KMF Archives - Good News 24x7 https://www.goodnews24x7.com/tag/kmf/ Kannada Wed, 29 Apr 2026 10:25:29 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg KMF Archives - Good News 24x7 https://www.goodnews24x7.com/tag/kmf/ 32 32 ತಿರುಪತಿ ಲಡ್ಡು ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪದ ಮೆರುಗು: ಬಮೂಲ್‌ನಿಂದ ಬೃಹತ್ ಸರಬರಾಜು https://www.goodnews24x7.com/tirupati-laddu-prasad-gets-nandini-ghee-again-bulk-supply-from-bamul%e0%b2%a4%e0%b2%bf%e0%b2%b0%e0%b3%81%e0%b2%aa%e0%b2%a4%e0%b2%bf-%e0%b2%b2%e0%b2%a1%e0%b3%8d%e0%b2%a1%e0%b3%81-%e0%b2%aa%e0%b3%8d/ Wed, 29 Apr 2026 10:25:29 +0000 https://www.goodnews24x7.com/?p=9485 ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್) ಹಾಗೂ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ನಡುವೆ ನಂದಿನಿ ತುಪ್ಪ ಪೂರೈಕೆಗಾಗಿ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಅನ್ವಯ, ಮುಂದಿನ ಆರು ತಿಂಗಳ ಅವಧಿಯಲ್ಲಿ ಒಟ್ಟು 2 ಲಕ್ಷ ಕೆಜಿ ತುಪ್ಪವನ್ನು ಪೂರೈಸಲು…

The post ತಿರುಪತಿ ಲಡ್ಡು ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪದ ಮೆರುಗು: ಬಮೂಲ್‌ನಿಂದ ಬೃಹತ್ ಸರಬರಾಜು appeared first on Good News 24x7.

]]>

ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್) ಹಾಗೂ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ನಡುವೆ ನಂದಿನಿ ತುಪ್ಪ ಪೂರೈಕೆಗಾಗಿ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಅನ್ವಯ, ಮುಂದಿನ ಆರು ತಿಂಗಳ ಅವಧಿಯಲ್ಲಿ ಒಟ್ಟು 2 ಲಕ್ಷ ಕೆಜಿ ತುಪ್ಪವನ್ನು ಪೂರೈಸಲು ನಿರ್ಧರಿಸಲಾಗಿದ್ದು, ಪ್ರತಿದಿನ ಸುಮಾರು 11.5 ರಿಂದ 12 ಟನ್‌ಗಳಷ್ಟು ನಂದಿನಿ ತುಪ್ಪ ತಿರುಪತಿಗೆ ರವಾನೆಯಾಗಲಿದೆ. ಬೆಂಗಳೂರು ಡೇರಿ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದ ಡಿ.ಕೆ. ಸುರೇಶ್ ಅವರು, ಸುಮಾರು 136 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ತುಪ್ಪದ ಕಲಬೆರಕೆ ತಡೆಗಟ್ಟಲು ಸಾಗಾಣಿಕೆಯ ವಾಹನಗಳಿಗೆ ಅತ್ಯಾಧುನಿಕ ‘ಡಿಜಿಟಲ್ ಲಾಕ್’ ವ್ಯವಸ್ಥೆಯನ್ನು ಅಳವಡಿಸಿರುವುದು ಈ ಪೂರೈಕೆಯ ವಿಶೇಷತೆಯಾಗಿದೆ.

ವಿಶ್ವಪ್ರಸಿದ್ಧ ತಿರುಪತಿ ಲಡ್ಡುವಿನ ಸ್ವಾದ ಮತ್ತು ಶುದ್ಧತೆಯನ್ನು ಕಾಯ್ದುಕೊಳ್ಳಲು ನಂದಿನಿ ತುಪ್ಪದ ಗುಣಮಟ್ಟವನ್ನೇ ಟಿಟಿಡಿ ನೆಚ್ಚಿಕೊಂಡಿದ್ದು, ಹೆಚ್ಚಿನ ಬೇಡಿಕೆಯನ್ನು ಸಲ್ಲಿಸಿದೆ. ಪ್ರಸ್ತುತ ಕೆಎಂಎಫ್ ದಿನಕ್ಕೆ ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹಿಸುತ್ತಿದ್ದು, ಬಮೂಲ್ ಸಹ ತನ್ನ ಸಂಗ್ರಹಣಾ ಸಾಮರ್ಥ್ಯವನ್ನು 17.5 ಲಕ್ಷದಿಂದ 25-30 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ನಂದಿನಿ ತುಪ್ಪ ಮತ್ತೆ ತಿರುಪತಿ ಲಡ್ಡುವಿನ ಭಾಗವಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು, ರಾಜ್ಯದ ಲಕ್ಷಾಂತರ ಹಾಲು ಉತ್ಪಾದಕರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ತುಂಬಿದೆ.

The post ತಿರುಪತಿ ಲಡ್ಡು ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪದ ಮೆರುಗು: ಬಮೂಲ್‌ನಿಂದ ಬೃಹತ್ ಸರಬರಾಜು appeared first on Good News 24x7.

]]>
ನಮ್ಮ ಮೆಟ್ರೋ ನಿಲ್ದಾಣಗಳಿಗೂ ಬಂತು `ನಂದಿನಿ’ ಪಾರ್ಲರ್… 175ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ ! https://www.goodnews24x7.com/namma-me%e1%b9%adro-nilda%e1%b9%87aga%e1%b8%b7igu-bantu-nandini-parlar-175kku-heccu-utpannaga%e1%b8%b7a-mara%e1%b9%ada-metrobengalurunandinikmf-be%e1%b9%85ga%e1%b8%b7uru-namma/ Tue, 26 Aug 2025 05:32:49 +0000 https://www.goodnews24x7.com/?p=6726 ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇದೀಗ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, 175ಕ್ಕೂ ಅಧಿಕ ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ. ಹೌದು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ನಂದಿನಿ ಪಾರ್ಲರ್‌ಗೆ ಅವಕಾಶ ಕೊಡದೇ ಅಮುಲ್ ಪಾರ್ಲರ್‌ಗಳಿಗೆ ಅವಕಾಶ ಕೊಟ್ಟಿದೆ ಎಂದು ದೊಡ್ಡ…

The post ನಮ್ಮ ಮೆಟ್ರೋ ನಿಲ್ದಾಣಗಳಿಗೂ ಬಂತು `ನಂದಿನಿ’ ಪಾರ್ಲರ್… 175ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ ! appeared first on Good News 24x7.

]]>

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇದೀಗ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, 175ಕ್ಕೂ ಅಧಿಕ ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ.

ಹೌದು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ನಂದಿನಿ ಪಾರ್ಲರ್‌ಗೆ ಅವಕಾಶ ಕೊಡದೇ ಅಮುಲ್ ಪಾರ್ಲರ್‌ಗಳಿಗೆ ಅವಕಾಶ ಕೊಟ್ಟಿದೆ ಎಂದು ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಇದೆಲ್ಲದರ ನಂತರ ಕಡೆಗೂ ನಂದಿನಿ ಪಾರ್ಲರ್‌ಗಳು ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾರಂಭ ಮಾಡಿವೆ.ಇದನ್ನೂ ಓದಿ: ಕರ್ನಾಟಕದ ಗಡಿಯಿಂದ 19 ಕಿ.ಮೀ ದೂರದಲ್ಲಿ ನಿರ್ಮಾಣವಾಗಲಿದೆ ಹೊಸೂರು ವಿಮಾನ ನಿಲ್ದಾಣ!

ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲದೇ ಇದ್ದದ್ದೇ ಇದಕ್ಕೆ ಕಾರಣ ಅನ್ನೋದು ಗೊತ್ತಾಗಿತ್ತು. ಬೆಂಗಳೂರು ಮೆಟ್ರೋ ರೈಲು ನಿಗಮ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ನಂತರ ನಂದಿನಿ ಪಾರ್ಲರ್‌ಗೆ 10 ಕಡೆ ಅವಕಾಶ ಮಾಡಿಕೊಡಲಾಗಿತ್ತು. ಈಗ ಕೊನೆಗೂ ಮೂರು ಕಡೆ ನಂದಿನಿ ಪಾರ್ಲರ್‌ಗಳು ಆರಂಭವಾಗಿದ್ದು, ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.

ಪ್ರಾರಂಭಿಕವಾಗಿ ಮೂರು ಪಾರ್ಲರ್‌ಗಳನ್ನ ಸಿಎಂ, ಕೆಎಂಎಫ್ ಎಂಡಿ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಅವರು ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದರು. ಅದರಂತೆ ಮೆಜೆಸ್ಟಿಕ್, ಕೋಣನಕುಂಟೆ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜು ಬಳಿ ಪ್ರಾರಂಭಗೊಂಡಿವೆ.

ಇನ್ನು ಈ ನಂದಿನಿ ಪಾರ್ಲರ್‌ಗಳಲ್ಲಿ ಸುಮಾರು 175ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳು ದೊರೆಯುತ್ತಿವೆ. ಇದರ ಜೊತೆಗೆ ಹಲವು ಹೊಸ ಉತ್ಪನ್ನಗಳನ್ನೂ ಪರಿಚಯಿಸಲಾಗಿದೆ. ಗೌರಿ-ಗಣೇಶ ಹಬ್ಬ, ದಸರಾ ಹಬ್ಬಗಳಲ್ಲಿ ಹೆಚ್ಚಾಗಿ ನಂದಿನಿ ಉತ್ಪನ್ನ ಬಳಸಿ ನಮ್ಮ ರೈತರಿಗೆ ಪರೋಕ್ಷವಾಗಿ ಸಪೋರ್ಟ್ ಮಾಡಿ ಎಂದು ಕೆಎಂಎಫ್ ಎಂಡಿ ತಿಳಿಸಿದ್ದಾರೆ.

ಇನ್ನುಳಿದ 7 ಪಾರ್ಲರ್‌ಗಳನ್ನು ಆದಷ್ಟು ಬೇಗ ಶುರು ಮಾಡಲು ಸಿದ್ಧತೆತೆಗಳು ನಡೆಯುತ್ತಿದ್ದು, ಇನ್ನಷ್ಟು ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಪ್ರಾರಂಭಿಸಲು ಕೆಎಂಎಫ್ ಜಾಗ ಕೇಳಲು ನಿರ್ಧರಿಸಿದೆ. ಜೊತೆಗೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಪಾರ್ಲರ್ ಶುರು ಮಾಡುವ ಗುರಿಯನ್ನು ಕೆಎಂಎಫ್ ಹೊಂದಿದೆ.ಇದನ್ನೂ ಓದಿ: ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ – ಪೊಲೀಸರಿಂದ ತೀವ್ರ ಶೋಧ

The post ನಮ್ಮ ಮೆಟ್ರೋ ನಿಲ್ದಾಣಗಳಿಗೂ ಬಂತು `ನಂದಿನಿ’ ಪಾರ್ಲರ್… 175ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ ! appeared first on Good News 24x7.

]]>
ಮಾಜಿ ಸಚಿವ ರೇವಣ್ಣ ನಷ್ಟದ ಆತಂಕವನ್ನು ವ್ಯಕ್ತಪಡಿಸಿದ್ದಾರೆ… https://www.goodnews24x7.com/%e0%b2%ae%e0%b2%be%e0%b2%9c%e0%b2%bf-%e0%b2%b8%e0%b2%9a%e0%b2%bf%e0%b2%b5-%e0%b2%b0%e0%b3%87%e0%b2%b5%e0%b2%a3%e0%b3%8d%e0%b2%a3-%e0%b2%a8%e0%b2%b7%e0%b3%8d%e0%b2%9f%e0%b2%a6-%e0%b2%86%e0%b2%a4/ Wed, 02 Apr 2025 12:19:33 +0000 https://www.goodnews24x7.com/?p=3010 ರಾಜ್ಯ ಸರ್ಕಾರವು ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ನಿಂದ ಹಾಲು ಮತ್ತು ಮೊಸರಿನ ದರವನ್ನು ಲೀಟರಿಗೆ 4 ರೂ. ಹೆಚ್ಚಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಸಂಸ್ಥೆಗೆ ಭಾರಿ ನಷ್ಟವಾಗಲಿದ್ದು, ಇದಕ್ಕೆ ಯಾರು ಜವಬ್ಧಾರರು? ಒಕ್ಕೂಟದಲ್ಲಿ ಹಣ ಮುಗಿಯುವರೆಗೂ ಸಿ.ಎಂ ಆದೇಶ ಪಾಲನೆ…

The post ಮಾಜಿ ಸಚಿವ ರೇವಣ್ಣ ನಷ್ಟದ ಆತಂಕವನ್ನು ವ್ಯಕ್ತಪಡಿಸಿದ್ದಾರೆ… appeared first on Good News 24x7.

]]>

ರಾಜ್ಯ ಸರ್ಕಾರವು ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ನಿಂದ ಹಾಲು ಮತ್ತು ಮೊಸರಿನ ದರವನ್ನು ಲೀಟರಿಗೆ 4 ರೂ. ಹೆಚ್ಚಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಸಂಸ್ಥೆಗೆ ಭಾರಿ ನಷ್ಟವಾಗಲಿದ್ದು, ಇದಕ್ಕೆ ಯಾರು ಜವಬ್ಧಾರರು? ಒಕ್ಕೂಟದಲ್ಲಿ ಹಣ ಮುಗಿಯುವರೆಗೂ ಸಿ.ಎಂ ಆದೇಶ ಪಾಲನೆ ಮಾಡಲಾಗುವುದು ಎಂದು ಹಮುಲ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನೆ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದ ಡೈರಿ ವೃತ್ತದ ಬಳಿ ಇರುವ ಹಾಸನ ಹಾಲು ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಲು ಹೆಚ್ಚಿಸಿ ಎಂದು ನಿಮಗೆ ಯಾರು ಕೇಳಿದವರು? ನಮ್ಮ ಒಕ್ಕೂಟದಲ್ಲಿ ಪ್ರತಿದಿನ 12,58,000 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಆದರೆ, ಕೇವಲ 1,98,000ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ಇದರ ಜೊತೆಗೆ 1,2೦,೦೦೦ ಲೀಟರ್ ಮೊಸರು ಮಾರಾಟವಾಗುತ್ತಿದೆ. ಆದರೆ ಸಂಗ್ರಹವಾಗುವ ಹಾಲಿನಲ್ಲಿ ಪ್ರತಿದಿನ 9,40,000 ಲೀಟರ್ ಹಾಲು ಉಳಿಕೆಯಾಗುತ್ತದೆ. ಮಳೆಗಾಲದಲ್ಲಿ ಈ ಪ್ರಮಾಣ 12,೦೦,೦೦೦ ಲೀಟರ್ಗೆ ಏರಿಕೆಯಾಗುತ್ತದೆ. ಇದರಿಂದ ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದರು. ಹಾಸನ ಹಾಲು ಒಕ್ಕೂಟದಲ್ಲಿ ಐದುವರೆಯಿಂದ ಆರು ಕೋಟಿ ರೂ ಹಣವಿದ್ದು, ಈ ದುಡ್ಡು ಮುಗಿಯುವವರೆಗೂ ಮುಖ್ಯಮಂತ್ರಿ ಆದೇಶ ಪಾಲಿಸುತ್ತೇವೆ. ಹಾಲಿನ ಧರದ ವಸ್ತು ಸ್ಥಿತಿ ಏನಿದೆ ನಮ್ಮ ಬೋರ್ಡಿನಲ್ಲಿ ಸಭೆ ಮಾಡಿ ತೀರ್ಮಾನ ಮಾಡಲಾಗಿದೆ. ಈ ಬಗಗೆ ಸರ್ಕಾರಕ್ಕೆ ಪತ್ರ ಬರೆದು ಇಲ್ಲಿನ ಒಕ್ಕೂಟದ ಸ್ಥಿತಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು 4ರೂ. ಹೆಚ್ಚಳ ಮಾಡಲಾಗಿದೆ. ಆದರೆ ಈ ಹೆಚ್ಚಳದಿಂದ ಉಂಟಾಗುವ ನಷ್ಟಕ್ಕೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದರು. 3 ರೂ. ಹೆಚ್ಚಿಸಿ, 2.5 ರೂ. ರೈತರಿಗೆ ನೀಡೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ, 4 ರೂ. ಹೆಚ್ಚಳ ಮಾಡಿದವರು ಯಾರು?” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿದಿನ 36 ಲಕ್ಷ ರೂ. ನಷ್ಟವಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ಮಂತ್ರಿಗಳು ಸೇರಿದಂತೆ, ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈ ರೀತಿ ಮುಂದುವರೆದರೆ ಸಂಸ್ಥೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂಸ್ಥೆಯನ್ನು ಹಾಳು ಮಾಡಬೇಡಿ. ಸರ್ಕಾರ ರೈತರಿಗೆ ಕೇವಲ 2 ತಿಂಗಳು ಹೆಚ್ಚುವರಿ ಹಣ ನೀಡುತ್ತಾರೆ, ನಂತರ ನಿಲ್ಲಿಸುತ್ತಾರೆ. ಮೈಸೂರು 5 ಕೋಟಿ, ಮಂಡ್ಯ 7 ಕೋಟಿ, ಶಿವಮೊಗ್ಗ 4.5 ಕೋಟಿ ನಷ್ಟ ಅನುಭವಿಸುತ್ತಿವೆ ಎಂದು ಅಂಕಿ ಅಂಶ ನೀಡಿದರು. ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭವಲ್ಲ, ಕಟ್ಟಿರುವುದನ್ನು ಉಳಿಸಿಕೊಳ್ಳಬೇಕು ಎಂದು ಅವರು ಈ ಆತಂಕವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು. ನಷ್ಟವಾದರೆ ಯಾರು ಜವಾಬ್ದಾರಿ ಹೊರುತ್ತಾರೆ? ಕೆಎಂಎಫ್ ಅಥವಾ ಸರ್ಕಾರ ನಷ್ಟವನ್ನು ಭರಿಸುತ್ತವೆಯೇ?” ಎಂದು ಅವರು ಪ್ರಶ್ನಿಸಿದರು.ಕೆಲವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿ 4 ರೂಪಾಯಿ ದರ ಹೆಚ್ಚಿಸಲು ಒತ್ತಡ ಹೇರಿದ್ದಾರೆ. ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟದಲ್ಲಿ ಹಾಲು ಮಾರಾಟ ಮಾಡುವುದು ಸಾಧ್ಯವೇ? ಈ ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿ ಹಾಗೂ ಕೆಎಂಎಫ್ಗೆ ಎರಡು ಬಾರಿ ಪತ್ರ ಬರೆದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದೇನೆ ಎಂದು ಮಾಹಿತಿ ನೀಡಿದರು. ಈ ಎಲ್ಲಾ ವಿಷಯಗಳನ್ನು ಆಧರಿಸಿ ಅಂಕಿ ಅಂಶಗಳ ಜೊತೆಗೆ ಮಾಹಿತಿಯನ್ನು ನೀಡಿದರು.

 

The post ಮಾಜಿ ಸಚಿವ ರೇವಣ್ಣ ನಷ್ಟದ ಆತಂಕವನ್ನು ವ್ಯಕ್ತಪಡಿಸಿದ್ದಾರೆ… appeared first on Good News 24x7.

]]>