language Archives - Good News 24x7 https://www.goodnews24x7.com/tag/language/ Kannada Thu, 23 Apr 2026 09:40:03 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg language Archives - Good News 24x7 https://www.goodnews24x7.com/tag/language/ 32 32 ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ! https://www.goodnews24x7.com/9383-2karnataka-sslc-result-2026-students-set-records-7-students-get-full-marks/ Thu, 23 Apr 2026 09:40:03 +0000 https://www.goodnews24x7.com/?p=9383 ಬೆಂಗಳೂರು, ಏಪ್ರಿಲ್ 23: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದ್ದು, ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ…

The post ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ! appeared first on Good News 24x7.

]]>

ಬೆಂಗಳೂರು, ಏಪ್ರಿಲ್ 23: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದ್ದು, ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಟಾಪ್‌ 7 ಸಾಧಕರು:
ದಾವಣಗೆರೆಯ ಭರತ್‌, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿಯ ಪ್ರೀತಂ, ವಿಜಯಪುರದ ಸೌಜನ್ಯ ಹಾಗೂ ಬೆಂಗಳೂರು ಉತ್ತರದ ಧನುಷ್‌ ಅವರು ‘ಔಟ್ ಆಫ್ ಔಟ್’ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಜಿಲ್ಲಾವಾರು ಸಾಧನೆ (ಟಾಪ್ 5):
ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳ ಪ್ರಾಬಲ್ಯ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಮೊದಲ ಸ್ಥಾನ ಅಲಂಕರಿಸಿದೆ.

ದಕ್ಷಿಣ ಕನ್ನಡ: ಶೇ. 98.40

ಉಡುಪಿ: ಶೇ. 98.18

ಉತ್ತರ ಕನ್ನಡ: ಶೇ. 98.02

ಹಾಸನ: ಶೇ. 97.51

ಮಂಡ್ಯ: ಶೇ. 97.40

ಗ್ರಾಮೀಣ ಹಾಗೂ ಕಲ್ಯಾಣ ಕರ್ನಾಟಕದ ಪ್ರಗತಿ:
ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ಮಕ್ಕಳೇ ಈ ಬಾರಿ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 92ರಷ್ಟು ಫಲಿತಾಂಶ ದಾಖಲಾಗಿದ್ದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ. 91ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ:
ಶಿಕ್ಷಣ ಮಂಡಳಿಯು ಈ ಬಾರಿ ವಿಶೇಷ ಕ್ರಮ ಕೈಗೊಂಡಿದ್ದು, ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಗಳನ್ನು ‘ಡಿಜಿಲಾಕರ್’ (DigiLocker) ನಲ್ಲಿ ಲಭ್ಯವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ತೃತೀಯ ಭಾಷೆ: ಗ್ರೇಡ್ ಬದಲಿಗೆ ಅಂಕ:
ಈ ವರ್ಷದಿಂದ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ನೀಡಲು ಇಲಾಖೆ ನಿರ್ಧರಿಸಿತ್ತು. ಆದರೆ, ಹೈಕೋರ್ಟ್ ಆದೇಶದಂತೆ ಈ ನಿರ್ಧಾರವನ್ನು ಕೈಬಿಟ್ಟು, ಎಂದಿನಂತೆ ಅಂಕಗಳನ್ನೇ ನೀಡಲಾಗಿದೆ. ಹೀಗಾಗಿ ಒಟ್ಟು 625 ಅಂಕಗಳಿಗೆ ಫಲಿತಾಂಶ ಪ್ರಕಟವಾಗಿದ್ದು, ತೃತೀಯ ಭಾಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

The post ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ! appeared first on Good News 24x7.

]]>
ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ. https://www.goodnews24x7.com/c-t-ravi-strongly-condemned-mallikarjun-kharges-statement-on-prime-minister-modi/ Wed, 22 Apr 2026 09:34:37 +0000 https://www.goodnews24x7.com/?p=9378 ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ. “ಖರ್ಗೆಯವರೇ, ನಿಮ್ಮ ಆರು ದಶಕಗಳ ಸುದೀರ್ಘ ರಾಜಕೀಯ ಅನುಭವಕ್ಕೆ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ. ನಿಮ್ಮ ಇತ್ತೀಚಿನ ವರ್ತನೆಗಳನ್ನು…

The post ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ. appeared first on Good News 24x7.

]]>

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ. “ಖರ್ಗೆಯವರೇ, ನಿಮ್ಮ ಆರು ದಶಕಗಳ ಸುದೀರ್ಘ ರಾಜಕೀಯ ಅನುಭವಕ್ಕೆ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ. ನಿಮ್ಮ ಇತ್ತೀಚಿನ ವರ್ತನೆಗಳನ್ನು ನೋಡಿದರೆ ಜನ ನೀವು ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದೀರಿ ಎಂದು ಭಾವಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದುವರಿದು, “ನಿಜವಾದ ಭಯೋತ್ಪಾದಕರನ್ನು ನಿಮ್ಮ ಪಕ್ಷದ ನಾಯಕರು ‘ಬ್ರದರ್ಸ್’ ಎಂದು ಸಂಬೋಧಿಸುತ್ತಾರೆ, ಆದರೆ ದೇಶದ ಪ್ರಧಾನಿಯನ್ನು ಟೀಕಿಸುವಾಗ ಇಂತಹ ಕೆಳಮಟ್ಟದ ಭಾಷೆ ಬಳಸುತ್ತಿರುವುದು ಖಂಡನೀಯ,” ಎಂದು ಕಿಡಿಕಾರಿದರು.

The post ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ. appeared first on Good News 24x7.

]]>
ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ ಅವರು ಭಾರತವನ್ನು ‘ವಿಶ್ವಗುರು’ ಎಂದು ಕರೆಯುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. https://www.goodnews24x7.com/former-union-minister-murli-manohar-joshi-has-made-a-significant-statement-on-calling-india-a-vishvaguru/ Mon, 20 Apr 2026 12:07:41 +0000 https://www.goodnews24x7.com/?p=9343 ನವದೆಹಲಿಯಲ್ಲಿ ನಡೆದ ಸಂಸ್ಕೃತ ಭಾರತಿಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವು ಸದ್ಯಕ್ಕೆ ‘ವಿಶ್ವಗುರು’ ಅಲ್ಲ ಮತ್ತು ಈ ಪದವನ್ನು ಬಳಸುವುದನ್ನು ನಾವು ತಕ್ಷಣವೇ ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ವಾಸ್ತವವಾಗಿ ನಾವು ಒಂದು ಕಾಲದಲ್ಲಿ ಜಗತ್ತಿಗೆ ಗುರುವಾಗಿದ್ದೆವು ಎನ್ನುವುದು…

The post ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ ಅವರು ಭಾರತವನ್ನು ‘ವಿಶ್ವಗುರು’ ಎಂದು ಕರೆಯುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. appeared first on Good News 24x7.

]]>

ನವದೆಹಲಿಯಲ್ಲಿ ನಡೆದ ಸಂಸ್ಕೃತ ಭಾರತಿಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವು ಸದ್ಯಕ್ಕೆ ‘ವಿಶ್ವಗುರು’ ಅಲ್ಲ ಮತ್ತು ಈ ಪದವನ್ನು ಬಳಸುವುದನ್ನು ನಾವು ತಕ್ಷಣವೇ ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ವಾಸ್ತವವಾಗಿ ನಾವು ಒಂದು ಕಾಲದಲ್ಲಿ ಜಗತ್ತಿಗೆ ಗುರುವಾಗಿದ್ದೆವು ಎನ್ನುವುದು ನಿಜ, ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ನಾವು ಆ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸಬೇಕೇ ಹೊರತು, ಈಗಲೇ ಆ ಪದವನ್ನು ಹಣೆಪಟ್ಟಿ ಮಾಡಿಕೊಳ್ಳುವುದು ಸರಿಯಲ್ಲ” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸ್ಕೃತ ಭಾಷೆಯ ಮಹತ್ವವನ್ನು ಒತ್ತಿ ಹೇಳಿದ ಜೋಶಿ ಅವರು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ಸಂಸ್ಕೃತದ ಬಳಕೆಯನ್ನು ಬೆಂಬಲಿಸಿದರು. ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ಬಲವಾದ ವಾದವನ್ನು ಮಂಡಿಸಿದ ಅವರು, ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ನಾಯಕರು ಈ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳನ್ನು ಸ್ಮರಿಸಿದರು. ಒಟ್ಟಾರೆಯಾಗಿ, ಭಾರತವು ಜಾಗತಿಕ ಮಟ್ಟದಲ್ಲಿ ಜ್ಞಾನದ ಕೇಂದ್ರವಾಗಿ ಹೊರಹೊಮ್ಮಲು ಬರಿ ಪ್ರಚಾರದ ಮಾತುಗಳಿಗಿಂತ ವಾಸ್ತವದ ಶ್ರಮ ಮುಖ್ಯ ಎಂದು ಅವರು ಕಿವಿಮಾತು ಹೇಳಿದ್ದಾರೆ.

The post ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ ಅವರು ಭಾರತವನ್ನು ‘ವಿಶ್ವಗುರು’ ಎಂದು ಕರೆಯುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. appeared first on Good News 24x7.

]]>
ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! https://www.goodnews24x7.com/public-interest-litigation-high-court-imposes-rs-1-lakh-fine-on-petitioners-in-sslc-hindi-language-dispute/ Sat, 11 Apr 2026 09:21:27 +0000 https://www.goodnews24x7.com/?p=9197 ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ,…

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಅವರಿಗೆ ನ್ಯಾಯಪೀಠವು ಒಟ್ಟು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ನ್ಯಾಯಪೀಠದ ಕಠಿಣ ವಿನಾಶ ಮತ್ತು ಅಸಮಾಧಾನ:
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. “ಕೇವಲ ಪತ್ರಿಕಾ ಹೇಳಿಕೆಗಳನ್ನು ಆಧರಿಸಿ ಅವುಗಳನ್ನು ರದ್ದುಗೊಳಿಸಲು ನ್ಯಾಯಾಲಯದ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಲು ಸಾಧ್ಯವಿಲ್ಲ. ಅರ್ಜಿದಾರರು ಸರ್ಕಾರದ ಯಾವುದೇ ಅಧಿಕೃತ ಆದೇಶದ ಪ್ರತಿಗಳನ್ನು ಒದಗಿಸಿಲ್ಲ. ಇದು ನ್ಯಾಯಾಲಯದ ಸಮಯ ವ್ಯರ್ಥ ಮಾಡುವ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ,” ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ದಂಡದ ಮೊತ್ತ ಏರಿಕೆಗೆ ಕಾರಣವೇನು?:
ಆರಂಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿತ್ತು. ಆದರೆ, ವಿಚಾರಣೆ ವೇಳೆ ಅರ್ಜಿದಾರರು ವಾದ ಮುಂದುವರಿಸಿ, “ಹಿಂದಿ ಭಾಷೆಯನ್ನೇ ತೆಗೆದುಹಾಕಲಾಗುತ್ತಿದೆ” ಎಂದು ಸುಳ್ಳು ಅಂಶವನ್ನು ಉಲ್ಲೇಖಿಸಿದರು. ಪತ್ರಿಕಾ ವರದಿಗಳಲ್ಲಿ ಅಂತಹ ಯಾವುದೇ ಅಂಶವಿಲ್ಲದಿದ್ದರೂ, ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ದಂಡದ ಮೊತ್ತವನ್ನು 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿತು.

ದಂಡ ಪಾವತಿಗೆ ಸೂಚನೆ:
ವಿಧಿಸಲಾದ ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಒಂದು ವೇಳೆ ಅರ್ಜಿದಾರರು ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ, ಅದನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಅರ್ಜಿದಾರರ ಆಸ್ತಿಯಿಂದ ವಸೂಲಿ ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>
ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. https://www.goodnews24x7.com/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf%e0%b2%97%e0%b2%b0-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%95%e0%b3%8d%e0%b2%95%e0%b3%86-%e0%b2%b8%e0%b2%bf%e0%b2%b2%e0%b3%81%e0%b2%95/ Thu, 05 Jun 2025 11:24:03 +0000 https://www.goodnews24x7.com/?p=4230 ‘ಥಗ್ ಲೈಫ್’ ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು…

The post ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. appeared first on Good News 24x7.

]]>

‘ಥಗ್ ಲೈಫ್’ ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು ಅಂದರೆ ಜೂನ್ 5 ಅಂದರೆ ರಿಲೀಸ್ ಆಗಿದೆ. ಈ ಸಿನಿಮಾನ ನೋಡಲು ಕನ್ನಡಿಗರೂ ಈ ಮೊದಲು ಕಾದಿದ್ದರು. ಆದರೆ, ಕಮಲ್ ಹಾಸನ್ ಅವರು ಯಾವಾಗ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದರೋ ಆ ಕ್ಷಣಕ್ಕೆ ಅವರು ಕನ್ನಡಿಗರ ವಿರೋಧ ಕಟ್ಟಿಕೊಂಡರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಅವಕಾಶ ನೀಡಿಲ್ಲ. ಹೀಗಿರುವಾಗಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ.

‘ಥಗ್ ಲೈಫ್’ ಚಿತ್ರದ ಈವೆಂಟ್ನಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಆ ಬಳಿಕ ಅವರು ಕ್ಷಮೆ ಕೇಳಿಯೇ ಇಲ್ಲ. ಏನೇ ಆದರೂ ನಾನು ಕನ್ನಡಿಗರ ಬಳಿ ಕ್ಷಮೆ ಕೇಳಲ್ಲ, ನಾನು ತಪ್ಪೇ ಮಾಡಿಲ್ಲ ಎಂದು ಧಿಮಾಕು ತೋರಿಸುತ್ತಿದ್ದರು. ಈ ಸಮಯದಲ್ಲಿ ತಮಿಳಿಗರ ಓಲೈಕೆ ಮಾಡಲು ಕೂಡ ಪ್ರಯತ್ನಿಸಿದ್ದರು. ಈಗ ಅವರಿಗೆ ತಮಿಳಿಗರೇ ಪಾಠ ಕಲಿಸಿದ್ದಾರೆ. ‘ಅತಿ ಕೆಟ್ಟ ಸಿನಿಮಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರವು ಈ ಮೊದಲು ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಈಗ ಅನೇಕರು ‘ಥಗ್ ಲೈಫ್’ ನೋಡಿ ‘ಇಂಡಿಯನ್ 2’ ಚಿತ್ರವೇ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದರೆ ‘ಥಗ್ ಲೈಫ್’ ಚಿತ್ರ ಅದೆಷ್ಟು ಕೆಟ್ಟದಾಗಿ ಇರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.‘ಥಗ್ ಲೈಫ್’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕತೆ ಹಾಗೂ ನಿರೂಪಣೆ ಯಾವುದೂ ಉತ್ತಮವಾಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮೊದಲ ದಿನದ ಗಳಿಕೆ ಮೇಲೆ ಈ ವಿಮರ್ಶೆ ಸಾಕಷ್ಟು ಪರಿಣಾಮ ಬೀರಲಿದೆ. ಇನ್ನು, ಕಮಲ್ ಕ್ಷಮೆ ಕೇಳಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆದರೂ ಯಶಸ್ಸು ಕಾಣೋದು ಅನುಮಾನವೇ. ಚಿತ್ರದ ಮುಂದಿನ ಕಲೆಕ್ಷನ್ ಯಾವ ರೀತಿ ಇರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

 

 

The post ಕನ್ನಡಿಗರ ವಿರೋಧಕ್ಕೆ ಸಿಲುಕಿಕೊಂಡಿದ್ದ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ…. appeared first on Good News 24x7.

]]>
ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಕ್ಲಾಸ್ ತೆಗೆದುಕೊಂಡ ಕನ್ನಡಿಗರು. https://www.goodnews24x7.com/%e0%b2%a8%e0%b2%bf%e0%b2%b5%e0%b3%87%e0%b2%a6%e0%b2%bf%e0%b2%a4%e0%b2%be-%e0%b2%97%e0%b3%8c%e0%b2%a1%e0%b2%97%e0%b3%86-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%b2%e0%b3%8d%e0%b2%b2/ Tue, 04 Mar 2025 12:00:37 +0000 https://www.goodnews24x7.com/?p=2573 ಇನ್ಸ್ಟಾಗ್ರಾಂ ಸೆಲೆಬ್ರಿಟಿ, ನಟಿ ನಿವೇದಿತಾ ಗೌಡ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ . ಅಲ್ಲದೆ ದಿನಕ್ಕೆ ಒಂದು ಅಥವಾ ಎರಡು ರಿಲ್ಸ್ ಗಳನ್ನು ಆಗಾಗ್ಗೆ ಅಪ್ಡೇಟ್ ಮಾಡ್ತಾ ಇರ್ತಾರೆ. ನಿವೇದಿತಾ ಗೌಡ ಇತ್ತೀಚಿಗಷ್ಟೇ ಗೋವಾದ ಕ್ಯಾಸಿನೋ (ಜೂಜು ಅಡ್ಡೆ)ಕ್ಕೆ…

The post ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಕ್ಲಾಸ್ ತೆಗೆದುಕೊಂಡ ಕನ್ನಡಿಗರು. appeared first on Good News 24x7.

]]>

ಇನ್ಸ್ಟಾಗ್ರಾಂ ಸೆಲೆಬ್ರಿಟಿ, ನಟಿ ನಿವೇದಿತಾ ಗೌಡ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ . ಅಲ್ಲದೆ ದಿನಕ್ಕೆ ಒಂದು ಅಥವಾ ಎರಡು ರಿಲ್ಸ್ ಗಳನ್ನು ಆಗಾಗ್ಗೆ ಅಪ್ಡೇಟ್ ಮಾಡ್ತಾ ಇರ್ತಾರೆ.
ನಿವೇದಿತಾ ಗೌಡ ಇತ್ತೀಚಿಗಷ್ಟೇ ಗೋವಾದ ಕ್ಯಾಸಿನೋ (ಜೂಜು ಅಡ್ಡೆ)ಕ್ಕೆ ಅತಿಥಿಯಾಗಿ ಹೋಗಿದ್ದು, ಅಲ್ಲಿ ತಮ್ಮ ಬಗ್ಗೆ ಇಂಗ್ಲೀಷ್ನಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಕನ್ನಡಿಗರೇ ಹೆಚ್ಚಾಗಿದ್ದ ಕ್ಯಾಸಿನೋ ಕೇಂದ್ರಕ್ಕೆ ಅತಿಥಿಯಾಗಿ ಹೋಗಿದ್ದ ನಿವೇದಿತಾ ಗೌಡ, ಅಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಇಂಗ್ಲೀಷ್ನಲ್ಲಿ ಉತ್ತರಿಸುತ್ತಿದ್ದರು. ಆ ಸಂದರ್ಭದಲ್ಲಿ ಕನ್ನಡ ಮಾತನಾಡದೆ ಇರುವುದರಿಂದ ಕನ್ನಡಿಗರು ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಚುರುಕು ಮುಟ್ಟಿಸಿದ್ದಾರೆ.

ಈ ವೇಳೆ ಅಲ್ಲಿ ಹಾಜರಿದ್ದ ಕನ್ನಡಿಗರು ‘ನಿವೇದಿತಾ ಕನ್ನಡದಲ್ಲಿ ಮಾತನಾಡು’ ಎಂದರು. ಕೂಡಲೇ ಭಾಷೆ ಬದಲಾಯಿಸಿಕೊಂಡ ನಿವೇದಿತಾ ಗೌಡ, ಕನ್ನಡದಲ್ಲಿ ಮಾತನಾಡಿ ಎಲ್ಲರೂ ಹೆಚ್ಚು ಹೆಚ್ಚು ಹಣ ಗೆದ್ದುಕೊಂಡು ಹೋಗಿ ಎಂದು ಶುಭ ಹಾರೈಸಿದರು.

The post ನಿವೇದಿತಾ ಗೌಡಗೆ ಕನ್ನಡದಲ್ಲಿ ಮಾತನಾಡಿ ಎಂದು ಕ್ಲಾಸ್ ತೆಗೆದುಕೊಂಡ ಕನ್ನಡಿಗರು. appeared first on Good News 24x7.

]]>