lifestyle Archives - Good News 24x7 https://www.goodnews24x7.com/tag/lifestyle/ Kannada Sun, 31 Aug 2025 05:06:30 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg lifestyle Archives - Good News 24x7 https://www.goodnews24x7.com/tag/lifestyle/ 32 32 ಹಾರ್ದಿಕ್ ಪಾಂಡ್ಯ ನಡೆ ವಿರಾಟ್ ಕೋಹ್ಲಿಯ ರೀತಿಯಲ್ಲಿಯೇ …! https://www.goodnews24x7.com/hardik-pandya-moves-in-the-same-way-as-virat-kohli-7087-2/ Sun, 31 Aug 2025 05:06:30 +0000 https://www.goodnews24x7.com/?p=7087 ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ಲೋಕದ ಕ್ರಿಕೆಟರ್​. ಆತನ ಬ್ಯಾಟಿಂಗ್, ಅಗ್ರೆಷನ್​.. ಅಟಿಟ್ಯೂಡ್​ ಎಲ್ಲಕ್ಕೂ ಫ್ಯಾನ್ಸ್​ ಇದ್ದಾರೆ. ಇದೇ ಕಾರಣಕ್ಕೆ ವಿರಾಟ್ ಆಫ್​ ದಿ ಫೀಲ್ಡ್​ನಲ್ಲೂ ನಂ.1 ಕ್ರಿಕೆಟರ್ ಆಗಿ ಮಿಂಚುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಸಾಲಿನಲ್ಲೇ ಹಾರ್ದಿಕ್ ಪಾಂಡ್ಯ ಸಾಗ್ತಿದ್ದಾರೆ.…

The post ಹಾರ್ದಿಕ್ ಪಾಂಡ್ಯ ನಡೆ ವಿರಾಟ್ ಕೋಹ್ಲಿಯ ರೀತಿಯಲ್ಲಿಯೇ …! appeared first on Good News 24x7.

]]>

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ಲೋಕದ ಕ್ರಿಕೆಟರ್​. ಆತನ ಬ್ಯಾಟಿಂಗ್, ಅಗ್ರೆಷನ್​.. ಅಟಿಟ್ಯೂಡ್​ ಎಲ್ಲಕ್ಕೂ ಫ್ಯಾನ್ಸ್​ ಇದ್ದಾರೆ. ಇದೇ ಕಾರಣಕ್ಕೆ ವಿರಾಟ್ ಆಫ್​ ದಿ ಫೀಲ್ಡ್​ನಲ್ಲೂ ನಂ.1 ಕ್ರಿಕೆಟರ್ ಆಗಿ ಮಿಂಚುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಸಾಲಿನಲ್ಲೇ ಹಾರ್ದಿಕ್ ಪಾಂಡ್ಯ ಸಾಗ್ತಿದ್ದಾರೆ.

 

ಇನ್​​ಸ್ಟಾದಲ್ಲಿ ಪಾಂಡ್ಯಗೆ 42.5 ಮಿಲಿಯನ್ ಫಾಲೋವರ್ಸ್​!
ಟೀಮ್ ಇಂಡಿಯಾ ಕ್ರಿಕೆಟರ್​ಗಳ ಪೈಕಿ ವಿರಾಟ್, ಇನ್​ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ರೆ, ರೋಹಿತ್ ಶರ್ಮಾ 44.1 ಮಿಲಿಯನ್ ಫಾಲೋವರ್​​ಗಳನ್ನ ಹೊಂದಿದ್ದಾರೆ. ರೋಹಿತ್​ ಶರ್ಮಾಗಿಂತ ಹಾರ್ದಿಕ್, 2.4 ಮಿಲಿಯನ್ ಫಾಲೋವರ್​​ಗಳನ್ನು ಕಡಿಮೆ ಹೊಂದಿದ್ದಾರೆ. ಹೀಗಾದ್ರೂ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಒನ್ ಆಫ್ ದಿ ಟಾಪ್ INFLUENCER ಪಾಂಡ್ಯ.. ಇಂಟ್ರೆಸ್ಟಿಂಗ್ ಅಂದ್ರೆ, ಸೋಶಿಯಲ್ ಮೀಡಿಯಾ ಮಾರ್ಕೆಂಟಿಂಗ್​ನಲ್ಲಿ ರೋಹಿತ್ ಶರ್ಮಾರನ್ನೇ ಮೀರಿಸಿರುವ ಪಾಂಡ್ಯ, ವಿರಾಟ್ ಕೊಹ್ಲಿ ನಂತರದ ಸ್ಥಾನ ಕಬ್ಜಾ ಮಾಡಿದ್ದಾರೆ.

ಯುವಕರಿಗೆ ಹಾರ್ದಿಕ್ ಪಾಂಡ್ಯನೇ ರೋಲ್ ಮಾಡೆಲ್
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. ಗ್ರೇಟೆಸ್ಟ್ ಕ್ರಿಕೆಟರ್ಸ್​. ಅತಿ ಹೆಚ್ಚು ಫಾಲೋವರ್​​ಗಳನ್ನು ಹೊಂದಿದ್ದಾರೆ. ರೋಹಿತ್​ ಶರ್ಮಾಗೆ ಹೋಲಿಕೆ ಮಾಡಿದ್ರೆ ಹಾರ್ದಿಕ್​ ಪಾಂಡ್ಯರ ಲೈಫ್ ಸ್ಟ್ರೈಲ್​, ಫಿಟ್ನೆಸ್, ಫ್ಯಾಷನ್​​​​​​​​ ಯುವಕರಿಗೆ ಅಚ್ಚುಮೆಚ್ಚು. ಪ್ರತಿಷ್ಠಿತ ಕಂಪನಿಗಳ ಬಹುತೇಕ ಟಾರ್ಗೆಟ್​ ಯುವಕರು. ಹೀಗಾಗಿ ಯುವಕರನ್ನೇ ಟಾರ್ಗೆಟ್ ಮಾಡುವ ಕಂಪನಿಗಳಿಗೆ ಹಾರ್ದಿಕ್ ಪಾಂಡ್ಯನೇ ಬೆಸ್ಟ್ ಚಾಯ್ಸ್​. ಹಾರ್ದಿಕ್ ಪಾಂಡ್ಯ ರಾಯಭಾರಿ ಕಂಪನಿಗಳು ವೃದ್ಧಿ ಶೇಖಡ 25ರಷ್ಟಿದೆ.

 

ಪಾಂಡ್ಯ ಇನ್​ಸ್ಟಾ ಪೋಸ್ಟ್​ ಬೆಲೆ 80 ಲಕ್ಷಕ್ಕೂ ಅಧಿಕ
ಹಲವು ಬ್ರಾಂಡ್​ಗಳ ರಾಯಭಾರಿಯಾಗಿರುವ ಹಾರ್ದಿಕ್ ಪಾಂಡ್ಯ, ಇನ್​ಸ್ಟಾದಲ್ಲಿ ಬ್ರ್ಯಾಂಡ್ ಪ್ರಮೋಷನ್ ಪೋಸ್ಟ್​ಗೆ 80 ಲಕ್ಷಕ್ಕೂ ಅಧಿಕ ಚಾರ್ಜ್ ಮಾಡ್ತಾರೆ. ಪ್ರಮುಖವಾಗಿ ಆಟೋ ಮೊಬೈಲ್ಸ್​, ಕಾರು, ಮೊಬೈಲ್ಸ್​, ಹೆಲ್ತ್​, ಫಿಟ್ನೆಸ್, ಇ-ಕಾಮರ್ಸ್​, ವಿಡಿಯೋ ಗೇಮ್ಸ್​​ಗಳನ್ನ ಪ್ರಮೋಟ್ ಮಾಡುವ ಹಾರ್ದಿಕ್, ಇನ್​​ಸ್ಟಾ ಡಿಜಿಟಲ್ ಮಾರ್ಕೆಟಿಂಗ್​ನಿಂದಲೇ 15 ಕೋಟಿಗೂ ಅಧಿಕ ಆದಾಯ ಗಳಿಸ್ತಾರೆ.

 

ಒಂದು ಶೂಟ್​ಗೆ 2.5 ಕೋಟಿ
ಪ್ರತಿಷ್ಠಿತ ಕಂಪನಿಗಳ ರಾಯಭಾರಿಯಾಗಿರುವ ಹಾರ್ದಿಕ್​, ಸದ್ಯ 20 ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬ್ರ್ಯಾಂಡ್​ಗಳ ಒಂದೊಂದು ಶೂಟ್​ಗೆ ಬರೋಬ್ಬರಿ 2.5 ಕೋಟಿ ಚಾರ್ಜ್​ ಮಾಡ್ತಾರಂತೆ. ವರ್ಷದಿಂದ ವರ್ಷಕ್ಕೆ ಖ್ಯಾತಿಯ ಜೊತೆಗೆ ಹಾರ್ದಿಕ್ ಆದಾಯವೂ ದುಪ್ಪಟ್ಟಾಗ್ತಿದೆ. 2022ರಲ್ಲಿ 34.8 ಮಿಲಿಯನ್​ ಇದ್ದ ಬ್ರ್ಯಾಂಡ್​ ವ್ಯಾಲ್ಯೂ, 2023ರಲ್ಲಿ 38.4 ಮಿಲಿಯನ್​ಗೆ ಏರಿಕೆಯಾಗಿತ್ತು. 2024ರ ಅಂತ್ಯಕ್ಕೆ 40 ಮಿಲಿಯನ್​ ಬ್ರ್ಯಾಂಡ್ ವಾಲ್ಯೂ ಹೊಂದಿದ್ದ ಹಾರ್ದಿಕ್, ಈ ವರ್ಷ ಮತ್ತಷ್ಟು ಗಳಿಸೋದು ಗ್ಯಾರಂಟಿ.

 

ಆನ್​ಫೀಲ್ಡ್​ನಲ್ಲಿ ಬ್ಯಾಟಿಂಗ್, ಬೌಲಿಂಗ್​ನಿಂದ ಗಮನ ಸೆಳೆಯುವ ಹಾರ್ದಿಕ್ ಪಾಂಡ್ಯ, ಈಗ ವಿರಾಟ್ ಕೊಹ್ಲಿ ನಂತರದ ಟಾಪ್ ಮೋಸ್ಟ್​ ಆಗಿರುವುದು ಹಾರ್ದಿಕ್ ಕ್ರೇಜ್​​ಗೆ ಬೆಸ್ಟ್ ಎಕ್ಸಾಂಪಲ್​ ಅನ್ನೋದ್ರಲ್ಲಿ ಡೌಟಿಲ್ಲ.

The post ಹಾರ್ದಿಕ್ ಪಾಂಡ್ಯ ನಡೆ ವಿರಾಟ್ ಕೋಹ್ಲಿಯ ರೀತಿಯಲ್ಲಿಯೇ …! appeared first on Good News 24x7.

]]>
ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ:ಡಿಹೆಚ್​ಓ ಸ್ಪೋಟಕ ಹೇಳಿಕೆ …. https://www.goodnews24x7.com/%e0%b2%b9%e0%b2%be%e0%b2%b8%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-2-%e0%b2%b5%e0%b2%b0%e0%b3%8d%e0%b2%b7%e0%b2%a6%e0%b2%b2%e0%b3%8d%e0%b2%b2%e0%b2%bf-507-%e0%b2%9c%e0%b2%a8%e0%b2%b0/ Mon, 23 Jun 2025 11:07:44 +0000 https://www.goodnews24x7.com/?p=4632 ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರು…

The post ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ:ಡಿಹೆಚ್​ಓ ಸ್ಪೋಟಕ ಹೇಳಿಕೆ …. appeared first on Good News 24x7.

]]>

ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ದುಶ್ಚಟ, ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹೃದಯಘಾತ ಸಂಭವಿಸುತ್ತಿವೆ ಎಂದು ಹಾಸನ ಡಿಹೆಚ್​ ಓ ಕಾರಣ ತಿಳಿಸಿದ್ದಾರೆ.

ಇನ್ನು ಈ ಸರಣಿ ಹೃದಯಾಘಾತ ಪ್ರಕರಣಗಳ ಬಗ್ಗೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಅನಿಲ್ ಪ್ರತಿಕ್ರಿಯಿಸಿದ್ದು, ಯುವ ಜನರಲ್ಲಿ ಹೆಚ್ಚುತ್ತಿರುವ ದುಶ್ಚಟ, ಅಸಮತೊಲನದ ಅಹಾರ ಸೇವನೆ, ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹೃದಯಾಘಾತ ತಡೆಗೆ ಸಂಸದರ ನೇತೃತ್ವದಲ್ಲಿ ಎಲ್ಲಾ ಅರೋಗ್ಯ ಅದಿಕಾರಿಗಳ ಸಭೆ ನಡೆಸಲಾಗಿದ್ದು, ಹೃದಯಾಘಾತ ತಡೆಗೆ ಅರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಮಾಡಲು ಸಿದ್ದತೆ ನಡೆಸಲಾಗಿದೆ. ಅರೋಗ್ಯ ಕಾರ್ಯಕರ್ತೆ ಯರು ಮೂಲಕ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ಮಾಡಲಾಗುತ್ತೆ. ಶಾಲೆ ಕಾಲೇಜುಗಳಲ್ಲಿ ಕೂಡ ಹೃದಯ ಅರೋಗ್ಯ ದ ತಪಾಸಣೆ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನ ಮಾಡಲಾಗಿದೆ. ಹೃದಯಾಘಾತಗಳ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಬದಲಾಗಿ ನಿಯಮಿತವಾಗಿ ಅರೋಗ್ಯ ತಪಾಸಣೆ, ಉತ್ತಮ ಅರೋಗ್ಯ ಶೈಲಿ ರೂಪಿಸಿಕೊಂಡು ಅರೋಗ್ಯವಾಗಿರಲು ಮನವಿ ಮಾಡಿದ್ದಾರೆ.

 

The post ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ:ಡಿಹೆಚ್​ಓ ಸ್ಪೋಟಕ ಹೇಳಿಕೆ …. appeared first on Good News 24x7.

]]>