life Archives - Good News 24x7 https://www.goodnews24x7.com/tag/life/ Kannada Wed, 15 Oct 2025 11:23:17 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg life Archives - Good News 24x7 https://www.goodnews24x7.com/tag/life/ 32 32 ಈ ರೀತಿಯ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! https://www.goodnews24x7.com/a-friend-like-this-is-more-dangerous-than-an-enemy/ Wed, 15 Oct 2025 11:23:17 +0000 https://www.goodnews24x7.com/?p=7727 ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿನಂತೆ ಯಾವಾಗಲೂ ಒಳ್ಳೆಯ ವ್ಯಕ್ತಿಗಳ ಸ್ನೇಹವನ್ನೇ ಮಾಡಬೇಕು. ಆದರೆ ನಾವು ಜೀವನದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರನ್ನೂ ಭೇಟಿಯಾಗುತ್ತೇವೆ. ಇದರಲ್ಲಿ ತಪ್ಪು ವ್ಯಕ್ತಿಗಳ ಸ್ನೇಹವನ್ನು ಮಾಡಿದರೆ ನಿಮ್ಮ ಜೀವನವೇ ನಾಶವಾಗುತ್ತದೆ, ನೀವು ಎಂದಿಗೂ ಯಶಸ್ವಿಯಾಗಲು…

The post ಈ ರೀತಿಯ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! appeared first on Good News 24x7.

]]>

ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿನಂತೆ ಯಾವಾಗಲೂ ಒಳ್ಳೆಯ ವ್ಯಕ್ತಿಗಳ ಸ್ನೇಹವನ್ನೇ ಮಾಡಬೇಕು. ಆದರೆ ನಾವು ಜೀವನದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರನ್ನೂ ಭೇಟಿಯಾಗುತ್ತೇವೆ. ಇದರಲ್ಲಿ ತಪ್ಪು ವ್ಯಕ್ತಿಗಳ ಸ್ನೇಹವನ್ನು ಮಾಡಿದರೆ ನಿಮ್ಮ ಜೀವನವೇ ನಾಶವಾಗುತ್ತದೆ, ನೀವು ಎಂದಿಗೂ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯ. ಹಾಗಿದ್ರೆ ನಕಲಿ ಸ್ನೇಹಿತನನ್ನು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಸ್ನೇಹ ಎನ್ನುವುದು ಸುಂದರ ಬಂಧ ಮಾತ್ರವಲ್ಲ, ಭರವಸೆ, ನಂಬಿಕೆಯೂ ಹೌದು. ಆದರೆ ಸ್ನೇಹಿತರನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಾವು ಬಹಳಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಒಬ್ಬ ಉತ್ತಮ ಸ್ನೇಹಿತನಿಂದ ನಮ್ಮ ಜೀವನ ಬೆಳಗುವಂತೆ, ಒಬ್ಬ ನಕಲಿ, ದುಷ್ಟ ಸ್ನೇಹಿತನ ಕಾರಣದಿಂದ ನಮ್ಮ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಒಬ್ಬ ನಕಲಿ ಸ್ನೇಹಿತ 100 ಶತ್ರುಗಳಿಗೆ ಸಮ.

ಇವರು ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದು ಮಾತ್ರವಲ್ಲದೆ, ನಿಮ್ಮ ನಂಬಿಕೆಗೆ, ಬೆನ್ನಿಗೆ ಚೂರಿ ಹಾಕುತ್ತಾರೆ. ಇಂತಹವರ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹೀಗಿರುವಾಗ ನಕಲಿ ಸ್ನೇಹಿತನನ್ನು ಗುರುತಿಸುವುದು ಹೇಗೆ, ಒಬ್ಬ ಉತ್ತಮ ಸ್ನೇಹಿತ ಹೇಗಿರುತ್ತಾನೆ ಎಂಬುದನ್ನು ತಿಳಿಯುವುದು ಬಹಳ ಅವಶ್ಯಕ.

ಚಾಣಕ್ಯ ನೀತಿಯ ಪ್ರಕಾರ, ನಿಜವಾದ ಸ್ನೇಹಿತ ಯಾರು?
ನಿಮ್ಮಒಳ್ಳೆಯ ಸಮಯದಲ್ಲಿ ಮಾತ್ರ ನಿಮ್ಮನ್ನು ಬೆಂಬಲಿಸುವ ಮತ್ತು ನಿಮ್ಮ ಕೆಟ್ಟ ಸಮಯದಲ್ಲಿ ನಿಮ್ಮ ಜೊತೆಯಲ್ಲಿ ನಿಲ್ಲದವನು ಎಂದಿಗೂ ಉತ್ತಮ ಸ್ನೇಹಿತನಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ನಿಜವಾದ ಸ್ನೇಹಿತ ಎಂದರೆ ನಿಮ್ಮ ಸಂತೋಷ ಮಾತ್ರವಲ್ಲದೆ ದುಃಖದ ಸಮಯದಲ್ಲೂ ನಿಮ್ಮ ಹೆಗಲಾಗಿ ನಿಲ್ಲುವವನು. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವನು, ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡದವನು.

ನಕಲಿ ಸ್ನೇಹಿತರನ್ನು ಗುರುತಿಸುವುದು ಹೇಗೆ?
ಆಚಾರ್ಯ ಚಾಣಕ್ಯ ಹೇಳುತ್ತಾರೆ, “ಶತ್ರುಚ್ಛಾಯ ಮಿತ್ರತಾ ಭವತಿ ವಿನಾಶಾಯ.” ಅಂದರೆ, ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣುವ ಆದರೆ ಆಳವಾಗಿ ಅಸೂಯೆ ಪಡುವ ಸ್ನೇಹಿತರು ನಿಮ್ಮ ವಿನಾಶಕ್ಕೆ ಕಾರಣ. ನಕಲಿ ಸ್ನೇಹಿತರು ನಿಮ್ಮ ಪ್ರಗತಿಯನ್ನು ನೋಡಿ ಅಸೂಯೆ ಪಡುತ್ತಾರೆ, ನಿಮ್ಮ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಂಡು ಇತರರ ಮುಂದೆ ನಿಮ್ಮ ಘನತೆಯನ್ನು ಹಾಳು ಮಾಡುತ್ತಾರೆ. ಮುಖ್ಯವಾಗಿ ನಿಮಗೆ ಕಷ್ಟ ಅಂತ ಬಂದಾಗ, ನಿಮ್ಮ ಸಹಾಯಕ್ಕೆ ನಿಲ್ಲದೆ ಅಲ್ಲಿಂದ ಓಡಿ ಹೋಗುತ್ತಾರೆ. ಇಂತಹ ವ್ಯಕ್ತಿಗಳು ಭೂವಿಗೆ ಭಾರವಂತೆ.

ನಕಲಿ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ:
ಇಂತಹ ನಕಲಿ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಶತ್ರುಗಳು ಎದುರು ನಿಂತು ದಾಳಿ ಮಾಡುತ್ತಾರೆ, ಆದರೆ ನಕಲಿ ಸ್ನೇಹಿತರು ಬೆನ್ನ ಹಿಂದೆ ಚೂರಿ ಹಾಕಿ, ಮನಸ್ಸಿಗೆ ಘಾಸಿ ಮಾಡುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ನಕಲಿ ಸ್ನೇಹಿತರು ಗುಪ್ತ ಶತ್ರು ಇದ್ದಂತೆ. ಇವರುಗಳು ಯಾವತ್ತಿಗೂ ಅಪಾಯಕಾರಿ. ಇವರಿಗೆ ದೌರ್ಬಲ್ಯಗಳೇನು ಎಂಬುದೆಲ್ಲಾ ತಿಳಿದುರುತ್ತದೆ. ಮತ್ತು ಇವರು ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ನಕಲಿ ಸ್ನೇಹಿತನಿಗಿಂತ ಅಪಾಯಕಾರಿ ಯಾರೂ ಇಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ನಕಲಿ ಸ್ನೇಹಿತರು ಹೇಗಿರುತ್ತಾರೆ?
ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುತ್ತಾರೆ.
ನಿಮ್ಮ ತಪ್ಪುಗಳನ್ನು ಸರಿಪಡಿಸುವ ಬದಲು ಅದನ್ನು ಎಲ್ಲರ ಮುಂದೆ ಆಡಿಕೊಳ್ಳುತ್ತಾರೆ. ನಿಮ್ಮ ರಹಸ್ಯಗಳನ್ನು, ನಿಮ್ಮ ದೌರ್ಬಲ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ.
ಮುಖ್ಯವಾಗಿ ನಿಮಗೆ ಕಷ್ಟ ಅಂತ ಬಂದಾಗ ನಿಮ್ಮ ಜೊತೆ ಅವರು ನಿಲ್ಲುವುದಿಲ್ಲ, ಏನಾದರೊಂದು ಕಾರಣ ಕೊಟ್ಟು ಓಡಿ ಹೋಗುತ್ತಾರೆ. ನಿಮ್ಮ ಮುಂದೆ ಸಿಹಿ ಮಾತುಗಳನ್ನಾಡಿ, ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ.

ಆದ್ದರಿಂದ ಯಾವಾಗಲೂ ಬುದ್ಧಿವಂತ ಮತ್ತು ನಿಮ್ಮ ಒಳ್ಳೆಯದನ್ನು ಬಯಸುವ ಸ್ನೇಹಿತರನ್ನು ಮಾತ್ರ ಆರಿಸಿ. ಎಂದಿಗೂ ಮೂರ್ಖರು ಅಥವಾ ಸ್ವಾರ್ಥಿಗಳ ಸ್ನೇಹವನ್ನು ಮಾಡದಿರಿ. ನಿಮ್ಮ ಮುಂದೆ ನಗುವ ಪ್ರತಿಯೊಂದು ಮುಖವೂ ವಿಶ್ವಾಸಾರ್ಹವಲ್ಲ, ಸ್ನೇಹಿತರನ್ನು ಮಾಡಿಕೊಳ್ಳುವಾಗ ಯಾವಾಗಲೂ ಎಚ್ಚರಿಕೆ ವಹಿಸಿ ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.

The post ಈ ರೀತಿಯ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! appeared first on Good News 24x7.

]]>
ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ https://www.goodnews24x7.com/wife-attacked-for-not-making-chicken-soup-husband-goes-to-jail-after-losing-wife/ Sun, 14 Sep 2025 11:04:58 +0000 https://www.goodnews24x7.com/?p=7541 ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್​ ಲೇವೆಲ್​​​ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ…

The post ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ appeared first on Good News 24x7.

]]>

ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್​ ಲೇವೆಲ್​​​ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ.

ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ ಕಳೆದುಕೊಂಡಿದ್ದಾಳೆ. ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿ ನದಿಗೆ ಎಸೆದು ಬಂದಿದ್ದ. ಕಳೆದ ಆಗಸ್ಟ್​​ನಲ್ಲಿಯೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಆಗಿದ್ದೇನು..?
ರೀನಾ ಎಂಬ 21 ವರ್ಷದ ಹುಡುಗಿ ನಿಗಮ್ ಎಂಬಾತನ ಮದುವೆ ಆಗಿದ್ದಳು. ಕಳೆದ ಆಗಸ್ಟ್ 21 ರಂದು ನಿಗಮ್ ಮನೆಗೆ ಮದ್ಯ ಸೇವಿಸಿ ಬಂದಿದ್ದ. ಬರುವಾಗ ಚಿಕನ್ ತೆಗೆದುಕೊಂಡು ಬಂದಿದ್ದ. ಚಿಕನ್ ತಂದಿದ್ದ ಆತ, ಪತ್ನಿ ಕೋಳಿ ಸಾರು ಮಾಡುತ್ತಾಳೆ ಅಂದುಕೊಂಡಿದ್ದ. ಆದರೆ ಆಕೆ, ಮುಂಚೆಯೇ ಸಾಂಬರ್​​ಗೆ ತಯಾರಿ ಮಾಡಿದ್ದರಿಂದ ತರಕಾರಿ ಸಾರು ಮಾಡಿದ್ದಳು. ಇದರಿಂದ ಕೋಪಿಸಿಕೊಂಡು ಆತ, ರೀನಾ ಮೇಲೆ ಹಲ್ಲೆ ಮಾಡಿದ್ದಾನೆ.
ಗಂಡನ ಹಲ್ಲೆಯಿಂದ ಮನನೊಂದ ರೀನಾ ದುಡುಕಿ ನಿರ್ಧಾರಕ್ಕೆ ಬಂದು ನೇಣು ಬಿಗಿದುಕೊಂಡಿದ್ದಾಳೆ. ಹೆಂಡತಿ ಮೃತಪಟ್ಟಿರೋದು ಗೊತ್ತಾಗುತ್ತಿದ್ದಂತೆಯೇ ನಿಗಮ್ ಭಯಭೀತನಾದ. ನಂತರ ಸಂಬಂಧಿಕರ ಸಹಾಯದಿಂದ ರೀನಾಳ ಮೃತ ದೇಹವನ್ನು ಗಂಗಾ ನದಿಗೆ ಎಸೆದು ಬಂದಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ.

ತನಿಖೆಯಲ್ಲಿ ಸತ್ಯ ಬಯಲು
ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮಿಸ್ಸಿಂಗ್ ಕೇಸ್ ದಾಖಲಾಗುತ್ತಿದ್ದಂತೆಯೇ ರೀನಾಳ ಕುಟುಂಬಸ್ಥರು ನಿಗಮ್ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳ ಕೇಸ್ ದಾಖಲಿಸಿದ್ದರು. ನಂತರ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ.

The post ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ appeared first on Good News 24x7.

]]>
“ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. https://www.goodnews24x7.com/let-my-house-be-raided-by-it-lakshmi-niwas-famous-actress-chandana-ananthakrishna/ Sat, 30 Aug 2025 10:03:32 +0000 https://www.goodnews24x7.com/?p=7014 ಬೆಂಗಳೂರು: ಹಾಸ್ಯಮಿಶ್ರಿತವಾಗಿ ಆದರೆ ಗಂಭೀರ ಶ್ರದ್ಧೆಯೊಂದಿಗೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಹಾಗೂ ಗಾಯಕಿ ಚಂದನಾ ಅನಂತಕೃಷ್ಣಾ ಮಾತನಾಡುತ್ತಾ – “ನನ್ನ ಮನೆ ಮೇಲೆ ಐಟಿ (ಇನ್‌ಕಮ್ ಟ್ಯಾಕ್ಸ್) ದಾಳಿ ಆಗಲಿ!” ಎಂದು ಆಶಿಸಿದಿದ್ದಾರೆ! ಸಮೀಪದ ಸಂದರ್ಶನವೊಂದರಲ್ಲಿ, ನಟಿ…

The post “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. appeared first on Good News 24x7.

]]>

ಬೆಂಗಳೂರು: ಹಾಸ್ಯಮಿಶ್ರಿತವಾಗಿ ಆದರೆ ಗಂಭೀರ ಶ್ರದ್ಧೆಯೊಂದಿಗೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಹಾಗೂ ಗಾಯಕಿ ಚಂದನಾ ಅನಂತಕೃಷ್ಣಾ ಮಾತನಾಡುತ್ತಾ – “ನನ್ನ ಮನೆ ಮೇಲೆ ಐಟಿ (ಇನ್‌ಕಮ್ ಟ್ಯಾಕ್ಸ್) ದಾಳಿ ಆಗಲಿ!” ಎಂದು ಆಶಿಸಿದಿದ್ದಾರೆ!

ಸಮೀಪದ ಸಂದರ್ಶನವೊಂದರಲ್ಲಿ, ನಟಿ ಚಂದನಾ ಮಾತನಾಡುತ್ತಾ – “ನಿರಂತರ ಕೆಲಸ ಮಾಡಿ, ದುಡಿದು, ಅಷ್ಟು ಮಟ್ಟಿಗೆ ಅಭಿವೃದ್ಧಿಯಾಗೋಣ ಎಂಬ ಹವಣಿಕೆ ನನ್ನದು. ನಾನು ಎಲ್ಲ ವಾಹಿನಿಗಳಲ್ಲಿಯೂ ಕೆಲಸ ಮಾಡಿರುವೆ. ಏನಂದ್ರೆ, ಐಟಿ ದಾಳಿ ಮಾಡುವಷ್ಟು ಆದಾಯ ಇದ್ದರೆ ಎಷ್ಟು ಚೆನ್ನಾಗಿರುತ್ತದೆ!” ಎಂದು ನಗುಮಾಡಿದ್ದಾರೆ.

ವೈವಾಹಿಕ ಜೀವನಕ್ಕೂ ಹೊಸ ಅಂಗದಾರಂಭ:

ಇತ್ತೀಚೆಗಷ್ಟೇ ಉದ್ಯಮಿ ಪ್ರತ್ಯಕ್ಷ್ ಅವರೊಂದಿಗೆ ವಿವಾಹವಾಗಿರುವ ಚಂದನಾ, ಮದುವೆಯ ನಾಡಿನಲ್ಲೂ ಶೂಟಿಂಗ್‌ ನಿಭಾಯಿಸುತ್ತಾ ತಮ್ಮ ಪಾಠವನ್ನೇ ಸಾಕ್ಷಾತ್ ಮಾಡಿಸಿದ್ದರೂ, ಮದುವೆ ನಂತರ ಪ್ರತ್ಯಕ್ಷ್ ಜೊತೆ ನೀಡಿದ ಸಂದರ್ಶನ ಸದ್ಯ ವೈರಲ್ ಆಗುತ್ತಿದೆ.

ಈ ಸಂದರ್ಶನದಲ್ಲಿ ಅವರು ತಮ್ಮ ಉತ್ಸಾಹಭರಿತ ಮಾತುಗಳ ಮೂಲಕ ‘ಐಟಿ ದಾಳಿ’ಗೆ ಕಾರಣವಾಗಬಹುದಾದಷ್ಟು ಯಶಸ್ಸು ಹೊಂದುದಲೆಂದೇ ಆ ಆಶಯ ಹೊರಹಾಕಿದ್ದಾರೆ.

ಪ್ರತ್ಯಕ್ಷ್ – ಕಲಾವಿದರ ಮನೆತನದ ವರ:

ಚಂದನಾರ ಪತಿ ಪ್ರತ್ಯಕ್ಷ್ ಕಲಾವಿದರ ಮನೆತನದಿಂದ ಬರುವವರು. ಹಿರಿಯ ನಟಿ ಕಾವ್ಯಾಂಜಲಿ ಮತ್ತು ದಿವಂಗತ ನಟ ಉದಯ್ ಕುಮಾರ್ ಅವರ ಪುತ್ರ. ಕಳೆದ ನವೆಂಬರ್ 28ರಂದು ಅವರ ಮದುವೆ ನಡೆದಿತ್ತು. ಅದೇ 29ರಂದು ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಟಿವಿ ಹಾಗೂ ಚಿತ್ರರಂಗದ ಅನೇಕ ಪ್ರಸಿದ್ಧ ಮುಖಗಳು ಈ ಶುಭ ಮೌಕೆಗೆ ಸಾಕ್ಷಿಯಾಗಿದ್ದರು.

ಕಿರುತೆರೆಯ ಹಲವು ಹಂತಗಳಲ್ಲೂ ಚಂದನಾ ದೀಪಾವಳಿ:

ಕಲರ್ಸ್ ಕನ್ನಡದ ‘ರಾಜಾ ರಾಣಿ’ ಧಾರಾವಾಹಿಯಲ್ಲಿ “ಚುಕ್ಕಿ” ಪಾತ್ರದಲ್ಲಿ ಭರತನವ್ಯ ಪಯಣ ಆರಂಭಿಸಿದ ಚಂದನಾ, ಆಮೇಲೆ ಬಿಗ್‌ಬಾಸ್ ಸೀಸನ್ 7ನಲ್ಲಿ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ್ದರು. ನಂತರ ಸಿಂಗಿಂಗ್ ಶೋ ನಿರೂಪಣೆ, ಡ್ಯಾನ್ಸ್ ರಿಯಾಲಿಟಿ ಶೋ ಸೇರಿದಂತೆ ಹಲವು ಫಾರ್ಮ್ಯಾಟ್‌ಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಈ ದಿನಗಳಲ್ಲಿ ಅವರು ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಿನ್ನುಮರಿ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಪಾತ್ರದ ಮೂಲಕ ಮತ್ತೆ ಒಂದು ಬೃಹತ್ ಅಭಿಮಾನಿ ಬಳಗವನ್ನೇ ಗೆದ್ದಿದ್ದಾರೆ.

‘ಲಕ್ಷ್ಮೀ ನಿವಾಸ’ ಸೀರಿಯಲ್‌ನಲ್ಲಿ ಏನಾಗ್ತಿದೆ?

ಈ ಸೀರಿಯಲ್‌ನಲ್ಲಿ ಸೈಕೋ ಜಯಂತ್ ಹಾಗೂ ಚಿನ್ನುಮರಿ ನಡುವೆ ನೂಕುನುಗ್ಗಲು ಗಂಭೀರ ತಿರುವು ಪಡೆಯುತ್ತಿದೆ. ಜಾಹ್ನವಿ-ವಿಶ್ವ ಸಂಬಂಧ, ವಿಜಯ್‌ನ ಅನುಮಾನ, ಲೀಲೆಯ ಕ್ರಿಯಾಶೀಲತೆ – ಇವೆಲ್ಲವೂ ಕಥೆಯ ತೀವ್ರತೆಯನ್ನು ಹೆಚ್ಚಿಸುತ್ತಿವೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 8:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಸಂಗೀತ, ನಟನೆ, ರಿಯಾಲಿಟಿ ಶೋ, ಮತ್ತು ಈಗ ಧಾರಾವಾಹಿಗಳಲ್ಲೂ ಚಂದನಾ ಅನಂತಕೃಷ್ಣಾ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ‘ಐಟಿ ದಾಳಿ ಆಗೋಷ್ಟು ಯಶಸ್ಸು ಬಾರಲಿ’ ಎಂಬ ಅವರ ಮಾತು, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಅವರ ಧೈರ್ಯವಂತಿಕೆ ವ್ಯಕ್ತಪಡಿಸುತ್ತದೆ.

The post “ನನ್ನ ಮನೆ ಮೇಲೆ ಐಟಿ ದಾಳಿ ಆಗಲಿ!” – ‘ಲಕ್ಷ್ಮೀ ನಿವಾಸ’ ಖ್ಯಾತ ನಟಿ ಚಂದನಾ ಅನಂತಕೃಷ್ಣಾ. appeared first on Good News 24x7.

]]>
ಬೆಂಗಳೂರಲ್ಲಿ ಬೆಳಗಿನ ಜಾವ ಬೆಂಕಿಯ ಕೆನ್ನಾಲಿಗೆಗೆ ನಾಲ್ವರು ಬಲಿಯಾಗಿರುವ ಶಂಕೆ. https://www.goodnews24x7.com/be%e1%b8%b7agina-java-ghora-duranta-be%e1%b9%85ga%e1%b8%b7urallibe%e1%b9%85kige-nalvaru-baliyagiruva-sa%e1%b9%85ke-bengalurulifebrokeoutdead-be%e1%b9%85ga%e1%b8%b7uru-nagarat-pe%e1%b9%adeyallibe/ Sat, 16 Aug 2025 05:20:59 +0000 https://www.goodnews24x7.com/?p=6160 ನಗರತ್ ಪೇಟೆಯಲ್ಲಿಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ ಘೋರ ದುರಂತ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಪ್ರಾಣ ಕಳೆದುಕೊಂಡಿರೋದು ದೃಢಪಟ್ಟಿದ್ದು, ಇನ್ನೂ ಮೂವರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಮದನ್ ಸಿಂಗ್ ಎಂಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.…

The post ಬೆಂಗಳೂರಲ್ಲಿ ಬೆಳಗಿನ ಜಾವ ಬೆಂಕಿಯ ಕೆನ್ನಾಲಿಗೆಗೆ ನಾಲ್ವರು ಬಲಿಯಾಗಿರುವ ಶಂಕೆ. appeared first on Good News 24x7.

]]>

ನಗರತ್ ಪೇಟೆಯಲ್ಲಿಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ ಘೋರ ದುರಂತ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಪ್ರಾಣ ಕಳೆದುಕೊಂಡಿರೋದು ದೃಢಪಟ್ಟಿದ್ದು, ಇನ್ನೂ ಮೂವರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಅನುಮಾನ ವ್ಯಕ್ತವಾಗಿದೆ.

ಕೊಡಗಿನಲ್ಲೂ ವಿಶ್ವ ಆನೆ ದಿನಾಚರಣೆ ಸಂಭ್ರಮ.

ಮದನ್ ಸಿಂಗ್ ಎಂಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಪತಿ, ಪತ್ನಿ ಸೇರಿ ಇಬ್ಬರು ಮಕ್ಕಳಿದ್ದರು ಎಂಬ ಮಾಹಿತಿ ಇದೆ. 8 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದರು. ಉಳಿದ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಜಸ್ಥಾನ ಮೂಲದ ಮದನ್ ಸಿಂಗ್ ಎಂಬಾತ, ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಈ ಪ್ಲಾಸ್ಟಿಕ್ ಮ್ಯಾಟ್ ಮಳಿಗೆಗಳನ್ನು ನೋಡಿಕೊಳ್ತಿದ್ದರು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿ ಸೇರಿ ಎರಡು ಮಹಡಿಯಲ್ಲಿ ಪ್ಲಾಸ್ಟಿಕ್​ ಗೋಡಾನ್ ಇತ್ತು. ಮೂರನೇ ಮಹಡಿಯಲ್ಲಿ ಇವರ ಕುಟುಂಬ ವಾಸವಿತ್ತು. ನಾಲ್ಕನೇ ಮಹಡಿಯಲ್ಲಿ ಚಿಕ್ಕದಾದ ರೂಮ್ ಇದ್ದ ಬಗ್ಗೆ ಮಾಹಿತಿ ಇದೆ.

The post ಬೆಂಗಳೂರಲ್ಲಿ ಬೆಳಗಿನ ಜಾವ ಬೆಂಕಿಯ ಕೆನ್ನಾಲಿಗೆಗೆ ನಾಲ್ವರು ಬಲಿಯಾಗಿರುವ ಶಂಕೆ. appeared first on Good News 24x7.

]]>