Leicestershire Police Archives - Good News 24x7 https://www.goodnews24x7.com/tag/leicestershire-police/ Kannada Thu, 12 Dec 2024 07:55:03 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Leicestershire Police Archives - Good News 24x7 https://www.goodnews24x7.com/tag/leicestershire-police/ 32 32 ಲಂಡನ್ ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು, ಆಂಧ್ರದ ನಾಲ್ವರಿಗೆ ಗಾಯ! https://www.goodnews24x7.com/%e0%b2%b2%e0%b2%82%e0%b2%a1%e0%b2%a8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%b5%e0%b2%bf%e0%b2%a6%e0%b3%8d%e0%b2%af/ Thu, 12 Dec 2024 07:55:03 +0000 https://www.goodnews24x7.com/?p=1078 ಲಂಡನ್ : ರಸ್ತೆ ಅಪಘಾತದಲ್ಲಿ 30 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪೂರ್ವ ಇಂಗ್ಲೆಂಡ್ನ ಲೀಸೆಸ್ಟರ್ಶೈರ್‌ನಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಹಾಗೂ ಮೃತ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು…

The post ಲಂಡನ್ ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು, ಆಂಧ್ರದ ನಾಲ್ವರಿಗೆ ಗಾಯ! appeared first on Good News 24x7.

]]>

ಲಂಡನ್ : ರಸ್ತೆ ಅಪಘಾತದಲ್ಲಿ 30 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪೂರ್ವ ಇಂಗ್ಲೆಂಡ್ನ ಲೀಸೆಸ್ಟರ್ಶೈರ್‌ನಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಹಾಗೂ ಮೃತ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಚಿರಂಜೀವಿ ಪಾಂಗುಲೂರಿ(30) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈತನೊಂದಿಗಿದ್ದ ಸಹ ಸವಾರರಾದ ಓರ್ವ ಮಹಿಳೆ, ಇಬ್ಬರು ಪುರುಷರು ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾಯಕಾರಿ ಚಾಲನೆ ಘಟನೆಗೆ ಕಾರಣವಾಗಿದ್ದು, 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ, ಆತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಇವರೆಲ್ಲರೂ ಬೂದು ಬಣ್ಣದ ಮಜ್ದಾ 3 ತಮುರಾ ಕಾರಿನಲ್ಲಿ ಕೌಂಟಿಯಿಂದ ಲೀಸೆಸ್ಟರ್ಶೈರ್‌ನಿಂದ ಮಾರ್ಕೆಟ್ ಹಾರ್ಬರೋ ಕಡೆಗೆ ಪ್ರಯಾಣಿಸುತ್ತಿದ್ದರು ಹಾಗೂ ಘಟನೆ ನಡೆದಾಗ ಡ್ಯಾಶ್ ಕ್ಯಾಮ್ನಲ್ಲಿ ಯಾವುದಾದರೂ ದೃಶ್ಯಗಳುನ ಸೆರೆಯಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಲೀಸೆಸ್ಟರ್‌ಶೈರ್ ಪೊಲೀಸರ ಹೇಳಿಕೆ ತಿಳಿಸಿದೆ.

The post ಲಂಡನ್ ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು, ಆಂಧ್ರದ ನಾಲ್ವರಿಗೆ ಗಾಯ! appeared first on Good News 24x7.

]]>