lion Archives - Good News 24x7 https://www.goodnews24x7.com/tag/lion/ Kannada Sun, 08 Jun 2025 10:05:53 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg lion Archives - Good News 24x7 https://www.goodnews24x7.com/tag/lion/ 32 32 ಯಮನ ರೀತಿಯಲ್ಲಿ ಫುಟ್ಪಾತ್ ಗೆ ವಿಸಿಟ್ ಕೊಟ್ಟ ಸಿಂಹ…. https://www.goodnews24x7.com/%e0%b2%af%e0%b2%ae%e0%b2%a8-%e0%b2%b0%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ab%e0%b3%81%e0%b2%9f%e0%b3%8d%e0%b2%aa%e0%b2%be%e0%b2%a4%e0%b3%8d-%e0%b2%97/ Sun, 08 Jun 2025 10:05:53 +0000 https://www.goodnews24x7.com/?p=4279 ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳನ್ನು ನೋಡಿದಾಗ ಎದೆಯಲ್ಲಿ ನಡುಕ ಉಂಟಾಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲಿ ಸಿಂಹವೊಂದು ನಡೆದುಕೊಂಡು ಹೋಗಿದ್ದು ಈ ದೃಶ್ಯವು ಎಂತಹವರ ಎದೆಯನ್ನು…

The post ಯಮನ ರೀತಿಯಲ್ಲಿ ಫುಟ್ಪಾತ್ ಗೆ ವಿಸಿಟ್ ಕೊಟ್ಟ ಸಿಂಹ…. appeared first on Good News 24x7.

]]>

ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳನ್ನು ನೋಡಿದಾಗ ಎದೆಯಲ್ಲಿ ನಡುಕ ಉಂಟಾಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲಿ ಸಿಂಹವೊಂದು ನಡೆದುಕೊಂಡು ಹೋಗಿದ್ದು ಈ ದೃಶ್ಯವು ಎಂತಹವರ ಎದೆಯನ್ನು ಝಲ್ ಎನ್ನುವಂತೆ ಮಾಡುತ್ತದೆ.. ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡಿದ್ದು, ಈ ವ್ಯಕ್ತಿಯ ಅದೃಷ್ಟ ಚೆನ್ನಾಗಿದ್ದೀರಬೇಕು ಎಂದು ಇನ್ನು ನಾನಾ ರೀತಿಯ ವಿಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಮನುಷ್ಯನ ಸ್ವಾರ್ಥದಿಂದ ಕಾಡು ಸಂಪೂರ್ಣವಾಗಿ ನಾಶವಾಗಿದೆ. ಈ ಕಾಡಿನ ವಿನಾಶದಿಂದ ಅರಣ್ಯದಲ್ಲಿನ ಪ್ರಾಣಿಗಳೆಲ್ಲಾ ಆಹಾರವನ್ನರಸುತ್ತಾ ನಾಡಿನ ಕಡೆಗೆ ಬರುವುದು ಹೊಸದೇನಲ್ಲ. ಹೀಗೆ ಆಹಾರವನ್ನರಸುತ್ತಾ ಬರುವ ಈ ಪ್ರಾಣಿಗಳು ಜನರು, ಶ್ವಾನ ಮತ್ತು ದನಕರುಗಳ ಮೇಲೆ ದಾಳಿ ಮಾಡುತ್ತವೆ. ಆದರೆ ಇದೀಗ ಎದೆ ಝಲ್ ಎನಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲೇ ರಾಜಾರೋಷವಾಗಿ ಸಿಂಹಿಣಿಯೊಂದು ನಡೆದುಕೊಂಡು ಹೋಗಿದೆ. ಈ ಬಗ್ಗೆ ಅರಿವಿಲ್ಲದೇ ವ್ಯಕ್ತಿಯೂ ಗಾಢ ನಿದ್ರೆಯಲ್ಲಿ ಮುಳುಗಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋಗೆ ಹಲವಾರು ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಇದು ಎಐನಿಂದ ರಚಿಸಲಾದ ವಿಡಿಯೋ ಎಂದಿದ್ದಾರೆ. ಮತ್ತೊಬ್ಬರು, ಆ ವ್ಯಕ್ತಿಯೂ ಈ ವಿಡಿಯೋ ನೋಡಿದರೆ ಇನ್ನು ಜನ್ಮದಲ್ಲಿಯೂ ಈ ಪುಟ್ ಪಾತ್ ನಲ್ಲಿ ಮಲಗುವ ಸಾಹಸಕ್ಕೆ ಕೈ ಹಾಕಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಸ್ಥಳ ಗುಜರಾತ್ ಆಗಿರಬೇಕು, ಅಲ್ಲಿ ಇಂತಹ ದೃಶ್ಯಗಳು ಆಗಾಗ ಕಾಣಸಿಗುತ್ತದೆ ಎಂದಿದ್ದಾರೆ.

The post ಯಮನ ರೀತಿಯಲ್ಲಿ ಫುಟ್ಪಾತ್ ಗೆ ವಿಸಿಟ್ ಕೊಟ್ಟ ಸಿಂಹ…. appeared first on Good News 24x7.

]]>