Lakshmi Archives - Good News 24x7 https://www.goodnews24x7.com/tag/lakshmi/ Kannada Sat, 30 Aug 2025 10:03:32 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Lakshmi Archives - Good News 24x7 https://www.goodnews24x7.com/tag/lakshmi/ 32 32 “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. https://www.goodnews24x7.com/let-my-house-be-raided-by-it-lakshmi-niwas-famous-actress-chandana-ananthakrishna/ Sat, 30 Aug 2025 10:03:32 +0000 https://www.goodnews24x7.com/?p=7014 ಬೆಂಗಳೂರು: ಹಾಸ್ಯಮಿಶ್ರಿತವಾಗಿ ಆದರೆ ಗಂಭೀರ ಶ್ರದ್ಧೆಯೊಂದಿಗೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಹಾಗೂ ಗಾಯಕಿ ಚಂದನಾ ಅನಂತಕೃಷ್ಣಾ ಮಾತನಾಡುತ್ತಾ – “ನನ್ನ ಮನೆ ಮೇಲೆ ಐಟಿ (ಇನ್‌ಕಮ್ ಟ್ಯಾಕ್ಸ್) ದಾಳಿ ಆಗಲಿ!” ಎಂದು ಆಶಿಸಿದಿದ್ದಾರೆ! ಸಮೀಪದ ಸಂದರ್ಶನವೊಂದರಲ್ಲಿ, ನಟಿ…

The post “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. appeared first on Good News 24x7.

]]>

ಬೆಂಗಳೂರು: ಹಾಸ್ಯಮಿಶ್ರಿತವಾಗಿ ಆದರೆ ಗಂಭೀರ ಶ್ರದ್ಧೆಯೊಂದಿಗೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಹಾಗೂ ಗಾಯಕಿ ಚಂದನಾ ಅನಂತಕೃಷ್ಣಾ ಮಾತನಾಡುತ್ತಾ – “ನನ್ನ ಮನೆ ಮೇಲೆ ಐಟಿ (ಇನ್‌ಕಮ್ ಟ್ಯಾಕ್ಸ್) ದಾಳಿ ಆಗಲಿ!” ಎಂದು ಆಶಿಸಿದಿದ್ದಾರೆ!

ಸಮೀಪದ ಸಂದರ್ಶನವೊಂದರಲ್ಲಿ, ನಟಿ ಚಂದನಾ ಮಾತನಾಡುತ್ತಾ – “ನಿರಂತರ ಕೆಲಸ ಮಾಡಿ, ದುಡಿದು, ಅಷ್ಟು ಮಟ್ಟಿಗೆ ಅಭಿವೃದ್ಧಿಯಾಗೋಣ ಎಂಬ ಹವಣಿಕೆ ನನ್ನದು. ನಾನು ಎಲ್ಲ ವಾಹಿನಿಗಳಲ್ಲಿಯೂ ಕೆಲಸ ಮಾಡಿರುವೆ. ಏನಂದ್ರೆ, ಐಟಿ ದಾಳಿ ಮಾಡುವಷ್ಟು ಆದಾಯ ಇದ್ದರೆ ಎಷ್ಟು ಚೆನ್ನಾಗಿರುತ್ತದೆ!” ಎಂದು ನಗುಮಾಡಿದ್ದಾರೆ.

ವೈವಾಹಿಕ ಜೀವನಕ್ಕೂ ಹೊಸ ಅಂಗದಾರಂಭ:

ಇತ್ತೀಚೆಗಷ್ಟೇ ಉದ್ಯಮಿ ಪ್ರತ್ಯಕ್ಷ್ ಅವರೊಂದಿಗೆ ವಿವಾಹವಾಗಿರುವ ಚಂದನಾ, ಮದುವೆಯ ನಾಡಿನಲ್ಲೂ ಶೂಟಿಂಗ್‌ ನಿಭಾಯಿಸುತ್ತಾ ತಮ್ಮ ಪಾಠವನ್ನೇ ಸಾಕ್ಷಾತ್ ಮಾಡಿಸಿದ್ದರೂ, ಮದುವೆ ನಂತರ ಪ್ರತ್ಯಕ್ಷ್ ಜೊತೆ ನೀಡಿದ ಸಂದರ್ಶನ ಸದ್ಯ ವೈರಲ್ ಆಗುತ್ತಿದೆ.

ಈ ಸಂದರ್ಶನದಲ್ಲಿ ಅವರು ತಮ್ಮ ಉತ್ಸಾಹಭರಿತ ಮಾತುಗಳ ಮೂಲಕ ‘ಐಟಿ ದಾಳಿ’ಗೆ ಕಾರಣವಾಗಬಹುದಾದಷ್ಟು ಯಶಸ್ಸು ಹೊಂದುದಲೆಂದೇ ಆ ಆಶಯ ಹೊರಹಾಕಿದ್ದಾರೆ.

ಪ್ರತ್ಯಕ್ಷ್ – ಕಲಾವಿದರ ಮನೆತನದ ವರ:

ಚಂದನಾರ ಪತಿ ಪ್ರತ್ಯಕ್ಷ್ ಕಲಾವಿದರ ಮನೆತನದಿಂದ ಬರುವವರು. ಹಿರಿಯ ನಟಿ ಕಾವ್ಯಾಂಜಲಿ ಮತ್ತು ದಿವಂಗತ ನಟ ಉದಯ್ ಕುಮಾರ್ ಅವರ ಪುತ್ರ. ಕಳೆದ ನವೆಂಬರ್ 28ರಂದು ಅವರ ಮದುವೆ ನಡೆದಿತ್ತು. ಅದೇ 29ರಂದು ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಟಿವಿ ಹಾಗೂ ಚಿತ್ರರಂಗದ ಅನೇಕ ಪ್ರಸಿದ್ಧ ಮುಖಗಳು ಈ ಶುಭ ಮೌಕೆಗೆ ಸಾಕ್ಷಿಯಾಗಿದ್ದರು.

ಕಿರುತೆರೆಯ ಹಲವು ಹಂತಗಳಲ್ಲೂ ಚಂದನಾ ದೀಪಾವಳಿ:

ಕಲರ್ಸ್ ಕನ್ನಡದ ‘ರಾಜಾ ರಾಣಿ’ ಧಾರಾವಾಹಿಯಲ್ಲಿ “ಚುಕ್ಕಿ” ಪಾತ್ರದಲ್ಲಿ ಭರತನವ್ಯ ಪಯಣ ಆರಂಭಿಸಿದ ಚಂದನಾ, ಆಮೇಲೆ ಬಿಗ್‌ಬಾಸ್ ಸೀಸನ್ 7ನಲ್ಲಿ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ್ದರು. ನಂತರ ಸಿಂಗಿಂಗ್ ಶೋ ನಿರೂಪಣೆ, ಡ್ಯಾನ್ಸ್ ರಿಯಾಲಿಟಿ ಶೋ ಸೇರಿದಂತೆ ಹಲವು ಫಾರ್ಮ್ಯಾಟ್‌ಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಈ ದಿನಗಳಲ್ಲಿ ಅವರು ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಿನ್ನುಮರಿ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಪಾತ್ರದ ಮೂಲಕ ಮತ್ತೆ ಒಂದು ಬೃಹತ್ ಅಭಿಮಾನಿ ಬಳಗವನ್ನೇ ಗೆದ್ದಿದ್ದಾರೆ.

‘ಲಕ್ಷ್ಮೀ ನಿವಾಸ’ ಸೀರಿಯಲ್‌ನಲ್ಲಿ ಏನಾಗ್ತಿದೆ?

ಈ ಸೀರಿಯಲ್‌ನಲ್ಲಿ ಸೈಕೋ ಜಯಂತ್ ಹಾಗೂ ಚಿನ್ನುಮರಿ ನಡುವೆ ನೂಕುನುಗ್ಗಲು ಗಂಭೀರ ತಿರುವು ಪಡೆಯುತ್ತಿದೆ. ಜಾಹ್ನವಿ-ವಿಶ್ವ ಸಂಬಂಧ, ವಿಜಯ್‌ನ ಅನುಮಾನ, ಲೀಲೆಯ ಕ್ರಿಯಾಶೀಲತೆ – ಇವೆಲ್ಲವೂ ಕಥೆಯ ತೀವ್ರತೆಯನ್ನು ಹೆಚ್ಚಿಸುತ್ತಿವೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 8:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಸಂಗೀತ, ನಟನೆ, ರಿಯಾಲಿಟಿ ಶೋ, ಮತ್ತು ಈಗ ಧಾರಾವಾಹಿಗಳಲ್ಲೂ ಚಂದನಾ ಅನಂತಕೃಷ್ಣಾ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ‘ಐಟಿ ದಾಳಿ ಆಗೋಷ್ಟು ಯಶಸ್ಸು ಬಾರಲಿ’ ಎಂಬ ಅವರ ಮಾತು, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಅವರ ಧೈರ್ಯವಂತಿಕೆ ವ್ಯಕ್ತಪಡಿಸುತ್ತದೆ.

The post “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. appeared first on Good News 24x7.

]]>
ವರಮಹಾಲಕ್ಷ್ಮೀ ವ್ರತಾಚರಣೆಯ ವೇಳೆ ಈ ಕೆಲವು ತಪ್ಪುಗಳು ನಿಮ್ಮಿಂದ ಅಪ್ಪಿತಪ್ಪಿಯೂ ಆಗದಂತೆ ನೋಡಿಕೊಳ್ಳಿ. https://www.goodnews24x7.com/make-sure-you-dont-make-these-mistakes-while-celebrating-varamahalakshmi/ Fri, 08 Aug 2025 06:03:33 +0000 https://www.goodnews24x7.com/?p=5549 ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.…

The post ವರಮಹಾಲಕ್ಷ್ಮೀ ವ್ರತಾಚರಣೆಯ ವೇಳೆ ಈ ಕೆಲವು ತಪ್ಪುಗಳು ನಿಮ್ಮಿಂದ ಅಪ್ಪಿತಪ್ಪಿಯೂ ಆಗದಂತೆ ನೋಡಿಕೊಳ್ಳಿ. appeared first on Good News 24x7.

]]>

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.

ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ. ಹಾಗಾಗಿ ಈ ಕಲಿಯುಗದಲ್ಲಿ ಯಾವುದೇ ಜಾತಿಗಳ ತಾರತಮ್ಯವಿಲ್ಲದೆ ಪೂಜಿಸುವ ಏಕೈಕ ದೇವತೆ ಲಕ್ಷ್ಮಿ ಎಂದರೆ ಅತಿಶಯೋಕ್ತಿಯೇನಲ್ಲ.

https://www.goodnews24x7.com/do-you-know-why-green-bangles-are-given-to-the-elders-on-the-day-of-varamahalakshmi-festival/ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ?

ವರಮಹಾಲಕ್ಷ್ಮಿ ಹಬ್ಬದ ದಿನ ಈ ತಪ್ಪುಗಳು ನಿಮ್ಮಿಂದ ಆಗದಿರಲಿ:

• ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆ ಮಾಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಇಡಬಾರದು.
• ವರಮಹಾಲಕ್ಷ್ಮಿ ಮರದ ಕುರ್ಚಿ ಮೇಲೆ ಕೂರಿಸಿ. ಅಪ್ಪಿತಪ್ಪಿಯೂ ಕಬ್ಬಿಣದ ಕುರ್ಚಿ ಮೇಲೆ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಡಿ.
• ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಹೂವುಗಳು ಹಾಗೂ ಹಣ್ಣುಗಳನ್ನು ಬಳಸಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಡಿ.
• ನೀವೇನಾದ್ರೂ ಕಲಶವಿಟ್ಟು ಪೂಜೆ ಮಾಡುತ್ತೀರಿ ಅಂತಾದರೆ ತ್ರಾಮದ ಕಲಶವನ್ನು ಬಳಸುವುದು ಸೂಕ್ತ. ಪೂಜೆಯ ವೇಳೆ ಮನಸ್ಸು ಶುದ್ಧವಾಗಿರಲಿ, ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
• ಈ ವ್ರತಾಚರಣೆಗೆ ಸಾಲವಾಗಿ ತಂದ ಹಣವನ್ನಾಗಲಿ ಹಾಗೂ ಆಭರಣಗಳನ್ನು ಬಳಸಬೇಡಿ. ಇದರಿಂದ ಲಕ್ಷ್ಮಿ ದೇವಿಯೂ ಮುನಿಸಿಕೊಳ್ಳುತ್ತಾಳೆ. ತುಕ್ಕು ಹಿಡಿದ ಆಭರಣಗಳನ್ನು ಎಂದಿಗೂ ಬಳಸುವುದು ತಪ್ಪಿಸಿ

The post ವರಮಹಾಲಕ್ಷ್ಮೀ ವ್ರತಾಚರಣೆಯ ವೇಳೆ ಈ ಕೆಲವು ತಪ್ಪುಗಳು ನಿಮ್ಮಿಂದ ಅಪ್ಪಿತಪ್ಪಿಯೂ ಆಗದಂತೆ ನೋಡಿಕೊಳ್ಳಿ. appeared first on Good News 24x7.

]]>
ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ? https://www.goodnews24x7.com/do-you-know-why-green-bangles-are-given-to-the-elders-on-the-day-of-varamahalakshmi-festival/ Fri, 08 Aug 2025 05:46:03 +0000 https://www.goodnews24x7.com/?p=5538 ಶ್ರಾವಣ ಮಾಸದಲ್ಲಿ ಆಚರಿಸುವಂತಹ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬವೂ ಒಂದು. ಈ ಹಬ್ಬವನ್ನ ಮುತ್ತೈದೆಯರು ಕೈಗಳಿಗೆ ಹಸಿರು ಗಾಜಿನ ಬಳೆಯನ್ನು ತೊಟ್ಟು ಸಂಭ್ರಮಿಸುತ್ತಾರೆ ಹೀಗೆ ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ? ಹಿಂದೂ ಸಂಪ್ರದಾಯದಲ್ಲಿ ಈ…

The post ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ? appeared first on Good News 24x7.

]]>

ಶ್ರಾವಣ ಮಾಸದಲ್ಲಿ ಆಚರಿಸುವಂತಹ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬವೂ ಒಂದು. ಈ ಹಬ್ಬವನ್ನ ಮುತ್ತೈದೆಯರು ಕೈಗಳಿಗೆ ಹಸಿರು ಗಾಜಿನ ಬಳೆಯನ್ನು ತೊಟ್ಟು ಸಂಭ್ರಮಿಸುತ್ತಾರೆ ಹೀಗೆ ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ?
ಹಿಂದೂ ಸಂಪ್ರದಾಯದಲ್ಲಿ ಈ ದಿನ ಬಹಳ ವಿಶೇಷ ಮಹತ್ವ ನೀಡಲಾಗಿದ್ದು, ಈ ದಿನ ನೀವು ಮಾಡುವ ಈ ಕೆಲವು ತಪ್ಪುಗಳಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ವ್ರತಾಚರಣೆಯ ವೇಳೆ ಈ ಕೆಲವು ತಪ್ಪುಗಳು ನಿಮ್ಮಿಂದ ಅಪ್ಪಿತಪ್ಪಿಯೂ ಆಗದಂತೆ ನೋಡಿಕೊಳ್ಳಿ.

ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರು ಹಸಿರು ಬಳೆಗಳನ್ನು ತೊಡುವುದೇಕೆ:


ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಹಸಿರು ಬಣ್ಣವು ಸಮೃದ್ಧಿ, ಹೊಸ ಆರಂಭ, ಸೌಂದರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೂಚಿಸುವಂತೆ ಹಸಿರು ಗಾಜಿನ ಬಳೆಗಳು ಅದೃಷ್ಟ, ಸಮೃದ್ಧಿ, ಹೊಸ ಆರಂಭ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಅಲ್ಲದೆ ಹಸಿರು ಬಳೆಗಳನ್ನು ಧರಿಸುವುದರಿಂದ ಶಿವ ಪಾರ್ವತಿಯ ಆಶಿರ್ವಾದವೂ ಲಭಿಸುತ್ತದೆ ಎಂದು ನಂಬಲಾಗಿದೆ.
ಇದೇ ಕಾರಣಕ್ಕಾಗಿ ವಿವಾಹಿತ ಮಹಿಳೆಯರು ಹೆಚ್ಚಾಗಿ ಹಸಿರು ಗಾಜಿನ ಬಳೆಯನ್ನೇ ತೊಡುವುದು. ಸೌಭಾಗ್ಯದ ಸಂಕೇತವೆಂದು ಮುತ್ತೈದೆಯರು ಭೀಮನ ಅಮವಾಸ್ಯೆ, ವರಮಹಾಲಕ್ಷ್ಮಿ ಹಬ್ಬದಂದು ಕೈತುಂಬಾ ಹಸಿರು ಬಳೆ ತೊಡುತ್ತಾರೆ. ಮುಖ್ಯವಾಗಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು ಹಸಿರು ಗಾಜಿನ ಬಳೆಯನ್ನು ತೊಡುತ್ತಾರೆ.

 

The post ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ? appeared first on Good News 24x7.

]]>
ವಿಧವೆಯರು ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಮಾಡಬಹುದೇ? ಈ ಬಗ್ಗೆ ಪುರಾಣಗಳು ಏನು ಹೇಳ್ತಾವೆ ಗೊತ್ತಾ.? https://www.goodnews24x7.com/vidhaveyaru-varamahalak%e1%b9%a3mi-vratacara%e1%b9%87eyannu-ma%e1%b8%8dabahude-i-bagge-pura%e1%b9%87aga%e1%b8%b7u-enu-he%e1%b8%b7tave-gotta-varamahalakshmishravana-suryanarayanabhatvaramahalak/ Thu, 07 Aug 2025 12:01:35 +0000 https://www.goodnews24x7.com/?p=5523 ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಈ ಬಾರಿ ಆಗಸ್ಟ್ 8 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಲಕ್ಷ್ಮಿದೇವಿಯ ಅಲಂಕಾರ, ಪೂಜೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಪ್ರಸಾದ ನೀಡುವುದು ಹೀಗೆ ಸುಮಂಗಲಿಯರು ವ್ರತದ ಸಕಲ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷ…

The post ವಿಧವೆಯರು ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಮಾಡಬಹುದೇ? ಈ ಬಗ್ಗೆ ಪುರಾಣಗಳು ಏನು ಹೇಳ್ತಾವೆ ಗೊತ್ತಾ.? appeared first on Good News 24x7.

]]>

ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಈ ಬಾರಿ ಆಗಸ್ಟ್ 8 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಲಕ್ಷ್ಮಿದೇವಿಯ ಅಲಂಕಾರ, ಪೂಜೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಪ್ರಸಾದ ನೀಡುವುದು ಹೀಗೆ ಸುಮಂಗಲಿಯರು ವ್ರತದ ಸಕಲ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ರವಾರ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು, ಈ ಬಾರಿ ಆಗಸ್ಟ್ 8 ರಂದು ಆಚರಿಸಲಾಗುತ್ತಿದೆ.

ಆದರೆ ವಿಧವೆಯರು ವ್ರತಾಚರಣೆ ಮಾಡಬಹುದೇ ಇಂತಹ ಪ್ರಶ್ನೆಯೊಂದು ಎಲ್ಲರ ಮನಸ್ಸಿನಲ್ಲಿ ಇದೆ. ಕೆಲವರು ವಿಧವಾ ಸ್ತೀಯರು ವ್ರತಾಚರಣೆ ಮಾಡುವುದು ತಪ್ಪು ಎಂದರೆ, ಇನ್ನು ಕೆಲವರು ದೇವರನ್ನು ಪೂಜಿಸುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ. ಆದರೆ ಪತಿಯನ್ನು ಕಳೆದುಕೊಂಡ ಸ್ತ್ರಿಯರು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬಹುದೇ? ಎನ್ನುವ ಬಗ್ಗೆ ಮಾಹಿತಿ.

https://www.goodnews24x7.com/operation-sindoor-in-a-saree/ಸೀರೆಯಲ್ಲಿ ಅರಳಿದ ಆಪರೇಶನ್ ಸಿಂಧೂರ.

ಹಿಂದಿನ ಕಾಲದ ಆಚಾರ ವಿಚಾರವನ್ನು ಇವತ್ತಿಗೂ ಪಾಲಿಸಿಕೊಂಡು ಹೋಗುವ ಮನಸ್ಥಿತಿ ಯಾರಿಗೂ ಇಲ್ಲ. ಅಭಿವೃದ್ಧಿಯಾಗುತ್ತಿದ್ದಂತೆ ತಾವು ಪಾಲಿಸಿಕೊಂಡು ಬರುವ ಆಚಾರ ವಿಚಾರಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಅದೆಷ್ಟೋ ಬದಲಾವಣೆಗಳು ಆಗಿವೆ, ಅದು ಸ್ವೀಕಾರಾರ್ಹ. ಹೀಗಾಗಿ ವಿಧವಾ ಸ್ತ್ರೀಯರು ದೈವತಾ ಕಾರ್ಯಗಳಲ್ಲಿ ತೊಡಗಬಾರದು ಎನ್ನುವುದು ಎಲ್ಲಿಯೂ ಇಲ್ಲ. ಒಂದು ಕಾಲಘಟ್ಟದಲ್ಲಿ ವಿಧವೆಯರನ್ನು ಎಲ್ಲದರಿಂದಲೂ ದೂರವಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಧವೆಯವರನ್ನು ಕೆಳಮಟ್ಟದಲ್ಲಿ ಕಾಣುವ ಮನಸ್ಥಿತಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ ವಿಧವಾ ಸ್ತ್ರಿಯರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಳ್ಳುವುದು ತಪ್ಪಲ್ಲ .

ಶ್ರಾವಣ ಮಾಸದ ಕೊನೆಯ ಶುಕ್ರವಾರದ ದಿನ ವರಮಹಾಲಕ್ಷ್ಮಿ ಪೂಜೆ ಮಾಡುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಲಕ್ಷ್ಮಿ ಪೂಜೆ ಮಾಡುವವರಿಗೆ ಅಷ್ಟ ಐಶ್ವರ್ಯವನ್ನು ಲಕ್ಷ್ಮಿ ಅನುಗ್ರಹಿಸುತ್ತಾಳೆ. ಹೀಗಾಗಿ ಹುಡುಗಿಯರು, ಮಕ್ಕಳು, ಸುಮಂಗಲಿಯರು ಹಾಗೂ ವಿಧವಾ ಸ್ತ್ರೀಯರು ಈ ಪೂಜೆಯನ್ನು ಮಾಡಬಹುದು. ಇನ್ನು ಪ್ರತಿಯೊಬ್ಬ ಸ್ತ್ರೀಯರು ಹುಟ್ಟಿದಾಗಿನಿಂದ ಅರಶಿನ, ಕುಂಕುಮ, ಹೂವಿನ ಅಧಿಕಾರವನ್ನು ಪಡೆದುಕೊಂಡಿದ್ದಾಳೆ. ಹೀಗಾಗಿ ವಿಧವೆಯರು ಈ ವ್ರತದಲ್ಲಿ ಭಾಗಿಯಾಗುವುದು, ಅರಶಿನ ಕುಂಕುಮ ಸ್ವೀಕರಿಸುವುದು ತಪ್ಪಲ್ಲ. ಪ್ರತಿಯೊಬ್ಬ ಪೂಜೆಯ ಹಿಂದೆ ಇರುವುದು ಶ್ರದ್ಧಾ ಭಕ್ತಿ ಮಾತ್ರ.

The post ವಿಧವೆಯರು ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಮಾಡಬಹುದೇ? ಈ ಬಗ್ಗೆ ಪುರಾಣಗಳು ಏನು ಹೇಳ್ತಾವೆ ಗೊತ್ತಾ.? appeared first on Good News 24x7.

]]>