಪ್ ಅಭಿಮಾನಿಗಳ ವಲಯದಲ್ಲಿ ಇಂದು (ಸೆಪ್ಟೆಂಬರ್ 2) ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಸುದೀಪ್ ಅವರಿಗೆ ಈಗ 52 ವರ್ಷ. ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.  ಅವರು ‘ತಾಯವ್ವ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಹಿಟ್ ಚಿತ್ರ ನೀಡಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿದ್ದರು. ಆಗ ಇಬ್ಬರ ಮಧ್ಯೆ ಒಳ್ಳೆಯ

ಬಾಂಡಿಂಗ್ ಬೆಳೆದಿದೆ. ಸಲ್ಲು ಕಡೆಯಿಂದ ಹಲವು ಗಿಫ್ಟ್​​ಗಳು ಕಿಚ್ಚನಿಗೆ ಸಿಕ್ಕಿದ್ದವು.

ಸುದೀಪ್ ಅವರಿಗೆ ಬಾಲಿವುಡ್ ಹೊಸದಲ್ಲ. 2008ರಲ್ಲಿ ರಿಲೀಸ್ ಆದ ‘ಫೂಂಕ್’ ಚಿತ್ರದ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದರು. ಸಲ್ಮಾನ್ ಖಾನ್ ಅವರ ‘ದಬಂಗ್ 3’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದರು. ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ ಸುದೀಪ್ ಹಾಗೂ ಸಲ್ಲು ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು.

‘ದಂಬಂಗ್ 3’ ಸಿನಿಮಾ 2019ರಲ್ಲಿ ರಿಲೀಸ್ ಆಯಿತು. ನಟ, ಕೊರಿಯೋಗ್ರಾಫರ್ ಪ್ರಭುದೇವ ಅವರು ಈ ಸಿನಿಮಾ ನಿರ್ದೇಶನ ಮಾಡಿದರು. ಈ ಚಿತ್ರದ ಶೂಟ್ ವೇಳೆ ಸುದೀಪ್​​ಗೆ ಸಲ್ಲು ಅವರು ತಮ್ಮ ಫೇವರಿಟ್ ಜಾಕೆಟ್ ನೀಡಿದ್ದರು. ಈ ಜಾಕೆಟ್​ನಲ್ಲಿ ಸಲ್ಲು ಅವರ ಫೇವರಿಟ್ ಶ್ವಾನದ ಚಿತ್ರ ಪ್ರಿಂಟ್ ಇತ್ತು.

ಸುದೀಪ್ ಕಾರು ಪ್ರಿಯರು. ಅವರ ಬಳಿ ವಿಶೇಷ ಕಾರುಗಳ ಸಂಗ್ರಹ ಇದೆ. ಅವರಿಗೆ ಸಲ್ಲು ಬಿಎಂಡಬ್ಲ್ಯೂ ಎಂ 5 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆ ಸಮಯದಲ್ಲಿ ಈ ಕಾರಿನ ಬೆಲೆ 1.7 ಕೋಟಿ ರೂಪಾಯಿ ಇದ್ದವು ಎನ್ನಲಾಗಿದೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.

ಯಾರಿಗೂ ಗೊತ್ತಿರದ ಮತ್ತೊಂದು ವಿಚಾರ ಇದೆ. ಸುದೀಪ್ ಅವರು ಜಿಮ್ ಫ್ರೀಕ್. ನಿತ್ಯ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಈ ಕಾರಣಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳೋ ಜಿಮ್ ಸೆಟ್​ಗಳನ್ನು ಸಲ್ಮಾನ್ ಖಾನ್ ಅವರು ಸುದೀಪ್​ಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಇದನ್ನು ಸುದೀಪ್ ಈಗಲೂ ಕಾಯ್ದುಕೊಂಡು ಬಂದಿದ್ದಾರೆ. ಅವರು ಶೂಟ್​ಗಾಗಿ ಹೊರಗೆ ಇರುವ ವೇಳೆ ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ.

The post ಸಲ್ಲುನಿಂದ ಕಿಚ್ಚ ಸುದೀಪ್​ಗೆ ಸಿಕ್ಕಿರೋದು ಕೋಟಿ ಬೆಲೆಬಾಳೋ ಉಡುಗೊರೆ  … appeared first on Good News 24x7.

]]>
ಅಭಿಮಾನಿಗಳಿಗೆ ‘ಅಮ್ಮನಿಲ್ಲದ ಮೊದಲ ವರ್ಷವಿದು..’ಕಿಚ್ಚ ಭಾವುಕ ಮನವಿ https://www.goodnews24x7.com/this-is-the-first-year-without-a-mother-kicchas-emotional-appeal-to-fans/ Wed, 27 Aug 2025 06:40:47 +0000 https://www.goodnews24x7.com/?p=6784 ಸೆಪ್ಟೆಂಬರ್ 02 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹುಟ್ಟು ಹಬ್ಬ. ಪ್ರತಿ ವರ್ಷದಂತೆ ಈ ವರ್ಷಗಳು ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.…

The post ಅಭಿಮಾನಿಗಳಿಗೆ ‘ಅಮ್ಮನಿಲ್ಲದ ಮೊದಲ ವರ್ಷವಿದು..’ಕಿಚ್ಚ ಭಾವುಕ ಮನವಿ appeared first on Good News 24x7.

]]>

ಸೆಪ್ಟೆಂಬರ್ 02 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹುಟ್ಟು ಹಬ್ಬ. ಪ್ರತಿ ವರ್ಷದಂತೆ ಈ ವರ್ಷಗಳು ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಟ್ವಿಟರ್​ ಖಾತೆಯಲ್ಲಿ ಕಿಚ್ಚ ಸುದೀಪ್ ಭಾವುಕರಾಗಿ​ ಈ ರೀತಿ ಬರೆದುಕೊಂಡಿದ್ದಾರೆ.

ಪ್ರಿಯ ಸ್ನೇಹಿತರೇ..

ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ…! ಸೆಪ್ಟೆಂಬ‌ರ್ ಎರಡರಂದು ನೀವು ನನ್ನನ್ನು ಭೇಟಿಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ. ಆದರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ! ನಿಮ್ಮ ಮೂಲಕವೇ ನನ್ನ ಹುಟ್ಟಬ್ಬ ಹುಟ್ಟಬೇಕು! ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದುಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ; ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಸದಾ ಪ್ರೀತಿ ಇರಲಿ.

ನಿಮ್ಮ ಕಿಚ್ಚ.

ಕಳೆದ ವರ್ಷ ಕಿಚ್ಚ ಸುದೀಪ್​ ಜಯನಗರದ ಎಂಇಎಸ್​ ಗ್ರೌಂಡ್​ನಲ್ಲಿ ಅಭಿಮಾನಿಗಳಿಗಾಗಿಯೇ ಬರ್ತ್​ ಡೇ ಕೇಕ್​ ಕಟಿಂಗ್​ ಹಮ್ಮಿಕೊಂಡಿದ್ದರು. ಹಾಗಾಗಿ ನಾನಾ ಜಿಲ್ಲೆಯಿಂದ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬೆಳಗ್ಗೆ 10 ಗಂಟೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದರು. ಆದ್ರೆ, ಈ ಬಾರಿಯ ಹುಟ್ಟು ಹಬ್ಬಕ್ಕೆ ಮನೆಯ ಬಳಿ ಬರಬೇಡಿ, ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ ಎಂದು ಹೇಳಿದ್ದಾರೆ. ಅಮ್ಮನ ಅಗಲಿಕೆಯ ನೋವಿನಿಂದ ಕಿಚ್ಚ ಸುದೀಪ್​ ಈಗಲೂ ಹೊರ ಬಂದಿಲ್ಲ. ಹೀಗಾಗಿ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

 

The post ಅಭಿಮಾನಿಗಳಿಗೆ ‘ಅಮ್ಮನಿಲ್ಲದ ಮೊದಲ ವರ್ಷವಿದು..’ಕಿಚ್ಚ ಭಾವುಕ ಮನವಿ appeared first on Good News 24x7.

]]>