Kiriti Archives - Good News 24x7 https://www.goodnews24x7.com/tag/kiriti/ Kannada Sat, 05 Jul 2025 11:16:29 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kiriti Archives - Good News 24x7 https://www.goodnews24x7.com/tag/kiriti/ 32 32 ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಜೊತೆ ಕುಣಿದು ಕುಪ್ಪಳಿಸಿದ ಶ್ರೀಲೀಲಾ. https://www.goodnews24x7.com/srileela-dances-with-janardhan-reddys-son-kiriti/ Sat, 05 Jul 2025 11:16:29 +0000 https://www.goodnews24x7.com/?p=4929 ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಕನ್ನಡ ಸೇರಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಲು ರೆಡಿಯಾಗಿದ್ದು, ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಟೀಸರ್ನಲ್ಲೇ ಭರವಸೆ ಮೂಡಿಸಿದ್ದ ಉದಯೋನ್ಮುಖ ನಟ ಈಗ ತಮ್ಮ ಭರ್ಜರಿ ಡ್ಯಾನ್ಸ್…

The post ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಜೊತೆ ಕುಣಿದು ಕುಪ್ಪಳಿಸಿದ ಶ್ರೀಲೀಲಾ. appeared first on Good News 24x7.

]]>

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಕನ್ನಡ ಸೇರಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಲು ರೆಡಿಯಾಗಿದ್ದು, ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಟೀಸರ್ನಲ್ಲೇ ಭರವಸೆ ಮೂಡಿಸಿದ್ದ ಉದಯೋನ್ಮುಖ ನಟ ಈಗ ತಮ್ಮ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದಾರೆ.


ನಾಯಕ-ನಾಯಕಿಯ ಹೈ-ಲೆವೆಲ್ ಎನರ್ಜಿ: ಈ ವೈರಲ್ ವಯ್ಯಾರಿ ಹಾಡಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಿಕ್ಗೆ ಕಿರೀಟಿ ಮತ್ತು ಶ್ರೀಲೀಲಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ಎನರ್ಜಿ ಹೈ-ಲೆವೆಲ್ನಲ್ಲಿದೆ.
ಸಿನಿಮಾ ತಡವಾಗಲು ಕಾರಣ ಇದೇ….: ಚಿತ್ರದ ಮೊದಲ ‘ಲೆಟ್ಸ್ ಲಿವ್ ದಿಸ್ ಮೊಮೆಂಟ್’ ಸಾಂಗ್ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ್ದ ನಾಯಕ ನಟ ಕಿರೀಟಿ, ನಮ್ಮ ಚಿತ್ರಕ್ಕೆ 3 ವರ್ಷ ಹಿಡಿಯಲು ನಾನೇ ಕಾರಣ. ಆ್ಯಕ್ಷನ್ ಸೀನ್ ಸಂದರ್ಭ ನನ್ನ ಬೆನ್ನಿಗೆ ಪೆಟ್ಟು ಬಿದ್ದು ಸರ್ಜರಿಗೆ ಒಳಗಾದೆ. ಹೀಗಾಗಿ 1 ವರ್ಷ ವಿಳಂಬವಾಯಿತು ಎಂದು ತಿಳಿಸಿದ್ದರು.

 

 

ಚಿತ್ರತಂಡದ ಕುರಿತು…

ಈ ಬಹುನಿರೀಕ್ಷಿತ ಚಿತ್ರದಲ್ಲಿ ಕಿರೀಟಿ, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್ಆರ್ಆರ್ ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ.ಸೆಂಥಿಲ್ ಕುಮಾರ್ ಅವರ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿದೆ.

 

‘ವೈರಲ್ ವಯ್ಯಾರಿ’ ಸದ್ದು..

ಕಿರೀಟಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಣ್ಣ ಹಚ್ಚಿರುವ ಚೊಚ್ಚಲ ಚಿತ್ರದ ಟೀಸರ್ ಈಗಾಗಲೇ ಭಾರಿ ಸದ್ದು ಮಾಡಿದೆ. ಇದೀಗ ಸಿನಿಮಾದ ಎರಡನೇ ಹಾಡು ‘ವೈರಲ್ ವಯ್ಯಾರಿ’ ಅನಾವರಣಗೊಂಡಿದ್ದು, ಪ್ರಚಾರ ಜೋರಾಗಿದೆ.

ಜುಲೈ 18ಕ್ಕೆ ಸಿನಿಮಾ ಬಿಡುಗಡೆ: ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಅವರು ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಸೆಟ್ಟೇರಿದ ಸಂದರ್ಭ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ಜುಲೈ 18ಕ್ಕೆ ಕನ್ನಡ, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಈಗಾಗಲೇ ಭಾರತೀಯ ಚಿತ್ರರಂಗದ ಹಿರಿಯರ ಬೆಂಬಲ ಸಿಕ್ಕಿರೋ ಸಿನಿಮಾ ತನ್ನ ಪ್ರಚಾರವನ್ನು ಜೋರಾಗೇ ನಡೆಸುತ್ತಿದೆ. ಸರಿ-ಸುಮಾರು 3 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸಿನಿಮಾ ಇನ್ನೆರಡು ವಾರಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ.

ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾ ವೀಕ್ಷಿಸುವ ಕಾತರ ಹೆಚ್ಚಿಸಿದೆ. ಮಾಸ್ ಜೊತೆಗೆ ಕ್ಲಾಸ್ ಅಂಶಗಳೂ ಈ ಟೀಸರ್ನಲ್ಲಿದೆ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳೂ ಸಿನಿಮಾದಲ್ಲಿದೆ ಎಂಬುದನ್ನು ಚಿತ್ರತಂಡ ಈಗಾಗಲೇ ತಿಳಿಸಿದೆ. ಕಿರೀಟಿ ಉತ್ತಮ ನಟನೆ, ಡ್ಯಾನ್ಸ್, ಫೈಟ್, ಡೈಲಾಗ್ಸ್ ಮೂಲಕ ಬಿಗ್ ಸ್ಕ್ರೀನ್ಗೆ ರಾಯಲ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಚಿತ್ರ ಜುಲೈ 18ಕ್ಕೆ ತೆರೆಕಾಣಲಿದೆ.

The post ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಜೊತೆ ಕುಣಿದು ಕುಪ್ಪಳಿಸಿದ ಶ್ರೀಲೀಲಾ. appeared first on Good News 24x7.

]]>