language Archives - Good News 24x7 https://www.goodnews24x7.com/tag/language/ Kannada Thu, 05 Jun 2025 11:24:03 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg language Archives - Good News 24x7 https://www.goodnews24x7.com/tag/language/ 32 32 ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. https://www.goodnews24x7.com/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf%e0%b2%97%e0%b2%b0-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%95%e0%b3%8d%e0%b2%95%e0%b3%86-%e0%b2%b8%e0%b2%bf%e0%b2%b2%e0%b3%81%e0%b2%95/ Thu, 05 Jun 2025 11:24:03 +0000 https://www.goodnews24x7.com/?p=4230 ‘ಥಗ್ ಲೈಫ್’ ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು…

The post ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. appeared first on Good News 24x7.

]]>

‘ಥಗ್ ಲೈಫ್’ ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು ಅಂದರೆ ಜೂನ್ 5 ಅಂದರೆ ರಿಲೀಸ್ ಆಗಿದೆ. ಈ ಸಿನಿಮಾನ ನೋಡಲು ಕನ್ನಡಿಗರೂ ಈ ಮೊದಲು ಕಾದಿದ್ದರು. ಆದರೆ, ಕಮಲ್ ಹಾಸನ್ ಅವರು ಯಾವಾಗ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದರೋ ಆ ಕ್ಷಣಕ್ಕೆ ಅವರು ಕನ್ನಡಿಗರ ವಿರೋಧ ಕಟ್ಟಿಕೊಂಡರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಅವಕಾಶ ನೀಡಿಲ್ಲ. ಹೀಗಿರುವಾಗಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ.

‘ಥಗ್ ಲೈಫ್’ ಚಿತ್ರದ ಈವೆಂಟ್ನಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಆ ಬಳಿಕ ಅವರು ಕ್ಷಮೆ ಕೇಳಿಯೇ ಇಲ್ಲ. ಏನೇ ಆದರೂ ನಾನು ಕನ್ನಡಿಗರ ಬಳಿ ಕ್ಷಮೆ ಕೇಳಲ್ಲ, ನಾನು ತಪ್ಪೇ ಮಾಡಿಲ್ಲ ಎಂದು ಧಿಮಾಕು ತೋರಿಸುತ್ತಿದ್ದರು. ಈ ಸಮಯದಲ್ಲಿ ತಮಿಳಿಗರ ಓಲೈಕೆ ಮಾಡಲು ಕೂಡ ಪ್ರಯತ್ನಿಸಿದ್ದರು. ಈಗ ಅವರಿಗೆ ತಮಿಳಿಗರೇ ಪಾಠ ಕಲಿಸಿದ್ದಾರೆ. ‘ಅತಿ ಕೆಟ್ಟ ಸಿನಿಮಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರವು ಈ ಮೊದಲು ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಈಗ ಅನೇಕರು ‘ಥಗ್ ಲೈಫ್’ ನೋಡಿ ‘ಇಂಡಿಯನ್ 2’ ಚಿತ್ರವೇ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದರೆ ‘ಥಗ್ ಲೈಫ್’ ಚಿತ್ರ ಅದೆಷ್ಟು ಕೆಟ್ಟದಾಗಿ ಇರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.‘ಥಗ್ ಲೈಫ್’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕತೆ ಹಾಗೂ ನಿರೂಪಣೆ ಯಾವುದೂ ಉತ್ತಮವಾಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮೊದಲ ದಿನದ ಗಳಿಕೆ ಮೇಲೆ ಈ ವಿಮರ್ಶೆ ಸಾಕಷ್ಟು ಪರಿಣಾಮ ಬೀರಲಿದೆ. ಇನ್ನು, ಕಮಲ್ ಕ್ಷಮೆ ಕೇಳಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆದರೂ ಯಶಸ್ಸು ಕಾಣೋದು ಅನುಮಾನವೇ. ಚಿತ್ರದ ಮುಂದಿನ ಕಲೆಕ್ಷನ್ ಯಾವ ರೀತಿ ಇರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

 

 

The post ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. appeared first on Good News 24x7.

]]>
ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಕ್ಲಾಸ್ ತೆಗೆದುಕೊಂಡ ಕನ್ನಡಿಗರು. https://www.goodnews24x7.com/%e0%b2%a8%e0%b2%bf%e0%b2%b5%e0%b3%87%e0%b2%a6%e0%b2%bf%e0%b2%a4%e0%b2%be-%e0%b2%97%e0%b3%8c%e0%b2%a1%e0%b2%97%e0%b3%86-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%b2%e0%b3%8d%e0%b2%b2/ Tue, 04 Mar 2025 12:00:37 +0000 https://www.goodnews24x7.com/?p=2573 ಇನ್ಸ್ಟಾಗ್ರಾಂ ಸೆಲೆಬ್ರಿಟಿ, ನಟಿ ನಿವೇದಿತಾ ಗೌಡ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ . ಅಲ್ಲದೆ ದಿನಕ್ಕೆ ಒಂದು ಅಥವಾ ಎರಡು ರಿಲ್ಸ್ ಗಳನ್ನು ಆಗಾಗ್ಗೆ ಅಪ್ಡೇಟ್ ಮಾಡ್ತಾ ಇರ್ತಾರೆ. ನಿವೇದಿತಾ ಗೌಡ ಇತ್ತೀಚಿಗಷ್ಟೇ ಗೋವಾದ ಕ್ಯಾಸಿನೋ (ಜೂಜು ಅಡ್ಡೆ)ಕ್ಕೆ…

The post ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಕ್ಲಾಸ್ ತೆಗೆದುಕೊಂಡ ಕನ್ನಡಿಗರು. appeared first on Good News 24x7.

]]>

ಇನ್ಸ್ಟಾಗ್ರಾಂ ಸೆಲೆಬ್ರಿಟಿ, ನಟಿ ನಿವೇದಿತಾ ಗೌಡ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ . ಅಲ್ಲದೆ ದಿನಕ್ಕೆ ಒಂದು ಅಥವಾ ಎರಡು ರಿಲ್ಸ್ ಗಳನ್ನು ಆಗಾಗ್ಗೆ ಅಪ್ಡೇಟ್ ಮಾಡ್ತಾ ಇರ್ತಾರೆ.
ನಿವೇದಿತಾ ಗೌಡ ಇತ್ತೀಚಿಗಷ್ಟೇ ಗೋವಾದ ಕ್ಯಾಸಿನೋ (ಜೂಜು ಅಡ್ಡೆ)ಕ್ಕೆ ಅತಿಥಿಯಾಗಿ ಹೋಗಿದ್ದು, ಅಲ್ಲಿ ತಮ್ಮ ಬಗ್ಗೆ ಇಂಗ್ಲೀಷ್ನಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಕನ್ನಡಿಗರೇ ಹೆಚ್ಚಾಗಿದ್ದ ಕ್ಯಾಸಿನೋ ಕೇಂದ್ರಕ್ಕೆ ಅತಿಥಿಯಾಗಿ ಹೋಗಿದ್ದ ನಿವೇದಿತಾ ಗೌಡ, ಅಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಇಂಗ್ಲೀಷ್ನಲ್ಲಿ ಉತ್ತರಿಸುತ್ತಿದ್ದರು. ಆ ಸಂದರ್ಭದಲ್ಲಿ ಕನ್ನಡ ಮಾತನಾಡದೆ ಇರುವುದರಿಂದ ಕನ್ನಡಿಗರು ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಚುರುಕು ಮುಟ್ಟಿಸಿದ್ದಾರೆ.

ಈ ವೇಳೆ ಅಲ್ಲಿ ಹಾಜರಿದ್ದ ಕನ್ನಡಿಗರು ‘ನಿವೇದಿತಾ ಕನ್ನಡದಲ್ಲಿ ಮಾತನಾಡು’ ಎಂದರು. ಕೂಡಲೇ ಭಾಷೆ ಬದಲಾಯಿಸಿಕೊಂಡ ನಿವೇದಿತಾ ಗೌಡ, ಕನ್ನಡದಲ್ಲಿ ಮಾತನಾಡಿ ಎಲ್ಲರೂ ಹೆಚ್ಚು ಹೆಚ್ಚು ಹಣ ಗೆದ್ದುಕೊಂಡು ಹೋಗಿ ಎಂದು ಶುಭ ಹಾರೈಸಿದರು.

The post ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಕ್ಲಾಸ್ ತೆಗೆದುಕೊಂಡ ಕನ್ನಡಿಗರು. appeared first on Good News 24x7.

]]>