Kothalavadi Archives - Good News 24x7 https://www.goodnews24x7.com/tag/kothalavadi/ Kannada Tue, 26 Aug 2025 06:28:26 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kothalavadi Archives - Good News 24x7 https://www.goodnews24x7.com/tag/kothalavadi/ 32 32 ಪ್ರೊಡಕ್ಷನ್ಸ್ ಮೂಲಕ ಚಿತ್ರ ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿ ಯಶ್ ತಾಯಿ ಪುಷ್ಪಾ https://www.goodnews24x7.com/yashs-mother-pushpa-enters-the-film-distribution-field-through-productions/ Tue, 26 Aug 2025 06:28:02 +0000 https://www.goodnews24x7.com/?p=6736 ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಮೂಲಕ ಚಿತ್ರ ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಚಿತ್ರ ‘ಘಾಟಿ’ಯ ಕರ್ನಾಟಕ ವಿತರಣೆ ಹಕ್ಕು ಇವರ ಕೈ ಸೇರಿದೆ. ಪ್ರಧಾನ ಚಿತ್ರವಾಗಿರುವುದು ವಿಶೇಷ.…

The post ಪ್ರೊಡಕ್ಷನ್ಸ್ ಮೂಲಕ ಚಿತ್ರ ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿ ಯಶ್ ತಾಯಿ ಪುಷ್ಪಾ appeared first on Good News 24x7.

]]>

ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಮೂಲಕ ಚಿತ್ರ ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಚಿತ್ರ ‘ಘಾಟಿ’ಯ ಕರ್ನಾಟಕ ವಿತರಣೆ ಹಕ್ಕು ಇವರ ಕೈ ಸೇರಿದೆ. ಪ್ರಧಾನ ಚಿತ್ರವಾಗಿರುವುದು ವಿಶೇಷ. ಭವಿಷ್ಯದಲ್ಲಿ ಇನ್ನೂ ಹಲವು ಭಾಷೆಯ ಚಿತ್ರಗಳನ್ನು ವಿತರಿಸುವ ಯೋಜನೆ ಅವರಿಗೆ ಇದೆ.

ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ‘ಕೊತ್ತಲವಾಡಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದ ಮೂಲಕ ಅವರು ನಿರ್ಮಾಪಕಿ ಆಗಿದ್ದಾರೆ. ಈಗ ಪುಷ್ಪಾ ಅರುಣ್​ ಕುಮಾರ್ ಅವರು ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. PA ಪ್ರೊಡಕ್ಷನ್ಸ್ ಮೂಲಕ ಅವರು ಸಿನಿಮಾ ಹಂಚಿಕೆ ಕೂಡ ಆರಂಭಿಸಿದ್ದಾರೆ. ಅದು ಮಹಿಳಾ ಪ್ರಧಾನ ಸಿನಿಮಾ ಮೂಲಕ ಅನ್ನೋದು ಮತ್ತೊಂದು ವಿಶೇಷ. ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಚಿತ್ರವನ್ನು ಪುಷ್ಪಾ ಅವರು ಕನ್ನಡದಲ್ಲಿ ಹಂಚಿಕೆ ಮಾಡಲಿದ್ದಾರೆ.

ಪುಷ್ಪಾ ಅರುಣ್ ಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಸಂದರ್ಶನಗಳನ್ನು ನೀಡಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದಾರೆ. ಈಗ ಅವರು ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ಹಂಚಿಕೆ ಕೂಡ ಮಾಡುತ್ತಿದ್ದಾರೆ. PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪ ಕಂಬೈನ್ಸ್ ಮೂಲಕ ಇಡೀ ರಾಜ್ಯಾದ್ಯಂತ ‘ಘಾಟಿ’ ಸಿನಿಮಾ ಹಂಚಿಕೆ ಮಾಡುತ್ತಿದ್ದಾರೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಇದನ್ನು ರಿಲೀಸ್ ಮಾಡುವ ಆಲೋಚನೆ ಅವರಿಗೆ ಇದೆ.

ಈ ಬಗ್ಗೆ ಪುಷ್ಪಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಫಾಟಿ ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು ಪಿಎ ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ’ ಎಂದು ಪುಷ್ಪಾ ಹೇಳಿದ್ದಾರೆ. ಅವರು ಹೊಸ ಹೆಜ್ಜೆ ಇಟ್ಟಿದ್ದಕ್ಕೆ ಎಲ್ಲರೂ ಶುಭಕೋರುತ್ತಿದ್ದಾರೆ. ‘ಸಿನಿಮಾ ನಿರ್ಮಾಣಕ್ಕೆ ಬಂದಾಗ ಅನೇಕರು ಸಾಕಷ್ಟು ಪ್ರೀತಿ ತೋರಿಸಿದ್ದೀರಿ. ಅದೇ ಪ್ರೀತಿ ವಿತರಿಕಿಯಾದಾಗಲೂ ಇರಲಿ. ನಿಮ್ಮಲ್ಲೆ ಪ್ರೋತ್ಸಾಹ ಬೇಕು’ ಎಂದು ಪುಷ್ಪಾ ಅವರು ಹೇಳಿದ್ದಾರೆ. ಅವರು ಮೊದಲ ಹಂಚಿಕೆಯಲ್ಲಿ ಯಶಸ್ಸು ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

‘ಘಾಟಿ’ ಸಿನಿಮಾ ತೆಲುಗು ಚಿತ್ರ. ಇದನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ, ವಿಕ್ರಮ್ ಪ್ರಭು ನಟಿಸುತ್ತಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆ ಕಾಣಲಿದೆ. ಈ ಚಿತ್ರದ ಬಗ್ಗೆ ಅನುಷ್ಕಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

The post ಪ್ರೊಡಕ್ಷನ್ಸ್ ಮೂಲಕ ಚಿತ್ರ ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿ ಯಶ್ ತಾಯಿ ಪುಷ್ಪಾ appeared first on Good News 24x7.

]]>
ನನ್ನ ಸಿನಿಮಾ ಸೋಲಲು ಅವನೇ ಕಾರಣ ಯಶ್ ತಾಯಿ ಪುಷ್ಪ ದೂರು. https://www.goodnews24x7.com/yashs-mother-pushpa-complains-that-he-is-the-reason-for-my-films-failure/ Sat, 23 Aug 2025 10:29:10 +0000 https://www.goodnews24x7.com/?p=6573 ಯಶ್ ತಾಯಿ: ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪಲತಾ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಅವರ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಯ್ತು. ಇದೀಗ ಯಶ್ ತಾಯಿ ಯೂಟ್ಯೂಬ್…

The post ನನ್ನ ಸಿನಿಮಾ ಸೋಲಲು ಅವನೇ ಕಾರಣ ಯಶ್ ತಾಯಿ ಪುಷ್ಪ ದೂರು. appeared first on Good News 24x7.

]]>

ಯಶ್ ತಾಯಿ: ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪಲತಾ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಅವರ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಯ್ತು. ಇದೀಗ ಯಶ್ ತಾಯಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿಮಾ ಸೋಲಿಗೆ ಖ್ಯಾತ ನಿರ್ಮಾಪಕರೊಬ್ಬರು ಕಾರಣವೆಂದು ಹೆಸರು ಹೇಳಿ ಆರೋಪ ಮಾಡಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ಮಾಪಕಿ ಪುಷ್ಪ, ‘ನಮ್ಮ ಸಿನಿಮಾ ಸೋಲಲು ಜನರು ಕಾರಣ ಅಲ್ಲ, ಬೇರೆ ಕಾರಣ ಇದೆ. ನಮ್ಮ ಸಿನಿಮಾಕ್ಕೆ ಚಿತ್ರಮಂದಿರ ಕೊಡದೆ ತೊಂದರೆ ಮಾಡಲಾಗಿದೆ. ಅದು ಯಾರೂ ಅಲ್ಲ ಕಾರ್ತಿಕ್, ಆ ವ್ಯಕ್ತಿ ತನ್ನ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಇಟ್ಟುಕೊಂಡು ನಮ್ಮ ಸಿನಿಮಾಕ್ಕೆ ಸರಿಯಾಗಿ ಚಿತ್ರಮಂದಿರಗಳನ್ನು ಕೊಡದೆ ತೊಂದರೆ ಕೊಟ್ಟಿದ್ದಾರೆ. ನಾನು ಹೆಸರು ಹೇಳಿಯೇ ಆರೋಪ ಮಾಡುತ್ತೀನಿ’ ಎಂದಿದ್ದಾರೆ. ಆ ಮೂಲಕ ಕೆಆರ್​ಜಿ ನಿರ್ಮಾಣ ಸಂಸ್ಥೆಯ ನಿರ್ಮಾಪಕ ಮತ್ತು ವಿತರಕ ಕಾರ್ತಿಕ್ ಗೌಡ ಮೇಲೆ ನೇರ ಆರೋಪ ಮಾಡಿದ್ದಾರೆ.

 

‘ನಾಳೆ ನನ್ನ ಸಿನಿಮಾಗಳು ಚೆನ್ನಾಗಿ ಹೋದಾಗ ನಾನು ಸಹ ಅವರಿಗೆ ಇದೇ ಕೆಲಸ ಕೊಡುತ್ತೇನೆ. ಅವರು ಮಾಡಿದ್ದು ಸಹಿಸಿಕೊಂಡು ಇರೋಕೆ ಬಂದವಳಲ್ಲ ನಾನು, ನನಗೆ ತಿರುಗಿ ಕೊಡೋದು ಗೊತ್ತು, ಅದೇ ಕೆಲಸವನ್ನು ನಾನು ಮಾಡುತ್ತೇನೆ. ಕಾರ್ತಿಕ್ ಮಾಡಿದ್ದಾನೆ ಎಂಬುದು ನನಗೆ ಗೊತ್ತು, ಅವರ ಹಿಂದೆ ಯಾರೋ ಇದ್ದು ಈ ಕೆಲಸ ಮಾಡಿಸಿದ್ದಾರೆ. ಅದು ಯಾರು ಎಂಬುದು ಸಹ ನನಗೆ ಗೊತ್ತು, ಮುಂದಿನ ದಿನಗಳಲ್ಲಿ ಅವರ ಹೆಸರನ್ನೂ ಸಹ ಮಾಧ್ಯಮಗಳ ಮುಂದೆ ತರುತ್ತೀನಿ’ ಎಂದಿದ್ದಾರೆ ಪುಷ್ಪಲತಾ.‘ಪ್ರಪಂಚ ಗುಂಡಗಿದೆ, ಇಂದು ನನಗೆ ಆಗಿದ್ದು ನಾಳೆ ಅವರಿಗೆ ಆಗಲಿದೆ.

ಯಾರೋ ದುರುದ್ದೇಶದಿಂದಲೇ ಚಿತ್ರಮಂದಿರಗಳ ವಿಷಯದಲ್ಲಿ ನನ್ನನ್ನು ತುಳಿದಿದ್ದಾರೆ ಎಂಬುದು ನನಗೆ ಗೊತ್ತು. ಹಾಗೆಂದು ಹೆದರಿ ನಾನು ಹಿಂದಕ್ಕೆ ಹೋಗುವವಳಲ್ಲ. ನನ್ನನ್ನು ತುಳಿದಷ್ಟೂ ಸಹ ನಾನು ಎದುರು ನಿಂತುಕೊಳ್ಳುತ್ತೀನಿ. ನನ್ನ ಯಾರೂ ಕೆಣಕಬಾರದು, ಕೆಣಕಿದರೆ ನಾನಿನ್ನೂ ಡಬಲ್ ಆಗುತ್ತೀನಿ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಪುಷ್ಪ. ಕೆಆರ್​ಜಿ ಸಂಸ್ಥೆ ನಿರ್ಮಾಣ ಮಾಡಿದ್ದ ‘ಎಕ್ಕ’ ಸಿನಿಮಾ ಜುಲೈ 18ಕ್ಕೆ ಬಿಡುಗಡೆ ಆಗಿತ್ತು. ಅದಾದ ಕೆಲ ದಿನಗಳ ಬಳಿಕ ಪುಷ್ಪ ಅವರ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಈಗ ಪುಷ್ಪ ಅವರ ಆರೋಪವೆಂದರೆ ‘ಎಕ್ಕ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಕಾರಣದಿಂದಾಗಿ ಕಾರ್ತಿಕ್ ಅವರು ‘ಕೊತ್ತಲವಾಡಿ’ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ. ಆರೋಪದ ಬಗ್ಗೆ ಕಾರ್ತಿಕ್ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

The post ನನ್ನ ಸಿನಿಮಾ ಸೋಲಲು ಅವನೇ ಕಾರಣ ಯಶ್ ತಾಯಿ ಪುಷ್ಪ ದೂರು. appeared first on Good News 24x7.

]]>
ಪುಷ್ಪಾಗೆ ಎಚ್ಚರಿಸಿದ ದೀಪಿಕಾ ದಾಸ್. https://www.goodnews24x7.com/pushpas-statement-that-angered-deepika-deepika-das-warned-pushpa/ Sat, 23 Aug 2025 06:31:43 +0000 https://www.goodnews24x7.com/?p=6507 ಪುಷ್ಪಾ ಅವರು ದೀಪಿಕಾ ದಾಸ್ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದೆ. ದೀಪಿಕಾ ಅವರು ಪುಷ್ಪಾ ಅವರ ಕುಟುಂಬದವರೇ ಆದರೂ, ಪುಷ್ಪಾ ಅವರ ಟೀಕೆಗಳಿಗೆ ದೀಪಿಕಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಪುಷ್ಪಾ ಅವರು ದೀಪಿಕಾ ಹೇಳಿಕೆಗೆ ಯಾವ ರೀತಿಯಲ್ಲಿ…

The post ಪುಷ್ಪಾಗೆ ಎಚ್ಚರಿಸಿದ ದೀಪಿಕಾ ದಾಸ್. appeared first on Good News 24x7.

]]>

ಪುಷ್ಪಾ ಅವರು ದೀಪಿಕಾ ದಾಸ್ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದೆ. ದೀಪಿಕಾ ಅವರು ಪುಷ್ಪಾ ಅವರ ಕುಟುಂಬದವರೇ ಆದರೂ, ಪುಷ್ಪಾ ಅವರ ಟೀಕೆಗಳಿಗೆ ದೀಪಿಕಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಪುಷ್ಪಾ ಅವರು ದೀಪಿಕಾ ಹೇಳಿಕೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ಅವರು ‘ಕೊತ್ತಲವಾಡಿ’ ಸಿನಿಮಾ ರಿಲೀಸ್​ಗೂ ಮೊದಲು ಹಾಗೂ ಆ ಬಳಿಕ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಅವರು ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಯಶ್ ಬಗ್ಗೆಯೇ ನಾನಾ ರೀತಿಯ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಪುಷ್ಪಾ ಅವರು ನಟಿ ದೀಪಿಕಾ ದಾಸ್ ಬಗ್ಗೆ ಟೀಕೆ ಮಾಡಿದ್ದರು. ಇದು ದೀಪಿಕಾ ಅವರನ್ನು ಕೆರಳಿಸಿದೆ. ದೀಪಿಕಾ ಈ ಬಗ್ಗೆ ಓಪನ್ ಆಗಿ ಪೋಸ್ಟ್ ಹಾಕಿದ್ದಾರೆ. ದೀಪಿಕಾ ದಾಸ್​ಗೆ ಪುಷ್ಪಾ ಅವರು ದೊಡ್ಡಮ್ಮ ಆಗಬೇಕು. ಪುಷ್ಪಾ ಹಾಗೂ ದೀಪಿಕಾ ದಾಸ್ ತಾಯಿ ಸೋದರಿಯರು. ಹೀಗಾಗಿ, ಸಂಬಂಧದಲ್ಲಿ ಯಶ್ ಹಾಗೂ ದೀಪಿಕಾ ಅಣ್ಣ-ತಂಗಿ. ದೀಪಿಕಾ ಮಾತ್ರ ಎಲ್ಲಿಯೂ ಯಶ್ ನನ್ನ ಅಣ್ಣ ಎಂದು ಹೇಳಿಕೊಂಡು ಓಡಾಡಿಲ್ಲ.

ಪುಷ್ಪಾ ಹೇಳಿದ್ದೇನು? ಇತ್ತೀಚೆಗೆ ಅಶ್ವವೇಗ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡುವಾಗ, ದೀಪಿಕಾಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುಷ್ಪಾ, ಅವರನ್ನು ಹೀಯಾಳಿಸಿದ್ದರು. ‘ದೀಪಿಕಾ ದಾಸ್ ಹಾಗೂ ನಮಗೆ ಆಗಿ ಬರಲ್ಲ. ಅವಳು ಯಾವ ಹೀರೋಯಿನ್ ಅಂತ ಆಯ್ಕೆ ಮಾಡಿಕೊಳ್ಳಬೇಕು? ಅವಳು ಏನು ಸಾಧನೆ ಮಾಡಿದ್ದಾಳೆ? ಅವರನ್ನು ನಾವು ದೂರದಲ್ಲೇ ಇಟ್ಟಿದ್ದೇವೆ’ ಎಂದು ಪುಷ್ಪಾ ಹೇಳಿದ್ದರು. ಟಿವಿ9 ಕನ್ನಡದ ಜೊತೆ ಮಾತನಾಡುವಾಗ, ‘ದೀಪಿಕಾಗೆ ನನ್ನ ಕಂಡರೆ ಭಯ. ಅವಳು ನನ್ನ ಹತ್ತಿರ ಹೆಚ್ಚು ಮಾತನಾಡಲ್ಲ’ ಎಂದಿದ್ದರು.

 

ದೀಪಿಕಾ ದಾಸ್ ಪ್ರತಿಕ್ರಿಯೆ ;ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆ ನಟಿಯಾಗಿ ಗಮನ ಸೆಳೆದಿದ್ದಾರೆ. ಅವರು ‘ನಾಗಿಣಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಸಾಕಷ್ಟು ಗಮನ ಸೆಳೆದರು. ಅಲ್ಲದೆ, ಬಿಗ್ ಬಾಸ್ ​ಶೋಗೆ ಅವರು ಎರಡು ಬಾರಿ ಆಗಮಿಸಿದ್ದರು. ಈ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಅವರು ಈಗ ವಿವಾಹ ಆಗಿ ಸಂಸಾರದ ಕಡೆ ಗಮನ ಹರಿಸಿದ್ದಾರೆ. ಹೀಗಿರುವಾಗಲೇ ದೀಪಿಕಾ ಬಗ್ಗೆ ಪುಷ್ಪಾ ಈ ರೀತಿಯ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರೋ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್‌ ಡ್ಯೂ ರೆಸ್ಪೆಕ್ಟ್ ಸ್ಟಾ‌ರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ದೀಪಿಕಾ ಎಚ್ಚರಿಸಿದ್ದಾರೆ.

The post ಪುಷ್ಪಾಗೆ ಎಚ್ಚರಿಸಿದ ದೀಪಿಕಾ ದಾಸ್. appeared first on Good News 24x7.

]]>